Tag: Hyderabad

  • ಬಿಟೆಕ್, ಎಂಜಿನಿಯರಿಂಗ್ ಲವ್ ಸ್ಟೋರಿ: ಆತ್ಮಹತ್ಯೆಗೆ ಒಪ್ಪದ್ದಕ್ಕೆ ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ!

    ಬಿಟೆಕ್, ಎಂಜಿನಿಯರಿಂಗ್ ಲವ್ ಸ್ಟೋರಿ: ಆತ್ಮಹತ್ಯೆಗೆ ಒಪ್ಪದ್ದಕ್ಕೆ ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ!

    ಹೈದರಾಬಾದ್: ಪ್ರೇಯಸಿ ಆತ್ಮಹತ್ಯೆಗೆ ಒಪ್ಪದಿದ್ದಕ್ಕೆ ಆಕೆಯನ್ನು ಕೊಂದು ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ಸಿದ್ದಿಪೇಟ್ ಜಿಲ್ಲೆಯ ಮಾಸ್ಕಾನ್‍ಪೇಟ್ ಗ್ರಾಮದಲ್ಲಿ ನಡೆದಿದೆ.

    ಎಂ. ಸುಶ್ಮಿತಾ (22) ಪ್ರಿಯಕರನಿಂದಲೇ ಕೊಲೆಯಾದ ದುರ್ದೈವಿ. ಮಧು (25) ಆತ್ಮಹತ್ಯೆಗೆ ಶರಣಾದವನು. ಸುಶ್ಮಿತಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಮಧು ಬಿಟೆಕ್ ವಿದ್ಯಾರ್ಥಿ. ಇವರಿಬ್ಬರು 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಜಿಲ್ಲೆಯ ಅನಂತರಾಮ್ ಗ್ರಾಮಕ್ಕೆ ಸೇರಿದವಾಗಿದ್ದಾರೆ.

    ಸುಶ್ಮಿತಾ ತಮ್ಮ ತಾಯಿ ವೆಂಕಮ್ಮ ಬಳಿ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದಾಳೆ. ಆದರೆ ತಾಯಿ ಮಧು ಬೇರೆ ಜಾತಿಗೆ ಸೇರಿದವನು ಎಂದು ನಿರಾಕರಿಸಿದ್ದಾರೆ. ಆದ್ದರಿಂದ ಗುರುವಾರ ಮಧು ಸುಶ್ಮಿತಾಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸುಶ್ಮಿತಾ ಹುಟ್ಟಿದ್ದಾಗ ಆಕೆಯ ತಂದೆ ಮೃತಪಟ್ಟಿರುತ್ತಾರೆ. ನಂತರ ತಾಯಿ ವೆಂಕಮ್ಮ ಅವರೇ ಸುಶ್ಮಿತಾಳನ್ನು ಬೆಳೆಸಿದ್ದು, ಮಗಳಿಗೆ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸಬೇಕು ಎಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ಸುಶ್ಮಿತಾಳಿಂದ ದೂರವಿರಲು ಸಾಧ್ಯವಿಲ್ಲ ಎಂದು ಮಧು ಹೈದರಾಬಾದ್‍ಗೆ ಬಂದಿರುತ್ತಾನೆ.

    ಗುರುವಾರ ಮಧು ಸಿದ್ದಿಪೇಟ್‍ನಲ್ಲಿ ಗೆಳೆಯನ ಮದುವೆಗೆ ಬಂದಿದ್ದು, ಮದುವೆ ಮುಗಿಸಿಕೊಂಡು ಸುಶ್ಮಿತಾಗೆ ಕರೆ ಮಾಡಿ ಭೇಟಿಯಾಗಬೇಕು ಎಂದು ಹೇಳಿ ಸಮೀಪದ ಕೋಳಿ ಫಾರ್ಮ್ ಗೆ ಬರುವಂತೆ ತಿಳಿಸಿದ್ದಾನೆ. ಸುಶ್ಮಿತಾ ಫಾರ್ಮ್ ಗೆ ಬಂದಾಗ, ಮಧು ಜ್ಯೂಸ್ ಬಾಟಲ್‍ಗೆ ಕೀಟನಾಶಕ ಬೆರೆಸಿ ಸುಶ್ಮಿತಾಗೆ ನಮ್ಮ ಮದುವೆಗೆ ಹಿರಿಯರು ಒಪ್ಪುವುದಿಲ್ಲ ಆದ್ದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಸುಶ್ಮಿತಾ ನಿರಾಕರಿಸಿ ಅಲ್ಲಿಂದ ಹೋಗಲು ಪ್ರಯತ್ನ ಮಾಡುತ್ತಾಳೆ.

    ಈ ಸಂದರ್ಭದಲ್ಲಿ ಮಧು ಆಕೆಯ ಜೊತೆ ವಾದ ಮಾಡಿ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಈ ವೇಳೆ ಆಕೆ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಧು ಹಲ್ಲೆ ಮಾಡಿದ್ದರಿಂದ ಸುಶ್ಮಿತಾ ತಮ್ಮ ಎರಡು ಕಣ್ಣು ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸೆಲ್ಫಿ ವಿಡಿಯೋ ಮಾಡಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಸೆಲ್ಫಿ ವಿಡಿಯೋ ಮಾಡಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಹೈದರಾಬಾದ್: ನವವಿವಾಹಿತೆ 3 ತಿಂಗಳ ಗರ್ಭಿಣಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಮ್ ನಗರದಲ್ಲಿ ನಡೆದಿದೆ.

    ಮೌನಿಕ ಆತ್ಯಹತ್ಯೆ ಮಾಡಿಕೊಂಡ 3 ತಿಂಗಳ ಗರ್ಭಿಣಿ. ಈಕೆ ಉದ್ದಂಡಿ ನಾಗೇಶ್ವರ ರಾವ್ ಮಗಳಾಗಿದ್ದು, ಹೈದರಾಬಾದ್‍ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರ ಎಂಬುವವರ ಜೊತೆ ಆಗಸ್ಟ್ ತಿಂಗಳಿನಲ್ಲಿ ಮದುವೆಯಾಗಿತ್ತು.

    ಮೌನಿಕಗೆ ಪತಿಯ ಗುಣ ನಡತೆ ಇಷ್ಟವಾಗಿರಲಿಲ್ಲ. ಆದ್ದರಿಂದ ತನ್ನ ಪೋಷಕರಿಗೆ ಪತಿ ಬಳಿ ಇರುವ ಹಣ, ಚಿನ್ನವನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ದರೆ ಕಳೆದ ವಾರ ಮೌನಿಕ ಸಂಕ್ರಾಂತಿ ಹಬ್ಬದ ವರೆಗೂ ಇರಲು ತನ್ನ ತವರು ಮನೆಗೆ ಬಂದಿದ್ದಾರೆ.

    ಸೋಮವಾರ ಬೆಳಿಗ್ಗೆ ಪೋಷಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಫೋನಿನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಪತಿ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

     

  • ಕುಡಿದ ಮತ್ತಲ್ಲಿ ಕಾರಿಗೆ ವಾಹನ ಡಿಕ್ಕಿ- ನ್ಯೂಜಿಲ್ಯಾಂಡ್‍ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು

    ಕುಡಿದ ಮತ್ತಲ್ಲಿ ಕಾರಿಗೆ ವಾಹನ ಡಿಕ್ಕಿ- ನ್ಯೂಜಿಲ್ಯಾಂಡ್‍ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು

    ಹೈದರಾಬಾದ್: ಕುಡಿದು ಕಾರು ಓಡಿಸುತ್ತಿದ್ದ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ.

    29 ವರ್ಷದ ಸೈಯ್ಯದ್ ಅಬ್ದುಲ್ ರಹೀಮ್ ಫಹದ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ. ಮೂಲತಃ ಹೈದರಾಬಾದ್‍ನವರಾದ ಫಹದ್ ನ್ಯೂಜಿಲ್ಯಾಂಡ್‍ನ ಆಕ್‍ಲ್ಯಾಂಡ್ ನಲ್ಲಿ ಓದುತ್ತಿದ್ದು, ವಿದ್ಯಾಭ್ಯಾಸದ ಜೊತೆ ಟ್ಯಾಕ್ಸಿ ಚಾಲಕನಾಗಿ ಪಾರ್ಟ್ ಟೈಮ್ ಕೆಲಸವನ್ನು ಮಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

    ಚಾಲಕನೊಬ್ಬ ಕುಡಿದು ಕಾರು ಚಾಲಯಿಸುತ್ತಿದ್ದು, ಅತೀ ವೇಗವಾಗಿ ಟ್ರಾಫಿಕ್ ಸಿಗ್ನಲ್ ದಾಟಿ ಸೈಯ್ಯದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಸೈಯ್ಯದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯವನ್ನ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರೋ ಸಂಬಂಧಿಯೊಬ್ಬರು ತಿಳಿಸಿದ್ದಾಗಿ ಸೈಯ್ಯದ್ ಸಹೋದರ ಸಂಬಂಧಿ ಫೈಜಲ್ ತಿಳಿಸಿದ್ದಾರೆ.

    ಸೈಯ್ಯದ್ ಕುಟುಂಬ ಹೈದರಾಬಾದ್‍ನ ಚಂಚಲಗೂಡ ನಗರದಲ್ಲಿ ವಾಸಿಸುತ್ತಿದ್ದು, ಸೈಯ್ಯದ ದೇಹವನ್ನು ಹೈದರಾಬಾದ್‍ಗೆ ತರಲು ಮತ್ತು ಹಣಕಾಸಿನ ಸಹಾಯ ಕೋರಿ ಕುಟುಂಬದವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ನಾವು ನ್ಯೂಜಿಲ್ಯಾಂಡಿನ ಭಾರತೀಯ ರಾಯಭೇರಿ ಅಧಿಕಾರಿಯನ್ನು ಭೇಟಿ ಮಾಡಿದ್ದೇವೆ ಎಂದು ಫೈಝಾಲ್ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತೆಲಂಗಾಣ ಬಿಕೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಕೂಡ ಸ್ವರಾಜ್ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

  • ಸ್ನೇಹಿತನನ್ನು ಊರಿಗೆ ಕಳುಹಿಸಿ ಬರುತ್ತಿದ್ದಾಗ ಅಪಘಾತ-ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ

    ಸ್ನೇಹಿತನನ್ನು ಊರಿಗೆ ಕಳುಹಿಸಿ ಬರುತ್ತಿದ್ದಾಗ ಅಪಘಾತ-ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ

    ಹೈದರಾಬಾದ್: ಸ್ನೇಹಿತನನ್ನು ಊರಿಗೆ ಕಳುಹಿಸಿ ಬರುತ್ತಿದ್ದಾಗ ವೇಗವಾಗಿ ಬಂದ ಗೂಡ್ಸ್ ಲಾರಿ ಸ್ಕೂಟಿ ಮತ್ತು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಶುಕ್ರವಾರ ಅಲಿಯಾಬಾದ್‍ನ ಸಮೀರ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ 22 ವರ್ಷದ ಪಲ್ಲವಿ ಗುಪ್ತಾ ಹಾಗೂ ಚೆನ್ನೈ ಮೂಲದ ವೀಣಾ ಇಂದಿರಾ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ವಿದ್ಯಾರ್ಥಿಗಳು. ಕುಶಾಲ್ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲಿಯಾಬಾದ್ ಬಳಿ ರಸ್ತೆ ದಾಟಲು ಬೈಕಿನಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

    ಸಮೀರ್ ಪೇಟ್ ನಲ್ಲಿರುವ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಕನ್ಸ್ ಸ್ಟ್ರಕ್ಷನ್ ಮ್ಯಾನೇಜ್‍ಮೆಂಟ್ ರಿಸರ್ಚ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಓದುತ್ತಿದ್ದರು. ಇವರ ಸ್ನೇಹಿತ ಚಿರಂಜೀವಿ ಮೆಹಾತ್ ಕ್ರಿಸ್‍ಮಸ್ ಹಬ್ಬಕ್ಕೆಂದು ಊರಿಗೆ ಹೋಗುತ್ತಿದ್ದ. ಆದ್ದರಿಂದ ಸ್ನೇಹಿತರು ಒಟ್ಟಾಗಿ ಕೊಂಪಲ್ಲಿ ಬಸ್ ನಿಲ್ದಾಣಕ್ಕೆ ಬಿಟ್ಟು ವಾಪಸ್ ಹಾಸ್ಟೆಲ್‍ಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ.

    ಪಲ್ಲವಿ ಹಾಗೂ ವೀಣಾ ಸ್ಕೂಟಿಯಲ್ಲಿ ಹಾಗೂ ಕುಶಾಲ್ ಬೈಕ್‍ನಲ್ಲಿ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಲಿಯಾಬಾದ್ ಬಳಿ ಗೂಡ್ಸ ಲಾರಿಯೊಂದು ಹಿಂಬದಿಯಿಂದ ವೇಗವಾಗಿ ಬಂದು ಸ್ಕೂಟಿ ಹಾಗೂ ಬೈಕ್ ಎರಡಕ್ಕೂ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲ್ಲಿದ್ದ ಪಲ್ಲವಿ, ವೀಣಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಶಾಲ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇನ್ಸ್ ಪೆಕ್ಟರ್ ಡಿ. ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

    ಇಂದಿರಾ ತಂದೆ ಮಧುಸೂದನ್ ಚೆನ್ನೈನಿಂದ ಬಂದು ಗಾಂಧಿ ಆಸ್ಪತ್ರೆಯಿಂದ ಮೃತದೇಹವನ್ನು ಪಡೆದುಕೊಂಡಿದ್ದಾರೆ. ಇನ್ನು ಪಲ್ಲವಿ ಸಂಬಂಧಿಕರು ಆಕೆ ದೇಹವನ್ನು ನಗರದಿಂದ ರಾಜಸ್ಥಾನಕ್ಕೆ ಶನಿವಾರ ವಿಮಾನದ ಮೂಲಕ ಕಳುಹಿಸಿದ್ದಾರೆ. ಈ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಲಾರಿಯನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ.

  • ರಾಜಮೌಳಿಯ ಅಮರಾವತಿ ವಿನ್ಯಾಸ ತಿರಸ್ಕರಿಸಿದ ಚಂದ್ರಬಾಬು ನಾಯ್ಡು

    ರಾಜಮೌಳಿಯ ಅಮರಾವತಿ ವಿನ್ಯಾಸ ತಿರಸ್ಕರಿಸಿದ ಚಂದ್ರಬಾಬು ನಾಯ್ಡು

    ಹೈದರಾಬಾದ್ : ಆಂಧ್ರ ಪ್ರದೇಶ ಪ್ರತ್ಯೇಕ ರಾಜ್ಯ ರಚನೆ ನಡೆದು ಹೊಸದಾಗಿ ನಿರ್ಮಿಸಲಾಗುತ್ತಿರುವ ರಾಜಧಾನಿ ಅಮರಾವತಿಯಲ್ಲಿ ಸರ್ಕಾರದ ಕಟ್ಟಡಗಳು ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ರಾಜಮೌಳಿ ಅವರ ವಿನ್ಯಾಸವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರಸ್ಕರಿಸಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬಾಹುಬಲಿ ಸಿನಿಮಾದಲ್ಲಿನ ಮಾಹಿಷ್ಮತಿ ಸಾಮ್ರಾಜ್ಯ ಕಲ್ಪನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನು ಸ್ವತಃ ಇಷ್ಟ ಪಟ್ಟು ಮೆಚ್ಚುಗೆ ಸೂಚಿಸಿದ್ದ ಸಿಎಂ ಚಂದ್ರಬಾಬು ನಾಯ್ಡು, ಅಮರಾವತಿ ರಾಜಧಾನಿ ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ರಾಜಮೌಳಿ ಅವರನ್ನು ಕೇಳಿಕೊಂಡಿದ್ದರು.

    ಇದರಂತೆ ರಾಜಮೌಳಿ ಅವರು ತೆಲುಗು ಸಂಸ್ಕøತಿಗೆ ಅನುಗುಣವಾಗಿ ನೂತನ ರಾಜಧಾನಿ ನಿರ್ಮಾಣದ ವಿನ್ಯಾಸವನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ನಿರ್ದೇಶಕರ ವಿನ್ಯಾಸಗಳು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಈ ಕುರಿತು ಸ್ವತಃ ರಾಜಮೌಳಿ ಅವರು ಟ್ವೀಟ್ ಮಾಡಿ ತಮ್ಮ ವಿನ್ಯಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾಜಧಾನಿಯ ಕಟ್ಟಡ ವಿನ್ಯಾಸ ರೂಪಿಸಲು ಅವಕಾಶ ನೀಡಿದ ಆಂಧ್ರ ಪ್ರದೇಶ ಸರ್ಕಾರಕ್ಕೆ ತಮ್ಮ ಧನ್ಯವಾದ ಸೂಚಿಸಿದ್ದು, ಬ್ರಿಟನ್ ವಿನ್ಯಾಸಕಾರರು ನೀಡಿದ್ದ ವಿನ್ಯಾಸಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

    ರಾಜಮೌಳಿ ಅವರು ಸಿದ್ಧಪಡಿಸಿರುವ ವಿನ್ಯಾಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಮೌಳಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿನ ಕಟ್ಟಡ ವಿನ್ಯಾಸ ಪ್ರಾಚೀನ ಭಾರತದ ಖಗೋಳಶಾಸ್ತ್ರ ಮತ್ತು ವಾಸ್ತು ಶಾಸ್ತ್ರ ತಂತ್ರಜ್ಞಾನವನ್ನು ಆಧಾರಿಸಿ ಆಧುನಿಕತೆಯೊಂದಿಗೆ ಸಿದ್ಧಪಡಿಸಲಾಗಿದೆ. ಪ್ರತಿವರ್ಷ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ವಿಗ್ರಹವನ್ನು ಪ್ರವೇಶಿಸುವಂತೆ ಈ ಕಟ್ಟಡ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ರಾಜ್ಯ ಸಭೆಯ ಕಟ್ಟಡದ ಮಧ್ಯಭಾಗದಲ್ಲಿ ಸ್ಥಾಪನೆ ಮಾಡಲಾಗುವ ತೆಲುಗು ಮಾತೆಯ ವಿಗ್ರಹದ ಮೇಲೆ ಸೂರ್ಯನ ಬೆಳಕು ಬಿಳುವಂತೆ ವಿನ್ಯಾಸ ಮಾಡಲಾಗಿದೆ.

    ರಾಜಮೌಳಿ ಅವರ ವಿನ್ಯಾಸವನ್ನು ಸರ್ಕಾರ ತಿರಸ್ಕರಿಸಿಲ್ಲ. ರಾಜಧಾನಿಯಲ್ಲಿ ಮಾಧ್ಯಮ ನಗರವೊಂದು ನಿರ್ಮಾಣವಾಗಲಿದೆ. ಈ ಮಾಧ್ಯಮ ನಗರ ನಿರ್ಮಾಣಕ್ಕೆ ರಾಜಮೌಳಿ ಅವರ ವಿನ್ಯಾಸವನ್ನು ಬಳಸಲಾಗುವುದು ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.

    ಸರ್ಕಾರ ತನ್ನ  APCRDA ವೆಬ್‍ಸೈಟ್ ನಲ್ಲಿ ಎರಡು ವಿನ್ಯಾಸದ ಮಾದರಿ ವಿಡಿಯೋವನ್ನು ಅಪ್ಲೋಡ್ ಮಾಡಿ ಅಭಿಪ್ರಾಯವನ್ನು ಸಂಗ್ರಹಿಸಲು ಆರಂಭಿಸಿದೆ. ಅಂತಿಮವಾಗಿ ಅತಿ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ ವಿನ್ಯಾಸವನ್ನು ಆಯ್ಕೆ ಮಾಡಲಾಗುತ್ತದೆ.

    ರಾಜಮೌಳಿ ಕಲ್ಪನೆಯ ವಿಡಿಯೋ ನೋಡಿ….

    https://www.youtube.com/watch?time_continue=6&v=4F3fS075fsk

    ಸರ್ಕಾರ ವೆಬ್‍ಸೈಟ್ ನಲ್ಲಿನ ಎರಡು ವಿನ್ಯಾಸದ ಮಾದರಿ :

    https://www.youtube.com/watch?v=Ozmk8lCRsk0

    https://www.youtube.com/watch?v=CkW9G1LBSlg

  • ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ಹೈದರಾಬಾದ್: ತೆಲಂಗಾಣದ ನಗರ್ ಕರ್ನೂಲ್ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದ ಸುಧಾಕರ್ ರೆಡ್ಡಿ ಎಂಬವರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಬೆಳಕಿಗೆ ಬರುತ್ತಿದೆ.

    ಮೃತ ಸುಧಾಕರ್ ರೆಡ್ಡಿಯವರು ನಗರ್ ಕರ್ನೂಲ್ ನ ಹೌಸಿಂಗ್ ಬೋರ್ಡ್ ಕಾಲೋನಿಯ ತಮ್ಮ ಮನೆಯಲ್ಲಿ ಶುಕ್ರವಾರ ಕೊಲೆಯಾಗಿದ್ದರು. ಸುಧಾಕರ್ ರೆಡ್ಡಿ ರನ್ನು ಆತನ ಪತ್ನಿ ಸ್ವಾತಿ ಹಾಗೂ ಪತ್ನಿಯ ಪ್ರಿಯಕರ ರಾಜೇಶ್ ಎಂಬುವರು ಸೇರಿ ಕೊಲೆ ಮಾಡಿದ್ದಾರೆ.

    ಕ್ರಷರ್ ವ್ಯಾಪಾರ ಮಾಡುತ್ತಿದ್ದ ಸುಧಾಕರ್ ರೆಡ್ಡಿ ವ್ಯಾಪಾರ ಕೆಲಸದ ಮೇಲೆ ಹೈದರಾಬಾದ್ ತೆರಳಿದ್ದರು. ಈ ಸಮಯದಲ್ಲಿ ಸ್ವಾತಿ ತನ್ನ ಗಂಡ ಮನೆಯಲ್ಲಿ ಇಲ್ಲ ಎಂಬುದನ್ನ ತಿಳಿಸಿ, ತನ್ನ ಪ್ರೀಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಅಂದು ಮನೆಗೆ ವಾಪಸ್ ಆದ ಸುಧಾಕರ್ ರೆಡ್ಡಿ ಕೈಗೆ ಸ್ವಾತಿ ಹಾಗೂ ರಾಜೇಶ್ ಸಿಕ್ಕಿಬಿದ್ದಿದ್ದು, ಇಬ್ಬರ ನಡುವಿನ ಆಕ್ರಮ ಸಂಬಂಧ ಪತಿಗೆ ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸುಧಾಕರ್ ರೆಡ್ಡಿ ಮನೆಗೆ ವಂದ ವೇಳೆ ಸಿಕ್ಕಿಬಿದ್ದ ಸ್ವಾತಿ ಹಾಗೂ ರಾಜೇಶ್ ಸೇರಿ ಆತನನ್ನು ಕೊಲೆ ಮಾಡಿ, ದೇಹವನ್ನು ನವಾಬ್ ಪೇಟ್ ಪ್ರದೇಶ ಸಮೀಪವಿದ್ದ ಅರಣ್ಯ ಪ್ರದೇಶದಕ್ಕೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ನಂತರ ಮನೆಗೆ ಬಂದ ಸ್ವಾತಿ ತನ್ನ ಗಂಡನ ಬಟ್ಟೆಗಳನ್ನು ರಾಜೇಶ್ ಗೆ ನೀಡಿ ಆತನ್ನು ತನ್ನ ಗಂಡನ ಹಾಗೇ ಸಿದ್ಧಪಡಿಸಿ, ಆತನನ್ನು ಯಾರು ಗುರುತು ಹಿಡಿಯದಂತೆ ಮಾಡಲು ಆತನ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

    ನಂತರ ಗುರುತು ಸಿಗದ ದುಷ್ಕರ್ಮಿಗಳು ಮನೆಗೆ ಬಂದು ತನ್ನ ಪತಿ ಸುಧಾಕರ್ ರೆಡ್ಡಿ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿ, ಗಾಯಗೊಂಡ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನನ್ನ ಹೈದರಾಬಾದಿನ ಡಿಆರ್ ಟಿಓ ಆಸ್ಪತ್ರೆಗೆ ದಾಖಲಿಸಿದ್ದಾಳೆ.

    ಘಟನೆ ಕುರಿತು ನ್ಯಾಯಾಧೀಶರ ಎದುರು ಹೇಳಿಕೆಯನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ರೆಡ್ಡಿಯನ್ನು ನೋಡಲು ಬಂದ ಕುಟುಂಬ ಸದಸ್ಯರು ಮುಖದ ಮೇಲೆ ತೀವ್ರ ಸುಟ್ಟ ಗಾಯವಾಗಿದ್ದರಿಂದ ಆತನ್ನು ಗುರುತಿಸಲು ವಿಫಲರಾಗುತ್ತಾರೆ. ಆದರೆ ಸುಧಾಕರ್ ರೆಡ್ಡಿ ತಾಯಿ ಮಗನ ವರ್ತನೆ ನೋಡಿ ಸಂಶಯಗೊಂಡಿದ್ದರೂ, ಆದರೆ ಮಗ ತೀವ್ರವಾಗಿ ಗಾಯಗೊಂಡಿರುವುದರಿಂದ ಹೀಗೆ ಮಾತನಾಡುತ್ತಿದ್ದಾನೆ ಎಂದು ತಿಳಿದ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದರು.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ: ಆಸ್ಪತ್ರೆ ಚಿಕಿತ್ಸೆ ಪಡೆದ ನಂತರ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನ ಕೈ ಬೆರಳುಗಳ ಹೆಬ್ಬೆಟ್ಟು ಗುರುತನ್ನು ಆಸ್ಪತ್ರೆಯ ಆಡಳಿತ ಮಂಡಳಿ ಪಡೆಯುತ್ತಾರೆ. ಆದರೆ ಆತನ ಕೈ ಬೆರಳುಗಳ ಗುರುತು ಸುಧಾಕರ್ ಅವರ ಕೈಬೆರಳಿನ ಗುರುತು ಹೊಂದಾಣಿಕೆ ಆಗದ ಕಾರಣ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

     

  • ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

    ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

    ಹೈದರಾಬಾದ್: ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬ ಬೇರೆಯವರಿಗೆ ಮಾದರಿ ಆಗುವುದರ ಬದಲು ಕಳಂಕವಾಗಿದ್ದಾನೆ. ಹೌದು, ಪತಿರಾಯನೊಬ್ಬ ತನಗಿಂತ ಚಿಕ್ಕ ವಯಸ್ಸಿನ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾನೆ.

    ಅಂಕುಶ್ ಎಂಬಾತನೇ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದ ಸಲಿಂಗಿ ಪತಿ. ಅಂಕುಶ್ ಹೈದರಾಬಾದ್ ನಗರದ ಅರುಣಾ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡಿಕೊಂಡಿದ್ದು, ಪತ್ನಿಯೊಂದಿಗೆ ಸೈದಾಬಾದ್ ನ ಪುಸಲಬಸ್ಥಿ ಏರಿಯಾದಲ್ಲಿ ವಾಸವಾಗಿದ್ದನು. ನಗರದ ಕುಕಟಪಲ್ಲಿಯಲ್ಲಿ ಬಾಡಿಗೆಗೆ ಫ್ಲ್ಯಾಟ್ ಪಡೆದುಕೊಂಡು ಯುವಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದನು.

    ಅಂಕುಶ್ ಮೂಲತಃ ಜಹೀರಾಬಾದ್ ನಿವಾಸಿಯಾಗಿದ್ದು, 2014ರಲ್ಲಿ ದೀಪಿಕಾ ಎಂಬವರನ್ನು ಮದುವೆ ಆಗಿದ್ದನು. ಮದುವೆ ನಂತರ ಸೈದಾಬಾದ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದನು. ನನ್ನ ಪತಿ ಯುವಕರೊಂದಿಗೆ ಸೆಕ್ಸ್ ನಲ್ಲಿ ಭಾಗಿಯಾಗುತ್ತಾ ಸಲಿಂಗಿ(ಗೇ)ಯಾಗಿ ಬದಲಾಗಿದ್ದಾನೆ. ಕುಕಟಪಲ್ಲಿಯಲ್ಲಿರುವ ಬಾಡಿಗೆ ಫ್ಲ್ಯಾಟ್ ನಲ್ಲಿ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ನನ್ನ ಕೈಗೆ ಸಿಕ್ಕಿದ್ದಾನೆ. ಈ ಕುರಿತು ಪತಿಯನ್ನು ಪತ್ನಿ ದೀಪಿಕಾ ಪ್ರಶ್ನಿಸಿದಾಗ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಂಧಿಯಾಗಿ ಇರಿಸಿದ್ದನು. ಅಲ್ಲದೇ ತನ್ನ ಪತಿ ನನಗೆ ಮಾನಸಿಕವಾಗಿಯೂ ಮತ್ತು ದೈಹಿಕವಾಗಿಯೂ ಕಿರುಕುಳ ನೀಡುತ್ತಿದ್ದಾನೆ ಎಂದು ದೀಪಿಕಾ ಆರೋಪಿಸುತ್ತಿದ್ದಾರೆ.

    ಹಲವಾರು ಸಂದರ್ಭಗಳಲ್ಲಿ ಅಂಕುಶ್ ಪೋಷಕರು ಮತ್ತು ಸೋದರ ಸಂಬಂಧಿಗಳು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹತ್ತು ದಿನಗಳ ಹಿಂದೆ ಈ ಬಗ್ಗೆ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ ಇದೂವರೆಗೂ ಪೊಲೀಸರು ಪತಿ ಮತ್ತು ಆತನ ಪೋಷಕರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೀಪಿಕಾ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

    ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

    ಹೈದರಾಬಾದ್: `ಬಾಹುಬಲಿ’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಇಡೀ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಪ್ರಭಾಸ್ ಸೆನ್ಸೇಷನಲ್ ಸ್ಟಾರ್ ಆಗಿದ್ದಾರೆ.

    ಪ್ರಭಾಸ್ ಕಂಡರೆ ಪ್ರಾಣ ಬಿಡುವ ಹುಡುಗಿಯರಂತೂ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಿನ ಕೆಮಿಸ್ಟ್ರಿ ಬಗ್ಗೆ ಗಾಸಿಪ್ ಕೂಡ ಆಗಾಗ ಕೇಳಿ ಬರುತ್ತಲೇ ಇದೆ. ಆದರೆ ಇಂತಾ ಸೂಪರ್ ಸ್ಟಾರ್ ನ ಹೃದಯ ಕದ್ದಿರೋದು ಬಾಲಿವುಡ್ ನಟಿ.

    90ರ ದಶಕದ ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಅಂದರೆ ಪ್ರಭಾಸ್ ಗೆ ತುಂಬಾ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರ ಮೇಲೆ ಪ್ರಭಾಸ್ ಗೆ ಸೀಕ್ರೆಟ್ಟಾಗಿ ಕ್ರಷ್ ಕೂಡ ಆಗಿತ್ತಂತೆ. ಹಾಗಂತ ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ನಾನು ರವೀನಾ ಅವರ ದೊಡ್ಡ ಅಭಿಮಾನಿ. ನಾನು ಅವರ `ಅಂದಾಝ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ “ಎಲೊ ಜಿ ಸನಮ್” ಹಾಡನ್ನು ನೋಡಿ ತುಂಬಾ ಇಷ್ಟ ಪಟ್ಟೆ ಎಂದು ಪ್ರಭಾಸ್ ಹೇಳಿದ್ದಾರೆ.

    ರವೀನಾ ಪತಿ ಅನಿಲ್ ಥದಾನಿ ಅವರು ಬಾಹುಬಲಿ ಸಿನಿಮಾಗಳ ವಿತರಕರಾಗಿದ್ದರು. ಪ್ರಸ್ತುತ ಬಾಹುಬಲಿ ಸಿನಿಮಾದ ನಟರು ಮತ್ತು ಚಿತ್ರತಂಡದವರು ಸ್ನೇಹಿತರಾಗಿದ್ದು, ಅವರದ್ದೆ ಒಂದು ಗುಂಪು ಇದೆ. ಇವರೆಲ್ಲರೂ ಮುಂಬೈಗೆ ಹೋದರೆ ಅನಿಲ್ ಮತ್ತು ರವೀನಾ ಅವರನ್ನು ಭೇಟಿ ಮಾಡಿ ಬರುತ್ತಾರೆ.

    ಪ್ರಭಾಸ್ ತಮ್ಮ ಮುಂದಿನ ಚಿತ್ರವಾದ ಸುಜೀತ್ ನಿರ್ದೇಶನದ `ಸಾಹೋ’ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಸಾಹೋ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು, ಮುಂದಿನ ವರ್ಷ 2018 ಕ್ಕೆ ತೆರೆಕಾಣುವ ಸಾಧ್ಯತೆ ಇದೆ.

    https://www.instagram.com/p/BZsvmP-Ammk/

    https://www.instagram.com/p/BZtKgD2l12G/

     

  • ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ಗಂಡನೊಬ್ಬ ಪತ್ನಿಯ ಜೊತೆ ರಾಕ್ಷಸನಂತೆ ನಡೆದುಕೊಂಡು ಆಕೆಯನ್ನು ಹಿಂಸಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಮೋತರಂಗನಪಲ್ಲಿ ಗ್ರಾಮದ ಗಂಗಾಧರ ನೆಲ್ಲೂರು ಬ್ಲಾಕ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಯನ್ನ ಚೂರಿಯಿಂದ ಇರಿದು, ದೇಹದ ಭಾಗಗಳನ್ನು ಕಚ್ಚಿ, ಮುಖ ಮತ್ತು ಸೂಕ್ಷ್ಮ ಭಾಗಗಳನ್ನ ಗುದ್ದಿ ಪತಿ ವಿಕೃತಿ ಮೆರೆದಿದ್ದಾನೆ.

    ಹಲ್ಲೆಗೊಳಗಾದ 24 ವರ್ಷದ ನವವಿವಾಹಿತೆಯ ಸ್ಥಿತಿ ಗಂಭೀರವಾಗಿದ್ದು, ಚಿತ್ತೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರದಂದು ರಾಕ್ಷಸ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ನಡೆದಿದ್ದೇನು: ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಗೆ ಎಂಬಿಎ ಪದವೀಧರೆಯ ಜೊತೆ ಗುರುವಾರ ಮದುವೆಯಾಗಿತ್ತು. ವರದಕ್ಷಿಣೆ ಎಂದು ಹುಡುಗಿಯ ಕುಟುಂಬಸ್ಥರು 1 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಶುಕ್ರವಾರ ಮೊದಲ ರಾತ್ರಿ ಏರ್ಪಡಿಸಿದ್ದರು. ವಧು ಪತಿಯ ರೂಮಿಗೆ ಹೋಗಿದ್ದಾರೆ. ಆಕೆ ರೂಮಿಗೆ ಬರುತ್ತಿದ್ದಂತೆ ಆರೋಪಿ ಏಕಾಏಕಿ ಮುಖಕ್ಕೆ ಹೊಡೆಯಲು ಆರಂಭಿಸಿದ್ದಾನೆ. ನಂತರ ಚಾಕುವಿನಿಂದ ಇರಿದು, ಅಂಗಾಂಗಗಳನ್ನ ಕಚ್ಚಿದ್ದಲ್ಲದೆ ಸೂಕ್ಷ್ಮ ಭಾಗಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆಂದು ವಧು ಹೇಳಿದ್ದಾರೆ. ಪ್ರಾಣಾಪಾಯದ ಭಯದಿಂದ ವಧು ಕೂಡಲೇ ರೂಮಿನಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ.

    ನನ್ನ ಮಗಳು ಹೇಗೋ ಅವನಿಂದ ತಪ್ಪಿಸಿಕೊಂಡು ರೂಮಿನಿಂದ ಹೊರಗೆ ಬಂದಳು. ಹೊರ ಬಂದಾಗ ಅವಳು ಗಾಬರಿಯಾಗಿದ್ದಳು. ಮುಖವೆಲ್ಲಾ ಊದಿಕೊಂಡಿತ್ತು. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ವಧುವಿನ ತಾಯಿ ತಿಳಿಸಿದ್ದಾರೆ.

  • ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಹೈದರಾಬಾದ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಯಿತೆಂದು ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಮಗುವನ್ನ ಬಿಸಿ ಕಾವಲಿಯ ಮೇಲೆ ಕೂರಿಸಿದ ಘಟನೆ ತೆಲಂಗಾಣದ ಎಸ್‍ಆರ್ ನಗರದಲ್ಲಿ ಭಾನುವಾರದಂದು ನಡೆದಿದೆ.

    ಮೂಲತಃ ಶ್ರೀಕಾಕುಲಂ ಜಿಲ್ಲೆಯವಳಾದ ಲಲಿತಾ ಅದೇ ಜಿಲ್ಲೆಯವನಾದ ಪ್ರಕಾಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ತೊರೆದಿದ್ದ ಲಲಿತಾ 4 ವರ್ಷದ ಮಗಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು. 9 ತಿಂಗಳ ಹಿಂದೆ ಇಬ್ಬರೂ ಹೈದರಾಬಾದ್‍ಗೆ ಬಂದಿದ್ದರು. ಅಂದಿನಿಂದ ಲಲಿತಾ ಎಸ್‍ಆರ್ ನಗರದ ಶ್ರೀನಿವಾಸ್ ನಗರದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಪ್ರಕಾಶ್ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆದ್ರೆ ಮಗಳು ರೂಪಳನ್ನ ದೂರ ಮಾಡುವಂತೆ ಪ್ರಕಾಶ್ ಲಲಿತಾಗೆ ಹೇಳುತ್ತಲೇ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಈ ಮಧ್ಯೆ ಲಲಿತಾ ತನ್ನ ಮಗಳನ್ನ ಬಿಸಿಯಾದ ಕಾವಲಿ ಮೇಲೆ ಕೂರಿಸಿ, ನಂತರ ಅದರ ಮೇಲೆ ನಿಲ್ಲಿಸಿ ವಿಕೃತಿ ಮೆರೆದಿದ್ದಾಳೆ. ಈ ಜೋಡಿ ಮಗುವನ್ನ ಮಹಿಳಾ ಮತ್ತು ಮಕ್ಕಳ ಕೇಂದ್ರವಾದ ಭರೋಸಾಗೆ ಕರೆದುಕೊಂಡು ಹೋಗಿದ್ದು, ಇದು ಅನಾಥ ಮಗು. ರಸ್ತೆ ಬದಿಯಲ್ಲಿ ಸಿಕ್ಕಿತು ಎಂದು ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಭರೋಸಾ ಸಿಬ್ಬಂದಿ ಅಧಿಕೃತವಾಗಿ ದೂರು ದಾಖಲಿಸಲು ಮೂವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ದೇಹದ ಮೇಲೆ ಗಾಯದ ಗುರುತುಗಳನ್ನ ನೋಡಿದ ಪೊಲೀಸರಿಗೆ ಅನುಮಾನ ಬಂದಿದ್ದು, ಎಸ್‍ಆರ್ ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

    ಪ್ರಕಾಶ್ ಹಾಗೂ ಲಲಿತಾ ಮಗುವಿನಿಂದ ಮುಕ್ತಿ ಪಡೆಯಲು ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಸಂಬಂಧಕ್ಕೆ ಮಗು ಅಡ್ಡಿಯಾಯಿತೆಂದು ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿ ಹಿಂಸೆ ನೀಡಿದ್ದಾರೆ.

    ಸದ್ಯ ಪೊಲೀಸರು ಲಲಿತಾ ಹಾಗೂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.