Tag: Hyderabad

  • ತಾಯಿ ಸಾವನ್ನಪ್ಪಿದ ವಿಷಯ ತಿಳಿಯದೇ ಆಕೆಯ ಪಕ್ಕ ನಿದ್ದೆಗೆ ಜಾರಿದ್ದ 5ರ ಮಗ

    ತಾಯಿ ಸಾವನ್ನಪ್ಪಿದ ವಿಷಯ ತಿಳಿಯದೇ ಆಕೆಯ ಪಕ್ಕ ನಿದ್ದೆಗೆ ಜಾರಿದ್ದ 5ರ ಮಗ

    ಹೈದರಾಬಾದ್: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತ ಪಟ್ಟ ನಂತರ ಆಕೆಯ ಐದು ವರ್ಷದ ಮಗ ಅದನ್ನು ತಿಳಿಯದೆ ಆಕೆಯ ಪಕ್ಕದಲ್ಲೇ ಮಲಗಿದ್ದ ಹೃದಯವಿದ್ರಾವಕ ಘಟನೆ ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆದಿದೆ.

    ಸಮೀನಾ ಸುಲ್ತಾನ ಮೃತ ಪಟ್ಟ ಮಹಿಳೆ. ಸಮೀನಾ ಹಾಗೂ ಆಕೆಯ 5 ವರ್ಷದ ಮಗ ಹೈದರಬಾದ್‍ನ ಖಾರೆದಾನ್ ಕೈಗಾರಿಕಾ ಪ್ರದೇಶದ ನಿವಾಸಿಗಳು. ಸಮೀನಾ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ನೆರೆ ಮನೆಯವರ ಸಹಾಯದಿಂದ ಸೋಮವಾರ ಆಸ್ಪತ್ರೆಗೆ  ದಾಖಲಾಗಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡಿದ ನಂತರ ಚಿಕಿತ್ಸೆ ಫಲಿಸದೇ ಸಮೀನಾ ಮೃತ ಪಟ್ಟಿದ್ದಾರೆ.

    ತನ್ನ ತಾಯಿ ಮೃತ ಪಟ್ಟಿರುವುದನ್ನು ತಿಳಿಯದ ಬಾಲಕ ಆಸ್ಪತ್ರೆಯ ಹಾಸಿಗೆ ಮೇಲೆ ಅಮ್ಮನ ಪಕ್ಕದಲ್ಲೇ ಮಲಗಿ 5 ಗಂಟೆಗಳ ಕಾಲ ನಿದ್ರೆಗೆ ಜಾರಿದ್ದಾನೆ. ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ನಂತರ ಬಾಲಕನನ್ನು ತಾಯಿಂದ ಬೇರ್ಪಡಿಸಿ ಬೇರೆ ಕೊಠಡಿಗೆ ಕಳುಹಿಸಿದ್ದಾರೆ.

    ಸಮೀನಾ ಸುಲ್ತಾನ ಅವರ ಹೆಚ್ಚಿನ ಮಾಹಿತಿ ತಿಳಿಯದ ಆಸ್ಪತ್ರೆಯ ಸಿಬ್ಬಂದಿ ಹೈದರಾಬಾದ್ ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ಎನ್‍ಜಿಓ ಸಹಾಯ ಪಡೆದಿದ್ದಾರೆ. ಎನ್‍ಜಿಓ ಸಮೀನಾ ಅವರ ಆಧಾರ್ ಸಂಖ್ಯೆಯ ನೆರವಿನಿಂದ ಅವರ ಸಂಬಂಧಿಕರನ್ನು ಪತ್ತೆ ಹಚ್ಚಿದ್ದಾರೆ. ಮಾಹಿತಿ ಪಡೆದು ಆಸ್ಪತ್ರೆಗೆ ಬಂದ ಸಮೀನಾ ಅವರ ಸಂಬಂಧಿ ಬಾಲಕನ ಜವಾಬ್ದಾರಿ ಪಡೆದಿದ್ದಾರೆ. ಘಟನೆ ಕುರಿತು ಎನ್‍ಜಿಓ ಸಂಸ್ಥೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

  • ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡ, ಪ್ರೇಯಸಿ, ಆಕೆಯ ಕುಟುಂಬ ಸೇರಿ ಗರ್ಭಿಣಿಯನ್ನ ಕೊಂದು ಗೋಣಿಚೀಲದಲ್ಲಿ ತುಂಬಿ ಎಸೆದ್ರು

    ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡ, ಪ್ರೇಯಸಿ, ಆಕೆಯ ಕುಟುಂಬ ಸೇರಿ ಗರ್ಭಿಣಿಯನ್ನ ಕೊಂದು ಗೋಣಿಚೀಲದಲ್ಲಿ ತುಂಬಿ ಎಸೆದ್ರು

    ಹೈದರಾಬಾದ್: ಗರ್ಭಿಣಿಯನ್ನ ಕೊಲೆ ಮಾಡಿ ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನ ಮಂಗಳವಾರದಂದು ಮಾಧ್ಯಮಗಳ ಮುಂದೆ ಹಾಜರುಪಡಿಸಿದ್ರು.

    ಆರೋಪಿಗಳೆಲ್ಲರೂ ಬಿಹಾರ ಮೂಲದವರಾಗಿದ್ದು, ಗರ್ಭಿಣಿಯನ್ನ ಕೊಲೆ ಮಾಡಿದ ನಂತರ ಶವವನ್ನ ಭಾಗಗಳಾಗಿ ಮಾಡಿ ಗೋಣಿಚೀಲದಲ್ಲಿ ತುಂಬಿ ಕೊಂಡಾಪುರ ಬೊಟಾನಿಕಲ್ ಗಾರ್ಡನ್ ಬಳಿ ಎಸೆದಿದ್ದರು. ಆರೋಪಿಗಳನ್ನ ಮಮತಾ ಜಾ, ಅನಿಲ್ ಜಾ, ಅಮರ್‍ಕಾಂತ್ ಜಾ ಹಾಗೂ ವಿಕಾಸ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ವಿಕಾಸ್ ಹಾಗೂ ಅಮರ್‍ಕಾಂತ್ ತಲೆಮರೆಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಕಾಸ್‍ನ ಮಗ ಎನ್ನಲಾದ 7 ವರ್ಷದ ಬಾಲಕನನ್ನು ಕೂಡ ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.

    ಜನವರಿ 31ರಂದು ಗೋಣಿಚೀಲದಲ್ಲಿ ತುಂಬಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆರೋಪಿಗಳು ಯಾವುದೇ ಸುಳಿವು ಉಳಿಸದ ಕಾರಣ ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಆರೋಪಿಗಳು ಶವವನ್ನ ಎಸೆದಿದ್ದ ಸ್ಥಳದಲ್ಲಿ ಪೊಲೀಸರು 150 ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದರು. ಆಗ ಇಬ್ಬರು ಬೈಕ್‍ನಲ್ಲಿ ಭಾರವಾದ ಬ್ಯಾಗ್ ಹೊತ್ತೊಯ್ಯುತ್ತಿದ್ದುದು ಕಂಡುಬಂದಿತ್ತು. ಮಹಿಳೆ ಬ್ಯಾಗ್ ಹಿಡಿದುಕೊಂಡಿದ್ದು, ಮತ್ತೊಬ್ಬ ಬೈಕ್ ಓಡಿಸುತ್ತಿದ್ದ. ಶವ ಪತ್ತೆಯಾದ ಸ್ಥಳದಲ್ಲಿ ಈ ಇಬ್ಬರೂ ಕೆಲ ಕಾಲ ಬೈಕ್ ನಿಲ್ಲಿಸಿ ಮುಂದೆ ಸಾಗಿದ್ದರಿಂದ ಶಂಕೆ ಮೂಡಿ ಪೊಲೀಸರು ಆ ಬೈಕ್ ಟ್ರೇಸ್ ಮಾಡಿ ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ, ಮೃತ ಮಹಿಳೆಯನ್ನ ಪಿಂಕಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದವರಾಗಿದ್ದು, 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ತನ್ನ ಗಂಡನಿಂದ ದೂರವಾಗಿ ಬಳಿಕ ವಿಕಾಸ್ ಜೊತೆ ಜೀವನ ನಡೆಸುತ್ತಿದ್ದರು. ವಿಕಾಸ್ ಕೂಡ ಬಿಹಾರ ಮೂಲದವನಾಗಿದ್ದು, ಮಮತಾ ಎಂಬ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಮಮತಾ, ಆಕೆಯ ಗಂಡ ಅನಿಲ್ ಜಾ ಹಾಗೂ ಮಗ ಅಮರ್‍ಕಾಂತ್ ಜಾ ಕೆಲವು ವರ್ಷಗಳ ಹಿಂದೆ ಹೈದರಾಬಾದ್‍ಗೆ ವಲಸೆ ಬಂದಿದ್ದರು. ವಿಕಾಸ್ ಕೂಡ ಹೈದರಾಬಾದ್‍ಗೆ ಬಂದು ಮಮತಾ ಕುಟುಂಬದ ಜೊತೆ ನೆಲೆಸಿದ್ದ. ವಿಕಾಸ್ ಎಲ್ಲಿದ್ದಾನೆಂಬ ಮಾಹಿತಿ ತಿಳಿದ ಪಿಂಕಿ ಕೂಡ ಹೈದರಾಬಾದ್‍ಗೆ ಶಿಫ್ಟ್ ಆಗಿದ್ದರು. ವಿಕಾಸ್ ಮಾಧಪುರ ಬಳಿಯ ಸಿದ್ದೀಕ್‍ನಗರದಲ್ಲಿ ಮಮತಾ ಜೊತೆ ವಾಸವಿರುವುದು ಪಿಂಕಿಗೆ ಗೊತ್ತಾಗಿತ್ತು. ವಿಕಾಸ್ ಮತ್ತು ಮಮತಾ ಸಂಬಂಧದ ಬಗ್ಗೆ ಪಿಂಕಿ ಪ್ರಶ್ನೆ ಮಾಡಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಜನವರಿ 28 ಹಾಗೂ 29ರ ಮಧ್ಯರಾತ್ರಿ ಮಮತಾ, ಆಕೆಯ ಪ್ರಿಯಕರ ವಿಕಾಸ್, ಗಂಡ ಅನಿಲ್, ಮಗ ಅಮರ್‍ಕಾಂತ್ ಸೇರಿ ಸಿದ್ದೀಕ್‍ನಗರದ ಮನೆಯಲ್ಲಿ ಪಿಂಕಿ ಮೇಲೆ ದಾಳಿ ಮಾಡಿ ಕೊಂದಿದ್ದರು. ಬಳಿಕ ಸ್ಟೋನ್ ಕಟ್ಟರ್ ಬಳಸಿ ದೇಹವನ್ನ ಪೀಸ್ ಪೀಸ್ ಮಾಡಿ ಗೋಣಿಚೀಲದಲ್ಲಿ ತುಂಬಿದ್ದರು.

    ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದು, ಕೊಲೆಗೂ ಮುನ್ನ ಆಕೆಯ ಮೇಲೆ ಹಲ್ಲೆ ನಡೆದಿದೆ. ಪಕ್ಕೆಲುಬು, ಸೊಂಟದ ಭಾಗ ಹಾಗೂ ಗರ್ಭಕೋಶಕ್ಕೆ ಹಾನಿಯಾಗಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

    ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

  • ಮಾಟಮಂತ್ರಕ್ಕೆ ಹೆದರಿ, 33 ತೊಲ ಚಿನ್ನ ಕದ್ದ ಕಳ್ಳಿಯರನ್ನ ಬಂಧಿಸಲು ಹಿಂದೇಟು ಹಾಕ್ತಿರೋ ಪೊಲೀಸರು!

    ಮಾಟಮಂತ್ರಕ್ಕೆ ಹೆದರಿ, 33 ತೊಲ ಚಿನ್ನ ಕದ್ದ ಕಳ್ಳಿಯರನ್ನ ಬಂಧಿಸಲು ಹಿಂದೇಟು ಹಾಕ್ತಿರೋ ಪೊಲೀಸರು!

    ಹೈದರಾಬಾದ್: ಇಬ್ಬರು ಕಳ್ಳಿಯರನ್ನು ಬಂಧಿಸುವ ಬಗ್ಗೆ ಪೊಲೀಸರು ಹಿಂದೇಟು ಹಾಕುತ್ತಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಮಲ್ಕಾಜಿಗಿರಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಜಿ. ರಾಘವಲು ಅವರ ಮನೆಯಲ್ಲಿ ಬಾಡಿಗೆಗಿದ್ದ ಹರಿಯಾಣ ಮೂಲದ ಇಬ್ಬರು ಮಹಿಳೆಯರು ಕಳ್ಳತನ ಮಾಡಿದ್ದರು. ಕುಟುಂಬದ ಸದಸ್ಯರಿಗೆ ಡ್ರಗ್ಸ್ ನೀಡಿ 2013ರ ನವೆಂಬರ್ ನಲ್ಲಿ ಮನೆಯಿಂದ 33 ತೊಲ ಚಿನ್ನವನ್ನು ಲೂಟಿ ಮಾಡಿ ಪರಾರಿಯಾಗಿದ್ದರು.

    ಈ ಘಟನೆ ಸಂಬಂಧ ಮಲ್ಕಾಜಿಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಘವುಲು ಅವರ ಪತ್ನಿ ಜಿ. ಅಂಜಮ್ಮ ಅವರು ಆರೋಪಿಗಳಾದ ಗಿನ್ನಿ ಮತ್ತು ಜ್ಯೋತಿಯ ವಿಳಾಸ ಮತ್ತು ವಿವರಗಳನ್ನು ನೀಡಿದ್ದರೂ, ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಬಂಧಿಸಲು ಪೊಲೀಸರು ಭಯಪಡುತ್ತಿದ್ದಾರೆ.

    ಆರೋಪಿಗಳಲ್ಲೊಬ್ಬಳು ಮಾಟ ಮಂತ್ರದಲ್ಲಿ ಪರಿಣಿತಳಾಗಿದ್ದು, ಅನೇಕ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ರು. ಆರೋಪಿಗಳನ್ನು ಬಂಧಿಸಿದ್ರೆ ಆಕೆ ಪೊಲೀಸರ ಮೇಲೆ ಮಾಟಮಂತ್ರ ಮಾಡಿ ಅವರಿಗೆ ಹಾನಿ ಉಂಟುಮಾಡಬಹುದು ಎಂದು ಭಯಪಡ್ತಿದ್ದಾರೆ ಅಂತ ಅಂಜಮ್ಮ ಹೇಳಿದ್ದಾರೆ.

    ಪೋಲಿಸರ ಸುಳ್ಳು ಭರವಸೆಗಳಿಂದ ಬೇಸತ್ತ ಅಂಜಮ್ಮ ರಾಚಕೊಂಡ ಕಮಿಷನರ್ ಮಹೇಶ್ ಭಾಗವತಮ್ ಬಳಿ ಹೋಗಿ ಶೀಘ್ರವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಕೂಡ ಶೀಘ್ರ ತನಿಖೆಯ ಭರವಸೆ ನೀಡಿದ್ದಾರೆ.

    ಒಂದು ರಾತ್ರಿ ಗಿನ್ನಿ ಮತ್ತು ಜ್ಯೋತಿ ಬಂದು ನಮ್ಮ ಕುಟುಂಬದವರಿಗೆ ವಿಶೇಷ ಊಟವನ್ನು ನೀಡಿ ತಿನ್ನಲು ಒತ್ತಾಯಿಸಿದರು. ಅದನ್ನು ತಿಂದ ತಕ್ಷಣ ಕುಟುಂಬದ ಸದಸ್ಯರು ನಿದ್ದೆ ಮಾಡಿದೆವು. ಸ್ವಲ್ಪ ಸಮಯದ ನಂತರ ಎಚ್ಚರಗೊಂಡಾಗ ಚಿನ್ನದ ಆಭರಣಗಳ ಜೊತೆಗೆ ಮಹಿಳೆಯರು ಪರಾರಿಯಾಗಿದ್ದರು. ಪೊಲೀಸರು ಅನೇಕ ಬಾರಿ ಹರಿಯಾಣಕ್ಕೆ ಹೋಗಿದ್ದಾರೆ. ಆದರೆ ಅವರನ್ನು ಬಂಧಿಸದೆ ವಾಪಸ್ ಆಗಿದ್ದಾರೆ ಎಂದು ಅಂಜಮ್ಮ ತಿಳಿಸಿದ್ದಾರೆ.

  • ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆದ್ರೆ ಜೈಲು ಶಿಕ್ಷೆ ವಿಧಿಸಿ: ಓವೈಸಿ

    ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆದ್ರೆ ಜೈಲು ಶಿಕ್ಷೆ ವಿಧಿಸಿ: ಓವೈಸಿ

    ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಯಾರಾದ್ರು ಪಾಕಿಸ್ತಾನಿ ಅಂತ ಕರೆದ್ರೆ ಅವರನ್ನು ಜೈಲು ಶಿಕ್ಷೆಗೆ ಒಳಪಡಿಸಿ ಅಂತ ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ವೇಳೆ ಮಾತನಾಡಿದ ಓವೈಸಿ, ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆಯುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಅಂತ ಹೇಳಿದ್ರು.

    ಅಂತಹ ಹೇಳಿಕೆ ನೀಡುವವರನ್ನು ಕೂಡಲೇ ಜೈಲಿಗಟ್ಟುವ ಕಾನೂನು ತರಬೇಕು. ಆದ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಕಾನೂನು ತರುವುದಿಲ್ಲ. ಭಾರತದಲ್ಲಿರುವ ಮುಸ್ಲಿಮರು ಮೊಹಮ್ಮದ್ ಅಲಿ ಜಿನ್ನಾರವರ ಎರಡು ರಾಷ್ಟ್ರಗಳ ನೀತಿಯನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ರು.

    ಇದೇ ವೇಳೆ ತ್ರಿವಳಿ ತಲಾಖ್ ಕುರಿತಂತೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರ ಮಹಿಳಾ ವಿರೋಧಿಯಾಗಿದೆ ಎಂದರು. ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವ ಮಸೂದೆಯಿಂದ ತ್ವರಿತ ತ್ರಿವಳಿ ತಲಾಖ್ ಕಾನೂನು ಬಾಹಿರವಾಗುತ್ತದೆ. ಪತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತಾದರೂ, ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

    ಫೆ 9 ಮತ್ತು 10ರಂದು ಹೈದರಾಬಾದ್ ನಲ್ಲಿರೋ ಓವೈಸಿ ಆಸ್ಪತ್ರೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್(ಎಐಎಂಪಿಎಲ್‍ಬಿ) ವತಿಯಿಂದ ಸಮಗ್ರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗಣ್ಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಕಾಪಾಡಲು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ವರದಿಯಾಗಿದೆ.

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

    ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

    ಹೈದರಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಟೆಕ್ಕಿಯೊಬ್ಬ ತನ್ನ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

    ರಾಜರತ್ನಂ ಎಂಬ ಟೆಕ್ಕಿಯೇ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ವ್ಯಕ್ತಿ. ಪ್ರಸ್ತುತ ಈ ಕುರಿತು ರಾಜರತ್ನಂ ಪತ್ನಿ ಪ್ರಶಾಂತಿ ಪತಿ ವಿರುದ್ಧ ಶನಿವಾರ ಕೃಷ್ಣ ಜಿಲ್ಲೆಯ ಪೆನಮಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಜನವರಿ 28 ರಂದು ಪ್ರಶಾಂತಿ ಅವರು ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಹೆಣ್ಣು ಮಗು ಜನಿಸಿದ ನಂತರ ರಾಜರತ್ನಂ ಪತ್ನಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಮೂಲಗಳ ಪ್ರಕಾರ ಟೆಕ್ಕಿ ಕಚೇರಿಗೆ ತೆರಳದೆ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

    ಪತ್ನಿ ಮಲಗಿರುವ ವೇಳೆ ಆಕೆಯ ಕೈಗೆ ವೈರ್ ಸುತ್ತಿದ್ದ ರಾಜರತ್ನಂ ಕರೆಂಟ್ ಶಾಕ್ ನೀಡಲು ಪ್ರಯತ್ನಿಸಿದ್ದ. ಆದರೆ ಪ್ರಶಾಂತಿ ಎಚ್ಚರಗೊಂಡಿದ್ದರಿಂದ ಘಟನೆಯಿಂದ ಪರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ವೇಳೆ ಪ್ರಶಾಂತಿ ಅವರ ಮೇಲೆ ರಾಜರತ್ನಂ ಹಲ್ಲೆ ನಡೆಸಿದ್ದು, ಅವರ ಮುಖ, ಕತ್ತು ಮತ್ತು ಕೈಗಳ ಮೇಲೆ ಗಾಯವಾಗಿದೆ. ಪತಿ ಹಲವು ದಿನಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಪ್ರಶಾಂತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  • ಮನೆಯ ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ- ಚಂದ್ರಗ್ರಹಣದಂದು ಶಿಶು ಬಲಿ?

    ಮನೆಯ ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ- ಚಂದ್ರಗ್ರಹಣದಂದು ಶಿಶು ಬಲಿ?

    ಹೈದರಾಬಾದ್: ಅಪರಿಚಿತ ಮಗುವಿನ ರುಂಡವೊಂದು ಮನೆಯ ಟೆರೇಸ್ ಮೇಲೆ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಚಿಲುಕಾ ನಗರದಲ್ಲಿ ನಡೆದಿದೆ. ಮಾಟ ಮಂತ್ರಕ್ಕಾಗಿ ಚಂದ್ರಗ್ರಹಣದಂದು ಮಗುವನ್ನ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಬಟ್ಟೆ ಒಣಗಿಸಲು ಟೆರೇಸ್ ಮೇಲೆ ಹೋದಾಗ ಮಗುವಿನ ರುಂಡ ನೋಡಿ ಕಿರುಚಿಕೊಂಡಿದ್ದಾರೆ. ಇದನ್ನ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು 2 ತಿಂಗಳದ್ದಾ ಅಥವಾ ಮೂರು ತಿಂಗಳದ್ದಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.

    ಮಹಿಳೆಯ ಅಳಿಯನಾದ ಕ್ಯಾಬ್ ಚಾಲಕ ರಾಜಶೇಖರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ನಾಯಿಗಳು ನೆರೆಮನೆಯ ಡಸ್ಟ್ ಬಿನ್ ಬಳಿ ಕೊಂಡೊಯ್ದ ನಂತರ ಆ ಮನೆಯವರಾದ ನರಹರಿ ಹಾಗೂ ರಂಜಿತ್ ಎಂಬಿಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೂ ಆಗಾಗ ಮಾಟ ಮಂತ್ರಕ್ಕಾಗಿ ಪೂಜೆ ಮಾಡುತ್ತಿದ್ದರು ಎಂದು ವರದಿಯಾಗಿದೆ.

    ಟೆರೇಸ್‍ನಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ. ಹೀಗಾಗಿ ತಲೆಯನ್ನು ಮೊದಲೇ ಕಡಿದು ಅಲ್ಲಿ ಇಡಲಾಗಿದೆ ಎಂಬುದನ್ನ ಸೂಚಿಸಿದೆ. ಮಗುವಿನ ದೇಹಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಮಗುವಿನ ರುಂಡ ನೋಡಿ ಆತಂಕಕ್ಕೀಡಾದ ಮಹಿಳೆ ಬಾಲಲಕ್ಷ್ಮೀ, ಮಗು ಬಲಿ ಕೊಡಲು ನಮ್ಮ ಮನೆಯ ಟೆರೇಸನ್ನೇ ಯಾಕೆ ಆಯ್ದುಕೊಂಡರು ಎಂದು ಗಾಬರಿಯಾಗಿದ್ದು, ಕಣ್ಣೀರಿಟ್ಟಿದ್ದಾರೆ.

  • ಮದುವೆಯಾಗಿದ್ರೂ ಪದವಿ ವಿದ್ಯಾರ್ಥಿನಿಯೊಂದಿಗೆ ಲವ್ -ಒಟ್ಟಿಗೆ ಬದುಕುಲಾಗದೆ ಆತ್ಮಹತ್ಯೆ!

    ಮದುವೆಯಾಗಿದ್ರೂ ಪದವಿ ವಿದ್ಯಾರ್ಥಿನಿಯೊಂದಿಗೆ ಲವ್ -ಒಟ್ಟಿಗೆ ಬದುಕುಲಾಗದೆ ಆತ್ಮಹತ್ಯೆ!

    ಹೈದರಾಬಾದ್: ಮದುವೆಯ ನಂತರ ಪದವಿ ವಿದ್ಯಾರ್ಥಿಯನ್ನು ಪ್ರೀತಿಸಿದ ವ್ಯಕ್ತಿಯೊಬ್ಬ ವಿವಾಹೇತರ ಸಂಬಂಧದ ಕಾರಣ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಅರಿತು ಆಕೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ವಜ್ರಪುಕೊತ್ತೂರು ಪ್ರದೇಶದಲ್ಲಿ ನಡೆದಿದೆ.

    ಅಪ್ಪಲ್ರಾಜು ಮತ್ತು ಪದ್ಮ ಆತ್ಮಹತ್ಯೆ ಮಾಡಿಕೊಂಡವರು. ಅಪ್ಪಲ್ರಾಜು 2015 ರಲ್ಲಿ ತನ್ನ ಅಕ್ಕನ ಮಗಳನ್ನು ಮದುವೆಯಾಗಿದ್ದ. ದಂಪತಿಗೆ ಗಂಡು ಮಗು ಜನಿಸಿತ್ತು.

    ಅಪ್ಪಲ್ರಾಜು ಇಟ್ಟಿಗೆ ಕಾರ್ಖಾನೆಯಲ್ಲಿ ದಿನಗೂಲಿ ನೌಕರನಾಗಿದ್ದು, ಮದುವೆ ನಂತರ ಕಳೆದ ಎರಡು ವರ್ಷಗಳಿಂದ ಪದ್ಮ ಎಂಬಾಕೆಯನ್ನು ಪ್ರೀತಿಸಿ ಆಕೆಯೊಂದಿಗೆ ಸುತ್ತಾಟ ನಡೆಸಿದ್ದ. ಈ ಕುರಿತು ಪದ್ಮ ಮನೆಯಲ್ಲಿ ವಿಚಾರ ತಿಳಿದು ಇಬ್ಬರಿಗೂ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಗುರುವಾರ ಬೆಳಗ್ಗೆ ಮನೆಯಿಂದ ಹೊರಬಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಶ್ರೀಕಾಕುಳಂ ನ ರೈಲ್ವೇ ಟ್ರ್ಯಾಕ್‍ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಶುಕ್ರವಾರ ಬೆಳಗ್ಗೆ ರೈಲ್ವೆ ಟ್ರ್ಯಾಕ್ ಮೇಲೆ ಮೃತದೇಹಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ದೊರೆತ ಪದ್ಮ ಕಾಲೇಜು ಪುಸ್ತಕಗಳನ್ನ ಆಧರಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪದ್ಮಾವತ್ ಸಿನಿಮಾ ನೋಡುವಾಗ ಥಿಯೇಟರ್ ನಲ್ಲೇ ಯುವತಿ ಮೇಲೆ ಫೇಸ್‍ಬುಕ್ ಸ್ನೇಹಿತನಿಂದ ಅತ್ಯಾಚಾರ

    ಪದ್ಮಾವತ್ ಸಿನಿಮಾ ನೋಡುವಾಗ ಥಿಯೇಟರ್ ನಲ್ಲೇ ಯುವತಿ ಮೇಲೆ ಫೇಸ್‍ಬುಕ್ ಸ್ನೇಹಿತನಿಂದ ಅತ್ಯಾಚಾರ

    ಹೈದರಾಬಾದ್: ಸಿನಿಮಾ ಥಿಯೇಟರ್ ನಲ್ಲಿ 19 ವರ್ಷದ ಯುವತಿಯೊಬ್ಬರ ಮೇಲೆ ಸ್ನೇಹಿತನೇ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಆರೋಪಿ ಕಂದಕಟ್ಲಾ ಭಿಕ್ಷಪಾತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಗೆ ಆರೋಪಿ 2 ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ. ಪರಿಚಯ ಸ್ನೇಹವಾಗಿದ್ದು, ಇಬ್ಬರು ಭೇಟಿ ಮಾಡಲು ನಿರ್ಧರಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ `ಪದ್ಮಾವತ್’ ಹಿಂದಿ ಸಿನಿಮಾ ನೋಡಲು ನಿರ್ಧರಿಸಿ ಸೋಮವಾರ ಇಬ್ಬರೂ ಹೈದರಾಬಾದ್‍ನ ಪ್ರಶಾಂತ್ ಥಿಯೇಟರ್ ಗೆ ಬಂದಿದ್ದಾರೆ. ಅಂದು ಥಿಯೇಟರ್ ಲ್ಲಿ ಕಡಿಮೆ ಜನರಿದ್ದರು. ಅಲ್ಲದೇ ಇವರಿಬ್ಬರ ಅಕ್ಕಪಕ್ಕ ಯಾರೂ ಕುಳಿತಿರಲಿಲ್ಲ. ಈ ಸಂದರ್ಭವನ್ನು ಆರೋಪಿ ದುರುಪಯೋಗಪಡಿಸಿಕೊಂಡು ಥಿಯೇಟರ್ ನಲ್ಲೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯ ಗುಪ್ತಾಂಗದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿರ್ಲಕ್ಷ್ಯತನದ ಆರೋಪದ ಮೇಲೆ ಥಿಯೇಟರ್ ಮಾಲೀಕನ ವಿರುದ್ಧವೂ ಕ್ರಮಕ್ಕೆ ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

     

  • ರಸ್ತೆಯಲ್ಲಿ ಹೃದಯಾಘಾತವಾದ ಬೈಕ್ ಸವಾರನ ಜೀವ ಉಳಿಸಿದ ಹೋಂಗಾರ್ಡ್ಸ್ – ವಿಡಿಯೋ ವೈರಲ್

    ರಸ್ತೆಯಲ್ಲಿ ಹೃದಯಾಘಾತವಾದ ಬೈಕ್ ಸವಾರನ ಜೀವ ಉಳಿಸಿದ ಹೋಂಗಾರ್ಡ್ಸ್ – ವಿಡಿಯೋ ವೈರಲ್

    ಹೈದರಾಬಾದ್: ಇಬ್ಬರು ಹೋಂಗಾರ್ಡ್ಸ್ ತಮ್ಮ ಸಮಯ ಪ್ರಜ್ಞೆಯಿಂದ, ರಸ್ತೆಯಲ್ಲೇ ಹೃದಯಾಘಾತವಾದ ವ್ಯಕ್ತಿಯೊಬ್ಬರ ಜೀವ ಉಳಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬುಧವಾರ ಸುಮಾರು 12.30ರ ವೇಳೆಗೆ ವ್ಯಕ್ತಿಯೊಬ್ಬರು ಧುಲ್‍ಪೇಟೆಯಿಂದ ಟಾಡ್ಬಂಡ್ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಪುರಾಣಪುಲ್‍ನಲ್ಲಿ ಸ್ಕೂಟರಿಂದ ಕೆಳಗೆ ಕುಸಿದುಬಿದ್ದಿದ್ದಾರೆ. ತಕ್ಷಣ ಇಬ್ಬರು ಹೋಂಗಾರ್ಡ್ಸ್ ಆದ ಚಂದನ್ ಸಿಂಗ್ ಮತ್ತು ಇನಾಯತ್-ಉಲ್ಲಾ ಖಾನ್ ಖದ್ರಿ ಸ್ಥಳಕ್ಕೆ ದೌಡಾಯಿಸಿ ಆ ವ್ಯಕ್ತಿಗೆ ಕೂಡಲೇ ಸಿಪಿಆರ್ ಮಾಡಿ ಮತ್ತೆ ಉಸಿರಾಡುವಂತೆ ಮಾಡಿದ್ದಾರೆ.

    ಇಬ್ಬರು ಹೋಂಗಾರ್ಡ್ಸ್ ವ್ಯಕ್ತಿಯನ್ನು ಕಾಪಾಡಿದ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ಹೋಂಗಾರ್ಡ್ಸ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಕೂಡ ಹೋಂಗಾರ್ಡ್ಸ್ ಗಳನ್ನು ಶ್ಲಾಘಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಹೋಂಗಾರ್ಡ್ಸ್ ಚಂದನ್ ಸಿಂಗ್, “ನನ್ನ ಜೀವನದಲ್ಲಿ ನಾನು ಇಷ್ಟು ವೇಗವಾಗಿ ಯಾವತ್ತೂ ಓಡಿರಲಿಲ್ಲ. ಮುಂದೆ ಬರ್ತಿದ್ದ ವಾಹನಗಳ ಬಗ್ಗೆ ನಾನು ಚಿಂತಿಸಲಿಲ್ಲ. ಆ ವ್ಯಕ್ತಿಯನ್ನು ರಕ್ಷಿಸಲು ನಾನು ತಕ್ಷಣವೇ ಅವರ ಕಡೆಗೆ ಓಡಿಹೋದೆ. ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಅವರು ಸ್ವಲ್ಪವೂ ಚಲಿಸದೆ ಪ್ರಜ್ಞೆಹೀನಾ ಸ್ಥಿತಿಗೆ ಹೋಗಿದ್ದರು. ನಾನು ತಕ್ಷಣ ನಾಡಿ ಹಿಡಿದು ಪರಿಶೀಲಿಸಿದೆ. ಆಗ ಅವರ ಹೃದಯಬಡಿತ ನಿಂತು ಹೋಗಿತ್ತು. ನನ್ನ ಸಹಾಯಕ್ಕೆ ಅಲ್ಲೇ ಪಕ್ಕದಲ್ಲಿದ್ದ ಬೈಕ್ ಸವಾರ ಬಂದರು. ನಾನು ಕೂಡಲೇ ಅವರಿಗೆ ಸಿಪಿಆರ್ ಮಾಡಿದೆ. ಅದು ನಮ್ಮ ಟ್ರಾಫಿಕ್ ತರಬೇತಿ ಸಂಸ್ಥೆಯಲ್ಲಿ ತರಬೇತಿಯ ಭಾಗವಾಗಿತ್ತು ಎಂದು ಹೇಳಿದ್ದಾರೆ.

    ನಾನು ಆ ವ್ಯಕ್ತಿಗೆ ಸುಮಾರು ಒಂದು ನಿಮಿಷದವರೆಗೆ ಸಿಪಿಆರ್ ನೀಡಿದೆ. ನಂತರ ಅವರು ಉಸಿರಾಡಿದರು. ಅವರ ಜೀವ ಉಳಿಯಿತಲ್ಲ ಎಂದು ನನಗೆ ತುಂಬಾ ಸಂತೋಷವಾಯಿತು. ನನ್ನ ಸಹೋದ್ಯೋಗಿ ಇನಾಯತ್ ಉಲ್ಲಾ ಅವರು ತ್ವರಿತವಾಗಿ ಟ್ರಾಫಿಕ್ ನಿಯಂತ್ರಿಸಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು ಎಂದು ಚಂದನ್ ಹೇಳಿದರು.

    ಇದರಲ್ಲಿ ನಮ್ಮದೇನೂ ಇಲ್ಲ. ದೇವರ ದಯೆಯಿಂದ ವ್ಯಕ್ತಿ ಬದುಕುಳಿದಿದ್ದಾರೆ. ನಮ್ಮಿಂದ ಆಗಲ್ಲ ಎಂದು ಕೈಚೆಲ್ಲಿಬಿಡುತ್ತಿದ್ದೆವು. ಆದರೆ ಪ್ರಕ್ರಿಯೆ ಮುಂದುವರೆಸಿದರೆ ಅವರು ಬದುಕುತ್ತಾರೆ ಎಂಬ ಸಣ್ಣ ವಿಶ್ವಾಸವಿತ್ತು ಎಂದು ಹೇಳಿದ್ರು.

    ಚಂದನ್ ಸಿಂಗ್ ಮತ್ತು ಇನಾಯತ್ ಉಲ್ಲಾ ಖಾನ್ ಇಬ್ಬರೂ ಇಲ್ಲಿನ ಬಹದ್ದೂರ್ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೋಂಗಾರ್ಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಮೇಲೆ ಬಿಟೆಕ್ ಪದವೀಧರನಿಂದ ಚಪ್ಪಲಿ ಎಸೆತ!

    ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಮೇಲೆ ಬಿಟೆಕ್ ಪದವೀಧರನಿಂದ ಚಪ್ಪಲಿ ಎಸೆತ!

    ಹೈದರಾಬಾದ್: ಖ್ಯಾತ ತೆಲುಗು ನಟಿ ತಮನ್ನಾ ಭಾಟಿಯಾ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ಯತ್ನಿಸಿರುವ ಘಟನೆ ಹೈದರಾಬಾದ್‍ನ ನಾರಾಯಂಗುಡಾದಲ್ಲಿ ನಡೆದಿದೆ.

    ಭಾನುವಾರ ಹಿಮ್ಮತ್ ನಗರದ ಜ್ಯುವೆಲ್ಲರಿ ಶೋ ರೂಂ ಉದ್ಘಾಟನೆಗೆ ನಟಿ ತಮನ್ನಾ ಆಗಮಿಸಿದ್ದರು. ಅಂತೆಯೇ ತಮನ್ನಾ ಶೋ ರೂಂ ಉದ್ಘಾಟನೆ ಮಾಡಿ ಹೊರಬರುವ ವೇಳೆ ವ್ಯಕ್ತಿಯೊಬ್ಬ ಇವರಿಗೆ ಗುರಿಯಿಟ್ಟು ಚಪ್ಪಲಿ ಎಸೆದಿದ್ದಾನೆ. ಆದರೆ ಅದು ಗುರಿ ತಪ್ಪಿ ಮಳಿಗೆಯ ಸಿಬ್ಬಂದಿ ಮೇಲೆ ಬಿದ್ದಿದೆ. ತಕ್ಷಣವೇ ಅಭಿಮಾನಿಗಳನ್ನು ನಿಯಂತ್ರಿಸಿ ತಮನ್ನಾ ಅವರನ್ನು ರಕ್ಷಿಸಲು ಅವರ ಬಾಡಿಗಾರ್ಡ್ಸ್  ಮುಂದಾಗಿದ್ದಾರೆ.

    ಈ ಘಟನೆಯಿಂದ ತಮನ್ನಾ, ಶೋ ರೂಂ ಮಾಲೀಕರು ಹಾಗೂ ಪೊಲೀಸರು ಕೂಡ ದಿಗ್ಭ್ರಮೆಗೊಂಡಿದ್ದು, ತಕ್ಷಣ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಚಪ್ಪಲಿ ಎಸೆದ ವ್ಯಕ್ತಿ ಬಿಟೆಕ್ ಪದವೀಧರನಾಗಿದ್ದು, ಮುಶೀರಾಬಾದ್ ನಿವಾಸಿ ಕರಿಮುಲ್ಲಾ ಎಂದು ಗುರುತಿಸಲಾಗಿದೆ. ಈತ ತಮನ್ನಾರ ಅಭಿಮಾನಿಯಾಗಿದ್ದು, ಇತ್ತೀಚಿನ ಚಿತ್ರಗಳಲ್ಲಿ ತಮನ್ನಾ ನಟನೆಯ ಬಗ್ಗೆ ಕರಿಮುಲ್ಲಾ ಅಸಮಾಧಾನ ಹೊಂದಿದ್ದನು ಎನ್ನಲಾಗಿದೆ.

    ಪ್ರಸ್ತುತ ತಮನ್ನಾ ಬಾಲಿವುಡ್ ಬ್ಲಾಕ್ ಮಾಸ್ಟರ್ `ರಾಣಿ’  ರೀಮೇಕ್  ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.