Tag: Hyderabad

  • ಸ್ಟೈಲಿಶ್ ಸ್ಟಾರ್ ಅಲ್ಲು ದಿನಚರಿ: ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದೇನು?

    ಸ್ಟೈಲಿಶ್ ಸ್ಟಾರ್ ಅಲ್ಲು ದಿನಚರಿ: ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದೇನು?

    ಖ್ಯಾತ ನಟ ಅಲ್ಲು ಅರ್ಜುನ್ ಹಾಗೂ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ (Sukumaran) ಮತ್ತೊಮ್ಮೆ ಬಾಕ್ಸಾಫೀಸ್ ಉಡೀಸ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಡಬಲ್ ಸಂಭ್ರಮದಲ್ಲಿ ತೇಲಾಡ್ತಿದೆ. 2 ರಾಷ್ಟ್ರಪ್ರಶಸ್ತಿಗಳು ಪುಷ್ಪ-ದಿ ರೈಸ್ ಸಿನಿಮಾಗೆ ಒಲಿದು ಬಂದಿವೆ. ಸೂರ್ಯ, ಧನುಷ್ ನಂತಹ ಸ್ಟಾರ್ಸ್ ಹಿಂದಿಕ್ಕೆ ಮಿಸ್ಟರ್ ಅಲ್ಲು ಅತ್ಯುತ್ತಮ ನಟ ಗರಿ ತಮ್ಮದಾಗಿಸಿಕೊಂಡ್ರೆ, ಅತ್ಯುತ್ತಮ ಸಂಗೀತ ನಿರ್ದೇಶಕನ ಪ್ರಶಸ್ತಿ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಪಾಲಾಗಿದೆ. ಈ ಖುಷಿ ಕ್ಷಣವನ್ನು ಪುಷ್ಪ ಟೀಂ ಸಂಭ್ರಮಿಸಿ ಕ್ಯಾಕಿ ಹಾಕ್ತಿದೆ.

    ರಾಷ್ಟ್ರಪ್ರಶಸ್ತಿ ತಮ್ಮ ಮಡಿಲು ಸೇರುವ ಆನಂದದಲ್ಲಿರುವ ಅಲ್ಲು ಅರ್ಜುನ್ ಫ್ಯಾನ್ಸ್ ಗೆ ಸರ್ ಪ್ರೈಸ್ ಗಿಫ್ಟ್ ಗಿಫ್ಟ್ ಕೊಟ್ಟಿದ್ದಾರೆ. ಸೀಕ್ವೆಲ್ ಶೂಟಿಂಗ್ ಎಲ್ಲಿಗೆ ಬಂತು ಗುರು? ಅಪ್ ಡೇಟ್ ಬೇಕು ಅಪ್ ಡೇಟ್ ಅನ್ನುತ್ತಿದ್ದವರಿಗೆ ಸ್ಟೈಲಿಶ್ ಡೈರೆಕ್ಟ್ ಆಗಿ ಪುಷ್ಪ-2 ಕೋಟೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲುಗಾರು ಹುಟ್ಟುಹಬ್ಬಕ್ಕೆ ಅನಾವರಣ ಪುಷ್ಪ-2 ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿತ್ತು. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ತುಣುಕು ಬಾಲಿವುಡ್ ಮಂದಿಯನ್ನು ಕಂಗೆಡಿಸಿತ್ತು. ಈಗ ರಿವೀಲ್ ಆಗಿರುವ ಪುಷ್ಪ-2 ಮೇಕಿಂಗ್ ಫ್ಯಾನ್ಸ್ ಎಕ್ಸೈಟ್ ಆಗುವಂತೆ ಮಾಡಿದೆ.

    ಅಲ್ಲು ಅರ್ಜುನ್ (Allu Arjun) ಪುಷ್ಪ-2 ಮೇಕಿಂಗ್ ಝಲಕ್ ಮಾತ್ರ ಹಂಚಿಕೊಂಡಿಲ್ಲ. ತಮ್ಮ ದೈನಂದಿನ ದಿನ ದಿನಚರಿ ಹೇಗಿ ಇರುತ್ತೇ ಅನ್ನೋದನ್ನು 2 ನಿಮಿಷ 20 ಸೆಕೆಂಡ್ ವಿಡಿಯೋ ತುಣುಕಿನಲ್ಲಿ ರಿವೀಲ್ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಲೈಫ್ ಸ್ಟೈಲ್ ಹೇಗಿರುತ್ತದೆ? ಅವ್ರ ಮನೆ ಕಾರು, ಗಾರ್ಡನ್, ಕ್ಯಾರವಾನ್ ಬಗ್ಗೆ ತಿಳಿದುಕೊಳ್ಳುವ ಕ್ಯೂರಿಯಾಸಿಟಿಯಂತೂ ಪ್ರತಿಯೊಬ್ಬ ಕಲಾಭಿಮಾನಿಗೂ ಇದ್ದೇ ಇರುತ್ತದೆ. ಆ ಕ್ಯೂರಿಯಾಸಿಟಿಯನ್ನ ತಣಿಸುವ ಕೆಲಸ ಮಾಡಿದ್ದಾರೆ ಮಿಸ್ಟರ್ ಬನ್ನಿಗಾರು. ಈ ಸ್ಪೆಷಲ್ ವಿಡಿಯೋ ಇನ್ ಸ್ಟಾಗ್ರಾಂ ಸಾಥ್ ಕೊಟ್ಟಿದೆ. ಇನ್ ಸ್ಟಾಗ್ರಾಂ ತಂಡ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು ಅವ್ರ ದಿನ ನಿತ್ಯದ ಅಪ್ ಡೇಟ್ ಗಳನ್ನು ಶೂಟ್ ಮಾಡಿ ಫ್ಯಾನ್ಸ್ ಎದುರು ತಂದಿದೆ. ಸ್ವತಃ ಇನ್ ಸ್ಟಾಗ್ರಾಂ ತಂಡವೇ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು ವಿಡಿಯೋ ಮಾಡಿದೆ. ಈ ವಿಶೇಷ ಗೌರವಕ್ಕೆ ಪಾತ್ರವಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆ ಕೂಡ ಅಲ್ಲು ಮಡಿಲು ಸೇರಿದೆ.

     

    View this post on Instagram

     

    A post shared by Instagram (@instagram)

    ಪುಷ್ಪರಾಜ ಬೆಳಗ್ಗೆ ಎದ್ದ ತಕ್ಷಣ ತಮ್ಮ ಮನೆಯ ಅಲ್ಲು ಗಾರ್ಡನ್ ನಲ್ಲಿ ಧಾನ್ಯ ಮಾಡಿ ಚಿಲ್ ಆಗ್ತಾರೆ. ಗಾರ್ಡನ್ ಒಂದು ರೌಂಡ್ ಆಗಿ ಕಾಫಿ ಕುಡಿದು ತಮ್ಮ ಕಾಸ್ಟ್ಲೀ ಕಾರ್ ಹತ್ತಿಕೊಂಡು ತಮ್ಮ ಮುದ್ದಿನ ಮಕ್ಕಳಿಗೆ ವಿಡಿಯೋ ಕಾಲ್ ಮಾಡ್ತಾರೆ. ಎಲ್ಲಿ ಇರಲಿ ಎಷ್ಟೇ ಬ್ಯುಸಿ ಇರಲಿ ಅಲ್ಲು ಮಿಸ್ ಮಾಡದೇ ಮಧ್ಯಾಹ್ನ 1 ಗಂಟೆ ಮಕ್ಕಳಿಗೆ ವಿಡಿಯೋ ಕಾಲ್ ಮಾಡೋದನ್ನ ಮಾತ್ರ ಮರೆಯೋದಿಲ್ಲ. ವಿಡಿಯೋ ಕಾಲ್ ಮಾಡ್ತಾ ಹೈದ್ರಾಬಾದ್ ರಾಮೋಜಿಸಿಟಿ ಫಿಲ್ಮ ಸಿಟಿ ತಲುಪ್ತಾರೆ. ಅಲ್ಲಿ ನೆರೆದಿದ್ದ ಫ್ಯಾನ್ಸ್ ಭೇಟಿ ಮಾಡಿ ಶೂಟಿಂಗ್ ಸೆಟ್ ಗೆ ಹಾಜರಾಗ್ತಾರೆ.

    ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಡ್ತಿದ್ದಂತೆ ಸಿನಿಮಾಗೆ ಸಂಬಂಧಿಸಿದ ಕಾಸ್ಟ್ಯೂಮ್, ಪ್ರಾಪರ್ಟಿಸ್ ಆಯ್ಕೆ ಮಾಡಿಕೊಂಡ ನಂತ್ರ ಪುಷ್ಪರಾಜ್ ತಮ್ಮ ಕ್ಯಾರವಾನ್ ಗೆ ಪ್ರವೇಶಿಸ್ತಾರೆ. ಅಲ್ಲು ಕ್ಯಾರವಾನ್ ತಲುಪ್ತಿದ್ದಂತೆ ನಿರ್ದೇಶಕ ಸುಕುಮಾರ್ ನೆಚ್ಚಿನ ಡಾರ್ಲಿಂಗ್ ಮೀಟ್ ಮಾಡಿ ಹಗ್ ಮಾಡಿ ಆ ದಿನ ಸೀನ್ಸ್ ಬಗ್ಗೆ ಎಕ್ಸ್ ಪ್ಲೈನ್ ಮಾಡ್ತಾರೆ. ನಂತ್ರ ಮೇಕಪ್ ಹಚ್ಚಿಕೊಂಡು ಕ್ಯಾಮೆರಾ ಎದುರು ಪ್ರತ್ಯಕ್ಷರಾಗ್ತಾರೆ.

    ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಅದ್ಭುತವಾದ ಬಾಂಡಿಂಗ್ ಇದೆ. ಸುಕುಮಾರ್ ಸಿನಿಮಾ ಜರ್ನಿ ಶುರುವಾಗಿದ್ದು ಅಲ್ಲು ಜೊತೆನೇ. ಆರ್ಯ ಸಿನಿಮಾದ ಮೂಲಕ ಹಿಟ್ ಜೋಡಿಯಾದ ಸ್ಟೈಲಿಶ್ ಸ್ಟಾರ್ ಸುಕುಮಾರ್ ಆರ್ಯ-2 ನಂತ್ರ ಪುಷ್ಪ-1 ಈಗ ಪುಷ್ಪ-2 ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನನ್ನ ಮೊದಲ ಹೀರೋ ಎಂದಿರುವ ಸುಕುಮಾರ್, ನನ್ನ ಗೆಳೆಯ ಅಂತಾನೂ ಹೇಳಿಕೊಂಡಿದ್ದಾರೆ.

    ಪುಷ್ಪ 2 ದಿ ರೂಲ್ಸ್ ಶೂಟಿಂಗ್ ಹೈದ್ರಾಬಾದ್ (Hyderabad) ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಸುದ್ದಿ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್, ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2 ಗಾಗಿ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಹಾಗಿದ್ರೆ ಪುಷ್ಪ-2  ವರ್ಷ ತೆರೆಗೆ ಬರೋದಂತು ಡೌಟ್. ಮುಂದಿನ ವರ್ಷ ಮಾರ್ಚ್ 22ಕ್ಕೆ ಪುಷ್ಪರಾಜನ ಫೈಯರ್ ತೆರೆಯಲ್ಲಿ ಶುರುವಾಗಲಿದೆ ಎನ್ನಲಾಗ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 7 ಮಂದಿ ಅರೆಸ್ಟ್

    16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 7 ಮಂದಿ ಅರೆಸ್ಟ್

    ಹೈದರಾಬಾದ್: 16 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಹೈದರಾಬಾದ್‌ನ ನಂದನವನಂ ಕಾಲೋನಿಯಲ್ಲಿ ಘಟನೆ ನಡೆದಿದ್ದು, ರಾಚಕೊಂಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಬೇದ್ ಬಿನ್ ಖಲೀದ್, ತಹಸೀನ್, ಮಂಕಾಳ ಮಹೇಶ್, ಎಂ ನರಸಿಂಗ್, ಅಶ್ರಫ್, ಫೈಝಲ್ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ (POCSO) ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ

    ಭಾನುವಾರ ಬೆಳಗ್ಗೆ ಬಾಲಕಿಯ ಮನೆಗೆ ನುಗ್ಗಿದ ಅಬೇದ್ ಮತ್ತು ಆತನ ಸ್ನೇಹಿತರು ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬಲವಂತವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿಕ ಸಂತ್ರಸ್ತೆ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳು ಮದ್ಯದ ಅಮಲಿನಲ್ಲಿ ಬೆಳಗ್ಗೆ 9:30ರ ಸುಮಾರಿಗೆ ಆಕೆಯ ಮನೆಗೆ ಬಲವಂತವಾಗಿ ನುಗ್ಗಿ ಆಕೆಗೆ ಮತ್ತು ಆಕೆಯ ಸಹೋದರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಉಲ್ಲೇಖಿಸಿ ದೂರನ್ನು ನೀಡಿದ್ದಾಳೆ. ಇದನ್ನೂ ಓದಿ: ಮತ್ತೊಂದು ಪ್ರೇಮ ಕಥನ- ಪತಿ ಭೇಟಿಯಾಗಲು ಭಾರತಕ್ಕೆ ಬಂದ ಬಾಂಗ್ಲಾ ಮಹಿಳೆಗೆ ಶಾಕ್!

    ಈ ಕುರಿತು ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು 11 ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಆರೋಪಿ ಅಬೇದ್‌ನನ್ನು ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಬೇದ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವನ ಬಳಿಯಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಆಸ್ತಿ ವಿಚಾರಕ್ಕೆ ಹಾರಿತು ಗುಂಡು

    ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರು ನೇರ ಅಪರಾಧಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಅಶ್ರಫ್ ಮತ್ತು ನರಸಿಂಗ್ ಘಟನಾ ಸ್ಥಳದಲ್ಲಿ ಹಾಜರಿದ್ದು, ದುಷ್ಕರ್ಮಿಗಳಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಫೈಝಲ್ ಮತ್ತು ಇಮ್ರಾನ್ ಆರೋಪಿಗಳ ಹೇಯ ಕೃತ್ಯದ ಬಗ್ಗೆ ತಿಳಿದಿದ್ದರೂ ಅವರಿಗೆ ಸಹಾಯ ಮಾಡಿದ್ದಾರೆ ಎಂದು ರಾಚಕೊಂಡ ಆಯುಕ್ತ ಡಿಎಸ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಚೇಸ್ ಮಾಡಿ 1 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ಪೊಲೀಸರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 6ಕ್ಕೆ ಭೋಲಾ ಶಂಕರ್ ಮೆಗಾ ಇವೆಂಟ್ : ಮೆಗಾಸ್ಟಾರ್ ಅಭಿಮಾನಿಗಳಿಗೆ ಹಬ್ಬ

    ಆಗಸ್ಟ್ 6ಕ್ಕೆ ಭೋಲಾ ಶಂಕರ್ ಮೆಗಾ ಇವೆಂಟ್ : ಮೆಗಾಸ್ಟಾರ್ ಅಭಿಮಾನಿಗಳಿಗೆ ಹಬ್ಬ

    ಟಾಲಿವುಡ್ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ (Bhola Shankar) ಸಿನಿಮಾದ ಮೆಗಾ ಪ್ರಿ ರಿಲೀಸ್ ಇವೆಂಟ್ ಆಗಸ್ಟ್ 6 ರಂದು ನಡೆಯಲಿದೆ. ಮೆಗಾ ಇವೆಂಟ್ ಆಗಿ ಹೈದರಾಬಾದ್ (Hyderabad) ನ ಶಿಲ್ಪಕಲಾ ವೇದಿಕೆ ರೆಡಿಯಾಗುತ್ತಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಲಿದ್ದಾರೆ.

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಸುದ್ದಿಯಾಗುತ್ತಲೇ ಇದೆ. ಸಿನಿಮಾದ ಟ್ರೈಲರ್ ಹೈಪ್ ಕ್ರಿಯೆಟ್ ಮಾಡ್ತಿದ್ರೆ, ಮತ್ತೊಂದು ಕಡೆ ಚಿರಂಜೀವಿ ಅವರ ಸಂಭಾವನೆ ವಿಚಾರ ನೆಟ್ಟಿರ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಮೆಗಾಸ್ಟಾರ್ ಸಂಭಾವನೆ ಪಡೆದಿರೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಾ.

    ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ಜೀವತುಂಬಿದ್ದಾರೆ. ಸದ್ಯ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ್ಯಕ್ಷನ್, ಎಮೋಷನ್, ಕಾಮಿಡಿ ದೃಶ್ಯಗಳನ್ನು ಎಡಿಟ್ ಮಾಡಿ ಟ್ರೇಲರ್‌ನಲ್ಲಿ ಹಾಕಲಾಗಿದೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೈಲರ್‌ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.

    ನನ್ನ ಹಿಂದೆ ಮಾಫಿಯಾ ಇದೆ ಎಂದು ರವಿಶಂಕರ್ ಹೇಳುತ್ತಾರೆ. ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ ಎಂದು ರವಿಶಂಕರ್‌ಗೆ ತಿರುಗೇಟು ನೀಡುವ ಚಿರು ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ & ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.

     

    ದುಬಾರಿ ನಟ ಮೆಗಾಸ್ಟಾರ್ ಅವರು ‘ಭೋಲಾ ಶಂಕರ್’ (Bhola Shankar) ಸಿನಿಮಾಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೇ ನಟಿಸಿದ್ದಾರಂತೆ. ಈ ಸುದ್ದಿ ಗಾಸಿಪ್ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಆದರೆ ಒಂದು ರೂಪಾಯಿ ಪಡೆಯದೇ ಚಿರಂಜೀವಿ ನಟಿಸಿರೋದು ಮೂಲಗಳ ಪ್ರಕಾರ ನಿಜ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್‌ ನಡುವೆ ಸಂಚಾರ

    ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್‌ ನಡುವೆ ಸಂಚಾರ

    ಬೆಂಗಳೂರು: ಶೀಘ್ರವೇ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಬರಲಿದೆ. ಹೈದರಾಬಾದ್ (Hyderabad) ಹಾಗೂ ಬೆಂಗಳೂರು (Bengaluru) ನಡುವೆ ಸಂಚರಿಸಲಿರುವ ಹೊಸ ರೈಲು ಆಗಸ್ಟ್ ಅಂತ್ಯಕ್ಕೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ.

    ಈಗಾಗಲೇ ರಾಜ್ಯದಲ್ಲಿ ಮೈಸೂರು – ಚೆನ್ನೈ ಹಾಗೂ ಬೆಂಗಳೂರು – ಧಾರವಾಡಗಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳು ಇವೆ. ಇದೀಗ ಬೆಂಗಳೂರು – ಹೈದರಾಬಾದ್ ನಡುವೆ ಸಂಚಾರಕ್ಕೆ ಹೊಸ ರೈಲು ಸಜ್ಜುಗೊಳ್ಳುತ್ತಿದೆ. ಇದು 7 ಗಂಟೆ ಅವಧಿಯಲ್ಲಿ ಯಶವಂತಪುರದಿಂದ (Yeswanthpur) ಕಾಚಿಗುಡ ನಡುವೆ 610 ಕಿ.ಮೀ ಕ್ರಮಿಸಲಿದೆ.

    ಹೊಸ ರೈಲು ಬೆಳಗ್ಗೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ. ಬಳಿಕ 2 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ ವೇಳೆಗೆ ಕಾಚಿಗುಡ ತಲುಪಲಿದೆ. ಯಶವಂತಪುರ, ಧರ್ನಾವರಂ, ದೋನ್ ಕರ್ನೂಲ್ ನಗರ, ಗಡ್ವಾಲ ಜಂಕ್ಷನ್, ಮೆಹಬೂಬ್ ನಗರ, ಕಾಚಿಗುಡ ಮಾರ್ಗದಲ್ಲಿ ರೈಲು ಸಂಚರಿಸಲಿದೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

    ಈಗಾಗಲೇ ಕಾಚಿಗುಡದಿಂದ ದೋನ್‌ವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಶೀಘ್ರದಲ್ಲೇ ಯಶವಂತಪುರದವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಳ್ಳಲಿದೆ. ಆಗಸ್ಟ್ ಅಂತ್ಯಕ್ಕೆ ಹೊಸ ವಂದೇ ಭಾರತ್ ರೈಲು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: 5 ಡಜನ್‍ಗೂ ಹೆಚ್ಚು ಇನ್ಸ್‌ಪೆಕ್ಟರ್‌ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್‌ ತಡೆ ಹಿಡಿದಿದ್ದು ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ

    ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ

    ಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಕಾವಾಲಾ (Kawala) ಹಾಡು ಇಡೀ ದೇಶದ ಡಾನ್ಸ್ ಪ್ರೇಮಿಗಳೇ  ಕುಣಿಸಿದೆ. ತಮಿಳಿನಲ್ಲಿ ರಿಲೀಸ್ ಆಗಿದ್ದ ಈ ಹಾಡನ್ನು ಇದೀಗ ತೆಲುಗು ಭಾಷೆಯಲ್ಲೂ ತಯಾರು ಮಾಡಲಾಗಿತ್ತು. ಆ ಹಾಡಿನ ಬಿಡುಗಡೆ  (Song Release) ಇಂದು ಹೈದರಾಬಾದ್ ನಲ್ಲಿ ನಡೆಯಲಿತ್ತು.

    ಈ ಹಾಡಿನ ಬಿಡುಗಡೆಗಾಗಿ ತಮನ್ನಾ (Tamannaah) ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಹೈದರಾಬಾದ್ ಗೆ ಆಗಮಿಸಿದ್ದರು. ರಜನಿಕಾಂತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಮಾಹಿತಿ ಕೂಡ ಸಿಕ್ಕಿತ್ತು. ಆದರೆ, ಈ ಕಾರ್ಯಕ್ರಮ ನಡೆಯದಂತೆ ವರುಣ ಅಬ್ಬರಿಸಿದ್ದಾನೆ. ಮಳೆಯ ಕಾರಣದಿಂದಾಗಿ ಇವೆಂಟ್ ಕ್ಯಾನ್ಸಲ್ ಆಗಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ನೀಡಿದೆ.

     

    ಕಾವಾಲಾ ತೆಲುಗು ಹಾಡನ್ನು ಕೇಳಲು ನೀವೆಲ್ಲ ಉತ್ಸುಕರಾಗಿದ್ದೀರಿ ಎನ್ನುವುದನ್ನು ನಾವು ಬಲ್ಲೆವು. ಆದರೆ, ಮಳೆಯ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿದೆ. ಹಾಗಂತ ನಿಮಗೆ ನಿರಾಸೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಕಂಡಿತಾ ಇವೆಂಟ್ ಮಾಡಿಯೇ ಸಾಂಗ್ ರಿಲೀಸ್ ಮಾಡುತ್ತೇವೆ ಎಂದಿದೆ ಸನ್ ಪಿಕ್ಚರ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿರ್ಚಿ ಬಜ್ಜಿ ತಿನ್ನೋದಕ್ಕೆ ಅಂಬುಲೆನ್ಸ್‌ ಸೈರನ್‌ ದುರುಪಯೋಗ – ಎಮರ್ಜೆನ್ಸಿ ಅಂತ ಟ್ರಾಫಿಕ್‌ ಕ್ಲಿಯರ್‌ ಮಾಡಿದ್ದ ಪೊಲೀಸರೇ ಶಾಕ್!

    ಮಿರ್ಚಿ ಬಜ್ಜಿ ತಿನ್ನೋದಕ್ಕೆ ಅಂಬುಲೆನ್ಸ್‌ ಸೈರನ್‌ ದುರುಪಯೋಗ – ಎಮರ್ಜೆನ್ಸಿ ಅಂತ ಟ್ರಾಫಿಕ್‌ ಕ್ಲಿಯರ್‌ ಮಾಡಿದ್ದ ಪೊಲೀಸರೇ ಶಾಕ್!

    ಹೈದರಾಬಾದ್‌: ಟ್ರಾಫಿಕ್‌ ಕ್ಲಿಯರ್‌ ಮಾಡಿಕೊಂಡು ರಸ್ತೆ ಬದಿಯಲ್ಲಿ ಸ್ನ್ಯಾಕ್ಸ್‌ ತೆಗೆದುಕೊಳ್ಳುವುದಕ್ಕೆ ಅಂಬುಲೆನ್ಸ್‌ ಚಾಲಕ ಸೈರನ್‌ ಅನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್‌ ಚಾಲಕನೊಬ್ಬ ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಅಂಬುಲೆನ್ಸ್‌ ಸೈರನ್ ದುರುಪಯೋಗಪಡಿಸಿಕೊಂಡಿದ್ದಾನೆ. ಸೈರನ್‌ ಹೊಡೆಯುತ್ತ ರಸ್ತೆಯಲ್ಲಿ ವೇಗವಾಗಿ ಬಂದ ಅಂಬುಲೆನ್ಸ್‌ಗೆ ಸಂಚಾರ ಪೊಲೀಸರು ಟ್ರಾಫಿಕ್‌ ಕ್ಲಿಯರ್‌ ಮಾಡಿಕೊಟ್ಟಿದ್ದಾರೆ. ಆದರೆ ಅಂಬುಲೆನ್ಸ್‌ ಆಸ್ಪತ್ರೆ ಕಡೆಗೆ ಹೋಗದೇ, ಅಲ್ಲೇ ರಸ್ತೆ ಬದಿಯ ಹೋಟೆಲ್‌ವೊಂದರಲ್ಲಿ ನಿಲ್ಲಿಸಿದೆ. ಇದನ್ನೂ ಓದಿ: 3 ಸಾವಿರ ರೂ. ಮೌಲ್ಯದ 40 ಕೆ.ಜಿ. ಟೊಮೆಟೋ ಕಳ್ಳತನ- ದೂರು ದಾಖಲು

    ಇದರಿಂದ ಅಚ್ಚರಿಗೊಂಡ ಟ್ರಾಫಿಕ್‌ ಪೊಲೀಸರು ಅಂಬುಲೆನ್ಸ್‌ ಬಳಿ ಹೋಗಿ ನೋಡಿದಾಗ, ಅಲ್ಲಿ ಯಾವ ರೋಗಿಯೂ ಇರಲಿಲ್ಲ. ಆದರೂ ಚಾಲಕ ಅಂಬುಲೆನ್ಸ್‌ ಸೈರನ್‌ನ್ನು ಸಕ್ರಿಯಗೊಳಿಸಿ ಚಲಾಯಿಸಿದ್ದ. ಆ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.

    ಟ್ರಾಫಿಕ್‌ ಕ್ಲಿಯರ್‌ ಮಾಡಿದ ಬಳಿಕ ಅಂಬುಲೆನ್ಸ್‌ ಚಾಲಕ ನೇರವಾಗಿ ಹೋಟೆಲ್‌ವೊಂದರ ಬಳಿ ನಿಲ್ಲಿಸಿದ್ದಾನೆ. ನಂತರ ಒಂದಷ್ಟು ಸ್ನ್ಯಾಕ್ಸ್‌ ತೆಗೆದುಕೊಂಡಿದ್ದಾನೆ. ಈ ವೇಳೆ ಅಂಬುಲೆನ್ಸ್‌ ಕಡೆ ಹೋದ ಪೊಲೀಸರು, ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ. ಅಂಬುಲೆನ್ಸ್‌ನಲ್ಲಿ ಯಾವುದೇ ರೋಗಿ ಇರಲಿಲ್ಲ. ವಾಹನದಲ್ಲಿ ಇಬ್ಬರು ನರ್ಸ್‌ಗಳು ಮಾತ್ರ ಇದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡಬಲ್‌ ಮರ್ಡರ್‌: ನಂಬಿಕೆ ದ್ರೋಹಿಗಳನ್ನ ಮುಗಿಸ್ತೀನಿ ಅಂತಾ ಸ್ಟೇಟಸ್‌ ಹಾಕಿದ್ದ ಹಂತಕ!

    ಅಂಗಡಿಯಲ್ಲಿ ಚಾಲಕ ಸ್ನ್ಯಾಕ್ಸ್‌, ಜ್ಯೂಸ್‌ ಬಾಟೆಲ್‌ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ, ನರ್ಸ್‌ವೊಬ್ಬರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳುತ್ತಿರುವ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಈ ವೇಳೆ ಟ್ರಾಫಿಕ್ ಕಾನ್ಸ್‌ಟೇಬಲ್‌ವೊಬ್ಬರು ಡ್ರೈವರ್‌ಗೆ, ನೀನು ಸೈರನ್ ಹಾಕಿದ ಮೇಲೆ ನಾನು ಅಂಬುಲೆನ್ಸ್‌ಗೆ ಕ್ಲಿಯರೆನ್ಸ್ ಕೊಟ್ಟೆ. ಆದರೆ ಆಸ್ಪತ್ರೆಗೆ ಹೋಗದೆ ಮಿರ್ಚಿ ಬಜ್ಜಿ ತಿಂದು ಟೀ ಕುಡಿಯುತ್ತೀಯ.. ರೋಗಿ ಎಲ್ಲಿ? ಬಜ್ಜಿ ತಿನ್ನೋದಕ್ಕೆ ಸೈರನ್ ಆನ್ ಮಾಡಿದ್ದೀರಾ ಎಂದು ಪ್ರಶ್ನಿಸಿ, ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಪ್ರಸಂಗವಾದ ಬಳಿಕ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನ ವಿರುದ್ಧ 1,000 ರೂ. ದಂಡ ವಿಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಕ್ಕಿಬೀಳೋ ಭಯದಲ್ಲಿ ಕದ್ದಿದ್ದ 30 ಲಕ್ಷದ ವಜ್ರದ ಉಂಗುರವನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿದ್ಳು!

    ಸಿಕ್ಕಿಬೀಳೋ ಭಯದಲ್ಲಿ ಕದ್ದಿದ್ದ 30 ಲಕ್ಷದ ವಜ್ರದ ಉಂಗುರವನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿದ್ಳು!

    ಹೈದರಾಬಾದ್: ಚರ್ಮ ಹಾಗೂ ಕೂದಲಿಗೆ ಚಿಕಿತ್ಸೆ ನೀಡೋ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿಯೊಬ್ಬಳು ಗ್ರಾಹಕರೊಬ್ಬರ 30 ಲಕ್ಷ ರೂ. ಮೌಲ್ಯದ ವಜ್ರದ ಉಂಗುರವನ್ನು (Diamond Ring) ಕದ್ದು, ಬಳಿಕ ಸಿಕ್ಕಿಬೀಳೋ ಭಯದಲ್ಲಿ ಅದನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿರೋ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ವರದಿಗಳ ಪ್ರಕಾರ, ದೂರುದಾರ ಮಹಿಳೆ ಚಿಕಿತ್ಸೆಗೆಂದು ನಗರದ ಜುಬಿಲಿ ಹಿಲ್ಸ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಚಿಕಿತ್ಸೆ ವೇಳೆ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿ ಅವರಿಗೆ ಉಂಗುರವನ್ನು ಕಳಚಿ ಪೆಟ್ಟಿಗೆಯಲ್ಲಿ ಇಡುವಂತೆ ಹೇಳಿದ್ದಳು. ಚಿಕಿತ್ಸೆಯ ಬಳಿಕ ಮಹಿಳೆ ಮನೆ ತಲುಪಿದ್ದು, ನಂತನ ಅವರಿಗೆ ತನ್ನ ಉಂಗುರವನ್ನು ಕ್ಲಿನಿಕ್‌ನಲ್ಲಿ ಮರೆತಿರುವುದು ಅರಿವಾಗಿದೆ.

    ಬಳಿಕ ಮಹಿಳೆ ಸಿಬ್ಬಂದಿಯನ್ನು ವಿಚಾರಿಸಿದ್ದಾಳೆ. ಆದರೆ ತನ್ನ ಉಂಗುರದ ಬಗ್ಗೆ ಏನೂ ಮಾಹಿತಿ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆಕೆ ಉಂಗುರವನ್ನು ಕದ್ದು, ತನ್ನ ಪರ್ಸ್‌ನಲ್ಲಿ ಇಟ್ಟಿರುವುದಾಗಿ ಬಾಯಿಬಿಟ್ಟಿದ್ದಾಳೆ. ಇಷ್ಟಾದ ಬಳಿಕವೂ ಸಿಬ್ಬಂದಿ ಸಿಕ್ಕಿ ಬೀಳುವ ಭಯದಲ್ಲಿ ಉಂಗುರವನ್ನು ಟಾಯ್ಲೆಟ್‌ಗೆ ಎಸೆದು ಫ್ಲಶ್ ಮಾಡಿದ್ದಾಳೆ. ಇದನ್ನೂ ಓದಿ: ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್‌ ಸರ್ಕಾರ

    ವಿಚಾರ ತಿಳಿದ ಪೊಲೀಸರು ಪ್ಲಂಬರ್ ಸಹಾಯದಿಂದ ಕಮೋಡ್ ಅನ್ನು ಸಂಪರ್ಕಿಸುವ ಪೈಪ್‌ನಿಂದ ಉಂಗುರವನ್ನು ತೆಗೆದು ಅದನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಕಳ್ಳತನ ನಡೆಸಿದ್ದಕ್ಕಾಗಿ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪತಿ, ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ

    ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ

    ಕೋಲಾರ: ರೆಸಾರ್ಟ್‌ನಲ್ಲಿ (Resort) ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ಮೇಲೆ ಕೋಲಾರ (Kolar) ಪೊಲೀಸರು ಭರ್ಜರಿ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಜನರನ್ನು ಬಂಧಿಸಿ, 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮುಳಬಾಗಿಲು (Mulabagilu) ತಾಲೂಕು ರಾಕ್ ವ್ಯಾಲಿ ರೆಸಾರ್ಟ್ (Rock Valley Resort) ಮೇಲೆ ಕಳೆದ ರಾತ್ರಿ ದಾಳಿ ಮಾಡಿದ ಕೋಲಾರ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಜನರನ್ನು ಬಂಧಿಸಿ 6 ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಕೋಲಾರ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬೈರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಳೆದ ಹಲವು ದಿನಗಳಿಂದ ಈ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ರೌಡಿಶೀಟರ್!

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ರೆಸಾರ್ಟ್ ಮಾಲೀಕ ಸೇರಿ ಹೈದರಾಬಾದ್ (Hyderabad) ಮೂಲದ ಆರು ಜನ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ಮೂಲದ ಅಜಯ್ ಎಂಬ ವ್ಯಕ್ತಿ ಮಹಿಳೆಯರನ್ನು ಕೆರೆತರುತ್ತಿದ್ದ ಎನ್ನಲಾಗಿದೆ. ದಾಳಿ ವೇಳೆ ಸುಮಾರು ಹತ್ತಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಗೋಮಾಂಸ ಸಾಗಾಟ- ವ್ಯಕ್ತಿಯನ್ನು ಹೊಡೆದು ಕೊಂದ ಸಾರ್ವಜನಿಕರು

    ಕಳೆದ ಒಂದು ವರ್ಷದಲ್ಲಿ ಈ ರೆಸಾರ್ಟ್ ಮೇಲೆ ಇದು ಎರಡನೇ ದಾಳಿ ಆಗಿದ್ದು, ಈ ಹಿಂದೆ ಕೂಡ ದಾಳಿ ಮಾಡಿ ಹೈಟೆಕ್ ಜೂಜು ಅಡ್ಡ ಹಾಗೂ ವೇಶ್ಯಾವಾಟಿಕೆಗೆ ಪೊಲೀಸರು ಕಡಿವಾಣ ಹಾಕಿದ್ದರು. ಆದರೆ ಮತ್ತೆ ಇದು ಮುಂದುವರಿಯುತ್ತಿದ್ದು, ಪ್ರಭಾವಿಗಳ ಕೈವಾಡ ಸೇರಿದಂತೆ ವಿವಿಧ ರಾಜ್ಯಗಳ ಗಣ್ಯರು ಸಹ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಕೋಲಾರದ ನಂಗಲಿ ಹಾಗು ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಕೋಲಾರ ಎಸ್ಪಿ ನಾರಾಯಣ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

    ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

    ರೋಬ್ಬರಿ ಹನ್ನೊಂದು ವರ್ಷಗಳ ನಂತರ ತಂದೆಯಾಗಿದ್ದಾರೆ ತೆಲುಗು ನಟ ರಾಮ್ ಚರಣ್ (Ram Charan). ಉದ್ದೇಶ ಪೂರ್ವಕವಾಗಿಯೇ ಮಗು ಹೊಂದದಿರಲು ರಾಮ್ ಚರಣ್ ಮತ್ತು ಉಪಾಸನಾ ಸಂಕಲ್ಪ ಮಾಡಿದ್ದರು. ಕುಟುಂಬದವರ ಒತ್ತಡವಿದ್ದರೂ, ತಾವು ಹೊಂದಿದ್ದ ಸಂಕಲ್ಪವನ್ನು ಅವರು ಮುರಿದಿರಲಿಲ್ಲ. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕುಟುಂಬದಲ್ಲಿ ಸಂಭ್ರಮ ಹೆಚ್ಚಿಸಿದ್ದಾರೆ ಉಪಾಸನಾ.

    ಇಂದು ಮಗುವನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ ರಾಮ್ ಚರಣ್. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ್ ಚರಣ್, ‘ಮಗುವನ್ನು ಮೊದಲ ಬಾರಿಗೆ ನೋಡಿದಾಗ ಆದ ಆನಂದವನ್ನು ಹೇಳಲು ಕಷ್ಟ. ಹೇಳಿದರೆ, ಅದು ಕೃತಕ ಅನಿಸಬಹುದು. ಅಷ್ಟೊಂದು ಸಂಭ್ರಮವನ್ನು ಮಗು ಕೊಟ್ಟಿದೆ’ ಎಂದು ಹೇಳಿದರು. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಮಗು ತಾಯಿಯನ್ನು ಹೋಲುತ್ತಾ? ಅಥವಾ ನಿಮ್ಮನ್ನು ಹೋಲುತ್ತಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ ಅದು ನನ್ನನ್ನೇ ಹೋಲುತ್ತದೆ’ ಎಂದು ಹೇಳಿ ಸಂಭ್ರಮಿಸಿದರು. ಮಗುವಿಗೆ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮಗುವಿಗೆ ಯಾವ ಹೆಸರನ್ನು (Name) ಇಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದಾರಂತೆ. ಅದನ್ನು ನಂತರ ಹೇಳುವೆ ಎನ್ನುವುದು ರಾಮ್ ಚರಣ್ ಮಾತು.

    ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.

    ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ.

  • ಮಗುವನ್ನು ಮನೆಗೆ ಕರೆತಂದ ನಟ ರಾಮ್ ಚರಣ್-ಉಪಾಸನಾ

    ಮಗುವನ್ನು ಮನೆಗೆ ಕರೆತಂದ ನಟ ರಾಮ್ ಚರಣ್-ಉಪಾಸನಾ

    ಮೂರು ದಿನಗಳ ಹಿಂದೆಯಷ್ಟೇ ನಟ ರಾಮ್ ಚರಣ್  (Ram Charan) ಅವರ ಪತ್ನಿ ಉಪಾಸನಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವನ್ನು ಮನೆಗೆ ಕರೆತರಲು ರಾಮ್ ಚರಣ್ ಕುಟುಂಬ ಕಾಯುತ್ತಿತ್ತು. ಇದೀಗ ಪತ್ನಿ ಮತ್ತು ಮಗುವನ್ನು ಮನೆಗೆ ಕರೆತಂದಿದ್ದಾರೆ ರಾಮ್ ಚರಣ್. ಮಗುವಿಗೆ ಹಾರೈಸಿದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.

    ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

    ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ (Childbirth) ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಊಹಾಪೋಹಗಳಿಗೂ ಉಪಾಸನಾ ಉತ್ತರಿಸಿದ್ದರು.

    ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ತಿಳಿಸಿದ್ದರು.

     

    ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಮಾಡಿಕೊಳ್ಳಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಆಸ್ಪತ್ರೆಯಲ್ಲೇ ಮಗುವಿನ ಜನನ ಆಗಲಿದೆ ಎಂದು ಊಹಿಸಲಾಗಿತ್ತು. ಅಮೆರಿಕಾ ವೈದ್ಯರ ಬಗ್ಗೆ ರಾಮ್ ಚರಣ್ ಮಾತನಾಡಿದ್ದರಿಂದ, ಅಮೆರಿಕಾದಲ್ಲಿ ಮಗುವಿನ ಜನನ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದೆಲ್ಲದಕ್ಕೂ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ತಮ್ಮದೇ ಆಸ್ಪತ್ರೆಯಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದರು.