Tag: Hyderabad

  • ಒಂದೇ ದಿನ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು!

    ಒಂದೇ ದಿನ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು!

    ಹೈದರಾಬಾದ್: ಒಂದೇ ದಿನ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಎ.ವಂದನ(17), ಕೆ. ಸೈಕುಮಾರ್(17), ಡಿ. ವರ್ಷ(16) ಮತ್ತು ಶ್ರೀನಿತ್ಯ(16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು. ಶುಕ್ರವಾರ ಪರೀಕ್ಷೆಯ ಫಲಿತಾಂಶ ಘೋಷಣೆಯಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ವಂದನ ವನಸ್ಥಳಪುರಂನ ನಿವಾಸಿಯಾಗಿದ್ದು, ಶ್ರೀ ಚೈತನ್ಯ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಪಿ.ಸಿ. ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಪರೀಕ್ಷೆಯ ಫಲಿತಾಂಶ ಬಂದಿದೆ. ಅದರಲ್ಲಿ 440 ಅಂಕದಲ್ಲಿ 325 ಅಂಕಗಳನ್ನು ಗಳಿಸಿದ್ದಳು. ಇದರಿಂದ ಕಡಿಮೆ ಅಂಕ ಬಂದಿದೆ ಎಂದು ಮನೆಯಿಂದ ಸಹೋದರ ಮತ್ತು ಪೋಷಕರು ಹೊರಗೆ ಹೋದ ಸಂದರ್ಭದಲ್ಲಿ ಕೋಣೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಕೈತ್ಲಾಪುರ್ ಗ್ರಾಮದ ನಿವಾಸಿಯಾಗಿರೋ ಕೆ. ಸೈಕುಮಾರ್ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಈತನ ಪೋಷಕರು ಈ ವಿಚಾರವನ್ನು ಸುಲಭವಾಗಿ ತೆಗೆದುಕೊಳ್ಳುವಂತೆ ಹೇಳಿದ್ದರು. ಆದ್ರೂ ಸೈಕುಮಾರ್ ಮಾತ್ರ ತಂದೆ-ತಾಯಿ ಕೆಲಸಕ್ಕೆ ತೆರಳಿದ ಬಳಿಕ ನೇಣು ಹಾಕಿಕೊಂಡಿದ್ದಾನೆ. ಘಟನೆಯ ಬಳಿಕ ಸ್ನೇಹಿತನ ಸಹಾಯದಿಂದ ಕೋಣೆಯ ಬಾಗಿಲು ಮುರಿದು ಒಳಹೋಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಮಡಿಪಲ್ಲಿ ನಿವಾಸಿ ವರ್ಷ(16) ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್ ಆದ ನಂತರ ನೇಣಿಗೆ ಶರಣಾಗಿದ್ದಾಳೆ. ಜಗದ್ಗಿರಿಗುಟ್ಟಾ ನಿವಾಸಿಯಾದ ಶ್ರೀನಿತ್ಯ (16) ಪ್ರಥಮ ವರ್ಷದ ಎಮ್‍ಪಿಸಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ನಾಲ್ಕು ವಿಷಯಗಳಲ್ಲಿ ಫೇಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಮನನೊಂದು ಅಪಾರ್ಟ್ ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಎಲ್ಲಾ ಘಟನೆಯ ಕುರಿತಂತೆ ಪೊಲೀಸರು ಪ್ರಕರಣಗಳು ಎಂದು ದಾಖಲಿಸಿಕೊಂಡಿದ್ದಾರೆ.

  • ಆಟವಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿತ – ಮೂವರ ದುರ್ಮರಣ

    ಆಟವಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿತ – ಮೂವರ ದುರ್ಮರಣ

    ಹೈದರಾಬಾದ್: ಆಟವಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳ ಮೇಲೆ ಗೋಡೆ ಕುಸಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕೊಥಾಡೊಂಕಾದಲ್ಲಿ ಗ್ರಾಮದಲ್ಲಿ ನಡೆದಿದೆ.

    ಮೃತ ಮಕ್ಕಳು ಎಂಟು ವರ್ಷ ವಯಸ್ಸಿನವರಾಗಿದ್ದು, ನವದೀಪ್, ಮಣಿಕಾಂತ ಮತ್ತು ಪ್ರೇಮಚಂದ್ ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಗಾಯಗೊಂಡ ಹುಡುಗಿ ಪ್ರೇಮಚಂದ್ ಸಹೋದರಿ ಪ್ರೀತಿ ಜ್ಯೋತಿ ಎಂದು ತಿಳಿದುಬಂದಿದೆ.

    ಗುರುವಾರ ಮಧ್ಯಾಹ್ನ ಮಕ್ಕಳು ಶಾಲೆಯಿಂದ ತಮ್ಮ ಮನೆಗೆ ಬಂದು ನಂತರ ಓಂಗೊಲ್ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋಡೆಯ ಪಕ್ಕ ಆಟವಾಡಲು ಹೋಗಿದ್ದರು. ಆದರೆ ಮಕ್ಕಳು ಆಟವಾಡುತ್ತಿದ್ದಂತೆಯೇ ನಿರ್ಮಾಣ ಹಂತದಲ್ಲಿದ್ದ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ನವದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಣಿಕಾಂತ ಮತ್ತು ಪ್ರೇಮಚಂದ್ರ ಇಬ್ಬರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಅವಘಡದಲ್ಲಿ ಪ್ರೀತಿ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಗೋಡೆ ಕುಸಿತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದ್ದಾರೆ.

  • ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್

    ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್

    ಹೈದರಾಬಾದ್: ಟಾಲಿವುಡ್ ಫಿಲ್ಮ್ ಚೇಂಬರ್ ಮುಂದೇ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿ, ಸದ್ಯ ಖ್ಯಾತ ನಿರ್ಮಾಪಕರ ಪುತ್ರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಖ್ಯಾತ ತೆಲುಗು ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ ಹಾಗೂ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸರ್ಕಾರದ ಫಿಲ್ಮ್ ಸ್ಟುಡಿಯೊವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಖಾಸಗಿ ಮಾಧ್ಯಮೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹಾಗೂ ಅಭಿರಾಮ್ ನಡುವಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಆರೋಪಕ್ಕೆ ಸಾಕ್ಷಿಗಳನ್ನು ನೀಡಿದ್ದಾರೆ. ನಾನು ಹೇಳುತ್ತಿದ್ದ ವಿಷಯಗಳನ್ನು ಕೇವಲ ಸುಳ್ಳು ಎಂದು ಪ್ರತಿಪಾದಿಸುತ್ತಿದ್ದ ಹಲವರು ಈ ಫೋಟೋಗಳನ್ನು ಒಮ್ಮೆ ನೋಡಿ. ಅಭಿರಾಮ್ ನನ್ನ ಮುಖದ ಮೇಲೆ ಕೀಸ್ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಾನು ಈ ಫೋಟೋಗಳನ್ನು ರಿವಿಲ್ ಮಾಡುತ್ತಿರಲಿಲ್ಲ. ಆದರೆ ಆತನಿಗೆ ತನ್ನ ಕೃತ್ಯದ ಬಗ್ಗೆ ಸ್ವಲ್ಪವೂ ನಾಚಿಕೆ ಇಲ್ಲ. ಅದ್ದರಿಂದಲೇ ಇವುಗಳನ್ನು ಬಹಿರಂಗ ಪಡಿಸುತ್ತಿದ್ದೇನೆ. ಇದನ್ನು ನೋಡಿದ ಬಳಿಕವಾದರೂ ನನ್ನ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.

    https://twitter.com/srireddyleaks/status/983927302475034624

    ನಟಿ ಶ್ರೀ ರೆಡ್ಡಿ ಈ ಫೋಟೋಗಳನ್ನು ಬಹಿರಂಗಗೊಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ತನ್ನ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು. ಅಂತಹ ಫೋಟೋ ಕಳುಹಿಸಿದ ಬಳಿಕವೂ ತನಗೆ ಸಿನಿಮಾದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಶ್ರೀ ರೆಡ್ಡಿ ಆರೋಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಯಾರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ.

  • ಬೆಂಗ್ಳೂರಲ್ಲಿ ಬುಲೆಟ್ ಬೈಕ್ ಸ್ಫೋಟ- ವೈರಲ್ ವಿಡಿಯೋ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬೆಂಗ್ಳೂರಲ್ಲಿ ಬುಲೆಟ್ ಬೈಕ್ ಸ್ಫೋಟ- ವೈರಲ್ ವಿಡಿಯೋ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ರಾಯಲ್ ಎನ್ ಫೀಲ್ಡ್ ಬೈಕ್ ಸವಾರ ಸುಟ್ಟು ಮೃತಪಟ್ಟಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೇಗೂರು ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಮೆಸೇಜ್ ಬರೆಯಲಾಗಿದೆ.

    ಆದರೆ ಈ ಸುದ್ದಿ ಸುಳ್ಳು ಸುದ್ದಿಯಾಗಿದ್ದು ಬೆಂಗಳೂರಿನಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಸ್ಫೋಟಗೊಂಡಿಲ್ಲ. ಅಷ್ಟೇ ಅಲ್ಲದೇ ಕೆಲ ಜನ ಇದು ಹೈದರಾಬಾದ್ ಮಲ್ಕಪೇಟ್ ನಲ್ಲಿ ನಡೆದಿದೆ ಎಂದು ಬರೆದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಈ ಘಟನೆ ನಡೆದಿದ್ದು ಎಲ್ಲಿ?
    ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ 2016 ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಘಟನೆಯಾಗಿದೆ. ಟೆಂಪೋ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಿಗೆ ಬೆಂಕಿ ಹೊತ್ತಿಕೊಂಡಿತ್ತು. ದೆಹಲಿಯ ಶಂಕರ್ ವಿಹಾರ್ ಪ್ರದೇಶದಲ್ಲಿ ನಡೆದ ಅಪಘಾತದ ಫೋಟೋವನ್ನು ಎಡಿಟ್ ಮಾಡಿ ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ.

     

  • 8ರ ಬಾಲಕನನ್ನು ಕಿಡ್ನಾಪ್ ಮಾಡಿ ಆತನ ಆಂಟಿಗಾಗಿ ಬೇಡಿಕೆಯಿಟ್ಟ ಭಗ್ನ ಪ್ರೇಮಿ!

    8ರ ಬಾಲಕನನ್ನು ಕಿಡ್ನಾಪ್ ಮಾಡಿ ಆತನ ಆಂಟಿಗಾಗಿ ಬೇಡಿಕೆಯಿಟ್ಟ ಭಗ್ನ ಪ್ರೇಮಿ!

    ಹೈದರಾಬಾದ್: ಮಕ್ಕಳು, ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವುದನ್ನು ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ 8 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ಆತನ ಆಂಟಿಗಾಗಿ ಬೇಡಿಕೆಯಿಟ್ಟ ವಿಚಿತ್ರ ಪ್ರಕರಣವೊಂದು ಹೈದರಾಬಾದ್ ನಲ್ಲಿ ನಡೆದಿದೆ.

    ಆರೋಪಿಯನ್ನು 23 ವರ್ಷದ ವಂಶಿ ಕೃಷ್ಣ ಎಂದು ಗುರುತಿಸಲಾಗಿದ್ದು, ಈತ ಮಹಬೂಬ್ ನಗರ ಜಿಲ್ಲೆಯವನಾಗಿದ್ದಾನೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರೋ ಈತ ಕಿಡ್ನಾಪ್ ಮಾಡಿದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಬಾಲಕನನ್ನು ರಕ್ಷಿಸಿದ್ದಾರೆ.

    ಕಿಡ್ನಾಪ್ ಮಾಡಿದ್ದು ಯಾಕೆ?: ವಂಶಿ ಕೃಷ್ಣ ಬಾಲಕನಿಗೆ ಸಂಬಂಧದಲ್ಲಿ ಆಂಟಿಯಾಗಬೇಕಿದ್ದವರ ಜೊತೆ ಪ್ರೇಮ ಸಂಬಂಧವಿಟ್ಟುಕೊಂಡಿದ್ದನು. ಈಕೆ ಹೈದರಾಬಾದ್ ನ ಶಿವರಾಮ್‍ಪಳ್ಳಿಯಲ್ಲಿ ನೆಲೆಸಿದ್ದರು. ವಂಶಿ ಹಾಗೂ ಮಹಿಳೆಯ ಪ್ರೇಮ ಸಂಬಂಧದ ವಿಚಾರ ಆಕೆಯ ಮನೆಯವರಿಗೆ ತಿಳಿದು ದೊಡ್ಡ ರದ್ದಾಂತವೇ ನಡೆದಿತ್ತು. ಶಿವರಾಮ್ ಪಳ್ಳಿಗೆ ಬಂದಿದ್ದ ವೇಳೆ ಮಹಿಳೆಯ ಕುಟುಂಬಸ್ಥರು ವಂಶಿಗೆ ಚೆನ್ನಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದರಿಂದ ವಂಶಿ ಸಿಟ್ಟಾಗಿದ್ದು, ಮಹಿಳೆಯ ಕುಟುಂಬಸ್ಥರ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದನು.

    ಬಾಲಕನ ಕಿಡ್ನಾಪ್: ತನ್ನ ಪ್ರಿಯತಮೆಯ ಮನೆಯವ ವಿರುದ್ಧ ಸಿಡಿದೆದ್ದ ವಂಶಿ ಅದೇ ಕುಟುಂಬಕ್ಕೆ ಸೇರಿದ ಬಾಲಕನನ್ನು ಅಪಹರಿಸುವ ಯೋಜನೆ ಹಾಕಿದ್ದಾನೆ.

    8 ವರ್ಷದ ಬಾಲಕ ಚಂದ್ರು ನಾಯ್ಕ್ ಕೊಥಕೋಟದಲ್ಲಿರೋ ಭಾರತೀಯ ವಿದ್ಯಾಮಂದಿರ್ ವಸತಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ವಿಚಾರ ವಂಶಿಗೆ ತಿಳಿದಿತ್ತು. ಹೀಗಾಗಿ ಆತನನ್ನೇ ಕಿಡ್ನಾಪ್ ಮಾಡಿ ಪ್ರೇಯಸಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬಹುದೆಂದು ಪ್ಲಾನ್ ಹಾಕಿದ್ದ. ಹೀಗಾಗಿ ಚಂದ್ರು ವ್ಯಾಸಂಗ ಮಾಡುವ ವಸತಿ ಶಾಲೆಯತ್ತ ತನ್ನ ಚಿತ್ತ ಹರಿಸಿದ್ದಾನೆ. ಶಾಲೆಗೆ ಬಂದ ವಂಶಿ, ಬಾಲಕ ಚಂದ್ರುವಿನ ತಾಯಿಗೆ ಹೈದರಾಬಾದ್ ನಲ್ಲಿ ಅಪಘಾತವಾಗಿದೆ. ಹೀಗಾಗಿ ಆತನನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಅಲ್ಲಿನ ಸಿಬ್ಬಂದಿಯಲ್ಲಿ ವಿನಂತಿಸಿಕೊಂಡಿದ್ದಾನೆ.

    ಬಾಲಕನು ಕೂಡ ವಂಶಿ ನಮ್ಮ ನೆರೆಮನೆಯವನೆಂದು ಶಾಲಾ ಸಿಬ್ಬಂದಿಯಲ್ಲಿ ಹೇಳಿದ್ದಾನೆ. ಹೀಗಾಗಿ ಅವರು ವಂಶಿ ಜೊತೆ ಚಂದ್ರು ಹಾಗೂ ಆತನ ಇಬ್ಬರು ಸಹೋದರರನ್ನು ಕಳುಹಿಸಿಕೊಡಲು ಒಪ್ಪಿದ್ದಾರೆ. ಕೊಥಕೋಟ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ವಂಶಿ ಸಹೋದರರನ್ನು ನಿಲ್ದಾಣದಲ್ಲೇ ನಿಲ್ಲುವಂತೆ ಹೇಳಿ, ಚಂದ್ರು ನಾಯ್ಕ್ ನನ್ನು ಕರೆದುಕೊಂಡು ಹೋಗಿದ್ದಾನೆ. ಇತ್ತ ಕೆಲ ಹೊತ್ತು ಕಳೆದ್ರೂ ಇವರಿಬ್ಬರೂ ಹಿಂದಿರುಗಿ ಬಾರದೇ ಇದ್ದುದರಿಂದ ಚಂದ್ರು ಸಹೋದರರಿಬ್ಬರೂ ಶಾಲೆಗೆ ವಾಪಸ್ ತೆರಳಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಮನೆಯವರು ಶಾಲೆಗೆ ಕರೆ ಮಾಡಿ, ವಂಶಿ ಯಾಕೆ ಅವರನ್ನು ಕರೆದಿದ್ದು, ಆತ ಇದೀಗ ಬಾಲಕ ಚಂದ್ರುವನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಇತ್ತ ವಂಶಿ ಬಾಲಕನ ಮನೆಗೆ ಪದೇ ಪದೇ ಕರೆ ಮಾಡಿ ಮಹಿಳೆ ನನ್ನನ್ನು ಪ್ರೀತಿಸಿದರೆ ಆತನನ್ನು ಬಿಟ್ಟು ಬಿಡುವುದಾಗಿ ಬೇಡಿಕೆಯಿಟ್ಟಿದ್ದಾನೆ. ಕೂಡಲೇ ಅಂದ್ರೆ ಏ.8ರಂದು ಬಾಲಕ ಚಂದ್ರುವಿನ ಅಜ್ಜಿ ರತ್ಲಾವತ್ ಜೂಲಿ ಕೊಥಕೋಟ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವನಪರ್ಥಿ ಜಿಲ್ಲೆಯ ಎಸ್‍ಪಿ ರೀಮಾ ರಾಜೇಶ್ವರಿ ವಿಶೇಷ ತಂಡಗಳನ್ನು ರಚಿಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಾಲಕನ ರಕ್ಷಣೆ: ಆರೋಪಿ ವಂಶಿ ಬಾಲಕನನ್ನು ಅಪಹರಿಸಿ ಮಹಾರಾಷ್ಟ್ರದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮೊಬೈಲ್ ಟವರ್ ಪತ್ತೆ ಹಚ್ಚಿ ಕೂಡಲೇ ತೆಲಂಗಾಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಹೀಗಾಗಿ ಎಚ್ಚೆತ್ತ ಪೊಲೀಸರು ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ. ಇತ್ತ ಕೊಥಕೋಟಾದ ವಿಶೇಷ ತಂಡ ಪುಣೆಗೆ ತೆರಳಿತ್ತು. ಪುಣೆ ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಬಾಲಕನನ್ನು ಕಂಡ ಪೊಲೀಸರು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರನ್ನು ಕಂಡ ಆರೋಪಿ ವಂಶಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ವಿಶೇಷ ತಂಡ ಲಾರೋಪಿಯನ್ನು ಬಂಧಿಸಿ, ಇಬ್ಬರನ್ನೂ ಊರಿಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ.

  • ಪ್ರಭಾಸ್, ನಿಹಾರಿಕಾ ಮದುವೆ ಆಗ್ತಾರಾ: ಸುದ್ದಿಗೆ ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್

    ಪ್ರಭಾಸ್, ನಿಹಾರಿಕಾ ಮದುವೆ ಆಗ್ತಾರಾ: ಸುದ್ದಿಗೆ ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್

    ಹೈದರಾಬಾದ್: ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಬಾಹುಬಲಿ ನಟ ಪ್ರಭಾಸ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ಕುರಿತು ಸುದ್ದಿ ಕೇಳಿಬಂದಿತ್ತು. ಈ ಕುರಿತು ಸ್ವತಃ ಮೆಗಾಸ್ಟಾರ್ ಚಿರಂಜೀವಿ ಅವರೇ ಇಬ್ಬರ ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಹಾಟ್ ಸುದ್ದಿಯಾಗಿದ್ದ ನಿಹಾರಿಕಾ, ಪ್ರಭಾಸ್ ಜೋಡಿಯ ಮದುವೆಯ ವಿಷಯವನ್ನು ಚಿರಂಜೀವಿ ಅಲ್ಲಗೆಳೆದಿದ್ದಾರೆ. ಪ್ರಭಾಸ್ ಹಾಗೂ ನಿಹಾರಿಕಾ ಮದುವೆ ಕುರಿತು ಚರ್ಚೆಯೇ ನಡೆದಿಲ್ಲ. ಆದರೂ ಇಂತಹ ಸುದ್ದಿಗಳು ಪ್ರಚಾರ ಪಡೆದಿವೆ. ಇಂತಹ ಸುದ್ದಿಗಳು ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ. ಈ ಹಿಂದೆಯೂ ಹಲವು ರೂಮರ್ ಗಳು ಬಂದಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

    ನಿಹಾರಿಕಾ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ತೆರಕಂಡ `ಒಕ ಮನಸು’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಪಾದರ್ಪಣೆ ಮಾಡಿದ್ದಾರೆ. ಈ ಮೊದಲು ಪ್ರಭಾಸ್, ನಟಿ ಅನುಷ್ಕಾ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗುತ್ತಾರೆ ಎಂದು ಸುದ್ದಿಯಾಗಿತ್ತು. ಅಭಿಮಾನಿಗಳು ಇವರಿಬ್ಬರ ಕೆಮಿಸ್ಟ್ರಿ ಮ್ಯಾಚ್ ಆಗುತ್ತದೆ. ಹೀಗಾಗಿ ಮದುವೆಯಾಗುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಆದರೆ ಇಬ್ಬರು ಈ ಕುರಿತು ಸ್ಪಷ್ಟನೆ ನೀಡಿ ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.

  • ಟ್ರ್ಯಾಕ್ಟರ್ ಕಾಲುವೆಗೆ ಉರುಳಿ 6 ಮಂದಿ ಮಹಿಳೆಯರು ಜಲಸಮಾಧಿ!

    ಟ್ರ್ಯಾಕ್ಟರ್ ಕಾಲುವೆಗೆ ಉರುಳಿ 6 ಮಂದಿ ಮಹಿಳೆಯರು ಜಲಸಮಾಧಿ!

    ಹೈದರಾಬಾದ್: ಟ್ರ್ಯಾಕ್ಟರ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಕಾರ್ಮಿಕ ಮಹಿಳೆಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಡಮಟಿ ತಾಂಡಾ ಬಳಿ ನಡೆದಿದೆ.

    ಮೃತರನ್ನು ರಾಮವತ್ ಸೋನಾ(70), ರಾಮವತ್ ಜಿಜಾ (65) ಜರುಕುಲಾ ದ್ವಾಲಿ (30), ರಾಮವತ್ ಕೇಳಿ(50), ರಾಮವತ್ ಕಂಸಾಲಿ(50), ಬನವತ್ ಬೆರಿ(55), ರಾಮವತ್ ಭಾರತಿ(35) ಮತ್ತು ರಾಮವತ್ ಸುನಿತಾ(30) ಎಂದು ಗುರುತಿಸಲಾಗಿದೆ.

    30 ಮಂದಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ 9 ಮಂದಿ ಜಲಸಮಾಧಿಯಾಗಿದ್ದಾರೆ. ಇವರೆಲ್ಲರೂ ಪಡಮಟಿ ತಾಂಡಾ ನಿವಾಸಿಗಳೆಂದು ತಿಳಿದುಬಂದಿದ್ದು, ಮಂಡಾಲ್ ನಲ್ಲಿರುವ ಪುಲಿಚೆರ್ಲಾ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

    ಘಟನೆಗೆ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಟ್ರ್ಯಾಕ್ಟರ್ ಚಾಲನೆ ವೇಳೆ ಚಾಲಕ ಫೋನ್‍ನಲ್ಲಿ ಮಾತನಾಡಿದ್ದನು ಎನ್ನಲಾಗಿದ್ದು, ಜೊತೆಗೆ ಚಾಲಕ ನಿದ್ರೆಯಲ್ಲಿದ್ದ ಎಂಬುವುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

    ಸದ್ಯ ಘಟನೆಯಿಂದಾಗಿ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಸ್ಥಳೀಯ ನಿವಾಸಿಗಳು, ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.

  • ಪಾಕ್ ಶಾದ್ಮನ್ ಚೌಕದ ಫೋಟೋ ಪ್ರಕಟಿಸಿ, ಈಗ ಹೇಗಿದೆ ಅನ್ನೋದನ್ನು ತಿಳಿಸಿದ್ರು ರಾಜಮೌಳಿ

    ಪಾಕ್ ಶಾದ್ಮನ್ ಚೌಕದ ಫೋಟೋ ಪ್ರಕಟಿಸಿ, ಈಗ ಹೇಗಿದೆ ಅನ್ನೋದನ್ನು ತಿಳಿಸಿದ್ರು ರಾಜಮೌಳಿ

    ಹೈದರಾಬಾದ್: ನಿರ್ದೇಶಕ ರಾಜಮೌಳಿ ಪ್ರತಿ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಂಶಗಳು ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡುತ್ತವೆ. ಈ ಬಾರಿ ರಾಜಮೌಳಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡಿದೆ.

    ಅಂದ ಹಾಗೇ ರಾಜಮೌಳಿ ಪಾಕಿಸ್ತಾನದ ಲಾಹೋರ್ ನಗರದ ಶಾದ್ಮನ್ ಚೌಕದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇಲ್ಲಿಯೇ ಭಾರತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು ಬ್ರೀಟಿಷರು ಗಲ್ಲಿಗೇರಿಸಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ಅಂತರಾಷ್ಟ್ರೀಯ ಚಲನಚಿತ್ರ ಪ್ರದರ್ಶನಕ್ಕೆ ಎಂದು ಪಾಕಿಸ್ತಾನದ ಕರಾಚಿಗೆ ತೆರಳಿದ್ದ ರಾಜಮೌಳಿ ಲಾಹೋರ್ ಮತ್ತು ಇಸ್ಲಾಮಾಬಾದ್ ನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಲಾಹೋರ್ ನ ಈ ಪ್ರದೇಶದೊಂದಿಗೆ ಭಾರತ ಹೊಂದಿರುವ ಸಂಬಂಧ ಮಹತ್ವ ಅರಿತು ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಈ ಪ್ರದೇಶದ ಮಹತ್ವ ಸಾರುವ ಯಾವ ಗುರುತು ಇಲ್ಲ ಎಂದು ತಿಳಿಸಿದ್ದಾರೆ.

    ಪಾಕಿಸ್ತಾನಕ್ಕೆ ತೆರಳುವ ಮುನ್ನ ರಾಜಮೌಳಿ ಟ್ವೀಟ್ ಮಾಡಿ, ಬಾಹುಬಲಿ ಸಿನಿಮಾ ನನಗೆ ಸಾಕಷ್ಟು ಅವಕಾಶಗಳನ್ನ ತಂದುಕೊಟ್ಟಿದೆ. ಇದರಿಂದ ನಾನು ಹಲವಾರು ದೇಶಗಳನ್ನ ಸುತ್ತಿದ್ದೇನೆ. ಬಾಹುಬಲಿಯಿಂದಾಗಿ ಪಾಕಿಸ್ತಾನಕ್ಕೆ ಬಂದಿರುವುದಕ್ಕೆ ಬಹಳ ಉತ್ಸಾಹದಿಂದ್ದಿದೇನೆ. ನನ್ನನ್ನು ಆಹ್ವಾನಿಸಿರುವ ಪಾಕಿಸ್ತಾನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

  • ವೈರಲ್ ಆಗ್ತಿದೆ ವೃದ್ದೆಗೆ ಕೈಯಾರೆ ಪೂರಿ ತಿನ್ನಿಸುತ್ತಿರುವ ಟ್ರಾಫಿಕ್ ಪೊಲೀಸ್ ಫೋಟೋ

    ವೈರಲ್ ಆಗ್ತಿದೆ ವೃದ್ದೆಗೆ ಕೈಯಾರೆ ಪೂರಿ ತಿನ್ನಿಸುತ್ತಿರುವ ಟ್ರಾಫಿಕ್ ಪೊಲೀಸ್ ಫೋಟೋ

    ಹೈದರಾಬಾದ್: ದಿನನಿತ್ಯ ರಸ್ತೆಯಲ್ಲಿ ನಿಂತು ಬಳಲುವ ಟ್ರಾಫಿಕ್ ಪೊಲೀಸರು ಆಗಾಗ ಮಾನವೀಯತೆ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ.

    ಭಾನುವಾರ ಹೈದರಾಬಾದ್ ಟ್ರಾಫಿಕ್ ಪೊಲೀಸ್ ಒಬ್ಬರು ಬೀದಿ ಬದಿಯಲ್ಲಿದ್ದ ಅನಾಥ ವೃದ್ಧೆಗೆ ಕೈಯಾರೆ ಪೂರಿ ತಿನ್ನಿಸಿದ್ದಾರೆ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕುಕಟ್ಪಳ್ಳಿಯ ಟ್ರಾಫಿಕ್ ಪೇದೆ ಬಿ.ಗೋಪಾಲ್, ಅನಾಥ ವೃದ್ಧೆಗೆ ಊಟ ಮಾಡಿಸಿದವರು. ಕುಕಟ್ಪಳ್ಳಿಯ ಜೆಎನ್ ಟಿಯು ಬಳಿ ಸೇವೆ ಸಲ್ಲಿಸುತ್ತಿರುವ ವೇಳೆ ಪಕ್ಕದ ರಸ್ತೆ ಬಳಿ ವೃದ್ಧೆ ಕುಳಿತುಕೊಂಡಿರುವುದು ಕಂಡಿದೆ. ಕೂಡಲೇ ಬಿ.ಗೋಪಾಲ್ ಅಲ್ಲಿಗೆ ಹೋಗಿ ವೃದ್ಧೆಯನ್ನು ವಿಚಾರಿಸಿದ್ದಾರೆ. ನಂತರ ವೃದ್ಧೆ ಹಸಿವಿನಿಂದ ಬಳಲುತ್ತಿರುವುದು ಗೊತ್ತಾಗಿದೆ.

    ಗೋಪಾಲ್ ತಕ್ಷಣ ಕೂಡಲೇ ಹೋಟೆಲ್ ನಿಂದ ಪೂರಿ ಪಾರ್ಸಲ್ ತಂದು ತಮ್ಮ ಕೈಯಾರೆ ತಿನ್ನಿಸಿದ್ದಾರೆ. ಅನಾಥ ವೃದ್ಧೆಗೆ ಪೂರಿ ತಿನ್ನಿಸುತ್ತಿರುವ ಫೋಟೋವನ್ನು ಸಾರ್ವಜನಿಕರು ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.

    ಸದ್ಯಕ್ಕೆ ಆ ಫೋಟೋ ವೈರಲ್ ಆಗಿದ್ದು, ಟ್ರಾಫಿಕ್ ಪೇದೆ ಗೋಪಾಲ್ ಕಾರ್ಯಕ್ಕೆ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿವೆ.

  • ನಿಶ್ಚಿತಾರ್ಥದಲ್ಲಿ Chicken Curry ಗಾಗಿ ಯುವಕನ ಕೊಲೆ

    ನಿಶ್ಚಿತಾರ್ಥದಲ್ಲಿ Chicken Curry ಗಾಗಿ ಯುವಕನ ಕೊಲೆ

    ಹೈದರಾಬಾದ್: ನಿಶ್ಚಿತಾರ್ಥ ಸಮಾರಂಭದಲ್ಲಿ ಚಿಕನ್ ಕರ್ರಿಗಾಗಿ ನಡೆದ ಕಲಹದಿಂದ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಮಧ್ಯಾಹ್ನ ಸುಮಾರು 1.30 ಗಂಟೆಗೆ ಚಾರ್ಮಿನಾರ್ ಸಮೀಪದ ಹುಸೇನಿ ಅಲಂ ಎಂಬಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ.

    ನಿಶ್ಚಿತಾರ್ಥಕ್ಕೆ ಬಂದ ಅತಿಥಿಗಳ ಎರಡು ಗುಂಪು ನಿಶ್ಚಿತಾರ್ಥ ಮುಗಿದ ನಂತರ ಊಟಕ್ಕೆ ಕುಳಿತ್ತಿದ್ದರು. ಈ ವೇಳೆ ಅತಿಥಿಗಳಿಗೆ ಚಿಕನ್ ಕರ್ರಿ ಬೇಕಾಗಿತ್ತು. ಸರ್ವ್ ಮಾಡಲು ತಡವಾಗಿದ್ದಕ್ಕೆ ಕೆರಳಿದ ಗುಂಪು ನಡೆವೆ ಜಗಳ ಶುರವಾಗಿದೆ.

    ಬಡಿಸಲು ತಡ ಮಾಡಿದ್ದರಿಂದ ತಮಗೆ ಅವಮಾನವಾಗಿದೆ ಅಂತಾ ಹೇಳಿದ್ದಾರೆ. ಊಟ ಮುಗಿಸಿಕೊಂಡು ಹೋಗಿ ಚಾಕು ತೆಗೆದುಕೊಂಡು 15 ಅತಿಥಿಗಳು ವಾಪಸ್ ಬಂದಿದ್ದಾರೆ. ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಓರ್ವ ಯುವಕ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.

    ಅಷ್ಟೇ ಅಲ್ಲದೇ ಮಹಿಳೆಯರ ಕೋಣೆಗೂ ತೆರಳಿದ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಮೂವರನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.