Tag: Hyderabad

  • ‘ಹೆಲ್ಮೆಟ್ ಇಲ್ಲ, ನಾನು ಗಂಡ್ಸಾಗಿ ಸಾಯುತ್ತೇನೆ’ ಎಂದ ಯುವಕನಿಗೆ ಪೊಲೀಸರಿಂದ ಶಾಕ್!

    ‘ಹೆಲ್ಮೆಟ್ ಇಲ್ಲ, ನಾನು ಗಂಡ್ಸಾಗಿ ಸಾಯುತ್ತೇನೆ’ ಎಂದ ಯುವಕನಿಗೆ ಪೊಲೀಸರಿಂದ ಶಾಕ್!

    ಹೈದರಾಬಾದ್: ಬೈಕ್ ಸವಾರನೊಬ್ಬ ತನ್ನ ಬೈಕಿನ ಹಿಂಬದಿಯಲ್ಲಿ ಮಡ್‍ಗಾರ್ಡ್ ಮೇಲೆ ‘ಹೆಲ್ಮೆಟ್ ಇಲ್ಲ, ನಾನು ಗಂಡಸಾಗಿ ಸಾಯುತ್ತೇನೆ’ ಎಂದು ಬರೆದುಕೊಂಡು ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿರುವ ಫೋಟೋ ಈಗ ವೈರಲ್ ಆಗಿದೆ.

    ಹೈದರಾಬಾದ್‍ನ ವ್ಯಕ್ತಿಯೊಬ್ಬ ತನ್ನ ಬೈಕಿನ ಮಡ್‍ಗಾರ್ಡ್ ಮೇಲೆ ಹೆಲ್ಮೆಟ್ ಇಲ್ಲ, ನಾನು ಗಂಡ್ಸಾಗಿ ಸಾಯುತ್ತೇನೆ ಎಂದು ಬರೆದುಕೊಂಡು ಬೈಕ್ ಚಲಾಯಿಸುತ್ತಿದ್ದನು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಆತನಿಗೆ ಟ್ವೀಟ್ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ.

    ಹೈದರಾಬಾದ್ ಟ್ರಾಫಿಕ್ ಪೊಲೀಸರು ವ್ಯಕ್ತಿ ಬೈಕ್ ಚಲಾಯಿಸುತ್ತಿರುವ ಫೋಟೋ ಜೊತೆ ಇ-ಚಲನ್ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ “ನಮ್ಮನ್ನು ದಯವಿಟ್ಟು ಕ್ಷಮಿಸಿ ಮಿ. ಕೃಷ್ಣಮೂರ್ತಿ ರೆಡ್ಡಿ ಸರ್. ನಾವು ನಿಮ್ಮನ್ನು ಸಾಯಲು ಬಿಡುವುದಿಲ್ಲ. ನೀವು ನಿಜವಾದ ಗಂಡಸಿನ ರೀತಿ ಬದುಕುವುದನ್ನು ನಾವು ನೋಡಬೇಕು. ದಯವಿಟ್ಟು ಹೆಲ್ಮೆಟ್ ಹಾಕಿ, ವಾಹನ ಚಲಾಯಿಸಿ” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/Kirak_Admi/status/979229530786353152?tfw_site=ndtv&ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fhyderabad-traffic-police-hilariously-troll-biker-photographed-without-helmet-1844407

    ಸದ್ಯ ಪೊಲೀಸರು ಮಾಡಿದ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಇದ್ದಕ್ಕೆ ಪರ-ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಪೊಲೀಸರ ಟ್ವೀಟ್ ನೋಡಿ ಅವರನ್ನು ಶ್ಲಾಘಿಸಿದ್ದರೆ, ಇನ್ನೂ ಕೆಲವರು ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿರುವ ಪೊಲೀಸರ ಫೋಟೋ ಹಾಕಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

    https://twitter.com/hameeduddin93/status/985103940864819200?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fhyderabad-traffic-police-hilariously-troll-biker-photographed-without-helmet-1844407&tfw_site=ndtv

    ಈ ಟ್ವೀಟಿಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ಪ್ರಿಯಾ ಪ್ರಕಾಶ್ ವಾರಿಯರ್ ನ ಎರಡೂ ಫೇಮಸ್ ವಿಡಿಯೋವನ್ನು ಟ್ವೀಟ್ ಮಾಡಿ, ನಾವು ನಮ್ಮ ಸಿಬ್ಬಂದಿ ಮೇಲೆ ಕಣ್ಣು ಹೊಡೆಯುವುದಿಲ್ಲ. ನಾವು ಅವರನ್ನು ಕೂಡ ಇ-ಚಲನ್ ನಿಂದ ಶೂಟ್ ಮಾಡುತ್ತೇವೆ. ಟ್ರಾಫಿಕ್ ರೂಲ್ಸ್ ಎಲ್ಲರಿಗೂ ಅನ್ವಯವಾಗುತ್ತೆ. ಎಲ್ಲರು ತಮ್ಮ ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಬೇಕೆಂದು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

  • ನಟ ಮಹೇಶ್ ಬಾಬುಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

    ನಟ ಮಹೇಶ್ ಬಾಬುಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

    ಹೈದರಾಬಾದ್: ಇಂಟರ್ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಇನ್ಫಾರ್ ಮೇಷನ್ ಟೆಕ್ನಾಲಜಿ(ಐಐಐಟಿ) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಗಚಿ ಬೌಲಿ ನಗರದಲ್ಲಿ ನಡೆದಿದೆ.

    ಪುಲಿ ಸುನಂದ್ ಕುಮಾರ್ ರೆಡ್ಡಿ(21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಹೈದರಾಬಾದ್ ನ ಐಐಐಟಿ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಸಿಎಸ್‍ಡಿ ವ್ಯಾಸಂಗ ಮಾಡುತ್ತಿದ್ದು, ಓಲ್ಡ್ ಬಾಯ್ಸ್ ಹಾಸ್ಟೆಲ್ ಕ್ಯಾಂಪಸ್ ನಲ್ಲಿದ್ದನು. ಈತ ಮಹೇಶ್ ಬಾಬು ಅಭಿಮಾನಿಯಾಗಿದ್ದು, ಗುರುವಾರ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸುನಂದ್ ಗೆ ಸ್ನೇಹಿತರು ಫೋನ್ ಮಾಡಿದ್ದಾರೆ. ಆದರೆ ಆತ ಅವರ ಫೋನಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ಸುನಂದ್ ಸ್ನೇಹಿತರಾದ ಸಾಯಿ ಸಾಹಿತ್ ಮತ್ತು ರೋಹಿತ್ ಅವರು ಆತನ ರೂಮಿಗೆ ಹೋಗಿ ಬಾಗಿಲನ್ನು ಬಡಿದ್ದಾರೆ. ಸುನಂದ್ ಬಾಗಿಲು ತೆಗೆಯಲಿಲ್ಲ. ಬಳಿಕ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಸುಂನದ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಂತರ ಅವರು ಕೂಡಲೇ ನಮಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ ಎಂದು ಗಚಿ ಬೌಲಿ ಪೊಲೀಸ್ ಠಾಣೆಯ ಎಸ್.ಐ ಚಿಂತಕಾಯಲಾ ವೆಂಕಟೇಶ್ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆದಿದ್ದಾರೆ. ಆಗ ಸ್ಥಳದಲ್ಲಿ ಎರಡು ಡೆತ್ ನೋಟ್ ಪತ್ತೆಯಾಗಿದೆ. ಮೊದಲಿಗೆ ಸುನಂದ್ ತನ್ನ ಪೋಷಕರಿಗೆ ಡೆತ್‍ನೋಟ್ ಬರೆದಿದ್ದು, `ಅಪ್ಪ- ಅಮ್ಮ, ನಾನು ಈ ಲೋಕವನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ನಿಮ್ಮಬ್ಬರನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನಮ್ಮ ಸಂಬಂಧಿಕರು ನನಗೆ ಇಷ್ಟವಿಲ್ಲ. ಅವರಿಗೆ ಬೇಕಾದಾಗ ಮಾತ್ರ ಅವರು ನಮ್ಮ ಹತ್ತಿರ ಬರುತ್ತಾರೆ. ಇದು ಭಾರತದ ಸಮಸ್ಯೆಯಾಗಿದೆ ಎಂದು ಬರೆದಿದ್ದಾನೆ.

    ಮತ್ತೊಂದು ಡೆತ್ ನೋಟಿನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಉಲ್ಲೇಖಿಸಿ, “ನಾನು ಖಿನ್ನತೆಗೆ ಒಳಗಾದಾಗ ನಾನು ಯಾವಾಗಲೂ ನಿಮ್ಮ ಸಿನಿಮಾಗಳನ್ನು ವೀಕ್ಷಿಸುತ್ತಿದ್ದೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನೀವು ನನ್ನ ವೈದ್ಯರು. ನೀವು ನನಗೆ ಸ್ಫೂರ್ತಿಯಾಗಿದ್ದೀರಿ” ಎಂದು ಬರೆದಿದ್ದಾನೆ.

    ಗಚಿ ಬೌಲಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಮೃತ ಆನಂದ್ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

  • ಮಗಳನ್ನ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾದ ತಾಯಿ

    ಮಗಳನ್ನ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾದ ತಾಯಿ

    ಹೈದರಾಬಾದ್: ಮಗಳನ್ನು ಕೊಲೆ ಮಾಡಿ ನಂತರ ತಾಯಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರ್ ನಗರದಲ್ಲಿ ನಡೆದಿದೆ.

    ಕೀರ್ತಿಕಾ ತಾಯಿಯಿಂದಲೇ ಕೊಲೆಯಾದ ದುರ್ದೈವಿ. ಸ್ವಪ್ನ ಆತ್ಮಹತ್ಯೆಗೆ ಶರಣಾದ ತಾಯಿ. ಸ್ವಪ್ನ 2012 ರಲ್ಲಿ ಶ್ರೀನಿವಾಸ್ ರಾವ್ ಅವರನ್ನು ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಈ ದಂಪತಿ ಎರಡು ವರ್ಷಗಳ ಹಿಂದೆ ಗುಂಟೂರಿಗೆ ಬಂದು ನೆಲೆಸಿದ್ದರು.

    ಈ ದಂಪತಿ ಗುಂಟೂರಿಗೆ ಬಂದ ಮೇಲೆ ಪತಿಗೆ ಉದ್ಯೋಗವಿಲ್ಲದೆ ಮನೆಯಲ್ಲಿಯೇ ಇದ್ದರು. ಈ ನಡುವೆ ಪತಿಯ ಆರೋಗ್ಯ ಕೆಟ್ಟಿತ್ತು. ಅಷ್ಟೇ ಅಲ್ಲದೇ ತಂದೆಗೆ ಬಂದಿದ್ದ ಕಾಯಿಲೆ ಮಗಳು ಕೀರ್ತಿಕಾಗೂ ಬರುತ್ತದೆ. ಬಳಿಕ ಸ್ವಪ್ನ ಮಗಳಿಗೆ ಒಂದು ಬಾರಿ ಆಪರೇಷನ್ ಮಾಡಿಸುತ್ತಾರೆ. ಆದರೆ ಮಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳ ಬೇಕಾದರೆ ಆಕೆಗೆ 10 ವರ್ಷ ಇದ್ದಾಗ ಇನ್ನೊಂದು ಬಾರಿ ಆಪರೇಷನ್ ಮಾಡಿಸಬೇಕಾಗಿತ್ತು.

    ಮಗಳಿಗೆ ಆಪರೇಷನ್ ಮಾಡಿಸಲು ಹಣದ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಪತಿಯನ್ನು ನೋಡಿಕೊಳ್ಳಲು ಆರ್ಥಿಕವಾಗಿ ಸಂಕಷ್ಟ ಉಂಟಾಗುತ್ತದೆ. ಆದ್ದರಿಂದ ಸ್ವಪ್ನ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ತಾನು ಹೋದ ಮೇಲೆ ಮಗಳನ್ನು ನೋಡಿಕೊಳ್ಳುವವರು ಯಾರು ಇಲ್ಲ ತಿಳಿದು ಮೊದಲು ಮಗಳನ್ನು ಕೊಲೆ ಮಾಡಿ ನಂತರ ತಾನು ನೇಣಿಗೆ ಶರಣಾಗಿದ್ದಾರೆ.

    ಈ ಘಟನೆ ಸಂಬಂಧ ಪಟ್ಟಾಭಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಖಾಮುಖಿ ಡಿಕ್ಕಿಯಾಗಿ ಕಾರಿನ ಬಾನೆಟ್ ಮೇಲೆ ಹಾರಿಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು

    ಮುಖಾಮುಖಿ ಡಿಕ್ಕಿಯಾಗಿ ಕಾರಿನ ಬಾನೆಟ್ ಮೇಲೆ ಹಾರಿಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು

    ಹೈದರಾಬಾದ್: ವೇಗವಾಗಿ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಸವಾರನೊಬ್ಬ ಕಾರಿನ ಬಾನೆಟ್ ಮೇಲೆ ಹಾರಿಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣ ರಾಜ್ಯ ಕಾಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಕಾಮಾರೆಡ್ಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಮತ್ತಿಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿಯ ವಿವರಗಳು ಇನ್ನು ತಿಳಿದು ಬಂದಿಲ್ಲ.

    ಘಟನೆಗೆ ಕಾರು ಚಾಲಕನ ಅತೀ ವೇಗ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಸ್ಥಳೀಯ ಬಿಕ್ನೂರ್ ಪೊಲೀಸ್ ಠಾಣೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

  • ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

    ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

    ಹೈದರಾಬಾದ್: ಟಾಲಿವುಡ್ ಯುವ ನಾಯಕ ನಟರಾಗಿ ಹೆಸರು ಪಡೆದಿರುವ ನಟ ರಾಜ್ ತರುಣ್ ಅವರ ತಂದೆಗೆ ವಿಶಾಖಪಟ್ಟಣ ಸ್ಥಳೀಯ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ನಟ ರಾಜ್ ತರುಣ್ ಅವರ ತಂದೆ ನಿಡಮರ್ತಿ ಬಸವರಾಜು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ ಆರೋಪದ ಮೇಲೆ ಅವರಿಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡವನ್ನು ವಿಧಿಸಿದೆ.

    ಏನಿದು ಪ್ರಕರಣ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಡಮರ್ತಿ ಬಸವರಾಜು 2013 ರಲ್ಲಿ ತಮ್ಮ ಪತ್ನಿ ರಾಜ್ಯಲಕ್ಷ್ಮಿ ಸೇರಿದಂತೆ ಹಲವರ ಹೆಸರಿನಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆ.

    ಬ್ಯಾಂಕ್ ಅಧಿಕಾರಿಗಳು ವಾರ್ಷಿಕ ಲೆಕ್ಕ ಪರಿಶೀಲನೆ ನಡೆಸಿದ ವೇಳೆ ಈ ಕುರಿತು ಅನುಮಾನಗೊಂಡು ತನಿಖೆ ನಡೆಸಿದ್ದು, ಬಳಿಕ ಬಸವರಾಜು ನಡೆಸಿದ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 9.85 ಲಕ್ಷ ರೂ. ಹಣವನ್ನು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಘಟನೆ ಕುರಿತು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಿಡಮರ್ತಿ ಬಸವರಾಜುಗೆ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

  • ಗೋದಾವರಿ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಗೋದಾವರಿ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಹೈದರಾಬಾದ್: ಗೋದಾವರಿ ನದಿಗೆ ಹಾರಿ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ ನಡೆದಿದೆ.

    ರಾಮ್‍ಬಾಯಿ (41) ಮತ್ತು ಪಾರಿಜಾತ (22) ಆತ್ಮಹತ್ಯೆಗೆ ಶರಣಾದ ತಾಯಿ-ಮಗಳು. ಇವರು ಜೇಟ್ಲಿಯ ಜಿಲ್ಲೆಯ ಗೋದಾವರಿ ನದಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಇತ್ತೀಚೆಗೆ ರಾಮ್‍ಬಾಯಿಯ ಪತಿ ಸತ್ಯಯ್ಯ ಸಿಂಗಪೂರ್ ನಿಂದ ಹಿಂದಿರುಗಿದ್ದರು. ಆದರೆ ಪತಿ ಮರಳಿ ಬಂದ ನಂತರ ಪ್ರತಿದಿನ ಹಣಕಾಸಿನ ವಿಚಾರದ ಬಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ತಾಯಿ ರಾಮ್‍ಬಾಯಿ ಮತ್ತು ಮಗಳು ಪಾರಿಜಾತ ಬೇಸರಗೊಂಡಿದ್ದರು.

    ಮಂಗಳವಾರ ಬೇಸರಗೊಂಡಿದ್ದ ತಾಯಿ ಮತ್ತು ಮಗಳು ರಾಯಪಟ್ನಮ್ ಸೇತುವೆಯ ಬಳಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹೋಗಿ ನದಿಯಿಂದ ಮೃತ ದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರೈಲ್ವೇ ನಿಲ್ದಾಣದ ಬಳಿ 21 ವರ್ಷದ ಬ್ಯೂಟಿಷಿಯನ್ ಶವ ಪತ್ತೆ

    ರೈಲ್ವೇ ನಿಲ್ದಾಣದ ಬಳಿ 21 ವರ್ಷದ ಬ್ಯೂಟಿಷಿಯನ್ ಶವ ಪತ್ತೆ

    ಹೈದರಾಬಾದ್: ವಿಕಾರಬಾದ್ ಜಿಲ್ಲೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ 21 ವರ್ಷದ ಬ್ಯೂಟಿಷಿಯನ್ ಮೃತದೇಹ ಪತ್ತೆಯಾಗಿದೆ ಎಂದು ಸರ್ಕಾರಿ ರೈಲ್ವೇ ಪೊಲೀಸರು ತಿಳಿಸಿದ್ದಾರೆ.

    ಜ್ಯೋತಿ ಮೃತ ಯುವತಿ. ಸೋಮವಾರ ಪ್ಯಾಸೆಂಜರ್ ರೈಲಿನಲ್ಲಿ ಕೆಲಸಕ್ಕೆಂದು ತೆರಳಿದ್ದರು. ಆದರೆ ಇಂದು ಸುಮಾರು 6 ಗಂಟೆಗೆ ಮೇಲರಾಮ್ ರೈಲ್ವೆ ನಿಲ್ದಾಣದ ಸಮೀಪದ ಟ್ರ್ಯಾಕ್ ಗಳಲ್ಲಿ ಶವವಾಗಿ ಬಿದ್ದಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ.

    ಜ್ಯೋತಿ ತನ್ನ ಕೆಲಸದಿಂದ ತುಂಬಾ ಸಮಯವಾದರೂ ಮನೆಗೆ ಹಿಂದಿರುಗಲಿಲ್ಲ ಎಂದು ಸಂಬಂಧಿಕರು ಅವಳನ್ನು ಹುಡುಕಿಕೊಂಡು ಹೋಗಿದ್ದರು. ಆಗ ಆಕೆಯ ಮೃತದೇಹ ಪತ್ತೆಯಾಗಿದೆ. ತಕ್ಷಣ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

    ಜ್ಯೋತಿ ರೈಲಿನಿಂದ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಆದ್ದರಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಜ್ಯೋತಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದ್ದರಿಂದ ಈ ಕುರಿತು ಐಪಿಸಿ ಸೆಕ್ಷನ್ 174ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಶ್ರೀ ರೆಡ್ಡಿ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಟಾಲಿವುಡ್ ನಟಿ

    ಶ್ರೀ ರೆಡ್ಡಿ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಟಾಲಿವುಡ್ ನಟಿ

    ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀ ರೆಡ್ಡಿ ಬಳಿಕ ಟಾಲಿವುಡ್ ನ ಹಲವು ಸಹ ನಟಿಯರು ಈ ಕುರಿತು ಮಾತನಾಡಿದ್ದಾರೆ.

    ಟಾಲಿವುಡ್ ನಟಿ ಶ್ರೀ ರೆಡ್ಡಿ ತೆಲುಗು ಫಿಲ್ಮ್ ಚೇಂಬರ್ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಸಿನಿಮಾ ರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಇವರ ಹೋರಾಟಕ್ಕೆ ಸಹ ನಟಿಯರಾದ ಸಂಧ್ಯಾ ನಾಯ್ಡು, ಕೆ ಅಪೂರ್ವ, ಸುನೀತಾ ರೆಡ್ಡಿ ಧ್ವನಿ ಗೂಡಿಸಿದ್ದು, ತಮ್ಮ ಜೀವನದಲ್ಲಿ ನಡೆದ ಘಟನೆಗಳ ಕುರಿತು ಬಿಚ್ಚಿಟ್ಟಿದ್ದಾರೆ.

    ಕಳೆದ 10 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ನಾಯ್ಡು ಅವರು, ಹಲವು ಚಿತ್ರಗಳಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಚಿತ್ರದಲ್ಲಿ ಮಗನ ಪಾತ್ರ ಮಾಡುವ ಕೆಲ ಮಂದಿ ರಾತ್ರಿಯಾಗುತ್ತಿದಂತೆ ಪಕ್ಕ ಬಂದು ಮಲಗುವಂತೆ ಕೇಳುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

    ಪ್ರತಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ನಟಿ ಸುನೀತಾ ರೆಡ್ಡಿ ಮಾತನಾಡಿ ತಮ್ಮನ್ನು ಔಟ್ ಡೋರ್ ನಲ್ಲಿ ಬಟ್ಟೆ ಬದಲಿಸುವಂತೆ ಹಲವರು ಒತ್ತಾಯ ಮಾಡಿದ್ದಾರೆ. ಬಟ್ಟೆ ಬದಲಾಯಿಸಲು ಸ್ಟಾರ್ ನಟರ ಕ್ಯಾರವ್ಯಾನ್ ಬಳಕೆ ಮಾಡಲು ಕೇಳಿದರೆ ನಮ್ಮನ್ನು ಹುಳುಗಾಳ ರೀತಿ ನೋಡುತ್ತಾರೆ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ನಟಿ ಶ್ರೀ ರೆಡ್ಡಿ ತಾವು ಕಾಸ್ಟಿಂಗ್ ಕೌಚ್ ವಿರುದ್ಧ ಮಾಡುತ್ತಿರುವ ಹೋರಾಟ ಮುಂದುವರೆಯುವುದಾಗಿ ತಿಳಿಸಿದ್ದಾರೆ.

  • ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳ ಖುಲಾಸೆ

    ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳ ಖುಲಾಸೆ

    ಹೈದರಾಬಾದ್: 2007 ರಲ್ಲಿ ನಡೆದ ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 10 ಮಂದಿ ಆರೋಪಿಗಳನ್ನು ಎನ್‍ಐಎ ವಿಶೇಷ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ. ನಬಕುಮಾರ್ ಶ್ರೀಕರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ ಅಲಿಯಾಸ್ ಅಜಯ್ ತಿವಾರಿ, ಲಕ್ಷ್ಮಣ್ ದಾಸ್ ಮಹಾರಾಜ್, ಮೋಹನ್ ಲಾಲ್ ರಾತೇಶ್ವರ್ ಮತ್ತು ರಾಜೇಂದ್ರ ಚೌಧರಿ ಪ್ರಕರಣದಲ್ಲಿ ಖುಲಾಸೆಗೊಂಡ ಪ್ರಮುಖ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಅಭಿನವ್ ಭಾರತ ರತ್ನ ಸಂಘಟನೆಯ ಸದಸ್ಯರಾಗಿದ್ದರು.

    ಕಳೆದ 11 ವರ್ಷಗಳ ಹಿಂದೆ 2007 ರ ಮೇ 18ರ ಶುಕ್ರವಾರದಂದು ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಲಾಗಿತ್ತು. ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ, 58ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

    ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲಾಗಿತ್ತು. 2011 ರಲ್ಲಿ ಎನ್‍ಐಎಗೆ ಘಟನೆಯ ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪ್ರಕರಣದ 10 ಮಂದಿ ಆರೋಪಿಗಳ ಪೈಕಿ ಐವರನ್ನು ಮಾತ್ರ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿಗಳಾದ ಸಂದೀಪ್ ವಿ. ದಂಗೆ ಮತ್ತು ರಾಮಚಂದ್ರ ಕಲ್ಸಂಗ್ರಾ ಪ್ರಕರಣದ ತನಿಖೆ ಆರಂಭದಿಂದಲೂ ತಲೆಮರೆಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಸುನೀಲ್ ಜೋಷಿಯನ್ನು ಹತ್ಯೆ ಮಾಡಲಾಗಿದೆ.

    ಪ್ರಕರಣದಲ್ಲಿ ಒಟ್ಟು 226 ವ್ಯಕ್ತಿಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿತ್ತು. ಅಲ್ಲದೇ 411 ದಾಖಲೆಗಳನ್ನು ಸಾಕ್ಷ್ಯಾಧಾರಗಳನ್ನಾಗಿ ನ್ಯಾಯಾಲಯ ವಿಚಾರಣೆ ನಡೆಸಿದೆ. ಇನ್ನು ಅಜ್ಮೀರ್ ದರ್ಗಾ ಸ್ಫೋಟದ ಪ್ರಕರಣದಲ್ಲಿ 2017 ರಲ್ಲಿ ರಾಜಸ್ಥಾನದ ನ್ಯಾಯಾಲಯ ಆರೋಪಿ ಗುಪ್ತಾ ಗೆ ಜೈಲು ಶಿಕ್ಷೆ ನೀಡಿದೆ.

  • ಲವ್ವರ್ ಗೆ 2ಲಕ್ಷ ರೂ. ಸುಪಾರಿ ಕೊಟ್ಟು ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿಸಿ ಜೈಲುಪಾಲಾದ್ಳು!

    ಲವ್ವರ್ ಗೆ 2ಲಕ್ಷ ರೂ. ಸುಪಾರಿ ಕೊಟ್ಟು ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿಸಿ ಜೈಲುಪಾಲಾದ್ಳು!

    ಹೈದರಾಬಾದ್: ಸನಾತ್ ನಗರ ಪೊಲೀಸರು 43 ವರ್ಷ ವಯಸ್ಸಿನ ಚಾಲಕ ಮೊಹದ್ ಖಜಾ ಅವರ ಅನುಮಾನಾಸ್ಪದ ಸಾವಿನ ನಿಗೂಢತೆಯನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೊನೆಗೂ ಸಾವಿನ ನಿಗೂಢ ರಹಸ್ಯವನ್ನು ಬಯಲು ಮಾಡಿದ್ದಾರೆ.

    ಅಪರಿಚಿತ ಶವ ಪತ್ತೆ: ಈ ಮೊದಲು ಫೆಬ್ರವರಿ 21 ಪೊಲೀಸರಿಗೆ ಅಪರಿಚಿತ ಶವವೊಂದು ರೈಲ್ವೇ ಹಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಇತ್ತು. ಪತ್ತೆಯಾದ ಮೃತ ದೇಹದ ಮೇಲೆ ಆಗಿದ್ದ ಗಾಯಗಳನ್ನು ಪರಿಶೀಲಿಸಿದ ನಂತರ ರೈಲಿನ ಅಪಘಾತದಲ್ಲಿ ಸಾಯಲಿಲ್ಲವೆಂದು ಪೊಲೀಸರು ಶಂಕಿಸಿದ್ದರು. ರೈಲ್ವೇ ಹಳಿಯ ಕೆಲವು ಮೀಟರ್ ದೂರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬಳಿಕ ರೈಲಿನ ಹಳಿಯ ಮೇಲೆ ತಂದು ಎಸೆಯಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತ ಒಂದು ವಾರದ ನಂತರ ಎಸ್.ಆರ್ ನಗರ್ ಪೊಲೀಸ್ ಠಾಣೆಯಲ್ಲಿ ಸಲ್ಹಾ ಮಹಿಳೆ ನಾಪತ್ತೆ ದೂರನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ಪತ್ತೆಯಾಗಿದ್ದ ದೇಹವನ್ನು ಖಜಾ ಎಂದು ಗುರುತಿಸಿದ್ದಾರೆ.

    ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಬಂಡೆಯ ಮೇಲೆ ಮತ್ತು ಟ್ರ್ಯಾಕ್ ಗಳ ಮೇಲೆ ಇದ್ದ ರಕ್ತದ ಕಲೆಗಳನ್ನು ಪರಿಶೀಲಿಸಿ ನಂತರ ಈ ಪ್ರಕರಣವನ್ನು ಸನಾತ್ ನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸನತ್ ನಗರ ಪೊಲೀಸರು ವಿಚಾರಣೆ ಆರಂಭಿಸಿ ನಗರದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆಗ ಖಾಜಾ ಇತರರೊಂದಿಗೆ ಮದ್ಯ ಸೇವಿಸುತ್ತಿದ್ದುದ್ದು ವಿಡಿಯೋದಲ್ಲಿ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಖಾಜಾ ಜೊತೆ ಇದ್ದವರನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಕೊಲೆ ಬೆಳಕಿಗೆ ಬಂದಿದ್ದು ಹೇಗೆ: ವಿಚಾರಣೆಯಲ್ಲಿ ಹತ್ಯೆಯ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಖಾಜಾ ಅವರ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಗೀಗಾಗಿ ಆತ ಪತ್ನಿ ಸಂಬಧ ಬೆಳೆಸಿದ್ದ ಮೊಹದ್ ತಬ್ರೇಜ್ ಖುರೇಷಿಯಿಂದ ದೂರವಿರುವಂತೆ ಎಚ್ಚರಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಅವನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಳೆ. ಪತಿಯನ್ನು ಕೊಲ್ಲಲು ತಬ್ರೇಜ್ ಅವರು ಸಯ್ಯದ್ ಮುಜೀಬ್ ಸ್ನೇಹಿತರನ್ನು ಸಂಪರ್ಕಿಸಿ 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ. ನಂತರ ಅವರು ಅಕ್ಬರ್ ಬೈಗ್, ಅಯಾಜ್ ಮತ್ತು ಶೇಕ್ ಜಹೀರ್ ಎಂಬವರಿಗೆ ಸುಪಾರಿ ಕೊಟ್ಟಿದ್ದಾರೆ.

    ಫೆಬ್ರವರಿ 20 ರಂದು ಖಜಾ ಮತ್ತು ಮುಜೀಬ್ ಹೆಚ್ಚು ಮದ್ಯ ಖರೀದಿಸಿ ಬೊರಾಬಂಡಾದಲ್ಲಿ ರೈಲ್ವೆ ಟ್ರ್ಯಾಕ್ ಬಳಿ ಬಂದಿದ್ದಾರೆ. ಅಲ್ಲಿ ಅಯಾಜ್, ಅಕ್ಬರ್ ಮತ್ತು ಜಹೀರ್ ಇವರ ಜೊತೆ ಸೇರಿಕೊಂಡಿದ್ದಾರೆ. ಬಳಿಕ ಎಲ್ಲರೂ ಒಟ್ಟಾಗಿ ಸೇರಿದ್ದು, ಖಾಜಾ ಅತಿಯಾಗಿ ಕುಡಿದಿದ್ದಾನೆ. ಆಗ ಮುಜೀಬ್ ಮತ್ತು ಆಯಾಜ್ ಖಜಾರನ್ನು ತಳ್ಳಿ ಅವನ ತಲೆಯನ್ನು ಬಂಡೆಗಳ ಮೂಲಕ ಹೊಡೆದಿದ್ದಾರೆ. ನಂತರ ಅವರು ದೇಹವನ್ನು ರೈಲ್ವೇ ಟ್ರ್ಯಾಕ್ ಬಳಿ ಎಸೆದು ಸ್ಥಳದಿಂದ ಪರಾರಿಯಾಗಿರುವುದಾಗಿ ಅವರು ಬಾಯ್ಬಿಟ್ಟಿದ್ದಾರೆ.

    ಇದೀಗ ಮಹಿಳೆಯ ದೂರಿನ ನೀಡಿದ ಬಳಿಕ ತನಿಖೆ ಮುಂದುವರಿಸಿದ ಪೊಲಿಸರಿಗೆ, ಮೃತ ವ್ಯಕ್ತಿಯ ಪತ್ನಿಯೇ ಕ್ರೂರವಾಗಿ ಕೊಲೆ ಮಾಡಿದ್ದಾಳೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಖಜಾ ಪತ್ನಿ ಸಲ್ಹಾ ಬೇಗಮ್ ಜೊತೆ ಮೊಹದ್ ತಬ್ರೇಜ್ ಖುರೇಷಿ ಮತ್ತು ಇತರು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.