Tag: Hyderabad

  • ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪ್ರೇಯಸಿಯ ಕುತ್ತಿಗೆಯನ್ನೇ ಕತ್ತರಿಸಿದ!

    ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪ್ರೇಯಸಿಯ ಕುತ್ತಿಗೆಯನ್ನೇ ಕತ್ತರಿಸಿದ!

    ಹೈದರಾಬಾದ್: ಪ್ರಿಯಕರನೊಬ್ಬ ತನ್ನ ಗೆಳತಿಯ ಗಂಟಲನ್ನು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಶಂಕರಪಲ್ಲಿಯಲ್ಲಿ ನಡೆದಿದೆ.

    ಶಂಕರಪಲ್ಲಿಯ ಪ್ರಗತಿ ರೆಸಾರ್ಟ್ ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪೀರ್ಲಗುಡೆಮ್ ಶಿರೆಷಾ ಮೃತ ದುರ್ದೈವಿ. ಆರೋಪಿ ರಾಯ್ಯಲಾ ಸೈಪ್ರಸಾದ್ (22) ಎಂದು ತಿಳಿದು ಬಂದಿದ್ದು, ಸದ್ಯಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಶಿರೆಷಾಳ ದೇಹದಲ್ಲಿ ಸುಮಾರು 12 ಕ್ಕಿಂತ ಹೆಚ್ಚು ಗಾಯಗಳಾಗಿದ್ದು, ಬಹುಶಃ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾರೆ. ಆರೋಪಿಗೂ ಕೂಡ ಗಾಯಗಳಾಗಿದ್ದು, ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆ ವಿವರ?: ಇಬ್ಬರು ಕೋಥೂರಿನವಾಗಿದ್ದು, ಮೊದಲು ಸ್ನೇಹಿತರಾಗಿ ನಂತರ ಡೇಟಿಂಗ್ ಪ್ರಾರಂಭಿಸಿದ್ದರು. ಶಿರೆಷಾ ಪದವಿ ಮಾಡಿದ್ದು, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ ದಿಲ್ಸುಖ್ ನರದಲ್ಲಿನ ಖಾಸಗಿ ಕೋಚಿಂಗ್ ಇನ್ಸ್ ಸ್ಟಿಟ್ಯೂಟ್ ಗೆ ಹೋಗುತ್ತಿದ್ದರು. ಶಿರೆಷಾ ಕುಟುಂಬದವರಿಗೆ ಸೈಪ್ರಸಾದ್ ಬಗ್ಗೆ ತಿಳಿದ ನಂತರ ಆತನಿಂದ ದೂರವಿರಲು ಹೇಳಿದ್ದಾರೆ.

    ಇಬ್ಬರು ಗುರುವಾರ ಮಾತನಾಡಬೇಕು ಎಂದು ಶಮ್ಶಾಬಾದ್ ನಲ್ಲಿ ಭೇಟಿಯಾಗಿ ಮೆಹಡಿಪಟ್ಟನಂ ಗೆ ಹೋಗಿದ್ದಾರೆ. ಅಲ್ಲಿಂದ ಪ್ರಗತಿ ರೆಸಾರ್ಟ್ ಗೆ ಹೋಗಿದ್ದಾರೆ. ರೆಸಾರ್ಟ್ ನಲ್ಲಿ ಮದುವೆಯ ಬಗ್ಗ ಕುರಿತು ಚರ್ಚೆ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುತಿ ಸೈಪ್ರಸಾದ್ ಕೋಪಗೊಂಡು ಶಿರೆಷಾಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ಈ ವೇಳೆ ಆರೋಪಿಯ ಸಹೋದರಿ ಆತನಿಗೆ ಫೋನ್ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ದಾರೆ. ಆಗ ಆತ ಪ್ರೇಮಿಯನ್ನು ಹೇಗೆ ಕೊಂದಿದ್ದೇನೆ ಎಂದು ಹೇಳಿದ್ದಾನೆ. ಕೂಡಲೇ ಭಯಗೊಂಡ ಸಹೋದರಿ ರೆಸಾರ್ಟ್ ಸಿಬ್ಬಂದಿಗೆ ತಿಳಿಸಿದ್ದಾರೆ.

    ಸಿಬ್ಬಂದಿ ರೂಮಿಗೆ ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿರೆಷಾಳನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಾಲಾಜಿ ದೇವಸ್ಥಾನದ ಬಳಿ ಬಂಧಿಸಿದ್ದಾರೆ.

  • ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಡೆಲ್ಲಿ ತಂಡದ ಯುವ ಆಟಗಾರ ರಿಷಭ್ ಪಂತ್ ದಾಖಲೆ ಶತಕ ಸಿಡಿಸಿದ್ದು, ಐಪಿಎಲ್ ನ 50 ನೇ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಫಿರೋಜ್ ಶಾ ಕೋಟ್ಲಾ ಮೈಧಾನದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ ರಿಷಭ್ 63 ಎಸೆತಗಳಲ್ಲಿ 128 ರನ್ (15 ಬೌಂಡರಿ, 7 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ವಿಶೇಷವಾಗಿ ಇನ್ನಿಂಗ್ಸ್ ನ ಕೊನೆಯ ಓವರ್ ಎಸೆದ ಭುವನೇಶ್ವರ್ ಬೌಲಿಂಗ್ ನಲ್ಲಿ 26 ರನ್ ಸಿಡಿಸಿದರು.

    ಈ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಿಷಭ್ ಐಪಿಎಲ್ ನಲ್ಲಿ ಶತಕ ಗಳಿಸಿದ 31 ಆಟಗಾರ ಹಾಗೂ ಭಾರತದ 13ನೇ ಆಟಗಾರ ಎನಿಸಿಕೊಂಡರು. ಅಲ್ಲದೇ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಕೂಡ ಆಗಿದ್ದಾರೆ. ಅಲ್ಲದೇ ಭಾರತದ ಪರ ಐಪಿಎಲ್ ನಲ್ಲಿ ಆತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ರಿಷಬ್ ಶತಕ ನಡುವೆಯೂ ಹೈದರಾಬಾದ್ ತಂಡ ಪಂದ್ಯದಲ್ಲಿ ಗೆಲುವು ಪಡೆಯಿತು.

    ಭಾರತೀಯ ಆಟಗಾರರ ಪೈಕಿ ಕಿಂಗ್ಸ್ ಇಲೆವನ್ ಪಂಜಾಬ್‍ನ ಮುರಳಿ ವಿಜಯ್ 128 ರನ್ ಗಳಿಸಿದ್ದರೆ, ಈ ಹಿಂದೆ ಪಂಜಾಬ್ ಪರ ಆಡಿದ್ದ ಸೆಹ್ವಾಗ್ 122 ರನ್ ಹೊಡೆದಿದ್ದರು.

    ಈ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕೀ ಬೌಲರ್ ಎಂದೇ ಕರೆಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ರಷೀದ್ ಖಾನ್ ಬೌಲಿಂಗ್ ನಲ್ಲೇ ಅತೀ ರನ್ ಸಿಡಿಸಿದ ಪಂತ್ ಬ್ಯಾಟಿಂಗ್ ಹಲವು ಅಭಿಮಾನಿಗಳು ಫಿದಾ ಆಗಿದ್ದಾರೆ. ಐಪಿಎಲ್ ನಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿರುವ ಪಂತ್ 1 ಸಾವಿರ ರನ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಮನೀಶ್ ಪಾಂಡೆ ಆರ್‌ಸಿಬಿ ಪರ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ಟೂರ್ನಿಯ 11 ಪಂದ್ಯಗಳಲ್ಲಿ 521 ರನ್ ಗಳಿಸಿರುವ ಪಂತ್ ಪಂಜಾಬ್ ಕೆಎಲ್ ರಾಹುಲ್ ಜೊತೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ.

     

  • ಆರ್‌ಜಿವಿಯಿಂದ ನಾನು ಪ್ರೇರಣೆ ಪಡೆದಿದ್ದೇನೆ-ಯುಪಿಎಸ್‍ಸಿ ರ‍್ಯಾಂಕ್ ವಿಜೇತ

    ಆರ್‌ಜಿವಿಯಿಂದ ನಾನು ಪ್ರೇರಣೆ ಪಡೆದಿದ್ದೇನೆ-ಯುಪಿಎಸ್‍ಸಿ ರ‍್ಯಾಂಕ್ ವಿಜೇತ

    ಹೈದರಾಬಾದ್: ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 624 ರ‍್ಯಾಂಕ್ ಪಡೆದಿರುವ ಆಂಧ್ರಪ್ರದೇಶ ಅಕ್ಷಯ್ ಕುಮಾರ್ ನಾನು ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾರಿಂದ ಪ್ರೇರಣೆ ಪಡೆದಿರುವುದಾಗಿ ತಿಳಿಸಿದ್ದಾರೆ.

    ಸ್ಥಳಿಯ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತಾನಾಡಿರುವ ಅವರು, ರಾಮ್ ಗೋಪಾಲ್ ವರ್ಮಾ ಅವರ ಸತ್ಯ ಹಾಗೂ ಸರ್ಕಾರ್ ಸಿನಿಮಾಗಳು ನನಗೆ ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ.

    ಈ ವೇಳೆ ತಾನು ರಾಮ್ ಗೋಪಾಲ್ ಅವರ ಹಲವು ವಿಡಿಯೋ ಹಾಗೂ ಸಿನಿಮಾಗಳನ್ನು ನೋಡುತ್ತಿದೆ. ತಮ್ಮ ತಂದೆ ಸಾಧಾರಣ ಪೊಲೀಸ್ ಪೇದೆಯಾಗಿದ್ದು, ಅವರು ಇತರೇ ಅಧಿಕಾರಿಗಳಿಗೆ ನೀಡಿದ ಗೌರವವನ್ನು ಕಂಡು ಸಿವಿಲ್ ಪರೀಕ್ಷೆ ಬರೆಯಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

    ಸದ್ಯ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ಅಕ್ಷಯ್ ಕುಮಾರ್ ರನ್ನು ಭೇಟಿ ಮಾಡಲು ಆಸೆ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಟೀಕೆ ಮಾಡುತ್ತಿದ್ದ ಹಲವರಿಗೂ ಟಾಂಗ್ ನೀಡಿದ್ದಾರೆ. ಅಲ್ಲದೇ ತಾವು ಎರಡು ಬಾರಿ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆ ಬರೆದಿದ್ದು ಅನುತ್ತೀರ್ಣಗೊಂಡಿದ್ದೆ ಎಂದು ತಿಳಿಸಿದ್ದಾರೆ.

      

  • ಎಫ್‍ಬಿ ಪ್ರಿಯಕರನಿಗಾಗಿ ಮದ್ವೆಯಾದ 10 ದಿನದಲ್ಲೇ ಪತ್ನಿಯಿಂದಲೇ ಪತಿ ಕೊಲೆ!

    ಎಫ್‍ಬಿ ಪ್ರಿಯಕರನಿಗಾಗಿ ಮದ್ವೆಯಾದ 10 ದಿನದಲ್ಲೇ ಪತ್ನಿಯಿಂದಲೇ ಪತಿ ಕೊಲೆ!

    ಹೈದರಾಬಾದ್: ನವ ವಿವಾಹಿತೆಯೊಬ್ಬಳು ಮದುವೆಯಾದ 10 ದಿನದಲ್ಲಿಯೇ ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ನಲ್ಲಿ ನಡೆದಿದೆ.

    ಗೌರಿಶಂಕರ ರಾವ್ ಕೊಲೆಯಾದ ದುರ್ದೈವಿ. ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರ ಶಿವ ಇಬ್ಬರು ಸೇರಿ ರೌಡಿ ಶೀಟರ್ ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ.

    ಏನಿದು ಘಟನೆ?: ವಿಜಯನಗರ ಜಿಲ್ಲೆಯ ಚಿಟ್ಲಾಪುಡಿವಾಲಾಸ್ ಗ್ರಾಮದ ಗೌರಿಶಂಕರ ರಾವ್ ಅವರು ಏಪ್ರಿಲ್ 28 ರಂದು ಅದೇ ಜಿಲ್ಲೆಯ ವೀರಗಟ್ಲಾಮ್ ಮಂಡಲ್ ಕಡೆಕೆಲ್ಲಾ ಗ್ರಾಮದ ಸರಸ್ವತಿಯನ್ನು ವಿವಾಹವಾಗಿದ್ದರು. ಹೊಸದಾಗಿ ಮದುವೆಯಾದ ಈ ಜೋಡಿ ಸೋಮವಾರ ರಾತ್ರಿ ಶಾಪಿಂಗ್ ಮುಗಿಸಿ ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗಿದ್ದರು.

    ಈ ವೇಳೆ ತೋಟಪಲ್ಲಿಯ ಬಳಿ ಸರಸ್ವತಿ ಶೌಚಾಲಯಕ್ಕೆಂದು ಆಟೋ ಇಳಿದು ಹೋಗಿದ್ದಾಳೆ. ಆಗ ಯಾರೋ ಅಪರಿಚಿತರು ಬಂದು ಕಬ್ಬಿಣದ ರಾಡ್ ನಲ್ಲಿ ದಾಳಿ ಮಾಡಿದ್ದಾರೆ. ಪರಿಣಾಮ ಗೌರಿಶಂಕರ ರಾವ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸರಸ್ವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ತನಿಖೆಯ ಆರಂಭದಲ್ಲಿಯೇ ಗೌರಿಶಂಕರ ರಾವ್ ಮೇಲೆ ನಡೆದ ದಾಳಿ ಪೂರ್ವಯೋಜಿತವಾದ ಆಕ್ರಮಣವಾಗಿದೆ ಎಂದು ತಿಳಿದುಬಂದಿದೆ. ನಂತರ ತನಿಖೆಯನ್ನ ಮುಂದುವರಿಸಿದ್ದು, ಪತ್ನಿಯ ಫೋನ್ ವಿವರಗಳನ್ನು ಪರಿಶೀಲಿಸಿದಾಗ ಈ ದಾಳಿಯ ಹಿಂದೆ ಪತ್ನಿ ಇರುವುದು ತಿಳಿದು ಬಂದಿದೆ. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

    ಕೊಲೆ ಮಾಡಿಸಿದ್ದು ಯಾಕೆ?
    ಸರಸ್ವತಿ ಫೇಸ್‍ ಬುಕ್ ಮೂಲಕ ಶಿವನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿತ್ತು. ಆದ್ದರಿಂದ ಪೋಷಕರು ಸರಸ್ವತಿಗೆ ಸಂಬಂಧಿಯಾದ ಗೌರಿ ಶಂಕರ್ ಜೊತೆ ವಿವಾಹ ನಿಶ್ಚಯಿಸಿದ್ದಾರೆ. ಆದರೆ ಈ ಮದುವೆ ತನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಆದರೂ ಬಲವಂತ ಮಾಡಿ ಏಪ್ರಿಲ್ 28 ರಂದು ಮದುವೆ ಮಾಡಿಸಿದ್ದಾರೆ.

    ಮದುವೆ ಬಳಿಕ ಆಕೆ ಶಿವ ಜೊತೆ ಸೇರಿ ಪತಿಯನ್ನ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾಳೆ. ನಿಶ್ಚಿತಾರ್ಥ ನೀಡಿದ್ದ ಉಂಗರವನ್ನು ಶಿವನಿಗೆ ನೀಡಿದ್ದಾಳೆ. ನಂತರ ಇವರಿಬ್ಬರು ಕೊಲೆ ನಡೆಸಲು ರೌಡಿ ಶೀಟರ್ ಗಳಾದ ಗೋಪಿ ಮತ್ತು ವೈಜಾಗ್ ಗೆ ಸುಪಾರಿ ಕೊಟ್ಟಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ನಿ, ಆಕೆ ಪ್ರಿಯಕರ ಮತ್ತು ರೌಡಿ ಶೀಟರ್ ಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿವರಗಳನ್ನು ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ವಿಚಾರವನ್ನು ತಿಳಿಸಿದ್ದಾರೆ.

  • ಮಗಳಿಗಾಗಿ ನೇಣಿಗೆ ಶರಣಾದ ದಂಪತಿ!

    ಮಗಳಿಗಾಗಿ ನೇಣಿಗೆ ಶರಣಾದ ದಂಪತಿ!

    ಹೈದರಾಬಾದ್: ಮಗಳ ಸಾವಿನಿಂದ ನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಕಮರಪಲ್ಲಿ ಮಂಡಲ್ ನ ನರ್ಸಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂದೀಪ್ ಮತ್ತು ನವನೀತಾ ಆತ್ಮಹತ್ಯೆಗೆ ಶರಣಾದ ದಂಪತಿ. ಇವರಿಗೆ 5 ವರ್ಷದ ಮಗಳು ಮತ್ತು 3 ವರ್ಷದ ಮಗ ಇದ್ದರು. ಆದರೆ ಶುಕ್ರವಾರ ಇಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

    ದಂಪತಿಯ ಮಗಳು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೇ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದಾಳೆ. ಅಂದಿನಿಂದ ಈ ದಂಪತಿ ಮಗಳನ್ನ ಕಳೆದುಕೊಂಡ ದುಃಖದಲ್ಲಿದ್ದರು. ಪ್ರತಿದಿನ ಮಗಳ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹೋಗುತ್ತಿದ್ದು, ಸ್ಮಶಾನದಲ್ಲೇ ಮಲಗುತ್ತಿದ್ದರು. ಇದನ್ನು ನೋಡಿದ ಗ್ರಾಮಸ್ಥರು ಮತ್ತು ಸಂಬಂಧಿಕರು ಅವರನ್ನು ಮನೆಗೆ ಕರೆದುಕೊಂಡು ಬಂದು  ಸಮಾಧಾನ ಮಾಡುತ್ತಿದ್ದರು.

    ದಂಪತಿ ಮಾತ್ರ ತಮ್ಮ ಮಗಳನ್ನು ಮರೆಯಲು ಸಾಧ್ಯವಾಗದೇ ಒಂದು ದಿನ ಸಂದೀಪ್ ತಮ್ಮ ತಂದೆಯ ಮನೆಗೆ ಹೋಗಿದ್ದಾರೆ. ಅಲ್ಲಿ ಇಬ್ಬರು ಮನೆಯ ಬಾಗಿಲು ಲಾಕ್ ಮಾಡಿಕೊಂಡು ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂದೀಪ್ ತಂದೆ ಭಯಗೊಂಡು ಬಂದು ಬಾಗಿಲು ಬಡಿದಿದ್ದಾರೆ. ಆದರೆ ಯಾರು ಬಾಗಿಲು ತೆರೆಯಲಿಲ್ಲ. ನಂತರ ಮನೆಯ ಕಿಟಿಕಿಯಿಂದ ನೋಡಿದಾಗ ಇಬ್ಬರು ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.

    ನಂತರ ಸಂಬಂಧಿಕರು, ಗ್ರಾಮಸ್ಥರು ಬಂದು ಬಾಗಿಲು ಮುರಿದು ಒಳ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಕಮರಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ದಂಪತಿ ಆತ್ಯಹತ್ಯೆಗೆ ಶರಣಾಗುವ ಮುನ್ನ ಡೆತ್‍ನೋಟ್ ಬರೆದಿದ್ದು, ನಮ್ಮ ಮಗಳನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ಅವಳನ್ನು ಬಿಟ್ಟು ಇರಲು ತುಂಬಾ ಕಷ್ಟವಾಗುತ್ತಿದೆ. ಆದ್ದರಿಂದ ನಾವು ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ.

  • ಭಾರೀ ಮಳೆಯಲ್ಲೂ ಟ್ರಾಫಿಕ್ ಕ್ಲೀಯರ್ ಮಾಡಿ ಕರ್ತವ್ಯ ಮೆರೆದ ಪೊಲೀಸರು! – ಫೋಟೋ ವೈರಲ್

    ಭಾರೀ ಮಳೆಯಲ್ಲೂ ಟ್ರಾಫಿಕ್ ಕ್ಲೀಯರ್ ಮಾಡಿ ಕರ್ತವ್ಯ ಮೆರೆದ ಪೊಲೀಸರು! – ಫೋಟೋ ವೈರಲ್

    ಹೈದರಾಬಾದ್: ರಾಜ್ಯದೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರತಿದಿನ ಸಂಚರಿಸುವ ಜನರ ಜೀವನ ಅಸ್ಥವ್ಯಸ್ತವಾಗಿದೆ.

    ಪ್ರತಿ ಬಾರಿಯೂ ಮಳೆಯಿಂದಾಗಿ ಹೈದರಾಬಾದ್‍ನಲ್ಲಿ ಟ್ರಾಫಿಕ್ ಸಿಗ್ನಲ್ಸ್, ಪ್ರವಾಹದಿಂದ ಕೂಡಿದ ಬೀದಿಗಳು ಮತ್ತು ಮರಗಳು ಉರುಳಿ ಬೀಳುತ್ತವೆ. ಆದರೆ ಹೈದರಾಬಾದ್ ನ ಮುನಿಸಿಪಲ್ ಕಾರ್ಪೋರೇಷನ್ ಸಿಬ್ಬಂದಿ(ಜಿಎಚ್‍ಎಮ್‍ಸಿ) ಮತ್ತು ಟ್ರಾಫಿಕ್ ಪೊಲೀಸರು ಮಳೆಯಲ್ಲಿಯೂ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.

    ಗುರುವಾರ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹೈದರಾಬಾದ್ ನಲ್ಲಿ ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದವು. ಇದರಿಂದ ಮಳೆಯ ನೀರು ರಸ್ತೆಯಲ್ಲಿಯೇ ತುಂಬಿ ಕೊಂಡಿತ್ತು. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದ್ದು, ಅತಿಯಾದ ಟ್ರಾಫಿಕ್ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಬಂದು ರಸ್ತೆಯಲ್ಲಿದ್ದ ಮಳೆನೀರು ಹೋಗಲು ಒಳಚರಂಡಿ ಮುಚ್ಚಳಗಳನ್ನು ತೆರೆಯುವುದು ಮತ್ತು ಮಳೆಯಿಂದ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವುದರ ಮೂಲಕ ಟ್ರಾಫಿಕ್ ನನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.

    ವ್ಯಕ್ತಿಯೊಬ್ಬರು ಪೊಲೀಸರು ಮಳೆಯಲ್ಲಿಯೂ ತಮ್ಮ ಕರ್ತವ್ಯ ಮಾಡುತ್ತಿದ್ದ ಫೋಟೋವನ್ನು ತೆಗೆದು ಅದನ್ನು ಇಲಾಖೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

    ಟ್ವಿಟ್ಟರ್ ಬಳಕೆದಾರರು ಪೊಲೀಸರ ಕರ್ತವ್ಯದ ಬಗ್ಗೆ ಕಾಮೆಂಟ್ ಗಳನ್ನು ಮಾಡಿದ್ದಾರೆ. “ನಿಮ್ಮ ಬಗ್ಗೆ ನಮಗೆ ಬಹಳ ಹೆಮ್ಮೆ. ನಮ್ಮ ಪುರಸಭೆಯ ನೌಕರರು ನಿಮ್ಮಿಂದ ಕಲಿಯಬೇಕು” ಎಂದು ಟ್ವೀಟ್ ಮಾಡಿದ್ದಾರೆ.

    `ಸಂಚಾರವನ್ನು ತೆರವುಗೊಳಿಸಿ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಮಾಡುವುದು ನಮ್ಮ ಕರ್ತವ್ಯ. ಆದ್ದರಿಂದ ನಾವು ಕಾರ್ಪೋರೇಷನ್ ಸಿಬ್ಬಂದಿ ತಂಡಗಳಂತಹ ಇತರ ಇಲಾಖೆಗಳಿಗೆ ಕಾಯುವುದಿಲ್ಲ. ವಾಹನ ಸವಾರರಿಗೆ ಬಿಕ್ಕಟ್ಟು ಉಂಟಾಗುವ ಮೊದಲು ನಾವು ರಸ್ತೆಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತೇವೆ. ಇದಕ್ಕಾಗಿ ತಾವು ಎಲ್ಲ ಅಧಿಕಾರಿಗಳನ್ನು ಸಜ್ಜುಗೊಳಿಸುತ್ತೇವೆ” ಎಂದು ಹೈದರಾಬಾದ್ ಟ್ರಾಫಿಕ್ ಪೊಲೀಸ್ ಹೆಚ್ಚುವರಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.

    ಸಿಕಂದರಾಬಾದ್, ಮುಶೀರಾಬಾದ್ ಮುಂತಾದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು. ಮುಂದಿನ ಎರಡು ದಿನಗಳಲ್ಲಿ ರಾಜ್ಯಾದ್ಯಂತ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

  • ಗಂಟಲು ನೋವು ಎಂದು ಆಸ್ಪತ್ರೆಗೆ ಸೇರಿಸಿದ್ರು – ಇಂಜೆಕ್ಷನ್ ಕೊಟ್ಟ ಒಂದೇ ದಿನದಲ್ಲಿ 13ರ ಬಾಲಕಿ ದುರ್ಮರಣ

    ಗಂಟಲು ನೋವು ಎಂದು ಆಸ್ಪತ್ರೆಗೆ ಸೇರಿಸಿದ್ರು – ಇಂಜೆಕ್ಷನ್ ಕೊಟ್ಟ ಒಂದೇ ದಿನದಲ್ಲಿ 13ರ ಬಾಲಕಿ ದುರ್ಮರಣ

    ಹೈದರಾಬಾದ್: ವೈದ್ಯರ ನಿರ್ಲಕ್ಷ್ಯದಿಂದ 13 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.

    ಪ್ರೇಮಾಂಜಲಿ(13) ಮೃತ ದುರ್ದೈವಿ. ಈಕೆ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕಾಕಿನಾಡದ ರಾಯವರಂ ನಿವಾಸಿ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಬುಧವಾರ ಪ್ರೇಮಾಂಜಲಿ ಗಂಟಲು ನೋವಿನಿಂದ ಬಳಲುತ್ತಿದ್ದಳು. ಗಂಟಲು ಸಮಸ್ಯೆಯಿಂದ ಎರಡು ದಿನಗಳ ಕಾಲ ಅನ್ನ, ನೀರು ಏನು ತಿನ್ನಲು ಆಗುತ್ತಿರಲಿಲ್ಲ. ಬಳಿಕ ಆಕೆಯ ಪೋಷಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆಸ್ಪತ್ರೆಯಲ್ಲಿ ವೈದ್ಯರು ಆಕೆಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಮಾಡಿದ ಸ್ವಲ್ಪ ಸಮಯದ ಬಳಿಕ ಪ್ರೇಮಾಂಜಲಿಗೆ ವಾಂತಿ-ಭೇದಿ ಶುರುವಾಗಿದೆ. ಈ ವೇಳೆ ವೈದ್ಯರು ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೂ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದ ನನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.

    ಪೋಷಕರು ವೈದ್ಯರ ವಿರುದ್ಧ ದೂರು ನೀಡಿದ್ದು, ಕಾಕಿನಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇತ್ತ ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • 9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

    9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

    ಹೈದರಾಬಾದ್: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಸಂಪುಟ ಅಸ್ತು ಅಂದ ಬಳಿಕವೂ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತದ್ದೇ ಒಂದು ಘಟನೆ ಇದೀಗ ಆಂಧ್ರಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಹೌದು. ಆಂಧ್ರಪ್ರದೇಶದ ಗುಂಟೂರು ಎಂಬಲ್ಲಿ 9 ವರ್ಷದ ಬಾಲಕಿ ಮೇಲೆ 50 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ತಡೆದು ಆರೋಪಿಯನ್ನು ಬಂಧಿಸಿ ನೇಣಿಗೆ ಹಾಕುವಂತೆ ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ಬುಧವಾರ ಮಧ್ಯಾಹ್ನ ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಹೊಟ್ಟೆ ನೋವಿನಿಂದ ಬಳುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಪರೀಕ್ಷೆ ಮಾಡಿದ ವೈದ್ಯರು, ಆಕೆಯ ದೇಹದಲ್ಲಿ ಗಾಯಗಳಾಗಿವೆ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಅಂತ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪೋಷಕರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಆಗ ಬಾಲಕಿ ನೆರೆಮನೆಯ ಕೈಗಾಡಿ ಎಳೆಯುವ ವ್ಯಕ್ತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಯ್ಬಿಟ್ಟಿದ್ದಾಳೆ. ಸದ್ಯ ಬಾಲಕಿ ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಅಂತ ವೈದ್ಯರು ಹೇಳಿದ್ದಾರೆ.

    ಪ್ರಕರಣ ಸಂಬಂಧ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಕೂಡಲೇ ಆತನನ್ನು ಬಂಧಿಸಲಾಗುವುದು ಅಂತ ಗುಂಟೂರು ಪೊಲೀಸ್ ಅಧೀಕ್ಷಕ ಅಪ್ಪಲ ನಾಯ್ಡು ಹೇಳಿದ್ದಾರೆ.

    ಇತ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದನ್ನು ಖಂಡಿಸಿದ ಆಕೆಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ಬಂದ್ ಮಾಡಿ, ಟಯರ್ ಸುಡುವ ಮೂಲಕ ಮುಂಜಾನೆ 3 ಗಂಟೆಯವರೆಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿ, ನೇಣಿಗೇರಿಸುವಂತೆ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತವಾಗಿದ್ದ ತಂಡವೊಂದು ಆರೋಪಿಯ ಮಗನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಬಂದು ಆತನನ್ನು ಅಲ್ಲಿಂದ ಪಾರು ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಟೀ-ಕಾಫಿ ಕುಡಿಯುವ ಮುನ್ನ ಈ ಸ್ಟೋರಿ ಓದಿ! – ವಿಡಿಯೋ ನೋಡಿ

    ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಟೀ-ಕಾಫಿ ಕುಡಿಯುವ ಮುನ್ನ ಈ ಸ್ಟೋರಿ ಓದಿ! – ವಿಡಿಯೋ ನೋಡಿ

    ಹೈದರಾಬಾದ್: ರೈಲು ಪ್ರಯಾಣಿಕರೇ ಎಚ್ಚರ ಎಚ್ಚರ…ರೈಲಿನಲ್ಲಿ ನೀವು ಕುಡಿಯುವ ಟೀ ಮತ್ತು ಕಾಫಿಗೆ ಶೌಚಾಲಯದ ನೀರನ್ನು ಬಳಸಿರುವ ವಿಡಿಯೋವೊಂದು ಸಾಮಾಜಿಕ ಜಾಣತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಡಿಯೋ ವೈರಲ್ ಆದ ನಂತರ ರೈಲ್ವೆ ಇಲಾಖೆ ಈ ಬಗ್ಗೆ ತನಿಖೆ ಮಾಡಿದ್ದು, ಟೀ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡವಿಧಿಸಲಾಗಿದೆ ಎಂದು ಸೌಥ್ ಸೆಂಟ್ರಲ್ ರೈಲ್ವೆಯ ಪಿಆರ್ ಒ ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ.

    ಈ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದೆ. ಟೀ ಮಾರಾಟಗಾರನೊಬ್ಬ ಶೌಚಾಲಯದೊಳಗೆ ಹೋಗಿ ಟೀ ಕ್ಯಾನ್ ಗೆ ಅಲ್ಲಿನ ನೀರು ತುಂಬಿಕೊಂಡು ಹೊರ ಬಂದಿದ್ದಾನೆ. ಮತ್ತೊಬ್ಬ ಶೌಚಾಲಯದ ನೀರು ತುಂಬಿಸಿದ ಕ್ಯಾನ್ ನನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಎಲ್ಲ ದೃಶ್ಯವನ್ನು ರೈಲು ಪ್ರಯಾಣಿಕರೊಬ್ಬರು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮೂವರು ವ್ಯಕ್ತಿಗಳನ್ನು ಕಾಣಬಹುದಾಗಿದೆ.

    ಈ ಬಗ್ಗೆ ರೈಲ್ವೇ ಇಲಾಖೆ ತನಿಖೆ ನಡೆಸಿದೆ. ಆಗ ಈ ಘಟನೆ ಕಳೆದ ಡಿಸೆಂಬರ್  ನಲ್ಲಿ ಸಿಕಿಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಚೆನ್ನೈಗೆ ಹೋಗುತ್ತಿದ್ದ ಹೈದರಾಬಾದ್ ಚಾರ್ಮಿನರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಟೀ ವ್ಯಾಪಾರಿ ಪಿ.ಶಿವಪ್ರಸಾದ್ ಈ ಕೃತ್ಯ ಎಸಗಿದ್ದಾನೆ. ತನಿಖೆ ಮಾಡಿ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡವಿಧಿಸಿ ರೈಲ್ವೆ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದು ಹಿರಿಯ ರೈಲ್ವೇ ಅಧಿಕಾರಿ ಎ. ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ.

    https://www.youtube.com/watch?v=BMZILny61R8

  • ಅಭಿಮಾನಿಗಳಿಗೆ ಪತ್ರ ಬರೆದ ಬಾಹುಬಲಿ ಪ್ರಭಾಸ್

    ಅಭಿಮಾನಿಗಳಿಗೆ ಪತ್ರ ಬರೆದ ಬಾಹುಬಲಿ ಪ್ರಭಾಸ್

    ಹೈದರಾಬಾದ್: ಭಾರತೀಯ ಚಿತ್ರರಂಗವನ್ನು ಹೆಮ್ಮೆ ಪಡುವಂತೆ ಮಾಡಿದ್ದ ಬಹುಬಲಿ ಸಿನಿಮಾ ಭಾಗ ಎರಡು ಬಿಡುಗಡೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಅಭಿಮಾನಿಗಳಿಗೆ ಫೇಸ್‍ಬುಕ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

    ಕಳೆದ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಿದ್ದ ಬಾಹುಬಲಿ-2 ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ್ಯಾಂತ ಯಶ್ವಸಿ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ನಿರ್ಮಾಣ ಮಾಡಿತ್ತು.

    ಈ ಕುರಿತು ನಟ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದು, “ಬಾಹುಬಲಿ ಚಿತ್ರ ಜರ್ನಿ ತನ್ನ ಜೀವನದಲ್ಲಿ ಅತ್ಯಂತ ಭಾವನಾತ್ಮಕವಾದದ್ದು. ಈ ಚಿತ್ರ ನೀಡಿದ ನಿರ್ದೇಶಕ ರಾಜಮೌಳಿ, ಚಿತ್ರ ತಂಡ ಹಾಗೂ ಯಶ್ವಸಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ” ಎಂದು ತಿಳಿಸಿದ್ದಾರೆ.

    ಸದ್ಯಕ್ಕೆ ನಟ ಪ್ರಭಾಸ್ ನಿರ್ದೇಶಕ ಸುಜೇತ್ ಅವರ `ಸಹೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.