Tag: Hyderabad

  • ಲೈನ್ ಇನ್ಸ್‌ಪೆಕ್ಟರ್‌  ಮನೆ ಮೇಲೆ ಎಸಿಬಿ ದಾಳಿ – 100 ಕೋಟಿ ರೂ. ಆಸ್ತಿ ಪತ್ತೆ

    ಲೈನ್ ಇನ್ಸ್‌ಪೆಕ್ಟರ್‌ ಮನೆ ಮೇಲೆ ಎಸಿಬಿ ದಾಳಿ – 100 ಕೋಟಿ ರೂ. ಆಸ್ತಿ ಪತ್ತೆ

    ಹೈದರಾಬಾದ್: ಆಂಧ್ರಪ್ರದೇಶ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು (ಎಸಿಬಿ) ಗುರುವಾರ ನೆಲ್ಲೂರು ಜಿಲ್ಲೆಯ ಲೈನ್ ಇನ್ಸ್‌ಪೆಕ್ಟರ್‌ ಒಬ್ಬರ ಮನೆಯ ಮೇಲೆ ದಾಳಿ ನಡೆಸಿ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

    ನೆಲ್ಲೂರು ಜಿಲ್ಲೆಯ ಸಹಾಯಕ ನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್ ಲಕ್ಷ್ಮೀ ರೆಡ್ಡಿ (56) ಮನೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ಪತ್ತೆಯಾಗಿದೆ. ಇದೇ ವೇಳೆ ಎಸಿಬಿ ಅಧಿಕಾರಿಗಳು ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಯ ಕೆಲ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

    ಲಕ್ಷ್ಮಿ ರೆಡ್ಡಿ ಮನೆ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಸಂಜೆ ವರೆಗೂ ಶೋಧ ನಡೆಸಿ ಎರಡು ಜಿಲ್ಲೆಗಳಲ್ಲಿ ಆತ ಮಾಡಿದ್ದ ಕೃಷಿ ಆಸ್ತಿ, ನಿವೇಶನ ಕುರಿತ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಸದ್ಯ ಇವುಗಳ ಮೌಲ್ಯ 100 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. 1993 ರಲ್ಲಿ ಸರ್ವೀಸ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ ಈತ ಬಡ್ತಿ ಪಡೆದು 1996-97 ಅವಧಿಯಲ್ಲಿ ಲೈನ್ ಮನ್ ಆಗಿ ಕಾರ್ಯನಿರ್ವಹಿಸಿದ್ದ. 2013 ರ ಬಳಿಕ ಈತ ಲೈನ್ ಇನ್ಸ್‌ಪೆಕ್ಟರ್‌ ಆಗಿ ಮಗ್ಗುರು ಎಂಬ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.

    ಲಕ್ಷ್ಮಿ ರೆಡ್ಡಿ ತಂದೆ ಮಲಕೊಂಡ ರೆಡ್ಡಿ ಹಾಗೂ ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಲಾಗಿದ್ದು, ಈ ವೇಳೆ 57.50 ಎಕರೆ ಕೃಷಿ ಭೂಮಿ, ಆರು ಐಶಾರಾಮಿ ಮನೆ ಮತ್ತು ಎರಡು ಫ್ಲ್ಯಾಟ್ ಗಳಿಗೆ ಸಂಬಂಧಿಸಿದ ಆಸ್ತಿ ವಿವರಗಳು ಸೇರಿದಂತೆ 9.95 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ ಪತ್ತೆಯಾಗಿದೆ. ಲಕ್ಷ್ಮಿ ರೆಡ್ಡಿಯವರ ಹೆಚ್ಚಿನ ಆಸ್ತಿಗಳು ಪತ್ನಿ ಸುಭಾಶಿಣಿ ಅವರ ಹೆಸರಿನಲ್ಲಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಲು ಲಕ್ಷ್ಮಿ ರೆಡ್ಡಿ ಇಲಾಖೆಗೆ ಸಂಬಂಧಿಸಿದ ಗೋದಾಮಿನಿಂದ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣಗಳಿಸಿರುವ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾಗಿ ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

  • ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ – ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರ ದಾರುಣ ಸಾವು!

    ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ – ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರ ದಾರುಣ ಸಾವು!

    ಹೈದರಾಬಾದ್: ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಶಾಲಾ ಮುಖ್ಯಸ್ಥ ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ತೆಲಂಗಾಣದ ಪೆದ್ದಪಲ್ಲೆ ಜಿಲ್ಲೆ ಸಮೀಪ ಸಂಭವಿಸಿದೆ.

    ಅರುಣ್ ಕುಮಾರ್, ಸೌಮ್ಯ ದಂಪತಿ, ಮಕ್ಕಳಾದ ಅಖಿಲೇಶ್ ಕುಮಾರ್(10), ಸಾನ್ವಿ (8) ಮೃತಪಟ್ಟ ದುರ್ದೈವಿಗಳು. ದಂಪತಿಗಳು ಮೂಲತಃ ಪೆದ್ದಪಲ್ಲೆ ಜಿಲ್ಲೆಯ ಖಾಸಗಿ ಶಾಲೆಯ ಮುಖ್ಯಸ್ಥರು ಎಂದು ತಿಳಿದುಬಂದಿದೆ.

    ಶುಕ್ರವಾರ ಮೃತರ ಸಹೋದರ ಹಾಗೂ ಬಾಮೈದನನ್ನು ಹೈದರಾಬಾದ್‍ನ ತಾಂತ್ರಿಕ ಕಾಲೇಜೊಂದರಲ್ಲಿ ಸೇರಿಸಿ ತಮ್ಮ ಕಾರಿನಲ್ಲಿ ಹಿಂತಿರುತ್ತಿದ್ದಾರೆ. ಈ ವೇಳೆ ಹೈದರಾಬಾದ್ – ಕರೀನಗರ ನಡುವಿನ ರಾಜ್ಯ ಹೆದ್ದಾರಿಯ ಕಟ್ನಾಪಳ್ಳಿ ಬಳಿ ನಿಂತಿದ್ದ ಲಾರಿಗೆ ಅಪ್ಪಳಿಸಿ ಸ್ಥಳದಲ್ಲೇ ಕಾರಿನಲ್ಲಿದ್ದ ನಾಲ್ವರು ದಾರುಣ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸುಲ್ತಾನಾಬಾದ್ ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆಬದಿ ನಿಂತಿದ್ದ ಲಾರಿಯನ್ನು ಗಮನಿಸದೆ ಅಪಘಾತ ಸಂಭವಿಸಿದ್ದು,  ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

  • ಪತ್ನಿಗಾಗಿ ದೇವಾಲಯ ನಿರ್ಮಿಸಿದ ಪತಿ!

    ಪತ್ನಿಗಾಗಿ ದೇವಾಲಯ ನಿರ್ಮಿಸಿದ ಪತಿ!

    ಹೈದರಾಬಾದ್: ಪತ್ನಿಗಾಗಿ ಪರ್ವತವನ್ನೇ ಒಡೆದು ರಸ್ತೆ ನಿರ್ಮಿಸಿದ ಬಿಹಾರದ ದಶರಥ್ ಅವರ ಬಗ್ಗೆ ಎಲ್ಲರಿಗೂ ತಿಳಿದ ಸಂಗತಿ. ಈಗ ಪತ್ನಿಯ ಮೇಲಿನ ಪ್ರೀತಿಗಾಗಿ ತೆಲಂಗಾಣ ವ್ಯಕ್ತಿಯೊಬ್ಬರು ಪತ್ನಿಗಾಗಿ ದೇವಾಲಯವನ್ನೇ ನಿರ್ಮಿಸಿ ಸುದ್ದಿಯಾಗಿದ್ದಾರೆ.

    ಚಂದ್ರ ಗೌಡ ಎಂಬವರು ಪತ್ನಿಗಾಗಿ ದೇವಾಲಯ ನಿರ್ಮಿಸಿದ್ದಾರೆ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಇವರು ಮೃತ ಪತ್ನಿ ರಾಜಮಣಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ.

    ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಗೋಸನಪಲ್ಲಿ ಗ್ರಾಮದ ತನ್ನ ಜಮೀನಿನಲ್ಲಿ ಪತ್ನಿಯ ವಿಗ್ರಹ ಸ್ಥಾಪಿಸಿ ಚಂದ್ರ ಅವರು ದೇವಾಲಯ ನಿರ್ಮಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಾಜಮಣಿ ಅವರು ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದರು. ಪತ್ನಿಯ ಮೇಲಿನ ಪ್ರೀತಿಯ ನೆನಪಿಗಾಗಿ ಈ ದೇವಾಲಯ ನಿರ್ಮಿಸಿದ್ದಾಗಿ ಚಂದ್ರ ಅವರು ತಿಳಿಸಿದ್ದಾರೆ.

    ಭಾರತದ ಭವ್ಯ ಇತಿಹಾಸದಲ್ಲಿ ಪತ್ನಿ ಮಮ್ತಾಜ್ ಮೇಲಿನ ಪ್ರೀತಿಗೆ ತಾಜ್ ಮಹಲ್ ನಿಮಿಸಿದ್ದು, ಈಗ ಪ್ರೇಮಿಗಳ ಸ್ಮಾರಕವಾಗಿದೆ. ಸದ್ಯ ಚಂದ್ರ ಅವರು ಪತ್ನಿಯ ಮೇಲಿನ ಪ್ರೀತಿಗಾಗಿ ದೇವಾಲಯ ನಿರ್ಮಿಸಿದ್ದನ್ನು ಕಂಡ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

  • ಸಾರ್ವಜನಿಕ ಸ್ಥಳದಲ್ಲಿಯೇ ನ್ಯಾಯ ಕೇಳಿದ ಮಹಿಳೆಯ ಎದೆಗೆ ಒದ್ದ ಜನಪ್ರತಿನಿಧಿ!

    ಸಾರ್ವಜನಿಕ ಸ್ಥಳದಲ್ಲಿಯೇ ನ್ಯಾಯ ಕೇಳಿದ ಮಹಿಳೆಯ ಎದೆಗೆ ಒದ್ದ ಜನಪ್ರತಿನಿಧಿ!

    ಹೈದರಾಬಾದ: ಪ್ರಜಾಪ್ರತಿನಿಧಿಯೋರ್ವ ಮಹಿಳೆಗೆ ಸಾರ್ವಜನಿಕ ಸ್ಥಳದಲ್ಲಿ ಒದ್ದ ಘಟನೆ ಹೈದರಾಬಾದ್ ನ ನಿಜಾಮ್ ಬಾದ್ ಜಿಲ್ಲೆಯಲ್ಲಿ ನಡೆದಿದೆ.

    ರವಿವಾರ ಧರಪಳ್ಳಿ ಮಂಡಲದ(ಸ್ಥಳೀಯ ಸರಕಾರ)ಅಧ್ಯಕ್ಷ ಇಮ್ಮಡಿ ಗೋಪಿ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ಎದೆಗೆ ಒದ್ದು ಅಪಮಾನ ಮಾಡಿದ್ದಾನೆ.

    ಗೋಪಿಯಿಂದ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು 10 ತಿಂಗಳ ಹಿಂದೆ 33ಲಕ್ಷ ರೂ ಮೌಲ್ಯದ ಜಮೀನೊಂದನ್ನು ಖರೀದಿಸಿದ್ದರು. ಆದರೆ ಭೂಮಿಯನ್ನು ಮಹಿಳೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಗೋಪಿ ವಿಳಂಬ ಮಾಡಿದ್ದಾನೆ. ಈ ಭಾಗದಲ್ಲಿ ಜಮೀನಿನ ಬೆಲೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ 50ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ರವಿವಾರದಂದು ಮಹಿಳೆಯ ಕುಟುಂಬಸ್ಥರು ಗೋಪಿಯವರ ಮನೆಗೆ ಹೋಗಿ ತಮ್ಮ ಭೂಮಿಯನ್ನು ತಮಗೆ ಹಸ್ತಾಂತರಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಗೋಪಿಯೊಂದಿಗೆ ಮಾತಿನ ಚಕಮಕಿ ನಡೆದು ಮಹಿಳೆ ಗೋಪಿ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಇದರಿಂದ ಸಿಟ್ಟುಗೊಂಡ ಇಮ್ಮಡಿ, ಗೋಪಿ ಮಹಿಳೆಯನ್ನು ಸಾರ್ವಜನಿಕವಾಗಿ ಎದೆಗೆ ಒದ್ದು ಅವಮಾನ ಮಾಡಿದ್ದಾನೆಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನೊಂದ ಮಹಿಳೆ ಗೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಅದರನ್ವಯ ಭಾರತೀಯ ದಂಡ ಸಂಹಿತೆಯ ಪ್ರಕಾರ ಗೋಪಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ತೆಲಂಗಾಣ ರಾಷ್ಟ್ರೀಯ ಸಮಿತಿಯ ಸ್ಥಳೀಯ ಸರಕಾರದ ಪ್ರತಿನಿಧಿ ಗೋಪಿ, ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರನ್ನು ದಾಖಲಿಸಿದ್ದು, ಮಹಿಳೆ ಹಾಗೂ ಅವರ ಕುಟುಂಬದವರಿಂದ ತನ್ನ ಆಸ್ತಿಗೆ ಧಕ್ಕೆಯುಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

  • ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

    ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

    ನವದೆಹಲಿ: ಕರ್ನಾಟಕ ಮೊದಲ ಯುದ್ಧ ವಿಮಾನ ಮಹಿಳಾ ಪೈಲಟ್ ಆಗಿ ಮೇಘನಾ ಶಾನಭೋಗ್ ಶನಿವಾರ ಆಯ್ಕೆ ಆಗಿದ್ದು, ಇಂತಹ ಸಾಧನೆ ಮಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಮೂಲತಃ ಕರ್ನಾಟಕ ಚಿಕ್ಕಮಗಳೂರಿನ ಜಿಲ್ಲೆಯವರಾದ ಮೇಘನಾ ಅವರ ಹೆಸರನ್ನು ಹೈದರಾಬಾದ್ ದುಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪದವಿ ಪಥಸಂಚಲನ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮೇಘನಾರೊಂದಿಗೆ ಮತ್ತೊಬ್ಬ ಯುವತಿಯನ್ನು ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆ ಮಾಡಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇಘನಾ ಅವರು, ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಆದ ಅವನಿ ಚತುರ್ವೇದಿ ಸೇರಿದಂತೆ ಭವನ ಕಾಂತ್, ಮೋಹನಾ ಸಿಂಗ್ ಅವರ ಕಥೆಗಳನ್ನು ಓದಿ 2016 ರಲ್ಲಿ ಫೈಟರ್ ಪೈಲಟ್ ಆಗಲು ಸ್ಫೂರ್ತಿ ಪಡೆದಿದ್ದಾಗಿ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಮೇಘನಾ ಅವರ ತಂದೆ ಎಂಕೆ ರಮೇಶ್ ವಕೀಲರಾಗಿದ್ದು, ತಾಯಿ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಅಂದಹಾಗೆ ಮೇಘನಾ ಅವರು ಹೈದರಾಬಾದ್‍ನ ದುಂಡುಗಲ್ ಏರ್ ಫೋರ್ಸ್ ಗೆ 2017 ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು. ಇವರೊಂದಿಗೆ ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದ ಯುವತಿಯರು ಸಹ ಸೇರಿದ್ದರು. ಮೇಘನಾ ಅವರು ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು 2011 ರಿಂದ 2015 ರ ಅವಧಿಯಲ್ಲಿ ಓದಿದ್ದರು. ಬಳಿಕ ಮನಾಲಿ ಯಲ್ಲಿ ಪರ್ವತಾರೋಹಣ ಮತ್ತು ಗೋವಾ ದಲ್ಲಿ ಪ್ಯಾರಾಗ್ಲೈಡಿಂಗ್ ಕೋರ್ಸ್ ಅನ್ನು 2016 ರಲ್ಲಿ ಪೂರ್ಣಗೊಳಿಸಿದ್ದರು. ಹೈದರಾಬಾದ್ ಆಕಾಡೆಮಿಗೆ ಸೇರುವ ಮುನ್ನ ಏರ್ ಫೋರ್ಸ್ ಆಕಾಡೆಮಿಯ ಫ್ಲೈಯಿಂಗ್ ಬ್ರಾಂಚ್ ನ ನಲ್ಲಿ ಫೈಟರ್ ಸ್ಟ್ರೀಮ್ ತರಬೇತಿ ಪೂರ್ಣಗೊಳಿಸಿದ್ದರು.

  • ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಟಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಶ್ರೀ ರೆಡ್ಡಿ ಶಾಕಿಂಗ್ ಹೇಳಿಕೆ ನೀಡಿದ ಬಳಿಕ ಮತ್ತೊಬ್ಬ ಕಲಾವಿದೆ ಟಾಲಿವುಡ್ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.

    ಟಾಲಿವುಡ್ ನಲ್ಲಿ ಬಿಗ್ ಹಿಟ್ ಆಗಿದ್ದ `ಅರ್ಜುನ್ ರೆಡ್ಡಿ’ ಹಾಗೂ `ಪೆಳ್ಳಿ ಚೂಪುಲು’ ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದ ಶ್ರೇಷ್ಠ ಈ ಕುರಿತು ಆರೋಪ ಮಾಡಿದ್ದು, ನಿರ್ಮಾಪರೊಬ್ಬರ ಪತ್ನಿ ತಮ್ಮ ಪತಿಯ ಕೋರಿಕೆಗಳ್ನು ಪೂರೈಸಲು ಹೇಳಿದ್ದರು ಎಂದು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ ಉದ್ಯಮದಿಂದ ಕೆಲ ತಿಂಗಳು ಬ್ರೇಕ್ ಪಡೆದಿದ್ದ ಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿನಿಮಾ ರಂಗದಲ್ಲಿ ಕೆಲವರು ನೇರವಾಗಿಯೇ ಈ ಕುರಿತು ಕೇಳಿದ್ದಾರೆ. ಆದರೆ ನಾನು ನನ್ನ ಬರವಣಿಗೆ ಮೂಲಕ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ತಮ್ಮ ಮುಂದೆಯೇ ಮಹಿಳಾ ನಿರ್ದೇಶಕರೊಬ್ಬರಿಗೆ ನಡೆದ ಘಟನೆಯನ್ನು ಹಂಚಿಕೊಂಡಿರುವ ಅವರು, ಒಬ್ಬ ವ್ಯಕ್ತಿ ಮಹಿಳಾ ನಿರ್ದೇಶಕರಿಗೆ ಪ್ರಪೋಸ್ ಮಾಡಲು ಗೋವಾದಲ್ಲಿ ಪಾರ್ಟಿ ಏರ್ಪಡಿಸಿದ್ದ. ಆದರೆ ಈ ಪಾರ್ಟಿಗೆ ತೆರಳಲು ಆಕೆ ನಿರಾಕರಿಸಿದ ವೇಳೆ ಹಲ್ಲೆ ನಡೆಸಿದ್ದರು. ಈ ವೇಳೆ ತಾನು ಅಸಹಾಯಕಳಾಗಿ ನಿಂತಿದ್ದೆ. ಇದರಿಂದ ತಾನು ಸಿನಿಮಾ ರಂಗ ಕೆಲ ತಿಂಗಳು ಬ್ರೇಕ್ ಪಡೆದಿದ್ದೆ ಎಂದು ತಿಳಿಸಿದ್ದಾರೆ.

    ಟಾಲಿವುಡ್ ಜನಪ್ರಿಯ ಗೀತಾ ಸಾಹಿತಿಯಾಗಿರುವ ಶ್ರೇಷ್ಠ ಅವರು, ಇದುವರೆಗೂ `ಮಧುರಂ ಮಧುರಂ’, `ಯುದ್ಧ ಶರಣಂ’, `ಪೆಳ್ಳಿ ಚೂಪುಲು’ ಮತ್ತು `ಅರ್ಜುನ್ ರೆಡ್ಡಿ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದೆ ಟಾಲಿವುಡ್ ನಲ್ಲಿ ಶ್ರೀ ರೆಡ್ಡಿ ಆರೋಪಗಳ ಬಳಿಕ ಹಲವರು ಕಾಸ್ಟಿಂಗ್ ಕೌಚ್ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿದ್ದರು.

  • ಜೂನಿಯರ್ NTR ಮನೆಗೆ ಹೊಸ ಅತಿಥಿ ಎಂಟ್ರಿ!

    ಜೂನಿಯರ್ NTR ಮನೆಗೆ ಹೊಸ ಅತಿಥಿ ಎಂಟ್ರಿ!

    ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಜೂನಿಯರ್ ನಂದಮೂರಿ ರಾಮ್ ರಾವ್ ದಂಪತಿಗೆ ಎರಡನೇ ಮಗುವಾಗಿದ್ದು, ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ.

    ನಂದಮೂರಿ ಪತ್ನಿ ಲಕ್ಷ್ಮಿ ಪ್ರಣತಿ ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಈಗಾಗಲೇ ಐದು ವರ್ಷದ ಅಭಯ್ ರಾಮ್ ಮಗನಿದ್ದಾನೆ. ತಮಗೆ ಮಗುವಾದ ಸಂತಸವನ್ನು ಎನ್.ಟಿ.ಆರ್ ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ `ನನಗೆ ಗಂಡು ಮಗು ಜನಿಸಿದೆ. ನಮ್ಮ ಕುಟುಂಬ ಈಗ ದೊಡ್ಡದಾಗುತ್ತಿದೆ’ ಎಂದು ಬರೆದು ಕೊಂಡಿದ್ದಾರೆ.

    ಈಗಾಗಲೇ ನಂದಮೂರಿ ಅವರ ಎರಡನೇ ಮಗುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಂದು ಕಡೆ ಮಗುವಿನ ಫೊಟೋ ಮತ್ತೊಂದು ಕಡೆ ಎನ್.ಟಿ.ಆರ್ ಫೋಟೋ ಹಾಕಲಾಗಿದೆ. ಆದರೆ ಆ ಮಗು ಅವರದ್ದ ಇಲ್ಲವಾ ಎಂದು ಖಚಿತ ಮಾಹಿತಿ ತಿಳಿದು ಬಂದಿಲ್ಲ. ಆದರೆ ಮಗುವಿನ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

    2011ರಲ್ಲಿ ಎನ್ ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ಅವರ ಮದುವೆ ನೆರವೇರಿತ್ತು. ಈ ದಂಪತಿ ಎರಡನೇ ಸಲ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದು, ಆ ಮಗುವಿಗೆ ಎನ್.ಟಿ.ಆರ್ ತಮ್ಮ ಅಜ್ಜಿಯ ಹೆಸರು ಇಡಬೇಕೆಂದು ನಿರ್ಧರಿಸಿದ್ದರು ಈ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

    ಎನ್.ಟಿ.ಆರ್ ಟ್ವಿಟ್ಟರ್ ನಲ್ಲಿ ತಂದೆಯಾದ ಬಗ್ಗೆ ಹೇಳಿದ ಕೂಡಲೇ ಅನೇಕ ನಟ-ನಟಿಯರು ಮತ್ತು ಸಿನಿಮಾರಂಗದವರು ಶುಭಾಶಯವನ್ನು ತಿಳಿಸಿದ್ದಾರೆ. ಎನ್ ಟಿಆರ್ ಅನೇಕ ತೆಲುಗು ಸಿನಿಮಾಗಳನ್ನು ಮಾಡಿ ಯಶಸ್ಸುಕಂಡಿದ್ದು, ಟಾಲಿವುಡ್ ನ ಬೇಡಿಕೆಯ ನಟರಾಗಿದ್ದಾರೆ. ಸದ್ಯಕ್ಕೆ ಎನ್.ಟಿ.ಆರ್ `ಅರವಿಂದ ಸಮೇಧಾ’ ಮತ್ತು ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಬೆಳ್ಳಿ ಕಾಲುಚೈನಿಗೋಸ್ಕರ 55ರ ಮಹಿಳೆಯ ಕಾಲುಗಳನ್ನೇ ಕತ್ತರಿಸಿ, ಕೊಲೆಗೈದು ಬಿಸಾಕಿದ್ರು!

    ಬೆಳ್ಳಿ ಕಾಲುಚೈನಿಗೋಸ್ಕರ 55ರ ಮಹಿಳೆಯ ಕಾಲುಗಳನ್ನೇ ಕತ್ತರಿಸಿ, ಕೊಲೆಗೈದು ಬಿಸಾಕಿದ್ರು!

    ಹೈದರಾಬಾದ್: ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಹೈದರಾಬಾದ್‍ನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪತ್ತೆಯಾಗಿದೆ.

    ಮೃತ ಮಹಿಳೆಯನ್ನು 55 ವರ್ಷದ ನರ್ಸಮ್ಮ ಎಂದು ಗುರುತಿಸಲಾಗಿದ್ದು, ಇವರು ನಲ್ಲಕುಂಟ ನಿವಾಸಿ ಎನ್ನಲಾಗಿದೆ. ಮಹಿಳೆ ಧರಿಸಿದ್ದ ಕಾಲುಚೈನಿಗೋಸ್ಕರ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಅಂತ ಎಸ್‍ಆರ್ ನಗರ ಪೊಲೀಸರು ಶಂಕಿಸಿದ್ದಾರೆ.

    ನರ್ಸಮ್ಮ ಮಗಳು ಗರ್ಭಿಣಿಯಾಗಿದ್ದು, ಹೀಗಾಗಿ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಲೆಂದು ಅವರು ಕೆಲ ದಿನಗಳ ಹಿಂದೆ ಮಗಳಿರೋ ರೆಹಮತ್ ನಗರಕ್ಕೆ ಬಂದಿದ್ದರು ಅಂತ ಡಿಸಿಪಿ ಎಆರ್ ಶ್ರೀನಿವಾಸ್ ಹೇಳಿದ್ದಾರೆ.

    ಇದೇ ಜೂನ್ 13ರಂದು ನರ್ಸಮ್ಮ ಅವರು ಮದ್ಯಪಾನ ಮಾಡಬೇಕು ಅಂತ ಹೇಳಿದ್ದರು. ಹೀಗಾಗಿ ಮದ್ಯ ಖರೀದಿಸಲೆಂದು ಅಳಿಯ ಅಂಗಡಿ ಬಳಿ ಬಿಟ್ಟು ಹೋಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ನರ್ಸಮ್ಮ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸುವ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರ ಶವವನ್ನು ಕಂಡು ಸ್ಥಳೀಯರು ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನಿಡಿದ್ದಾರೆ. ಹೀಗಾಗಿ ಸಂಜೆ 4 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಮಹಿಳೆಯ ಕಾಲುಚೈನಿಗೋಸ್ಕರ ಆಕೆಯ ಪಾದಗಳನ್ನು ಕತ್ತರಿಸಿ, ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆಗೈದಿದ್ದಾರೆ. ಮಾತ್ರವಲ್ಲದೇ ತನಿಖೆಯ ದಾರಿ ತಪ್ಪಿಸಲು ಆಕೆಯ ಮೃತದೇಹವನ್ನು ಬೇರೆ ಬೇರೆ ಕಡೆ ಬಿಸಾಕಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

    ದುರಂತವೆಂದರೆ ಆಸ್ಪತ್ರೆಯಲ್ಲಿ ಸುಮಾರು 16 ಸಿಸಿಟಿವಿ ಕ್ಯಾಮೆರಾಗಳಿದ್ದು, ಆದ್ರೆ ಕೊಲೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿಗಳಿರಲಿಲ್ಲ. ಅದಲ್ಲದೇ ಮೃತ ಮಹಿಳೆ ಆಸ್ಪತ್ರೆಯ ರೋಗಿಯೂ ಅಲ್ಲ. ಯಾಕಂದ್ರೆ ಮಹಿಳೆಯ ಮೃತದೇಹ ಸಿಕ್ಕಿದ ಕೂಡಲೇ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳ ಹಾಜರಿ ಕರೆದಿದ್ದಾರೆ. ಈ ವೇಳೆ ಎಲ್ಲಾ ರೋಗಿಗಳು ಆಸ್ಪತ್ರೆಯಲ್ಲೇ ಇದ್ದರು. ಹೀಗಾಗಿ ಮೃತ ಮಹಿಳೆ ಆಸ್ಪತ್ರೆಯ ರೋಗಿ ಅಲ್ಲ ಎಂಬುದಾಗಿ ತಿಳಿದುಬಂದಿದೆ.

    ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

    ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

    ಹೈದರಾಬಾದ್: ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಸೋದರಮಾವನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‍ನ ಚೈತನ್ಯಪುರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    12 ವರ್ಷದ ಸೃಜನಾ ರೆಡ್ಡಿ ಹಾಗೂ ವಿಷ್ಣುವರ್ಧನ ರೆಡ್ಡಿ ಕೊಲೆಯಾದ ಅವಳಿ ಮಕ್ಕಳು. ಶುಕ್ರವಾರ ಅವಳಿ ಮಕ್ಕಳನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತನ್ನ ಸೋದರ ಮಾವನೇ ಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಲ್ಲಿಕಾರ್ಜುನ ರೆಡ್ಡಿಯು ಹೈದರಾಬಾದ್‍ನ ಚೈತನ್ಯಪುರದ ಬಾಡಿಗೆ ಮನೆಯ ವಾಸಿಯಾಗಿದ್ದು, ಶುಕ್ರವಾರ ತನ್ನ ತಂಗಿ ಮಕ್ಕಳನ್ನು ಈಜು ಕಲಿಸುವುದಾಗಿ ಹೇಳಿ ನಲ್ಗೋಂಡ ಜಿಲ್ಲೆಯಿಂದ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ಮಕ್ಕಳನ್ನು ತನ್ನ ಸ್ನೇಹಿತ, ಮನೆಯಲ್ಲಿದ್ದ ಜೊತೆಗಾರ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಇಂದು ಬೆಳಗ್ಗೆ ಮಕ್ಕಳ ಮೃತದೇಹವನ್ನು ಕಾರಿನಲ್ಲಿ ಸಾಗಿಸುವಾಗ ಮನೆಯ ಮಾಲೀಕ ಗಮನಿಸಿ ಪೊಲೀಸರಿಗೆ ಸುದ್ದಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಪೊಲೀಸರು ಹತ್ಯೆಯ ಹಿಂದೆ ಪೋಷಕರ ಕೈವಾಡ ಶಂಕೆ ವ್ಯಕ್ತವಾಗಿ ಲಕ್ಷ್ಮೀ ಹಾಗೂ ಶ್ರೀನಿವಾಸ್‍ರವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ತನ್ನ ಅಣ್ಣ ಈಜು ಕಲಿಸುವ ಸಲುವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಅವಳಿ ಮಕ್ಕಳಾಗಿದ್ದು ಹುಟ್ಟಿನಿಂದಲೂ ಬುದ್ಧಿಮಾಂದ್ಯರಾಗಿದ್ದರು, ಅಲ್ಲದೇ ಇಬ್ಬರಿಗೂ ಮಾತು ಸಹ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಶನಿವಾರ ಬೆಳಗ್ಗೆ ಮಕ್ಕಳ ಹತ್ಯೆ ಕುರಿತು ಆರೋಪಿ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದೇವೆ. ಕೃತ್ಯದಲ್ಲಿ ಆರೋಪಿ ತಂಗಿಯ ಕೈವಾಡ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಅಮೆರಿಕದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ನಿರ್ಮಾಪಕ ದಂಪತಿ

    ಅಮೆರಿಕದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ನಿರ್ಮಾಪಕ ದಂಪತಿ

    ಹೈದರಾಬಾದ್: ನಟಿಯರನ್ನು ಬಳಸಿಕೊಂಡು ಹೈ-ಸೆಕ್ಸ್ ಸ್ಕ್ಯಾಂಡಲ್ ನಡೆಸುತ್ತಿದ್ದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ, ತೆಲುಗು ಉದ್ಯಮಿ ಮತ್ತು ಆತನ ಪತ್ನಿಯನ್ನು ಚಿಕಾಗೋದಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಕಿಶನ್ ಅಲಿಯಾಸ್ ಸಿರಾಜ್ ಚೌನಪಟ್ಟಿ (34) ಮತ್ತು ಆತನ ಪತ್ನಿ ಚಂದ್ರಾ (31) ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಬಿದ್ದ ದಂಪತಿ. ದಂಪತಿ ಟಾಲಿವುಡ್ ಸಹ ನಟಿಯರನ್ನು ಅಮೆರಿಕಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ಅಮೆರಿಕಾದಲ್ಲಿ ನಡೆಯುವ ಭಾರತೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸ್ಥಳೀಯ ಜಾಹಿರಾತುಗಳಲ್ಲಿ ನಿಮ್ಮ ಕಲೆಯನ್ನು ಪ್ರದರ್ಶಿಸುತ್ತೇವೆ ಅಂತಾ ಹೇಳಿ ಅವರನ್ನು ಈ ದಂಧೆಗೆ ದೂಡುತ್ತಿದ್ದರು.

    ಚಿಕಾಗೋ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಿ ದಂಪತಿ ವಿರುದ್ಧ 42 ಪುಟಗಳ ದೂರು ದಾಖಲಾಗಿದೆ. ದಂಪತಿ ಅಡ್ಡಕ್ಕೆ ಬರುವ ಒಬ್ಬ ವ್ಯಕ್ತಿಯಿಂದ 3 ಸಾವಿರ ಡಾಲರ್ (ಅಂದಾಜು 2 ಲಕ್ಷ ರೂ.) ಪಡೆಯುತ್ತಿದ್ರು. ತಾತ್ಕಾಲಿಕ ವೀಸಾ ಮುಖಾಂತರ ನಟಿಯರನ್ನು ಚಿಕಾಗೋ ಕರೆ ತಂದು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಡ ಹಾಕುತ್ತಿದ್ರು. ಬೆಲ್ಮಾಂಟ್ ಕ್ರಾಗಿನ್ ನಲ್ಲಿರುವ ಎರಡು ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಉಳಿಯಲು ಅವರನ್ನು ಒತ್ತಾಯಿಸಿರುವುದಾಗಿ ಪೊಲೀಸರು ತನಿಖೆಯಲ್ಲಿ ತಿಳಿದು ಬಂದಿದೆ. ಡಲ್ಲಾಸ್, ನ್ಯೂಜೆರ್ಸಿ ಮತ್ತು ವಾಷಿಂಗ್ಟನ್ ನ ಸಮಾವೇಶಗಳಲ್ಲಿ ಗ್ರಾಹಕರಿಗೆ ನಟಿಯರನ್ನು ಭೇಟಿ ಮಾಡಿಸಲು ಕರೆದೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.

    ಕಿಶನ್ ಪ್ರಮುಖ ಆರೋಪಿಯಾಗಿದ್ದು, ಟಾಲಿವುಡ್ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ಮಾಪಕನಾಗಿ ಕೆಲಸ ಮಾಡಿದ್ದಾನೆ. ಆರೋಪಿಯ ಬಂಧನದ ನಂತರ ಆತನ ಇ-ಮೇಲ್ ಬಳಸಿ ನಟಿಯನ್ನು ಸಂಪರ್ಕಿಸಿದಾಗ, “ನನಗೆ ಪೋನ್ ಮಾಡಬೇಡಿ ಮತ್ತು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಬೇಡಿ” ಎಂದು ಪೊಲೀಸರು ತಿಳಿಸಿದ್ದಾರೆ

    ಬಂಧಿತ ದಂಪತಿಯನ್ನು ಜೈಲಿನಲ್ಲಿ ಇರಿಸಲಾಗಿದೆ. ದಂಪತಿಯ ಇಬ್ಬರು ಮಕ್ಕಳನ್ನು ವರ್ಜೀನಿಯಾದ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.