Tag: Hyderabad

  • ಕ್ರಿಕೆಟ್ ದೇವರ ವಿರುದ್ಧವೂ ನಾಲಿಗೆ ಹರಿಬಿಟ್ಟ ಶ್ರೀರೆಡ್ಡಿ!

    ಕ್ರಿಕೆಟ್ ದೇವರ ವಿರುದ್ಧವೂ ನಾಲಿಗೆ ಹರಿಬಿಟ್ಟ ಶ್ರೀರೆಡ್ಡಿ!

    – ಹೈದ್ರಾಬಾದ್‍ನಲ್ಲಿ ಚಾರ್ಮಿಂಗ್ ಹುಡುಗಿ ಜೊತೆ ಸಚಿನ್ ರೊಮ್ಯಾನ್ಸ್ ಮಾಡಿದ್ರಂತೆ?

    ಹೈದರಾಬಾದ್: ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ನಡು ರಸ್ತೆಯಲ್ಲಿ ಬಟ್ಟೆಬಿಚ್ಚಿ ಪ್ರತಿಭಟನೆ ನಡೆಸಿದ್ದ ಟಾಲಿವುಡ್ ನಟಿ ಸದ್ಯ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರನ್ನು ಟಾರ್ಗೆಟ್ ಮಾಡಿ ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್‍ನಲ್ಲಿ ಶ್ರೀರೆಡ್ಡಿ ವಿವಾದಿತ ಸ್ಟೇಟಸ್ ಹಾಕಿದ್ದು, ಸಚಿನ್ ತೆಂಡೂಲ್ಕರ್ ಹೈದರಾಬಾದ್‍ಗೆ ಆಗಮಿಸಿದ ವೇಳೆ ಹುಡುಗಿ ಜೊತೆ ಸಚಿನ್ ರೊಮ್ಯಾನ್ಸ್ ಮಾಡುತ್ತಿದ್ದರು. ಅಲ್ಲದೇ ಹೈದರಾಬಾದ್‍ನಲ್ಲಿ ಹೈ ಪ್ರೊಫೈಲ್ ಹೊಂದಿರುವ ಚಾಮುಂಡೇಶ್ವರ್ ಸ್ವಾಮಿ ಅವರಿಗೆ ಮಧ್ಯವರ್ತಿಯಾಗಿದ್ದರು. ಖ್ಯಾತನಾಮ ಪಡೆದಿರುವವರು ರೊಮ್ಯಾನ್ಸ್ ಚೆನ್ನಾಗಿ ಮಾಡುತ್ತಾರೆ ಅಲ್ವಾ ಎಂದು ಪ್ರಶ್ನೆ ಮಾಡಿ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಶ್ರೀರೆಡ್ಡಿಗೆ ಸ್ಟೇಟಸ್ ಗೆ ಕಿಡಿಕಾರಿದ ನೆಟ್ಟಿಗರು ದುರುದ್ದೇಶದಿಂದ ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಸ್ಟೇಟಸ್ ಹಾಕಲಾಗುತ್ತಿದೆ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಟಾಲಿವುಡ್, ಕಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗಗಳ ಸ್ಟಾರ್ ನಟರು, ನಿರ್ದೇಶಕರು ಹಾಗೂ ಕಲಾವಿದರ ಕುರಿತು ಇಂತಹದ್ದೇ ಆರೋಪ ಮಾಡಿದ್ದ ಶ್ರೀ ರೆಡ್ಡಿ ಕೆಲ ಸಾಕ್ಷ್ಯಗಳನ್ನು ನೀಡಿದ್ದರು. ಆದರೆ ಸಚಿನ್‍ರ ಮೇಲಿನ ಆರೋಪಕ್ಕೆ ಯಾವುದೇ ರೀತಿಯ ಸಾಕ್ಷ್ಯವನ್ನು ನೀಡಿಲ್ಲ.

    ಕೆಲ ದಿನಗಳ ಹಿಂದೆಯಷ್ಟೇ ನಟ, ನಿದೇರ್ಶಕ, ನಿರ್ಮಾಪಕ, ಡಾನ್ಸ್ ಮಾಸ್ಟರ್ ರಾಘವ ಲಾರೆನ್ಸ್ ವಿರುದ್ಧವೂ ಆರೋಪ ಮಾಡಿದ್ದ ಶ್ರೀರೆಡ್ಡಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ನಿದೇರ್ಶಕ ಲಾರೆನ್ಸ್, ಹೆಣ್ಣು ಮಕ್ಕಳನ್ನು ಎಷ್ಟು ಗೌರವಿಸುತ್ತೆನೆ ಎಂಬುವುದಕ್ಕೆ ನಮ್ಮ ಅಮ್ಮನಿಗಾಗಿ ನಿರ್ಮಾಣ ಮಾಡಿರುವ ದೇವಾಲಯವೇ ಸಾಕ್ಷಿ. ಅಮ್ಮನಿಗೆ ನೀಡುವ ಗೌರವವನ್ನು ಎಲ್ಲಾ ಮಹಿಳೆಯರಿಗೂ ನೀಡುತ್ತೆನೆ ಎಂದು ಸ್ಪಷ್ಟನೆ ನೀಡಿದ್ದರು. ಉಳಿದಂತೆ ಬಿಗ್ ಸ್ಟಾರ್ ಗಳಾದ ರಾಣಾ ದಗ್ಗುಬಾಟಿ ಸಹೋದರ ಸೇರಿದಂತೆ ಹಲವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಈ ವೇಳೆ ಕೆಲ ಸಹಕಲಾವಿದರು ಕೂಡ ಶ್ರೀರೆಡ್ಡಿಗೆ ವಿರುದ್ಧ ಪ್ರತ್ಯಾರೋಪಗಳನ್ನು ಮಾಡಿದ್ದರು.

    ಶ್ರೀರೆಡ್ಡಿ ಆರೋಪಕ್ಕೆ ಚಿತ್ರರಂಗ ಮಾತ್ರವಲ್ಲವೇ ಹಲವು ಅಭಿಮಾನಿಗಳು ಶಾಕ್‍ಗೆ ಒಳಗಾಗಿದ್ದು, ಇದುವರೆಗೂ ಶ್ರೀರೆಡ್ಡಿ ತನ್ನ ಆರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಸಚಿನ್ ಕೂಡ ಈ ಕುರಿತು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಅದರೆ ಸದ್ಯ ಶ್ರೀರೆಡ್ಡಿ ಸದ್ಯ ತೆಂಡೂಲ್ಕರ್ ವಿರುದ್ಧ ಆರೋಪ ಮಾಡಿ ಸಚಿನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನಗೆ ಮಕ್ಕಳು ಬೇಕೆಂದು ಅನಿಸುತ್ತಿದೆ, ಆದ್ರೆ ನಾಗಚೈತನ್ಯ ರೆಡಿಯಿಲ್ಲ: ಸಮಂತಾ

    ನನಗೆ ಮಕ್ಕಳು ಬೇಕೆಂದು ಅನಿಸುತ್ತಿದೆ, ಆದ್ರೆ ನಾಗಚೈತನ್ಯ ರೆಡಿಯಿಲ್ಲ: ಸಮಂತಾ

    ಹೈದರಾಬಾದ್: ಟಾಲಿವುಡ್ ಕ್ಯೂಟ್ ಕಪಲ್ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾಗಿ ಒಂದು ವರ್ಷ ಆಗುತ್ತಿದೆ. ಈಗ ನನಗೆ ಮಗು ಬೇಕೆಂದು ಅನಿಸುತ್ತಿದೆ ಎಂದು ಸಮಂತಾ ತಾಯಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಸಮಂತಾ ತನಗೆ ಮಕ್ಕಳು ಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ತಾಯಿ ಆಗುವುದ್ದಕ್ಕೆ ತಯಾರಿದ್ದೀನಿ ಆದರೆ ಅದು ಈಗ ಆಗಲ್ಲ ಎಂದು ಹೇಳಿದ್ದರು. ನಂತರ ನನಗೆ ಮಕ್ಕಳು ಬೇಕೆಂದು ಅನಿಸುತ್ತಿದೆ, ಆದರೆ ನಾಗಚೈತನ್ಯ ರೆಡಿಯಿಲ್ಲ ಎಂಬ ಕಾರಣವನ್ನು ತಿಳಿಸಿದ್ದರು.

    ನನಗೆ ತಾಯಿ ಆಗುವ ಆಸೆ ಇದೆ. ಆದರೆ ನಾಗಚೈತನ್ಯ ಅವರ ಪ್ಲಾನ್ ಬೇರೆಯೇ ಇದೆ. ಸದ್ಯಕ್ಕೆ ನಾವು ಮಕ್ಕಳು ಬೇಡವೆಂದು ನಿರ್ಧಾರ ಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ನಾನು ನಾಗಚೈತನ್ಯ ಮೇಲೆ ಒತ್ತಡ ಹೇರುವುದು ಸರಿ ಅಲ್ಲ. ಅವರು ಯಾವಾಗ ರೆಡಿ ಎಂದು ಹೇಳುತ್ತಾರೋ ಆಗಲೇ ನಾನು ಕೂಡ ರೆಡಿ ಎಂದರು.

    ಸಮಂತಾ ಹಾಗೂ ನಾಗಚೈತನ್ಯ ಅವರ ಸಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಯಾವಾಗಲ್ಲೂ ನಾಗರ್ಜುನ ಅವರು ತಾತ ಆಗುವುದು ಯಾವಾಗ ಎಂದು ಕೇಳುತ್ತಿರುತ್ತಾರೆ. ಆದರೆ ಈಗ ಸಮಂತಾ ಮಾತು ಕೇಳಿದ ಮೇಲೆ ಅಭಿಮಾನಿಗಳಿಗೆ ಬೇಸರವಾಗಿರಬಹುದು. ಆದರೆ ಸಮಂತಾ ಆದಷ್ಟೂ ಬೇಗ ಸಿಹಿ ಸುದ್ದಿ ನೀಡುತ್ತೀವಿ ಎಂದು ಅಭಿಮಾನಿಗಳಿಗೆ ಸುಳಿವು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಿನ್ತಾ ಇರೋವಾಗ ಡ್ಯಾಡಿ ಕಾದ ಕಬ್ಬಿಣದ ಸೌಟಿನಿಂದ ಹೊಡೆದ್ರು- 4ರ ಹೆಣ್ಣು ಮಗು ಕಣ್ಣೀರು!

    ತಿನ್ತಾ ಇರೋವಾಗ ಡ್ಯಾಡಿ ಕಾದ ಕಬ್ಬಿಣದ ಸೌಟಿನಿಂದ ಹೊಡೆದ್ರು- 4ರ ಹೆಣ್ಣು ಮಗು ಕಣ್ಣೀರು!

    ಹೈದರಾಬಾದ್: ತಾಯಿ ಹಾಗೂ ಆಕೆಯ ಲವ್ವರ್ ಸೇರಿಕೊಂಡು 4 ವರ್ಷದ ಪುಟ್ಟ ಕಂದಮ್ಮನಿಗೆ ಬಿಸಿಯಾದ ಕಬ್ಬಿಣದ ಸೌಟಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಘಟನೆಯ ಬಳಿಕ ಇದೀಗ ಕಂದಮ್ಮನನ್ನು ಎನ್‍ಜಿಒ ಕಾರ್ಯಕರ್ತರು ರಕ್ಷಿಸಿದ್ದಾರೆ. ಬಳಿಕ ಪುಟ್ಟ ಕಂದಮ್ಮ ನಡೆದ ಘಟನೆಯನ್ನು ವಿವರಿಸಿದ್ದಾಳೆ. `ನಾನು ತಿನ್ನುತ್ತಾ ಇರೋವಾಗ ಡ್ಯಾಡಿ ಬಂದು ನಂಗೆ ಹೊಡೆದ್ರು. ಅಲ್ಲದೇ ನಂತರ ಕಾದ ಕಬ್ಬಿಣದ ಸೌಟಿನಿಂದ ನನ್ನ ಹಿಂಬದಿಗೆ ಒತ್ತಿ ಇಟ್ಟರು. ಅಲ್ಲದೇ ಅಮ್ಮನೂ ಚುಚ್ಚಿದ್ದಾಳೆ ಅಂತ ಜೋರಾಗಿ ಅಳುತ್ತಾ ಕಾರ್ಯಕರ್ತರಲ್ಲಿ ತನ್ನ ದುಃಖ ತೋಡಿಕೊಂಡಿದ್ದಾಳೆ.

    ತಂದೆಯ ಕೃತ್ಯದಿಂದ ಕಂದಮ್ಮ ಜೋರಾಗಿ ಕಿರುಚಾಡಿಕೊಂಡಿದ್ದನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳೀಯ ರಾಜಕಾರಣಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ತಕ್ಷಣವೇ ಎನ್‍ಜಿಓಗೆ ಮಾಹಿತಿ ರವಾನಿಸಿದ್ದು, ಸದ್ಯ ಹೆಣ್ಣು ಮಗುವನ್ನು ರಕ್ಷಿಸಲಾಗಿದೆ ಅಂತ ಕಾರ್ಯಕರ್ತ ಅಚ್ಯುತ್ ರಾವ್ ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ತಾಯಿ ಹಾಗೂ ಆಕೆಯ ಲವ್ವರ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ, 25 ವರ್ಷದ ತಾಯಿ ಈಗಾಗಲೇ ಗಂಡನನ್ನು ತೊರೆದು ಲವ್ವರ್ ಜೊತೆ ವಾಸವಾಗಿದ್ದಾಳೆ. ಆದ್ರೆ ಇತ್ತೀಚೆಗೆ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಹೀಗಾಗಿ ತಮ್ಮ ಮೇಲಿನ ಸಿಟ್ಟನ್ನು ಮಗುವಿನ ಮೇಲೆ ತೋರಿರುವುದಾಗಿ ಬಾಯ್ಬಿಟ್ಟಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2014ರಲ್ಲಿ ಮೋದಿಯನ್ನು ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ 2019ರಲ್ಲಿ ಯಾರ ಪರವೂ ಕೆಲ್ಸ ಮಾಡಲ್ಲ!

    2014ರಲ್ಲಿ ಮೋದಿಯನ್ನು ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ 2019ರಲ್ಲಿ ಯಾರ ಪರವೂ ಕೆಲ್ಸ ಮಾಡಲ್ಲ!

    ಹೈದರಾಬಾದ್: 2014ರ ಚುನಾವಣೆಯಲ್ಲಿ ಮೋದಿ ಪರ ಕೆಲಸ ಮಾಡಿದ್ದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ 2019ರ ಚುನಾವಣೆಯಲ್ಲಿ ಯಾರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

    ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್(ಐಎಸ್‍ಬಿ) ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ, 2 ವರ್ಷಗಳ ಹಿಂದೆ ನಾನು ಈ ಕ್ಷೇತ್ರವನ್ನು ತೊರೆಯಬೇಕೆಂದುಕೊಂಡಿದ್ದೆ. ತೊರೆಯುವ ಮುನ್ನ ನನ್ನ ಐಪ್ಯಾಕ್ ಸಂಸ್ಥೆಯನ್ನು ಒಬ್ಬರ ಕೈಗೆ ನೀಡುವ ಜವಾಬ್ದಾರಿ ಇತ್ತು ಎಂದು ತಿಳಿಸಿದರು.

    ರಾಜಕೀಯಕ್ಕೆ ಬರುತ್ತೀರಾ ಎನ್ನುವ ಪ್ರಶ್ನೆಗೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಗುಜರಾತ್ ಅಥವಾ ಬಿಹಾರಕ್ಕೆ ನಾನು ಹೋಗಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ ಬಿಜೆಪಿ ಪರ ಕೆಲಸ ಮಾಡುವಂತೆ ಹೇಳಿದ್ದಾರೆ. ಆದರೆ ನಾನು ಇದೂವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

    ಕಾಂಗ್ರೆಸ್, ರಾಹುಲ್ ಗಾಂಧಿ ಜೊತೆಗಿನ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ಮತ್ತು ರಾಹುಲ್ ಸ್ನೇಹಿತರು. ರಾಹುಲ್ ಗಾಂಧಿ ಅವರಿಗೆ ಅವರದ್ದೇ ಆದ ಕಲ್ಪನೆ ಮತ್ತು ದೃಷ್ಟಿಗಳಿವೆ. ಆದರೆ ಈ ಕಲ್ಪನೆಗಳು ನನಗೆ ಮನವರಿಕೆಯಾಗದ ಹಿನ್ನೆಲೆಯಲ್ಲಿ ನಾನು ಅವರ ಜೊತೆ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

    ಪ್ರಧಾನಿ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿ, 2015ರ ಮಾರ್ಚ್ ಬಳಿಕ ನಾನು ಮೋದಿ ಅವರನ್ನು ಭೇಟಿ ಮಾಡಿಲ್ಲ. ಆದರೆ ನನ್ನ ತಾಯಿ ಅನಾರೋಗ್ಯವಾಗಿದ್ದಾಗ ಮೋದಿ ಕರೆ ಮಾಡಿ ವಿಚಾರಿಸಿಕೊಂಡಿದ್ದರು ಎಂದು ತಿಳಿಸಿದರು.

     

    ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

    2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

     

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ರಾಜಸ್ಥಾನದ ಬಳಿಕ ಪೆಟ್ರೋಲ್ ತೆರಿಗೆ ಇಳಿಸಿದ ಆಂಧ್ರ ಸಿಎಂ

    ರಾಜಸ್ಥಾನದ ಬಳಿಕ ಪೆಟ್ರೋಲ್ ತೆರಿಗೆ ಇಳಿಸಿದ ಆಂಧ್ರ ಸಿಎಂ

    ಹೈದರಾಬಾದ್: ರಾಜಸ್ಥಾನ ಸರ್ಕಾರದ ಬಳಿಕ ಆಂಧ್ರಪ್ರದೇಶ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 2 ರೂ. ಖಡಿತಗೊಳಿಸಿದೆ.

    ಈ ನಿರ್ಧಾರದಿಂದ ಸರ್ಕಾರಕ್ಕೆ 1,120 ಕೋಟಿ ರೂ. ಅಧಿಕ ಹೊರೆ ಆಗಲಿದ್ದು, ಸಿಎಂ ಚಂದ್ರಬಾಬು ನಾಯ್ಡು ಈ ಕುರಿತು ಘೋಷಣೆ ಮಾಡಿದ್ದಾರೆ. ಸದ್ಯ ಸರ್ಕಾರ ನೀಡಿರುವ ಆದೇಶ ನಾಳೆಯಿಂದಲೇ ಜಾರಿ ಆಗಲಿದೆ.

    ರಾಜಸ್ಥಾನ ಸರ್ಕಾರ ಭಾನುವಾರವಷ್ಟೇ ಪೆಟ್ರೋಲ್ ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಶೇ.4 ರಷ್ಟು ಇಳಿಕೆ ಮಾಡಿತ್ತು. ಇದರಿಂದ ಶೇ.30 ರಷ್ಟಿದ್ದ ಪೆಟ್ರೋಲ್ ಮೇಲಿನ ವ್ಯಾಟ್ ಶೇ.26ಕ್ಕೆ ಇಳಿಕೆಯಾಗಿತ್ತು. ಇತ್ತ ಡೀಸೆಲ್ ಮೇಲಿನ ಶೇ.22 ವ್ಯಾಟ್ ಶೇ. 18 ಇಳಿಕೆಯಾಗಿತ್ತು.

    ಕರ್ನಾಟಕದಲ್ಲೂ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಕೆಯಾಗುವ ಸಾಧ್ಯತೆಯಿದ್ದು, ಇನ್ನು ಈ ಕುರಿತು ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡದೆ ಇದ್ದರೂ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಿಎಂ ಕುಮಾರಸ್ವಾಮಿ ದೆಹಲಿಯಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ತಾನು ಗರ್ಭಿಣಿ ಅಲ್ಲ ಎಂದು ಹೇಳಲು ಟಾಪ್‍ಲೆಸ್ ಫೋಟೋ ಪೋಸ್ಟ್

    ತಾನು ಗರ್ಭಿಣಿ ಅಲ್ಲ ಎಂದು ಹೇಳಲು ಟಾಪ್‍ಲೆಸ್ ಫೋಟೋ ಪೋಸ್ಟ್

    ಹೈದರಾಬಾದ್: ನಟಿ ಸಲೋನಿ ಚೋಪ್ರಾ ತಾನು ಗರ್ಭಿಣಿ ಅಲ್ಲ ಎಂದು ಸಾಬೀತುಪಡಿಸಲು ತನ್ನ ಟಾಪ್‍ಲೆಸ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ಸಲೋನಿ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ತಮ್ಮ ಅರೆನಗ್ನ ಫೋಟೋಗಳನ್ನ ಹಾಕಿ ಎಲ್ಲರನ್ನ ಅಚ್ಚರಿಗೊಳಿಸಿದ್ದಾರೆ. ಸದ್ಯಕ್ಕೆ ಸಲೋನಿ ಬೆಲ್ಜಿಯಂ ಪ್ರವಾಸದಲ್ಲಿದ್ದಾರೆ.

    ಸಲೋನಿ ಚೋಪ್ರಾ ಅವರು ಗರ್ಭಿಣಿ ಎಂದು ಚರ್ಚೆಯಾಗಿಲ್ಲ. ಆದರೆ ವೈಯಕ್ತಿಕವಾಗಿ ಸುದ್ದಿಯಾಗಿರಬಹುದು. ಆದ್ದರಿಂದ ಟಾಪ್ ಲೆಸ್ ಫೋಟೋವನ್ನ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕುವ ಮೂಲಕ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    “ನಾನು ಗರ್ಭಿಣಿ ಅಲ್ಲ. ನಾನು ಗರ್ಭಿಣಿ ಎಂಬ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಇದು ನನ್ನ ವೈಯಕ್ತಿಕ ವಿಚಾರವಾಗಿದೆ. ಎಲ್ಲಾ ಹುಡುಗಿಯರು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಫ್ಲಾಟ್ ಹೊಟ್ಟೆ ಇರುತ್ತದೆ. ಇನ್ನು ಕೆಲವರಿಗೆ ದಪ್ಪ ಹೊಟ್ಟೆ ಇರುತ್ತದೆ. ಅದೇ ರೀತಿ ಎಲ್ಲ ಹುಡುಗರಿಗೂ ಸಿಕ್ಸ್ ಪ್ಯಾಕ್ ಇರುವುದಿಲ್ಲ. ಎಲ್ಲ ಹುಡುಗಿಯರ ಕೂದಲು ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ಎಲ್ಲ ಹುಡುಗಿಯರು ಆರೋಗ್ಯವಾಗಿ ಇರುವುದಿಲ್ಲ. ಆದರೆ ಎಲ್ಲ ಹುಡುಗಿಯರು ಸುಂದರವಾಗಿರುತ್ತಾರೆ” ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bna_jSClr2k/?hl=en&taken-by=redheadwayfarer

  • ಹೆಲ್ಮೆಟ್ ಹಾಕ್ಕೊಂಡು ಚಿಕಿತ್ಸೆ ನೀಡಿದ ವೈದ್ಯರು!

    ಹೆಲ್ಮೆಟ್ ಹಾಕ್ಕೊಂಡು ಚಿಕಿತ್ಸೆ ನೀಡಿದ ವೈದ್ಯರು!

    ಹೈದರಾಬಾದ್: ನಗರದ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹೆಲ್ಮೆಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

    ತೆಲಂಗಾಣದ ಅತ್ಯಂತ ದೊಡ್ಡ ಹಾಗೂ ಹಳೆಯ ಆಸ್ಪತ್ರೆ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದೆ. ಹೀಗಾಗಿ ಅಲ್ಲಿನ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ನಿತ್ಯವೂ ಪ್ರಾಣಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಓಸ್ಮಾನಿಯಾ ಆಸ್ಪತ್ರೆ 100 ವರ್ಷಗಳಷ್ಟು ಹಳೆಯದಾಗಿದ್ದು, ಕಟ್ಟಡವು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲವು ಕಡೆ ಮೇಲಿಂದ ಸಿಮೆಂಟ್ ಉದುರುತ್ತಿದ್ದು, ಸುಮಾರು 5 ಜನ ವೈದ್ಯರು ಗಾಯಗೊಂಡಿದ್ದಾರೆ ಎಂದು ವೈದ್ಯರು ದೂರಿದ್ದಾರೆ.

    ಪ್ರತಿದಿನವೂ ಬೆಳಗ್ಗೆ ಒಂದು ಗಂಟೆ ಹೆಲ್ಮೆಟ್ ಹಾಕಿಕೊಂಡು, ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರೋಗಿಗಳನ್ನು ಮಾತ್ರ ಹಾಸಿಗೆ ಮೇಲೆ ಹಾಗೇ ಬಿಡಲಾಗಿದೆ.

    ಕಟ್ಟಡ ಬದಲಾಯಿಸಿ ಎಂದು ಒತ್ತಾಯಿಸಿ ಆಸ್ಪತ್ರೆಯ ವೈದ್ಯರು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರತಿಭಟನೆ ಮಾಡಿದ್ದರು. ಆಗ ತೆಲಂಗಾಣದ ಆರೋಗ್ಯ ಸಚಿವ ಲಕ್ಷ್ಮ ರೆಡ್ಡಿ ಬೇಡಿಕೆಗೆ ಸ್ಪಂದಿಸಿ, ಆಸ್ಪತ್ರೆಯ ದುರಸ್ತಿಯ ಭರವಸೆ ನೀಡಿದ್ದರು.

    ಕಟ್ಟಡವು ಅಸುರಕ್ಷಿತವಾಗಿದೆ ಎಂದು ಹೈದರಾಬಾದ್ ನಾಗರಿಕ ಸಂಸ್ಥೆ ಘೋಷಿಸಿದೆ. ಇನ್ನು ತೆಲಂಗಾಣ ರಾಜ್ಯ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯು ಆಸ್ಪತ್ರೆಯ ಎರಡು ಮಹಡಿಗಳು ಅಸುರಕ್ಷಿತವಾಗಿವೆ ಎಂದು ತಿಳಿಸಿದೆ. ಆದರೂ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ.

    2015ರಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಯನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕೆಲವು ವಾಸ್ತು ಶಿಲ್ಪಿಗಳು ಹಾಗೂ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕಾಮಗಾರಿ ಹಾಗೆ ಉಳಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಹುಲ್ ಗಾಂಧಿ ದೇಶದ `ದೊಡ್ಡ ಬಫೂನ್’-ಕೆಸಿಆರ್

    ರಾಹುಲ್ ಗಾಂಧಿ ದೇಶದ `ದೊಡ್ಡ ಬಫೂನ್’-ಕೆಸಿಆರ್

    – 105 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಚುನಾವಣೆಗೆ ರಣಕಹಳೆ

    ಹೈದರಾಬಾದ್: ಸರ್ಕಾರದ ಅವಧಿ 8 ತಿಂಗಳು ಬಾಕಿ ಇರುವಂತೆ ವಿಧಾನಸಭೆ ವಿಸರ್ಜನೆ ಮಾಡಿ ಅಚ್ಚರಿ ಮೂಡಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರರಾವ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ದೊಡ್ಡ ಬಫೂನ್ ಎಂದು ಲೇವಡಿ ಮಾಡಿದ್ದಾರೆ.

    ವಿಧಾನಸಭೆ ವಿಸರ್ಜನೆ ಬಳಿಕ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಸಿಆರ್, ನಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಇದೇ ವೇಳೆ ಪತ್ರಕರ್ತರು ರಾಹುಲ್ ಗಾಂಧಿ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಸಿಆರ್, ರಾಹುಲ್ ದೇಶದಲ್ಲಿ ದೊಡ್ಡ ಬಫೂನ್. ದೇಶವೇ ರಾಹುಲ್ ಗಾಂಧಿ ಸಂಸತ್‍ನಲ್ಲಿ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡು, ಕಣ್ಣು ಹೊಡೆದಿದ್ದನ್ನು ನೋಡಿದೆ ಎಂದರು. ಅಲ್ಲದೇ ರಾಹುಲ್ ತೆಲಂಗಾಣದಲ್ಲಿ ಪ್ರಚಾರ ಮಾಡಿದರೆ ಪ್ರಭಾವ ಉಂಟಾಗುತ್ತಾ ಎಂಬ ಪ್ರಶ್ನೆಗೆ, ಅವರು ನಮಗೆ ಒಂದು ಶಕ್ತಿ ಇದ್ದ ಹಾಗೇ. ರಾಹುಲ್ ಪ್ರಚಾರಕ್ಕಾಗಿ ತೆಲಂಗಾಣಗೆ ಆಗಮಿಸಿದರೆ ನಾವು ಇನ್ನು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವ್ಯಂಗ್ಯದ ಉತ್ತರ ನೀಡಿದರು. ಇದನ್ನು ಓದಿ:  ತೆಲಂಗಾಣ ವಿಧಾನಸಭೆ ವಿಸರ್ಜನೆ- ಗುರುವಾರದಂದೇ ವಿಸರ್ಜಿಸಿದ್ದು ಯಾಕೆ?

    ತೆಲಂಗಾಣ ಜನರು ದೆಹಲಿಯಲ್ಲಿ ಗುಲಾಮರಾಗಲು ಬಯಸುವುದಿಲ್ಲ. ನಮ್ಮ ನಿರ್ಧಾರದಿಂದ ಕಾಂಗ್ರೆಸ್‍ಗೆ ಈಗಾಗಲೇ ಭಯವಾಗಿದ್ದು, ತೆಲಂಗಾಣಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಇಲ್ಲಿಯೇ ತೆಗೆದುಕೊಳ್ಳುತ್ತೇವೆ ಎಂದರು. ಪತ್ರಿಕಾಗೋಷ್ಟಿಯಲ್ಲೇ ಪಕ್ಷದ ಮುಂದಿನ ಚುನಾವಣೆಯ 105 ಅಭ್ಯರ್ಥಿಗಳ ಬಿಡುಗಡೆಗೊಳಿಸಿದ ಕೆಸಿಆರ್, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ `ಪ್ರಜಲ ಅರ್ಶೀವಾದ ಸಭಾ’ ಹೆಸರಿನಲ್ಲಿ 100 ಹೆಚ್ಚು ಸಮಾವೇಶಗಳನ್ನು ನಡೆಸುವುದಾಗಿ ತಿಳಿಸಿದರು.

    ತೆಲಂಗಾಣ ವಿಧಾನಸಭೆಯಲ್ಲಿ 119 ಸ್ಥಾನಗಳಿದ್ದು, ಈ ಹಿಂದಿನ ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷ 63 ಸ್ಥಾನಗಳಿಸಿತ್ತು. ಕಾಂಗ್ರೆಸ್ 21, ಟಿಡಿಪಿ 15, ವೈಎಸ್‍ಆರ್ ಕಾಂಗ್ರೆಸ್ 3, ಬಿಜೆಪಿ 7, ಓವೈಸಿ ಅವರ ಎಐಎಂಐಎಂ ಪಕ್ಷ 5 ಸ್ಥಾನ ಪಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೆಲಂಗಾಣ ವಿಧಾನಸಭೆ ವಿಸರ್ಜನೆ- ಗುರುವಾರದಂದೇ ವಿಸರ್ಜಿಸಿದ್ದು ಯಾಕೆ?

    ತೆಲಂಗಾಣ ವಿಧಾನಸಭೆ ವಿಸರ್ಜನೆ- ಗುರುವಾರದಂದೇ ವಿಸರ್ಜಿಸಿದ್ದು ಯಾಕೆ?

    ಹೈದರಾಬಾದ್: ತೆಲಂಗಾಣ ರಾಜ್ಯದ ಸಿಎಂ ಕೆ ಚಂದ್ರಶೇಖರ್ ರಾವ್ ಗುರುವಾರ ಸಚಿವ ಸಂಪುಟ ಸಭೆ ನಡೆಸಿ ವಿಧಾನಸಭೆ ವಿಸರ್ಜನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.

    ವಿಧಾನಸಭೆ ವಿಸರ್ಜನೆ ಹಿನ್ನೆಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ, ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಕಳೆದ 5 ದಿನಗಳಲ್ಲಿ 2 ಬಾರಿ ಸಂಪುಟ ಸಭೆ ನಡೆಸಲಾಗಿದ್ದು, ಬಳಿಕ ವಿಧಾನಸಭೆ ವಿಸರ್ಜನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಪೂರ್ವಭಾವಿ ಚುನಾವಣೆ ನಡೆಸುವ ಕುರಿತು ಹಲವು ವರದಿಗಳು ಕೇಳಿಬಂದಿತ್ತು. ಸದ್ಯ ತೆಲಂಗಾಣ ರಾಜಭವನ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

    ಆಂಧ್ರಪ್ರದೇಶ ವಿಭಜನೆ ಬಳಿಕ ದೇಶದ 29 ರಾಜ್ಯವಾಗಿ ಉದಯವಾದ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಅಧಿಕಾರ ಪಡೆದಿತ್ತು. ಆದರೆ ಸರ್ಕಾರಕ್ಕೆ ಇನ್ನು 8 ತಿಂಗಳ 26 ದಿನಗಳ ಅಧಿಕಾರದ ಅವಧಿ ಬಾಕಿ ಇದ್ದು, ಅವಧಿ ಮುನ್ನವೇ ವಿಧಾನಸಭೆ ವಿಸರ್ಜನೆ ಮಾಡಲಾಗಿದೆ. ರಾಜ್ಯದಲ್ಲಿ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಪಕ್ಷದ ಪರ ಜನಾಭಿಪ್ರಾಯವಿದ್ದು, ಇದರ ಲಾಭ ಪಡೆಯಲು ಸಿಎಂ ಕೆಸಿಆರ್ ಈ ತೀರ್ಮಾನ ಕೈಗೊಂಡಿದ್ದಾರೆ.

    ಇಂದೇ ಏಕೆ?
    ಸಿಎಂ ಕೆಸಿಆರ್ ಹೆಚ್ಚು ಸಂಖ್ಯಾ ಶಾಸ್ತ್ರ ನಂಬುತ್ತಾರೆ ಎನ್ನಲಾಗಿದ್ದು, `6′ ಕೆಸಿಆರ್ ಅದೃಷ್ಟ ಸಂಖ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದೇ ವಿಧಾನಸಭೆ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ. ವಿಧಾನಸಭೆ ವಿಸರ್ಜನೆ ಬಳಿಕ ಕೆಸಿಆರ್ ಅವರೇ ಹೊಸ ಸರ್ಕಾರ ರಚನೆಯಾಗುವ ವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ.

    ತೆಲಂಗಾಣ ವಿಧಾನಸಭೆಯಲ್ಲಿ 119 ಸ್ಥಾನಗಳಿದ್ದು, ಈ ಹಿಂದಿನ ಚುನಾವಣೆಯಲ್ಲಿ ಟಿಆರ್‍ಎಸ್ ಪಕ್ಷ 63 ಸ್ಥಾನಗಳಿಸಿತ್ತು. ಕಾಂಗ್ರೆಸ್ 21, ಟಿಡಿಪಿ 15, ವೈಎಸ್‍ಆರ್ ಕಾಂಗ್ರೆಸ್ 3, ಬಿಜೆಪಿ 7, ಓವೈಸಿ ಅವರ ಎಐಎಂಐಎಂ ಪಕ್ಷ 5 ಸ್ಥಾನ ಪಡೆದಿತ್ತು.

    ವಿಧಾನಸಭೆ ವಿಸರ್ಜನೆ ಬಳಿಕ ಕೇಂದ್ರ ಚುನಾವಣಾ ಆಯೋಗ ತೆಲಂಗಾಣದಲ್ಲಿ ಯಾವಾಗ ಚುನಾವಣೆ ನಡೆಸಬೇಕು ಎನ್ನುವುದನ್ನು ನಿರ್ಧಾರ ಮಾಡಲಿದೆ. ಮುಂದಿನ ಡಿಸೆಂಬರ್ ನಲ್ಲಿ ದೇಶದ 3 ರಾಜ್ಯಗಳಿಗೆ (ರಾಜಸ್ಥಾನ, ಚತ್ತೀಸ್‍ಘಡ, ಮಧ್ಯಪ್ರದೇಶ) ವಿಧಾನಸಭೆ ಚುನಾವಣೆ ಇದ್ದು, ಈ ವೇಳೆಯೇ ಚುನಾವಣೆ ನಡೆಸುವ ಸಾಧ್ಯತೆ ಇದೆ.

    ಕಾಂಗ್ರೆಸ್ ಪ್ರತಿಸ್ಪರ್ಧಿ:
    ಕೆಸಿಆರ್ ಅವರ ಈ ನಿರ್ಧಾರ ಅಚ್ಚರಿ ಉಂಟುಮಾಡಿದ್ದು, ಈ ತೀರ್ಮಾನದ ಹಿಂದೆ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ತೆಲಂಗಾಣದಲ್ಲಿ ಟಿಆರ್‍ಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಪ್ರಬಲ ವಿರೋಧಿ ಪಕ್ಷವಾಗಿದ್ದು, ಅದ್ದರಿಂದಲೇ ರಾಷ್ಟ್ರಮಟ್ಟದ ತೃತೀಯ ರಂಗದಲ್ಲಿ ಕೆಸಿಆರ್ ಗುರುತಿಸಿಕೊಂಡಿರಲಿಲ್ಲ. ಇನ್ನು ಕಳೆದ ಕೆಲ ದಿನಗಳ ಹಿಂದೆ ಕೆಸಿಆರ್ ಅವರು ಪ್ರಧಾನಿ ಮೋದಿರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ವಿಧಾನಸಭೆ ವಿಸರ್ಜನೆ ಹಿಂದಿನ ಉದ್ದೇಶದ ಕುರಿತು ಕೆಸಿಆರ್ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

  • ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ

    ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ

    ಹೈದರಾಬಾದ್: ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ತಾವು ಪ್ರೀತಿಸೋ ಆರಾಧಿಸುವ ಸ್ಟಾರ್ ಗಳನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದರೆ ಪವನ್‍ ಕಲ್ಯಾಣ್‍ರನ್ನು ಭೇಟಿ ಮಾಡೋಕೆ ಸಾಧ್ಯವಾಗದ ಕಾರಣ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅನಿಲ್‍ಕುಮಾರ್ ನಟ ಪವನ್‍ಕಲ್ಯಾಣ್ ಅವರ ಅಪ್ಪಟ ಅಭಿಮಾನಿ. ಅನಿಲ್ ಕುಮಾರ್ ಒಮ್ಮೆಯಾದರೂ ತನ್ನ ನೆಚ್ಚಿನ ನಟ ಪವನ್ ಕಲ್ಯಾಣ್ ಅವರನ್ನು ನೇರವಾಗಿ ಭೇಟಿ ಆಗಬೇಕೆಂದು ಆಸೆಯನ್ನು ಹೊಂದಿದ್ದ. ಸಾಕಷ್ಟು ಬಾರಿ ಭೇಟಿ ಮಾಡಲಿಕ್ಕೆ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.

    ಹೀಗಾಗಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಅಂತಿಮ ಸಂಸ್ಕಾರಕ್ಕೆ ಪವನ್‍ಕಲ್ಯಾಣ್ ಬರಬೇಕೆಂದು ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾನೆ. ಸದ್ಯ ಈ ಬಗ್ಗೆ ಸತ್ಯನಾರಾಯಣಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv