Tag: Hyderabad

  • ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯ ಪುಟ್ಟ ಕಂದಮ್ಮನ ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್ರು!

    ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯ ಪುಟ್ಟ ಕಂದಮ್ಮನ ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್ರು!

    ಹೈದರಾಬಾದ್: ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರ ಮಗುವನ್ನು ಪರೀಕ್ಷಾ ಕೇಂದ್ರದಲ್ಲಿದ್ದ ಪೊಲೀಸ್ ಸಿಬ್ಬಂದಿ ಆರೈಕೆ ಮಾಡಿ ಮಾನವೀಯತೆ ಮೆರೆದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.

    ರಾಜ್ಯ ಸರ್ಕಾರ ನಡೆಸಿದ್ದ ಪರೀಕ್ಷೆಗೆ ಬರೆಯಲು ಹೈದರಾಬಾದ್‍ನ ಮಹಾಂಕಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಕ್ಕೆ ಮಹಿಳೆ ಆಗಮಿಸಿದ್ದರು. ಅಲ್ಲದೇ ತಮ್ಮೊಂದಿಗೆ ಸಹೋದರಿಯನ್ನು ಕರೆತಂದಿದ್ದ ಅವರು ಮಗುವನ್ನು ಆಕೆಯ ಕೈಗೆ ನೀಡಿ ಪರೀಕ್ಷೆ ಬರೆಯಲು ತೆರಳಿದ್ದರು. ಆದರೆ ಈ ವೇಳೆ ಒಂದೇ ಸಮನೆ ಮಗು ಅಳಲು ಆರಂಭಿಸಿದನ್ನು ಕಂಡ ಪೊಲೀಸರು ತಕ್ಷಣ ಮಗುವಿಗೆ ಬಾಟಲ್ ನಲ್ಲಿ ಹಾಲು ನೀಡಿ ಆರೈಕೆ ಮಾಡಿದ್ದಾರೆ.

    ಪೊಲೀಸರ ಈ ಮಾನವೀಯ ನಡೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹದ್ದೇ ಘಟನೆ ಕೆಲ ದಿನಗಳ ಹಿಂದೆ ತೆಲಂಗಾಣದ ಮೆಹಬೂಬ್ ನಗರ ವ್ಯಾಪ್ತಿಯಲ್ಲಿ ನಡೆದಿತ್ತು. ಈ ವೇಳೆಯೂ ತಾಯಿಯಿಂದ ಮಗುವನ್ನು ಪಡೆದ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಮುಕ್ತಾಯ ಆಗುವವರೆಗೂ ಆರೈಕೆ ಮಾಡಿದ್ದರು.

    ಆಧುನಿಕ ಸಮಾಜದಲ್ಲಿ ಯುವತಿಯರು ಉನ್ನತ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿತ್ತಿದ್ದಾರೆ. ಆದರೆ ಕಾಲ ಬದಲಾದಂತೆ ಮದುವೆಯಾದ ಬಳಿಕವೂ ತಮ್ಮ ಈ ಸಾಧನೆಯನ್ನು ಮುಂದುವರಿಸಿದ್ದಾರೆ. ಇಂತಹ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುತ್ತಿರುವ ಪೊಲೀಸರ ಕಾರ್ಯ ಮೆಚ್ಚುವಂತಹದ್ದು ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    https://twitter.com/_Manish_pal/status/1049181854153158656?

  • ಚಲಿಸುತ್ತಿದ್ದ ರೈಲಿನಿಂದ ಜಿಗಿದ ನಿ.ನ್ಯಾಯಾಧೀಶ- ಪತಿಯ ಸಾವು ಕೇಳಿ ಪತ್ನಿ ಆತ್ಮಹತ್ಯೆ

    ಚಲಿಸುತ್ತಿದ್ದ ರೈಲಿನಿಂದ ಜಿಗಿದ ನಿ.ನ್ಯಾಯಾಧೀಶ- ಪತಿಯ ಸಾವು ಕೇಳಿ ಪತ್ನಿ ಆತ್ಮಹತ್ಯೆ

    ಹೈದರಾಬಾದ್: ಆಂಧ್ರ ಪ್ರದೇಶದ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ಕೂಡ ಅದೇ ರೈಲು ಮಾರ್ಗದಲ್ಲಿ ಬರುತ್ತಿದ್ದ ಟ್ರೈನ್ ಮುಂದೆ ಜಿಗಿದು ಸಾವನ್ನಪ್ಪಿದ್ದಾರೆ.

    ತಿರುಪತಿ ನಿವಾಸಿಯಾಗಿದ್ದ ಪಿ. ಸುಧಾಕರ್ (65) ಹಾಗೂ ವರಲಕ್ಷ್ಮಿ (56) ಆತ್ಮಹತ್ಯೆ ಶರಣಾದವರು. ಸುಧಾಕರ್ ಅವರ ಮೃತದೇಹವು ತಿರುಪತಿ- ರೆನಿಗುಂಟ ರೈಲ್ವೇ ಮಾರ್ಗದ ಮಧ್ಯದಲ್ಲಿ ಪತ್ತೆಯಾಗಿದೆ.

    ಪತಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ, ಆಘಾತಕ್ಕೆ ಒಳಗಾದ ವರಲಕ್ಷ್ಮಿ ಅವರು ಕೂಡ, ಅದೇ ಸ್ಥಳದಲ್ಲಿ ಚಲಿಸುತ್ತಿದ್ದ ಮತ್ತೊಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿ. ಸುಧಾಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೇದಿಕೆ ಮೇಲೆಯೇ ಗಳಗಳನೇ ಅತ್ತ ಜೂ. ಎನ್‍ಟಿಆರ್

    ವೇದಿಕೆ ಮೇಲೆಯೇ ಗಳಗಳನೇ ಅತ್ತ ಜೂ. ಎನ್‍ಟಿಆರ್

    ಹೈದರಾಬಾದ್: ಕೆಲವು ದಿನಗಳ ಹಿಂದೆಯಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ತನ್ನ ತಂದೆ ನಟ ಹರಿಕೃಷ್ಣ ಅವರನ್ನು ನೆನೆದು ನಟ ಜೂನಿಯರ್ ಎನ್‍ಟಿಆರ್ ಸಾವಿರಾರು ಜನರ ಮುಂದೆ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.

    ಜೂನಿಯರ್ ಎನ್‍ಟಿಆರ್ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ತಮ್ಮ ತಂದೆ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.

    ಎನ್‍ಟಿಆರ್ ಹೇಳಿದ್ದೇನು?
    ಚಿತ್ರಕಥೆಗಾರ ತ್ರಿವಿಕ್ರಂ ಶ್ರೀನಿವಾಸ್ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಕೆಲವು ವರ್ಷಗಳ ಕನಸು ನನ್ನದು. ನಾವಿಬ್ಬರು ತುಂಬಾ ಹತ್ತಿರದ ಸ್ನೇಹಿತರು. ಆದರು ನಾವು ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಾಗಿಲ್ಲ. ಯಾಕೆ ಒಟ್ಟಿಗೆ ಇದ್ದರು ಸಿನಿಮಾ ಮಾಡಲು ಆಗುತ್ತಿಲ್ಲ ಎಂದು ತುಂಬಾ ಬಾರಿ ಯೋಚನೆ ಮಾಡಿದ್ದೇನೆ. ಅವರ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ ನಂತರವೇ ನನ್ನ ಜೀವನದಲ್ಲಿ ದುರಂತವೊಂದು ನಡೆದಿದೆ ಎಂದು ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ‘ನಾನು ಇಲ್ಲಿವರೆಗೂ 27 ಸಿನಿಮಾಗಳನ್ನ ಮಾಡಿದ್ದೇನೆ. ಆದರೆ ನಾನು ಮಾಡಿದ ಯಾವ ಸಿನಿಮಾದಲ್ಲೂ ತಂದೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ದೃಶ್ಯ ಇರಲಿಲ್ಲ. ಆದರೆ ಈ ಸಿನಿಮಾದಲ್ಲಿ ಅಂತಹ ದೃಶ್ಯ ಇದೆ. ವಿಪರ್ಯಾಸವೆಂದರೆ ಈ ಸಿನಿಮಾದ ಚಿತ್ರೀಕರಣ ಮುಗಿದ ಬೆನ್ನಲ್ಲೇ ನಮ್ಮ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದೆ ಎಂದು ಎನ್‍ಟಿಆರ್ ಅವರು ಕಣ್ಣೀರಿಟ್ಟಿದ್ದಾರೆ.

    ಮನುಷ್ಯ ಬದುಕಿದ್ದಾಗ ಅವರ ಬೆಲೆ ನಮಗೆ ಗೊತ್ತಾಗಲ್ಲ. ಆದರೆ ಅವರು ಹೋದ ಮೇಲೆ, ನಮ್ಮ ಮಧ್ಯೆ ಇಲ್ಲವೆಂದರೆ ಅವರ ಬೆಲೆ ಗೊತ್ತಾಗುತ್ತದೆ. ನಾವು ಅಂದುಕೊಳ್ಳೋದು ಬೇರೆ ದೇವರು ಭಯಸೋದು ಬೇರೆ. ನಮ್ಮ ತಂದೆ ಯಾವಾಗಲು ಹೇಳುತ್ತಿದ್ದರು ಅಭಿಮಾನಿಗಳು ಜಾಗೃತ, ಅವರು ನಮಗಾಗಿ ತುಂಬಾ ತ್ಯಾಗ ಮಾಡುತ್ತಾರೆ. ಹೀಗಾಗಿ ಅವರನ್ನು ಜಾಗೃತೆಯಿಂದ ನೋಡಿಕೊಳ್ಳಿ ಎಂದು ಬದುಕಿದ್ದವರೆಗೂ ಹೇಳುತ್ತಲೇ ಇದ್ದರು ಅಂತ ಭಾವುಕರಾಗಿ ತ್ರಿವಿಕ್ರಂ ಅವರನ್ನು ಅಪ್ಪಿಕೊಂಡು ಅತ್ತಿದ್ದಾರೆ.

    ನಮ್ಮ ತಂದೆ ಈ ಸಿನಿಮಾ ನೋಡುವುದಕ್ಕಾದರೂ ಬದುಕಿದ್ದರೆ ಚೆನ್ನಾಗಿರುತ್ತಿತ್ತು. ಇಂದು ಅವರು ನಮ್ಮ ಮಧ್ಯೆ ಇಲ್ಲದೆ ಇದ್ದರು, ನಮ್ಮ- ನಿಮ್ಮ ಮನಸ್ಸಿನಲ್ಲಿ ಸದಾ ಇದ್ದಾರೆ. ನಮ್ಮ ತಂದೆ ಕೊಟ್ಟಿದ್ದ ಮಾತನ್ನೆ ನಿಮಗೂ ಕೊಡುತ್ತಿದ್ದೇನೆ. ನಮ್ಮ ಜೀವನವೇ ನಿಮಗೆ ಅಂಕಿತ ಎಂದು ಗಳಗಳನೇ ಅತ್ತು ವೇದಿಕೆಯಿಂದ ಹೋಗಿದ್ದಾರೆ. ಬಳಿಕ ವಾಪಸ್ ಬಂದು ನನ್ನ ತಂದೆಗೆ ನಾನು ಹೇಳುವುದಕ್ಕೆ ಆಗಲಿಲ್ಲ. ನಿಮಗೆ ಹೇಳುತ್ತಿದ್ದೇನೆ, ಜಾಗೃತೆಯಿಂದ ಮನೆಗೆ ಹೋಗಿ. ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ. ಆದ್ದರಿಂದ ಜಾಗೃತರಾಗಿ ಹೋಗಿ. ಏಕೆಂದರೆ ನೀವು ನಡು ರಸ್ತೆಯಲ್ಲಿ ನಿಂತಾಗ ಮೊದಲು ಬರುವುದು ನಿಮ್ಮ ಕುಟುಂಬ ಆನಂತರ ನಾವು ಎಂದು ಹೇಳಿ ಕಣ್ಣೀರು ಹಾಕುತ್ತಾ ಹೊರಟರು.

    ಜ್ಯೂನಿಯರ್ ಎನ್‍ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ ಅವರು ಕಳೆದ ಆಗಸ್ಟ್ 29 ರಂದು ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ನಗರದ ಸರ್ಕಾರಿ ಆಸ್ಪತ್ರೆಯ ಬಾತ್ ರೂಂನಲ್ಲಿ ಆಗ ತಾನೇ ಜನಿಸಿದ ಕಂದಮ್ಮನನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಇಟ್ಟಿರುವುದು ಬೆಳಕಿಗೆ ಬಂದಿದೆ.

    ಇಡೀ ರಾತ್ರಿ ಆ ಪ್ಲಾಸ್ಟಿಕ್ ಬ್ಯಾಗ್‍ನಲ್ಲೇ ಕಳೆದಿದ್ದ ಆ ಶಿಶುವನ್ನು ಬೆಳಗ್ಗೆ ಸಿಬ್ಬಂದಿ ಕಂಡ ತಕ್ಷಣವೇ ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ಚಿಕಿತ್ಸೆ ಕೊಡಿಸಿದ್ರೂ ಮಗುವನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.

    ಗಂಡುಶಿಶುವಿಗೆ ಜನ್ಮ ನೀಡಿದ ಮಹಿಳೆ ಭಾನುವಾರ ಸಂಜೆ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಕಂದಮ್ಮನನ್ನು ಸುತ್ತಿ ಆಸ್ಪತ್ರೆಯ ಬಾತ್‍ರೂಂನಲ್ಲಿ ಮಗುವನ್ನು ಇಟ್ಟು ಬಳಿ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಮುಂಜಾನೆ ವಾರ್ಡ್ ಸಿಬ್ಬಂದಿ ಕಸ ಗುಡಿಸಲು ಹೋದಾಗ ಶಿಶುವನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ವೈದ್ಯರನ್ನು ಕರೆದು ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ನಂತರ ಐಸಿಯುಗೆ ಸೇರಿಸಿದರು. ಆದ್ರೆ ಇಡೀ ರಾತ್ರಿ ಉಸಿರು ಕಟ್ಟಿದಂತಾಗಿದ್ದ ಹಸುಗೂಸು ಬದುಕುಳಿಯಲಿಲ್ಲ.

    ಸದ್ಯ ಆರೋಪಿ ತಾಯಿಗಾಗಿ ಆಸ್ಪತ್ರೆ ಹಾಗೂ ವಾರ್ಡ್‍ನ ಸುತ್ತಮುತ್ತ ಅಳವಡಿಸಿದ್ದ ಸಿಸಿ ಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಪೊದೆಯೊಂದರ ಮಧ್ಯೆ ಗಂಡು ಶಿಶು ಪತ್ತೆಯಾಗಿದ್ದು, ಮೈತುಂಬ ಇರುವೆಗಳು ಕಡಿದ ಸ್ಥಿತಿಯಲ್ಲಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಾರನೇ ದಿನ ಮಗು ಸಾವನ್ನಪ್ಪಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಬೈದಿದ್ದಕ್ಕೆ ಪತಿ ಆತ್ಮಹತ್ಯೆ – ಇತ್ತ ವಿಷ ಸೇವಿಸಿದ ಗೆಳತಿ

    ಪತ್ನಿ ಬೈದಿದ್ದಕ್ಕೆ ಪತಿ ಆತ್ಮಹತ್ಯೆ – ಇತ್ತ ವಿಷ ಸೇವಿಸಿದ ಗೆಳತಿ

    ಹೈದರಾಬಾದ್: ವ್ಯಕ್ತಿಯೊಬ್ಬ ಮೊಬೈಲಿನಲ್ಲಿ ತನ್ನ ಗೆಳತಿಯೊಡನೆ ಯಾವಾಗಲೂ ಚಾಟ್ ಮಾಡುತ್ತಿದ್ದಕ್ಕೆ ಪತ್ನಿ ಬೈದಿದ್ದಾಳೆ. ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಆತನೊಡನೆ ಚಾಟ್ ಮಾಡುತ್ತಿದ್ದ ಗೆಳತಿಯೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಸಿಕಂದರಾಬಾದ್ ನ ಈಸ್ಟ್ ಮರ್ರೆದ್ಪಲ್ಲಿ ಪ್ರದೇಶದಲ್ಲಿ ನಡೆದಿದೆ. ಕೆ. ಶಿವಕುಮಾರ್(27) ಪತ್ನಿಯ ಮಾತಿನಿಂದ ಮನನೊಂದು ನೇಣಿಗೆ ಶರಣಾದ ಪತಿ. ಈತ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಶನಿವಾರ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಏನಿದು ಪ್ರಕರಣ?
    ಮೃತ ಶಿವಕುಮಾರ್ ಗೆ ಇದೇ ವರ್ಷ ಆಗಸ್ಟ್ 15ರಂದು ಮದುವೆಯಾಗಿತ್ತು. ಆದರೆ ಪತಿ-ಪತ್ನಿ ಇಬ್ಬರು ಚಿಕ್ಕ ವಿಚಾರಗಳಿಗೂ ಸಹ ಜಗಳ ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಪತ್ನಿಗೂ ಸಮಯ ಕೊಡದೇ ಶಿವಕುಮಾರ್ ಸದಾ ವಾಟ್ಸಪ್ ನಲ್ಲಿ ಮೆಸೇಜ್ ಮಾಡುತ್ತಿದ್ದನು. ಕೆಲವು ದಿನಗಳ ಹಿಂದೆ ಪತಿ ಬೇರೊಬ್ಬ ಯುವತಿ ಜೊತೆಗೆ ಚಾಟ್ ಮಾಡುತ್ತಿದ್ದಾನೆ ಎಂದು ಪತ್ನಿಗೆ ಅನುಮಾನ ಬಂದಿದೆ. ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಪ್ರತಿ ದಿನಸ ಜಗಳ ಮಾಡಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ಶಿವಕುಮಾರ್ ಶನಿವಾರ ಮನೆಯಲ್ಲೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲೀಸರು ವಿವರಿಸಿದ್ದಾರೆ.

    ಇತ್ತ ಶಿವಕುಮಾರ್ ಬಾಲ್ಯದ ಸ್ನೇಹಿತೆ ಸಿ. ವೆನೇಲಾ (19) ತನ್ನ ಸ್ನೇಹಿತ ಮೃತಪಟ್ಟ ಸಂಗತಿ ತಿಳಿದಿದೆ. ಇದರಿಂದ ಖಿನ್ನತೆಗೆ ಒಳಗಾಗಿ ಶನಿವಾರ ತಾನು ಸಹ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾಳೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್

    ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್

    ಹೈದಾರಬಾದ್: ಮೂಸಾಪೇಟ್‍ನ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಬರೆಯಲು ಬಂದಿದ್ದ ತಾಯಿಯ ಕಂದಮ್ಮನಿಗೆ ಅಮ್ಮನಾಗಿ ಸಾಂತ್ವನ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ನಾಲ್ಕು ತಿಂಗಳ ಮಗುವಿನ ತಾಯಿ ಪರೀಕ್ಷೆ ಬರೆಯಲು ಬಂದಿರುತ್ತಾರೆ. ಆ ತಾಯಿಗೆ ತೆಲಂಗಾಣ ಪೊಲೀಸ್ ಪೇದೆ ಮಗುವನ್ನು ನೋಡಿಕೊಳ್ಳುವ ಮೂಲಕ ಸಹಾಯ ಮಾಡಿದ್ದಾರೆ. ಪರೀಕ್ಷೆ ಕೇಂದ್ರದ ಹೊರಗೆ ಅಳುತ್ತಿದ್ದ ಮಗುವಿಗೆ ಸಾಂತ್ವನ ಮಾಡಲು ಯತ್ನಿಸುತ್ತಿದ್ದ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪೊಲೀಸ್ ಪೇದೆಗೆ ಹೃತ್ಪೂರ್ವಕ ವಂದನೆಗಳು ಎಂದು ಐಪಿಎಸ್ ಅಧಿಕಾರಿ ರೆಮಾ ರಾಜೇಶ್ವರಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಪೊಲೀಸ್ ಪೇದೆ ಮುಜಿಬ್ ಉರ್ ರಹಮಾನ್ ಅವರು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಮೂಸಾಪೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ರಹಮಾನ್ ಅವರನ್ನು ಬಾಬುಸ್ ಜೂನಿಯರ್ ಕಾಲೇಜಿನಲ್ಲಿ ನಡೆಯುವ ಪರೀಕ್ಷಾ ಕೇಂದ್ರಕ್ಕೆ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.

    ಮಗುವಿನ ತಾಯಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಯೋಗ್ಯ ಕೆಲಸವಿರಲಿಲ್ಲ. ಅಷ್ಟೇ ಅಲ್ಲದೇ ಮಗುವಿನ ತಾಯಿ ಪೊಲೀಸ್ ಪೇದೆಯಾಗುವ ಆಸೆಯನ್ನು ಹೊಂದಿದ್ದಳು. ಹೀಗಾಗಿ ತಾಯಿ ಪರೀಕ್ಷೆ ಬರೆಯಲು ಬಂದಿದ್ದು, ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು. 14 ವರ್ಷದ ಹುಡುಗಿಯನ್ನು ಪರೀಕ್ಷಾ ಕೇಂದ್ರದಲ್ಲಿ ಉಸ್ತುವಾರಿಯಾಗಿ ಮಾಡಲಾಗಿತ್ತು. ಈ ವೇಳೆ ಮಗು ಅಳುತ್ತಿದ್ದದ್ದನ್ನು ಕಂಡು ಕರೆದುಕೊಂಡು ಬಂದು ನಾನು ಸಾಂತ್ವನ ಮಾಡಿದೆ ಎಂದು ರಹಮಾನ್ ಹೇಳಿದರು.

    ರಹಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಚೀನಾದಲ್ಲಿ ಮೆಡಿಕಲ್ ಓದುತ್ತಿದ್ದಾನೆ. ಮಗಳು ಮುಂದಿನ ವರ್ಷ ಶಾಲೆಯನ್ನು ಮುಗಿಸುತ್ತಿದ್ದಾರೆ.

    https://twitter.com/rama_rajeswari/status/1046456562825539585

    https://twitter.com/rama_rajeswari/status/1046298641273577472

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ – ಕಂಗನಾ ಹೇರ್ ಸ್ಟೈಲಿಸ್ಟ್ ಬಂಧನ

    ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ – ಕಂಗನಾ ಹೇರ್ ಸ್ಟೈಲಿಸ್ಟ್ ಬಂಧನ

    ಹೈದರಾಬಾದ್: 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಕೇಶ ವಿನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬ್ರ್ಯಾಂಡನ್ ಅಲಿಸ್ಟರ್ ಡಿ ಗೀ(42) ಬಂಧಿಸಿರುವ ಕೇಶ ವಿನ್ಯಾಸಕ. ಈತ ದಕ್ಷಿಣ ಆಫ್ರಿಕಾದದಲ್ಲಿ ಕೇಶ ವಿನ್ಯಾಸಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದನು. ಕಂಗನಾ ಅವರ ಮುಂದಿನ ‘ಮಣಿಕರ್ಣಿಕಾ’ ಸಿನಿಮಾದ ಶೂಟಿಂಗ್ ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಶೂಟಿಂಗ್ ಸೆಟ್ ಗೆ ಬಂದು ಬ್ರ್ಯಾಂಡನ್ ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    16 ವರ್ಷದ ಬಾಲಕ ಸಾಮಾಜಿಕ ಜಾಲತಾಣದ ಡೇಟಿಂಗ್ ಆ್ಯಪ್ ನಲ್ಲಿ ತನ್ನ ವಯಸ್ಸು 18 ದಾಟಿದೆ ಎಂದು ಸುಳ್ಳು ಹೇಳಿ ಸೇರಿದ್ದನು. ಈ ಆ್ಯಪ್ ಮೂಲಕ ಆರೋಪಿ ಬ್ರ್ಯಾಂಡನ್ ಪರಿಚಯವಾಗಿದ್ದನು. ಆದರೆ ಆತ ಅನೇಕ ಪುರುಷರ ಜತೆ ಸಂಬಂಧ ಕೂಡ ಬೆಳಸಿದ್ದನು. ಒಂದು ದಿನ ಬಾಲಕನ ರೂಮಿನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಇರುವುದನ್ನು ತಾಯಿ ನೋಡಿದ್ದಾರೆ. ನಂತರ ಬಾಲಕ ತಾನು ಅನೇಕ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಈ ಬಗ್ಗೆ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಖಾರ್ ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಬ್ರ್ಯಾಂಡನ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಕೋರ್ಟ್ ಅಕ್ಟೋಬರ್ 3 ರವರೆಗೆ ಬ್ರ್ಯಾಂಡನ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಕ ಮತ್ತು ಉದ್ಯಮಿ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಾ ಪ್ರಭಾಸ್?

    ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಾ ಪ್ರಭಾಸ್?

    ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಳಿಕ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದು ಕರೆಸಿಕೊಂಡಿರುವ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ತಮ್ಮ ಹುಟ್ಟು ಹಬ್ಬ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಾರೆ ಎಂಬ ಪ್ರಶ್ನೆಯೊಂದು ಕೇಳಿ ಬರುತ್ತಿದೆ.

    ಟಾಲಿವುಡ್ ಸಿನಿ ರಂಗದಲ್ಲಿ ಸದ್ಯ ಪ್ರಭಾಸ್ ಮದುವೆ ಈ ಕುರಿತ ಸುದ್ದಿ ಕೇಳಿ ಬರುತ್ತಿದ್ದು, ಆಕ್ಟೋಬರ್ 23 ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ವೇಳೆಯೇ ತಮ್ಮ ಮದುವೆಯ ಸಿಕ್ರೇಟ್ ಬಿಚ್ಚಿಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಬಾಹುಲಿಯನ್ನು ಕೊಂದಿದ್ದು ಯಾಕೆ? ಎಂಬ ಪ್ರಶ್ನೆಯ ಬಳಿಕ ಅಭಿಮಾನಿಗಳು ಪ್ರಭಾಸ್ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯ ಪ್ರಭಾಸ್ ಬಹು ನಿರೀಕ್ಷಿತ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರವೂ ನವೆಂಬರ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ನಡುವೆ ಪ್ರಭಾಸ್ ಚಿಕ್ಕಪ್ಪ ಕೂಡ ಕೃಷ್ಣಂರಾಜು ಕೂಡ ಮದುವೆ ಬಗ್ಗೆ ಮಾತನಾಡಿ ಪ್ರಭಾಸ್ ಒಪ್ಪಿಗೆ ನೀಡಿದರೆ ಮುಂದುವರೆಯುವುದಾಗಿ ತಿಳಿಸಿದ್ದರು. ಇತ್ತ ಪ್ರಭಾಸ್ ಹಾಗೂ ಅನುಷ್ಕಾ ಜೋಡಿ ಹಸೆಮಣೆ ಏರಲಿ ಎಂದು ಈ ಹಿಂದೆಯೇ ಅಭಿಮಾನಿಗಳು ಇಷ್ಟಪಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿ. ಅನುಷ್ಕಾರ ಭಾಗಮತಿ ಸಿನಿಮಾ ಬಿಡುಗಡೆಗೆ ಶುಭ ಹಾರೈಸಿದ್ದ ಪ್ರಭಾಸ್ `ಸ್ವೀಟಿ’ ಎಂದು ಕರೆದಿದ್ದರು. ಈ ವೇಳೆಯೂ ಅಭಿಮಾನಿಗಳು ಖುಷಿ ಪಟ್ಟಿದ್ದರು.

    ಪ್ರಭಾಸ್ ರ ಸಾಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಬಿಡುಗಡೆಯಾಗಲಿದ್ದು ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಬಾಲಿವುಡ್ ಆಶಿಕಿ ನಟಿ ಶ್ರದ್ಧಾ ಕಪೂರ್ ನಟಿಸಿದ್ದು, ಚಿತ್ರದಲ್ಲಿ ಭಾರೀ ಆ್ಯಕ್ಷನ್ ಸನ್ನಿವೇಶಗಳ್ನು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದೆ. ಚಿತ್ರ ಒಟ್ಟಾರೆ 200 ಕೋಟಿ ರೂ. ಬಜೆಟ್‍ನಲ್ಲಿ ಸಾಹೋ ನಿರ್ಮಿಸಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಡು ರಸ್ತೆಯಲ್ಲಿ ಪೊಲೀಸರ ಎದುರೇ ವ್ಯಕ್ತಿಯನ್ನು ಕೊಚ್ಚಿ ಕೊಚ್ಚಿ ಕೊಂದ ದುಷ್ಕರ್ಮಿ!

    ನಡು ರಸ್ತೆಯಲ್ಲಿ ಪೊಲೀಸರ ಎದುರೇ ವ್ಯಕ್ತಿಯನ್ನು ಕೊಚ್ಚಿ ಕೊಚ್ಚಿ ಕೊಂದ ದುಷ್ಕರ್ಮಿ!

    ಹೈದರಾಬಾದ್: ದಟ್ಟ ಸಂಚಾರದ ರಸ್ತೆಯಲ್ಲಿ ಪೊಲೀಸರ ಎದುರೇ ವ್ಯಕ್ತಿಯನ್ನು ದುಷ್ಕರ್ಮಿಯೊಬ್ಬ ಮಚ್ಚಿನಿಂದ ಕೊಚ್ಚಿ, ಕೊಚ್ಚಿ ಕೊಲೆ ಮಾಡಿದ ಅಮಾನವೀಯ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ರಮೇಶ್ (30) ಕೊಲೆಯಾದ ದುರ್ದೈವಿ. ಈ ಹಿಂದೆ ರಮೇಶ್, ಮಹೇಶ್ ಗೌಡ ಎಂಬವರನ್ನು ಕೊಲೆ ಮಾಡಿದ್ದ. ಹೀಗಾಗಿ ಇಂದು ವಿಚಾರಣೆಗೆಂದು ಕೋರ್ಟ್ ಗೆ ಹಾಜರಾಗಲು ಹೊರಟಿದ್ದ. ಈ ವೇಳೆ ದಾಳಿ ಮಾಡಿದ ದುಷ್ಕರ್ಮಿಯೊಬ್ಬ ರಮೇಶ್‍ನನ್ನು ವಾಹನ ಸಂಚಾರವನ್ನು ಲೆಕ್ಕಿಸದೆ ರಸ್ತೆಯಲ್ಲಿಯೇ ಮಚ್ಚಿನಿಂದ ಕೊಚ್ಚಿ, ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನೆ ಪೊಲೀಸರಿಗೆ ಶರಣಾಗಿದ್ದಾನೆ.

    ಈ ವೇಳೆ ಸ್ಥಳದಲ್ಲಿಯೇ ಇದ್ದ ಕೆಲವರು ಹಲ್ಲೆಯನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಈ ದೃಶ್ಯವನ್ನು ಕೆಲವರು ತಮ್ಮ ಮೊಬೈನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ಭಾರೀ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವಾಹನ ಸಂಚಾರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೂ ಲೆಕ್ಕಿಸದ ದುಷ್ಕರ್ಮಿಯೊಬ್ಬ ರಮೇಶ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡುವ ವೇಳೆ ಆತನ ಪಕ್ಕದಲ್ಲಿಯೇ ಪೊಲೀಸ್ ವಾಹನ ಹೋಗುತ್ತಿದ್ದರೂ ಲೆಕ್ಕಿಸದೇ ಕೃತ್ಯ ಎಸಗಿದ್ದಾನೆ. ಘಟನಾ ಸ್ಥಳದಲ್ಲಿ ಸೇರಿದ್ದ ಜನರು ಎಷ್ಟೇ ಕೂಗಿದರೂ ಲೆಕ್ಕಿಸದೇ ವ್ಯಕ್ತಿ ನಡು ರಸ್ತೆಯಲ್ಲಿಯೇ ಮಚ್ಚಿನಿಂದ ಹಲ್ಲೆ ಮಾಡುತ್ತಾನೆ.

    ರಮೇಶ್‍ನನ್ನು ರಕ್ಷಿಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬ ಕೊಲೆಗಡುಕನನ್ನು ಒದೆಯುತ್ತಾನೆ. ಆದರೆ ಕೆಳಗೆ ಬಿದ್ದ ಆತ ಮತ್ತೇ ಎದ್ದು ನಿಂತು ಹಲ್ಲೆಯನ್ನು ಮುಂದುವರಿಸುತ್ತಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಪೊಲೀಸ್ ಪೇದೆ ಕೂಡಾ ಕೃತ್ಯ ತಡೆಯಲು ವಿಫಲರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿಮಾನ ಪ್ರಯಾಣದ ವೇಳೆ ಉಸಿರಾಟದ ತೊಂದರೆ – 11 ತಿಂಗಳ ಮಗು ಸಾವು

    ವಿಮಾನ ಪ್ರಯಾಣದ ವೇಳೆ ಉಸಿರಾಟದ ತೊಂದರೆ – 11 ತಿಂಗಳ ಮಗು ಸಾವು

    ಹೈದರಾಬಾದ್: ವಿಮಾನ ಪ್ರಯಾಣದ ವೇಳೆ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 11 ತಿಂಗಳ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಮೃತ್ತಪಟ್ಟ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಅಮೆರಿಕಾದ ಅರ್ನವ್ ವರ್ಮಾ ಅಲ್ಲೂರಿ ಮೃತಪಟ್ಟ ಮಗು. ಅರ್ನವ್ ತನ್ನ ಪೋಷಕರ ಜೊತೆಗೆ ಕತಾರ್ ದೇಶದ ರಾಜಧಾನಿ ದೋಹಾದಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದ. ಪ್ರಯಾಣದ ವೇಳೆ ಅರ್ನವ್‍ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಹೈದರಾಬಾದ್ ನಿಲ್ದಾಣಕ್ಕೆ ವಿಮಾನ ಬಂದು ನಿಲ್ಲುತ್ತಿದ್ದಂತೆ ಅರ್ನವ್‍ನನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಅರ್ನವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಅರ್ನವ್ ರಾತ್ರಿ 2.29ಕ್ಕೆ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು ತಿಳಿಸಿದ್ದಾರೆ. ನ್ಯೂಜೆರ್ಸಿಯಲ್ಲಿ ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಅರ್ನವ್ ಜನಿಸಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv