Tag: Hyderabad

  • ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

    ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

    – 2020ರ ವೇಳೆ ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡೋ ಗುರಿ

    ಹೈದ್ರಾಬಾದ್: ಟ್ಯೂಷನ್ ಪಡೆಯುವ ವಯಸ್ಸಿನಲ್ಲಿಯೇ 11 ವರ್ಷದ ಬಾಲಕನೊಬ್ಬ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ.

    ಹೌದು, ಹೈದ್ರಾಬಾದ್‍ನ ಬಾಲಕ ಮಹಮ್ಮದ್ ಹಸನ್ ಅಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಯಲ್ಲಿ ನೀಡಿದ, ಮನೆಗೆಲಸವನ್ನು ಸಂಜೆ 6ಗಂಟೆಗೆ ಪೂರ್ಣಗೊಳಿಸಿ, ಬಳಿಕ ಬಿ.ಟೆಕ್ ಹಾಗೂ ಎಂ.ಟೆಕ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ. ಬಾಲಕನ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹಣ ಗಳಿಕೆಗಾಗಿ ಬೋಧನೆ ಮಾಡುತ್ತಿಲ್ಲ. ಹೊರತಾಗಿ 2020ರ ವೇಳೆ ತಾನು ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎನ್ನುವ ಗುರಿಯನ್ನು ಅಲಿ ಹೊಂದಿದ್ದಾನೆ.

    ನಾನು ಕಳೆದ ವರ್ಷದಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದೆ. ಬೆಳಗ್ಗೆ ಶಾಲೆಗೆ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳುತ್ತೇನೆ. ಆಟವಾಡಿ ಹಾಗೂ ನನ್ನ ವಿದ್ಯಾಭ್ಯಾಸ ಮುಗಿಸುತ್ತೇನೆ. 6 ಗಂಟೆಗೆ ತರಬೇತಿ ಶಾಲೆಗೆ ಹೋಗಿ ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತೇನೆ ಎಂದು ಮಹಮ್ಮದ್ ಹಸನ್ ಅಲಿ ತಿಳಿಸಿದ್ದಾರೆ.

    ನಾನು ಇಂಟರ್ ನೆಟ್‍ನಲ್ಲಿ ಕೆಲವು ವಿಡಿಯೋ ನೋಡಿದ್ದೆ. ಅದರಲ್ಲಿ ನಮ್ಮ ದೇಶದ ಅನೇಕ ಎಂಜಿನಿಯರಿಂಗ್ ಪದವಿಧರರು ನಮ್ಮ ವೃತ್ತಿಗೆ ಹೊರತಾದ ಕೆಲಸ ಮಾಡುತ್ತಿದ್ದಾರೆ ಎನ್ನವ ಮಾಹಿತಿ ಸಿಕ್ಕಿತು. ಇಂತಹ ಪರಿಸ್ಥಿತಿಗೆ ಸಂವಹನದ ಕೊರತೆಯೇ ಪ್ರಮುಖ ಕಾರಣ ಅಂತಾ ನನಗೆ ಅರ್ಥವಾಯಿತು. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಆರಂಭಿಸಿದೆ ಎಂದು ಅಲಿ ಹೇಳಿಕೊಂಡಿದ್ದಾನೆ.

    ನನ್ನ ಅಜ್ಜ ಶಿಕ್ಷಕರು, ತಂದೆ, ಚಿಕ್ಕಪ್ಪ, ಅತ್ತೆಯಂದಿರು ಶಿಕ್ಷಕರು. ಹೀಗಾಗಿ ಬೋಧನೆ ರಕ್ತಗತವಾಗಿಯೇ ನನಗೆ ಬಂದಿದೆ. ಕಲಿಸಲು ಹಾಗೂ ಕಲಿಯಲು ನನಗೆ ಯಾವುದೇ ಅಂಜಿಕೆಯಿಲ್ಲ ಎಂದು ಅಲಿ ತಿಳಿಸಿದ್ದಾನೆ.

    ಕಳೆದ ತಿಂಗಳಿನಿಂದ ನಾನು ಅಲಿ ಬಳಿಗೆ ಸಿವಿಲ್ ಎಂಜಿನಿಯರಿಂಗ್ ಸಾಫ್ಟ್‍ವೇರ್ ಪಾಠ ಹೇಳಿಕೊಳ್ಳಲು ಬರುತ್ತಿರುವೆ. ಆತನು ನಮಗಿಂತ ಕಿರಿಯನಾಗಿದ್ದರೂ, ನಮ್ಮ ಮಟ್ಟಕ್ಕೆ ಇಳಿದು ವಿಷಯವನ್ನು ಸರಳಗೊಳಿಸಿ ಬೋಧನೆ ಮಾಡುತ್ತಾನೆ ಎಂದು ಎಂಜಿನಿಯರ್ ವಿದ್ಯಾರ್ಥಿನಿ ಜಿ.ಸುಷ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂ.ಟೆಕ್ ವಿದ್ಯಾರ್ಥಿನಿ ಸಾಯಿ ರೇವತಿ ಕೂಡ ಮಹಮ್ಮದ ಹಸನ್ ಅಲಿ ಬಳಿ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಘಾತ ರಭಸಕ್ಕೆ ತಲೆ ಮೇಲೆ ಹರಿದ ಲಾರಿ – ಟೆಕ್ಕಿ ದುರ್ಮರಣ, ಪತಿ ಗಂಭೀರ

    ಅಪಘಾತ ರಭಸಕ್ಕೆ ತಲೆ ಮೇಲೆ ಹರಿದ ಲಾರಿ – ಟೆಕ್ಕಿ ದುರ್ಮರಣ, ಪತಿ ಗಂಭೀರ

    ಹೈದರಾಬಾದ್: ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಟೆಕ್ಕಿ ಪತ್ನಿ ಮೃತಪಟ್ಟಿದ್ದು, ಪತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಅಪಘಾತದ ಭೀಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ರಮ್ಯಾ(28) ಮೃತ ಟೆಕ್ಕಿ. ಪತಿ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಂಪತಿ ಚಿಲ್ಕೂರು ಬಾಲಾಜಿ ದೇವಾಯಲದಿಂದ ಗಚಿಬೌವ್ಲಿಯಲ್ಲಿರುವ ಮನೆಗೆ ಬೈಕಿನಲ್ಲಿ ವಾಪಸ್ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

    ಶನಿವಾರ ಬೆಳಗ್ಗೆ 9 ಗಂಟೆಗೆ ರಮ್ಯಾ ಮತ್ತು ಪ್ರವೀಣ್ ಬೈಕಿನಲ್ಲಿ ಹೈದರಾಬಾದ್ ನಗರದ ಐಸಿಐಸಿಐ ಲೊಂಬಾರ್ಡ್ ಜಂಕ್ಷನ್ ಬಳಿ ಬರುತ್ತಿದ್ದರು. ಲಾರಿ ಮತ್ತು ಬೈಕ್ ಒಂದೇ ಸಮನಾಗಿ ಬರುತ್ತಿದ್ದವು. ಲಾರಿ ಎಡಕ್ಕೆ ತಿರುಗಿದೆ, ಇದೇ ಸಮಯದಲ್ಲಿ ಬೈಕ್ ಕೂಡ ಲಾರಿ ಮುಂದೆ ಬಂದಿದೆ. ಆಗ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನಲ್ಲಿ ಹಿಂಬದಿ ಕುಳಿತಿದ್ದ ರಮ್ಯಾ ನೆಲಕ್ಕೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ.

    ಪರಿಣಾಮ ರಮ್ಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಪ್ರವೀಣ್ ಗೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್  ಗಳಾಗಿದ್ದು ಎಂಎನ್‍ಸಿಯಲ್ಲಿ ಕೆಲಸ ಮಾಡುತ್ತಿದ್ದರು.

    ಈ ಅಪಘಾತ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರವೇ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ?

    ಶೀಘ್ರವೇ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ?

    ಹೈದರಾಬಾದ್: ಟಾಲಿವುಡ್ ನಟಿ, ಬಾಹುಬಲಿ ಬೆಡಗಿ, ಕನ್ನಡತಿ ಅನುಷ್ಕಾ ಶೆಟ್ಟಿ ಅವರ ನಿಶ್ಚಿತಾರ್ಥ ಶೀಘ್ರವೇ ನಡೆಯುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಹೌದು, ಅನುಷ್ಕಾ ಶೆಟ್ಟಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಫೋಟೊದಿಂದಾಗಿ ಈ ಪ್ರಶ್ನೆ ಹುಟ್ಟಿಕೊಂಡಿದೆ. ಕಾಲುಂಗುರ ತೊಡುತ್ತಿರುವ ರೀತಿಯಲ್ಲಿ ಫೋಟೋ ಹಾಕಿಕೊಂಡು “ಈ ಫೋಟೋಗೆ ಯಾವುದೇ ಶೀರ್ಷಿಕೆ ಅಗತ್ಯವಿಲ್ಲ” ಎಂದು ಬರೆದು ಅನುಷ್ಕಾ ಶೆಟ್ಟಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

    https://www.instagram.com/p/Bpb20StlfT1/?utm_source=ig_web_copy_link

    ಸದ್ಯ ಅನುಷ್ಕಾರವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೇ ಫೋಟೋ ಮೂಲಕ ನಟಿ ಪರೋಕ್ಷವಾಗಿ ಮದುವೆಯ ಸೂಚನೆಯನ್ನು ನೀಡಿದ್ದಾರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

    ನವೆಂಬರ್ 7 ರಂದು 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅನುಷ್ಕಾ, ತಮ್ಮ ಹುಟ್ಟಹಬ್ಬದ ದಿನದಂದೇ ಮದುವೆಯ ಸುದ್ದಿ ನೀಡುತ್ತಾರಾ ಎನ್ನುವ ಕುರಿತು ಈಗ ಚರ್ಚೆ ಆರಂಭವಾಗಿದೆ.

    ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಅನುಷ್ಕಾ ಪ್ರೀತಿಯಲ್ಲಿದ್ದಾರೆ ಎನ್ನುವ ಗಾಸಿಪ್ ಸುದ್ದಿಗಳು ಕೆಲ ವರ್ಷಗಳಿಂದ ಕೇಳಿ ಬರುತ್ತಿವೆ. ಅಲ್ಲದೇ ಅವರಿಬ್ಬರ ನಡವಳಿಕೆಯೂ ಸಹ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರು, ನಾವು ಒಳ್ಳೆಯ ಸ್ನೇಹಿತರು ಎಂದು ಅಭಿಮಾನಿಗಳಲ್ಲಿ ಹೇಳಿದ್ದರು.

    ಸಾಹೋ ಚಿತ್ರದಲ್ಲೂ ಪ್ರಭಾಸ್‍ಗೆ ಅನುಷ್ಕಾ ಜೋಡಿಯಾಗಬೇಕಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಾಹೋ ಚಿತ್ರದಲ್ಲಿ ಅನುಷ್ಕಾ ಬದಲು ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದರು. ಈ ನಡುವೆ ಅನುಷ್ಕಾ ಮತ್ತು ಪ್ರಭಾಸ್ ಪರಸ್ಪರ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಈ ನಡುವೆ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ರಿವಿಲ್ ಆಗಿತ್ತು.

    ಇಬ್ಬರ ನಡುವೆ ಇರೋದು ಸ್ನೇಹಾನಾ, ಪ್ರೀತಿನಾ ಎನ್ನುವುದು ರಹಸ್ಯವಾಗಿದೆ. ಇಬ್ಬರೂ ಅನುಭವಿಸುತ್ತಿರುವ ವಿರಹ ವೇದನೆ ಜಗತ್ತಿನ ಮುಂದೆ ಬಂದಿತ್ತು. ಪರಸ್ಪರ ಶೂಟಿಂಗ್ ಗಾಗಿ ಬೇರೆ ಬೇರೆ ಸ್ಥಳದಲ್ಲಿರುವಾಗ ಈ ಜೋಡಿ ಬರೀ ಕಾಲ್ ಅಲ್ಲ, ವೀಡಿಯೋ ಕಾಲ್ ಮೂಲಕ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಾರೆ. ಪ್ರತಿ ದಿನ ಬಿಡುವು ಇದ್ದರೆ ಸಾಕು ಇಬ್ಬರ ಮೊಬೈಲ್‍ಗಳೂ ವೇಟಿಂಗ್ ನಲ್ಲಿಯೇ ಇರುತ್ತದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶಾವಳಿ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ: ನಿತಿನ್ ಗಡ್ಕರಿ

    ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶಾವಳಿ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ: ನಿತಿನ್ ಗಡ್ಕರಿ

    ಹೈದರಾಬಾದ್: ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶವಾಹಿ ರಾಜಕಾರಣಾ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ತೆಲಂಗಾಣ ರಾಜಧಾನಿಯ ಬಿಜೆಪಿ ಯುವ ಮೋರ್ಚಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿದ್ದಾಗಿನಿಂದ ಪ್ರಧಾನಿ ಹೊಟ್ಟೆಯಿಂದ ಪ್ರಧಾನಿಯ ಹುಟ್ಟು, ಮುಖ್ಯಮಂತ್ರಿಯ ಹೊಟ್ಟೆಯಿಂದ ಮುಖ್ಯಮಂತ್ರಿ ಹಾಗೂ ಸಂಸದನ ಹೊಟ್ಟೆಯಿಂದ ಸಂಸದ ಹುಟ್ಟುತ್ತಿದ್ದ ವಂಶವಾಹಿ ಪರಂಪರೆಯಿಂದ ಭಾರತದ ಪ್ರಜಾಪ್ರಭುತ್ವ ಇಲ್ಲವಾಗುವ ಹಂತಕ್ಕೆ ತಲುಪಿತ್ತು. ಆದರೆ ನಾವೀಗ ಅದನ್ನು ಕಿತ್ತುಹಾಕುವ ಮೂಲಕ ವಂಶ ರಾಜಕಾರಣಕ್ಕೆ ಅಂತ್ಯ ಹಾಡಿದ್ದೇವೆ ಎನ್ನುವ ಮೂಲಕ ವಂಶವಾಹಿ ರಾಜಕಾರಣವನ್ನು ಮುಂದುವರಿಸಿಕೊಂಡು ಬಂದಿದ್ದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

    ಬಿಜೆಪಿ ಪಕ್ಷವು ಯಾವುದೇ ಒಂದು ಪರಿವಾರಕ್ಕೆ ಸೇರಿಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಆಧಾರದ ಮೇಲೆ ರಾಜಕಾರಣ ನಡೆಸುವ ಪಕ್ಷ ನಮ್ಮದಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದೆಂದಿಗೂ ನಮ್ಮ ವರಿಷ್ಠ ನಾಯಕರು. ಅಲ್ಲದೇ ಎಲ್.ಕೆ.ಅಡ್ವಾಣಿಯವರು ಸಹ ನಮ್ಮ ವರಿಷ್ಠರೇ ಆದರೆ ಕೇವಲ ಅವರ ಹೆಸರಿನಿಂದ ನಮ್ಮ ಪಕ್ಷವನ್ನು ಯಾರು ಗುರುತಿಸಿಲ್ಲ. ಪ್ರಸ್ತುತ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ರವರು ನೇಮಕಗೊಂಡಿದ್ದಾರೆ. ಆದರೆ ಇವುಗಳ ನೇತೃತ್ವ ಎಂದಿಗೂ ಬದಲಾಗುತ್ತಲೇ ಇರುತ್ತದೆ. ನಮ್ಮ ಪಕ್ಷ ಯಾವುದೇ ವ್ಯಕ್ತಿಯ ಹೆಸರಲ್ಲಿ ನಡೆಯುವುದಿಲ್ಲ. ನಮ್ಮ ಪಕ್ಷ ಕೇವಲ ಸಿದ್ಧಾಂತ ಮತ್ತು ಉದ್ದೇಶದ ಆಧಾರದ ಮೇಲೆ ನಡೆಯುತ್ತದೆ ಎಂದು ತಿಳಿಸಿದರು.

    ಈ ಹಿಂದೆ ಸುಮಾರು 60 ವರ್ಷಗಳ ದೇಶವನ್ನಾಳಿದ ಕೆಲವರು ಕೇವಲ ತಮ್ಮ ಕುಟುಂಬವನ್ನು ಮಾತ್ರ ಉದ್ಧಾರ ಮಾಡಿಕೊಂಡರು ಎನ್ನುವ ಮೂಲಕ ಪರೋಕ್ಷವಾಗಿ ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಕದಿನದಲ್ಲಿ 321 ರನ್ ಟೀಂ ಇಂಡಿಯಾಗೆ ಅಪಶಕುನವೇ?

    ಏಕದಿನದಲ್ಲಿ 321 ರನ್ ಟೀಂ ಇಂಡಿಯಾಗೆ ಅಪಶಕುನವೇ?

    ಮುಂಬೈ: ಟೀಂ ಇಂಡಿಯಾ ಹಾಗೂ ವಿಂಡೀಸ್ ನಡುವಿನ 2ನೇ ಏಕದಿನ ಪಂದ್ಯ ರೋಚಕ ಟೈ ಆದ ಬೆನ್ನಲ್ಲೇ ಭಾರತ ತಂಡಕ್ಕೆ 321 ರನ್ ಅಪಶಕುನವೇ ಎಂಬ ಚರ್ಚೆ ಆರಂಭವಾಗಿದೆ. ಪ್ರತಿಬಾರಿ ಟೀಂ ಇಂಡಿಯಾ 321 ರನ್ ಗಳಿಸಿದ ವೇಳೆ ಉತ್ತಮ ಪ್ರದರ್ಶನ ನಡುವೆಯೂ ಕಾಕತಾಳೀಯ ಎಂಬಂತೆ ಅಘಾತ ಎದುರಿಸಿದೆ.

    ಹೈದರಾಬಾದ್‍ನ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ವಿಂಡೀಸ್ ವಿರುದ್ಧದ 2ನೇ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲುಕಂಡಿತ್ತು.

    2007ರಲ್ಲಿ ಚಂಡೀಗಢದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 321 ರನ್ ಗಳಿಸಿ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಅಲ್ಲದೇ ಈ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ 99 ರನ್ ಗಳಿಸಿ ನರ್ವಸ್ ನೈಂಟಿಗೆ ಔಟಾಗಿದ್ದರು. ಭಾರತ ಮೊತ್ತಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಯುಸೂಫ್ ಖಾನ್ ಭರ್ಜರಿ ಶತಕದ ನೆರವಿನಿಂದ ಜಯ ಗಳಿಸಿತ್ತು.

    ಕಳೆದ ವರ್ಷ ಅಂದರೆ 2017 ಲಂಡನ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟೋಫಿ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ 321 ರನ್ ಸಿಡಿಸಿತ್ತು. ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ ಶಿಖರ್ ಧವನ್ 128 ಎಸೆತಗಳಲ್ಲಿ 125 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ ಪಂದ್ಯದಲ್ಲಿ ರೋಹಿತ್ ಶರ್ಮಾ 78 ರನ್, ಧೋನಿ 63 ರನ್ ಸಿಡಿಸಿ ಅರ್ಧ ಶತಕ ಗಳಿಸಿದ್ದರು. ಆದರೆ ಲಂಕಾ ತಂಡ 48.4 ಓವರ್ ಗಳಲ್ಲಿ ಸುಲಭವಾಗಿ ಗುರಿಯನ್ನು ತಲುಪಿತ್ತು.

    ವಿಂಡೀಸ್ ವಿರುದ್ಧ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಔಟಾಗದೇ 157 ರನ್ ಸಿಡಿಸಿದ ಬಳಿಕವೂ ಗೆಲುವು ನಿರೀಕ್ಷೆಯಂತೆ ಸಿಗಲಿಲ್ಲ. ಟೀಂ ಇಂಡಿಯಾ ಪರ ಉತ್ತಮ ಹೋರಾಟ ನಡೆಸಿದ ವಿಂಡೀಸ್ ಬ್ಯಾಟ್ಸ್‍ಮನ್ ಗಳು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು. ಇತ್ತ ವಿರಾಟ್ ಕೊಹ್ಲಿ ಶತಕ ಸಿಡಿಸಿ ಏಕದಿನ ಕ್ರಿಕೆಟ್‍ನಲ್ಲಿ 10 ಸಾವಿರ ರನ್ ಪೂರೈಸಿ ಹಲವು ದಾಖಲೆ ಬರೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಾರ್ಲಿಂಗ್ ಪ್ರಭಾಸ್‍ಗೆ ಬಂದಿದ್ದ ಮದ್ವೆ ಆಫರ್‌ಗಳೆಷ್ಟು ಗೊತ್ತಾ?

    ಡಾರ್ಲಿಂಗ್ ಪ್ರಭಾಸ್‍ಗೆ ಬಂದಿದ್ದ ಮದ್ವೆ ಆಫರ್‌ಗಳೆಷ್ಟು ಗೊತ್ತಾ?

    ಹೈದರಾಬಾದ್: ಟಾಲಿವುಡ್‍ನ ಡಾರ್ಲಿಂಗ್ ಪ್ರಭಾಸ್ ಇದುವರೆಗೂ ಒಟ್ಟು 6,000 ಮದ್ವೆ ಆಫರ್‌ಗಳನ್ನು ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಇಂದು ಪ್ರಭಾಸ್‍ರವರು ತಮ್ಮ 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ. ಅಭಿಮಾನಿಗಳಿಗೆ ಕೂಡ ಅವರಿಗೆ ಭರಪೂರದ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಕಾಡುವ ಒಂದೇ ಒಂದು ಪ್ರಶ್ನೆ, ಅವರು ಯಾರನ್ನು ಮದುವೆಯಾಗುತ್ತಾರೆ? ಅಲ್ಲದೇ ಬಾಹುಬಲಿ ಸಿನಿಮಾದಿಂದ ತಮ್ಮ ಪ್ರಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದ ಅವರು ನಟಿ ಅನುಷ್ಕಾ ಶೆಟ್ಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಸಹ ಬಹಳ ಕೇಳಿಬರುತ್ತಿವೆ.

    ತಮ್ಮ ವಿಭಿನ್ನ ರೀತಿಯ ಆಕ್ಷನ್ ಹಾಗೂ ನಟನೆಯಿಂದ ಎಲ್ಲ ಹುಡುಗಿಯರ ಮನಗೆದ್ದಿದ್ದ ಡಾರ್ಲಿಂಗ್ ಪ್ರಭಾಸ್ ಈವರೆಗೂ ಸುಮಾರು 6,000 ಮದುವೆ ಆಫರ್‌ಗಳನ್ನು ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಸಿಹಿ ಸುದ್ದಿ ನೀಡ್ತಿನಿ ಅಂದಿದ್ದ ಪ್ರಭಾಸ್ ಕೊಟ್ಟಿದ್ದು ರೋಮಾಂಚನದ ನ್ಯೂಸ್

    ಇತ್ತೀಚೆಗೆ ತೆರೆಕಂಡ ಬಾಲಿವುಡ್‍ನ ಭಾರೀ ವಿವಾದಿತ ಚಿತ್ರ ಪದ್ಮಾವತ್ ಚಿತ್ರದ ನಿರ್ದೇಶಕ ಸಂಜಯ್ ಬನ್ಸಾಲಿಯವರು ಸಹ ರಾಜ ರತನ್ ಸಿಂಗ್ ಪಾತ್ರಕ್ಕೆ ಪ್ರಭಾಸ್ ರವರನ್ನು ಆಯ್ಕೆ ಮಾಡಿದ್ದರಂತೆ. ಆದರೆ ಕೊನೆಯ ಕ್ಷಣದಲ್ಲಿ ಚಿತ್ರತಂಡ ಶಾಹಿದ್ ಕಪೂರ್ ರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿತ್ತು ಎಂಬ ಸುದ್ದಿಗಳು 2017ರಲ್ಲಿ ಹರಿದಾಡಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಸ್ತಾಕ್ ನನ್ನ ಜೊತೆ ನೀನು ಮಲಗಬೇಕು ಎಂದು ಕೇಳಿಕೊಂಡಿದ್ರು- ನಟ ರಾಹುಲ್ ಸಿಂಗ್ ಆರೋಪ

    ಮುಸ್ತಾಕ್ ನನ್ನ ಜೊತೆ ನೀನು ಮಲಗಬೇಕು ಎಂದು ಕೇಳಿಕೊಂಡಿದ್ರು- ನಟ ರಾಹುಲ್ ಸಿಂಗ್ ಆರೋಪ

    -ಮೊದಲ #MenToo ಆರೋಪ

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಮೀಟೂ ಅಭಿಯಾನದ ಸುದ್ದಿಯೇ ಹರಿದಾಡುತ್ತಿದೆ. ಮೀಟೂ ಅಭಿಯಾನ ನಟಿಯರಿಗೆ ಮಾತ್ರ ಸೀಮಿತವಾಗಿತ್ತು. ಆದ್ದರಿಂದ ಇತ್ತೀಚಿಗೆ ಮೆನ್‍ಟೂ ಅಂತಲೂ ಅಭಿಯಾನವನ್ನು ಶುರುಮಾಡಿದ್ದರು. ಈಗ ಈ ಅಭಿಯಾನ ಶುರುವಾದ ಬೆನ್ನಲ್ಲೇ ಮೊದಲು ಮೆನ್ ಟೂ ಆರೊಪ ಕೇಳಿ ಬಂದಿದೆ.

    ಕಿರುತರೆ ನಟ ರಾಹುಲ್ ಸಿಂಗ್ ಬಾಲಿವುಡ್ ನ ಬರಹಗಾರ ಮತ್ತು ನಿರ್ಮಾಪಕರಾದ ಮುಸ್ತಾಕ್ ಶೇಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಹಿಂದಿ ಧಾರವಾಹಿಯ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರು ಮೃತಪಟ್ಟಾಗ ಈಕೆಯ ಗೆಳೆಯನಾದ ನಟ ರಾಹುಲ್ ರಾಜ್ ಸಿಂಗ್ ಸುದ್ದಿಯಾಗಿದ್ದರು. ಈಗ ನಟ ರಾಹುಲ್ ರಾಜ್ ಸಿಂಗ್ ಮುಸ್ತಾಕ್ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನನ್ನ ಮೃತ್ತಿ ಜೀವನವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ರಾಹುಲ್ ಸಿಂಗ್ ಹೇಳಿದ್ದೇನು?
    ಮುಸ್ತಾಕ್ ಬಾಲಿವುಡ್ ನಲ್ಲಿ ತುಂಬಾ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಒಂದು ದಿನ ಅವರು ಮೀಟಿಂಗ್ ಮುಗಿಸಿ ನನಗೆ ಕರೆ ಮಾಡಿ ಬಾಂದ್ರ ಕಾಫಿ ಶಾಪ್ ಗೆ ಕರೆದರು. ಬಳಿಕ ರಾತ್ರಿ ಸುಮಾರು 11 ಗಂಟೆಗೆ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಮುಸ್ತಾಕ್ ನಾನು ನಿನಗೆ ಏನೋ ಮಾಡುತ್ತೇನೆ. ನೀನು ಅದನ್ನ ಇಷ್ಟಪಡುತ್ತೀಯಾ, ಅದು ಭಿನ್ನವಾಗಿರುತ್ತದೆ ಎಂದು ಹೇಳಿದರು. ಈ ವೇಳೆ ನನಗೆ ಭಯವಾಯಿತು. ನಂತರ ಅವರು, ನನಗೆ ನಿಮ್ಮ ಕುಟುಂಬದವರ ಬಗ್ಗೆ ತಿಳಿದಿದೆ. ನಾನು ನಿಮ್ಮ ಇಷ್ಟಗಳಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ನಾನು ನಿಮ್ಮ ಸ್ನೇಹಿತನಾಗಿದ್ದೇನೆ. ಎಲ್ಲ ಸಂಬಂಧಗಳು ಸೆಕ್ಸ್ ಆಗಿರುವುದಿಲ್ಲ. ನೀನು ಚಿಂತಿಸಬೇಡ ಮುಂದಿನ ಬಾರಿ ನೀನು ಸಿದ್ಧನಿರುತ್ತೀಯಾ ಎಂದು ಹೇಳಿದರು. ಬಳಿಕ ನಾನು ಅಲ್ಲಿಂದ ಹೊರಟೆ ಅಂತ ಸಿಂಗ್ ಹೇಳಿದ್ದಾರೆ.

    ಮುಸ್ತಾಕ್ ಶೇಕ್

    ನಾನು ಒಂದು ಕಿರುತೆರೆ ಧಾರಾವಾಹಿಗೆ ಆಯ್ಕೆಯಾಗಿದ್ದೆ. ನಂತರ ನನಗೆ ಮುಸ್ತಾಕ್ ಕರೆ ಮಾಡಿ ಒಂದು ಪಾತ್ರಕ್ಕಾಗಿ ನಿನ್ನನ್ನು ಆಯ್ಕೆಮಾಡಿದ್ದೇನೆ ಎಂದು ಹೇಳಿದರು. ನಾನು ‘ಮಾತ್ ಕಿ ಚೌಕಿ’ ಕಾರ್ಯಕ್ರಮಕ್ಕೆ ಸಹಿ ಮಾಡಿದ್ದೆ. ಆದರೆ ನಿನ್ನ ಕೆಲಸವನ್ನು ಉಳಿಸಿಕೊಳ್ಳಬೇಕಾದರೆ ನೀನು ನನ್ನ ಜೊತೆ ಮಗಲಬೇಕು ಎಂದು ಕೇಳಿದರು. ಆದರೆ ಅದಕ್ಕೆ ನಿರಾಕರಿಸಿದೆ. ನಾನು ಆ ರೀತಿ ಹೇಳಿದ ತಕ್ಷಣ ಕಾರ್ಯಕ್ರಮದಿಂದ ನನ್ನನ್ನು ತೆಗೆದು ಹಾಕಿದರು ಎಂದು ಸಿಂಗ್ ಹೇಳಿದ್ದಾರೆ.

    ನಾನು ಮುಸ್ತಾಕ್ ಅವರಿಂದ ಕಿರುತೆರೆಯನ್ನು ಬಿಟ್ಟೆ. ಆ ಕಾಲದಲ್ಲಿ ನಾನು ತಿಂಗಳಿಗೆ 3-4 ಲಕ್ಷ ರೂ. ಸಂಪಾದಿಸುತ್ತಿದ್ದೆ. ನಾನು ಟಿವಿಯಿಂದ ದೂರವಾಗಿದ್ದು ಯಾಕೆ ಎಂಬುದರ ಬಗ್ಗೆ ನನ್ನ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಉತ್ತರಿಸಬೇಕಿತ್ತು. ನಾನು 10 ವರ್ಷಗಳ ಹಿಂದೆ ಇದನ್ನೇ ನನ್ನ ಪೋಷಕರಿಗೆ ಹೇಳಿದ್ದೆ. ನಾನು ನಟಿಸಬೇಕಾದರೆ ಯಾರ ಜೊತೆಗೆ ಮಲಗಬೇಕು ಅದು ನನಗೆ ಇಷ್ಟವಿರಲಿಲ್ಲ ಎಂದು ರಾಹುಲ್ ಸಿಂಗ್ ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

    ಈ ಬಗ್ಗೆ ಮುಸ್ತಾಕ್ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತ್ಯಾಚಾರಕ್ಕೆ ಹುಡುಗಿ ಪ್ರತಿರೋಧ – ರಾಕ್ಷಸನಾದ ಕಾಮುಕ

    ಅತ್ಯಾಚಾರಕ್ಕೆ ಹುಡುಗಿ ಪ್ರತಿರೋಧ – ರಾಕ್ಷಸನಾದ ಕಾಮುಕ

    ಹೈದರಾಬಾದ್: 17 ವರ್ಷದ ಹುಡುಗಿ ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧವೊಡ್ಡಿದ್ದಕ್ಕೆ ಕಾಮುಕನೊಬ್ಬ ಹಲ್ಲೆ ಮಾಡಿ ನೀರಿಲ್ಲದ ಪಾಳು ಬಾವಿಗೆ ಎಸೆದಿರುವ ಅಮಾನವಿಯ ಘಟನೆ ತೆಲಂಗಾಣದ ಜಂಗಾಂವ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.

    ಯುವಕ ರಾಜೇಶ್ (25) ಈ ದುಷ್ಕೃತ್ಯವೆಸಗಿದ್ದಾನೆ. ಶನಿವಾರ ಹುಡುಗಿಯ ಪೋಷಕರು ಕೆಲಸಕ್ಕೆ ಹೋಗಿದ್ದಾರೆ. ಬಳಿಕ ಮನೆಯಲ್ಲಿ ಒಂಟಿಯಾಗಿದ್ದಾಳೆ ಎಂದು ತಿಳಿದು ಕಾಮುಕ ಏಕಾಏಕಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಆದರೆ ಹುಡುಗಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆಗ ಕಾಮುಕ ಸಂತ್ರಸ್ತೆಗೆ ಮನಬಂದಂತೆ ಥಳಿಸಿ ಕೊನೆಗೆ ಅಲ್ಲೇ ಸಮೀಪದ ಕೃಷಿ ಗದ್ದೆಯಲ್ಲಿದ್ದ ಪಾಳು ಬಾವಿಗೆ ಎಸೆದಿದ್ದಾನೆ. ನಂತರ ಆಕೆಯ ಕಿರುಚಾಟದ ಶಬ್ದ ಕೇಳಿ ಸ್ಥಳಿಯರು ಸ್ಥಳಕ್ಕೆ ಬಂದು ಹುಡುಗಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಷ್ಟೇ ಅಲ್ಲದೇ ಸ್ಥಳಿಯರು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಹಿಡಿದು ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗಾಗಲೇ ಆರೋಪಿಯನ್ನ ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ ಕೊಲೆ ಮತ್ತು ಅತ್ಯಾಚಾರ ಯತ್ನ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸದ್ಯಕ್ಕೆ ಹುಡುಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಿಸ್ಬಾ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ

    ಮಿಸ್ಬಾ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ 56 ಪಂದ್ಯ 99 ಇನ್ನಿಂಗ್ಸ್ ಗಳಲ್ಲಿ 4,214 ರನ್ ಗಳಿಸಿದ್ದರು. ಸದ್ಯ ಕೊಹ್ಲಿ ಕೇವಲ 42 ಪಂದ್ಯ 69 ಇನ್ನಿಂಗ್ಸ್ ಗಳಲ್ಲಿ 4,233 ರನ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 26 ರನ್ ಗಳಿಸಿದ್ದ ವೇಳೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾ ಆಟಗಾರ ಜಯವರ್ಧನೆ 3,665 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದು, ನಂತರದಲ್ಲಿ ಧೋನಿ 3,454 ರನ್, ಗವಾಸ್ಕರ್ 3,449 ರನ್ ಗಳಿಸಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

    ದಕ್ಷಿಣ ಆಫ್ರಿಕಾ ಆಟಗಾರ ಗ್ರೇಮ್ ಸ್ಮಿತ್ ಟೆಸ್ಟ್ ಕ್ರಿಕೆಟ್ ತಂಡ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದು, 109 ಪಂದ್ಯಗಳಲ್ಲಿ 8,659 ರನ್ ಸಿಡಿಸಿದ್ದಾರೆ. ಇದರಲ್ಲಿ 25 ಶತಕಗಳು ಸೇರಿದೆ. ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ಈಗಾಗಲೇ 24 ಶತಕಗಳನ್ನು ಪೂರೈಸಿದ್ದು, 25 ಶತಕ ಪೂರೈಸಿದರೆ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಗೆ ನಿರ್ಮಿಸಲಿದ್ದಾರೆ. ಸದ್ಯ ಬ್ರಾಡ್ ಮನ್ 68 ಇನ್ನಿಂಗ್ಸ್ ಗಳಲ್ಲಿ 25 ಶತಕಗಳನ್ನು ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ವಿಂಡೀಸ್ ವಿರುದ್ಧ 2ನೇ ಟೆಸ್ಟ್ ನಲ್ಲಿ ಅರ್ಧಶತಕದ ಅಂಚಿನಲ್ಲಿ ಎಡವಿದ ಕೊಹ್ಲಿ 78 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಹೊಲ್ಡರ್ ಬೌಲಿಂಗ್ ನಲ್ಲಿ ಎಲ್‍ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕೆ ಇಳಿದ ಪೃಥ್ವಿ ಶಾ ಅರ್ಧಶತಕ ಸಿಡಿಸಿ ಮಿಂಚಿದರೆ, ಕೆಎಲ್ ರಾಹುಲ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆನ್ ಫೀಲ್ಡ್ ನಲ್ಲೇ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ!

    ಆನ್ ಫೀಲ್ಡ್ ನಲ್ಲೇ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ!

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬ ನಾಯಕ ವಿರಾಟ್ ಕೊಹ್ಲಿಗೆ ಮುತ್ತು ನೀಡಲು ಯತ್ನಿಸಿದ ಘಟನೆ ನಡೆದಿದೆ.

    ಕ್ರೀಡಾಂಗಣದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಇದ್ದರೂ ಕೂಡ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಯೊಬ್ಬ ಪಂದ್ಯದ 15ನೇ ಓವರ್ ವೇಳೆ ಮೈದಾನಕ್ಕೆ ಪ್ರವೇಶ ಮಾಡಿದ್ದ. ಈ ವೇಳೆ ನೇರ ಕೊಹ್ಲಿ ಬಳಿ ತೆರಳಿದ ಆತ ಸೆಲ್ಫಿ ತೆಗೆದುಕೊಂಡಿದ್ದಾನೆ. ಆದರೆ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡು ಕಿಸ್ ಮಾಡಲು ಯತ್ನಿಸಿದ್ದು, ಅಭಿಮಾನಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/cricketdrug/status/1050659963322818560

    ಘಟನೆ ವೇಳೆ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ಕೊಹ್ಲಿ ಭದ್ರತಾ ಸಿಬ್ಬಂದಿ ಬರುವವರೆಗೂ ಅಲ್ಲಿಯೇ ನಿಂತಿದ್ದರು. ಇದರಿಂದ ಕೊಹ್ಲಿ ಕೆಲ ಕಾಲ ಮುಜುಗರಕ್ಕೆ ಒಳಗಾಗಿದ್ದರು. ಅಭಿಮಾನಿಯ ಹುಚ್ಚಾಟಕ್ಕೆ ಕೆಲ ಕಾಲ ಆಟ ಮುಂದುವರಿಸಲು ಅಡ್ಡಿ ಉಂಟಾಯಿತು. ಈ ಹಿಂದೆ ರಾಜ್ ಕೋಟ್ ಸೌರಾಷ್ಟ್ರ ಆಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಅಭಿಮಾನಿಯೊಬ್ಬ ರಕ್ಷಣಾ ಸಿಬ್ಬಂದಿ ಕಣ್ತಪಿಸಿ ಮೈದಾನ ಪ್ರವೇಶಿಸಿದನ್ನು ನೆನಪಿಸಬಹುದಾಗಿದೆ.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ ಟೀಂ ಇಂಡಿಯಾ ಸ್ಪಿನ್ನರ್ ಗಳು ಮತ್ತೊಮ್ಮೆ ಎದುರಾಳಿ ತಂಡಕ್ಕೆ ಮುಳುವಾದರು. ವಿಂಡೀಸ್ ಬ್ಯಾಟ್ಸ್ ಮನ್‍ಗಳ ಪ್ರಮುಖ 3 ವಿಕೆಟ್ ಉರುಳಿದ ಕುಲ್ದೀಪ್ ಯಾದವ್ ರಿಂದ ಭಾರತ ಮೇಲುಗೈ ಸಾಧಿಸಿದೆ.

    ಇತ್ತೀಚಿನ ವರದಿ ಬಂದಾಗ ವಿಂಡೀಸ್ 61.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv