Tag: Hyderabad

  • ರಾಹುಲ್ ಗಾಂಧಿ ಹೇಳಿದ್ದಕ್ಕೆ ನಾನು ಪಾಕಿಸ್ತಾನಕ್ಕೆ ಹೋಗಿದ್ದು: ಸಿಧು

    ರಾಹುಲ್ ಗಾಂಧಿ ಹೇಳಿದ್ದಕ್ಕೆ ನಾನು ಪಾಕಿಸ್ತಾನಕ್ಕೆ ಹೋಗಿದ್ದು: ಸಿಧು

    ಹೈದರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರಿಂದಲೇ ನಾನು ಪಾಕಿಸ್ತಾನಕ್ಕೆ ತೆರಳಿದ್ದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಪಾಕ್ ಭೇಟಿಯಿಂದಾಗಿ ಉಂಟಾಗಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರೇ ನನ್ನ ನಾಯಕ. ಅವರು ಹೇಳಿದ್ದರಿಂದಲೇ ನಾನು ಕರ್ತಾರ್‌ಪುರ್‌ ಕಾರಿಡಾರ್ ಯೋಜನೆಯ ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಲಾಹೋರ್ ಗೆ ತೆರಳುವಂತೆ ಸುಮಾರು 20 ಕಾಂಗ್ರೆಸ್ ನಾಯಕರು ನನಗೆ ಹೇಳಿದ್ದರು. ಹೈಕಮಾಂಡ್ ಕೂಡ ನನ್ನನ್ನು ಸಮಾರಂಭಕ್ಕೆ ಹೋಗುವಂತೆ ಹೇಳಿತ್ತು. ಹೀಗಾಗಿ ನಾನು ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿಧುರವರ ಪಾಕ್ ಭೇಟಿಯ ಬಗ್ಗೆ ಖುದ್ದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿ, ಅವರ ನಡೆಯನ್ನು ಪ್ರಶ್ನಿಸಿದ್ದರು. ಸಿಧುರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ಬಗ್ಗೆ ಪ್ರಾರಂಭದಲ್ಲೇ ಅಮರಿಂದರ್ ಅಸಮಾಧಾನ ಹೊರಹಾಕಿದ್ದರು. ಪಾಕ್ ಭೇಟಿಯನ್ನು ಮಾನ್ಯ ಮಾಡಲು ಸಹ ಅವರು ನಿರಾಕರಿಸಿದ್ದರು. ಏಕೆಂದರೆ ಅಮೃತಸರ್ ನಲ್ಲಿ ಉಗ್ರರ ಗ್ರೆನೇಡ್ ದಾಳಿಯಿಂದ ಮೂವರು ಮೃತಪಟ್ಟಿದ್ದರು. ಹೀಗಾಗಿ ತಮ್ಮ ಸಂಪುಟ ಸಹೋದ್ಯೋಗಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ನಿರಾಕರಿಸಿದ್ದರು.

    ಏನಿದು ಕರ್ತಾರ್‌ಪುರ್‌ ಕಾರಿಡಾರ್?
    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಾರೋವಲ್ ಜಿಲ್ಲೆಯಲ್ಲಿರುವ ಶಕರ್‌ಗಢ ಬಳಿ ಈ ಕರ್ತಾರ್‌ಪುರ್‌ ಇದೆ. ಇಲ್ಲಿ ಸಿಖ್ ಧರ್ಮ ಗುರುಗಳಾದ ಗುರುನಾನಕ್ ಅವರು ಸುಮಾರು 18 ವರ್ಷಗಳಿಗೂ ಅಧಿಕ ಕಾಲ ಜೀವನ ನಡೆಸಿದ್ದರು. ಅಲ್ಲದೇ ಪಾಕಿಸ್ತಾನದ ಗಡಿಯಿಂದ ನಾಲ್ಕೈದು ಕಿ.ಮೀ ದೂರವಿರುವ ರಾವಿ ನದಿ ದಂಡೆಯಲ್ಲಿ ಕರ್ತಾರ್‌ಪುರ್‌ ನಲ್ಲಿ ಸಾಹಿಬ್ ಗುರುದ್ವಾರವೂ ಇದೆ. ಹೀಗಾಗಿ ಇದು ಸಿಖ್ಖರ ಪವಿತ್ರ ದೇಗುಲವೆಂದೇ ಹೆಸರು ಪಡೆದಿತ್ತು. ಆದರೆ ಈ ದೇಗುಲಕ್ಕೆ ತೆರಳಲು ಕಡ್ಡಾಯವಾಗಿ ವೀಸಾ ಮಾಡಿಸಬೇಕಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಪಾಕಿಸ್ತಾನದ ಕರ್ತಾರ್‌ಪುರ್‌ ನಲ್ಲಿರುವ ಸಾಹಿಬ್ ಗುರದ್ವಾರಕ್ಕೆ ಭಾರತೀಯ ಸಿಖ್ ಭಕ್ತರು ವೀಸಾ ಮುಕ್ತ ಅವಕಾಶ ನೀಡುವಂತೆ ಪಾಕಿಸ್ತಾನದ ಬಳಿ ಕೇಳಿಕೊಂಡಿತ್ತು. ಭಾರತದ ಮನವಿಯನ್ನು ಸ್ವೀಕರಿಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28 ರಂದು ಕರ್ತಾರ್‌ಪುರ್‌ ಕಾರಿಡಾರ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    – ನಾವಿಬ್ಬರೂ ವರ್ಜಿನ್ ಅಂದ್ರು ಭಾವಿ ಪತಿ

    ಹೈದರಾಬಾದ್: ಸಾಮಾಜಿಕ ಜಾಲತಾಣಗಳಿಗೆ ಫೋಟೋ, ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗುವ ನಟಿ ರಾಖಿ ಸಾವಂತ್ ಅವರ ಕನ್ಯತ್ವ ಪರೀಕ್ಷೆಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ರಾಖಿ ಸಾವಂತ್ ಮದುವೆಗೂ ಮುನ್ನ ಕನ್ಯತ್ವ ಪರೀಕ್ಷೆ ಮಾಡಿಸಿದ್ದಾರೆ. ರಾಖಿಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು, ಈ ಬಗ್ಗೆ ಇತ್ತೀಚೆಗಷ್ಟೇ ರಾಖಿ ಸಾವಂತ್ ಬಹಿರಂಗಪಡಿಸಿದ್ದರು.

    ಮದುವೆ ಆಮಂತ್ರಣ ಪತ್ರಿಕೆಯನ್ನ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುವ ಮೂಲಕ ವಿವಾಹದ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ರಾಖಿ ಸಾವಂತ್  ನ ‘ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ’ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಇದು ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ.

    https://www.instagram.com/p/BquSSbsAxlL/

    ಅಂದಹಾಗೇ ರಾಖಿ ಸಾವಂತ್ ನ ಕನ್ಯತ್ವ ಪರೀಕ್ಷೆಯ ಪ್ರಮಾಣ ಪತ್ರವನ್ನು ಮದುವೆಯಾಗುತ್ತಿರುವ ಹುಡುಗ ತನ್ನ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ರಾಖಿ ಸಾವಂತ್ ಮದುವೆ ಆಗುತ್ತಿರುವ ಹುಡುಗ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕವಾಗಿ ಪ್ರಚಾರ ಪಡೆದುಕೊಂಡಿದ್ದಾರೆ. ಅವರ ಹೆಸರು ದೀಪಕ್ ಕಲಾಲ್. ಇವರೇ ರಾಖಿ ಸಾವಂತ್ ನ ‘ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ’ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ದೀಪಕ್ ಕಲಾಲ್ ಕೂಡ ತಮ್ಮ ಕನ್ಯತ್ವ ಪರೀಕ್ಷೆಯ ಪ್ರಮಾಣ ಪತ್ರವನ್ನು ಕೂಡ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ದೀಪಕ್ ಕಲಾಲ್, ”ನೀನು ಈಗ ಪವಿತ್ರವಾಗಿದ್ದೀಯಾ. ಹಿಂದೆ, ಮುಂದೆ ಮತ್ತು ಕೆಳಗೆ ಎಲ್ಲವೂ ನೀನು ಪವಿತ್ರ. ನೀನು ಖುಷಿನಾ ಬೇಬಿ” ಎಂದು ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    https://www.instagram.com/p/BquSz99Am25/

    ”ನಾನು ಮತ್ತು ರಾಖಿ ಇಬ್ಬರು ಮದುವೆಗೂ ಮುನ್ನಾ ವೈದ್ಯರ ಬಳಿ ಹೋಗಿ ಕನ್ಯತ್ವ ಪರೀಕ್ಷೆ ಮಾಡಿಸಿದ್ದೇವೆ. ಇಬ್ಬರು ವರ್ಜಿನ್ ಆಗಿದ್ದೀವಿ. ಡಾ. ಚೌಧರಿ ನಮ್ಮಿಬ್ಬರ ಕನ್ಯತ್ವ ಪರೀಕ್ಷೆ ಮಾಡಿದ್ದಾರೆ” ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

    ಮದುವೆ ಯಾವಾಗ?
    ರಾಖಿ ಸಾವಂತ್ ಮತ್ತು ದೀಪಕ್ ಕಲಾಲ್ ಮದುವೆ ಡಿಸೆಂಬರ್ 31 ರಂದು ನಡೆಯಲಿದ್ದು, ಲಾಸ್ ಏಂಜಲೀಸ್ ನಲ್ಲಿ ವಿವಾಹ ಸಮಾರಂಭ ನಡೆಲಿದೆ. ಬಳಿಕ ಭಾರತದಲ್ಲಿ ಮದುವೆ ಪಾರ್ಟಿ ಮತ್ತು ಆರತಕ್ಷತೆಯನ್ನ ಆಯೋಜನೆ ಮಾಡಲಾಗುತ್ತೆ ಎಂದು ತಿಳಿದು ಬಂದಿದೆ.

    https://www.instagram.com/p/Bqt-3HMAfGl/

    https://www.instagram.com/p/Bqwtrv6hHIB/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

    ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

    ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಬೀಫ್ ಬಿರಿಯಾನಿ ಪಾರ್ಸಲ್ ಕಳುಹಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ್ ರಾವ್ ಗೆ ಹೇಳ್ತಿನಿ ಅಂದಿದ್ದ ಓವೈಸಿಯ ಕಲ್ಯಾಣಿ ಬಿರಿಯಾನಿ ಗುರುವಾರದಿಂದ ಭಾರೀ ಸುದ್ದಿಯಲ್ಲಿದೆ.

    ಸಾರ್ವಜನಿಕ ಸಭೆಯಲ್ಲಿ ಮಜಲೀಸ್-ಈ- ಮಸ್ಲಿಮೀನ್ (ಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಾತನಾಡಿ, ಚಂದ್ರಶೇಖರ್ ರಾವ್ ಅವರು ಎಲ್ಲರಿಗೂ ಬಿರಿಯಾನಿ ತಿನ್ನಿಸಿದ್ದರೆಂದು ಅಮಿತ್ ಶಾ ಹೊಟ್ಟೆ ಉರಿಸಿಕೊಳ್ಳುವುದು ಯಾಕೆ? ಅಮಿತ್ ಶಾ ಅವರಿಗೆ ಬಿರಿಯಾನಿ ಅಷ್ಟೊಂದು ಇಷ್ಟ ಅಂತಾ ನಂಗೆ ಗೊತ್ತಿರಲಿಲ್ಲ. ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಅವರಿಗೊಂದು ಕಲ್ಯಾಣಿ ಬಿರಿಯಾನಿ ಪಾರ್ಸಲ್ ಕಳಿಹಿಸಲು ನಾನು ಕೆಸಿಆರ್ ಅವರಿಗೆ ಮಾನವಿ ಮಾಡುತ್ತೇನೆ ಎಂದು ಓವೈಸಿ ವ್ಯಂಗವಾಗಿ ಮಾತನಾಡಿದ್ದರು.

    ಈ ಮೂಲಕ ತೆಲಂಗಾಣ ಚುನಾವಣೆ ಅಖಾಡದಲ್ಲಿ ಈಗ ಬೀಫ್ ಪಾಲಿಟಿಕ್ಸ್ ಶುರುವಾಗಿದೆ. ಚುನಾವಣೆಯ ಪ್ರಚಾರದ ವೇಳೆ ಈ ರೀತಿ ಸಂಸದ ಓವೈಸಿ ಅವರು ಕೇಂದ್ರ ಸರ್ಕಾರದ ನಾಯಕರಿಗೆ ವ್ಯಂಗವಾಡಿರುವ ಸುದ್ದಿ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

    ಕ್ಯಾಣಿ ಬಿರಿಯಾಣಿ ಕರ್ನಾಟಕದ್ದು:
    ಹೈದರಾಬಾದ್ ನಲ್ಲಿ ಪ್ರಸಿದ್ಧಿ ಪಡೆದಿರುವ ಈ ಕಲ್ಯಾಣಿ ಬಿರಿಯಾನಿ ಮೂಲ ಮಾತ್ರ ಕರ್ನಾಟಕದ್ದು. 1634ರಲ್ಲಿ ಬೀದರ್‍ನಲ್ಲಿದ್ದ ದೇಶದ ಅತೀ ದೊಡ್ಡ ಬಹುಮನಿ ಸಾಮ್ರಾಜ್ಯದಲ್ಲಿ ಕಲ್ಯಾಣಿಯ ಬೀಫ್ ಮಾಂಸ ಮತ್ತು ನಿರ್ಣಾ ಗ್ರಾಮದ ಅಕ್ಕಿ ಹಾಕಿ ಕಲ್ಯಾಣಿ ಬಿರಿಯಾನಿ ತಯಾರಿ ಮಾಡಲಾಗ್ತಿತ್ತು. ಬಳಿಕ ಇದು ಕಲ್ಯಾಣಿ ಬಿರಿಯಾನಿ ಅಂತಲೇ ಫೇಮಸ್ ಆಯ್ತು. ಕಲ್ಯಾಣಿಯ ಮೂಲ ಕರ್ನಾಟಕ ಅಂತ ತಿಳಿಯಲು ಸದ್ಯ ತೆಲಂಗಾಣ ಎಲೆಕ್ಷನ್ ವೇದಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್‍ನಲ್ಲಿ ಕೊಲೆ ದೃಶ್ಯ ಸೆರೆ ಹಿಡಿಯುತ್ತ ನಿಂತ್ರೇ ಹೊರತು ಬಿಡಿಸಲಿಲ್ಲ

    ಮೊಬೈಲ್‍ನಲ್ಲಿ ಕೊಲೆ ದೃಶ್ಯ ಸೆರೆ ಹಿಡಿಯುತ್ತ ನಿಂತ್ರೇ ಹೊರತು ಬಿಡಿಸಲಿಲ್ಲ

    ಹೈದರಾಬಾದ್: ಜಗಳದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತ ಜನರು ನಿಂತಿದ್ದು, ಯಾರೊಬ್ಬರೂ ಹಲ್ಲೆಯನ್ನು ತಡೆಯಲು ಮುಂದಾಗದೆ ಅಮಾನವೀಯತೆ ಮೆರದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

    ಹೈದರಾಬಾದ್‍ನ ಜನನಿಬಿಡ ಪ್ರದೇಶವಾಗಿರುವ ನಯಾಪೌಲ್ ಸಮೀಪದ ಮೀರ್ ಚೌಕ್ ಎಂಬಲ್ಲಿ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಟೋ ಮಾಲೀಕ ಹಾಗೂ ಚಾಲಕ ಪರಸ್ಪರ ಜಗಳವಾಡಿ, ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

    ಆಟೋ ಚಾಲಕ ಶಾಕೀರ್ ಖುರೇಷಿ (30) ಕೊಲೆಯಾದ ವ್ಯಕ್ತಿ. ಮಾಲೀಕ ಅಬ್ದುಲ್ (29) ಹತ್ಯೆ ಮಾಡಿದ ಆರೋಪಿ. ಅಬ್ದುಲ್‍ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಘಟನೆಯ ವಿವರ: ಆರೋಪಿ ಅಬ್ದುಲ್ ತನ್ನ ಬಳಿ ಇರುವ ಆಟೋಗಳನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದ. ಆದರೆ ಇಂದು ಶಾಕೀರ್ ಖುರೇಷಿ ಮತ್ತು ಅಬ್ದುಲ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಣಾಮ ಇಬ್ಬರೂ ಹೊಡೆದಾಡಿ ಕೊಂಡಿದ್ದಾರೆ. ಬಳಿಕ ಅಬ್ದುಲ್ ತನ್ನ ಬಳಿಯಿದ್ದ ಚಾಕುವಿನಿಂದ ಶಾಕೀರ್ ಗೆ ಇರಿದು ಕೊಲೆ ಮಾಡಿದ್ದಾನೆ.

    ಘಟನಾ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದು, ಯಾರೊಬ್ಬರು ಹತ್ಯೆಯನ್ನು ತಡೆಯಲು ಮುಂದಾಗಲಿಲ್ಲ. ಹೊರತಾಗಿ ದೂರದಲ್ಲಿ ನಿಂತು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ವೆಯಾಗಿ ಮಕ್ಕಳಿದ್ರೂ, ಅನೈತಿಕ ಸಂಬಂಧಕ್ಕೆ ಬಲಿಯಾದ್ಳು!

    ಮದ್ವೆಯಾಗಿ ಮಕ್ಕಳಿದ್ರೂ, ಅನೈತಿಕ ಸಂಬಂಧಕ್ಕೆ ಬಲಿಯಾದ್ಳು!

    ಹೈದರಾಬಾದ್: ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಪ್ರೇಯಸಿಯನ್ನೇ ಪ್ರಿಯಕರ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಂದ್ರಗಿರಿಯಲ್ಲಿ ನಡೆದಿದೆ.

    ಗಿರಿಜಾ ಕೊಲೆಯಾದ ದುರ್ದೈವಿ. ಗಿರಿ ಎಂಬಾತನೇ ಪ್ರೇಯಸಿಯನ್ನೇ ಕೊಲೆ ಮಾಡಿದ ಆರೋಪಿ. ಭಾನುವಾರ ಆರೋಪಿ ಪೊಲೀಸರಿಗೆ ಶರಣಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. 10 ವರ್ಷಗಳ ಹಿಂದೆ ಗಿರಿಜಾ ಚೆಂಚು ಮುನಿ ಎಂಬಾತನ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಅದೇ ಹಳ್ಳಿಯ ನಿವಾಸವಾದ ಗಿರಿ ಎಂಬವನ ಜೊತೆ ಗಿರಿಜಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ.

    ಇತ್ತ ಗಿರಿಗೆ ತನ್ನ ಪ್ರೇಯಸಿ ಗಿರಿಜಾ ಬೇರೆಯೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿದ್ದಾನೆ. ನವೆಂಬರ್ 13 ರಂದು ಗಿರಿಜಾ ಮತ್ತು ಗಿರಿ ಕೃಷಿ ತೋಟದಲ್ಲಿ ಮಾತನಾಡಲು ಭೇಟಿಯಾಗಿದ್ದರು. ಇದೇ ವಿಚಾರದ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ಗಿರಿ ಲಾಂಗ್‍ನಿಂದ ಗಿರಿಜಾಗೆ ಹೊಡೆದಿದ್ದಾನೆ. ಪರಿಣಾಮ ಗಿರಿಜಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ಗಿರಿ ಬ್ಯಾಗಿಗೆ ಗಿರಿಜಾಳ ದೇಹವನ್ನು ತುಂಬಿ ಬಾವಿಗೆ ಬಿಸಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಪತ್ನಿ ಗಿರಿಜಾ ತುಂಬಾ ದಿನಗಳಾದರೂ ಪತ್ತೆಯಾಗಿಲ್ಲ ಎಂದು ಪತಿ ಶುಕ್ರವಾರ ರಾತ್ರಿ ಕಳೆದ 10 ದಿನಗಳಿಂದ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದನು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.

    ಆರೋಪಿ ಗಿರಿ ಭಾನುವಾರ ಏಕಾಏಕಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ತಾನು ಮಾಡಿದ್ದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ನಂತರ ಆರೋಪಿ ನೀಡಿದ ವಿವರಗಳನ್ನು ಆಧರಿಸಿ ಪೊಲೀಸರು ದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ.

    ತುಂಬಾ ದಿನಗಳಾದ್ದರಿಂದ ಗಿರಿಜಾ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪತಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ಮದ್ವೆ ಗಲಾಟೆ – ಹುಡ್ಗನ ತಂದೆ, ಪ್ರೇಯಸಿಯ ಸೋದರ ವಿಷ ಸೇವನೆ

    ಪ್ರೇಮಿಗಳ ಮದ್ವೆ ಗಲಾಟೆ – ಹುಡ್ಗನ ತಂದೆ, ಪ್ರೇಯಸಿಯ ಸೋದರ ವಿಷ ಸೇವನೆ

    ಹೈದರಾಬಾದ್: ಮದುವೆಯ ವಿಚಾರವಾಗಿ ಹುಡುಗಿಯ ಸಹೋದರ ಮತ್ತು ಹುಡುಗಿಯ ಪ್ರಿಯತಮನ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಝಹೀರಾಬಾದ್ ನಲ್ಲಿ ನಡೆದಿದೆ.

    ಅಂಜಣ್ಣ ಮತ್ತು ಜಗದೀಶ್ವರ್ ಆತ್ಮಹತ್ಯೆಗೆ ಶರಣಾದವರು. ನಾಗಮಣಿ ಮತ್ತು ಮಹೇಶ್ ಇಬ್ಬರೂ ಕೆಲವು ವರ್ಷಗಳಿಂದ ಪರಸ್ಪರ ಒಬ್ಬೊಬ್ಬರನ್ನು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ತಂದೆ ಅಂಜಣ್ಣ ಮತ್ತು ನಾಗಮಣಿ ಸಹೋದರ ಜಗದೀಶ್ವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಏನಿದು ಪ್ರಕರಣ?
    ನಾಗಮಣಿ ಮತ್ತು ಮಹೇಶ್ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಎರಡು ತಿಂಗಳುಗಳ ಹಿಂದೆ ನಾಗಮಣಿಗೆ ಅವರ ಕುಟುಂಬದವರು ಗೋಟಿಗರಿಪಲ್ಲಿ ಮೂಲದ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿದ್ದಾರೆ. ಮಹೇಶ್ ಗೆ ನಿಶ್ಚಿತಾರ್ಥದ ಬಗ್ಗೆ ತಿಳಿದಿದೆ. ಕೂಡಲೇ ನಾಗಮಣಿ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ.

    ಈ ವೇಳೆ ಮಹೇಶ್ ಮತ್ತು ನಾಗಮಣಿಯ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಈ ಗಲಾಟೆಯಿಂದ ಮನನೊಂದ ಮಹೇಶ್ ತಂದೆ ಅಂಜಣ್ಣಾ ಕೀಟನಾಶಕ ಔಷಧಿಯನ್ನು ಕುಡಿದಿದ್ದಾರೆ. ಇತ್ತ ಅಂಜಣ್ಣಾ ವಿಷ ಕುಡಿದ ತಕ್ಷಣ ನಾಗಮಣಿಯ ಸಹೋದರ ಜಗದೀಶ್ವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ವಿಷ ಕುಡಿದಿದ್ದನ್ನು ನೋಡಿದ ನಾಗಮಣಿ ಕೂಡ ಕೀಟನಾಶಕ ಔಷಧವನ್ನು ಕುಡಿದಿದ್ದಾಳೆ.

    ಕುಟುಂಬದವರು ಮೂವರನ್ನು ಸಾಂಗರೆಡ್ಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಜಣ್ಣ ಮತ್ತು ಜಗದೀಶ್ವರ್ ಮೃತಪಟ್ಟಿದ್ದಾರೆ. ಸದ್ಯಕ್ಕೆ ನಾಗಮಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಹೆಚ್ಚಾಗಿದ್ದು, ಈ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿಕೆ ಮಾಡುವ ಮೂಲಕ ವಿಭಿನ್ನ ಪ್ರಚಾರ ಕೈಗೊಂಡಿದ್ದಾರೆ.

    ಅಕುಲ ಹನುಮಂತ್ ಎಂಬವರು ಜಗ್ಟಿಯಲ್ ಜಿಲ್ಲೆಯ ಕೊರುಟ್ಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರದ ಮತದಾರರ ಪ್ರಚಾರ ನಡೆಸುವ ವೇಳೆ ಚಪ್ಪಲಿ ಹಂಚಿಕೆ ಮಾಡಿ ನನಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ಮಾಡದಿದ್ದರೆ ನನಗೆ ಚಪ್ಪಲಿ ಸೇವೆ ಮಾಡಿ ಎಂದು ಹೇಳಿ ಪ್ರಚಾರ ಮಾಡುತ್ತಿದ್ದಾರೆ.

    ಸದ್ಯ ಹನುಮನ್ ಅವರ ಈ ವಿಭಿನ್ನ ಪ್ರಚಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಎಲ್ಲಾ ರಾಜಕೀಯ ವ್ಯಕ್ತಿಗಳು ಈ ವಿಧಾನವನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.

    ಮನೆ ಮನೆ ಪ್ರಚಾರಕ್ಕೆ ತೆರಳುವ ಹನುಮಂತ್, ಕ್ಷೇತ್ರದ ಜನರ ಅಗತ್ಯಗಳನ್ನು ಪೂರೈಸಲು ಶ್ರಮವಹಿಸುವುದಾಗಿ ಆಶ್ವಾಸನೆ ನೀಡುತ್ತಿದ್ದು, ಇದರಲ್ಲಿ ವಿಫಲವಾದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಕೇವಲ ಪ್ರಚಾರ ಪಡೆಯಲು ಮಾತ್ರ ನಾನು ಈ ರೀತಿ ಮತ ಕೇಳುತ್ತಿಲ್ಲ ಎಂದು ತಿಳಿಸಿದ್ದಾರೆ.

    ಸದ್ಯ ಹನುಮಂತ್ ಅವರು ಸ್ಪರ್ಧೆ ಮಾಡುತ್ತಿರುವ ಕೊರುಟ್ಲಾ ಕ್ಷೇತ್ರದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಪ್ರಮುಖ ನಾಯಕರಾದ ಶಾಸಕ ಕೆ ವಿದ್ಯಾ ಸಾಗರ್ ರಾವ್ ಸ್ಪರ್ಧೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ವಿದಾಯ

    ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ವಿದಾಯ

    ಹೈದರಾಬಾದ್: ತೆಲುಗಿನ ಪ್ರಖ್ಯಾತ ನಟ ಪವನ್ ಕಲ್ಯಾಣ್ ಅವರು ತಮ್ಮ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ.

    ಪವನ್ ಕಲ್ಯಾಣ್ ಅವರು ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡಿದ್ದು, ಇದೀಗ ಮುಂದಿನ ಚಿತ್ರಕ್ಕೆ ಸಹಿ ಮಾಡಿಲ್ಲ ಅಂತ ಹೇಳುವ ಮೂಲಕ ಊಹಾಪೋಹಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್ ನಲ್ಲಿ ಒಂದು ಪತ್ರವನ್ನು ಪೋಸ್ಟ್ ಮಾಡಿರುವ ನಟ, ನಾನು ಒಂದು ಚಿತ್ರಕ್ಕೆ ಸಹಿ ಮಾಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಆದ್ರೆ ಇದು ಶುದ್ಧ ಸುಳ್ಳಾಗಿದೆ. ನನಗೆ ಸಿನಿಮಾದಲ್ಲಿ ನಟಿಸಲು ಸಮಯವಿಲ್ಲ. ಹೀಗಾಗಿ ನಾನು ಯಾವುದೇ ಚಿತ್ರದಲ್ಲಿ ನಟನೆ ಮಾಡುವುದಿಲ್ಲ. ಬದಲಾಗಿ ನನ್ನನ್ನು ನಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ನನ್ನ ಉಳಿದ ಜೀವನ ಜನರ ಸೇವೆಗೆ ಮುಡಿಪು ಎಂದು ಗಬ್ಬರ್ ಸಿಂಗ್ ಪವನ್ ಕಲ್ಯಾಣ್ ಹೇಳಿದ್ದಾರೆ.

    ಖುಷಿ, ಅತ್ತಾರಿಂಟಿಕಿ ದಾರೇದಿ, ಗಬ್ಬರ್ ಸಿಂಗ್ ಸಿನಿಮಾಗಳ ಮೂಲಕ ಮನೆ ಮಾತಾಗಿದ್ದ ನಟ, 2014ರಿಂದ ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೇಪ್ ಆರೋಪಿಯ ಜಾಮೀನು ರದ್ದುಗೊಳಿಸಿ- ಮೋದಿಗೆ ಅಪ್ರಾಪ್ತ ಬಾಲಕಿಯ ತಂದೆ ಪತ್ರ

    ರೇಪ್ ಆರೋಪಿಯ ಜಾಮೀನು ರದ್ದುಗೊಳಿಸಿ- ಮೋದಿಗೆ ಅಪ್ರಾಪ್ತ ಬಾಲಕಿಯ ತಂದೆ ಪತ್ರ

    ಹೈದರಾಬಾದ್: ಶಾಲೆಯಲ್ಲಿ 4 ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿಗೆ ಸಿಕ್ಕಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಬಾಲಕಿಯ ತಂದೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಸೆಪ್ಟೆಂಬರ್ 14 ರಂದು ಶಾಲಾ ಸಿಬ್ಬಂದಿ ಮೊಹದ್ ಜಿಲಾನಿ ಎಂಬಾತ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ಕುರಿತು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮೊಹದ್‍ನನ್ನು ಪೊಲೀಸರು ಬಂಧಿಸಿದ್ದರು.

    ಬಳಿಕ ಆರೋಪಿಯು ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಸೆಪ್ಟೆಂಬರ್‍ನಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಲು ನಿರಾಕರಿಸಿತ್ತು. ನವೆಂಬರ್ 12 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

    ಇದರಿಂದ ಮನನೊಂದ ಬಾಲಕಿಯ ತಂದೆ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನಮ್ಮದು ಮಧ್ಯಮವರ್ಗದ ಕುಟುಂಬ, ನನಗೆ ಕೆಲಸವು ಇಲ್ಲ, ಕುಟುಂಬಸ್ಥರೆಲ್ಲ ಮಗಳ ಭವಿಷ್ಯಕ್ಕಾಗಿ ಹೈದರಾಬಾದ್‍ನಲ್ಲಿದ್ದೇವೆ. ನನ್ನ ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಸಹಾಯ ಕಲ್ಪಿಸಿಕೊಡಿ ಎಂದು ಬರೆದಿದ್ದಾರೆ. ಹಾಗೆಯೇ ಆರೋಪಿ ಮೊಹದ್‍ಗೆ ಸಿಕ್ಕಿರುವ ಜಾಮೀನನ್ನು ರದ್ದು ಪಡಿಸಬೇಕು. ಆರೋಪಿಗೆ ಶಿಕ್ಷೆ ವಿಧಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಿತ್ರ-ವಿಚಿತ್ರ ಡ್ರೆಸ್ ತೊಟ್ಟುಕೊಂಡ ಊರ್ವಶಿ

    ಚಿತ್ರ-ವಿಚಿತ್ರ ಡ್ರೆಸ್ ತೊಟ್ಟುಕೊಂಡ ಊರ್ವಶಿ

    ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.

    ಬಾಲಿವುಡ್ ನಟಿ ಊರ್ವಶಿ ರೌತೆಲಾ ತಮ್ಮ ಹಾಟ್ ಮತ್ತು ಬೋಲ್ದ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

    https://www.instagram.com/p/BqRhJesAo1T/?hl=en

    ನಟಿ ಊರ್ವಶಿ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಚಿತ್ರ-ವಿಚಿತ್ರವಾದ ಉಡುಗೆಯನ್ನು ಧರಿಸಿದ್ದಾರೆ. ಅವರು ಧರಿಸಿರುವ ಡ್ರೆಸ್‍ನ ತುಂಬಾ ಡಿಸೈನ್ ಇದೆ. ಆ ಉಡುಪು ಆಕೆಯ ಚರ್ಮದ ಬಣ್ಣದ್ದಾಗಿದೆ. ಊರ್ವಶಿ ಒಂದು ಸೋಫಾ ಮೇಲೆ ಮಲಗಿಕೊಂಡು ಕ್ಯಾಮೆರಾಗೆ ಪೋಸ್ಟ್ ಕೊಟ್ಟಿದ್ದಾರೆ. ಆ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಮುಂಜಾನೆಯ ಶುಭಾಶಯವನ್ನು ತಿಳಿಸಿದ್ದಾರೆ.

    ವಿಚಿತ್ರವಾಗಿರುವ ಡ್ರೆಸ್ ಧರಿಸಿ ಎರಡು ಫೋಟೋಗಳನ್ನು ನಟಿ ಊರ್ವಶಿ ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಒಂದೇ ದಿನದಲ್ಲಿ ಒಂದು ಫೋಟೋವನ್ನು 3 ಲಕ್ಷಕ್ಕಿಂತಲೂ ಅಧಿಕ ಮಂದಿ ಮತ್ತು ಇನ್ನೊಂದು ಫೋಟೋವನ್ನು 5.5 ಲಕ್ಷಕ್ಕಿಂತ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಹಲವು ಮಂದಿ ಅನೇಕ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಸೂಪರ್, ತುಂಬಾ ಚೆನ್ನಾಗಿದೆ, ಹಾಟ್ ಬೇಬಿ, ಸೆಕ್ಸಿ ಇನ್ನೂ ಅನೇಕ ರೀತಿಯಲ್ಲಿ ಸುಮಾರು 5 ಸಾವಿರ ಕಮೆಂಟ್ ಮಾಡಿದ್ದಾರೆ.

    https://www.instagram.com/p/BqRhAi9gAyp/

    2013ರಲ್ಲಿ `ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಸಿನಿಮಾ ಅಂಗಳಕ್ಕೆ ಊರ್ವಶಿ ಪಾದಾರ್ಪಣೆ ಮಾಡಿದ್ದಾರೆ. ಗ್ರೇಟ್ ಗ್ರ್ಯಾಂಡ್ ಮಸ್ತಿ, ಸನಮ್ ರೇ, ಕಾಬಿಲ್, ಹೇಟ್ ಸ್ಟೋರಿ-4 ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews