Tag: Hyderabad

  • ಪೂನಂ ಪಾಂಡೆಯಿಂದ ಕ್ರಿಸ್‍ಮಸ್‍ಗಾಗಿ ಸಾಂತಾ ಅವತಾರದಲ್ಲಿ ಸೆಕ್ಸಿ ವಿಡಿಯೋ

    ಪೂನಂ ಪಾಂಡೆಯಿಂದ ಕ್ರಿಸ್‍ಮಸ್‍ಗಾಗಿ ಸಾಂತಾ ಅವತಾರದಲ್ಲಿ ಸೆಕ್ಸಿ ವಿಡಿಯೋ

    ಹೈದರಾಬಾದ್: ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ತಮ್ಮ ಹಾಟ್ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ. ಆದ್ದರಿಂದ ತಮ್ಮ ಹಾಟ್ ಫೋಟೋ, ವಿಡಿಯೋ ಮೂಲಕ ಸುದ್ದಿಯಾಗುತ್ತಾರೆ. ಈ ಮತ್ತೆ ಕ್ರಿಸ್‍ಮಸ್ ಪ್ರಯುಕ್ತ ಒಂದು ಸೆಕ್ಸಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    ಕ್ರಿಸ್‍ಮಸ್ ಗೆ ಹಬ್ಬಕ್ಕೆ ಸಿನಿತಾರೆಯರು ಶುಭಾಶಯ ಕೋರುತ್ತಾರೆ. ಕೆಲವರು ವಿಭಿನ್ನ ರೀತಿ ವಿಶ್ ಮಾಡುತ್ತಾರೆ. ಹೀಗಾಗಿ ನಟಿ ಪೂನಂ ಪಾಂಡೆ ಹಾಟ್ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

    ನಟಿ ಪೂನಂ ಪಾಂಡೆ ಕ್ರಿಸ್‍ಮಸ್ ಕ್ಕಿಂತ ಹಿಂದಿನ ದಿನವೇ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಬಿಕಿನಿ ತೊಟ್ಟು ಅದರ ಮೇಲೆ ಕೆಂಪು ಅಥವಾ ಬಿಳಿ ಬಣ್ಣದ ಕ್ರಿಸ್‍ಮಸ್ ಶರ್ಟ್ ಧರಿಸಿದ್ದಾರೆ. ಒಂದು ಸಾಂತಾ ಟೋಪಿಯನ್ನು ಹಾಕಿದ್ದು, ಪೂನಂ ಬೆಡ್ ಮೇಲೆ ಮಲಗಿ ಅಲ್ಲಿಂದ ಹಾಡು ಹೇಳಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಬಳಿಕ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಬಟ್ಟೆಯನ್ನು ಬಿಚ್ಚಲು ಮುಂದಾಗಿದ್ದಾರೆ. ಆಗ ಶರ್ಟ್ ಅವರ ತಲೆಗೆ ಸಿಲುಕಿಕೊಂಡಿರುವುದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ.

    ಪೂನಂ ಪಾಂಡೆಯ ಈ ಸೆಕ್ಸಿ ವಿಡಿಯೋವನ್ನು ಯೂಟ್ಯೂಬ್ ಅಪ್ಲೋಡ್ ಮಾಡಿದ ಒಂದೇ ದಿನದಲ್ಲಿ 2.4 ಲಕ್ಷ ವೀವ್ಸ್ ಆಗಿದೆ. ಈ ವಿಡಿಯೋ ಜೊತೆಗೆ ಪೂನಂ “ಟ್ವಿಟ್ಟಿಗರ ಬೇಡಿಕೆಯ ಮೇರೆಗೆ ಅವರಿಗಾಗಿ ಈ ವಿಡಿಯೋ” ಎಂದು ಟ್ವೀಟ್ ಮಾಡಿ ವಿಡಿಯೋ ಲಿಂಕ್ ಮಾಡಿದ್ದಾರೆ.

    ಈ ವರ್ಷ ಮಾತ್ರವಲ್ಲದೇ ಪ್ರತಿ ವರ್ಷ ಪೂನಂ ಪಾಂಡೆ, ಕ್ರಿಸ್‍ಮಸ್ ದಿನ ಸೆಕ್ಸಿ ಫೋಟೋ ಅಥವಾ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದೇ ರೀತಿ ಈ ವರ್ಷವೂ ಕ್ರಿಸ್‍ಮಸ್ ಗಾಗಿ ಸಾಂತಾ ಅವತಾರದಲ್ಲಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    https://twitter.com/iPoonampandey/status/1077468190500900864

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾದ 20 ದಿನಕ್ಕೇ ಪತಿ ಮನೆಯಿಂದ ಕರ್ಕೊಂಡು ಬಂದು ಮಗಳನ್ನ ಕೊಂದ್ರು!

    ಮದ್ವೆಯಾದ 20 ದಿನಕ್ಕೇ ಪತಿ ಮನೆಯಿಂದ ಕರ್ಕೊಂಡು ಬಂದು ಮಗಳನ್ನ ಕೊಂದ್ರು!

    ಹೈದರಾಬಾದ್: ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ತಮ್ಮ 20 ವರ್ಷದ ಮಗಳನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಂಚೇರಿಯ ಜಿಲ್ಲೆಯ ಕಲಾಮಡುಗು ಗ್ರಾಮದಲ್ಲಿ ನಡೆದಿದೆ.

    ಪಿ. ಅನುರಾಧಾ ಪೋಷಕರಿಂದ ಕೊಲೆಯಾದ ದುರ್ದೈವಿ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮೃತ ಅನುರಾಧಾಳ ಪತಿ ಎ.ಲಕ್ಷ್ಮಣ್ ದೂರು ನೀಡಿದ್ದರು. ಬಳಿಕ ಈ ಬಗ್ಗೆ ತನಿಖೆ ನಡೆಸಿದಾಗ ಭಾನುವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಅನುರಾಧಾಳ ತಂದೆ-ತಾಯಿ ತಮ್ಮ ಸಂಬಂಧಿಕರ ಸಹಾಯದಿಂದ ಬರ್ಬರವಾಗಿ ಮಗಳನ್ನೇ ಕೊಲೆ ಮಾಡಿ ದೇಹವನ್ನು ಸುಟ್ಟು ಬೂದಿಯನ್ನು ಒಂದು ಹಳ್ಳಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಅನುರಾಧಾ ಮತ್ತು ಲಕ್ಷ್ಮಣ್ ಇಬ್ಬರು ಕಲಾಮಡುಗು ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಇವರ ಪ್ರೀತಿ ಮನೆಯವರಿಗೆ ತಿಳಿದಿದೆ. ಆದರೆ ಅನುರಾಧಾ ಕುಟುಂಬವು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಇಬ್ಬರು ಹೈದರಾಬಾದ್‍ಗೆ ಓಡಿ ಹೋಗಿ ಡಿಸೆಂಬರ್ 3 ರಂದು ಆರ್ಯ ಸಮಾಜ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

    ಮದುವೆಯಾದ 20 ದಿನಗಳ ನಂತರ ದಂಪತಿ ಶನಿವಾರ ತಮ್ಮ ಗ್ರಾಮಕ್ಕೆ ಬಂದಿದ್ದಾರೆ. ಈ ಬಗ್ಗೆ ತಿಳಿದು ಅನುರಾಧಾ ಪೋಷಕರು ಮತ್ತು ಇತರ ಸಂಬಂಧಿಗಳು ಹುಡುಗ ಲಕ್ಷ್ಮಣನ ಮನೆಯ ಮೇಲೆ ದಾಳಿ ನಡೆಸಿ, ಬಲವಂತವಾಗಿ ಅನುರಾಧಾಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಪೋಷಕರು ಅನುರಾಧಾಳನ್ನು ನಿರ್ಮಲ ಜಿಲ್ಲೆಯ ಮಲ್ಲಪುರ್ ಗ್ರಾಮದ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷಿ ಸಿಗಬಾರದೆಂದು ದೇಹವನ್ನು ಸುಟ್ಟು ಚಿತಾಭಸ್ಮವನ್ನು ಒಂದು ಹಳ್ಳಕ್ಕೆ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇತ್ತ ಮೃತ ಅನುರಾಧಾಳ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುರಾಧಾ ತಂದೆ ಸತ್ತೆಣ್ಣ ಮತ್ತು ತಾಯಿ ಲಕ್ಷ್ಮೀ ಅವರನ್ನು ಬಂಧಿಸಿದ್ದಾರೆ. ಕೆಳ ದರ್ಜೆಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಮಗಳನ್ನೆ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಊಟ ಮಾಡಿ ಕೈ ತೊಳೆಯುತ್ತಿದ್ದ ಅಪ್ಪನನ್ನ ಕೊಲೆಗೈದ ಪೇದೆ..!

    ಊಟ ಮಾಡಿ ಕೈ ತೊಳೆಯುತ್ತಿದ್ದ ಅಪ್ಪನನ್ನ ಕೊಲೆಗೈದ ಪೇದೆ..!

    -ಪತಿ-ಪತ್ನಿ ಜಗಳದಲ್ಲಿ ತಂದೆಯನ್ನ ಕೊಂದ ಮಗ

    ಹೈದರಾಬಾದ್: ಪೊಲೀಸ್ ಕಾನ್ಸ್‌ಸ್ಟೇಬಲ್ ಒಬ್ಬ ತನ್ನ ಪತ್ನಿ ಜೊತೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿ ಬಳಿಕ ಅಲ್ಲೇ ಇದ್ದ ಅಪ್ಪನನ್ನು ಕತ್ತು ಹಿಸುಕಿ ಕೊಲೆಗೈದ ಅಮಾನವೀಯ ಘಟನೆಯೊಂದು ಮುಶಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಆರೋಪಿ ಬಿ ವೆಂಕಟೇಶ್ ನನ್ನು ಬಂಧಿಸಿದ್ದಾರೆ. ಆರೋಪಿ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ವೆಂಕಟೇಶ್ 2010ರ ಬ್ಯಾಚ್ ನ ಕಾನ್ಸ್ ಸ್ಟೇಬಲ್ ಆಗಿದ್ದಾನೆ ಎಂದು ವರದಿಯಾಗಿದೆ.

    ಘಟನೆ ವಿವರ:
    ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ 58 ವರ್ಷದ ಎಲ್ಲಯ್ಯನನ್ನು ಮಗ ವೆಂಕಟೇಶ್, ತನ್ನ ಪತ್ನಿ ಜತೆ ಜಗಳವಾಡಿ ನಂತರ ಕೊಲೆಗೈದಿದ್ದಾನೆ.

    ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಲ್ಲಯ್ಯ ಊಟ ಮಾಡಿ ಕೈ ತೊಳೆಯುತ್ತಿದ್ದರು. ಈ ವೇಳೆ ಸಡನ್ ಆಗಿ ಬಂದ ವೆಂಕಟೇಶ್, ಎಲ್ಲಯ್ಯನ ಮುಖಕ್ಕೆ ಟವೆಲ್ ನಿಂದ ಬಿಗಿಹಿಡಿದಿದ್ದಾನೆ. ನಂತರ ಕತ್ತು ಹಿಸುಕಿದ್ದಾನೆ. ಇಷ್ಟು ಮಾತ್ರವಲ್ಲದೇ ವೆಂಕಟೇಶ್ ಎದೆ ಹಾಗೂ ದೇಹದ ಇತರ ಭಾಗಗಳಿಗೆ ಮನಬಂದಂತೆ ಚೂರಿಯಿಂದ ಇರಿದಿದ್ದಾನೆ ಅಂತ ಮುಶಿರಾಬಾದ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಗಂಗಾಧರ್ ತಿಳಿಸಿದ್ದಾರೆ.

    ಎಲ್ಲಯ್ಯ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆರೋಪಿ ವೆಂಕಟೇಶ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದನು. ಈತನಿಗೆ ಮೂವರು ಮಕ್ಕಳಿದ್ದು, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದನು. ಇಂದು ಕೂಡ ಅದೇ ರೀತಿ ಜಗಳವಾಡಿದ್ದು, ಪತಿ-ಪತ್ನಿ ಜಗಳದಲ್ಲಿ ಮುಗ್ಧ ತಂದೆ ಬಲಿಯಾಗಿದ್ದಾರೆ ಅಂತ ಅವರು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಮಾಡು ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ಚೈತನ್ಯಪುರಿ ಪೊಲೀಸ್ ಮತ್ತು ಎಲ್.ಬಿ. ನಗರ ಸ್ಪಷೆಲ್ ಕಾರ್ಯಾಚರಣೆ ತಂಡವು ಇಬ್ಬರನ್ನು ಬಂಧಿಸಿದೆ. ಜೊತೆಗೆ ಅವರ ಬಳಿ ಇದ್ದ 1.65 ಕೋಟಿ ರೂ. ನಗದು ಮತ್ತು ಎರಡು ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ಕೋತಪೇಟ್ ನಿವಾಸಿ ಟಿ. ವೆಂಕಟ ಶಿವ ಮಹೇಶ್ವರ ರಾವ್ ಮತ್ತು ಕುಕಟ್ಪಲ್ಲಿಯ ಎಸ್. ವೆಂಕಟೇಶ್ವರ ರಾವ್ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮ ಹಣ ವರ್ಗಾವಣೆ ಮಾಡುವ ಏಜೆಂಟ್‍ರನ್ನು ಭೇಟಿ ಮಾಡಲು ಬಂದಿದ್ದಾರೆ. ಆಗ ಅಕ್ರಮ ವರ್ಗಾವಣೆಯ ಕೆಲಸದಿಂದ ಲಾಭವಿದೆ ಎಂದು ತಿಳಿದುಕೊಂಡು ನಂತರ ಅವರು ಕೂಡ ಅದೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.

    ಕಾರ್ಯಾಚರಣೆ ತಂಡವು ಕೊಥೆಪೆಟ್ ನಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಸೂರ್ಯ ಮಿತ್ರ ಟ್ರೇಡರ್ಸ್ ಎಕ್ಸ್ ಪೋರ್ಟ್ಸ್ ಮಾಲೀಕ ಮಹೇಶ್ವರ ರಾವ್ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತ ತನ್ನ ಗೆಳೆಯ ಸತ್ಯನಾರಾಯಣ ಎಂಬಾತ 1 ಕೋಟಿ ರೂ. ಹಣ ಹೊಂದಿಸಿಕೊಡುವಂತೆ ಹೇಳಿದ್ದಾನೆ. ಅಲ್ಲದೇ ಆ ಹಣವನ್ನು ಮತ್ತೆ ನಿನಗೆ ಬೇರೆ ಬೇರೆ ಖಾತೆಗಳ ಮೂಲಕ ವಾಪಸ್ ಮಾಡುವುದಾಗಿ ಹೇಳಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ.

    ಸ್ನೇಹಿತ ಕೇಳಿದ್ದಕ್ಕೆ ಸದ್ಯ 85 ಲಕ್ಷ ಹಣ ಹೊಂದಿಸಿಕೊಂಡು ರಾವ್, ತನ್ನ ಕಾರಿನಲ್ಲಿ ದಿಲ್ ಸುಖ್ ನಗರದತ್ತ ಹೊರಟಾಗ ಸ್ಪೆಷಲ್ ಕಾರ್ಯಾಚರಣಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನ ಕೈಯಿಂದ ನಗದು ವಶಪಡಿಸಿಕೊಂಡಿರೋ ತಂಡ ತನಿಖೆ ಮುಂದುವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವತಿ ಸ್ನಾನ ಮಾಡುವಾಗ ವಿಡಿಯೋ- ಅಪ್ರಾಪ್ತನ ಟ್ಯಾಬ್ ಪರಿಶೀಲಿಸಿದಾಗ ಬರೋಬ್ಬರಿ 3 ಸಾವಿರ ವಿಡಿಯೋ ಪತ್ತೆ

    ಯುವತಿ ಸ್ನಾನ ಮಾಡುವಾಗ ವಿಡಿಯೋ- ಅಪ್ರಾಪ್ತನ ಟ್ಯಾಬ್ ಪರಿಶೀಲಿಸಿದಾಗ ಬರೋಬ್ಬರಿ 3 ಸಾವಿರ ವಿಡಿಯೋ ಪತ್ತೆ

    ಹೈದರಾಬಾದ್: 14 ವರ್ಷದ ಅಪ್ರಾಪ್ತನೊಬ್ಬ ಯುವತಿಯರು ಸ್ನಾನ ಮಾಡತ್ತಿರುವ ವಿಡಿಯೋ ಮಾಡಿ ಸಿಕ್ಕಿಬಿದ್ದ ಪ್ರಕರಣವೊಂದು ಮಂಗಳವಾರ ಆಂಧ್ರಪ್ರದೇಶದ ಮಾದಾಪುರದಲ್ಲಿ ನಡೆದಿದೆ.

    ಅಪ್ರಾಪ್ತ ಬಾಲಕನ ಮನೆ ಲೇಡಿಸ್ ಹಾಸ್ಟೆಲ್ ಪಕ್ಕದಲ್ಲಿದ್ದು, ಅಲ್ಲಿ ಯುವತಿಯರು ಸ್ನಾನ ಮಾಡುವಾಗ ತನ್ನ ಟ್ಯಾಬ್‍ನಲ್ಲಿ ವಿಡಿಯೋ ಮಾಡುತ್ತಿದ್ದನು. ಮಂಗಳವಾರ ಬಾಲಕ ವಿಡಿಯೋ ಮಾಡುತ್ತಿದ್ದಾಗ ಯುವತಿ ಗಮನಿಸಿದ್ದಾರೆ. ಬಳಿಕ ಹಾಸ್ಟೆಲ್‍ನಲ್ಲಿದ್ದವರಿಗೆ ಈ ವಿಷಯ ತಿಳಿಸಿ ಬಾಲಕನ ಮನೆಗೆ ಹೋಗಿ ಆತನನ್ನು ರೆಡ್‍ಹ್ಯಾಂಡಾಗಿ ಹಿಡಿದಿದ್ದಾರೆ.

    ಯುವತಿ ಬಾಲಕನನ್ನು ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ಟ್ಯಾಬ್ ಪರಿಶೀಲಿಸಿದ್ದಾಗ ಅದರಲ್ಲಿ ಬರೋಬ್ಬರಿ 3 ಸಾವಿರ ಯುವತಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಪತ್ತೆಯಾಗಿದೆ.

    ಬಾಲಕ 9ನೇ ತರಗತಿ ಓದುತ್ತಿದ್ದಾನೆ. ಮನೆಯ ಪಕ್ಕದಲ್ಲೇ ಹಾಸ್ಟೆಲ್‍ಯಿದ್ದು, ಬಾಲಕ ತನ್ನ ಮನೆಯ ಶೌಚಾಲಯದ ಕಿಟಕಿಯಿಂದ ಯುವತಿಯರ ಹಾಸ್ಟೆಲ್ ಶೌಚಾಲಯವನ್ನು ಇಣುಕಿ ನೋಡುತ್ತಿದ್ದನು. ಬಳಿಕ ತನ್ನ ಟ್ಯಾಬ್‍ನಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋವನ್ನು ಸೆರೆ ಹಿಡಿಯುತ್ತಿದ್ದನು ಎಂದು ಮಾದಾಪುರ ಎಸಿಪಿ ಶ್ಯಾಮ್ ಪ್ರಸಾದ್ ರಾವ್ ತಿಳಿಸಿದ್ದಾರೆ.

    ಬಾಲಕನ ಟ್ಯಾಪ್ ಪರಿಶೀಲಿಸಿದ್ದಾಗ ಬರೋಬ್ಬರಿ 3,000 ಫೋಟೋ ಹಾಗೂ ವಿಡಿಯೋ ಪತ್ತೆಯಾಗಿದೆ. ಬಾಲಕನ ಟ್ಯಾಬ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 354-ಸಿ(ಮಹಿಳೆಗೆ ಗೊತ್ತಿಲ್ಲದೆ ರಹಸ್ಯವಾಗಿ ಕ್ಯಾಮೆರಾದ ಮೂಲಕ ತೆಗೆಯುವುದು) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಮಾದಾಪುರ ಡಿಸಿಪಿ ಎ. ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ನಾಟಕದಲ್ಲಿ 1.26 ದಶಲಕ್ಷ ಟನ್ ಚಿನ್ನ ಪತ್ತೆ!- ರಾಜ್ಯದಲ್ಲಿ ಎಲ್ಲಿ ಏನು ಪತ್ತೆ?

    ಕರ್ನಾಟಕದಲ್ಲಿ 1.26 ದಶಲಕ್ಷ ಟನ್ ಚಿನ್ನ ಪತ್ತೆ!- ರಾಜ್ಯದಲ್ಲಿ ಎಲ್ಲಿ ಏನು ಪತ್ತೆ?

    ಸಾಂದರ್ಭಿಕ ಚಿತ್ರ

    – 10 ವರ್ಷಗಳ ಕಾಲ ಜಿಎಸ್‍ಐ ಅಧ್ಯಯನ
    – ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಧ್ಯಯನ
    – ತಮಿಳುನಾಡಿನಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆ

    ಹೈದರಾಬಾದ್: ಕರ್ನಾಟಕದಲ್ಲಿ ಚಿನ್ನ ಮತ್ತು ತಮಿಳುನಾಡಿನಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆಯಾಗಿದೆ ಎಂದು ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ (ಜಿಎಸ್‍ಐ) ಹೇಳಿದೆ.

    ಹೈದರಾಬಾದಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಎಸ್‍ಐ ದಕ್ಷಿಣ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂ ಶ್ರೀಧರ್, ಕಳೆದ 10 ವರ್ಷಗಳಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಲ್ಲಿ ಅಧ್ಯಯನ ನಡೆಸಿದ್ದು, ತುಮಕೂರಿನ ಅಜ್ಜನಹಳ್ಳಿಯಲ್ಲಿ 1.26 ದಶಲಕ್ಷ ಟನ್ ಚಿನ್ನದ ನಿಕ್ಷೇಪ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಅಜ್ಜನಹಳ್ಳಿಯ ಬ್ಲಾಕ್ ಸಿಯಲ್ಲಿ 1.26 ದಶಲಕ್ಷ ಟನ್ ಸಂಪತ್ತು ಇದ್ದರೆ, ತಮಿಳುನಾಡಿನ ತಾಸಂಪಲೆಯಂನಂಲ್ಲಿ 0.402 ದಶಲಕ್ಷ ಟನ್ ಪ್ಲಾಟಿನಂ ನಿಕ್ಷೇಪವಿದೆ ಎಂದು ಅವರು ತಿಳಿಸಿದ್ದಾರೆ.

    ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕೂಸಿತ ವಾಗುವ ಸ್ಥಳಗಳ ಮ್ಯಾಪ್ ಮಾಡಿದ್ದೇವೆ. ತಮಿಳುನಾಡಿನ ಥೇನಿ, ನೀಲಗಿರಿ, ದಿಂಡಿಗಲ್, ಮಧುರೈ, ತಿರುನಲ್ವೇಲಿ, ಕನ್ಯಾಕುಮರಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ್ದೇವೆ ಎಂದು ಶ್ರೀಧರ್ ತಿಳಿಸಿದರು.

    ಸಿಮೆಂಟ್ ತಯಾರಿಕೆಯಲ್ಲಿ ಬಳಸುವ ಸುಣ್ಣ ಕರ್ನಾಟಕದ ಬೆಳಗಾವಿ, ಹೊಸಕೋಟೆ, ಆಂಧ್ರದ ಗುಂಟೂರು ಮತ್ತು ಕರ್ನೂಲ್ ಜಿಲ್ಲೆಯಲ್ಲಿ ಪತ್ತೆಯಾಗಿದೆ.

    ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪ್ರದೇಶದಲ್ಲಿ ಮ್ಯಾಂಗನೀಸ್ ನಿಕ್ಷೇಪದ ಲಭ್ಯತೆಯ ಬಗ್ಗೆ ಅಧ್ಯಯನ ನಡೆಯುತ್ತಿದ್ದು, ಸದ್ಯದ ಮಾಹಿತಿಯ ಅನ್ವಯ ಈ ಪ್ರದೇಶದಲ್ಲಿ ಸುಮಾರು 3 ಮೆಟ್ರಿಕ್ ಟನ್ ಮೆಗ್ನೀಷಿಯಂ ಲೋಹದ ಮಾದರಿಗಳು ಪತ್ತೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಬಳ್ಳಾರಿಯ ರಮಣದುರ್ಗ ಪ್ರದೇಶದಲ್ಲೂ ಮ್ಯಾಗನೀಸ್ ನಿಕ್ಷೇಪದ ಪತ್ತೆಯಾಗಿದೆ. ಉಳಿದಂತೆ 2016-17 ಅವಧಿಯಲ್ಲಿ ನಡೆದ ಅಧ್ಯಯನದ ವೇಳೆ ತೆಲಂಗಾಣದ ಕರೀಂ ನಗರ್, ಅದಿಲಾಬಾದ್, ಖಮ್ಮಂ ಹಾಗೂ ವರಂಗಲ್ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ 89.22 ಮೆಟ್ರಿಕ್ ಟನ್ ಕಬ್ಬಿಣ ಅದಿರು ಸಂಪನ್ಮೂಲಗಳು ಇರುವುದು ಜಿಎಸ್‍ಐ ಅಧ್ಯಯನದಲ್ಲಿ ಪ್ರಕಟವಾಗಿದೆ.

    ಕೇಂದ್ರ ಸರ್ಕಾರದ ಗಣಿ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ಪತ್ತೆ ಹಚ್ಚಿರುವ ನಿಕ್ಷೇಪಗಳ ಬಗ್ಗೆ ಹೆಚ್ಚಿನ ಅಧ್ಯನವನ್ನು ನಡೆಸಿದೆ. ಸಂಶೋಧನಾ ಕಾರ್ಯದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ‘ಭೂಮಿ ಸಂವಾದ’ ಎಂಬ ಕಾರ್ಯಕ್ರಮವನ್ನು ನಡೆಸಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಸೈನಾ, ಕಶ್ಯಪ್ ರಾಯಲ್ ರಿಸೆಪ್ಷನ್ – ದಕ್ಷಿಣ ಭಾರತದ ನಟರು ಭಾಗಿ

    ಸೈನಾ, ಕಶ್ಯಪ್ ರಾಯಲ್ ರಿಸೆಪ್ಷನ್ – ದಕ್ಷಿಣ ಭಾರತದ ನಟರು ಭಾಗಿ

    ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ಮುಂಬೈನಲ್ಲಿ ಶುಕ್ರವಾರ ನೆರವೇರಿದೆ. ಮುಂಬೈನಲ್ಲಿ ಸಿಂಪಲ್ ಆಗಿ ಮದ್ವೆಯಾದ ಸೈನಾ ಹೈದರಾಬಾದ್‍ನಲ್ಲಿ ರಾಯಲ್ ರಿಸೆಪ್ಷನ್ ಮಾಡಿಕೊಂಡಿದ್ದು ದಕ್ಷಿಣದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಭಾನುವಾರ ಹೈದರಾಬಾದ್‍ನ ಪಂಚತಾರಾ ಹೊಟೇಲ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಆರತಕ್ಷತೆಯಲ್ಲಿ ತೆಲುಗು ನಟ ನಾಗಾರ್ಜುನ್ ಹಾಗೂ ರಕುಲ್ ಪ್ರೀತ್ ಭಾಗಿಯಾಗಿ ನವದಂಪತಿಗೆ ಶುಭಾಶಯ ಕೋರಿದ್ದಾರೆ.

    ಸೈನಾ ಹಾಗೂ ಕಶ್ಯಪ್ ತಮ್ಮ ಆರತಕ್ಷತೆ ವೇಳೆ ಸಬ್ಯಾಸಾಚಿ ಅವರು ವಿನ್ಯಾಸ ಮಾಡಿದ್ದ ಉಡುಪನ್ನು ಧರಿಸಿದ್ದರು. ಸೈನಾ ನೀಲಿ ಬಣ್ಣದ ಲೆಹೆಂಗಾ ಧರಿಸಿ ಅದಕ್ಕೆ ಬ್ಲೂ ಕಲರ್ ಡೈಮಂಡ್ ನೆಕ್ಲೇಸ್ ಧರಿಸಿದ್ದರೆ ಅವರ ಪತಿ ಕಶ್ಯಪ್ ಕೂಡ ಆರತಕ್ಷತೆಯಲ್ಲಿ ಬ್ಲೂ ಶೇರ್ವಾನಿ ತೊಟ್ಟು ಅದಕ್ಕೆ ಮುತ್ತಿನ ಹಾರ ಹಾಕಿದ್ದರು.

    ಆರತಕ್ಷತೆಯಲ್ಲಿ ಸೈನಾ ಹಾಗೂ ಕಶ್ಯಪ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ನಾಗಾರ್ಜುನ್ ಹಾಗೂ ರಕುಲ್ ಪ್ರೀತ್ ಹೊರತಾಗಿ ಸೈನಾ ಹಾಗೂ ಕಶ್ಯಪ್ ಅವರ ಸಂಬಂಧಿಕರು ಹಾಗೂ ಕುಟುಂಬಸ್ಥರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

    ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ 10 ವರ್ಷಗಳಿಂದ ರಿಲೇಶನ್‍ಶಿಪ್‍ನಲ್ಲಿದ್ದರು. ಸೈನಾ ಅವರು ತಮ್ಮ ಟ್ವಿಟ್ಟರಿನಲ್ಲಿ ಮದುವೆಯ ಫೋಟೋ ಹಂಚಿಕೊಂಡು `ನನ್ನ ಜೀವನದ ಅತ್ಯುತ್ತಮ ಮ್ಯಾಚ್’ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

    ಈ ಹಿಂದೆ ಸೈನಾ, ಕಶ್ಯಪ್ ಮದುವೆ ಹೈದರಾಬಾದ್‍ನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸೈನಾ, ಕಶ್ಯಪ್ ಕೈಹಿಡಿದಿದ್ದು, ಸಮಾರಂಭದಲ್ಲಿ ಆಪ್ತ ವಲಯದ ಸ್ನೇಹಿತರು ಸೇರಿದಂತೆ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೊಬೈಲ್ ಫೋನಿಗಾಗಿ ಗಲಾಟೆ: ಪ್ರಿನ್ಸಿಪಾಲ್ ಮಗಳು ಆತ್ಮಹತ್ಯೆ

    ಮೊಬೈಲ್ ಫೋನಿಗಾಗಿ ಗಲಾಟೆ: ಪ್ರಿನ್ಸಿಪಾಲ್ ಮಗಳು ಆತ್ಮಹತ್ಯೆ

    ಹೈದರಾಬಾದ್: ಮೊಬೈಲ್ ಫೋನ್ ವಿಚಾರಕ್ಕೆ ನಡೆದ ಗಲಾಟೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ.

    ಸುಚಿತ್ರಾ(19) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಂಭಾಂ ದಾಮೋದರ್ ರೆಡ್ಡಿಯ ಹಿರಿಯ ಪುತ್ರಿಯಾಗಿದ್ದು, ಇವರು ಖಾಸಗಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಸುಚಿತ್ರಾ ಮತ್ತು ಆಕೆಯ ಸಹೋದರಿ ಹಾಸಿನಿ ಮೊಬೈಲ್ ಫೋನ್ ಗಾಗಿ ಜಗಳವಾಡುತ್ತಿದ್ದರು. ಬಳಿಕ ಅವರ ತಂದೆಯ ಇಬ್ಬರ ಜಗಳದಲ್ಲಿ ಮಧ್ಯಪ್ರವೇಶಿಸಿ, ಮೊಬೈಲ್ ಬಿಟ್ಟು ಪರೀಕ್ಷೆಗಳಿಗೆ ಓದಿಕೊಳ್ಳಿ ಎಂದು ಬೈದಿದ್ದಾರೆ. ಇದರಿಂದ ಸುಚಿತ್ರಾ ಬೇಸರಗೊಂಡಿದ್ದಳು.

    ಸುಚಿತ್ರಾ ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಟಿದ್ದು, ಭಾನುವಾರ ಬೆಳಿಗ್ಗೆ ಆಕೆಯ ಮೃತ ದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾದ 3 ದಿನಕ್ಕೆ ಪತಿಯ ಮನೆಗೆ ಹೋಗಿ ಬೆಂಕಿ ಹಚ್ಚಿಕೊಂಡ ನವವಿವಾಹಿತೆ

    ಮದ್ವೆಯಾದ 3 ದಿನಕ್ಕೆ ಪತಿಯ ಮನೆಗೆ ಹೋಗಿ ಬೆಂಕಿ ಹಚ್ಚಿಕೊಂಡ ನವವಿವಾಹಿತೆ

    ಹೈದರಾಬಾದ್: ಬಲವಂತದ ಮದುವೆಯಿಂದಾಗಿ 19 ವರ್ಷದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರಾಮ ಸಮುದ್ರಂನಲ್ಲಿ ನಡೆದಿದೆ.

    ಟಿ. ಸರಸ್ವತಿ (19) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಸರಸ್ವತಿ ಮೂರು ದಿನಗಳ ಹಿಂದೆಯಷ್ಟೆ ಜಗದೀಶ್ ಎಂಬವರ ಜೊತೆ ಮದುವೆಯಾಗಿತ್ತು. ಆದರೆ ಸರಸ್ವತಿಗೆ ಈ ಮದುವೆ ಇಷ್ಟವಿರಲಿಲ್ಲ. ಇದರಿಂದ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಏನಿದು ಪ್ರಕರಣ
    ಮೃತ ಸರಸ್ವತಿ ಶುಕ್ರವಾರ ಪತಿ ಜಗದೀಶ್ ಮನೆಗೆ ಹೋಗಿದ್ದಾಳೆ. ಅಂದು ಸುಮಾರು ರಾತ್ರಿ 8 ಗಂಟೆಗೆ ಮನೆಯವರೆಲ್ಲಾ ಮಾತನಾಡಿಕೊಂಡು ಕುಳಿತಿದ್ದರು. ಈ ವೇಳೆ ಸರಸ್ವತಿ ಶೌಚಾಲಯಕ್ಕೆ ಹೋಗಬೇಕು ಎಂದು ಹೋಗಿದ್ದಾಳೆ. ಆದರೆ ಅಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ನಂತರ ಸರಸ್ವತಿ ಚೀರಾಡಿದ್ದಾಳೆ. ಇದನ್ನು ಕೇಳಿಸಿಕೊಂಡು ಕುಟುಂಬ ಸದಸ್ಯರು ತಕ್ಷಣ ಅವಳನ್ನು ರಕ್ಷಿಸಿ ಪುಂಗೂನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರಸ್ವತಿ ಮೃತಪಟ್ಟಿದ್ದಾಳೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಎಸ್‍ಐ ಶಿವ ಶಂಕರ್ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಸರಸ್ವತಿಗೆ ಇಷ್ಟವಿಲ್ಲದ ಮದುವೆ ಮಾಡಿಸಿದ್ದರು. ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪತಿಗೆ ರಾತ್ರಿ ನಿದ್ರೆ ಮಾತ್ರೆ ನೀಡಿ ಪತ್ನಿಯಿಂದ ನೀಚ ಕೃತ್ಯ!

    ಪತಿಗೆ ರಾತ್ರಿ ನಿದ್ರೆ ಮಾತ್ರೆ ನೀಡಿ ಪತ್ನಿಯಿಂದ ನೀಚ ಕೃತ್ಯ!

    ಹೈದರಾಬಾದ್: ಪತ್ನಿ ಪ್ರಿಯತಮನ ಜೊತೆ ಇದ್ದಾಗ ಪತಿ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಪರಿಣಾಮ ಕೋಪಗೊಂಡ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿನಲ್ಲಿ ನಡೆದಿದೆ.

    ನಾಗಲಕ್ಷ್ಮಿ ಕೊಲೆಯಾದ ಮಹಿಳೆ. ಆರೋಪಿಯನ್ನು ರಾಮ್‍ಬಾಬು ಎಂದು ಗುರುತಿಸಲಾಗಿದೆ. ಈತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ನಾಗಲಕ್ಷ್ಮಿಯನ್ನು ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರೋಪಿ ಇಬ್ಬರು ಮಕ್ಕಳನ್ನು ತಾಯಿಯಿಂದ ದೂರವಿರಿಸಿದ್ದನು. ಈ ಕಾರಣದಿಂದ ಆರೋಪಿ ರಾಮ್‍ಬಾಬು ಮತ್ತು ನಾಗಾಲಕ್ಷ್ಮಿ ಮಧ್ಯೆ ಯಾವಾಗಲೂ ಜಗಳ ನಡೆಯುತ್ತಿತ್ತು.

    ಅಷ್ಟೇ ಅಲ್ಲದೇ ಈ ಮದುವೆ ನಾಗಲಕ್ಷ್ಮಿಗೆ ಇಷ್ಟವೂ ಇರಲಿಲ್ಲ. ಬಳಿಕ ನಾಗಲಕ್ಷ್ಮಿ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಮೃತ ನಾಗಲಕ್ಷ್ಮಿ ಪತಿಗೆ ಪ್ರತಿದಿನ ರಾತ್ರಿ ಹಾಲಿನಲ್ಲಿ ನಿದ್ರೆ ಮಾತ್ರೆಯನ್ನು ಹಾಕಿ ಕೊಡುತ್ತಿದ್ದಳು. ಹೀಗೆ ಪತಿ ನಿದ್ದೆ ನಂತರ ತನ್ನ ಪ್ರಿಯತಮನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಆತನ ಜೊತೆ ರಾತ್ರಿ ಸಮಯ ಕಳೆಯುತ್ತಿದ್ದಳು.

    ಒಂದು ದಿನ ಆರೋಪಿ ರಾಮ್‍ಬಾಬುಗೆ ಪತ್ನಿಯ ಮೇಲೆ ಅನುಮಾನ ಬಂದಿದೆ. ಆಗ ಆತ ತನ್ನ ಪತ್ನಿ ಕೊಟ್ಟ ಹಾಲನ್ನು ಕುಡಿದಂತೆ ನಟಿಸಿ ಮಲಗಿದ್ದನು. ಎಂದಿನಂತೆ ಪತಿ ಮಲಗಿದ ಬಳಿಕ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಮಧ್ಯರಾತ್ರಿಯಲ್ಲಿ ಪತಿ ಎಚ್ಚರಗೊಂಡು ಪತ್ನಿ ತನ್ನ ಪ್ರಿಯಕರನ ಜೊತೆ ಮಲಗಿದ್ದನ್ನು ನೋಡಿದ್ದಾನೆ.

    ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಕ್ಷಣ ಪ್ರಿಯಕರ ಮನೆಯಿಂದ ತಪ್ಪಿಸಿಕೊಂಡಿದ್ದಾನೆ. ಈ ವೇಳೆ ಆರೋಪಿ ರಾಮ್‍ಬಾಬು ಕೋಪಗೊಂಡು ಪತ್ನಿಯ ಜೊತೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ತಲೆಯನ್ನು ಹಿಡಿದು ಕಲ್ಲಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿ ನಾಗಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಆರೋಪಿ ರಾಮ್‍ಬಾಬುನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ರಾಮ್‍ಬಾಬು ಮತ್ತು ನಾಗಾಲಕ್ಷ್ಮಿ ಪ್ರೀತಿ ಮಾಡಿ ಮದುವೆಯಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv