Tag: Hyderabad

  • Dad My Forever Hero- ಮಗನಿಂದ ಪ್ರಣಯ್‍ಗೆ ಭಾವನಾತ್ಮಕ ವಿಶ್

    Dad My Forever Hero- ಮಗನಿಂದ ಪ್ರಣಯ್‍ಗೆ ಭಾವನಾತ್ಮಕ ವಿಶ್

    ಹೈದರಾಬಾದ್: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಅಮೃತಾ ಅವರು ಭಾವನಾತ್ಮಕವಾಗಿ ಶುಭಾಶಯ ಕೋರಿದ್ದು, ಮಗನಿಂದಲೂ ವಿಶ್ ಮಾಡಿಸಿದ್ದಾರೆ.

    ಅಮೃತಾ ಅವರು ಜನವರಿ 25 ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೃತ ಪ್ರಣಯ್ ಬರ್ತ್ ಡೇ ಫೆಬ್ರವರಿ 1 ರಂದು ಇತ್ತು. ಆದ್ದರಿಂದ ಅಮೃತಾ ಪ್ರೀತಿಯಿಂದ ಪತಿ ಪ್ರಣಯ್ ಗೆ ಫೇಸ್ ಬುಕ್ ನಲ್ಲಿ ಶುಭಾಶಯ ಕೋರಿದ್ದಾರೆ. ಬಳಿಕ ಅವರು ತನ್ನ ಮಗುವನ್ನು ಎತ್ತಿಕೊಂಡಿರುವ ಫೋಟೋ ಹಾಕಿ ಮಗನಿಂದಲೂ ಶುಭಾಶಯ ತಿಳಿಸಿದ್ದಾರೆ.

    ಮೊದಲಿಗೆ ಅಮೃತಾ, “ಗಂಟೆ, ದಿನ, ತಿಂಗಳು, ವರ್ಷ ಹಾಗೂ ದಶಕಗಳು ಉರುಳಬಹುದು. ಆದರೆ ನಾನು ನಿಮ್ಮ ಬರ್ತ್ ಡೇ ದಿನವನ್ನು ಎಂದಿಗೂ ಮರೆಯುವುದಿಲ್ಲ. ನೀವು ನಿಮ್ಮ ತೋಳುಗಳಿಂದ ನನ್ನನ್ನು ಹಿಡಿದು, ನನ್ನ ಕಣ್ಣುಗಳನ್ನು ನೋಡುತ್ತಾ ‘ಐ ಲವ್ ಯು’ ಎಂದು ನನ್ನ ಕಣ್ಣುಗಳಿಗೆ ಪಿಸುಗುಟ್ಟಿದ್ದೀರಿ. ಹ್ಯಾಪಿ ಬರ್ತ್ ಡೇ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ” ಎಂದು ಬರೆದು ಪ್ರಣಯ್ ಅಮೃತಾ ಕಣ್ಣುಗಳನ್ನು ನೋಡುತ್ತಿರುವ ಫೋಟೋ ಹಾಕಿ ಶುಭಾಶಯ ತಿಳಿಸಿದ್ದರು.

    “ನಿಮ್ಮ ಆತ್ಮ ತುಂಬಾ ಪರಿಶುದ್ಧವಾಗಿದೆ. ನಿಮ್ಮ ಅತ್ಯಮೂಲ್ಯವಾದ ಬುದ್ಧಿವಂತಿಕೆ ಬೆರಗುಗೊಳಿಸುತ್ತದೆ. ಹ್ಯಾಪಿ ಬರ್ತ್ ಡೇ ಡ್ಯಾಡಿ.. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಬರೆದು ಮಗನ ಜೊತೆಗಿರುವ ಫೋಟೋ ಹಾಕಿ ಮಗನಿಂದ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ.

    ಅಮೃತಾ ವಿಶ್ ಮಾಡಿದ ರೀತಿ ಮತ್ತು ಫೋಟೋ ಎಲ್ಲರ ಮನಕಲಕುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೃತಾ ಅವರು ಈ ಪೋಸ್ಟ್ ಮಾಡಿದ ತಕ್ಷಣ ಅನೇಕ ಮಂದಿ ಲೈಕ್ಸ್ ಮಾಡಿದ್ದು, ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ ಫೋಟೋವನ್ನು 2.6 ಸಾವಿರ ಮಂದಿ ಶೇರ್ ಮಾಡಿದ್ದು, 21 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಪ್ರಣಯ್ ಮತ್ತು ಅಮೃತಾ ಜೀವನದ ಪಯಣದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

    ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿದ್ದು, ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ 2018 ಸೆಪ್ಟೆಂಬರ್ 14ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಶ್ಲೀಲ ಮೆಸೇಜ್, ಕಾಲ್ ಕಿರಿಕಿರಿ – ಕಿಡ್ನಾಪ್ ಮಾಡಿ ಕಾಮುಕನಿಗೆ ಪಾಠ ಕಲಿಸಿದ ಟೆಕ್ಕಿ

    ಅಶ್ಲೀಲ ಮೆಸೇಜ್, ಕಾಲ್ ಕಿರಿಕಿರಿ – ಕಿಡ್ನಾಪ್ ಮಾಡಿ ಕಾಮುಕನಿಗೆ ಪಾಠ ಕಲಿಸಿದ ಟೆಕ್ಕಿ

    ಹೈದರಾಬಾದ್: ಮಹಿಳಾ ಟೆಕ್ಕಿಯೊಬ್ಬರು ತಮಗೆ ಕಾಟಕೊಡುತ್ತಿದ್ದ ಕಾಮುಕನನ್ನು ಕಿಡ್ನಾಪ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಕೆಲ ದಿನಗಳಿಂದ ವ್ಯಕ್ತಿಯೊಬ್ಬನು 24 ವರ್ಷದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಗೆ ಫೋನ್ ಮಾಡಿ, ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ವಿಪರೀತ ಕಾಟ ಕೊಡುತ್ತಿದ್ದನು. ಮಹಿಳೆಯ ಗೆಳತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನು ಹೇಗೋ ಆಕೆಯ ಫೋನ್ ನಂಬರ್ ಪಡೆದು ಕಾಲ್ ಹಾಗೂ ಮೆಸೇಜ್ ಮಾಡಿ ಹಿಂಸೆ ನೀಡುತ್ತಿದ್ದನು.

    ಕಾಮುಕನ ಹಿಂಸೆಯಿಂದ ಬೇಸತ್ತಿದ್ದ ಮಹಿಳೆಯು ತನ್ನ ಸ್ನೇಹಿತೆಯರ ಸಹಾಯ ಪಡೆದು ಆ ಕಾಮುಕನಿಗೆ ಪಾಠ ಕಲಿಸಬೇಕು ಎಂದು ಫ್ಲಾನ್ ಮಾಡಿದ್ದರು. ಬಳಿಕ ಕಾಮುಕನಿಗೆ ಕರೆಮಾಡಿ ಸಿಕಂದರಾಬಾದ್ ಬಳಿ ಇರುವ ಕಾಲೇಜ್ ಹತ್ತಿರ ಬರಲು ಹೇಳಿದ್ದಾರೆ. ನಂತರ ಅಲ್ಲಿ ಆತನಿಗೆ ಹಿಗ್ಗಾ ಮುಗ್ಗಾ ಹೊಡೆದು ಕಿಡ್ನಾಪ್ ಮಾಡಿದ್ದಾರೆ. ಅಲ್ಲದೆ ನಿರ್ಜನ ಪ್ರದೇಶಕ್ಕೆ ಆತನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ.

    ಆದ್ರೆ ತೀವ್ರ ಗಾಯಗೊಂಡಿದ್ದರೂ ಚಾಲಾಕಿ ಕಾಮುಕನು ಮಹಿಳೆಯಿಂದ ತಪ್ಪಿಸಿಕೊಂಡು ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವಿಷಯದ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಬಂದ ಪೊಲೀಸರು ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ವ್ಯಕ್ತಿಯ ಹೇಳಿಕೆ ಮೇಲೆ ಪೊಲೀಸರು ಮಹಿಳೆ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಾನೂನನ್ನು ಉಲ್ಲಂಘಿಸಿ ಕಿಡ್ನಾಪ್ ಮಾಡಿ ಥಳಿಸಿದಕ್ಕೆ ಸದ್ಯ ಮಹಿಳಾ ಟೆಕ್ಕಿ ವಿರುದ್ಧ ಗೋಪಾಲ್‍ಪುರಂ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಕೊಲೆ ಪ್ರಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನನ್ನ ಫೋಟೋ, ವಿಡಿಯೋ ನೋಡಿ ಒಂದು ರಾತ್ರಿಗೆ 1 ಕೋಟಿ ಆಫರ್ ಮಾಡ್ತಿದ್ದಾರೆ: ನಟಿ

    ನನ್ನ ಫೋಟೋ, ವಿಡಿಯೋ ನೋಡಿ ಒಂದು ರಾತ್ರಿಗೆ 1 ಕೋಟಿ ಆಫರ್ ಮಾಡ್ತಿದ್ದಾರೆ: ನಟಿ

    ಹೈದರಾಬಾದ್: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿಯರು ತಮ್ಮ ಹಾಟ್ ಮತ್ತು ಬೋಲ್ದ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅದರಂತೆಯೇ ಅವರ ಫೋಟೋ, ವಿಡಿಯೋ ನೋಡಿ ಪಡ್ಡೆ ಹುಡುಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ. ಈಗ ತೆಲುಗು ನಟಿ ಸಾಕ್ಷಿ ಚೌಧರಿ ಅವರಿಗೆ ಒಂದು ರಾತ್ರಿಗೆ ಒಂದು ಕೋಟಿ ಹಣವನ್ನು ಆಫರ್ ಮಾಡಿದ್ದಾರಂತೆ.

    ಹೌದು.. ನಟಿ ಸಾಕ್ಷಿ ಚೌಧರಿ ತನ್ನ ಟ್ವೀಟರ್, ಫೇಸ್‍ಬುಕ್ ನಲ್ಲಿ ತಮ್ಮ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈಗ ಅವರ ಫೋಟೋ,. ವಿಡಿಯೋ ನೋಡಿ ಹಣವನ್ನು ಆಫರ್ ಮಾಡುತ್ತಿದ್ದಾರೆ ಎಂದು ಅವರೆ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

    ನಟಿ ಚೌಧರಿ, “ನನ್ನ ವಿಡಿಯೋ ಮತ್ತು ಫೋಟೋಗಳನ್ನ ನೋಡಿದ ಕೆಲವು ಜನರು ಹುಚ್ಚರಾಗಿದ್ದಾರೆ. ನನಗೆ ಒಂದು ರಾತ್ರಿಗೆ ಒಂದು ಕೋಟಿ ಕೊಡುತ್ತೇನೆ ಎಂದು ಇನ್ ಬಾಕ್ಸ್ ಮಲ್ಲಿ ಮೆಸೇಜ್ ಮಾಡುತ್ತಿದ್ದಾರೆ. ಆದರೆ ಅವರೆಲ್ಲರೂ ಮೂರ್ಖರು. ಯಾಕೆಂದರೆ ನಾನು ಮಾರಾಟಕ್ಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ತಾವು ಅಭಿನಯಿಸಿರುವ ಸಿನಿಮಾವನ್ನು ನೋಡಿ ಎಂದು ಹೇಳಿದ್ದಾರೆ. ಸಾಕ್ಷಿ ಚೌಧರಿ 2013ರಲ್ಲಿ ‘ಪೋಟುಗಾಡು’ ಸಿನಿಮಾದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟದ್ದರು.

    https://twitter.com/SakshiCh2017/status/1090370137650192384

    https://twitter.com/SakshiCh2017/status/1089008662880825344

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಸಲಿಲ್ಲ ಎಂದು 12ರ ಬಾಲಕಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

    ಪ್ರೀತಿಸಲಿಲ್ಲ ಎಂದು 12ರ ಬಾಲಕಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

    ಹೈದರಾಬಾದ್: ಪ್ರೀತಿಯನ್ನು ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಮೌಲಾನಾ ಸಾಹೇಬ್ ಎಂಬ ಯುವಕ ಅಪ್ರಾಪ್ತೆಗೆ ಬೆಂಕಿ ಹಚ್ಚಿದ್ದಾನೆ. ಕರ್ನೂಲ್ ಜಿಲ್ಲೆಯ ಕೌತಾಲಂ ಮಂಡಲದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಕೌತಾಲಂ ಪ್ರದೇಶದ 12 ವರ್ಷದ ಬಾಲಕಿಯೊಬ್ಬಳನ್ನು ಮೌಲಾನಾ ಪ್ರೀತಿಸುತ್ತಿದ್ದನು. ಆದರಿಂದ ಕಳೆದ ಕೆಲವು ತಿಂಗಳಿಂದ ಬಾಲಕಿಗೆ ಪ್ರೀತಿ ಪ್ರೇಮವೆಂದು ಯುವಕ ಪೀಡಿಸುತ್ತಿದ್ದನು.

    ಬಾಲಕಿಗೆ ಯುವಕನನ್ನು ಪ್ರೀತಿಸಲು ಇಷ್ಟವಿರಲಿಲ್ಲ. ಎಷ್ಟೇ ಬಾರಿ ಯುವಕ ಪ್ರೀತಿ ಮಾಡು ಎಂದು ಕಾಟಕೊಡುತ್ತಿದ್ದರೂ ಬಾಲಕಿ ನಾನು ಪ್ರೀತಿ ಮಾಡಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ತನ್ನ ಪ್ರೀತಿಯನ್ನು ಬಾಲಕಿ ಒಪ್ಪಲಿಲ್ಲ ಎಂದು ಯುವಕ ಮನನೊಂದಿದ್ದನು. ಹಾಗೆಯೇ ಬಾಲಕಿ ಮೇಲೆ ಹುಚ್ಚು ಪ್ರೀತಿ ಇಟ್ಟಿದ್ದ ಯುವಕ ಆಕೆಯನ್ನು ಪಡೆಯಲೆಬೇಕು ಎಂದು ಹಟಕ್ಕೆ ಬಿದ್ದಿದ್ದನು.

    ಶುಕ್ರವಾರ ರಾತ್ರಿ ವೇಳೆ ಬಾಲಕಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯುವಕ ಆಕೆಯನ್ನು ತಡೆದು ತನ್ನನ್ನು ಪ್ರೀತಿ ಮಾಡಲೇ ಬೇಕು ಎಂದು ಬೆದರಿಸಿದ್ದಾನೆ. ಅದ್ಯಾವುದಕ್ಕೂ ಬಾಲಕಿ ಒಪ್ಪದೇ ಇದ್ದಾಗ ನಡುರಸ್ತೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಗ ಬಾಲಕಿಯ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದ ಜನರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಅಪ್ರಾಪ್ತ ಬಾಲಕಿ ಮೇಲೆ ಕೊಲೆ ಯತ್ನ ಮಾಡಿದಕ್ಕೆ ಆರೋಪಿ ಮೇಲೆ ಪೊಲೀಸರು ನಿರ್ಭಯ ಕಾಯ್ದೆ ಪ್ರಕಾರ ಕೊಲೆ ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ಹೈದರಾಬಾದ್: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಪತ್ನಿ ಅಮೃತಾ ಅವರು ಗಂಡು ಮಗುವಿಗೆ ಗುರುವಾರ ಜನ್ಮ ನೀಡಿದ್ದಾರೆ.

    ಅಮೃತಾ ಅವರನ್ನು ಅತ್ತೆ ಆಸ್ಪತ್ರೆಗೆ ದಾಖಲಿಸಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ:  ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ 

    ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿದ್ದು, ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರು ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ 2018 ಸೆಪ್ಟಂಬರ್ 14ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದ ವಿಚಾರ ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಕುಟುಂಬದವರಿಗೆ ರಾಜ್ಯ ಸರ್ಕಾರವೂ ಪರಿಹಾರ ಧನವನ್ನು ಫೋಷಿಸಿತ್ತು. ಕೆಲವು ದಿನಗಳ ಬಳಿಕ ಮೃತ ಪ್ರಣಯ್ ಪತ್ನಿ ಅಮೃತಾಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಕೂಡ ಭರವಸೆ ನೀಡಿತ್ತು.

    ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಮೃತ ಪ್ರಣಯ್ ಪತ್ನಿ ಅಮೃತ ವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ಅವರ ಕುಟುಂಬಕ್ಕೆ ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬದವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ

    ಹೈದರಾಬಾದ್: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬುಧವಾರ ಆಂಧ್ರಪ್ರದೇಶದ ವಿಶಾಖಪಟ್ಟಣದ ಆನಂದಪುರಂನಲ್ಲಿ ನಡೆದಿದೆ.

    ಕರನಂ ಕುಮಾರಿ(22) ಆತ್ಮಹತ್ಯೆ ಮಾಡಿಕೊಂಡ ಪೇದೆ. ಪತಿಯೊಂದಿಗಿನ ಗಲಾಟೆಯಿಂದ ರೋಸಿ ಹೋಗಿದ್ದ ಕರನಂ ಕುಮಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕರನಂ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಆಕೆಯ ಪತಿ ಮಲಾ ರಾಜೇಂದ್ರ(27) ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದ.

    ರಾಜೇಂದ್ರ ಹಾಗೂ ಕುಮಾರಿ ಇಬ್ಬರು ವಿಶಾಖಪಟ್ಟನಂನಲ್ಲಿರುವ ಪಂದಲಾಪಾಕದ ಇಂಡೋ-ಟಿಬೇಟಿಯನ್ ಬಾರ್ಡರ್ ಬೆಟಾಲಿಯನ್ ನಲ್ಲಿ ಭೇಟಿ ಆಗಿದ್ದರು. ಭೇಟಿಯಾದ ಬಳಿಕ ಇಬ್ಬರು ಒಳ್ಳೆಯ ಸ್ನೇಹಿತರು ಆಗಿದ್ದರು. ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರ ಮದುವೆಯನ್ನು ಪೋಷಕರು ಒಪ್ಪಿರಲಿಲ್ಲ. ಜಾತಿ ಬೇರೆ ಕಾರಣಕ್ಕೆ ಇಬ್ಬರ ಕುಟುಂಬದವರು ಈ ಮದುವೆಯನ್ನು ನಿರಾಕರಿಸಿದ್ದರು.

    ಕುಮಾರಿ ತನ್ನ ಜೀವಕ್ಕೆ ಹೆದರಿ ಮದುವೆ ಮಾಡಿಕೊಳ್ಳೋಣ ಎಂದು ರಾಜೇಂದ್ರನಿಗೆ ಒತ್ತಾಯಿಸುತ್ತಿದ್ದಳು. ಬಳಿಕ ಇಬ್ಬರು ನಾಲ್ಕು ತಿಂಗಳ ಹಿಂದೆ ಸಿಂಹಚಲಂ ದೇವಸ್ಥಾನದಲ್ಲಿ ಮದುವೆ ಆಗಿ ಆನಂದಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ಜಗಳ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಕುಮಾರಿ ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಳು ಎಂದು ಬೀಮಿಲಿ ಸರ್ಕಲ್ ಇನ್ಸ್ ಪೆಕ್ಟರ್ ಸೂರ್ಯನಾರಾಯಣ ಹೇಳಿದ್ದಾರೆ.

    ಕುಮಾರಿ ಮೊದಲ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಗ ಆಕೆಯ ಪತಿ ಹಾಗೂ ಆಕೆಯ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಅಲ್ಲದೇ ಪತಿ ರಾಜೇಂದ್ರ ತನ್ನ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿ ಕುಮಾರಿ ಚಂಡೀಗಢದಲ್ಲಿದ್ದ ತನ್ನ ಪತಿಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದರೆ ರಾಜೇಂದ್ರ ತನ್ನ ಪತ್ನಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿಯಾಗಿದೆ.

    ಪತಿಯನ್ನು ಕರೆ ಮಾಡಿದ ಬಳಿಕ ಕುಮಾರಿ ತನ್ನ ಕುಟುಂಬದವರಿಗೆ ಕರೆ ಮಾಡಿ, “ನಾನು ಮೋಸ ಹೋಗಿದ್ದೇನೆ. ನಾನು ಖಿನ್ನತೆಗೆ ಒಳಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾಳೆ. ಆಕೆಯ ಪೋಷಕರು ಪ್ರತಿಕ್ರಿಯಿಸುವ ಮೊದಲೇ ಕುಮಾರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಕಾಲ್ ರೆಕಾರ್ಡ್ ಪರಿಶೀಲಿಸಿ ಚಂಡೀಗಢ ಪೊಲೀಸರಿಗೆ ಮಾಹಿತಿ ನೀಡಿದ್ದು ರಾಜೇಂದ್ರನನ್ನು ಬಂಧಿಸಿದ್ದಾರೆ.

    ಕುಮಾರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬೀಮಿಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ಹೈದರಾಬಾದ್: ಅತ್ಯಚಾರವೆಸೆಗಿದ ವಿಡಿಯೋ ತೋರಿಸಿ ಆರೋಪಿಗಳು 16 ವರ್ಷದ ಬಾಲಕಿಯೊಬ್ಬಳ ಮೇಲೆ 4 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    4 ವರ್ಷಗಳ ಹಿಂದೆ ಬಾಲಕಿ ಮೇಲೆ ಆಕೆಯ ಸಂಬಂಧಿಕನೊಬ್ಬ ಅತ್ಯಚಾರವೆಸೆಗಿದ್ದ. ಅಲ್ಲದೆ ಆ ದೃಶ್ಯಗಳನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಬಳಿಕ ಆರೋಪಿ ಹಾಗೂ ಆತನ ಸ್ನೇಹಿತರು ಬಾಲಕಿಗೆ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ಆದ್ರೆ ಈ ಯಾವ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿರಲಿಲ್ಲ.

    ಆ ವಿಡಿಯೋವೊಂದನ್ನೇ ಇಟ್ಟುಕೊಂಡು ಪಾಪಿಗಳು ಬಾಲಕಿ ಮೇಲೆ ಸತತ 4 ವರ್ಷಗಳಿಂದ ಅತ್ಯಚಾರ ಎಸಗಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಕಿರುಕುಳ ತಾಳಲಾರದೇ ಕಳೆದ ತಿಂಗಳು ಹೈದರಾಬಾದ್‍ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ, ತನ್ನ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್‍ನಲ್ಲಿ ಮತ್ತು ಬರುವ ಮಿಶ್ರಣವನ್ನು ಬೆರೆಸಿ ಕೊಟ್ಟನು. ಬಳಿಕ ತನ್ನ ಮೇಲೆ ಅತ್ಯಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ತನ್ನ ಮೇಲೆ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆ ಅಂತ ಹೇಳಿದ್ದಾಳೆ.

    ಈ ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆ ಮನೆಯವರು ಪ್ರತಿಭಟನೆ ಮಾಡಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಕೇವಲ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನ- ಬಳಿಕ ಆಸ್ಪತ್ರೆಯಲ್ಲೇ ಮದ್ವೆ

    ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನ- ಬಳಿಕ ಆಸ್ಪತ್ರೆಯಲ್ಲೇ ಮದ್ವೆ

    ಹೈದರಾಬಾದ್: ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಆಸ್ಪತ್ರೆಯಲ್ಲೇ ಅವರಿಗೆ ಮದುವೆ ಮಾಡಿಸಿದ ಘಟನೆಯೊಂದು ತೆಲಂಗಾಣದಲ್ಲಿರುವ ವಿಕರಾಬಾದ್ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ.

    ರೇಶ್ಮಾ(19) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ರೇಶ್ಮಾ 21 ವರ್ಷದ ನವಾಜ್ ಎಂಬವನನ್ನು ಪ್ರೀತಿಸುತ್ತಿದ್ದಳು. ರೇಶ್ಮಾ ಸಹೋದರಿ ನವಾಜ್ ಸಹೋದರನ ಜೊತೆ ಮದುವೆ ಆಗಿದ್ದಾರೆ. ಈ ವೇಳೆ ರೇಶ್ಮಾ ಹಾಗೂ ನವಾಜ್ ನಡುವೆ ಪ್ರೀತಿ ಶುರುವಾಗಿದೆ.

    ರೇಶ್ಮಾ ಅವರ ಪೋಷಕರು ವಿಕರಾಬಾದ್ ಜಿಲ್ಲೆಯ ಕುಕ್ಕಿಂದದಲ್ಲಿ ವಾಸಿಸುತ್ತಿದ್ದಾರೆ. ರೇಶ್ಮಾ, ನವಾಜ್‍ನನ್ನು ಪ್ರೀತಿಸುತ್ತಿದ್ದ ವಿಷಯ ಆಕೆ ಪೋಷಕರಿಗೆ ಗೊತ್ತಾಗಿದೆ. ಬಳಿಕ ಆಕೆಯ ಪ್ರೀತಿಯನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇಶ್ಮಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ರೇಶ್ಮಾ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದ ನವಾಜ್ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ನವಾಜ್ ಕೂಡ ಅದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೈದ್ಯರು ರೇಶ್ಮಾ ಸೇವಿಸಿದ ಕ್ರಿಮಿನಾಶಕವನ್ನು ಪರಿಶೀಲಿಸುತ್ತಿದ್ದಾಗ ನವಾಜ್ ಅದನ್ನು ಕಸಿದುಕೊಂಡು ಆತನೂ ಅದನ್ನು ಸೇವಿಸಿದ್ದಾನೆ ಎನ್ನಲಾಗಿದೆ.

    ಈ ಘಟನೆ ನಡೆದ ಬಳಿಕ ರೇಶ್ಮಾ ಹಾಗೂ ನವಾಜ್ ಕುಟುಂಬದವರು ಈ ವಿಷಯದ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ರೇಶ್ಮಾ ಹಾಗೂ ನವಾಜ್ ಜೊತೆಯಲ್ಲಿ ಒಟ್ಟಿಗೆ ಜೀವನ ಮಾಡಲಿ ಎಂದು ನಿರ್ಧರಿಸಿದರು. ಬಳಿಕ ಅದೇ ಆಸ್ಪತ್ರೆಯಲ್ಲೇ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ `ಕಾರು ಭಾಗ್ಯ’

    ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ `ಕಾರು ಭಾಗ್ಯ’

    ಹೈದರಾಬಾದ್: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತದಾರರಿಗೆ ಭರ್ಜರಿ ಆಮಿಷವೊಡ್ಡಿದ್ದಾರೆ. ರಾಜ್ಯದ ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ ಸ್ವಿಫ್ಟ್ ಡಿಸೈರ್ ಕಾರು ಹಂಚಿದ್ದಾರೆ.

    ಸ್ವಯಂ ಉದ್ಯೋಗ ಯೋಜನೆ ಅಡಿ ಕಾರು ವಿತರಣೆ ಮಾಡಲಾಗಿದ್ದು, ನಿರುದ್ಯೋಗಿ ಫಲಾನುಭವಿಗಳು ಶೇ.10ರಷ್ಟು ಮೊತ್ತವನ್ನು ಭರಿಸಿದರೆ ಸಾಕು, ಉಳಿದ ಹಣವನ್ನು ಆಂಧ್ರ ಪ್ರದೇಶ ಬ್ರಾಹ್ಮಣ ಸಹಕಾರ ಕ್ರೆಡಿಟ್ ಸೊಸೈಟಿ ಭರಿಸಲಿದೆ.

    ಯೋಜನೆಯ ಆರಂಭದ ಭಾಗವಾಗಿ ಸಿಎಂ ಚಂದ್ರಬಾಬು ನಾಯ್ಡು 30 ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದಾರೆ. ಅಲ್ಲದೇ ಮೊದಲ ಹಂತವಾಗಿ ಐವತ್ತು ಕಾರುಗಳನ್ನು ವಿತರಿಸಲಾಗಿದೆ. ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ 2 ಲಕ್ಷ ರೂ. ದೊರೆಯುತ್ತದೆ.

    ಆಂಧ್ರ ಪ್ರದೇಶ ಬ್ರಾಹ್ಮಣ ಪ್ರಾಧಿಕಾರ ಆರಂಭವಾಗಿ ಇದುವರೆಗೂ ಇದರಿಂದ 1 ಲಕ್ಷ ಮಂದಿ ಅನುಕೂಲ ಪಡೆದಿದ್ದು, ಕಾರುಗಳ ಮೂಲಕ ಸ್ವತಃ ಚಾಲಕರಾಗಿ ವೃತ್ತಿ ಆರಂಭಿಸಬಹುದಾಗಿದೆ. ಈ ಯೋಜನೆಗೂ ಮುನ್ನ ಆಂಧ್ರ ಪ್ರದೇಶ ಸರ್ಕಾರ ಎಲ್ಲರ ಮನೆಗಳಿಗೂ ಸ್ಮಾರ್ಟ್ ಫೋನ್ ಹಂಚಿಕೆಯ ಯೋಜನೆಯನ್ನು ಘೋಷಣೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಬಂಧಿಕರ ಮನೆಗೆ ಹೋಗಿ 5ನೇ ಮಹಡಿಯಿಂದ ಹಾರಿದ್ಳು..!

    ಸಂಬಂಧಿಕರ ಮನೆಗೆ ಹೋಗಿ 5ನೇ ಮಹಡಿಯಿಂದ ಹಾರಿದ್ಳು..!

    ಹೈದರಾಬಾದ್: ಪತಿಯ ಕಿರುಕುಳಕ್ಕೆ ಬೇಸತ್ತು ಐದನೇ ಮಹಡಿಯಿಂದ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಾಸ್ತ್ರಿ ನಗರದಲ್ಲಿ ನಡೆದಿದೆ.

    ಸೋನಿಕಾ ರೆಡ್ಡಿ (31) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೂರು ವರ್ಷಗಳ ಹಿಂದೆ ಸೋನಿಕಾ ರೆಡ್ಡಿ ತಿಮ್ಮಪುರ್ ಗ್ರಾಮದ ನಿವಾಸಿ ಉಯ್ಮ ಕಿರಣ್ ರೆಡ್ಡಿ ಅವರನ್ನು ಮದುವೆಯಾಗಿದ್ದರು. ವಿವಾಹದ ನಂತರ ದಾಂಪತ್ಯ ಜೀವನ ಚೆನ್ನಾಗಿತ್ತು. ದಿನ ಕಳೆದಂತೆ ಪತಿ, ಸೋನಿಕಾ ರೆಡ್ಡಿಗೆ ಮಾನಸಿಕವಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ್ದನು. ಪತಿಯ ವರ್ತನೆಯಿಂದ ಬೇಸತ್ತು ಸೋನಿಕಾ, ಶಾಸ್ತ್ರಿ ನಗರದಲ್ಲಿನ ತನ್ನ ತಂದೆಯ ಮನೆಗೆ ಹೋಗಿದ್ದರು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಜಾನ್ ದಿವಾಕರ್ ಹೇಳಿದ್ದಾರೆ.

    ಬುಧವಾರ ಅದೇ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಸಂಬಂಧಿಕರನ್ನು ಭೇಟಿ ಮಾಡಲು ಅವರ ಮನೆಗೆ ಸೋನಿಕಾ ರೆಡ್ಡಿ ಹೋಗಿದ್ದಾರೆ. ಆದರೆ ಬಳಿಕ ಇದ್ದಕ್ಕಿದ್ದಂತೆ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5ನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸೋನಿಕಾ ರೆಡ್ಡಿ ಮೃತಪಟ್ಟಿದ್ದಾರೆ.

    ಆತ್ಮಹತ್ಯೆಗೆ ಮುಂಚೆ ತನ್ನ ಪಾದರಕ್ಷೆಗಳನ್ನು, ಹ್ಯಾಂಡ್ ಬ್ಯಾಗನ್ನು ಪಕ್ಕದಲ್ಲಿಟ್ಟಿರುವುದು ಕಂಡು ಬಂದಿದೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶಿಲನೆ ನಡೆಸಿದ್ದಾರೆ. ಕೂಲ್ ಡ್ರಿಂಕ್ಸ್ ಬಾಟಲ್ ಟೆರೇಸ್ ಮೇಲೆ ಪತ್ತೆಯಾಗಿರುವುದಿಂದ ಮೃತ ಸೋನಿಕಾ ರೆಡ್ಡಿ ತಂಪಾದ ಪಾನೀಯದಲ್ಲಿ ಕೀಟನಾಶಕವನ್ನು ಬೆರೆಸಿ ಸೇವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv