Tag: Hyderabad

  • ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್

    ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್

    ಹೈದರಾಬಾದ್: ನಗರದ ಮೆಟ್ರೋ ನಿಲ್ದಾಣವೊಂದರ ಲಿಫ್ಟ್‌ನಲ್ಲಿಯೇ ಯುವ ಜೋಡಿ ಮೈಮರೆತು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೋಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಶೀಘ್ರವೇ ಈ ಬಗ್ಗೆ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮೆಟ್ರೋ ಲಿಫ್ಟ್ ನಲ್ಲಿ ಜನರಿದ್ದು, ನಿಲ್ದಾಣ ಬಂದ ಬಳಿಕ ಪ್ರಯಾಣಿಕರು ಇಳಿದು ಹೋಗುತ್ತಾರೆ. ಆಗ ಯುವಕ-ಯುವತಿ ಮಾತ್ರ ಇರುತ್ತಾರೆ. ಈ ವೇಳೆ ತಕ್ಷಣವೇ ಇಬ್ಬರು ಲಿಪ್ ಕಿಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯುವಕ ಲಿಫ್ಟ್ ಬಟನ್‍ನನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಲಿಫ್ಟ್ ಡೋರ್ ತೆಗೆಯದಂತೆ ಮಾಡಿದ್ದಾನೆ. ಬಳಿಕ ಲಿಫ್ಟ್ ಓಪನ್ ಆಗಿದೆ. ಆಗ ಯಾರು ಇಲ್ಲದ್ದನ್ನು ನೋಡಿ ಮತ್ತೆ ಲಿಫ್ಟ್ ಕ್ಲೋಸ್ ಮಾಡಿಕೊಂಡು ಕಿಸ್ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ಲಿಫ್ಟ್ ನಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ಸೆರೆಯಾಗಿದೆ.

    ಇದೇ ಮೊದಲ ಬಾರಿಗೆ ಹೈದರಾಬಾದ್ ಮೆಟ್ರೋ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿದೆ. ಘಟನೆ ನಡೆದ ಸ್ಥಳದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಬಳಿಕ ಯುವಕ, ಯುವತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಎಸ್. ರೆಡ್ಡಿ ತಿಳಿಸಿದ್ದಾರೆ.

    ಮೆಟ್ರೋ ನಿಲ್ದಾಣದಲ್ಲಿ ವೃದ್ಧರು, ಅಶಕ್ತರಿಗೆ ಸಹಾಯವಾಗಲಿ ಎಂದು ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಆದರೆ ಯುವ ಜೋಡಿ ಲಿಫ್ಟ್ ನಲ್ಲಿಯೇ ರೊಮ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರಿಯ ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ವಿಕ್ಟರಿ ವೆಂಕಟೇಶ್

    ಪುತ್ರಿಯ ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ವಿಕ್ಟರಿ ವೆಂಕಟೇಶ್

    ಹೈದರಾಬಾದ್: ಈ ವರ್ಷ ಎಫ್ 2 ಚಿತ್ರದೊಂದಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಜಯ ಪಡೆದ ಸಂಭ್ರಮದಲ್ಲಿರುವ ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ತಮ್ಮ ಮೊದಲ ಪುತ್ರಿಯ ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಟಾಲಿವುಡ್ ಸಿನಿ ರಂಗದಲ್ಲಿ ಪ್ರೇಮ ಚಿತ್ರಗಳಿಗೆ ಹೆಚ್ಚು ಖ್ಯಾತಿ ಪಡೆದಿರುವ ವಿಕ್ಟರಿ ವೆಂಕಟೇಶ್, ನಿಜ ಜೀನದಲ್ಲೂ ತಮ್ಮ ಮಗಳ ಪ್ರೇಮ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ವೆಂಕಟೇಶ್ ಅವರಿಗೆ ಇಬ್ಬರು ಪುತ್ರಿಯರಿದ್ದು, ಮೊದಲ ಪುತ್ರಿ ಆಶ್ರಿತಾ ಹಾಗೂ ಹೈದರಾಬಾದ್ ರೇಸ್ ಕ್ಲಬ್ ಅಧ್ಯಕ್ಷರಾದ ಸುರೇಂದ್ರ ರೆಡ್ಡಿ ಮೊಮ್ಮಗ ವಿನಾಯಕ್ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಿದ್ದು, ಎರಡು ಕುಟುಂಬಗಳ ಸಮ್ಮತಿ ಮೇರೆಗೆ ಫೆಬ್ರವರಿ 6 ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ.

    ವೆಂಕಟೇಶ್ ಸಹೋದರ ಸುರೇಶ್ ಬಾಬು ಹಾಗೂ ಆಂಧ್ರಪ್ರದೇಶ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಇಬ್ಬರು ಸ್ನೇಹಿತರಾಗಿದ್ದು, ಯುವಕನ ತಂದೆ ರಘುರಾಮಿ ರೆಡ್ಡಿ ಕೂಡ ಮಾಜಿ ಸಿಎಂಗೆ ಸ್ನೇಹಿತರಾದ ಕಾರಣ ಇಬ್ಬರ ಪ್ರೇಮಕ್ಕೆ ಬಹುಬೇಗ ಒಪ್ಪಿಗೆ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ. ಮಾರ್ಚ್ 24 ರಂದು ಇಬ್ಬರ ಮದುವೆ ನಿಗದಿಯಾಗಿದೆ ಎನ್ನಲಾಗಿದ್ದು, ಆದರೆ ಈ ಬಗ್ಗೆ ಎರಡು ಕುಟುಂಬದ ಸದಸ್ಯರು ಅಧಿಕೃತ ಸ್ಪಷ್ಟನೆ ನೀಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿರುತೆರೆ ನಟಿ ಆತ್ಮಹತ್ಯೆ- ಸಾಯೋ ಮುನ್ನ ವ್ಯಕ್ತಿಗೆ 14 ಮೆಸೇಜ್ ಕಳುಹಿಸಿದ್ದಳು ಜಾನ್ಸಿ

    ಕಿರುತೆರೆ ನಟಿ ಆತ್ಮಹತ್ಯೆ- ಸಾಯೋ ಮುನ್ನ ವ್ಯಕ್ತಿಗೆ 14 ಮೆಸೇಜ್ ಕಳುಹಿಸಿದ್ದಳು ಜಾನ್ಸಿ

    ಹೈದರಾಬಾದ್: ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿಯೊಬ್ಬರ ಜೊತೆ ಚಾಟ್ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

    ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನ ಶ್ರೀನಗರ ಕಾಲೋನಿಯಲ್ಲಿರುವ ಶ್ರೀ ಸಾಯಿ ಅಪಾರ್ಟ್‍ಮೆಂಟ್‍ನಲ್ಲಿ ಜಾನ್ಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೊಲೀಸರು ಜಾನ್ಸಿ ಮೊಬೈಲ್ ಪರಿಶೀಲಿಸಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿಯೊಬ್ಬನಿಗೆ ವಾಟ್ಸಾಪ್ ಮೂಲಕ 14 ಮೆಸೇಜ್ ಕಳುಹಿಸಿದ್ದಾಳೆ. ಅಲ್ಲದೆ ತನ್ನ ಸಾವಿಗೆ ನಿಖರ ಕಾರಣವನ್ನು ವಿಡಿಯೋ ಮೂಲಕ ತಿಳಿಸಿದ್ದಾಳೆ.

    ವ್ಯಕ್ತಿಯನ್ನು ಆಕೆಯ ಪ್ರಿಯಕರ ಸೂರ್ಯ ಎಂದು ಗುರುತಿಸಲಾಗಿದ್ದು, ಆದರೆ ಕಾರಣ ಬಿಚ್ಚಿಟ್ಟ ವಿಡಿಯೋದಲ್ಲಿ ಏನಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

    ಏನಿದು ಘಟನೆ?
    ಜಾನ್ಸಿ ಮೂಲತಃ ಕೃಷ್ಣ ಜಿಲ್ಲೆಯವಳಾಗಿದ್ದು, ಸೂರ್ಯ ಅಲಿಯಾಸ್ ನಾನಿಯನ್ನು ಪ್ರೀತಿಸುತ್ತಿದ್ದಳು. ಜಾನ್ಸಿ, ಸೂರ್ಯನನ್ನು ಮದುವೆಯಾಗಲು ಇಷ್ಟಪಟ್ಟಿದ್ದಳು. ಆದರೆ ಇವರಿಬ್ಬರ ಮದುವೆಗೆ ಸೂರ್ಯನ ಪೋಷಕರು ವಿರೋಧಿಸಿದ್ದರು. ಸೂರ್ಯ ಕೂಡ ಜಾನ್ಸಿಯನ್ನು ಮದುವೆಯಾಗಲು ನಿರಾಕರಿಸಿದ್ದನು. ಅಲ್ಲದೇ ಆತ ಜಾನ್ಸಿ ಜೊತೆ ಇರುವ ಬದಲು ಆಕೆಯಿಂದ ದೂರ ಇರುತ್ತಿದ್ದನು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಾನ್ಸಿಯ ಪೋಷಕರು ಆರೋಪಿಸಿದ್ದರು.

    ಜಾನ್ಸಿ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾನ್ಸಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಜಾನ್ಸಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಸೂರ್ಯ ನಾಪತ್ತೆ ಆಗಿದ್ದಾನೆ. ಸದ್ಯ ಪೋಲೀಸರು ಆರೋಪಿ ಸೂರ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾತನಾಡಿಸಿಲ್ಲ ಎಂದು ಯುವತಿ ಮೇಲೆ ಕುಡುಗೋಲಿನಿಂದ ಹಲ್ಲೆಗೈದ ಪಾಗಲ್ ಪ್ರೇಮಿ!

    ಮಾತನಾಡಿಸಿಲ್ಲ ಎಂದು ಯುವತಿ ಮೇಲೆ ಕುಡುಗೋಲಿನಿಂದ ಹಲ್ಲೆಗೈದ ಪಾಗಲ್ ಪ್ರೇಮಿ!

    ಹೈದರಾಬಾದ್: ರಸ್ತೆ ಮೇಲೆ ಮಾತನಾಡಿಸಲು ನಿರಾಕರಿಸಿದ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಬರ್ಕತ್‍ಪುರದಲ್ಲಿ ಇಂದು ನಡೆದಿದೆ.

    ಭರತ್ ಎಂಬಾತ ಹಲ್ಲೆ ಮಾಡಿರುವ ಆರೋಪಿ. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯೊಬ್ಬಳನ್ನು ಭರತ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಆದ್ರೆ ಯುವತಿ ಮಾತ್ರ ಈತನ ಪ್ರೀತಿಯನ್ನು ಒಪ್ಪಿರಲಿಲ್ಲ. ಆದರಿಂದ ಪ್ರತಿದಿನ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಕಾಟ ಕೊಡುತ್ತಿದ್ದನು.

    ಇಂದು ಬೆಳಗ್ಗೆ ಕೂಡ ಯುವತಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಭರತ್ ರಸ್ತೆ ಮಧ್ಯೆ ಅಡ್ಡಗಟ್ಟಿ ತನ್ನೊಡನೆ ಮತನಾಡುವಂತೆ ಬಲವಂತ ಮಾಡಿದ್ದಾನೆ. ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬೇಸತ್ತ ಯುವತಿ ಆತನ ಜೊತೆ ಮಾತನಾಡಲು ನಿರಾಕರಿಸಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಯುವಕ ಯುವತಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ಹಿಂದೆ ಯುವಕನ ಮೇಲೆ ಯುವತಿ ಹೈದರಾಬಾದ್‍ನ ಪೊಲೀಸರಿಗೆ ದೂರು ನೀಡಿದ್ದಳು. ಆಗ ಪೊಲೀಸರು ಯುವಕನನ್ನು ಠಾಣೆಗೆ ಕರೆಸಿ ತಿಳಿ ಹೇಳಿದ್ದರು. ಆದರೂ ಕೂಡ ಯುವಕ ಯುವತಿಯ ಬೆನ್ನು ಹತ್ತಿದ್ದ. ಅಲ್ಲದೇ ಸಾಕಷ್ಟು ಬಾರಿ ಯುವತಿಯ ತಾಯಿಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಕೂಡ ಹಾಕಿದ್ದ. ಸದ್ಯ ಆರೋಪಿ ಬಂಧನಕ್ಕೆ ಹೈದರಾಬಾದ್ ಪೊಲೀಸರು ಬಲೆ ಬೀಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಕರ ಮೋಸ ಮಾಡಿದಕ್ಕೆ ಕಿರುತೆರೆ ನಟಿ ಆತ್ಮಹತ್ಯೆ

    ಪ್ರಿಯಕರ ಮೋಸ ಮಾಡಿದಕ್ಕೆ ಕಿರುತೆರೆ ನಟಿ ಆತ್ಮಹತ್ಯೆ

    ಹೈದರಾಬಾದ್: ಪ್ರಿಯಕರ ಮೋಸ ಮಾಡಿದಕ್ಕೆ ನೇಣು ಬಿಗಿದುಕೊಂಡು ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನ ಶ್ರಿನಗರ ಕಾಲೋನಿಯಲ್ಲಿರುವ ಶ್ರೀ ಸಾಯಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.

    ಜಾನ್ಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ. ಜಾನ್ಸಿ ಮೂಲತಃ ಕೃಷ್ಣ ಜಿಲ್ಲೆಯವಳಾಗಿದ್ದು, ಸೂರ್ಯ ಅಲಿಯಾಸ್ ನಾನಿಯನ್ನು ಪ್ರೀತಿಸುತ್ತಿದ್ದಳು. ಜಾನ್ಸಿ, ಸೂರ್ಯನನ್ನು ಮದುವೆಯಾಗಲು ಇಷ್ಟಪಟ್ಟಿದ್ದಳು. ಆದರೆ ಇವರಿಬ್ಬರ ಮದುವೆಗೆ ಸೂರ್ಯನ ಪೋಷಕರು ವಿರೋಧಿಸಿದ್ದರು.

    ಸೂರ್ಯ ಕೂಡ ಜಾನ್ಸಿಯನ್ನು ಮದುವೆಯಾಗಲು ನಿರಾಕರಿಸಿದ್ದನು. ಅಲ್ಲದೇ ಆತ ಜಾನ್ಸಿ ಜೊತೆ ಇರುವ ಬದಲು ಆಕೆಯಿಂದ ದೂರ ಇರುತ್ತಿದ್ದನು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಾನ್ಸಿಯ ಪೋಷಕರು ಆರೋಪಿಸಿದ್ದಾರೆ.

    ಜಾನ್ಸಿ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾನ್ಸಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು.

    ಜಾನ್ಸಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಸೂರ್ಯ ನಾಪತ್ತೆ ಆಗಿದ್ದಾನೆ. ಸದ್ಯ ಪೋಲೀಸರು ಆರೋಪಿ ಸೂರ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಮಾನಾಸ್ಪದವಾಗಿ ಯುವತಿ ಸಾವು – ತಂದೆಯೇ ಮಗಳನ್ನ ಕೊಂದನಾ?

    ಅನುಮಾನಾಸ್ಪದವಾಗಿ ಯುವತಿ ಸಾವು – ತಂದೆಯೇ ಮಗಳನ್ನ ಕೊಂದನಾ?

    ಹೈದರಾಬಾದ್: ಪ್ರೀತಿಯ ವಿಷಯವಾಗಿ ತಂದೆಯ ಜೊತೆ ವಾದ ಮಾಡಿದ ಬಳಿಕ 20 ವರ್ಷದ ಯುವತಿ ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೋತಪಾಲೆಮ್ ಗ್ರಾಮದಲ್ಲಿ ನಡೆದಿದೆ.

    ವೈಷ್ಣವಿ ಮೃತ ಯುವತಿ. ತಂದೆ ವೆಂಕರೆಡ್ಡಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ವೈಷ್ಣವಿ ಮೃತಪಟ್ಟಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ವೈಷ್ಣವಿ ಒನ್ಗೋಲ್ ನಲ್ಲಿರುವ ಹರ್ಷಿಣಿ ಡಿಗ್ರಿ ಕಾಲೇಜಿನಿಂದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ವೈಷ್ಣವಿ ಪ್ರೀತಿ ವಿಚಾರ ತಂದೆಗೆ ತಿಳಿದಿದ್ದು, ಬಳಿಕ ಇಬ್ಬರ ನಡುವೆ ಜಗಳವಾಗಿದೆ. ವೈಷ್ಣವಿ ತನ್ನ ಪ್ರಿಯಕರ ಜೊತೆ ಓಡಿಹೋಗಲು ಪ್ಲಾನ್ ಮಾಡಿದ್ದಳು. ಆಗ ತಂದೆ ವೆಂಕರೆಡ್ಡಿ ಆತನನ್ನು ಮಾತನಾಡಿಸಬಾರದು, ಭೇಟಿಯಾಗಬಾರದು ಎಂದು ಹೇಳಿದ್ದಾನೆ. ಆದರೆ ಇದಕ್ಕೆ ವೈಷ್ಣವಿ ನಿರಾಕರಸಿದ್ದಾಳೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅಥವಾ ತಂದೆಯೇ ಮಗಳನ್ನು ಹತ್ಯೆ ಮಾಡಿದ್ದಾನಾ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕಿದೆ.

    ಸದ್ಯಕ್ಕೆ ನಾವು ಈ ಪ್ರಕರಣವನ್ನು ಅನುಮಾನಸ್ಪದ ಸಾವು ಎಂದು ದಾಖಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಐಪಿಸಿ ಸೆಕ್ಷನ್ 302 ಮತ್ತು 201 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ರಂಗನಾಥ್ ಹೇಳಿದ್ದಾರೆ.

    ಮೃತ ಹುಡುಗಿಯು ವಿವಾಹಿತವಾಗಿ ಓಡಿಹೋಗಿಲ್ಲ. ಆದರೆ ಅವಳ ತಂದೆ ಅವರಿಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪ್ರೀತಿ ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯಿಂದ ಹುಚ್ಚು ಕೆಲಸ – ಪ್ರಾಣ ಕಳೆದುಕೊಂಡ ಯುವತಿಯ ತಂದೆ

    ಪ್ರೀತಿ ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯಿಂದ ಹುಚ್ಚು ಕೆಲಸ – ಪ್ರಾಣ ಕಳೆದುಕೊಂಡ ಯುವತಿಯ ತಂದೆ

    ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹಾಗೂ ಆಕೆಯ ಭಾವಿ ಪತಿಗೆ ಕಳುಹಿಸಿ ಮದುವೆಯನ್ನು ನಿಲ್ಲಿಸಿದ ಘಟನೆ ನಗರದಲ್ಲಿ ನಡೆದಿದೆ.

    ತಮೀಮ್ ಹಕ್(23) ಬಂಧಿತ ಆರೋಪಿ. ತಮೀಮ್ ಹಕ್ ಯುವತಿಯೊಬ್ಬಳನ್ನು ಪ್ರೀತಿಸು ಎಂದು ಪದೇ ಪದೇ ಪೀಡಿಸುತ್ತಿದ್ದನು. ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದರೂ ಕೂಡ ತಮೀಮ್ ಯುವತಿಗೆ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದನು.

    ಯುವತಿ ನನಗೆ ನಿಶ್ಚಿತಾರ್ಥ ಆಗಿದೆ. ನನ್ನಿಂದ ದೂರವಿರು ಎಂದು ಯುವಕನಿಗೆ ಎಚ್ಚರಿಕೆ ನೀಡಿದ್ದಳು. ಇದರಿಂದ ಕೋಪಗೊಂಡ ತಮೀಮ್ ಯುವತಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದಲ್ಲದೇ ಯುವತಿಯ ಭಾವಿ ಪತಿಗೂ ಆ ಫೋಟೋಗಳನ್ನು ಕಳುಹಿಸಿದ್ದಾನೆ. ಈ ಫೋಟೋ ನೋಡಿದ ಆಕೆಯ ಭಾವಿ ಪತಿ ಈ ಮದುವೆಯನ್ನೇ ಮುರಿದಿದ್ದಾನೆ. ಇದರಿಂದ ಯುವತಿಯ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಈ ಬಗ್ಗೆ ಯುವತಿಯ ಸಂಬಂಧಿ ಸೆಂಟ್ರಲ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಟೀಂ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 506, 507 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಗೆ ಅಡ್ಡಿಯಾದ ಸ್ನೇಹಿತನಿಗೇ ಬಿಯರ್ ಬಾಟ್ಲಿಯಿಂದ ಹೊಡೆದ 10ನೇ ಕ್ಲಾಸ್ ವಿದ್ಯಾರ್ಥಿ!

    ಪ್ರೀತಿಗೆ ಅಡ್ಡಿಯಾದ ಸ್ನೇಹಿತನಿಗೇ ಬಿಯರ್ ಬಾಟ್ಲಿಯಿಂದ ಹೊಡೆದ 10ನೇ ಕ್ಲಾಸ್ ವಿದ್ಯಾರ್ಥಿ!

    ಹೈದರಾಬಾದ್: 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರೀತಿ ವಿಚಾರಕ್ಕೆ ಸಿಟ್ಟಿಗೆದ್ದು ಸ್ನೇಹಿತನಿಗೇ ಬಿಯರ್ ಬಾಟಲಿಯಿಂದ ಹೊಡೆದಿರುವ ಘಟನೆ ಮೀರ್‍ಪೇಟ್‍ನ ಜಿಲ್ಲೆಲಾಗುಡಾದಲ್ಲಿ ನಡೆದಿದೆ.

    ಜಿಲ್ಲೆಲಾಗುಡಾದ ಜಿಲ್ಲಾ ಪರಿಷದ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಪ್ರೀತಿ ವಿಚಾರಕ್ಕೆ ಹಾಗೂ ಬೇರೆ ವೈಯಕ್ತಿಕ ವಿಚಾರಗಳಿಗೆ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು.

    ಆದ್ರೆ ಶುಕ್ರವಾರ ಈ ಜಗಳ ಮಿತಿಮೀರಿತ್ತು. ಮತ್ತೆ ಶನಿವಾರ ಇಬ್ಬರು ಶಾಲೆಗೆ ಬಂದಾಗ ಕೂಡ ಜಗಳ ಮುಂದುವರಿಸಿದ್ದರು. ಕೊನೆಗೆ ಜಗಳ ತಾರಕಕ್ಕೇರಿ ಕೋಪಗೊಂಡ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿ ಮೂತ್ರ ವಿಸರ್ಜನೆ ಮಾಡಲು ಹೊರಹೋದಾಗ ಆತನಿಗೆ ಖಾಲಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೆ, ಆತನನ್ನು ತಡೆಯಲು ಬಂದ ಸ್ನೇಹಿತನ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.

    ಈ ಘಟನೆಯಿಂದ ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಘಟನೆ ಕುರಿತು ರಾಚಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಈ ಹಿಂದೆ ಕೂಡ ಪ್ರೀತಿಯ ವಿಚಾರಕ್ಕೆ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ಬೆಂಕಿ ಹಚ್ಚಿ ಸುಟ್ಟ ಘಟನೆ ಹೈದರಾಬಾದ್‍ನಿಂದ 190 ಕಿ.ಮೀ ದೂರವಿರುವ ತೆಲಂಗಾಣದ ಜಗ್ತಿಯಾಲ್ ಪಟ್ಟಣದಲ್ಲಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪರಸ್ತ್ರಿಯೊಂದಿಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕ್ರಿಮಿನಲ್ ಲಾಯರ್

    ಪರಸ್ತ್ರಿಯೊಂದಿಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕ್ರಿಮಿನಲ್ ಲಾಯರ್

    ಹೈದರಾಬಾದ್: ಮದುವೆಯಾಗಿದ್ದರೂ ವಕೀಲನೊಬ್ಬ ಪರ ಸ್ತ್ರಿಯೊಂದಿಗೆ ಸಂಬಂಧ ಹೊಂದಿದ್ದಾಗ ಆತನ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ತೆಲಂಗಾಣದ ಉಪ್ಪಾಳದಲ್ಲಿ ನಡೆದಿದೆ.

    ಕೃಷ್ಣಮಚಾರಿ ಪತ್ನಿಗೆ ಸಿಕ್ಕಿ ಬಿದ್ದ ಕ್ರಿಮಿನಲ್ ವಕೀಲ. ಕೃಷ್ಣಮಚಾರಿ 2008ರಲ್ಲಿ ವಿಂದ್ಯಾರಾಣಿಯನ್ನು ಮದುವೆಯಾಗಿದ್ದನು. ವಿಂದ್ಯಾರಾಣಿ ರಾಜಸ್ಥಾನದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿಯಿಂದ ದೂರ ವಾಸಿಸುತ್ತಿದ್ದರು. ಆದರೆ ಪತಿಗಾಗಿ ಹಣವನ್ನು ಕಳುಹಿಸುತ್ತಿದ್ದರು.

    ಇತ್ತ ಪತಿ ಕೃಷ್ಣಮಚಾರಿ ತನ್ನ ಪತ್ನಿ ಕಳುಹಿಸಿದ ಹಣದೊಂದಿಗೆ ಅದ್ಧೂರಿ ಜೀವನಶೈಲಿ ನಡೆಸುತ್ತಿದ್ದನು. ಅಷ್ಟೇ ಅಲ್ಲದೇ ಇನ್ನೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಇಬ್ಬರು ಓಲ್ಡ್ ರಾಮಂತಪುರದಲ್ಲಿ ಬಾಡಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು.

    ಇತ್ತ ವಿಂದ್ಯಾರಾಣಿ ಸ್ವಯಂಪ್ರೇರಿತ ರಾಜೀನಾಮೆ ಪಡೆದು ಹೈದರಾಬಾದ್ ಗೆ ಹಿಂದಿರುಗಿ ಪತಿಯೊಂದಿಗೆ ವಾಸಿಸುತ್ತಿದ್ದರು. ದಿನಕಳೆದಂತೆ ವಿಂದ್ಯಾರಾಣಿ ಅವರಿಗೆ ತಮ್ಮ ಪತಿಯ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನ ಬಂದಿದೆ. ಬಳಿಕ ನಂತರ ವಿಂದ್ಯಾರಾಣಿ ತನ್ನ ಸಂಬಂಧಿಕರು ಮತ್ತು ಮಾಧ್ಯಮದ ಸಹಾಯದಿಂದ ತನ್ನ ಪತಿಯನ್ನು ಮಹಿಳೆಯ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಆಗ ಆರೋಪಿ ವಕೀಲ ಅನೇಕ ಮಹಿಳೆಯರಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಫೋನಿನಲ್ಲಿ ಮಾತನಾಡ್ತಾ 7ನೇ ಮಹಡಿಯಿಂದ ಬಿದ್ದ ಐಐಟಿ ವಿದ್ಯಾರ್ಥಿ – ಮೇಲ್ ನಲ್ಲಿ ಆತ್ಮಹತ್ಯೆ ಸಂದೇಶ

    ಫೋನಿನಲ್ಲಿ ಮಾತನಾಡ್ತಾ 7ನೇ ಮಹಡಿಯಿಂದ ಬಿದ್ದ ಐಐಟಿ ವಿದ್ಯಾರ್ಥಿ – ಮೇಲ್ ನಲ್ಲಿ ಆತ್ಮಹತ್ಯೆ ಸಂದೇಶ

    ಹೈದರಾಬಾದ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಓದುತ್ತಿದ್ದ 21 ವರ್ಷದ ವಿದ್ಯಾರ್ಥಿ 7ನೇ ಅಂತಸ್ತಿನ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿಯನ್ನು ಸಿಕಂದರಾಬಾದ್ ನ ಎಂ.ಅನಿರುಧ್ಯ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ತನ್ನ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿದ್ದಾನೆ ಎಂದು ತಿಳಿದು ಬಂದಿತ್ತು. ಆದರೆ ತನಿಖೆಯ ಬಳಿಕ ಇದು ಆಕಸ್ಮಿಕ ಸಾವಲ್ಲ, ಆತ್ಮಹತ್ಯೆ ಎಂದು ತಿಳಿದು ಬಂದಿದೆ.

    ಗುರುವಾರ ಬೆಳಗ್ಗೆ ಮೃತ ಎಂ.ಅನಿರುಧ್ಯ ತನ್ನ ಸ್ನೇಹಿತನಿಗೆ ಒಂದು ಮೇಲ್ ಮಾಡಿದ್ದು, ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಮಾಡಿದ್ದಾನೆ. ಅನಿರುಧ್ಯ ಖಿನ್ನತೆಗೆ ಒಳಗಾಗಿದ್ದನು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ನೇಹಿತ ತಿಳಿಸಿದ್ದಾನೆ.

    ಮೇಲ್ ನಲ್ಲಿ ಏನಿದೆ?
    “ನಾನು ನನ್ನ ಜೀವನ ಸಂಪೂರ್ಣವಾಗಿ ತಾರ್ಕಿಕವಾಗಿದ್ದು, ಮುಂದಿನ ಭವಿಷ್ಯವನ್ನು ಅಂದಾಜಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಈ ನಿರ್ಧಾರದಲ್ಲಿ ಯಾರ ಒಳಸಂಚಿಲ್ಲ. ನನ್ನ ಲೈಫ್ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಹೀಗಾಗಿ ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುವ ನಿರ್ಧಾರವನ್ನು ಮಾಡಿದ್ದೇನೆ” ಎಂದು ಮೇಲ್ ಮಾಡಿದ್ದಾನೆ.

    ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಮೃತ ವಿದ್ಯಾರ್ಥಿ ಮನೋವೈದ್ಯರನ್ನು ಭೇಟಿಯಾಗಿದ್ದನು. ಸಿಕಂದರಾಬಾದ್ ನ ಬೋವೆನ್ಪಲ್ಲಿಯ ನಿವಾಸಿ ಅನರುಧ್ಯ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv