Tag: Hyderabad

  • ಸೆಲ್ಫಿ ಸಿಕ್ಕ ಖುಷಿಯಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಯುವತಿ!

    ಸೆಲ್ಫಿ ಸಿಕ್ಕ ಖುಷಿಯಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಯುವತಿ!

    ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಅಭಿಮಾನಿಯೊಬ್ಬರು ಮಾಡಿದ ತರಲೆಯ ದೃಶ್ಯವನ್ನ ಕಾಣಬಹುದಾಗಿದೆ.

    ವಿಡಿಯೋದಲ್ಲಿ ನಟ ಪ್ರಭಾಸ್‍ರೊಂದಿಗೆ ಸೆಲ್ಫಿ ಕೇಳಿದ ಅಭಿಮಾನಿ ಮನವಿಗೆ ಸಮ್ಮಿತಿಸಿ ಫೋಟೋಗೆ ಪೋಸ್ ಕೊಟುತ್ತಾರೆ. ಆದರೆ ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆದ ಸಂಭ್ರಮದಲ್ಲಿದ್ದ ಯುವತಿ ಸ್ಥಳದಲ್ಲೇ ಕುಣಿದು ಸಂತಸ ಪಡುತ್ತಾಳೆ. ಆದರೆ ಅಂತಿಮ ಕ್ಷಣದಲ್ಲಿ ಯುವತಿ ಪ್ರಭಾಸ್ ಕೆನ್ನೆ ಟಚ್ ಮಾಡಲು ಯತ್ನಿಸಿದ್ದು, ಆದರೆ ಆಕೆ ಸಂಭ್ರಮಿದಲ್ಲಿದ್ದ ಕಾರಣ ಅದು ಪ್ರಭಾಸ್ ಕೆನ್ನೆಗೆ ಬಾರಿಸಿದಂತೆ ಕಾಣಿಸುತ್ತದೆ.

    ಇದಾದ ವೇಳೆಯೇ ಮತ್ತಷ್ಟು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಂದಾದರೂ ಕೂಡ ಯುವತಿಯ ಅಚಾನಕ್ ವರ್ತನೆ ಕಂಡ ಪ್ರಭಾಸ್ ಮಾತ್ರ ಕೆನ್ನೆ ನೆವರಿಸಿಕೊಂಡು ಮತ್ತೆ ಫೋಟೋ ಪೋಸ್ ಕೊಡುತ್ತಾರೆ.

    ಪ್ರಭಾಸ್ ಸದ್ಯ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಮಾರ್ಚ್ 3ರಂದು ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಸಿನಿಮಾ ವಿಡಿಯೋ ಬಿಡುಗಡೆ ಮಾಡಿ ಗಿಫ್ಟ್ ನೀಡಿತ್ತು.

    ಚಿತ್ರದ ತಾರಾಗಣವೂ ಕೂಡ ಹಲವು ಬಾಲಿವುಡ್ ನಟರನ್ನು ಒಳಗೊಂಡಿದೆ. ಸಾಹೋ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಹಿಂದಿ, ತೆಲುವು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

    https://www.instagram.com/p/BumBLdvnEqw/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5ನೇ ಮಹಡಿಯಿಂದ ಹಾರಿ ನವವಿವಾಹಿತೆ ಆತ್ಮಹತ್ಯೆ

    5ನೇ ಮಹಡಿಯಿಂದ ಹಾರಿ ನವವಿವಾಹಿತೆ ಆತ್ಮಹತ್ಯೆ

    ಹೈದರಾಬಾದ್: ಕಟ್ಟಡದಿಂದ ಹಾರಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಆಂಧ್ರ ಪ್ರದೇಶದ ವನಾಸ್ತಳಿಪುರಂನಲ್ಲಿ ನಡೆದಿದೆ.

    ನಿವೇದಿತಾ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ನಿವೇದಿತಾ 6 ತಿಂಗಳ ಹಿಂದೆ ಟೆಕ್ಕಿ ರಘು ಪ್ರಸಾದ್‍ರನ್ನು ಮದುವೆ ಆಗಿದ್ದಳು. ಮದುವೆಯಾದ ಬಳಿಕ ಸಾಯಿನಗರದಲ್ಲಿ ವಾಸಿಸುತ್ತಿದ್ದರು. ಮದುವೆ ಆದ ನಂತರ ಕುಟುಂಬದ ವಿಷಯಕ್ಕಾಗಿ ವಿವೇದಿತಾ ಹಾಗೂ ರಘು ಮಧ್ಯೆ ಜಗಳ ನಡೆಯುತಿತ್ತು.

    ಶನಿವಾರ ಕೂಡ ನಿವೇದಿತಾ ಹಾಗೂ ರಘು ಜಗಳವಾಡಿದ್ದಾರೆ. ಜಗಳದಿಂದ ಬೇಸತ್ತ ನಿವೇದಿತಾ ಕಟ್ಟಡದ 5ನೇ ಮಹಡಿಯಿಂದ ಜಿಗಿದಿದ್ದಾಳೆ. ಇದರಿಂದ ತೀವ್ರ ಗಾಯಗೊಂಡ ನಿವೇದಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪೊಲೀಸರು, ನಿವೇದಿತಾ ಮೃತದೇಹವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದ್ದರು.

    ರಘು ಪ್ರಸಾದ್ ಹಾಗೂ ಆತನ ಕುಟುಂಬದವರು ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ತನ್ನ ಪತಿಯ ಹಾಗೂ ಅವರ ಕುಟುಂಬದವರ ಕಿರುಕುಳ ತಾಳಲಾರದೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿವೇದಿತಾ ಪೋಷಕರು ರಘು ಪ್ರಸಾದ್ ಹಾಗೂ ಆತನ ಮನೆಯವರ ದೂರು ನೀಡಿದ್ದಾರೆ.

    ಪೊಲೀಸರು ರಘು ಪ್ರಸಾದ್ ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಹೈದರಾಬಾದ್: ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಯುದ್ಧ ಆಗಲಿದೆ ಎಂದು 2 ವರ್ಷಗಳ ಹಿಂದೆಯೇ ಮಾಹಿತಿ ಇತ್ತು ಎಂದಿದ್ದ ಆಂಧ್ರಪ್ರದೇಶ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಆಂಧ್ರದ ಕಡಪ ಜಿಲ್ಲೆಯ ಸಾರ್ವಜನಿಕ ಸಮಾರಂಭದ ವೇಳೆ ಪವನ್ ಕಲ್ಯಾಣ್ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂದಿಗ್ಧ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಈ ವೇಳೆ ಬಿಜೆಪಿ ನನಗೆ 2 ವರ್ಷದ ಹಿಂದೆಯೇ ಯುದ್ಧದ ಬಗ್ಗೆ ಹೇಳಿತ್ತು ಎಂದಿದ್ದರು. ಪವನ್‍ರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಲು ಕಾರಣವಾಗಿತ್ತು.

    ಈ ಹೇಳಿಕೆ ಬೆನಲ್ಲೇ ಸ್ಪಷ್ಟನೆ ನೀಡಿರುವ ಪವನ್ ಕಲ್ಯಾಣ್, ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಬಗ್ಗೆ ಕೆಲ ತಜ್ಞರು ತಮ್ಮ ವರಿದಿಗಳ ಮೂಲಕ ತಿಳಿಸುತ್ತಾರೆ. ಇಂತಹದ್ದೇ ರಾಜಕೀಯ ವಿಶ್ಲೇಷಣೆ ವೇಳೆ ಮಾಹಿತಿ ನನಗೆ ಹೇಳಿದ್ದರು. ಅಲ್ಲದೇ ಆರ್ಥಿಕತೆಯ ಬಗ್ಗೆಯೂ ಇಂತಹದ್ದೇ ಮಾಹಿತಿ ನೀಡಲಾಗುತ್ತದೆ. ನನಗೆ ಬಿಜೆಪಿ ಈ ಮಾತು ಹೇಳಿಲ್ಲ ಎಂದಿದ್ದಾರೆ.

    ಯುದ್ಧದ ಬಗ್ಗೆ ಕೆಲವರು ದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಭವಿಷ್ಯ ಹೇಳುತ್ತಾರೆ. 2 ವರ್ಷಗಳ ಹಿಂದೆಯೇ ಯುದ್ಧ ಬರುತ್ತದೆ ಎಂದು ಕೆಲ ವರದಿಗಳು ಬಂದಿದೆ. ನೀವು ಕೂಡ ಅವುಗಳನ್ನು ಓದಿದರೆ ತಿಳಿಯುತ್ತದೆ. ಯುದ್ಧದ ಬಗ್ಗೆ ನಾನು ಎಂದು ಭವಿಷ್ಯ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿಯೊಂದಿಗೆ ತಮನ್ನಾ ಡೇಟಿಂಗ್! – ಕೊನೆಗೂ ಮೌನ ಮುರಿದ ಮಿಲ್ಕಿ ಬ್ಯೂಟಿ

    ಕೊಹ್ಲಿಯೊಂದಿಗೆ ತಮನ್ನಾ ಡೇಟಿಂಗ್! – ಕೊನೆಗೂ ಮೌನ ಮುರಿದ ಮಿಲ್ಕಿ ಬ್ಯೂಟಿ

    ಹೈದರಾಬಾದ್: ಟಾಲಿವುಡ್ ಸೇರಿದಂತೆ ಸಿನಿ ರಂಗದಲ್ಲಿ ತಮ್ಮ ಬ್ಯೂಟಿ ಹಾಗೂ ನಟನೆ ಮೂಲಕ ನಟಿ ತಮನ್ನಾ ಭಾಟಿಯಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರೊಂದಿಗಿನ ಡೇಟಿಂಗ್ ರೂಮರ್ ಕುರಿತು ಸದ್ಯ ತಮನ್ನಾ ಸ್ಪಷ್ಟನೆ ಕೊಟ್ಟಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಈ ಕುರಿತು ಉತ್ತರಿಸಿರುವ ತಮನ್ನಾ, ಕೊಹ್ಲಿ ಅವರೊಂದಿಗೆ ಜಾಹೀರಾತು ಶೂಟಿಂಗ್‍ನಲ್ಲಿ ನಟಿಸಿದ್ದೇನೆ. ಅವರು ಉತ್ತಮ ನಟ. ಆದರೆ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಸಂಬಂಧ ಇಲ್ಲ. ಇಬ್ಬರು ಶೂಟಿಂಗ್ ವೇಳೆ ಸರಿಯಾಗಿ ಮಾತನಾಡಿದ್ದು ಕೂಡ ಇಲ್ಲ. ಶೂಟಿಂಗ್ ಆದ ಬಳಿಕ ಕೊಹ್ಲಿರನ್ನು ಭೇಟಿ ಕೂಡ ಮಾಡಿಲ್ಲ ಎಂದಾದರೆ ಇನ್ನು ಡೇಟಿಂಗ್ ಮಾತು ಎಲ್ಲಿಂದಾ ಬಂತು ಎಂದು ತಿಳಿಸಿದ್ದಾರೆ.

    ಹಲವು ವರ್ಷಗಳ ಹಿಂದೆಯೇ ಕೊಹ್ಲಿ ಹಾಗೂ ತಮನ್ನಾ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ವೇಳೆ ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ರೂಮರ್ಸ್ ಕೇಳಿ ಬಂದಿತ್ತು. ಆದರೆ ಈ ಸಂಬಂಧ ಎಲ್ಲೂ ಹೇಳಿಕೆ ನೀಡಿದ ತಮನ್ನಾ ಬಹುದಿನಗಳ ಬಳಿಕ ಮಾತನಾಡಿದ್ದಾರೆ.

    ತಮನ್ನಾ ನಟನೆ ಎಫ್2 ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಟಾಲಿವುಡ್‍ನಲ್ಲಿ ಯಶಸ್ಸುಗಳಿಸಿತ್ತು. ಸದ್ಯ ತಮನ್ನಾ ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಸಿನಿಮಾ ‘ಸೈರಾ ನರಸಿಂಹರೆಡ್ಡಿ’ ಹಾಗೂ ‘ದಟ್ ಈಸ್ ಮಹಾಲಕ್ಷ್ಮಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಹೈದರಾಬಾದ್‍ಗೆ ಕಾಲಿಟ್ಟರೆ ಹುಷಾರ್’- ಶೋಯಿಬ್ ಮಲಿಕ್‍ರನ್ನ ಟ್ರೋಲ್ ಮಾಡಿದ ನೆಟ್ಟಿಗರು

    ‘ಹೈದರಾಬಾದ್‍ಗೆ ಕಾಲಿಟ್ಟರೆ ಹುಷಾರ್’- ಶೋಯಿಬ್ ಮಲಿಕ್‍ರನ್ನ ಟ್ರೋಲ್ ಮಾಡಿದ ನೆಟ್ಟಿಗರು

    ಹೈದರಾಬಾದ್: ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ “ಹಮರ ಪಾಕಿಸ್ತಾನ್ ಜಿಂದಾಬಾದ್” ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಭಾರತೀಯ ನೆಟ್ಟಿಗರು ಶೋಯಿಬ್ ರನ್ನು ಟ್ರೋಲ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

    ಅದರಲ್ಲೂ ಹೈದರಾಬಾದ್ ಸ್ಥಳೀಯರು ಶೋಯಿಬ್ ಮಲಿಕ್‍ಗೆ ಎಚ್ಚರಿಕೆ ನೀಡಿದ್ದು, ಹೈದರಾಬಾದ್ ನಗರಕ್ಕೆ ಕಾಲಿಟ್ಟರೆ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಕೆಲವರು ಈ ಟ್ವೀಟ್‍ಗೆ ಪತ್ನಿ ಸಾನಿಯಾ ಮಿರ್ಜಾ ಉತ್ತರ ನೀಡಬೇಕು ಎಂದು ಅಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ, ಶಾಸಕ ರಾಜಾ ಸಿಂಗ್ ಅಕ್ರೋಶ ವ್ಯಕ್ತಪಡಿಸಿ ತೆಲಂಗಾಣ ರಾಯಭಾರಿ ಸ್ಥಾನದಿಂದ ಸಾನಿಯಾ ಮಿರ್ಜಾರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಪಾಕಿಸ್ತಾನದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ, ನಮ್ಮ ರಾಜ್ಯ ಬ್ರಾಂಡ್ ಅಂಬಾಸಿಡರ್ ಪತಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಾನಿಯಾ ಮಿರ್ಜಾ ಬದಲಾಗಿ ತೆಲಂಗಾಣದ ರಾಜ್ಯದ ಸ್ಟಾರ್ ಕ್ರೀಡಾಪಟುಗಳಾದ ಪಿವಿ ಸಿಂಧು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಥವಾ ಸೈನಾ ನೆಹ್ವಾಲ್‍ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.

    ಮಲಿಕ್ ಟ್ವೀಟ್‍ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಲವರು, ಮಲಿಕ್‍ಗೆ ಭಾರತಕ್ಕೆ ಬರಲು ಸಾಧ್ಯವಾಗದಂತೆ ಮಾಡಿ ಎಂದು ಸಿಎಂ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ.

    ಫೆ.14 ರಂದು ನಡೆದ ಪುಲ್ವಾಮಾ ದಾಳಿಯ ವೇಳೆ ಉಗ್ರರ ದಾಳಿಯನ್ನು ಖಂಡಿಸಿದ್ದ ಸಾನಿಯಾ ಮಿರ್ಜಾ, ಸಿಆರ್‍ಪಿಎಫ್ ಯೋಧರಿಗೆ ತಮ್ಮ ಬೆಂಬಲ ಇರುವುದಾಗಿ ತಿಳಿಸಿದ್ದರು. ಅಲ್ಲದೇ ತಮಗೆ ಸಾರ್ವಜನಿಕರವಾಗಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿಲು ಇಷ್ಟವಿಲ್ಲ ಎಂದಿದ್ದರು. ಕೆಲವರ ಬಾಯಿ ಮುಚ್ಚಿಸಲು ಈ ಟ್ವೀಟ್ ಮಾಡಿದ್ದಾಗಿ ಆರೋಪಿಸಿದ್ದರು. ಅಲ್ಲದೇ ನಾನು ದೇಶದ ಆಟ ಆಡುವ ಮೂಲಕ ನನ್ನ ದೇಶ ಭಕ್ತಿಯನ್ನು ನಿರೂಪಿಸುತ್ತಿದ್ದೇನೆ. ಭಾರತಕ್ಕೆ ಫೆ.14 ಕಪ್ಪು ದಿನವಾಗಿದ್ದು, ಮತ್ತೆ ಇಂತಹ ಘಟನೆ ನಡೆಯಬಾರದು. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನನ್ನ ವಿರುದ್ಧ ದ್ವೇಷ ಸಾಧಿಸಿ, ನನ್ನನ್ನು ಟ್ರೋಲ್ ಮಾಡಲು ಮಾತ್ರ ನಿಮ್ಮಿಂದ ಸಾಧ್ಯ. ಆದರೆ ಈ ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲೇಜಿನಲ್ಲೇ ಯುವತಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ..!

    ಕಾಲೇಜಿನಲ್ಲೇ ಯುವತಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ..!

    ಹೈದರಾಬಾದ್: ಯುವಕನೊಬ್ಬ ಕಾಲೇಜಿನಲ್ಲೇ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಆಂಧ್ರ ಪ್ರದೇಶದ ವರಾಂಗಲ್ ಜಿಲ್ಲೆಯ ಸಂಗೇಮ್ ಮಂದಲ್‍ನಲ್ಲಿ ನಡೆದಿದೆ.

    ಅನ್ವೇಶ್ ಯುವತಿಗೆ ಬೆಂಕಿ ಹಚ್ಚಿದ ಯುವಕ. ಅನ್ವೇಶ್ ವ್ಗಾದೇಹಿ ಕಾಲೇಜಿನಲ್ಲಿ ಕೊನೆಯ ವರ್ಷ ಬಿಕಾಂ ಓದುತ್ತಿದ್ದನು. ಅದೇ ಕಾಲೇಜಿನಲ್ಲಿ ಯುವತಿ ರವೇಲಿ ಕೊನೆಯ ವರ್ಷ ಬಿಎಸ್‍ಸಿ ಓದುತ್ತಿದ್ದಳು. ಅನ್ವೇಶ್, ರವೇಲಿಯನ್ನು ಪ್ರೀತಿಸುತ್ತಿದ್ದು, ತನ್ನ ಪ್ರೀತಿಯನ್ನು ರವೇಲಿ ಬಳಿ ಹೇಳಿಕೊಂಡಿದ್ದಾನೆ.

    ಬುಧವಾರ ರವೇಲಿ, ಅನ್ವೇಶ್‍ನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಅನ್ವೇಶ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಾಯಗೊಂಡ ಯುವತಿಯನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯಿಂದ ಯುವತಿ ದೇಹ ಶೇ. 80 ರಷ್ಟು ಸುಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ರವೇಲಿ ತಂದೆ ಟಿ. ಸುಧಾಕರ್ ರಾವ್ ರೈತರಾಗಿದ್ದು, ಮಗಳು ರವೇಲಿ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದಳು. ರವೇಲಿ ತನ್ನ ತಂದೆಗೆ ಕರೆ ಮಾಡಿದಾಗ ಅನ್ವೇಶ್ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಹಾಗಾಗಿ ಅವರ ತಂದೆಗೆ ಈ ಘಟನೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

    ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

    ಹೈದರಾಬಾದ್: ಜಾಮೀನು ಬೇಕಾದರೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 1 ಲಕ್ಷ ರೂ. ನೆರವನ್ನು ನೀಡಿ ಎಂದು ತೆಲಂಗಾಣ ಹೈಕೋರ್ಟ್ ಆರೋಪಿಗಳಿಗೆ ಸೂಚಿಸಿದೆ.

    14 ಸಾವಿರ ಹೂಡಿಕೆದಾರರಿಗೆ ಮೋಸ ಮಾಡಿರುವ ಆರೋಪದ ಮೇಲೆ ಸನ್ ಪರಿವಾರ್ ಗ್ರೂಪ್‍ನ ಆಯೋಜಕರ ಮೇಲೆ ಪ್ರಕರಣ ದಾಖಲಾಗಿತ್ತು. ಹೂಡಿಕೆದಾರರಿಗೆ ಸುಮಾರು 150 ಕೋಟಿ ರೂ. ನಷ್ಟು ಹಣವನ್ನು ಈ ಕಂಪನಿ ವಂಚಿಸಿತ್ತು. ಆದರಿಂದ ಕಳೆದ ವರ್ಷ ಈ ಕಂಪನಿ ಮೇಲೆ ವಂಚನೆ ಕೇಸ್ ದಾಖಲಾಗಿತ್ತು. ಅಲ್ಲದೆ, ವಂಚಿಸಿದ್ದ ಆರೋಪಿಗಳನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕೆಂಬ ಷರತ್ತಿನ ಮೇರೆಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.

    ಆರೋಪಿಗಳು ತನಿಖೆಗೆ ಸರಿಯಾಗಿ ಹಾಜರಾಗದ ಕಾರಣ ಅವರ ಜಾಮೀನು ರದ್ದುಗೊಳಿಸಲಾಗಿತ್ತು. ರದ್ದಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು.

    ಈ ಅರ್ಜಿ ವಿಚಾರಣೆ ವೇಳೆ ನ್ಯಾ.ಬಿ. ಶಿವಶಂಕರ್ ಅವರು ಎಲ್ಲಾ ಆರೋಪಿಗಳು ತಮಗೆ ಜಾಮೀನು ಬೇಕಿದ್ದರೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ನೀಡಿದರೆ ಮಾತ್ರ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗ ಅವರಿಗೆ ಸಹಕರಿಸಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಗುಡ್‍ನ್ಯೂಸ್’ ಗಾಗಿ ಮತ್ತೆ ಕರೀನಾ ಕಪೂರ್ ಗರ್ಭಿಣಿ

    ‘ಗುಡ್‍ನ್ಯೂಸ್’ ಗಾಗಿ ಮತ್ತೆ ಕರೀನಾ ಕಪೂರ್ ಗರ್ಭಿಣಿ

    ಹೈದರಾಬಾದ್: ಬಾಲಿವುಡ್‍ನ ಬೇಡಿಕೆಯ ನಟಿ ಕರೀನಾ ಕಪೂರ್ ಗರ್ಭಿಣಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಅಸಲಿಗೆ ಅವರು ತಮ್ಮ ಮುಂದಿನ ‘ಗುಡ್ ನ್ಯೂಸ್’ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಹೌದು..ಇತ್ತೀಚೆಗೆ ಕರೀನಾ ಅವರು ‘ಗುಡ್ ನ್ಯೂಸ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅವರು ಶೂಟಿಂಗ್‍ನಲ್ಲಿ ಬೂದು ಬಣ್ಣದ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟನ್ನ ಧರಿಸಿದ್ದು, ಉದ್ದನೆಯ ಒಂದು ಶರ್ಟ್ ಧರಿಸಿದ್ದಾರೆ. ಈ ಉಡುಪಿನಲ್ಲಿ ಅವರು ಗರ್ಭಿಣಿ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ನೋಡಿದ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ.

    ಈ ಸಿನಿಮಾವನ್ನು ಕರಣ್ ಜೋಹರ್, ಅಕ್ಷಯ್ ಕುಮಾರ್ ಹಾಗೂ ವಯಕಾಮ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ನಟ ಅಕ್ಷಯ್ ಕುಮಾರ್, ದಿಲ್‍ಜಿತ್ ದೋಸನ್‍ಜ್ ಹಾಗೂ ಕೈರಾ ಅಡ್ವಾಣಿ ಸಿನಿಮಾದಲ್ಲಿ ಇದ್ದಾರೆ. ರಾಜ್ ಮೆಹ್ತಾ ನಿರ್ದೇಶನದಲ್ಲಿ ‘ಗುಡ್‍ನ್ಯೂಸ್’ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.

    ಸದ್ಯಕ್ಕೆ ಕರೀನಾ ಕಪೂರ್ ಗುಡ್‍ನ್ಯೂಸ್ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ಕರಣ್ ಜೋಹರ್ ನಿರ್ದೇಶನದ ‘ತಾಕ್ತ್’ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ರಣ್‍ವೀರ್ ಸಿಂಗ್, ಅಲಿಯಾ ಭಟ್, ವಿಕಿ ಕೌಶಲ್, ಅನಿಲ್ ಕಪೂರ್, ಭೂಮಿ ಪಡ್ನೇಕರ್ ಮತ್ತು ಜಾಹ್ನವಿ ಕಪೂರ್ ಕೂಡ ನಟಿಸಲಿದ್ದಾರೆ.

    ನಟಿ ಕರೀನಾ ಕಪೂರ್ ಅವರಿಗೆ ಈಗಾಗಲೇ ಎರಡು ವರ್ಷದ ತೈಮೂರ್ ಅಲಿ ಖಾನ್ ಮಗನಿದ್ದಾನೆ. ತಾಯಿಯಾಗಿದ್ದರೂ ಕರೀನಾ ಅವರು ದೇಹದ ಸೌಂದರ್ಯವನ್ನು ವರ್ಕೌಟ್ ಮೂಲಕ ಹಾಗೆಯೇ ಉಳಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುಷ್ಕರ್ಮಿಗಳಿಂದ ಯುವ ಜೋಡಿ ಮೇಲೆ ಹಲ್ಲೆ – ಯುವತಿ ಸ್ಥಳದಲ್ಲೇ ಸಾವು

    ದುಷ್ಕರ್ಮಿಗಳಿಂದ ಯುವ ಜೋಡಿ ಮೇಲೆ ಹಲ್ಲೆ – ಯುವತಿ ಸ್ಥಳದಲ್ಲೇ ಸಾವು

    ಹೈದರಾಬಾದ್: ಯುವ ಜೋಡಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟು, ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಗುಂಟುಪಲ್ಲಿಯ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.

    ಶ್ರೀಧಾರಿಣಿ ಮೃತಪಟ್ಟ ಯುವತಿ. ನವೀನ್ ಗಂಭೀರವಾಗಿ ಗಾಯಗೊಂಡ ಯುವಕ. ನವೀನ್ ಮೂಲತಃ ಬೀಮಿಲಿ ಮಂಡಲ್‍ನವನಾಗಿದ್ದು, ಧಾರಿಣಿ ಉಂಗುತುರ್ ಮಂಡಲ್‍ನ ಎಂಎಂ ಪುರಂದವಳು. ಭಾನುವಾರ ಬೆಳಗ್ಗೆ 11.30ಕ್ಕೆ ನವೀನ್ ಹಾಗೂ ಧಾರಿಣಿ ಬುದ್ಧ ಸ್ಮಾರಕ ನೋಡಲು ಬೈಕಿನಲ್ಲಿ ತೆರಳಿದ್ದರು.

    ಸ್ಥಳೀಯರ ಹಾಗೂ ಪೊಲೀಸರ ಮಾಹಿತಿ ಪ್ರಕಾರ ಕಾಮವರ್ಪುಕೋಟ ಬಳಿಯಿರುವ ಬೌದ್ಧ ಅರಮಲ ಗುಹೆಯಲ್ಲಿ ಭಾನುವಾರ ಹೆಚ್ಚು ಮಂದಿ ಆಗಮಿಸುತ್ತಾರೆ. ಹಾಗಾಗಿ ಆ ಜಾಗದಲ್ಲಿರುವ ನಿರ್ಜನ ಪ್ರದೇಶಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಸತೀಶ್ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ನಿನ್ನೆ ಮಧ್ಯಾಹ್ನ ಸುಮಾರು 2.45ಕ್ಕೆ ಪರಿಶೀಲನೆ ನಡೆಸಿದ್ದಾಗ ಗುಹೆ ಬಳಿ ಜೋಡಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.

    ಸತೀಶ್ ಆ ಜೋಡಿಯನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಯುವತಿ ಮೃತಪಟ್ಟಿದ್ದಳು. ಸಿಂತಾಲಾಪುಡಿಯ ಸರ್ಕಲ್ ಇನ್ಸ್ ಪೆಕ್ಟರ್ ವಿಲ್ಸನ್ ಗಾಯಗೊಂಡಿದ್ದ ನವೀನ್ ನನ್ನು ಸ್ಥಳೀಯರ ಸಹಾಯದಿಂದ ಎಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಡಿಎಸ್‍ಪಿ ಸಿ.ಎಚ್ ಮುರಳಿಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸುವಾಗ ಧಾರಿಣಿ ತಲೆಯ ಹಿಂಭಾಗದಲ್ಲಿ ಗಂಭೀರ ಪ್ರಮಾಣದ ಏಟು ಬಿದ್ದಿದೆ. ಧಾರಿಣಿಯ ಮೃತದೇಹದ ಬಳಿ ಕಳ್ಳತನಕ್ಕೆ ಉಪಯೋಗಿಸುವ ಶಸ್ತ್ರಗಳಿಂದ ಜೋಡಿಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಯುವತಿಯ ಉಡುಪು ಅಸ್ತವ್ಯಸ್ತ ಆಗಿರುವುದನ್ನು ಕಂಡು ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿರಬಹುದು ಎನ್ನುವ ಶಂಕೆ ಕೇಳಿಬಂದಿದೆ.

    ಶ್ರೀ ಧಾರಿಣಿ ಪೋಲಾಸನಿಪಲ್ಲಿಯ ಕಾಲೇಜಿನಲ್ಲಿ ಪ್ರಥಮ ವರ್ಷ ಬಿಎಸ್‍ಸಿ ಓದುತ್ತಿದ್ದರೆ, ನವೀನ್ ಬಿಕಾಂ ಮೊದಲನೇ ವರ್ಷ ಅರ್ಧಕ್ಕೆ ನಿಲ್ಲಿಸಿ ತಂದೆಗೆ ಪೈಟಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

    ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

    ಹೈದರಾಬಾದ್: ‘ಬಾಹುಬಲಿ’ ಸಿನಿಮಾ ಯಶಸ್ವಿಯಾದ ಬಳಿಕ ಅಭಿಮಾನಿಗಳು ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ನಡುವೆ ಪ್ರೀತಿ ಇದೆ ಎಂದು ಮಾತನಾಡುತ್ತಿದ್ದರು. ಈ ಬಗ್ಗೆ ಇಬ್ಬರು ಕೂಡ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಈಗ ಮತ್ತೆ ಒಟ್ಟಿಗೆ ಬಾಹುಬಲಿ ಜೋಡಿ ಜಪಾನ್‍ಗೆ ಪ್ರಯಾಣ ಬೆಳಸಲಿದ್ದಾರೆ.

    ನಟ ಪ್ರಭಾಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಸುಮಾರು 5-6 ವರ್ಷಗಳನ್ನ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಹಾಗೂ ‘ಬಾಹುಬಲಿ 2’ ಸಿನಿಮಾಕ್ಕೆ ಮೀಸಲಿಟ್ಟಿದ್ದರು. ಇದರಿಂದಾಗಿ ಅವರು ಪಟ್ಟಂತಹ ಶ್ರಮಕ್ಕೆ ಪ್ರತಿಫಲ ಎಂಬಂತೆ ದೇಶಾದ್ಯಂತ ಖ್ಯಾತಿ ಪಡೆದಿದ್ದರು. ಜೊತೆಗೆ ಈ ಎರಡು ಸಿನಿಮಾದ ಅಭಿನಯದ ಮೂಲಕ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

    ಅದೇ ರೀತಿ ಜಪಾನ್‍ನಲ್ಲಿ ಪ್ರಭಾಸ್ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅಲ್ಲಿ ಕೂಡ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿವೆ. ನಟ ಪ್ರಭಾಸ್ ಈ ಹಿಂದೆ ಅಭಿನಯಿಸಿದ್ದ ‘ಮಿರ್ಚಿ’ ಹಾಗೂ ‘ಡಾರ್ಲಿಂಗ್’ ಸಿನಿಮಾಗಳು ಮುಂದಿನ ತಿಂಗಳ ಮಾರ್ಚ್ 2 ರಂದು ಜಪಾನ್ ನಲ್ಲಿ ಪ್ರದರ್ಶನಗೊಳ್ಳಲಿದೆ.

    ‘ಮಿರ್ಚಿ’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಮತ್ತು ‘ಡಾರ್ಲಿಂಗ್’ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದರು. ಹೀಗಾಗಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಜಪಾನ್ ಗೆ ಹೋಗಲಿದ್ದಾರೆ. ಈ ಬಗ್ಗೆ ತಿಳಿದ ಅವರ ಅಭಿಮಾನಿಗಳು ಮತ್ತೆ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಈಗಾಗಲೇ ಪ್ರಭಾಸ್ ‘ಕಾಫಿ ವಿಥ್ ಕರಣ್’ ಶೋನಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರು. ನಮ್ಮಿಬ್ಬರ ನಡುವೆ ಏನೂ ಇಲ್ಲ. ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇತ್ತ ಅನುಷ್ಕಾ ಕೂಡ ನನ್ನ ಪ್ರಭಾಸ್ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ನಿಜ ಜೀವನದಲ್ಲಿ ಬಾಹುಬಲಿ-ದೇವಾಸೇನಾ ರೀತಿ ಕೆಮಿಸ್ಟ್ರಿ ನಿರೀಕ್ಷಿಸಬೇಡಿ. ಅದು ಕೇವಲ ಬೆಳ್ಳಿ ಪರದೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv