Tag: Hyderabad

  • ನವಜೋಡಿ ಮೇಲೆ ಲಕ್ಷಾಂತರ ರೂ. ಸುರಿಮಳೆ: ವಿಡಿಯೋ ನೋಡಿ

    ನವಜೋಡಿ ಮೇಲೆ ಲಕ್ಷಾಂತರ ರೂ. ಸುರಿಮಳೆ: ವಿಡಿಯೋ ನೋಡಿ

    ಹೈದರಾಬಾದ್: ಮದುವೆಯಾದ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ರೂ. ಹಣವನ್ನು ಸುರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸುಶಾಂತ್ ಕೋಟಾ ಹಾಗೂ ಮೇಘನಾ ಗೌಡ್ ಮಾರ್ಚ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಶಾಂತ್ ಕೋಟಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಈ ಮದುವೆಯ ವಿಡಿಯೋ ವೈರಲ್ ಆಗಿದೆ.

    ವರ ಹಾಗೂ ವಧುವಿನ ಪೋಷಕರು ನವಜೋಡಿ ಮೇಲೆ ಹಣದ ಹೊಳೆಯನ್ನೇ ಹರಿಸಲು ಒಂದು ದೊಡ್ಡ ಬಾಸ್ಕೆಟ್‍ನಲ್ಲಿ ನೋಟುಗಳನ್ನು ತೆಗೆದುಕೊಂಡು ಬಂದಿದ್ದರು. ಮದುವೆ ನಂತರ ಆ ಹಣವನ್ನು ನವಜೋಡಿ ಮೇಲೆ ಸುರಿಸಿದ್ದಾರೆ.

    ವೇದಿಕೆ ಮೇಲೆಯೇ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ಹಣವನ್ನು ಅವರ ಮೇಲೆ ಸುರಿದಿದ್ದಾರೆ. ಅವರು ಹಣವನ್ನು ಸುರಿಯುತ್ತಿದ್ದಂತೆ ಅಲ್ಲಿದ್ದ ಮಕ್ಕಳು ಹಾಗೂ ಸಂಬಂಧಿಕರು ಹಣದ ನೋಟುಗಳನ್ನು ತೆಗೆದುಕೊಳ್ಳಲು ವೇದಿಕೆ ಹತ್ತಿದ್ದಾರೆ.

    ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಸಾಕಷ್ಟು ಜನ ಚರ್ಚೆ ಮಾಡುತ್ತಿದ್ದಾರೆ.

  • ಆಂಟಿಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿದ ಪಕ್ಕದ್ಮನೆಯ 16ರ ಪೋರ

    ಆಂಟಿಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿದ ಪಕ್ಕದ್ಮನೆಯ 16ರ ಪೋರ

    ಹೈದರಾಬಾದ್: ಮಹಿಳೆಯೊಬ್ಬರ ಸ್ನಾನದ ವಿಡಿಯೋಗಳನ್ನು ಅಪ್ರಾಪ್ತ ಹುಡುಗ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ತೆಲಂಗಾಣದ ಚಂದ್ರಯಾನಗುಟ್ಟದಲ್ಲಿ ನಡೆದಿದೆ.

    ಚತ್ರಿನಾಕಾ ಪೊಲೀಸರು ಅಪ್ರಾಪ್ತ ಹುಡುಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಅವರು ಜಗ್ಗಾಂಪೇಟದಲ್ಲಿರುವ ಆರ್‍ಎನ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. 16 ವರ್ಷದ ಹುಡುಗ ಕೂಡ ಅದೇ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಆದರೆ ಅಪ್ರಾಪ್ತ ಹುಡುಗ ತನ್ನ ಮೊಬೈಲ್ ನಲ್ಲಿ ಕಳೆದ 20 ದಿನಗಳಿಂದ ಮಹಿಳೆ ಸ್ನಾನ ಮಾಡುತ್ತಿದ್ದುದ್ದನ್ನು ಕದ್ದು ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹುಡುಗ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡ ಬಳಿಕ ಅದನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾನೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಮಹಿಳೆಗೆ ಹುಡುಗನ ಬಗ್ಗೆ ತಿಳಿದಿದ್ದು, ತಕ್ಷಣ ಮಾರ್ಚ್ 16ರಂದು ಚತ್ರಿನಾಕಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಆದರೆ ದೂರು ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

    ಇದರಿಂದ ನೊಂದ ಮಹಿಳೆ ಚತ್ರಿನಾಕಾ ಪೊಲೀಸ್ ಠಾಣೆಯ ಎದುರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹುಡುಗನನ್ನು ಬಂಧಿಸಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟು ಮಹಿಳೆಯನ್ನು ಸಮಾಧಾನ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಹುಡುಗನನ್ನು ವಶಕ್ಕೆ ಪಡೆದ ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

  • ಜಯದೇವದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್‍ಗೆ ಚಿಕಿತ್ಸೆ

    ಜಯದೇವದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್‍ಗೆ ಚಿಕಿತ್ಸೆ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶುಕ್ರವಾರವಷ್ಟೇ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಅಲ್ಲಿಂದ ಬೆಂಗಳೂರಿಗೆ ತೆರಳಿದ್ದರು. ನಂತರ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವನಾಥ್ ಅವರಿಗೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೆ ಇರುವಂತೆ ವೈದ್ಯ ಡಾ. ಮಂಜುನಾಥ್ ಸೂಚನೆ ನೀಡಿದ್ದಾರೆ.

    ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ವಿಶ್ವನಾಥ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ವಿಶ್ವನಾಥ್ ಆರೋಗ್ಯವಾಗಿದ್ದು, ಕೆಲ ದಿನ ವಿಶ್ರಾಂತಿ ಬೇಕಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರಿಗೆ ಶುಕ್ರವಾರ ಸಂಜೆ ಹೈದರಾಬಾದ್ ನಲ್ಲಿ ಲಘು ಹೃದಯಾಘಾತವಾಗಿತ್ತು. ವಿಮಾನ ನಿಲ್ದಾಣದಲ್ಲಿ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥರಾದ ವಿಶ್ವನಾಥ್ ಅವರನ್ನು ಕೂಡಲೇ ಹೈದರಾಬಾದ್ ನ ಲಾಲ್‍ಬಹುದ್ದೂರ್ ಶಾಸ್ತ್ರಿ ನಗರದ ಓಜೋನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿನ ವೈದ್ಯರೊಂದಿಗೆ ಜಯದೇವ ಆಸ್ಪತ್ರೆಯ ವೈದ್ಯ ಡಾ.ಮಂಜುನಾಥ್ ನಿರಂತರ ಸಂಪರ್ಕದಲ್ಲಿದ್ದು, ಆರೋಗ್ಯದ ಮಾಹಿತಿಯನ್ನು ಪಡೆದುಕೊಂಡಿದ್ದರು.

    ಈ ಹಿಂದೆ ವಿಶ್ವನಾಥ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಮೂರು ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಮೂರು ಸ್ಟಂಟ್ ಗಳ ಪೈಕಿ ಒಂದರಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಲಘು ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿತ್ತು. ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶ್ವನಾಥ್ ಹೈದರಾಬಾದ್ ಗೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಹ ವಿಶ್ವನಾಥ್ ಅವರ ಜೊತೆಯಲ್ಲಿದ್ದರು.

  • ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್‍ಗೆ ಲಘು ಹೃದಯಾಘಾತ

    ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್‍ಗೆ ಲಘು ಹೃದಯಾಘಾತ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರಿಗೆ ಗುರುವಾರ ಸಂಜೆ ಹೈದರಾಬಾದ್ ನಲ್ಲಿ ಲಘು ಹೃದಯಾಘಾತವಾಗಿದೆ.

    ವಿಮಾನ ನಿಲ್ದಾಣದಲ್ಲಿ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥರಾದ ವಿಶ್ವನಾಥ್ ಅವರನ್ನು ಕೂಡಲೇ ಹೈದರಾಬಾದ್ ನ ಲಾಲಬಹುದ್ದೂರ್ ಶಾಸ್ತ್ರಿ ನಗರದ ಓಜೋನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲಿನ ವೈದ್ಯರೊಂದಿಗೆ ಜಯದೇವ ಆಸ್ಪತ್ರೆಯ ವೈದ್ಯ ಡಾ.ಮಂಜುನಾಥ್ ನಿರಂತರ ಸಂಪರ್ಕದಲ್ಲಿದ್ದು, ಆರೋಗ್ಯದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

    ಈ ಹಿಂದೆ ವಿಶ್ವನಾಥ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಮೂರು ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಮೂರು ಸ್ಟಂಟ್ ಗಳ ಪೈಕಿ ಒಂದರಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಲಘು ಹೃದಯಾಘಾತ ಸಂಭವಿಸಿದೆ. ಸದ್ಯ ವಿಶ್ವನಾಥ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಾನುವಾರವರಗೆ ಪರಿಸ್ಥಿತಿ ನೋಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರುವ ಬಗ್ಗೆ ತೀರ್ಮಾನಿಸಲಾಗುವುದು. ಏರ್ ಅಂಬ್ಯುಲೆನ್ಸ್ ಅಥವಾ ಸಾಮಾನ್ಯ ವಿಮಾನದಲ್ಲೇ ಕರೆತರಬಹುದ ಎಂಬುದರ ಕುರಿತು ಆರೋಗ್ಯ ಸ್ಥಿತಿ ನೋಡಿ ಇಂದು ಸಂಜೆ ತೀರ್ಮಾನ ಮಾಡಲಾಗುವುದು ಎಂಬ ಮಾಹಿತಿ ಲಭಿಸಿದೆ.

    ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶ್ವನಾಥ್ ಗುರುವಾರ ಹೈದರಾಬಾದ್ ಗೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಹ ವಿಶ್ವನಾಥ್ ಅವರ ಜೊತೆಯಲ್ಲಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನನಗೆ ಇಷ್ಟವಾಗಲ್ಲ: ಪವನ್ ಕಲ್ಯಾಣ್

    ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನನಗೆ ಇಷ್ಟವಾಗಲ್ಲ: ಪವನ್ ಕಲ್ಯಾಣ್

    ಹೈದರಾಬಾದ್: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಹೇಳುತ್ತಾರೆ. ಆದ್ರೆ ರಾಜಕೀಯ ಪಕ್ಷಗಳ ಸಭೆಗಳಲ್ಲಿ ಯಾಕೆ ರಾಷ್ಟ್ರಗೀತೆ ಹಾಕಿ ಗೌರವಿಸಲ್ಲ ಎಂದು ಜನ ಸೇನಾ ಮುಖ್ಯಸ್ಥ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ.

    ಕೆಲ ದಿನಗಳ ಹಿಂದೆ, “2019ರ ಲೋಕಸಭೆ ಚುನಾವಣೆ ಬರುವ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ಎರಡು ವರ್ಷದ ಹಿಂದೆಯೇ ನನಗೆ ಹೇಳಿತ್ತು” ಎಂದು ಹೇಳಿಕೆ ನೀಡಿ ಪವನ್ ಕಲ್ಯಾಣ್ ಸುದ್ದಿಯಲ್ಲಿದ್ದರು. ಈಗ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕುವ ಬಗ್ಗೆ ಹೇಳಿಕೆ ನೀಡಿ ಮತ್ತೆ ಎಲ್ಲೆಡೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ಶನಿವಾರ ನಡೆದ ಯುವ-ಸಂವಾದಾತ್ಮಕ ಅಧಿವೇಶನ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಭಾಗಿಯಾಗಿದ್ದರು. ಈ ವೇಳೆ ಭಾಷಣ ಮಾಡುತ್ತ, ನನಗೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಇಷ್ಟವಾಗಲ್ಲ. ಚಿತ್ರಮಂದಿರದಲ್ಲಿ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಕಳೆಯುವ ವಿರಾಮದ ಸಮಯವನ್ನು ಈಗ ಒಬ್ಬರ ದೇಶಭಕ್ತಿಯನ್ನು ಅಳಿಯಲು ಬಳಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

    ರಾಜಕೀಯ ಪಕ್ಷಗಳು ತಮ್ಮ ಸಭೆ ಸಮಾರಂಭಗಳು ಆರಂಭವಾಗುವ ಮುನ್ನವೇಕೆ ರಾಷ್ಟ್ರಗೀತೆಯನ್ನು ಹಾಕುವುದಿಲ್ಲ? ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ಹಾಕಬೇಕು? ದೇಶದಲ್ಲಿರುವ ಎಲ್ಲಾ ಕಚೇರಿಗಳಲ್ಲೂ ರಾಷ್ಟ್ರಗೀತೆ ಮೊಳಗಬೇಕು. ಯಾರು ಕಾನೂನನ್ನು ಮಾಡುತ್ತಾರೋ ಅವರು ಕೂಡ ಅದನ್ನು ಪಾಲಿಸಬೇಕು ಎಂದು ಹೇಳಿದರು.

    ಈ ಹಿಂದೆ 2016ರಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಕ್ಕೆ ಜನ ಸೇನಾ ಮುಖ್ಯಸ್ಥರ ಮೇಲೆ ಹೈದರಾಬಾದ್‍ನ ವಕೀಲರೊಬ್ಬರು ದೂರು ದಾಖಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಯುವರತ್ನ’ ನಾಯಕಿಯನ್ನ ವರಿಸಿದ ನಟ ಆರ್ಯ

    ‘ಯುವರತ್ನ’ ನಾಯಕಿಯನ್ನ ವರಿಸಿದ ನಟ ಆರ್ಯ

    ಹೈದರಾಬಾದ್: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕತ್ವದ ‘ಯುವರತ್ನ’ ಸಿನಿಮಾದ ನಾಯಕಿ ಸಯ್ಯೇಶಾ ಸೈಗಲ್ ಅವರನ್ನು ತಮಿಳು ನಟ ಆರ್ಯ ಅವರು ಮದುವೆಯಾಗಿದ್ದಾರೆ.

    ಮಾರ್ಚ್ 09 ಮತ್ತು 10 ಅಂದರೆ ಶನಿವಾರ ಹಾಗೂ ಭಾನುವಾರ ಈ ಜೋಡಿಯ ವಿವಾಹ ಕಾರ್ಯಕ್ರಮ ನೆರವೇರಿದೆ. ಶನಿವಾರವೇ ಈ ಜೋಡಿಯ ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಆರಂಭವಾಗಿದ್ದು, ವಿವಿಧ ರೀತಿಯಲ್ಲಿ ಇಬ್ಬರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇವರ ವೆಡ್ಡಿಂಗ್ ಫೋಟೋಗಳನ್ನು ವಧು ಸಯ್ಯೇಶಾ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಇಬ್ಬರು ಪ್ಯಾಲೇಸ್‍ನಲ್ಲಿ ರಾಜ-ರಾಣಿ ರೀತಿಯ ಉಡುಪನ್ನು ಧರಿಸಿ ಮಿಂಚಿದ್ದಾರೆ.

    ಹೈದರಾಬಾದ್‍ನ ತಾಜ್ ಫುಕ್ನಮ್ ಪ್ಯಾಲೇಸ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಇವರ ಮದುವೆಯಲ್ಲಿ ಬಾಲಿವುಡ್ ಮತ್ತು ಕಾಲಿವುಡ್‍ನ ಖ್ಯಾತ ನಟ ನಟಿಯರು ಪಾಲ್ಗೊಂಡಿದ್ದು, ನವ ಜೋಡಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಈ ಹಿಂದೆ ನಟ ಆರ್ಯ ಅವರು ಪ್ರೇಮಿಗಳ ದಿನಾಚರಣೆಯ ದಿನವೇ ತಮ್ಮ ಮದುವೆಯಾಗುವ ಹುಡುಗಿ ಹಾಗೂ ವಿವಾಹದ ಬಗ್ಗೆ ತಿಳಿಸಿದ್ದರು. 2018 ರ `ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದು, ಅಂದಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು `ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾದಲ್ಲಿ ಹೆಸರುವಾಸಿಯಾಗಿದ್ದಾರೆ. ನಟಿ ಸಯ್ಯೇಶಾ ಸೈಗಲ್ ಅವರು ‘ಯುವರತ್ನ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದ್ದಾರೆ. ಆದರೆ ಈಗಾಗಲೇ ಸೌತ್ ಇಂಡಿಯಾದ ಹಲವು ಸಿನಿಮಾಗಳಲ್ಲಿ ನಟಿ ಸಯ್ಯೇಶಾ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವೀಟ್ ಆಸೆ ತೋರಿಸಿ 9ರ ಬಾಲಕಿ ಮೇಲೆ ಅತ್ಯಾಚಾರ!

    ಸ್ವೀಟ್ ಆಸೆ ತೋರಿಸಿ 9ರ ಬಾಲಕಿ ಮೇಲೆ ಅತ್ಯಾಚಾರ!

    ಹೈದರಾಬಾದ್: ಸ್ವೀಟ್ ನೀಡುವುದಾಗಿ ಆಸೆ ತೋರಿಸಿ ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಸಿಂಗರೆನಿ ಕಾಲೋನಿಯಲ್ಲಿ ನಡೆದಿದೆ.

    ಸಿಂಗರೆನಿ ಕಾಲೋನಿಯ ನಿವಾಸಿ ಶ್ರೀನಿವಾಸ್(28) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಯ ಪಕ್ಕದ ಮನೆಯಲ್ಲಿಯೇ ಶ್ರೀನಿವಾಸ್ ವಾಸಿಸುತ್ತಿದ್ದನು. ಶುಕ್ರವಾರ ರಾತ್ರಿ ಸುಮಾರು 7.30ರ ಹೊತ್ತಿಗೆ ಬಾಲಕಿ ತನ್ನ ಸಹೋದರನ ಜೊತೆ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಶ್ರೀನಿವಾಸ್ ಬಾಲಕಿಗೆ ಸ್ವೀಟ್ ಕೊಡುತ್ತೇನೆ ಬಾ ಎಂದು ತನ್ನೊಡನೆ ಕರೆದೋಯ್ದು ಅತ್ಯಾಚಾರ ಮಾಡಿದ್ದಾನೆ.

    ಈ ವಿಷಯವನ್ನು ಬಾಲಕಿ ಯಾರ ಬಳಿಯೂ ಹೇಳಿರಲಿಲ್ಲ. ಬಳಿಕ ಶನಿವಾರ ಬೆಳಗ್ಗೆ ಹೊಟ್ಟೆ ನೋವೆಂದು ಬಾಲಕಿ ನರಳಾಡುತ್ತಿದ್ದ ವೇಳೆ ಆಕೆಯ ತಾಯಿ ಪ್ರಶ್ನಿಸಿದಾಗ, ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿ ನಗರದ ಸಾಯಿದಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ.

    ಸದ್ಯ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(2) ಹಾಗೂ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಪ್ರಾಪ್ತೆಯನ್ನು ನಗ್ನಗೊಳಿಸಿ, ಬ್ಲೇಡ್‍ನಿಂದ ಕೊಯ್ದು ವಿಡಿಯೋ ಮಾಡ್ದ!

    ಅಪ್ರಾಪ್ತೆಯನ್ನು ನಗ್ನಗೊಳಿಸಿ, ಬ್ಲೇಡ್‍ನಿಂದ ಕೊಯ್ದು ವಿಡಿಯೋ ಮಾಡ್ದ!

    – ಡ್ರಗ್ ಅಡಿಕ್ಟ್ ಆರೋಪಿಗೆ ಸ್ಥಳಿಯರಿಂದ ಗೂಸಾ

    ಹೈದರಾಬಾದ್: ಡ್ರಗ್ ವ್ಯಸನಿಯೊಬ್ಬ ಅಪ್ರಾಪ್ತೆಯನ್ನು ನಗ್ನಗೊಳಿಸಿ ಬಳಿಕ ಆಕೆಯ ಮೈಯನ್ನು ಬ್ಲೇಡ್ ನಿಂದ ಕೊಯ್ದು ವಿಡಿಯೋ ಮಾಡಿದ ಘಟನೆ ಗುರುವಾರ ಹೈದರಾಬಾದಿನ ಗಾಂಧಿನಗರದಲ್ಲಿ ನಡೆದಿದೆ.

    ಬಾಲಕಿಯ ಮೈಯನ್ನು ಬ್ಲೇಡ್‍ನಿಂದ ಗಾಯಗೊಳಿಸಿದ ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದಳು. ನಾನು ಇಲ್ಲಿಂದ ಹೋಗಬೇಕು. ನನಗೆ ಅನುಮತಿ ಕೊಡಿ ಎಂದು ಬಾಲಕಿ ಮನವಿ ಮಾಡುತ್ತಿದ್ದಳು. ಆದರೆ ಆರೋಪಿ ಬಾಲಕಿಯ ಬಗ್ಗೆ ಯೋಚಿಸದೇ ಆಕೆಯ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದ.

    ಬಾಲಕಿಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ವಿಡಿಯೋ ಮಾಡುತ್ತಿದ್ದ ಆರೋಪಿಯನ್ನು ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಗಾಂಧಿನಗರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅಲ್ಲಿ ಡ್ರಗ್ಸ್‍ಗೆ ಸಂಬಂಧಿಸಿದಂತೆ ಇಂತಹ ಘಟನೆಗಳು ನಡೆಯುತ್ತಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪೋಕ್ಸೋ ಹಾಗೂ ಕಿಡ್ನಾಪ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

    ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

    ಹೈದರಾಬಾದ್: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಬಳಿಕ ಒಂದು ಮಗು ಸಾವನ್ನಪ್ಪಿದ್ದು, ಸುಮಾರು 26 ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ನಾಮ್‍ಪಲ್ಲಿಯಲ್ಲಿ ನಡೆದಿದೆ.

    ಗುರುವಾರ ನಾಮ್‍ಪಲ್ಲಿಯಲ್ಲಿರುವ ಸಾರ್ವಜನಿಕರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳು ಲಸಿಕೆ ಹಾಕಿಸಿಕೊಂಡ ಬಳಿಕ ಅಸ್ವಸ್ಥರಾಗಿದ್ದಾರೆ. ಲಸಿಕೆ ಪಡೆದ ಮಕ್ಕಳಲ್ಲಿ 26 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಗಂಡು ಮಗು ಮೃತಪಟ್ಟಿದೆ ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಮಕ್ಕಳಿಗೆ ನೀಲೋಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳ ವಯಸ್ಸು ಹಾಗೂ ಇತರೇ ವಿವರಗಳನ್ನು ಮಾಧ್ಯಮಗಳಿಗೆ ನೀಡಲು ವೈದ್ಯರು ನಿರಾಕರಿಸಿದ್ದಾರೆ.

    ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ. ಇದಕ್ಕೇ ಲಸಿಕೆ ನೀಡಿದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಲ್ಲದೆ ನಾಮ್‍ಪಲ್ಲಿ ಆರೋಗ್ಯ ಕೇಂದ್ರದಲ್ಲಿ ಯಾವೆಲ್ಲ ಮಕ್ಕಳಿಗೆ ಲಸಿಕೆ ಹಾಕಲಾಗಿತ್ತೋ, ಎಲ್ಲಾ ಮಕ್ಕಳ ಪೋಷಕರಿಗೆ ಅವರನ್ನು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕರೆತರಲು ಸೂಚಿಸಲಾಗಿದೆ. ಅಲ್ಲದೆ ಘಟನೆ ನಡೆದ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಇದಕ್ಕೆ ಸಂಬಂಧ ಪಟ್ಟವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 9 ವರ್ಷದಿಂದ ಪ್ರೀತಿಸಿದ ಯುವಕ ಕೈಕೊಟ್ಟ- ಮೊಬೈಲ್ ಟವರ್ ಏರಿ ನರ್ಸ್ ಆತ್ಮಹತ್ಯೆಗೆ ಯತ್ನ

    9 ವರ್ಷದಿಂದ ಪ್ರೀತಿಸಿದ ಯುವಕ ಕೈಕೊಟ್ಟ- ಮೊಬೈಲ್ ಟವರ್ ಏರಿ ನರ್ಸ್ ಆತ್ಮಹತ್ಯೆಗೆ ಯತ್ನ

    ಹೈದರಾಬಾದ್: 9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಕೈ ಕೊಟ್ಟಿದ್ದರಿಂದ ಮನನೊಂದು ನರ್ಸ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿರುವ ವರಂಗಲ್‍ನ ಹೊರವಲಯದಲ್ಲಿ ನಡೆದಿದೆ.

    ದಮೇರಾ ಮಾಲಿನಿ(23) ಆತ್ಮಹತ್ಯೆಗೆ ಯತ್ನಿಸಿದ ನರ್ಸ್. ಮಾಲಿನಿ ಪೇಗಾದಾಪಲ್ಲಿ ಗ್ರಾಮದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮಾಲಿನಿ ತನ್ನದೇ ಗ್ರಾಮದ ಯುವಕ ನಕ್ಕಾ ಬಾಬುನನ್ನು 9 ವರ್ಷದಿಂದ ಪ್ರೀತಿಸುತ್ತಿದ್ದಳು.

    ಇತ್ತೀಚೆಗೆ ನಕ್ಕಾ ಬಾಬುಗೆ ಸಿಂಗರೆನಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಸಿಕಿತ್ತು. ಕೆಲಸ ಸಿಕ್ಕಿದ ಕಾರಣ ಆತನಿಗೆ ಹೆಚ್ಚು ವರದಕ್ಷಿಣೆಯನ್ನು ಪಡೆಯಬೇಕೆಂಬ ಆಸೆ ಇತ್ತು. ಹಾಗಾಗಿ ಆತ ಮಾಲಿನಿಯನ್ನು ದೂರ ಮಾಡುತ್ತಿದ್ದನು.

    ಮಾಲಿನಿ ಈ ವಿಷಯದ ಬಗ್ಗೆ ತನ್ನ ಪ್ರಿಯಕರ ನಕ್ಕಾ ಬಾಬುನನ್ನು ಸಮಾಧಾನಪಡಿಸಿ ಮಾತನಾಡಲು ಯತ್ನಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಅವಳು ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ.

    ಈ ವೇಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಲಿನಿಯ ಮನವೊಲಿಸಿ ಆಕೆಯನ್ನು ಮೊಬೈಲ್ ಟವರ್‍ನಿಂದ ಕೆಳಗಿಳಿಸಿ ಕರೆದುಕೊಂಡು ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv