Tag: Hyderabad

  • ಮಣ್ಣಿನ ದಿಬ್ಬ ಕುಸಿತ – 10 ಮಹಿಳಾ ಕಾರ್ಮಿಕರ ದುರ್ಮರಣ

    ಮಣ್ಣಿನ ದಿಬ್ಬ ಕುಸಿತ – 10 ಮಹಿಳಾ ಕಾರ್ಮಿಕರ ದುರ್ಮರಣ

    ಹೈದರಾಬಾದ್: ಕೆಲಸ ಮಾಡುತ್ತಿದ್ದಾಗ ಮಣ್ಣಿನ ದಿಬ್ಬ ಕುಸಿದ ಪರಿಣಾಮ ಹತ್ತು ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ನಾರಾಯಣಪೇಟ್‍ ನಲ್ಲಿ ನಡೆದಿದೆ.

    ಬುಧವಾರ ಬೆಳಗ್ಗೆ ಮರಿಕಲ್ ಮಂಡಲದ ತಿಲೆರು ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಮೃತ ಮಹಿಳೆಯರನ್ನು ಅನುರಾಧಾ(30), ಭೀಮಮ್ಮ(40), ಬುಡಮ್ಣ(20), ಬಿ.ಲಕ್ಷ್ಮೀ(28), ಕೆ.ಲಕ್ಷ್ಮಿ(30), ಮಂಗಮ್ಮ(32), ಅನಂತಮ್ಮ(45), ಕೇಶಮ್ಮ(40), ಬಿ.ಅನಂತಮ್ಮ(35) ಹಾಗೂ ಲಕ್ಷ್ಮಿ(28) ಎಂದು ಗುರುತಿಸಲಾಗಿದೆ.

    ತಿಲೆರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಣ್ಣಿನ ದಿಬ್ಬವನ್ನು ಅಗೆಯುವ ಕಾರ್ಯ ನಡೆಯುತಿತ್ತು. ಇಲ್ಲಿ ಅನೇಕ ಸ್ಥಳೀಯ ಜನರು ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಮಣ್ಣಿನ ದಿಬ್ಬ ಕುಸಿದು ಬಿದ್ದಿದೆ. ಪರಿಣಾಮ ಯಾರು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಹೀಗಾಗಿ ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮರಿಕಲ್ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯಲ್ಲಿ ಐವರು ಕಾರ್ಮಿಕರು ಪಾರಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಸ್ಥಳೀಯರ ಸಹಾಯದಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳದಲ್ಲಿ ಮೃತ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

    ಈ ದಾರುಣ ಘಟನೆಯ ಬಗ್ಗೆ ಮಾಹಿತಿ ತಿಳಿದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆ ಅಧಿಕಾರಿಗೆ ಮತ್ತೆ ಈ ರೀತಿ ಆಗದಂತೆ ಮುಂಜಾಗೃತ ಕ್ರಮವಹಿಸುವಂತೆ ತಿಳಿಸಿದ್ದಾರೆ.

  • ಪಾರ್ಟಿ ಮುಗಿಸಿ ಬೆಳಗ್ಗೆ ಬರ್ತೀನಿ ಅಮ್ಮಾ- ಟೆರೆಸ್ ಮೇಲಿನ ರೂಮಿನಲ್ಲಿ ಶವವಾಗಿ ಪತ್ತೆ

    ಪಾರ್ಟಿ ಮುಗಿಸಿ ಬೆಳಗ್ಗೆ ಬರ್ತೀನಿ ಅಮ್ಮಾ- ಟೆರೆಸ್ ಮೇಲಿನ ರೂಮಿನಲ್ಲಿ ಶವವಾಗಿ ಪತ್ತೆ

    ಹೈದರಾಬಾದ್: ರಾಜೇಂದ್ರನಗರದ ನರ್ಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಪಪ್ಪಾಲಗುಡಾ ಪ್ರದೇಶದ ಜುಪಲ್ಲಿ ತರುಣ್ (19) ಆತ್ಮಹತ್ಯೆ ಮಾಡಿಕೊಂಡಿರುವ ಹುಡುಗ. 10ನೇ ತರಗತಿ ವ್ಯಾಸಂಗ ಮುಗಿದ ನಂತರ ತರುಣ್ ಮನೆಯಲ್ಲಿಯೇ ಇದ್ದನು. ಏಪ್ರಿಲ್ 6 ರಂದು ತರುಣ್ ಸುಮಾರು ರಾತ್ರಿ 11.40 ಗಂಟೆಗೆ ತನ್ನ ತಾಯಿಗೆ ಕರೆ ಮಾಡಿ ತಾನು ಸ್ನೇಹಿತನ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದಾನೆ ಎಂದು ತಿಳಿಸಿದ್ದಾನೆ. ನಂತರ ಮಧ್ಯರಾತ್ರಿ ಸುಮಾರು 1.20 ಗಂಟೆಗೆ ಮತ್ತೆ ಫೋನ್ ಮಾಡಿ ಈಗ ತುಂಬಾ ಲೇಟ್ ಆಗಿದೆ ಬೆಳಗ್ಗೆ ಮನೆಗೆ ಬರುತ್ತೀನಿ ಎಂದು ತಿಳಿಸಿದ್ದನು.

    ಮುಂಜಾನೆ ಆದರೂ ತರುಣ್ ಮನೆಗೆ ಹಿಂದಿರುಗಲಿಲ್ಲ. ಜೊತೆಗೆ ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ನಂತರ ಕುಟುಂಬ ಸದಸ್ಯರು ಮತ್ತು ಆತನ ಸ್ನೇಹಿತರು ಹುಡುಕಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಸಂಜೆ ವೇಳೆಗೆ ಮನೆಯ ಕಟ್ಟಡದ ಟೆರೇಸ್‍ನಲ್ಲಿದ್ದ ರೂಮಿನಲ್ಲಿ ತರುಣ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ತಲೆಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿತ್ತು. ಅಷ್ಟರಲ್ಲಾಗಲೇ ತರುಣ್ ಮೃತಪಟ್ಟಿದ್ದನು ಎಂದು ವೈದ್ಯರು ದೃಢಪಡಿಸಿದ್ದಾರೆ.

    ಮೃತ ತರುಣ್ ದೇಹದ ಮೇಲೆ ಕಂಡುಬಂದ ಗಾಯಗಳ ಗುರುತಿನ ಆಧಾರದ ಮೇಲೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತರುಣ್ ತಮ್ಮ ಪ್ರದೇಶದ ವ್ಯಾಪ್ತಿಯ ಹುಡುಗಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಪ್ರೀತಿಯ ವಿಚಾರದಿಂದ ಎರಡು ಕುಟುಂಬಗಳ ನಡುವೆ ವಾದ-ವಿವಾದ ನಡೆದಿಯಾ ಎಂದು ಪೊಲೀಸರು ಶಂಕಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ವಿಶೇಷ ವಿಡಿಯೋ ಹಾಕಿ ‘ಲಿಲ್ಲಿ’ಗೆ ವಿಜಯ್ ವಿಶ್

    ವಿಶೇಷ ವಿಡಿಯೋ ಹಾಕಿ ‘ಲಿಲ್ಲಿ’ಗೆ ವಿಜಯ್ ವಿಶ್

    ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಇಂದು ತಮ್ಮ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ವಿಚಿತ್ರವಾಗಿ ವಿಶ್ ಮಾಡಿದ್ದಾರೆ.

    ವಿಜಯ ದೇವರಕೊಂಡ ತಮ್ಮ ‘ಡಿಯರ್ ಕಾಮ್ರೆಡ್’ ಚಿತ್ರದ ಟೀಸರ್ ಹಾಸ್ಯವನ್ನಾಗಿ ಪರಿವರ್ತಿಸಿ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು “ಹುಟ್ಟುಹಬ್ಬದ ಶುಭಾಶಯಗಳು ಲಿಲ್ಲಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಲಿಲ್ಲಿ ಎಂಬುದು ಡಿಯರ್ ಕಾಮ್ರೆಡ್‍ನಲ್ಲಿ ರಶ್ಮಿಕಾ ಪಾತ್ರದ ಹೆಸರು.

    https://twitter.com/TheDeverakonda/status/1114008336834293760

    ವಿಜಯ್ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ, “ಪ್ರೀತಿಯ ಲಿಲ್ಲಿ. ನಾವು ಸುಮ್ಮನೆ ತಮಾಷೆ ಮಾಡುದ್ದೇವೆ. ನಮ್ಮ ಮೇಲೆ ಬೇಸರ ಮಾಡಿಕೊಳ್ಳಬೇಡ. ಇಡೀ ಚಿತ್ರತಂಡಕ್ಕೆ ನೀನು ಸಂಭ್ರಮ. ನೀನು ನಿನ್ನ ಅಭಿನಯದಿಂದ ನಮ್ಮನ್ನು ಅಳಿಸಿದ್ದೀಯಾ ಹಾಗೂ ಇಡೀ ದಿನ ನಮ್ಮನ್ನು ನಗಿಸಿದ್ದೀಯಾ. ಈ ತಿಂಗಳ 8ರಂದು ಬೆಳಗ್ಗೆ 11.11ಕ್ಕೆ ಚಿತ್ರದ ಮೊದಲ ಹಾಡನ್ನು ನಿನಗೆ ಡೆಡಿಕೇಟ್ ಮಾಡುತ್ತೇವೆ” ಎಂದು ಡಿಯರ್ ಕಾಮ್ರೆಡ್ ಚಿತ್ರದ ರಶ್ಮಿಕಾ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಡಿಯರ್ ಕಾಮ್ರೆಡ್ ಚಿತ್ರ ಭರತ್ ಕಾಮಾ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು. ಈ ಚಿತ್ರದ ಮೇ 31ರಂದು ಬಿಡುಗಡೆ ಆಗಲಿದೆ.

  • ತಾಯಿ-ಮಗನನ್ನು ಒಂದು ಮಾಡಿದ ಫೇಸ್‍ಬುಕ್

    ತಾಯಿ-ಮಗನನ್ನು ಒಂದು ಮಾಡಿದ ಫೇಸ್‍ಬುಕ್

    -8 ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಪುತ್ರ

    ಹೈದರಾಬಾದ್: 8 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಫೇಸ್‍ಬುಕ್ ಮೂಲಕ ಪತ್ತೆಯಾಗಿ ತನ್ನ ತಾಯಿ ಬಳಿ ಸೇರಿದ ಘಟನೆ ತೆಲಂಗಾಣದ ರಚ್ಚಾಕೊಂದದಲ್ಲಿ ನಡೆದಿದೆ.

    ದಿನೇಶ್ ಜೀನಾ ಕಾಣೆಯಾಗಿದ್ದ ಯುವಕ. 2011ರಲ್ಲಿ ದಿನೇಶ್ ಜೇನಾ ಕಾಣೆಯಾಗಿದ್ದನು. ಈ ಬಗ್ಗೆ ಅವನ ತಾಯಿ ಸುಸಾನಾ ತನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ದಿನೇಶ್‍ನನ್ನು ಹುಡುಕಿದ್ದರು. ಆದರೆ ದಿನೇಶ್ ಎಲ್ಲಿಯೂ ಪತ್ತೆಯಾಗಿರಲಿಲ್ಲ ಎಂದು ಪೊಲೀಸ್ ಕಮಿಷನರ್ ಮಹೇಶ್ ಭಗವಾತ್ ಹೇಳಿದ್ದಾರೆ.

    ಸುಸಾನಾ ಫೇಸ್‍ಬುಕ್ ಬಳಸುವಾಗ ಅದರಲ್ಲಿ ತನ್ನ ಮಗನ ಪ್ರೊಫೈಲ್ ನೋಡಿದ್ದಾರೆ. ಬಳಿಕ ಸುಸಾನಾ ಈ ಬಗ್ಗೆ ರಚ್ಚಾಕೊಂಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ದೂರು ದಾಖಲಿಸಿದರು. ಪೊಲೀಸರು ಐಪಿ ವಿಳಾಸ ಪಡೆದುಕೊಂಡು ದಿನೇಶ್ ಇರುವ ಸ್ಥಳವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಆಗ ದಿನೇಶ್ ಪಂಜಾಬ್‍ನ ಅಮೃತ್‍ಸರ್ ಜಿಲ್ಲೆಯ ರನಾಕಾಲಾದಲ್ಲಿ ಇರುವುದು ತಿಳಿದು ಬಂದಿದೆ.

    ಪೊಲೀಸರು ಒಂದು ತಂಡವನ್ನು ರಚಿಸಿ ದಿನೇಶ್‍ನನ್ನು ಪಂಜಾಬ್‍ಗೆ ಹೋಗಿ ದಿನೇಶ್‍ನನ್ನು ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಿದ್ದಾರೆ. ಸದ್ಯ ಪೋಷಕರು ಹಾಗೂ ಸಂಬಂಧಿಕರು ದಿನೇಶ್‍ನನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಪಬ್‍ಜಿಯಿಂದಾಗಿ SSLC ವಿದ್ಯಾರ್ಥಿ ಆತ್ಮಹತ್ಯೆ

    ಪಬ್‍ಜಿಯಿಂದಾಗಿ SSLC ವಿದ್ಯಾರ್ಥಿ ಆತ್ಮಹತ್ಯೆ

    ಹೈದರಾಬಾದ್: ವಿಡಿಯೋ ಗೇಮ್ ಪಬ್‍ಜಿಯಿಂದಾಗಿ 16 ವರ್ಷದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನ ಮಲ್ಕಾಜ್ ಗಿರಿಯಲ್ಲಿ ನಡೆದಿದೆ.

    ಕಲ್ಲಕುರಿ ಸಾಂಬಶಿವ(16) ಆತ್ಮಹತ್ಯೆ ಮಾಡಿಕೊಂಡ ಹುಡುಗ. ಈತ ಪರೀಕ್ಷೆಯ ಸಮಯದಲ್ಲಿ ಓದಿಕೊಳ್ಳದೇ ಪಬ್‍ಜೀ ಆಟವನ್ನು ಆಡುತ್ತಿದ್ದನು. ಹೀಗಾಗಿ ಈತನ ತಂದೆ-ತಾಯಿಗಳು ಬೈದಿದ್ದಾರೆ. ಇದರಿಂದ ನೊಂದ ಸಾಂಬಶಿವ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಾಂಬಶಿವ ಭಾರತ್ ರಾಜ್ ಮತ್ತು ಉಮಾದೇವಿಯವರ ಎರಡನೇ ಪುತ್ರನಾಗಿದ್ದು, ಮಲ್ಕಾಜ್ ಗಿರಿಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಇವರು ವಿಷ್ಣುಪುರಿಯಲ್ಲಿ ವಾಸಿಸುತ್ತಿದ್ದರು. ಸಾಂಬಶಿವ ತಂದೆ ವೃತ್ತಿಯಲ್ಲಿ ಅರ್ಚಕರಾಗಿದ್ದರೆ, ತಾಯಿ ಗೃಹಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈಗ 10ನೇ ತರಗತಿಯ ಪರೀಕ್ಷೆಗಳು ಆರಂಭವಾಗಿದ್ದು, ಸಾಂಬಶಿವ ಒಂದು ಪರೀಕ್ಷೆಯನ್ನು ಮಾತ್ರ ಬರೆದಿದ್ದನು. ಇಂದು ಇನ್ನೊಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಸಾಂಬಶಿವ ಕೆಲವು ತಿಂಗಳುಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನಿನಲ್ಲಿ ವಿಡಿಯೋ ಗೇಮ್ ಡೌನ್ಲೋಡ್ ಮಾಡಿಕೊಂಡಿದ್ದು, ಸದಾ ಗೇಮ್ ಆಡುತ್ತಿದ್ದನು. ಭಾನುವಾರ ಸಂಜೆ ಸಾಂಬಶಿವ ಪಬ್‍ಜೀ ಆಟವಾಡುತ್ತಿದ್ದಾಗ ಆತನ ತಾಯಿ ಅವನನ್ನು ಬೈದು ಓದುವಂತೆ ಗದರಿಸಿದ್ದಾರೆ. ಇದರಿಂದ ಬೇಸರಗೊಂಡ ಸಾಂಬಶಿವ ರೂಮಿಗೆ ಹೋಗಿ ಲಾಕ್ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಪೋಷಕರು ಬೈದಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  • ಡೇಟಿಂಗ್ ಸುದ್ದಿ ಬಳಿಕ ಮದುಮಗಳಾದ ನಟಿ ಸಾಯಿ ಪಲ್ಲವಿ

    ಡೇಟಿಂಗ್ ಸುದ್ದಿ ಬಳಿಕ ಮದುಮಗಳಾದ ನಟಿ ಸಾಯಿ ಪಲ್ಲವಿ

    ಹೈದರಾಬಾದ್: ಇತ್ತೀಚೆಗಷ್ಟೆ ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ವಿಜಯ್ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೇ ಸಾಯಿ ಪಲ್ಲವಿ ಅವರು ಮದುಮಗಳಂತೆ ರೆಡಿಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

    ಸಾಯಿ ಪಲ್ಲವಿ ಅವರು ಕೇರಳ ಸಾಂಪ್ರದಾಯದ ರೀತಿ ರೇಷ್ಮೆ ಸೀರೆ ತೊಟ್ಟು ಮದುಮಗಳಂತೆ ಅಲಂಕಾರ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಾಯಿ ಪಲ್ಲವಿ ಅವರು “ಈ ವರ್ಷ ವಿಷು ಅಂದರೆ ಯುಗಾದಿ ಹಬ್ಬ ತುಂಬಾ ಬೇಗ ಬಂದಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸೀರೆ ಬಿಳಿ ಬಣ್ಣ ಹಾಗೂ ಗೋಲ್ಡನ್ ಬಣ್ಣದ ಬಾರ್ಡರ್ ಇದ್ದು, ಕೇರಳ ಸಂಪ್ರದಾಯದ ರೇಷ್ಮೆ ಸೀರೆಯಾಗಿದೆ. ಫೋಟೋಗೆ ವಿವಿಧ ರೀತಿ ಪೋಸ್ ಕೊಟ್ಟಿದ್ದು, ಈ ಸೀರೆಯಲ್ಲಿ ಸಾಯಿ ಪಲ್ಲವಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

    ಸಾಯಿ ಪಲ್ಲವಿ ಅವರು ಈ ಫೋಟೋಗಳನ್ನು ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಲೈಕ್ಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ನಿರ್ದೇಶಕ ವಿಜಯ್ ಜೊತೆ ಡೇಟಿಂಗ್‍ನಲ್ಲಿದ್ದು, ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ವಿಜಯ್ ಅವರು, “ನನಗೆ ಸಾಯಿ ಪಲ್ಲವಿ ಅವರು ಕೇವಲ ಸ್ನೇಹಿತೆಯಷ್ಟೇ, ಜೊತೆಗೆ ಸದ್ಯಕ್ಕೆ ನಾನು ಯಾವ ಹುಡುಗಿಯನ್ನು ವಿವಾಹವಾಗುವ ಆಲೋಚನೆ ಇಲ್ಲ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    https://www.instagram.com/p/BvrQPbnHEBp/

  • ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಹೈದರಾಬಾದ್: ದಕ್ಷಿಣದ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಈಗ ನಟಿ ಅಮಲಾ ಪೌಲ್ ಮಾಜಿ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಸಾಯಿ ಪಲ್ಲವಿ ಅವರು ಅಮಲಾ ಪೌಲ್ ಮಾಜಿ ಪತಿ ವಿಜಯ್ ತುಂಬಾ ದಿನಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲಿ ಮದುವೆ ಕೂಡ ಆಗಲಿದ್ದಾರೆ. ಆದರೆ ಯಾರೊಬ್ಬರು ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಜಯ್-ಅಮಲಾ ಪೌಲ್
    2011 ರಲ್ಲಿ ‘ದೈವಾ ತಿರುಮಗಲ್’ ಸಿನಿಮಾದಲ್ಲಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಅವರಿಬ್ಬರಿಗೂ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ 2014ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಇಬ್ಬರು ಮದುವೆಯಾಗಿದ್ದರು. ಆದರೆ ಅಮಲಾ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಫೆಬ್ರವರಿ 2017ರಲ್ಲಿ ಅವರಿಗೆ ವಿಚ್ಛೇದನ ಪಡೆದಿದ್ದರು.

    ವಿಜಯ್-ಸಾಯಿ ಪಲ್ಲವಿ:
    ನಟಿ ಸಾಯಿ ಪಲ್ಲವಿ ಅಭಿನಯದ ‘ದಿಯಾ’ ಎಂಬ ತಮಿಳು ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದಾರೆ. ಇದೇ ಸಿನಿಮಾ ತೆಲುಗಿನಲ್ಲಿ ‘ಕಣಂ’ ಹೆಸರಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಆರಂಭವಾಗಿದೆ ಎಂದು ವರದಿಯಾಗಿದೆ. ಇದೀಗ ಇವರಿಬ್ಬರು ಮದುವೆಯಾಗಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು, “ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಮ್ಮ ತಂದೆತಾಯಿಯನ್ನು ನೋಡಿಕೊಳ್ಳಬೇಕು” ಎಂದು ಹೇಳಿದ್ದರು. ಸದ್ಯಕ್ಕೆ ನಟ ಸೂರ್ಯ ಜೊತೆ ‘ಎನ್‍ಜಿಕೆ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ.

  • ಮಕ್ಕಳಿಬ್ಬರನ್ನ ಬಾವಿಗೆ ತಳ್ಳಿ, ತಾನೂ ಹಾರಿದ್ಳು – ಬದುಕಿ ಮೇಲೆ ಬಂದು ತಾಯಿ ನೇಣಿಗೆ ಶರಣು

    ಮಕ್ಕಳಿಬ್ಬರನ್ನ ಬಾವಿಗೆ ತಳ್ಳಿ, ತಾನೂ ಹಾರಿದ್ಳು – ಬದುಕಿ ಮೇಲೆ ಬಂದು ತಾಯಿ ನೇಣಿಗೆ ಶರಣು

    -ಎಲ್ಲರನ್ನು ನೋಡಿ ವಿಷ ಕುಡಿದ ತಂದೆ

    ಹೈದರಾಬಾದ್: ಮಹಿಳೆಯೊಬ್ಬಳು ಪತಿಯ ಮೇಲಿನ ಕೋಪಕ್ಕೆ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಈ ಘಟನೆ ಗುಂಟೂರ್ ಜಿಲ್ಲೆಯ ವಿನುಕೊಂಡ ಮಂಡಲ್‍ನ ಗೊಕನಾಕೊಂಡ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಮೃತರನ್ನು ನಾರಾಯಣಮ್ಮ (25) ಮಗ ಕೋಟೇಶ್ವರ ರಾವ್ (8) ಮತ್ತು ಮಗಳು ವೆಂಕಟ ಲಕ್ಷ್ಮಿ (3) ಎಂದು ಗುರುತಿಸಲಾಗಿದೆ. ಪತಿ ತನ್ನ ಸಂಪೂರ್ಣ ಕುಟುಂಬ ಸಾವನ್ನಪ್ಪಿರುವುದನ್ನು ಕಂಡು ಆಘಾತಕ್ಕೊಳಗಾಗಿ ಆತನೂ ಸಹ ವಿಷ ಕುಡಿದ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ನಡೆದಿದ್ದೇನು?
    ಪತಿ ವಲ್ಲೇಮ್ ಎಡುಕೊಂಡಲು (30) ಅತಿಯಾಗಿ ಮದ್ಯ ಕುಡಿಯುತ್ತಿದ್ದನು. ಈ ವಿಚಾರವಾಗಿ ಪತ್ನಿ ನಾರಾಯಣಮ್ಮ ಪ್ರತಿದಿನ ಜಗಳ ಮಾಡುತ್ತಿದ್ದಳು. ಕೊನೆಗೆ ಪತಿಯ ಕುಡಿತದ ಚಟಕ್ಕೆ ಬೇಸತ್ತು ನಾರಾಯಣಮ್ಮ ಶುಕ್ರವಾರ ಮುಂಜಾನೆ ತನ್ನ ಮಕ್ಕಳನ್ನು ಮನೆಯ ಸಮೀಪ ಇದ್ದ ಬಾವಿಗೆ ತಳ್ಳಿದ್ದಾಳೆ. ಬಳಿಕ ತಾನೂ ಕೂಡ ಬಾವಿಗೆ ಹಾರಿದ್ದಾಳೆ. ಆದರೆ ಆಕೆ ಬಾವಿಗೆ ಬಿದ್ದರು ಮೃತಪಟ್ಟಿರಲಿಲ್ಲ. ನಂತರ ಬಾವಿಯಿಂದ ಮೇಲೆ ಬಂದು ಮನೆಗೆ ಹೋಗಿ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿನುಕೊಂಡಾ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

    ನೆರೆಹೊರೆಯವರು ಬಾವಿಯಲ್ಲಿ ಮಕ್ಕಳ ಶವವನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ತನ್ನ ಪತ್ನಿ ಮತ್ತು ಮಕ್ಕಳು ಮೃತಪಟ್ಟಿರುವ ಬಗ್ಗೆ ತಿಳಿದು ಆಘಾತಗೊಂಡು ವಲ್ಲೇಮ್ ಎಡುಕೊಂಡಲು ಮನೆಯಲ್ಲಿಯೇ ವಿಷ ಕುಡಿದಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯಕ್ಕೆ ಎಡುಕೊಂಡಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • 6 ವರ್ಷದ ಬಾಲಕಿಯ ಕತ್ತು ಸೀಳಿ ಬರ್ಬರ ಕೊಲೆ- ಅತ್ಯಾಚಾರ ಶಂಕೆ

    6 ವರ್ಷದ ಬಾಲಕಿಯ ಕತ್ತು ಸೀಳಿ ಬರ್ಬರ ಕೊಲೆ- ಅತ್ಯಾಚಾರ ಶಂಕೆ

    ಹೈದರಾಬಾದ್: ಹೋಳಿ ಆಡಲು ಹೋಗಿದ್ದ 6 ವರ್ಷದ ಬಾಲಕಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ತೆಲಂಗಾಣದ ರೈಲ್ವೆ ಟ್ರ್ಯಾಕ್‍ನಲ್ಲಿ ಪತ್ತೆಯಾಗಿದೆ.

    ಈ ಘಟನೆ ಹೈದರಾಬಾದ್‍ನಿಂದ 31 ಕಿ.ಮೀ ದೂರದಲ್ಲಿ ಇರುವ ಮೆಡ್ಚಾಲ್‍ನಲ್ಲಿ ನಡೆದಿದೆ. ಗುರುವಾರ ಹೋಳಿ ಆಡಲು ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ಇಂದು ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಬಾಲಕಿ ಮೇಲೆ ನೆರೆಮನೆಯ ಆರು ಜನ ಕಾರ್ಮಿಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುರುವಾರ ಮಧ್ಯಾಹ್ನ ಮನೆಯಿಂದ ಹೊರ ಹೋದ ಬಾಲಕಿ ಮತ್ತೆ ಹಿಂತಿರುಗಲಿಲ್ಲ ಎಂದು ವರದಿಯಾಗಿದೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

    ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

    ಹೈದರಾಬಾದ್: ಪ್ರೀತಿ ನಿರಾಕರಿಸಿದಕ್ಕೆ ಯುವಕನೊಬ್ಬ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅತ್ಮಕುರ್ ಮಂದಲ್‍ನಲ್ಲಿ ನಡೆದಿದೆ.

    ಕಿರಣ್ ಕುಮಾರ್ ಗವಡ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಿರಣ್ ಕುಮಾರ್ ಮೂಲತಃ ಅರೇಪಲ್ಲಿ ಜಿಲ್ಲೆಯವನಾಗಿದ್ದು, ಹೈದರಾಬಾದ್‍ನ ಮೆದಿಪಟ್ನಂನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

    ಕಿರಣ್ ತನ್ನದೇ ಗ್ರಾಮದ ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಯುವತಿ ಕಿರಣ್ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಖಿನ್ನತೆಕ್ಕೊಳಗಾದ ಕಿರಣ್ ತನ್ನ ಸಾವಿಗೆ ಕಾರಣವನ್ನು ಡೆತ್‍ನೋಟ್‍ನಲ್ಲಿ ಬರೆದಿದ್ದ. ಅಲ್ಲದೆ ಆಡಿಯೋವನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಹಾಗೂ ವಾಟ್ಸಾಪ್ ಗ್ರೂಪಿನಲ್ಲಿ ಕಳುಹಿಸಿದ್ದನು.

    ಕಿರಣ್ ಬೆಳಗಿನ ಜಾವ ಸುಮಾರು 2.25ಕ್ಕೆ ಶ್ರೀರಾಮನಗರ ರೈಲ್ವೆ ಸ್ಟೇಷನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಆತನ ಮೃತದೇಹ ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಿರಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.