Tag: Hyderabad University

  • PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ದೇಶದಲ್ಲಿ ಈಗ ‘ಕೆಜಿಎಫ್‌’ದೇ ಸುದ್ದಿ. ಕೆಜಿಎಫ್‌ (KGF) ಎಂದರೆ ಕೋಲಾರದ ಚಿನ್ನದ ಗಣಿಯಲ್ಲ. ಅಥವಾ ಭಾರತ ಸಿನಿಮಾರಂಗದಲ್ಲಿ ಭಾರಿ ಸಂಚಲನ ಮೂಡಿಸಿದ ಯಶ್‌ ನಟನೆಯ ಸಿನಿಮಾವೂ ಅಲ್ಲ. ಇಲ್ಲಿ ತಿಳಿಸಲು ಹೊರಟಿರುವ ಕೆಜಿಎಫ್‌ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಕೆಜಿಎಫ್‌ ಅಂದ್ರೆ ಬೇರೇನು ಅಲ್ಲ. ಹೈದರಾಬಾದ್‌ನಲ್ಲಿರುವ ಕಾಂಚಾ ಗಚ್ಚಿಬೌಲಿ ಫಾರೆಸ್ಟ್‌ (Kancha Gachibowli Forest). ನೂರಾರು ಎಕರೆ ಹಸಿರು ಹೊದ್ದು ನಳನಳಿಸುತ್ತಿರುವ ಈ ಕಾಡಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ.

    ಗ್ರಾಮೀಣ ಭಾಗದ ಬಡವರು ಮತ್ತು ಬುಡಕಟ್ಟು ಜನಾಂಗದ ಜೀವನೋಪಾಯಕ್ಕೆ ಪೂರಕವಾದ, ಜಾಗತಿಕ ತಾಪಮಾನ ಏರಿಕೆ ತಗ್ಗಿಸುವುದು, ಫಲವತ್ತಾದ ಮಣ್ಣನ್ನು ಸಂರಕ್ಷಿಸುವುದು, ಅಳಿವಿನಂಚಿನ ವನ್ಯಜೀವಿಗಳನ್ನು ಸಂರಕ್ಷಿಸುವಲ್ಲಿ ಕಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ಹಸಿರು ಜೀವಸಂಕುಲದ ಉಸಿರು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಎಗ್ಗಿಲ್ಲದೇ ನಡೆಯುತ್ತಿದೆ. ಈಗ ಅಂಥದ್ದೇ ಸನ್ನಿವೇಶವೊಂದಕ್ಕೆ ಹೈದರಾಬಾದ್‌ ಸಾಕ್ಷಿಯಾಗಿದೆ. ನೂರಾರು ಎಕರೆ ಅರಣ್ಯ ಪ್ರದೇಶ ಸರ್ಕಾರದ ಕಣ್ಣಿಗೆ ಬಿದ್ದಿದೆ. ಆದರೆ, ಅರಣ್ಯ ಸಂರಕ್ಷಣೆಗೆ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿರುವುದು ಭರವಸೆ ಮೂಡಿಸಿದೆ. ತೆಲಂಗಾಣದ ಅರಣ್ಯ ಪ್ರದೇಶವು 27,292 ಚದರ ಕಿ.ಮೀ.. ಒಟ್ಟು ಭೌಗೋಳಿಕ ಪ್ರದೇಶದ ಸರಿಸುಮಾರು ಶೇ.24.35 ರಷ್ಟಿದೆ.

    ಏನಿದು ಕಾಂಚಾ ಗಚ್ಚಿಬೌಲಿ ಅರಣ್ಯ ಪ್ರದೇಶ ವಿವಾದ? ಸರ್ಕಾರದ ಕಣ್ಣು ಬಿದ್ದಿರೋದ್ಯಾಕೆ? ವಿದ್ಯಾರ್ಥಿಗಳ ವಿರೋಧವೇಕೆ? ಹೋರಾಟದ ಹಿನ್ನೆಲೆ ಏನು? ಸುಪ್ರೀಂ ಕೋರ್ಟ್‌ ತೀರ್ಪೇನು? ಮೊದಲಾದ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಹೈದರಾಬಾದ್‌ ‘ನಗರ ಕಾಡು’ ಕಾಂಚಾ ಗಚ್ಚಿಬೌಲಿ
    ಕಾಂಚಾ ಗಚ್ಚಿಬೌಲಿ ಒಂದು ವಿಶೇಷ ಕಾಡು. ಹೈದರಾಬಾದ್‌ನ ನಗರ ಕಾಡು ಎಂದೇ ಇದು ಪ್ರಸಿದ್ಧಿ. ಗಿಜಿಗುಡುವ ನಗರದ ಹೃದಯಭಾಗದಲ್ಲಿದೆ. ಈ ಅರಣ್ಯದಲ್ಲಿ ಹಕ್ಕಿಗಳ ನಿನಾದ, ಪ್ರಶಾಂತ ಕಾಡು ನಿಜಕ್ಕೂ ಎಂಥವರಿಗೂ ಇಷ್ಟವಾಗುತ್ತದೆ. ಹೈದರಾಬಾದ್ ವಿಶ್ವವಿದ್ಯಾನಿಲಯದ (Hyderabad University) ಪಕ್ಕದಲ್ಲೇ ಇರುವ ಕಾಂಚಾ ಗಚ್ಚಿಬೌಲಿ ಅರಣ್ಯವು ಶ್ರೀಮಂತ ಜೀವವೈವಿಧ್ಯತೆ, ಶತಮಾನಗಳ ಹಳೆಯ ಮರಗಳು ಮತ್ತು ಸ್ತಬ್ಧ ಹಾದಿಗಳಿಗೆ ಹೆಸರುವಾಸಿಯಾದ ಪ್ರಶಾಂತ ಹಸಿರು ವಿಸ್ತಾರವನ್ನು ಹೊಂದಿದೆ. ದಶಕಗಳಿಂದ ಈ ಅರಣ್ಯವು ವನ್ಯಜೀವಿಗಳಿಗೆ ಅಭಯಾರಣ್ಯ ಮಾತ್ರವಲ್ಲದೆ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಬದುಕಿನ ಪಾಠದ ತಾಣ. ಹೈದರಾಬಾದ್‌ ವಿವಿ ಕ್ಯಾಂಪಸ್‌ನ ಪಕ್ಕದ ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ಅರಣ್ಯ ಪ್ರದೇಶವು ರೋಮಾಂಚಕ ಪರಿಸರ ವ್ಯವಸ್ಥೆಯಾಗಿದೆ. ಕಾಂಕ್ರಿಟ್‌ ಕಾಡಾಗಿ ಬೆಳೆಯುತ್ತಿರುವ ಹೈದರಾಬಾದ್‌ನ ಮಧ್ಯೆ ಸಿಲುಕಿ ಕಾಂಚಾ ಗಚ್ಚಿಬೌಲಿ ಅರಣ್ಯ ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ. ಶತಮಾನದ ಹಳೆಯ ಮರಗಳು, ನೈಸರ್ಗಿಕ ಹುಲ್ಲುಗಾವಲು ಅಸ್ತವ್ಯಸ್ತವಾಗಿದೆ.

    ಜೀವವೈವಿಧ್ಯತೆಯ ಸಮೃದ್ಧಿ
    700 ಕ್ಕೂ ಹೆಚ್ಚು ಜಾತಿಯ ಹೂಬಿಡುವ ಸಸ್ಯಗಳು ಇಲ್ಲಿವೆ. ಸೂಕ್ಷ್ಮ ಆರ್ಕಿಡ್‌ಗಳಿಂದ ಹಿಡಿದು ನಳನಳಿಸುವ ಬಗೆಬಗೆಯ ಹೂವುಗಳ ವರೆಗೆ ಪ್ರತಿ ಋತುವಿನಲ್ಲಿ ಕಾಡು ಬಣ್ಣದೊಂದಿಗೆ ಜೀವಂತವಾಗಿದೆ. ನೀಲಕಂಠ, ತೆಲಂಗಾಣದ ನೀಲಿ ರಾಜ್ಯ ಪಕ್ಷಿ ಮತ್ತು ಇಂಪಾಗಿ ಕೂಗುವ ಓರಿಯಂಟಲ್ ಸ್ಕೈಲಾರ್ಕ್ ಸೇರಿದಂತೆ ಸುಮಾರು 220 ಪ್ರಭೇದದ ಪಕ್ಷಿಗಳಿವೆ. ವಲಸೆ ಪಕ್ಷಿಗಳು ಇಲ್ಲಿ ಬಂದು ನೆಲಸುತ್ತವೆ. ಜಿಂಕೆಗಳು, ಕಾಡುಹಂದಿಗಳು ಅಥವಾ ಮುಳ್ಳುಹಂದಿಗಳಿಗೂ ಈ ಕಾಡು ಆವಾಸ ಸ್ಥಾನವಾಗಿದೆ. ವಿವಿಧ ಪ್ರಭೇದದ ಹಲ್ಲಿಗಳು, ಹಾವುಗಳು ಮತ್ತು ಉಭಯಚರಗಳಿಗೂ ಕಾಡು ನೆಲೆಯಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ, ಹೈದರಾಬಾದ್‌ ಟ್ರೀ ಟ್ರಂಕ್‌ ಸ್ಪೈಡರ್‌ಗೆ (ಜೇಡ) ಈ ಕಾಡು ಆವಾಸ ಸ್ಥಾನ.

    ಹೈದರಾಬಾದ್‌ ‘ರಕ್ಷಾ ಕವಚ’
    ಹಲವು ವಿಶೇಷತೆ ಹೊಂದಿರುವ ಈ ಕಾಡು ಹೈದರಾಬಾದ್‌ ನಗರವನ್ನೂ ರಕ್ಷಣೆ ಮಾಡುತ್ತಿದೆ. ಇಲ್ಲಿನ ಪರಿಸರ ವ್ಯವಸ್ಥೆ ನಗರ ಪ್ರದೇಶದ ಜನತೆಗೆ ಅನುಕೂಲಕರವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ತಾಪಮಾನ ಉಂಟಾಗುವುದನ್ನು ತಡೆಗಟ್ಟುತ್ತಿದೆ. ಒಂದು ವೇಳೆ ಈ ಅರಣ್ಯ ಪ್ರದೇಶವನ್ನು ಕಳೆದುಕೊಂಡರೆ, 1.4 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಏರಿಕೆಯಾಗಬಹುದು ಎಂದು ಪರಿಸರ ತಜ್ಞರು ಅಂದಾಜಿಸಿದ್ದಾರೆ. ಹಸಿರು ಹೊದಿಕೆಯು ಗಾಳಿಯ ಗುಣಮಟ್ಟವನ್ನು ಸುಧಾರಿಸಲು, ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

    ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಾಂಚಾ ಗಚ್ಚಿಬೌಲಿಯನ್ನು ತೆರೆದ ಗಾಳಿಯ ತರಗತಿಯಾಗಿ ಬಳಸುತ್ತಾರೆ, ಕ್ಷೇತ್ರ ಸಂಶೋಧನೆ, ಜೀವವೈವಿಧ್ಯ ಮ್ಯಾಪಿಂಗ್ ಮತ್ತು ಪಕ್ಷಿ ವೀಕ್ಷಣೆ ನಡಿಗೆಗಳನ್ನು ನಡೆಸುತ್ತಾರೆ. ಸ್ಥಳೀಯ ಮರಗಳು ಮತ್ತು ಕೀಟಗಳ ಬಗ್ಗೆ ಕಲಿಯಲು ಈ ಪ್ರದೇಶದ ಶಾಲೆಗಳು ಮಕ್ಕಳನ್ನು ಹುದುಗಿಸುತ್ತವೆ. ಸ್ಥಳೀಯ ನಿವಾಸಿಗಳು ಸ್ತಬ್ಧ ಬೆಳಿಗ್ಗೆ ನಡಿಗೆ, ಪ್ರಕೃತಿ ography ಛಾಯಾಗ್ರಹಣ ಮತ್ತು ಸಮುದಾಯ ಸ್ವಚ್ -ಗೊಳಿಸುವ ಡ್ರೈವ್‌ಗಳಿಗಾಗಿ ಭೇಟಿ ನೀಡುತ್ತಾರೆ, ಅದು ಜಾಗವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ.

    ವಿವಾದ ಏನು?
    ಸುಮಾರು 400 ಎಕರೆ ಕಾಂಚಾ ಗಚಿಬೌಲಿ ಪ್ರದೇಶದ ಅರಣ್ಯದಲ್ಲಿ ಬಹು-ಮೂಲಸೌಕರ್ಯ ಮತ್ತು ಐಟಿ-ಪಾರ್ಕ್‌ಗಳ ಅಭಿವೃದ್ಧಿಗಾಗಿ ಹರಾಜು ಹಾಕಲು ತೆಲಂಗಾಣ ಸರ್ಕಾರ ಯೋಜಿಸಿದೆ. ಅದಕ್ಕಾಗಿ ಅರಣ್ಯ ಭೂಮಿ ತೆರವು ಮಾಡಲು ಮುಂದಾಗಿದೆ. ಇದಕ್ಕೆ ಹೈದರಾಬಾದ್‌ ವಿವಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಡುಗಳು ಮತ್ತು ಜೀವವೈವಿಧ್ಯತೆಯು ನೀರಾವರಿ, ರಸ್ತೆ ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಂದಾಗಿ ಕುಗ್ಗುತ್ತಿದೆ. ಇದನ್ನು 2014 ರಲ್ಲಿ ರಾಜ್ಯ ರಚನೆಯ ನಂತರ ಈ ಕಾರ್ಯಗಳು ನಡೆಯುತ್ತಿವೆ. ತೆಲಂಗಾಣವು ಶ್ರೀಮಂತ ಜೀವವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಇದನ್ನು ಒಂಬತ್ತು ಕೃಷಿ-ಹವಾಮಾನ ಪ್ರದೇಶಗಳಲ್ಲಿ ವಿತರಿಸಲಾಯಿತು. ರಾಜ್ಯವು ಗೋದಾವರಿ ಜಲಾನಯನ ಪ್ರದೇಶದೊಳಗೆ ದಟ್ಟವಾದ ತೇಗದ ಕಾಡುಗಳನ್ನು ಹೊಂದಿತ್ತು. ಕಾಡುಗಳನ್ನು ರಕ್ಷಿಸಲು ಮತ್ತು ಕಾಡುಗಳನ್ನು ಪುನರುತ್ಥಾನಗೊಳಿಸುವ ಇಚ್ಛಾಶಕ್ತಿಯ ಕೊರತೆಯಿಂದಾಗಿ, ತೆಲಂಗಾಣವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ ಧಾರಾಕಾರ ಮಳೆಯ ಹೊಡೆದ, ಮತ್ತೊಂದು ಕಡೆ ನೀರಿನ ಕೊರತೆಯನ್ನೂ ಎದುರಿಸುತ್ತಿದೆ.

    ಕಾಂಚ ಗಚ್ಚಿಬೌಲಿ ಭೂಮಿ ಹರಾಜಿಗೆ ಮುಂದಾದ ಸರ್ಕಾರ
    ತೆಲಂಗಾಣ ಸರ್ಕಾರದಿಂದ ಹರಾಜಿಗೆ ಗುರುತಿಸಲ್ಪಟ್ಟ ಕಾಂಚ ಗಚ್ಚಿಬೌಲಿ ಭೂಮಿಯು ವಿವಿಧ ಕಾನೂನುಬದ್ಧ ಮಾಲೀಕರು ಮತ್ತು ಹಕ್ಕುದಾರರನ್ನು ಹೊಂದಿದೆ. ಆದಾಗ್ಯೂ, ಈ ಭೂಮಿಯು ಹಲವು ವರ್ಷಗಳ ಹೋರಾಟದ ಫಲವಾಗಿ ರಕ್ಷಿಸಲ್ಪಟ್ಟಿದೆ. ಜೀವವೈವಿಧ್ಯತೆ ಮತ್ತು ಹಸಿರು ಇಲ್ಲಿ ಸಮೃದ್ಧವಾಗಿದೆ. ಸರ್ವೆ ಸಂಖ್ಯೆ 25 ರೊಳಗೆ ರೇಖೆಗಳು, ಕಣಿವೆಗಳು ಮತ್ತು ಜಲಮೂಲಗಳನ್ನು ರಕ್ಷಿಸಿದ್ದರೆ, ಇದು ಪ್ರಮುಖ ಅರಣ್ಯವೂ ಆಗಬಹುದಿತ್ತು. ಇದು ಮುಸಿ ನದಿ ಜಲಾನಯನ ಪ್ರದೇಶದ ಭಾಗವಾಗಿದೆ. ನದಿ ಜಲಾನಯನ ಪ್ರದೇಶದ ಹರಿವಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ. ಸರ್ವೆ ಸಂಖ್ಯೆ 25 ರ 2,700 ಎಕರೆ ವಿಸ್ತೀರ್ಣದ ಈ ಭೂಮಿಯಲ್ಲಿ ಹರಾಜಿಗೆ ಗುರುತಿಸಲಾದ 400 ಎಕರೆ ಪ್ರದೇಶವೂ ಸೇರಿದೆ. ಇದು ಅಂತರ್ಜಲ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹರಾಜಾಗಲಿರುವ ಭೂಮಿಯ ಶೇ.14 ಭಾಗವು ಕಾಂಕ್ರಿಟ್ ಆಗಿ ಪರಿವರ್ತನೆಗೊಂಡರೆ, ಅಂತರ್ಜಲ ಮರುಪೂರಣ ಕಷ್ಟವಾಗುತ್ತದೆ. ಪರಿಣಾಮವಾಗಿ ಪ್ರವಾಹದ ಸಾಧ್ಯತೆಗಳು ಹೆಚ್ಚಾಗುತ್ತವೆ. ಜಲಮೂಲಗಳು, ಅಲೆಗಳ ಮಾದರಿಯ ಭೂಪ್ರದೇಶ ಮತ್ತು ನೈಸರ್ಗಿಕ ನೀರಿನ ಹರಿವಿನೊಂದಿಗೆ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಅನುಕೂಲಕರ ಸೂಕ್ಷ್ಮ ಹವಾಮಾನವನ್ನು ಖಚಿತಪಡಿಸುತ್ತದೆ. ಒಂದು ವೇಳೆ, ಹಸಿರು ಹೊದಿಕೆ ಮತ್ತು ಜೀವವೈವಿಧ್ಯವನ್ನು ಬುಲ್ಡೋಜರ್ ಮಾಡಿದರೆ ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.

    ಅರಣ್ಯ ರಕ್ಷಣೆಗೆ 25 ವರ್ಷಗಳಿಂದ ಹೋರಾಟ
    ಸುಮಾರು ಮೂರು ದಶಕಗಳ ಹಿಂದಿನಿಂದಲೂ ಹೈದರಾಬಾದ್ ವಿಶ್ವವಿದ್ಯಾಲಯದ (UoH) ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಪರಭಾರೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಮಿ ಸುಮಾರು 25 ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟದ ಕೇಂದ್ರವಾಗಿದೆ. ಆದರೂ, ಈ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಪರ್ಯಾಯವಾಗಿ ಇದಕ್ಕೆ ಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿವೆ.

    400 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಈ ಭೂಮಿಯನ್ನು ಡೀಮ್ಡ್ ಅರಣ್ಯವೆಂದು ಪರಿಗಣಿಸಬಹುದು. ಟಿಎನ್ ಗೋದವರ್ಮನ್ ತಿರುಮುಲ್ಪಾಡ್ vs ಯೂನಿಯನ್ ಆಫ್ ಇಂಡಿಯಾ (1996) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅರಣ್ಯದಲ್ಲಿರುವ ಎಲ್ಲಾ ಕಂದಾಯ ಅಥವಾ ಖಾಸಗಿ ಭೂಮಿಯನ್ನು ‘ಡೀಮ್ಡ್ ಅರಣ್ಯಗಳು’ ಎಂದು ಪರಿಗಣಿಸಲಾಗುತ್ತದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ, 1980 ರಲ್ಲಿ ವ್ಯಾಖ್ಯಾನಿಸಲಾದ ಅರಣ್ಯಗಳಂತೆಯೇ ಪರಿಗಣಿಸಲಾಗುತ್ತದೆ. 2025 ರ ಮಾರ್ಚ್ 15 ರಂದು ತೆಲಂಗಾಣ ಸರ್ಕಾರವು ಅರಣ್ಯ ಭೂಮಿಯನ್ನು ಗುರುತಿಸಲು ಮತ್ತು ಏಕೀಕೃತ ಭೂ ದಾಖಲೆಯನ್ನು ತಯಾರಿಸಲು ಸಮಿತಿಯನ್ನು ರಚಿಸುವ ಆದೇಶವನ್ನು ಹೊರಡಿಸಿತು. ಸರಿಯಾದ ಭೂ ಸಮೀಕ್ಷೆಯ ನಂತರ ಈ ಸಮಿತಿಯು, ‘ಸರ್ವೆ ಸಂಖ್ಯೆ 25 ರಲ್ಲಿರುವ ಕಾಂಚ ಗಚ್ಚಿಬೌಲಿ ಭೂಮಿಯನ್ನು ಅರಣ್ಯವೆಂದು ಘೋಷಿಸಬೇಕು. ಈ ಅರಣ್ಯವು ರಾಜ್ಯದ ಜಿಡಿಪಿಗೆ ಅಸಂಖ್ಯಾತ ರೀತಿಯಲ್ಲಿ ಕೊಡುಗೆ ನೀಡಬಹುದು’ ಎಂದು ಮನವರಿಕೆ ಮಾಡಿತು.

    ವಿವಾದಕ್ಕೆ ‘ಸುಪ್ರೀಂ’ ಎಂಟ್ರಿ
    ಐಟಿ ಪಾರ್ಕ್‌ ಸ್ಥಾಪನೆಗೆ ಅರಣ್ಯ ನಾಶ ವಿರೋಧಿಸಿ ಈಚೆಗೆ ಹೈದರಾಬಾದ್‌ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರಕರಣದ ವಿವಾದಕ್ಕೆ ಎಂಟ್ರಿ ಕೊಟ್ಟ ಸುಪ್ರೀಂ ಕೋರ್ಟ್‌, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದ ಬಳಿಯ ತೆಲಂಗಾಣದ ಕಾಂಚ ಗಚ್ಚಿಬೌಲಿ ಅರಣ್ಯ ಪ್ರದೇಶದಲ್ಲಿ ಮರ ಕಡಿಯುವುದನ್ನು ತಡೆಹಿಡಿದು ಮಧ್ಯಂತರ ಆದೇಶ ಹೊರಡಿಸಿದೆ.

  • ಮೊದಲ ಬಾರಿಗೆ ವಿವಿ ಚುನಾವಣೆಯಲ್ಲಿ ಎಬಿವಿಪಿಯಿಂದ ಮುಸ್ಲಿಂ ವಿದ್ಯಾರ್ಥಿನಿ ಕಣಕ್ಕೆ

    ಮೊದಲ ಬಾರಿಗೆ ವಿವಿ ಚುನಾವಣೆಯಲ್ಲಿ ಎಬಿವಿಪಿಯಿಂದ ಮುಸ್ಲಿಂ ವಿದ್ಯಾರ್ಥಿನಿ ಕಣಕ್ಕೆ

    ಹೈದರಾಬಾದ್‌: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಇದೇ ಮೊದಲ ಬಾರಿಗೆ ಹೈದರಾಬಾದ್‌ ವಿಶ್ವವಿದ್ಯಾಲಯದ (Hyderabad University) ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು(Muslim Student) ಕಣಕ್ಕೆ ಇಳಿಸಿದೆ.

    ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಶೇಖ್‌ ಆಯೇಷಾ (Shaik Aayesha) ಅವರು ಕಣಕ್ಕೆ ಇಳಿದಿದ್ದಾರೆ. ಇವರು ಎಸ್‌ಎಫ್‌ಐ-ಎಸ್‌ಎಸ್‌-ಟಿಎಸ್‌ಎ ಮೈತ್ರಿಯ ಭಾಗವಾಗಿ ಅಧ್ಯಕ್ಷ ಸ್ಥಾನಕ್ಕೆ ನಿಂತಿರುವ ಮೊಹಮಮ್ಮದ್‌ ಅತಿಕ್‌ ವಿರುದ್ಧ ಸ್ಪರ್ಧಿಸಲಿದ್ದಾರೆ.

    ವಿಶಾಖಪಟ್ಟಣ ಮೂಲದ 24 ವರ್ಷದ ಶೇಖ್‌ ಅಯೇಷಾ 2019ರಿಂದ ಎಬಿವಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಹೈದರಾಬಾದ್‌ ವಿವಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ. ನವೆಂಬರ್‌ 9 ರಂದು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಲಿದೆ.  ಇದನ್ನೂ ಓದಿ: ಚುನಾವಣೆ ದಿನವೇ ಮಾವೋವಾದಿಗಳಿಂದ ಸ್ಫೋಟ – ಕರ್ತವ್ಯದಲ್ಲಿದ್ದ ಯೋಧನಿಗೆ ಗಾಯ

    ಮಾಧ್ಯಮದ ಜೊತೆ ಮಾತನಾಡಿದ ಶೇಖ್‌ ಅಯೇಷಾ, ರಾಷ್ಟ್ರೀಯತೆಯನ್ನು ಬೆಂಬಲಿಸುವ ಎಲ್ಲಾ ಅಲ್ಪಸಂಖ್ಯಾತರನ್ನು ಎಬಿಬಿಪಿ ಬೆಂಬಲಿಸುತ್ತದೆ. ನಾನು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಓದುತ್ತಿದ್ದಾಗ ಎಬಿವಿಪಿಯ ಭಾಗವಾಗಿ ರಾಜ್ಯ ಕಾರ್ಯಕಾರಿ ಸದಸ್ಯೆಯಾಗಿ ಕೆಲಸ ಮಾಡಿದ್ದೇನೆ. ಮುಸ್ಲಿಂ ಮಹಿಳೆಯರು ನಾಯಕತ್ವ ಬೆಳೆಸಿಕೊಳ್ಳಲು ಎಬಿವಿಪಿ ಪ್ರೋತ್ಸಾಹ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     

    ಕಳೆದ ಬಾರಿ ಅಂಬೇಡ್ಕರ್‌ ವಿದ್ಯಾರ್ಥಿ ಸಂಘಟನೆಯ (ASA) ಪ್ರಜ್ವಲ್‌ ಗಾಯಕ್‌ವಾಡ್‌ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಇವರಿಗೆ ಸಿಪಿಎಂನ ಸ್ಟುಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (SFI) ಮತ್ತು ಟ್ರೈಬಲ್‌ ಸ್ಟುಡೆಂಟ್‌ ಫೆಡರೇಷನ್‌(TSF) ಬೆಂಬಲ ನೀಡಿತ್ತು.

  • BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ( BBC Documentary) ಈಗಾಗಲೇ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಾರೀ ಸಂಘರ್ಷವನ್ನುಂಟುಮಾಡಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ (Hyderabad University) ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸಿನಿಮಾ ಮಾದರಿಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.

    ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) `ಪಿಎಂ ಮೋದಿ’ ಅವರ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿತ್ತು. ಇದಕ್ಕೆ ತಿರುಗೇಟು ನೀಡುವಂತೆ ಆರ್‌ಎಸ್‌ಎಸ್ (RSS) ಸಂಯೋಜಿತ ಎಬಿವಿಪಿ (ABVP) ಸಂಘಟನೆಯು ಅದೇ ಕ್ಯಾಂಪಸ್‌ನಲ್ಲಿ `ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ಪ್ರದರ್ಶನ ಏರ್ಪಡಿಸಿತ್ತು.

    ಗಣರಾಜ್ಯೋತ್ಸವ ದಿನದಂದೇ ವಿವಿಯಲ್ಲಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್ ಮಾಡಲಾಗಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ ಎಂದು ಎಸ್‌ಎಫ್‌ಐ ಹೇಳಿಕೊಂಡಿದೆ.

    ಪೂರ್ವಾನುಮತಿಯಿಲ್ಲದೇ ಕ್ಯಾಂಪಸ್‌ನಲ್ಲಿ ಚಿತ್ರಪ್ರದರ್ಶಿಸಿದ ಬಗ್ಗೆ ವರದಿ ನೀಡುವಂತೆ ವಿವಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಈ ಬೆನ್ನಲ್ಲೇ ಎಬಿವಿಪಿ, ಎಸ್‌ಎಫ್‌ಐ ವಿರುದ್ಧ ದೂರು ಸಲ್ಲಿಸಿದೆ. ಆದರೆ ಎಸ್‌ಎಫ್‌ಐ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.

    ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಅದೇ ದಿನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ `ದಿ ಕಾಶ್ಮೀರ ಫೈಲ್ಸ್’ ಚಿತ್ರ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಎರಡೂ ಸಿನಿಮಾಗಳ ಸ್ಕ್ರೀನಿಂಗ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಕ್ಯಾಂಪಸ್ ಶಾಂತಿಯುತವಾಗಿತ್ತು ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟಾರ್‌ ಹೇಳಿದ್ದಾರೆ. ಆದರೆ ಎಬಿವಿಪಿ ಕಾರ್ಯಕರ್ತರು ಕ್ಯಾಂಪಸ್ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

    ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ `ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಪ್ರದರ್ಶನ ನಿಲ್ಲಿಸಲು ಪ್ರಯತ್ನಿಸಿತು. ಎಬಿವಿಪಿ ಕಾರ್ಯಕರ್ತರು ಮುಖ್ಯದ್ವಾರದಿಂದ ಪ್ರೊಜೆಕ್ಟರ್ ತರುತ್ತಿದ್ದಾಗ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಸಹ ನಡೆಸಿದರು ಎಂದು ಎಬಿವಿಪಿ ಜಾಲತಾಣದಲ್ಲಿ ಹಂಚಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಬಿಬಿಸಿ (BBC) ರಚಿಸಿರುವ ಸಾಕ್ಷ್ಯಚಿತ್ರ (Documentary) ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದ್ದರೂ ಹೈದರಾಬಾದ್ ವಿಶ್ವವಿದ್ಯಾಲಯದ (Hyderabad University) ಕ್ಯಾಂಪಸ್‌ನಲ್ಲಿ ಪ್ರದರ್ಶನ ಮಾಡಿರುವುದಾಗಿ ದೂರು ದಾಖಲಾಗಿದೆ.

    ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ (India: The Modi Question) ಹೆಸರಿನ ಸಾಕ್ಷ್ಯಚಿತ್ರ 2002ರ ಗಲಭೆಯ ಸಂದರ್ಭದ ಗುಜರಾತ್ ನಾಯಕತ್ವದ ಬಗ್ಗೆ ತಪ್ಪು ವರದಿ ಮಾಡಿರುವುದಾಗಿ ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆ ಕಳೆದ ಶನಿವಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಯೂಟ್ಯೂಬ್‌ನಲ್ಲಿ ಬಿಬಿಸಿ ರಚಿಸಿರುವ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದೆ.

    ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸೋಮವಾರ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಭದ್ರತಾ ಇಲಾಖೆಯಿಂದ ವರದಿಯನ್ನು ನಿರೀಕ್ಷಿಸಲಾಗಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನದ ಬಗ್ಗೆ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಬಂಧವನ್ನು ಹೇರುವುದಕ್ಕೂ ಮೊದಲೇ ಸ್ಕ್ರೀನಿಂಗ್ ಅನ್ನು ಆಯೋಜನೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆದೇಶದ 1 ದಿನದ ನಂತರ ಎಂದರೆ ಭಾನುವಾರ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k