Tag: Hyderabad Cricket Association

  • WorldCup 2023: ಬಿಸಿಸಿಐಗೆ ಹೊಸ ತಲೆನೋವು – ವೇಳಾಪಟ್ಟಿ ಬದಲಾವಣೆಗೆ ಹೈದರಾಬಾದ್‌ ಅಧಿಕಾರಿಗಳಿಂದ ಮನವಿ

    WorldCup 2023: ಬಿಸಿಸಿಐಗೆ ಹೊಸ ತಲೆನೋವು – ವೇಳಾಪಟ್ಟಿ ಬದಲಾವಣೆಗೆ ಹೈದರಾಬಾದ್‌ ಅಧಿಕಾರಿಗಳಿಂದ ಮನವಿ

    ಹೈದರಾಬಾದ್‌: ಅಕ್ಟೋಬರ್‌ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್‌ (ODI World Cup) ಟೂರ್ನಿಗೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿಯಿದೆ. ಇದೇ ಮೊದಲ ಬಾರಿಗೆ ಭಾರತದ ಸಂಪೂರ್ಣ ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ ನಡೆಯುತ್ತಿದ್ದು ಯಾವುದೇ ಅಡೆತಡೆಗಳು ಉಂಟಾಗದಂತೆ ಬಿಸಿಸಿಐ (BCCI) ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದ್ರೆ ಭದ್ರತೆಯ ಕೊರತೆಯಿಂದಾಗಿ ವೇಳಾಪಟ್ಟಿ ಬದಲಾವಣೆಗೆ ಒತ್ತಾಯಗಳು ಕೇಳಿಬರುತ್ತಲೇ ಇವೆ.

    ಎರಡು ವಾರಗಳ ಹಿಂದೆಯಷ್ಟೇ ಬಿಸಿಸಿಐ ಅ.15 ರಂದು ಅಹಮದಾಬಾದ್‌ನಲ್ಲಿ ನವರಾತ್ರಿ ಉತ್ಸವ ಆರಂಭದ ದಿನವಾದ್ದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅ.14ಕ್ಕೆ ಬದಲಾವಣೆ ಮಾಡಿದೆ. ಹಾಗೆಯೇ ನವೆಂಬರ್ 12 ರಂದು ಕಾಳಿ ಪೂಜೆ ಹಬ್ಬ ಇರುವುದರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನ ನವೆಂಬರ್ 11 ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ (Hyderabad Cricket Association) ಬಿಸಿಸಿಐಗೆ ಹೊಸ ತಲೆನೋವು ತಂದಿದೆ. ಹೈದರಾಬಾದ್‌ನ ಅಧಿಕಾರಿಗಳು ಪಂದ್ಯಗಳ ದಿನಾಂಕ ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕ್‌ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು

    ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್‌ ನಡುವೆ ಪಂದ್ಯ ನಡೆಯಲಿದ್ದು, ಮರುದಿನ ಅದೇ ಸ್ಥಳದಲ್ಲಿ ಶ್ರೀಲಂಕಾ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಈ ಸಂಬಂಧ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಮನವಿ ಮಾಡಿದ್ದು, ಸತತ ದಿನಗಳಲ್ಲಿ ವಿಶ್ವಕಪ್ ಪಂದ್ಯಗಳನ್ನ ಆಯೋಜಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: AsiaCup 2023: ಪಾಕಿಸ್ತಾನಕ್ಕೆ ಬರುವಂತೆ ಜಯ್‌ಶಾಗೆ ಆಹ್ವಾನ ಕೊಟ್ಟ PCB

    ಹೈದರಾಬಾದ್ ಪೊಲೀಸರು ಸತತ ಎರಡು ದಿನಗಳು ನಡೆಯಲ್ಲಿರುವ ಎರಡು ಪಂದ್ಯಗಳಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಪಂದ್ಯದ ದಿನಾಂಕವನ್ನು ಬದಲಿಸಬೇಕು ಎಂದು ಕೋರಿದ್ದಾರೆ. ಇದೀಗ ಹೈದರಾಬಾದ್‌ ಕ್ರಿಕೆಟ್ ಅಸೋಸಿಯೇಷನ್ ಮನವಿ ಮೇರೆಗೆ ಮತ್ತೊಮ್ಮೆ ವೇಳಾಪಟ್ಟಿ ಬದಲಾವಣೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಎರಡು ಪಂದ್ಯಗಳ ಹೊರತಾಗಿ, ಈ ಮೈದಾನದಲ್ಲಿ ಅಕ್ಟೋಬರ್ 6 ರಂದು ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಕೂಡ ನಡೆಯಲಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾದ ಯಾವುದೇ ಪಂದ್ಯ ನಿಗದಿಪಡಿಸಲಾಗಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಚ್‍ಸಿಎ ವಿರುದ್ಧ ಭ್ರಷ್ಟಾಚಾರ ಆರೋಪ- ಮತ್ತೆ ಕ್ರಿಕೆಟ್‍ನಿಂದ ಹೊರಗುಳಿದ ರಾಯುಡು

    ಎಚ್‍ಸಿಎ ವಿರುದ್ಧ ಭ್ರಷ್ಟಾಚಾರ ಆರೋಪ- ಮತ್ತೆ ಕ್ರಿಕೆಟ್‍ನಿಂದ ಹೊರಗುಳಿದ ರಾಯುಡು

    ಹೈದರಾಬಾದ್: ನಿವೃತ್ತಿ ನಿರ್ಧಾರ ಬದಲಿಸಿದ್ದ ಟೀಂ ಇಂಡಿಯಾ ಕ್ರಿಕೆಟರ್ ಅಂಬಟಿ ರಾಯುಡು, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ (ಎಚ್‍ಸಿಎ) ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಕ್ರಿಕೆಟ್‍ನಿಂದ ಹೊರಗುಳಿದಿದ್ದಾರೆ.

    ಎಚ್‍ಸಿಎನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅಂಬಟಿ ರಾಯುಡು ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ರಾಯುಡು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಟ್ವೀಟ್ ಮಾಡಿರುವ ರಾಯುಡು, ಕೈಗಾರಿಕೆ ಮತ್ತು ನಗರಾ ಆಡಳಿತ ಸಚಿವ ಕೆ.ಟಿ.ರಾಮರಾವ್ ಅವರಿಗೆ ಟ್ಯಾಗ್ ಮಾಡಿ, ಹಲೋ ಸರ್, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‍ನಲ್ಲಿ (ಎಚ್‍ಸಿಎ) ಹರಡಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಿ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ನಾನು ನಿಮ್ಮನ್ನು ಕೋರುತ್ತೇನೆ. ಹೈದರಾಬಾದ್ ತಂಡದಲ್ಲಿ ನಡೆಯುತ್ತಿರುವ ಭ್ರಷ್ಟ ತಡೆದರೆ ಉತ್ತಮ ತಂಡವಾಗಿ ಹೊರ ಹೊಮ್ಮುತ್ತದೆ ಎಂದು ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‍ನ ಆಯ್ಕೆ ಸಮಿತಿಯ ಅಧ್ಯಕ್ಷ ಆರ್.ಎ.ಸ್ವರೂಪ್ ಅವರಿಗೆ ಪತ್ರ ಅಂಬಟಿ ರಾಯುಡು ಬರೆದಿದ್ದು, ಮುಂಬರುವ ರಣಜಿ ಟ್ರೋಫಿಗೆ ನಾನು ಆಡುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

    ಭಾರತದ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಅದೇ ವರ್ಷ ಹೈದರಾಬಾದ್ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂದಿನಿಂದ, ರಾಯುಡು ಎಚ್‍ಸಿಎ ರಾಜಕೀಯ ಮತ್ತು ಭ್ರಷ್ಟಾಚಾರದ ವಿಷಯವನ್ನು ಪದೇ ಪದೇ ಎತ್ತುತ್ತಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡಕ್ಕೆ ರಾಯುಡು ಅವರನ್ನು ಅವರನ್ನು ಕೈಬಿಟ್ಟು ವಿಜಯ್ ಶಂಕರ್ ಅವರಿಗೆ ಮಣೆ ಹಾಕಲಾಗಿತ್ತು. ಈ ವಿಚಾರವಾಗಿ ರಾಯುಡು, ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

    ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ರಾಯುಡು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಆಗಸ್ಟ್ ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಒಂದು ತಿಂಗಳ ನಂತರ ತಮ್ಮ ನಿರ್ಧಾರವನ್ನು ಹಿಂಪಡೆದು, ಎಚ್‍ಸಿಎ ಪರ ಮತ್ತೆ ಮೈದಾನಕ್ಕೆ ಇಳಿಯಲು ಸಿದ್ಧ ಎಂದು ಹೇಳಿದ್ದರು.

    ನಿವೃತ್ತಿ ನಿರ್ಧಾರದಿಂದ ಹಿಂದಿರುಗಿದ ರಾಯುಡು, ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಇನ್ನಿಂಗ್ಸ್ ಗಳಲ್ಲಿ 233 ರನ್ ಗಳಿಸಿದ್ದಾರೆ. ಹೈದರಾಬಾದ್ ಪರ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಯದು ಎರಡನೇ ಸ್ಥಾನದಲ್ಲಿದ್ದಾರೆ. ರಾಯುಡು ಭಾರತದ ಪರ 55 ಏಕದಿನ ಪಂದ್ಯಗಳನ್ನು ಆಡಿದ್ದು, 1,694 ರನ್ ಗಳಿಸಿದ್ದಾರೆ.

  • ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದ ರಾಯುಡು- ಎಚ್‍ಡಿಎಗೆ ಪತ್ರ

    ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದ ರಾಯುಡು- ಎಚ್‍ಡಿಎಗೆ ಪತ್ರ

    ಹೈದರಾಬಾದ್: 2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡಲು ಅವಕಾಶ ನೀಡಲಿಲ್ಲವೆಂದು ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಈಗ ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದಿದ್ದಾರೆ.

    ಹೈದರಾಬಾದ್ ಕ್ರಿಕೆಟ್ ಮಂಡಳಿ (ಎಚ್‍ಡಿಎ)ಗೆ ಪತ್ರ ಬರೆದಿರುವ ಆಂಧ್ರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ಜೂನ್ ತಿಂಗಳಲ್ಲಿ ತುಂಬಾ ಭಾವನಾತ್ಮಕವಾಗಿ ನಿವೃತ್ತಿ ಘೋಷಿಸಿದ್ದೆ. ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತೇನೆ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ ಆಡಲು ನಾನು ಸಿದ್ಧರುವೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ನನ್ನ ಕ್ರಿಕೆಟ್ ವೃತ್ತಿ ಜೀವನದ ಕಠಿಣ ಸಂದರ್ಭಗಳಲ್ಲಿ ಜೊತೆಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಹಾಗೂ ನೊಯಿಲ್ ಡೇವಿಡ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರು ನನ್ನ ದುಡಿಕಿನ ನಿರ್ಧಾರವನ್ನು ತಿಳಿಸಿಕೊಟ್ಟಿದ್ದಾರೆ. ಮುಂಬರುವ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿದ್ದೇನೆ. ಸೆಪ್ಟೆಂಬರ್ 10ರಿಂದ ಹೈದರಾಬಾದ್ ತಂಡಕ್ಕೆ ಲಭ್ಯನಾಗಲಿದ್ದೇನೆ ಎಂದು ರಾಯುಡು ಹೇಳಿದ್ದಾರೆ.

    ಈ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‍ಡಿಎ ಮುಖ್ಯ ಆಯ್ಕೆದಾರ ನಿಯೋಲ್ ಡೇವಿಸ್ ಅವರು, ರಾಯುಡು ಇನ್ನೂ 5 ವರ್ಷ ಕ್ರಿಕೆಟ್ ಆಡುವ ಕ್ಷಮತೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

    ಅಂಬಟಿ ರಾಯುಡು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಟೀಂ ಇಂಡಿಯಾ 15ರ ಬಳಗದಲ್ಲಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಅವರಿಗೆ ಬಿಸಿಸಿಐ ಮಣೆ ಹಾಕಲಿಲ್ಲ.

    4ನೇ ಸ್ಥಾನಕ್ಕೆ ತ್ರಿ ಡೈಮೆನ್ಶನ್ ಪ್ಲೇಯರ್ ಅಗತ್ಯವಿತ್ತು. ಹೀಗಾಗಿ ಅಂಬಟಿ ರಾಯುಡು ಬದಲು ವಿಜಯ್ ಶಂಕರ್ ಗೆ ಸ್ಥಾನ ನೀಡಲಾಗಿತ್ತು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪ್ರಸಾದ್ ಅವರ ಹೇಳಿಕೆ ರಾಯುಡು ಅವರನ್ನು ಕೆರಳಿಸಿತ್ತು. ಹೀಗಾಗಿ ರಾಯುಡು `3ಡಿ ಗ್ಲಾಸ್ (ತ್ರಿ ಡೈಮೆನ್ಶನ್) ಖರೀದಿಸಿ ವಿಶ್ವಕಪ್ ಪಂದ್ಯ ನೋಡುವುದಾಗಿ ಟ್ವೀಟ್ ಮಾಡಿದ್ದರು.

    ಅಂಬಟಿ ರಾಯುಡು ಟ್ವೀಟ್ ಸಖತ್ ಟ್ರೋಲ್ ಆಗಿತ್ತು. ಟೂರ್ನಿ ನಡುವೆ ವಿಜಯ್ ಶಂಕರ್ ಗಾಯಗೊಂಡಾಗ ರಾಯುಡು ಬದಲು ಮಯಾಂಕ್ ಅಗರ್ವಾಲ್‍ಗೆ ಅವಕಾಶ ನೀಡಲಾಯಿತು. ಈ ವೇಳೆ ಮತ್ತೆ ರಾಯುಡು 3ಡಿ ಗ್ಲಾಸ್ ವಿಚಾರ ಟ್ರೋಲ್ ಆಯಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ಪರೋಕ್ಷವಾಗಿ ರಾಯುಡು ಕಾಲೆಳೆದು, ತಮ್ಮ ತಂಡಕ್ಕೆ ಸೇರಿಕೊಳ್ಳುವಂತೆ ವಿಶೇಷ ಆಫರ್ ನೀಡಿ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು.