Tag: Hyderabad

  • Kurnool Bus Fire | ದುರಂತಕ್ಕೀಡಾದ ಖಾಸಗಿ ಬಸ್ ಮೇಲಿದೆ 23 ಸಾವಿರಕ್ಕೂ ಹೆಚ್ಚು ದಂಡ

    Kurnool Bus Fire | ದುರಂತಕ್ಕೀಡಾದ ಖಾಸಗಿ ಬಸ್ ಮೇಲಿದೆ 23 ಸಾವಿರಕ್ಕೂ ಹೆಚ್ಚು ದಂಡ

    ಹೈದರಾಬಾದ್: ಆಂಧ್ರದ ಕರ್ನೂಲಿನಲ್ಲಿ ದುರಂತಕ್ಕೀಡಾದ ಬಸ್ ಮೇಲೆ 16 ನಿಮಯ ಉಲ್ಲಂಘನೆ ಕೇಸ್‌ಗಳಿದ್ದು, ಒಟ್ಟು 23 ಸಾವಿರ ರೂ.ಗೂ ಅಧಿಕ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

    ತೆಲಂಗಾಣ ರಾಜ್ಯದಲ್ಲಿ ದುರಂತಕ್ಕೀಡಾದ ಖಾಸಗಿ ಬಸ್ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆಯಡಿ 16 ಕೇಸ್‌ಗಳು ದಾಖಲಾಗಿವೆ. ಅತಿವೇಗದಲ್ಲಿ ಚಾಲನೆ, ಒನ್ ವೇ ಎಂಟ್ರಿ ಸೇರಿದಂತೆ ಹಲವು ನಿಯಮ ಉಲ್ಲಂಘಿಸಿದ ಹಿನ್ನೆಲೆ ಬಸ್ ವಿರುದ್ಧ 16 ದಂಡದ ಚಲನ್ ಬಾಕಿಯಿದ್ದು, 3,120 ರೂ. ದಂಡ ವಿಧಿಸಲಾಗಿದೆ. ಆದರೆ ಈವರೆಗೂ ದಂಡದ ಮೊತ್ತ ಪಾವತಿಯಾಗಿಲ್ಲ.ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    ಅದಲ್ಲದೇ ಬಸ್ ವಿರುದ್ಧ ಅಪಾಯಕಾರಿಯಾಗಿ ಚಾಲನೆ ಮತ್ತು ಅನಧಿಕೃತ ಮಾರ್ಗದಲ್ಲಿ ಸಂಚಾರ ಎಂದು ಸಾರ್ವಜನಿಕ ದೂರುಗಳು ದಾಖಲಾಗಿದೆ.

    ಗುರುವಾರ (ಅ.23) ಮಧ್ಯರಾತ್ರಿ 2:45ರ ಸುಮಾರಿಗೆ ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ಎಸಿ ಬಸ್ ಆಂಧ್ರದ ಕರ್ನೂಲ್ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಬಳಿಕವೂ ಡ್ರೆöÊವರ್ ಬಸ್ ನಿಲ್ಲಿಸದೇ ಸವಾರನ ಸಮೇತ ಬೈಕ್ ಅನ್ನು ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ಈ ವೇಳೆ, ಬೈಕ್‌ನಲ್ಲಿದ್ದ ಪೆಟ್ರೋಲ್ ಚೆಲ್ಲಿ ಬಸ್ ಅಡಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಬಸ್‌ಗೆ ಬೆಂಕಿ ಹಬ್ಬಿದೆ. ಎಸಿ ಬಸ್ ಆಗಿದ್ದ ಕಾರಣ ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಬೆಂಕಿ ಆವರಿಸಿದೆ.

    ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಕೂಡ ಸುಟ್ಟಗಾಯಗಳಿಂದಾಗಿ ಒದ್ದಾಡುತ್ತಿದ್ದಾರೆ.ಇದನ್ನೂ ಓದಿ: Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

  • Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    – ಬೆಂಕಿ ನಂದಿಸಿದ ವೇಳೆ 100ಕ್ಕೂ ಹೆಚ್ಚು ಮೊಬೈಲ್ ಫೋನ್‌ ಅವಶೇಷಗಳು ಪತ್ತೆ

    ಹೈದರಾಬಾದ್‌: ಶುಕ್ರವಾರ ಮುಂಜಾನೆ ಸಂಭವಿಸಿದ ಕರ್ನೂಲ್‌ ಬಸ್‌ ದುರಂತಕ್ಕೆ (Kurnool Bus Fire) ಕಾರಣವಾದ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ ಅಂತ ಆಂಧ್ರಪ್ರದೇಶ ಅಗ್ನಿಶಾಮಕ ಇಲಾಖೆಯ (Andhra Pradesh Fire Department) ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಅಧಿಕಾರಿಗಳು ಹೇಳುವಂತೆ ದುರಂತಕ್ಕೀಡಾದ ಬಸ್‌ನ ಹಿಂದಿನ ಸೀಟುಗಳ ಕೆಳಗೆ ಲಗೇಜ್‌ ಜಾಗದಲ್ಲಿ ಹೊಸ ಮೊಬೈಲ್‌ ಫೋನ್‌ಗಳನ್ನ ಇಡಲಾಗಿತ್ತು. ಬೆಂಕಿ ಹೊತ್ತಿಕೊಂಡು ಶಾಖ ಹೆಚ್ಚಾಗಿದ್ದರಿಂದಾಗಿ 100ಕ್ಕೂ ಹೆಚ್ಚು ಹೊಸ ಫೋನ್‌ಗಳು ಒಮ್ಮೆಲೆ ಸ್ಫೋಟಗೊಂಡಿವೆ (Mobile Phones Explosion). ಹಿಂದಿನ ಸೀಟುಗಳ ಕೆಳಗೆ ಹಾನಿಯಾಗಿದ್ದ ನಿರ್ದಿಷ್ಟ ಬ್ರ್ಯಾಂಡ್‌ನ ಹ್ಯಾಂಡ್‌ಸೆಟ್‌ಗಳ ಬಿಡಿಭಾಗಗಳನ್ನ ನೋಡಿ ನಮಗೇ ಆಶ್ಚರ್ಯವಾಯಿತು ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್‌ ಫೋನ್ಸ್‌
    ಬೆಂಗಳೂರಿನ ಕ್ಲೈಂಟ್‌ ಒಬ್ಬರಿಗೆ ತಲುಪಿಸಲು 100ಕ್ಕೂ ಹೆಚ್ಚು ಹ್ಯಾಂಡ್‌ಸೆಟ್‌ಗಳನ್ನ ಲಗೇಜ್‌ ಜಾಗದಲ್ಲಿ ಇರಿಸಲಾಗಿತ್ತು. ಈ ಮೊಬೈಲ್‌ಗಳು ಒಮ್ಮೆಲೆ ಸ್ಫೋಟಗೊಂಡಿರುವುದರಿಂದ ಬೆಂಕಿಯ ಪ್ರಮಾಣ ವ್ಯಾಪಿಸಿರಬಹುದು. ಜೊತೆಗೆ ಎಸಿಗಳು ಹಾಗೂ ಇತರ ಉದ್ದೇಶಗಳಿಗಾಗಿ ಬಸ್‌ನಲ್ಲಿ ಅಳವಡಿಸಿದ್ದ ವಿದ್ಯುತ್‌ ಬ್ಯಾಟರಿಗಳು ಸಹ ಸ್ಫೋಟಗೊಂಡಿದ್ದು ದುರಂತಕ್ಕೆ ಕಾರಣವಾಗಿದೆ. ಬೆಂಕಿಯ ಪ್ರಮಾಣ ಎಷ್ಟಿತ್ತೆಂದರೆ ಬಸ್‌ಗೆ ಅಳವಡಿಸಿದ್ದ ಅಲ್ಯೂಮಿನಿಯಂ ನೆಲಹಾಸು ನೀರಿನಂತೆ ಕರಗಿಹೋಗಿತ್ತು, ಮೊಳೆಗಳು ಕರಗಿ ಬೂದಿಯಂತೆ ಉದುರುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಮೊದಲ ಕಾರಣ ಏನು?
    ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಬಸ್ಸು ಮತ್ತು ಬೈಕ್ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿತ್ತು. ವೇಗವಾಗಿ ಬರುತ್ತಿದ್ದ ಬಸ್ಸು ಮೊದಲು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಕೆಳಗಡೆ ಬಿದ್ದಿದೆ. ಬೈಕ್ ಕೆಳಗಡೆ ಬಿದ್ದರೂ ಚಾಲಕ ಬಸ್ಸನ್ನು ವೇಗವಾಗಿ ಚಲಾಯಿಸಿದ್ದಾನೆ.

    ಕೆಳಭಾಗದಲ್ಲಿ ಸಿಲುಕಿಕೊಂಡಿದ್ದ ಬೈಕನ್ನು ಬಸ್ಸು 300 ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್ ಕೆಳಕ್ಕೆ ಚೆಲ್ಲಿದೆ. ರಸ್ತೆಯಲ್ಲಿ ಬೈಕನ್ನು ಎಳೆದುಕೊಂಡು ಹೋಗಿದ್ದರಿಂದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬೆಂಕಿಯ ಕಿಡಿ ಡೀಸೆಲ್ ಟ್ಯಾಂಕ್ ಮೇಲೆ ಚಿಮ್ಮಿದೆ. ಟ್ಯಾಂಕ್‌ಗೆ ಕಿಡಿ ಚಿಮ್ಮಿದ ಕೂಡಲೇ ಬೆಂಕಿ ಹೊತ್ತಿಕೊಂಡು ಟ್ಯಾಂಕ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಡೀಸೆಲ್ ಮೇಲುಗಡೆ ಹಾರಿದ್ದರಿಂದ ಸುಲಭವಾಗಿ ಬೆಂಕಿ ಹರಡಿ ಕ್ಷಣಮಾತ್ರದಲ್ಲಿ ಬಸ್ಸು ಧಗಧಗಿಸಿದೆ.

    ಕರ್ನೂಲ್ ಡಿಸಿ ಹೇಳಿದ್ದೇನು?
    ಕರ್ನೂಲ್ ಬಸ್ ದುರಂತದ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎ ಸಿರಿ, ಖಾಸಗಿ ಬಸ್ ದುರಂತ ಬೆಳಗ್ಗಿನ ಜಾವ 3 ರಿಂದ 3:10ರ ಸುಮಾರಿಗೆ ಆಗಿದೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ 41 ಪ್ರಯಾಣಿಕರಲ್ಲಿ 23 ಜನರನ್ನ ರಕ್ಷಿಸಲಾಗಿದೆ. ಇಲ್ಲಿಯವರೆಗೆ ಮೃತರಲ್ಲಿ 11 ಜನರನ್ನು ಗುರುತಿಸಲಾಗಿದೆ, ಉಳಿದವರ ಗುರುತು ಪತ್ತೆ ಮಾಡುವ ಕಾರ್ಯ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಕೀರ್ತಿ ಜೊತೆಗಿನ ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಮುಹೂರ್ತ

    ಕೀರ್ತಿ ಜೊತೆಗಿನ ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಮುಹೂರ್ತ

    ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarkonda) ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿ (Hyderabad) ನಿನ್ನೆ ಮುಹೂರ್ತ ನೆರವೇರಿದ್ದು, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರಕ್ಕೆ ಕ್ಲಾಪ್ ಮಾಡಿದರು. ನಿರ್ಮಾಪಕ ನಿರಂಜನ್ ರೆಡ್ಡಿ ಕ್ಯಾಮೆರಾ ಆನ್ ಮಾಡಿದರು ಮತ್ತು ನಿರ್ದೇಶಕ ಹನು ರಾಘವಪುಡಿ ಮೊದಲ ದೃಶ್ಯವನ್ನು ನಿರ್ದೇಶಿಸಿದರು.

    ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯಶಸ್ವಿ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. `ರಾಜಾ ವಾರು ರಾಣಿ ಗಾರು’ ಚಿತ್ರದ ಮೂಲಕ ಖ್ಯಾತಿ ಪಡೆದ ಪ್ರತಿಭಾನ್ವಿತ ನಿರ್ದೇಶಕ ರವಿಕಿರಣ್ ಕೋಲಾ ಈ ಪ್ರಾಜೆಕಟ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಇದನ್ನೂ ಓದಿ: ನಾನು ಭೇಟಿಯಾದ ಅದ್ಭುತ ವ್ಯಕ್ತಿಗಳಲ್ಲಿ ದರ್ಶನ್ ಸಹ ಒಬ್ಬರು – ಡೆವಿಲ್ ನಾಯಕಿ ರಚನಾ ರೈ

    ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ 59ನೇ ಚಿತ್ರ ಇದಾಗಿದೆ. ವಿಜಯ್ ದೇವರಕೊಂಡಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಸಾಥ್ ಕೊಡಲಿದ್ದಾರೆ.

    ಗ್ರಾಮೀಣ ಆಕ್ಷನ್ ಡ್ರಾಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದೇ ತಿಂಗಳ 16ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಸ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.ಇದನ್ನೂ ಓದಿ: ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ – ಕಾಂತಾರ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ಸುಸ್ತಾಗಿ ಮಲಗಿದ್ದ ರಿಷಬ್

  • ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    – ಗ್ಯಾಸ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ

    ವಾಷಿಂಗ್ಟನ್‌: ಅಮೆರಿಕದ (America) ಡಲ್ಲಾಸ್‌ನಲ್ಲಿ ಭಾರತ ಮೂಲದ (India) ದಂತ ವೈದ್ಯನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹೈದರಾಬಾದ್ (Hyderabad) ಮೂಲದ ಚಂದ್ರಶೇಖರ್ ಪೋಲ್ ಹತ್ಯೆಗೀಡಾದ ದುರ್ದೈವಿ.

    ಗುರುವಾರ ರಾತ್ರಿ ಚಂದ್ರಶೇಖರ್ ಅವರು ಗ್ಯಾಸ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಅವರು 2023ರಲ್ಲಿ ಹೈದರಾಬಾದ್‌ನಲ್ಲಿ ದಂತ ಶಸ್ತ್ರಚಿಕಿತ್ಸೆ ಪದವಿ ಮುಗಿಸಿ, ನಂತರ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಇದರ ನಡುವೆ ಅವರು, ಪೆಟ್ರೋಲ್ ಬಂಕ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಉದ್ಯೋಗದ ಹುಡುಕಾಟದಲ್ಲಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟ್ರಂಪ್‌ ಮಾತಿಗೆ ಇಸ್ರೇಲ್‌ ಡೋಂಟ್‌ ಕೇರ್‌ – ಗಾಜಾ ಮೇಲೆ ಮತ್ತೆ ವೈಮಾನಿಕ ದಾಳಿ, 6 ಮಂದಿ ಸಾವು

    ಬಿಆರ್‌ಎಸ್ ಶಾಸಕ ಸುಧೀರ್ ರೆಡ್ಡಿ ಮತ್ತು ಮಾಜಿ ಸಚಿವ ಟಿ ಹರೀಶ್ ರಾವ್ ಹೈದರಾಬಾದ್‌ನಲ್ಲಿರುವ ಮೃತನ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ʻದುರಂತʼ ಘಟನೆ ಎಂದು ಸುಧೀರ್ ರೆಡ್ಡಿಯವರು ಕರೆದಿದ್ದಾರೆ. ಇದೇ ವೇಳೆ ಮೃತದೇಹವನ್ನು ಅವರ ಊರಿಗೆ ತರಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಮೃತರ ಕುಟುಂಬಸ್ಥರು ಮೃತದೇಹವನ್ನು ಅಮೆರಿಕದಿಂದ ಹೈದರಾಬಾದ್‌ಗೆ ತರಲು ಸರ್ಕಾರದ ಸಹಾಯ ಕೋರಿದ್ದಾರೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

  • ಕಾಂತಾರ ಚಾಪ್ಟರ್-1 ಹೈದರಾಬಾದ್ ಪ್ರೀ-ರಿಲೀಸ್ ಇವೆಂಟ್‌ಗೆ Jr.NTR ಸಾಥ್

    ಕಾಂತಾರ ಚಾಪ್ಟರ್-1 ಹೈದರಾಬಾದ್ ಪ್ರೀ-ರಿಲೀಸ್ ಇವೆಂಟ್‌ಗೆ Jr.NTR ಸಾಥ್

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಇದೇ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ತೆರೆ ಕಾಣಲು ಸಿದ್ಧವಾಗಿದೆ. ಸದ್ಯ ಟ್ರೈಲರ್ ಮೂಲಕ ಗಮನ ಸೆಳೆದಿರುವ ಕಾಂತಾರ ಸಿನಿಮಾ ತಂಡ ಪ್ಯಾನ್ ಇಂಡಿಯಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಹೈದರಾಬಾದ್‌ನಲ್ಲಿ ಇವೆಂಟ್ ಇದೇ ಸೆ.28 ರಂದು ನಡೆಯಲಿದೆ. ಈ ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ನಟ ಜೂ.ಎನ್‌ಟಿಆರ್ (J.NTR) ಆಗಮಿಸಲಿದ್ದಾರೆ.‌

     

    View this post on Instagram

     

    A post shared by Hombale Films (@hombalefilms)

    ಜೂ.ಎನ್‌ಟಿಆರ್ ಹಾಗೂ ರಿಷಬ್ ಶೆಟ್ಟಿ (Rishab Shetty) ಅವರ ನಡುವೆ ಸಿನಿಮಾ ಇಂಡಸ್ಟ್ರಿ ಸ್ನೇಹ ಹೊರತುಪಡಿಸಿ ವೈಯಕ್ತಿಕವಾಗಿ ಉತ್ತಮವಾದ ಭಾಂದವ್ಯವಿದೆ. ಹೀಗಾಗಿ, ಕಾಂತಾರ ಸಿನಿಮಾದ ಪ್ರಮೋಷನ್‌ನಲ್ಲಿ ಜೂ.ಎನ್‌ಟಿಆರ್ ಭಾಗಿಯಾಗಲಿದ್ದಾರೆ. ಸೆ‌.28 ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ಗೆ ಮುಹೂರ್ತ ಫಿಕ್ಸ್!

    ಕಾಂತಾರ ಚಾಪ್ಟರ್-1 ತೆರೆಗೆ ಬರೋಕೆ ಇನ್ನಷ್ಟೇ ದಿನಗಳು ಬಾಕಿ ಇವೆ. ಈ ನಿಟ್ಟಿನಲ್ಲಿ ಚಿತ್ರತಂಡ ದೇಶದಾದ್ಯಂತ ಸಂಚರಿಸಿ ಪ್ರಚಾರವನ್ನ ಭರ್ಜರಿಯಾಗಿ ಮಾಡುತ್ತಿದೆ. ಇಂದಿನಿಂದ (ಸೆ.26) ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಕಾಂತಾರ ಸಿನಿಮಾದ ಟ್ರೈಲರ್‌ಗೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾವನ್ನ ಕಣ್ತುಂಬಿಕೊಳ್ಳಲು ಕಾಯ್ತಿರುವವರಿಗೆ ಕೆಲವೇ ದಿನಗಳಲ್ಲಿ ಕಾಂತಾರ ದರ್ಶನ ಸಿಗಲಿದೆ.

  • 7 ಕ್ವಿಂಟಾಲ್‌ ಗೋಮಾಂಸ – ವಾಹನಕ್ಕೆ ಬೆಂಕಿ ಹಚ್ಚಿದ ಗ್ರಾಮಸ್ಥರು

    7 ಕ್ವಿಂಟಾಲ್‌ ಗೋಮಾಂಸ – ವಾಹನಕ್ಕೆ ಬೆಂಕಿ ಹಚ್ಚಿದ ಗ್ರಾಮಸ್ಥರು

    ಬೆಳಗಾವಿ: ಗೋಮಾಂಸ (Beef )ಸಾಗಿಸುತ್ತಿದ್ದ ವಾಹನಕ್ಕೆ ಗ್ರಾಮಸ್ಥರು ಬೆಂಕಿ ಇಟ್ಟ ಘಟನೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ

    ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್‌ಗೆ (Hyderabad ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಐನಾಪುರ ಗ್ರಾಮದಲ್ಲಿ ಜನರು ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ.  ಇದನ್ನೂ ಓದಿ:  ಟಾರ್ಗೆಟ್‌ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ

    ಗೋಮಾಂಸ ಸಾಗಿಸುತ್ತಿದ್ದ ಚಾಲಕನನ್ನು ಕೆಳಗೆ ಇಳಿಸಿ ಥಳಿಸಿ ಕೂಡಿ ಹಾಕಿದ್ದಾರೆ. ಪರಿಶೀಲಿಸಿದಾಗ ಸುಮಾರು 7 ಕ್ವಿಂಟಾಲ್‌ನಷ್ಟು ಗೋಮಾಂಸ ಲಾರಿಯಲ್ಲಿ ಇರುವುದು ಪತ್ತೆಯಾಗಿದೆ. ಭಾರೀ ಪ್ರಮಾಣದ ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಸಿಟ್ಟಾದ ಜನರು ಲಾರಿಗೆ ಬೆಂಕಿ ಹಚ್ಚಿದ್ದಾರೆ.

    ಸ್ಥಳಕ್ಕೆ ಕಾಗವಾಡ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಐನಾಪುರ ಗ್ರಾಮದಲ್ಲಿ ಮುಂಜಾಗ್ರತವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿದೆ. ಇಬ್ಬರು ಡಿಸ್‌ಎಸ್‌ಪಿ, 4 ಸಿಪಿಐ, 8 ಪಿಎಸ್‌ಐ ಸೇರಿ ಸೇರಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

     

  • ಶೂಟಿಂಗ್ ವೇಳೆ ಅವಘಡ – ಜೂ.ಎನ್‍ಟಿಆರ್‌ಗೆ ಗಾಯ

    ಶೂಟಿಂಗ್ ವೇಳೆ ಅವಘಡ – ಜೂ.ಎನ್‍ಟಿಆರ್‌ಗೆ ಗಾಯ

    ಚಿತ್ರೀಕರಣದ ವೇಳೆ ಟಾಲಿವುಡ್ (Tollywood) ಸ್ಟಾರ್ ನಟ ಜೂ.ಎನ್‍ಟಿಆರ್‌ (Jr NTR) ಗಾಯವಾಗಿದ್ದು, ಅವರನ್ನು ಆಸ್ಪತ್ರೆ ಸೇರಿಸಲಾಗಿದೆ. ವಿಷಯ ತಿಳಿದ ಅಭಿಮಾನಿಗಳು ಆಸ್ಪತ್ರೆ ಮುಂದೆ ದೌಡಾಯಿಸಿದ್ದಾರೆ.

    ಹೈದ್ರಾಬಾದ್‍ನಲ್ಲಿ (Hyderabad) ಜಾಹೀರಾತುವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ನಡೆದಿದೆ. ಚಿತ್ರೀಕರಣದ ವೇಳೆ ನೆಲದ ಮೇಲೆ ಸ್ಲಿಪ್ ಆಗಿ ಬಿದ್ದಿದ್ದು, ಕಾಲಿಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿತವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ – ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು

    ಹೈದ್ರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೂ.ಎನ್‍ಟಿಆರ್‍ಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಮೂಳೆಗೆ ಪೆಟ್ಟಾಗಿರುವುದರಿಂದ ಕೆಲವು ದಿನ ಚಿತ್ರೀಕರಣದಲ್ಲಿ ಭಾಗಿಯಾಗದೇ ಅವರು ವಿಶ್ರಾಂತಿ ಪಡೆಯಬೇಕಾಗಿದೆ.

    ತಮ್ಮ ನೆಚ್ಚಿನ ನಟ ಆಸ್ಪತ್ರೆಗೆ ಸೇರಿರುವ ವಿಷಯ ತಿಳಿದು ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ರು. ಕೂಡಲೇ ಆಸ್ಪತ್ರೆ ವೈದ್ಯರು ಹೆಲ್ತ್ ಬುಲಿಟಿನ್ ರಿಲೀಸ್ ಮಾಡಿ ಜೂ.ಎನ್‍ಟಿಆರ್ ಆರೋಗ್ಯವಾಗಿರುವುದನ್ನ ಖಚಿತಪಡಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ವಿಶ್ರಾಂತಿ ಬಳಿಕ ಅವರು ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.

    ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ತಿರುಪತಿ ಸೇರಿದಂತೆ ಪ್ರಮುಖ ದೇವಾಲಯಗಳ ಎದುರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಮಂತಾ ಸಿನಿಮಾ ಆಫರ್‌ಗೆ ನಾಗಾರ್ಜುನ ಫ್ಯಾಮಿಲಿ ಅಡ್ಡಗಾಲು?

  • Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

    Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

    – ದರೋಡೆಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ
    – 40 ಗ್ರಾಂ ಚಿನ್ನ, 1 ಲಕ್ಷ ರೂ. ನಗದು ದೋಚಿ ಪರಾರಿ

    ಹೈದರಾಬಾದ್: ಮಹಿಳೆಯನ್ನು ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ (Pressure Cooker) ಹೊಡೆದು ಬಳಿಕ ಕತ್ತರಿಯಿಂದ ಆಕೆಯ ಗಂಟಲು ಸೀಳಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಸ್ಕ್ಯಾನ್ ಲೇಕ್ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ. 13ನೇ ಮಹಡಿಯಲ್ಲಿ ವಾಸಿಸುತ್ತಿದ್ದ (50) ರೇಣು ಅಗರ್ವಾಲ್ ಹತ್ಯೆಯಾದ ಮಹಿಳೆ. ದರೋಡೆಗೆ ಬಂದಿದ್ದ ಇಬ್ಬರು ಆರೋಪಿಗಳು ಕೃತ್ಯವೆಸಗಿದ್ದಾರೆ. ಕೊಲೆ ಬಳಿಕ ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆ ಮಾಡಿ ಆಕೆಯ ಮನೆಯಲ್ಲೇ ಸ್ನಾನ ಮಾಡಿದ ದುಷ್ಕರ್ಮಿಗಳು ರಕ್ತಸಿಕ್ತ ಬಟ್ಟೆಗಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರೇಣು ಅಗರ್ವಾಲ್ ಪತಿ, ಮಗ ಮನೆಯಿಂದ ತೆರಳಿದ್ದರು. ಸಂಜೆ 5 ಗಂಟೆಗೆ ಪತಿ, ಪತ್ನಿ ರೇಣುಗೆ ಕಾಲ್ ಮಾಡಿದ್ದರು. ಕರೆ ಸ್ವೀಕರಿಸದಿದ್ದಾಗ ಪತಿ ಮನೆಗೆ ಬಂದಿದ್ದಾರೆ. ಪ್ಲಂಬರ್ ಸಹಾಯದಿಂದ ಬಾಲ್ಕನಿ ಮೂಲಕ ಮನೆಗೆ ಎಂಟ್ರಿ ಕೊಟ್ಟು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

  • ಹೈದರಾಬಾದ್‌ನಲ್ಲಿ ಮುಂಬೈ ಪೊಲೀಸರ ದಾಳಿ – 12,000 ಕೋಟಿ ಮೌಲ್ಯದ ಮಾದಕ ವಸ್ತು ವಶ

    ಹೈದರಾಬಾದ್‌ನಲ್ಲಿ ಮುಂಬೈ ಪೊಲೀಸರ ದಾಳಿ – 12,000 ಕೋಟಿ ಮೌಲ್ಯದ ಮಾದಕ ವಸ್ತು ವಶ

    ಹೈದರಾಬಾದ್‌: ತೆಲಂಗಾಣದ (Telangana) ಚೆರ್ಲಪಲ್ಲಿಯಲ್ಲಿ ನಿಷೇಧಿತ ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್ (MD) ಡ್ರಗ್ಸ್‌ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಮುಂಬೈನ (Mumbai) ಮೀರಾ ಭಯಂದರ್ ವಸೈ-ವಿರಾರ್ (MBVV) ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡಿರುವ ಮಾದಕ ವಸ್ತುಗಳು ಸುಮಾರು 12,000 ಕೋಟಿ ರೂ. ಮೌಲ್ಯದ್ದಾಗಿವೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಆ.8 ರಂದು ಮುಂಬೈನಲ್ಲಿ ಬಾಂಗ್ಲಾದ ಮಹಿಳೆ ಫಾತಿಮಾ ಮುರಾದ್ ಶೇಖ್ (23) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಆಕೆಯ ಬಂಧನದ ಬಳಿಕ, ತನಿಖೆಯ ವೇಳೆ ಡ್ರಗ್ಸ್‌ ತಯಾರಿಕೆ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ಮಾಹಿತಿಯ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್ – ಹನಿಮೂನ್‌ ಕೊಲೆ ಕೇಸ್‌ ಚಾರ್ಜ್‌ಶೀಟ್‌ನಲ್ಲೇನಿದೆ?

    ಕಾರ್ಯಾಚರಣೆಯ ಸಮಯದಲ್ಲಿ, ಅಧಿಕಾರಿಗಳು ಮಾದಕವಸ್ತು ಉತ್ಪಾದನೆಗೆ ಬಳಸುವ 32,000 ಲೀಟರ್ ಕಚ್ಚಾ ವಸ್ತು ಮತ್ತು 5.968 ಕಿಲೋಗ್ರಾಂಗಳಷ್ಟು ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮುಂಬೈ ಮತ್ತು ತೆಲಂಗಾಣದಲ್ಲಿ ಒಟ್ಟು 12 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಕಾರು, 1 ಬೈಕ್‌ ಹಾಗೂ 27 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

    ಕಾರ್ಖಾನೆಯ ಹಿಂದಿನ ಮಾಸ್ಟರ್‌ಮೈಂಡ್‌ಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

  • ಗೋವಾ | ಹಾಸ್ಟೆಲ್ ರೂಮ್‌ನಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

    ಗೋವಾ | ಹಾಸ್ಟೆಲ್ ರೂಮ್‌ನಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

    – ಡಿಸೆಂಬರ್‌ನಿಂದ ಇಲ್ಲಿಯವರೆಗೆ ಹಾಸ್ಟೆಲ್‌ನಲ್ಲಿ ಐದು ವಿದ್ಯಾರ್ಥಿಗಳ ಸಾವು

    ಪಣಜಿ: ವಿದ್ಯಾರ್ಥಿಯೋರ್ವ ಹಾಸ್ಟೆಲ್ ರೂಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗುರುವಾರ ದಕ್ಷಿಣ ಗೋವಾದ (Goa) ಬಿಐಟಿಎಸ್ ಪಿಲಾನಿ ಕ್ಯಾಂಪಸ್‌ನಲ್ಲಿ (BITS Pilani campus) ನಡೆದಿದೆ.

    ರಿಷಿ ನಾಯರ್ (20) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗುರುವಾರ ಪೋಷಕರು ಮಾಡಿದ ಕರೆಗಳಿಗೆ ರಿಷಿ ಪ್ರತಿಕ್ರಿಯಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಹಾಸ್ಟೆಲ್ ಸಿಬ್ಬಂದಿಗೆ ಕರೆ ಮಾಡಿ ಪರಿಶೀಲಿಸುವಂತೆ ಹೇಳಿದ್ದರು. ಈ ವೇಳೆ ಹಾಸ್ಟೆಲ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ರಿಷಿ ಹಾಸಿಗೆ ಮೇಲೆ ಮಲಗಿದ್ದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಪ್ಲಾಸ್ಟಿಕ್‌ ಗನ್‌ ಹಿಡಿದ ಚಿನ್ನದಂಗಡಿ ದರೋಡೆ ಮಾಡಿದ್ದ ಗ್ಯಾಂಗ್‌ ಬಂಧನ

     ರಿಷಿ, ಬಿಐಟಿಎಸ್ ಪಿಲಾನಿಯ ಹೈದರಾಬಾದ್ (Hyderabad) ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ ಅಲ್ಲಿ ಹೈದರಾಬಾದ್‌ನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಎರಡೂವರೆ ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಸಾವಿನಿಂದ ರಿಷಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೆಲ್ಲದರಿಂದ ಹೊರಬರಲು ಆತನನನ್ನು ಹೈದರಾಬಾದ್‌ನಿಂದ ಗೋವಾದ ಬಿಐಟಿಎಸ್ ಪಿಲಾನಿ ಕಾಲೇಜಿಗೆ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಮರಣೋತ್ತರ ಪರೀಕ್ಷೆಯ ಬಳಿಕವೇ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ನೀರು ಕುಡಿಯೋಕೆ ಉತ್ತೇಜನ – ರಾಜ್ಯದ ಶಾಲೆಗಳಲ್ಲಿ ಶುರುವಾಗುತ್ತಾ ‘ವಾಟರ್ ಬೆಲ್’?

    ಡಿಸೆಂಬರ್ 2024ರಿಂದ ಇಲ್ಲಿವರೆಗೆ ಗೋವಾ ಕ್ಯಾಂಪಸ್‌ನಲ್ಲಿ ಇದು ಐದನೇ ವಿದ್ಯಾರ್ಥಿಯ ಸಾವಾಗಿದೆ. ವಿದ್ಯಾರ್ಥಿಗಳಾದ ಓಂ ಪ್ರಿಯಾನ್ ಸಿಂಗ್ (ಡಿಸೆಂಬರ್ 2024), ಅಥರ್ವ್ ದೇಸಾಯಿ (ಮಾರ್ಚ್ 2025), ಕೃಷ್ಣ ಕಸೇರಾ (ಮೇ 2025) ಮತ್ತು ಕುಶಾಗ್ರ ಜೈನ್ (ಆಗಸ್ಟ್ 2025) ಹಾಸ್ಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.

     ಈ ಸಂಬಂಧ ಗೋವಾ ಸಿಎಂ ಪ್ರಮೋದ್ ಸಾವಂತ್ ಮಾತನಾಡಿ, ತನಿಖೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇಂತಹ ಘಟನೆಗಳು ದುರದೃಷ್ಟಕರ ಮತ್ತು ಮತ್ತೆ ಸಂಭವಿಸಬಾರದು. ವರದಿಯನ್ನು ಸ್ವೀಕರಿಸಿದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.