Tag: HY Meti

  • ಪಕ್ಷಕ್ಕೆ ಮಾನ-ಮರ್ಯಾದೆ ಇದ್ರೆ ರಮೇಶ್ ರಾಜೀನಾಮೆ ತೆಗೆದುಕೊಳ್ಳಲಿ: ಸಿದ್ದರಾಮಯ್ಯ

    ಪಕ್ಷಕ್ಕೆ ಮಾನ-ಮರ್ಯಾದೆ ಇದ್ರೆ ರಮೇಶ್ ರಾಜೀನಾಮೆ ತೆಗೆದುಕೊಳ್ಳಲಿ: ಸಿದ್ದರಾಮಯ್ಯ

    – ಸಿದ್ದರಾಮಯ್ಯ ಒಳ್ಳೆಯವ್ರು ಎಂದಿದ್ದು ಸತ್ಯ ಅಂದ್ರು ಮಾಜಿ ಸಿಎಂ

    ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ಮಾನ-ಮರ್ಯಾದೆ ಅನ್ನೋದು ಇದ್ದರೆ, ಮನುಷ್ಯನ ಮೌಲ್ಯಗಳಿಗೆ ಬೆಲೆ ಕೊಡಬೇಕು ಅನ್ನೋದಾದರೆ ಕೂಡಲೇ ಅವನ ರಾಜೀನಾಮೆ ತೆಗೆದುಕೊಳ್ಳಬೇಕು. ಈ ಕಾಮಕಾಂಡ ವಿಚಾರ ರಾಷ್ಟ್ರ ತುಂಬಾ ಗೊತ್ತಾಗಿರುವಂಥದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಔಟ್ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾನ ಮರ್ಯಾದೆ ಇರುವ ಸರ್ಕಾರ ಕೂಡಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ತಗೋಬೇಕು. ಅಲ್ಲದೆ ತಕ್ಷಣವೇ ಎಫ್‍ಐಆರ್ ರಿಜಿಸ್ಟರ್ ಮಾಡಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಹೆಚ್.ವೈ ಮೇಟಿ ಪ್ರಕರಣ ಈ ರೀತಿಯಾಗಿರಲಿಲ್ಲ. ಆ ಸಿಡಿಯಲ್ಲಿ ಏನೂ ಇರಲಿಲ್ಲ. ಆದರೂ ನಾನು ರಾಜೀನಾಮೆ ತೆಗೆದುಕೊಂಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಅನ್ನೋದಾದರೆ ಅವರು ನಿನ್ನೆನೇ ರಾಜೀನಾಮೆ ತೆಗೆದುಕೊಳ್ಳಬೇಕಿತ್ತು ಎಂದರು.

    ಮೇಟಿಯವರು ಕೂಡ ವೀಡಿಯೋವನ್ನು ಫೇಕ್ ಎಂದು ಹೇಳಿದ್ದರು. ಈ ಪ್ರಕರಣ ಸಂಬಂಧ ಸಿಬಿಐ ತನಿಖೆ ಆಮೇಲೆ ಮಾಡಲಿ. ಈಗ ಮಾನ-ಮರ್ಯಾದೆ ಇದ್ದರೆ ರಾಜೀನಾಮೆ ತೆಗೆದುಕೊಳ್ಳಬೇಕೋ, ಬೇಡವೋ ಎಂದು ಪ್ರಶ್ನಿಸಿದರು. ಮೇಟಿ ರಾಜೀನಾಮೆಯನ್ನು ನಾವು ಯಾಕೆ ತೆಗೆದುಕೊಂಡಿದ್ದೇವೆ..? ಆ ಸಿಡಿಯಲ್ಲಿ ಏನೂ ಇರಲಿಲ್ಲ. ಆದರೆ ಇದು ತಲೆ ತಗ್ಗಿಸುವಂತಹ ರೀತಿಯಲ್ಲಿದೆ ಎಂದರು.

    ಇದೇ ವೇಳೆ ಯಡಿಯೂರಪ್ಪ ಕರಪ್ಟ್, ಸಿದ್ದರಾಮಯ್ಯ ಒಳ್ಳೆಯ ವ್ಯಕ್ತಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸತ್ಯವನ್ನು ಹೇಳಿದ್ದಾರೆ ಅಂದ್ರು.

  • ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ

    ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ

    ಬೆಂಗಳೂರು: ನಾನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಸಚಿವ ಸ್ಥಾನ ಕೋಳೋದು ಸರಿಯಲ್ಲ. ಒಂದು ವೇಳೆ ನಾನು ಜಯ ಸಾಧಿಸಿದ್ದರೆ ಖಂಡಿತಾ ಸಚಿವ ಸ್ಥಾನದ ಆಕಾಂಕ್ಷಿಯಾಗಿರುತ್ತಿದ್ದೆ ಎಂದು ಮಾಜಿ ಸಚಿವ ಹೆಚ್.ವೈ.ಮೇಟಿ ಹೇಳಿದ್ದಾರೆ.

    ಬಬಲೇಶ್ವರ ಕ್ಷೇತ್ರದಲ್ಲಿ ಜಯ ಸಾಧಿಸಿರುವ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಅಂತಾ ಎಂ.ಬಿ.ಪಾಟೀಲರ ಪರವಾಗಿ ಬ್ಯಾಟ್ ಬೀಸಿದ್ರು. ಇದನ್ನೂ ಓದಿ: ಕೈ ಶಾಸಕ ಎಂ.ಬಿ ಪಾಟೀಲ್ ರಾಜೀನಾಮೆ?

    ಇತ್ತ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಈಗಾಗಲೇ ಎಂ.ಬಿ.ಪಾಟೀಲ್ ಸಾರ್ವಜನಿಕವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಶಾಸಕರ ನಿವಾಸ ಮುಂದೆ ಎಂ.ಬಿ ಪಾಟೀಲ್ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ಮುಂದಾಗಿದ್ದಾರೆ. ಮನೆಯ ಮುಂದೆ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಪಾಟೀಲ್ ಅಭಿಮಾನಿಗಳು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನ ಸಿಗದೇ ಇದ್ರೆ ಬೇಜಾರು ಆಗುತ್ತೆ, ನಾನು ಕೂಡ ಮನುಷ್ಯ ತಾನೇ: ಜೆಡಿಎಸ್ ಶಾಸಕ

    ರಾಜೀನಾಮೆ ಸಂಬಂಧ ಎಂಬಿ ಪಾಟೀಲ್ ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷಕ್ಕಾಗಿ ಸಮುದಾಯವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದಾನೆ. ಈಗ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ತಮ್ಮ ಆಪ್ತರ ಜೊತೆ ಬೇಸರವನ್ನು ಪಾಟೀಲ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾವ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ- ಯು.ಟಿ ಖಾದರ್

     ಇದನ್ನೂ ಓದಿ: ನನಗೆ ಸ್ಥಾನ ಕೊಡದಿರುವುದು ಕಾಂಗ್ರೆಸ್ಸಿಗೆ ಅತೀ ದೊಡ್ಡ ನಷ್ಟವಾಗಲಿದೆ: ಬಿ.ಸಿ. ಪಾಟೀಲ್ ಅಸಮಾಧಾನ

  • ನಾವು ಸಿದ್ದರಾಮಯ್ಯನವರ ಅನುಚರರು, ಅವರ ನಿರ್ಧಾರಕ್ಕೆ ಬದ್ಧ: ಹೆಚ್‍ವೈ ಮೇಟಿ

    ನಾವು ಸಿದ್ದರಾಮಯ್ಯನವರ ಅನುಚರರು, ಅವರ ನಿರ್ಧಾರಕ್ಕೆ ಬದ್ಧ: ಹೆಚ್‍ವೈ ಮೇಟಿ

    ಬೆಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಮುಖ್ಯವಾದದ್ದು. ನಾವೆಲ್ಲಾ ಅವರ ಅನುಚರರು ಎಂದು ಮಾಜಿ ಸಚಿವ ಹೆಚ್‍ವೈ ಮೇಟಿ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಯಾರಿಗೆ ಟಿಕೆಟ್ ಸಿಗುತ್ತದೊ ಬಿಡುತ್ತದೋ. ನಮಗೆ ಯಾವುದೇ ಅಸಮಾಧಾನ ಬೇಸರ ಇಲ್ಲ. ಅವರ ಆಯ್ಕೆಗೆ ಬದ್ಧರಾಗಿದ್ದೇವೆ. ಅವರು ಹೇಳಿದಂತೆ ಕೇಳುತ್ತೇವೆ ಎಂದು ತಿಳಿಸಿದ್ದಾರೆ.

    ಚಿಮ್ಮನಕಟ್ಟಿಯವರೇ ತಮ್ಮ ಸ್ವಕ್ಷೇತ್ರ ಬದಾಮಿಗೆ ಮುಖ್ಯಮಂತ್ರಿಗಳನ್ನು ಆಹ್ವಾನ ಮಾಡಿದ್ದಾರೆ. ಜಿಲ್ಲಾ ಮುಖಂಡರು ನಾಯಕರುಗಳು ಮುಖ್ಯಮಂತ್ರಿಗಳ ಪರ ಪ್ರಚಾರ ಮಾಡಿ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

    ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳು ಬರಬೇಕು ಬಂದಲ್ಲಿ ಒಳ್ಳೆಯದಾಗುತ್ತದೆ. ಬಹಳಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಬರಬೇಕು. ಜನಾಭಿಪ್ರಾಯ ಅವರ ಮೇಲೆ ಇದೆ. ನಮ್ಮ ಜಿಲ್ಲೆಯಿಂದಲೇ ಸ್ಪರ್ಧಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇವೆ. ನಮ್ಮ ಮಾತಿಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಮಾಜಿ ಸಚಿವರು ತಿಳಿಸಿದರು.

  • ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ವಿರುದ್ಧ ವಿಜಯಲಕ್ಷ್ಮೀ ಸರೂರು ಚುನಾವಣಾ ಅಖಾಡಕ್ಕೆ ಸಿದ್ಧರಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ ವೈ ಮೇಟಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.

    ಪಕ್ಷೇತರವಾಗಿ ಚುನಾವಣೆಗೆ ನಿಲ್ಲೋಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯೋದಿಲ್ಲ. ಯಾವುದೇ ಆಸೆ ಆಮಿಷಗಳಿಗೂ ಮಣಿಯೋದಿಲ್ಲ ಸ್ಪರ್ಧೆ ಖಚಿತ. ನಾನು ಸಾಕಷ್ಟು ನೊಂದಿದ್ದೇನೆ. ನನ್ನಂತೆ ನೊಂದ ಮಹಿಳೆಯರ ಪರ ಕೆಲಸ ಮಾಡುತ್ತೇನೆ. ಜನರಿಂದಲೇ ಸಹಾಯ ಕೇಳಿ ಕಾಲುಬಿದ್ದು ಮತ ಕೇಳುತ್ತೇನೆ ಎಂದು ವಿಜಯಲಕ್ಷ್ಮೀ ಸರೂರು ತಿಳಿಸಿದ್ದಾರೆ.

    ಹೆಚ್ ವೈ ಮೇಟಿ ಮತ್ತು ವಿಜಯಲಕ್ಷ್ಮೀ ಸರೂರ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಮ್ಮ ಸಮುದಾಯದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನು ಮೇಟಿ ಅವರನ್ನು ಸೋಲಿಸಲು ಇತರೆ ಪ್ರಬಲ ಪಕ್ಷದವರು ವಿಜಯಲಕ್ಷ್ಮೀ ಸರೂರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ವಿಜಯಲಕ್ಷ್ಮೀ ಸರೂರಗೆ ಎಮ್ ಇ ಪಿ ಪಕ್ಷದಿಂದ ಆಫರ್ ಬಂದಿದೆಯಂತೆ. ಆದರೆ ನಾನು ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ. ಪಕ್ಷೇತರ ಸ್ಪರ್ಧೆ ವಿಚಾರ ಮಾತ್ರ ಇದೆ. ಮೇಟಿಯವರನ್ನು ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ.

  • ಮೇಟಿ ಸಿಡಿ ನೋಡಿದ್ರಾ? ನನ್ನದು ಸೆಕ್ಸ್ ಸಿಡಿ ಇದೆಯಂತೆ, ನಾನು ಗಂಡಸು ತಾನೇ: ಶಾಸಕ ವರ್ತೂರು ಪ್ರಕಾಶ್

    ಮೇಟಿ ಸಿಡಿ ನೋಡಿದ್ರಾ? ನನ್ನದು ಸೆಕ್ಸ್ ಸಿಡಿ ಇದೆಯಂತೆ, ನಾನು ಗಂಡಸು ತಾನೇ: ಶಾಸಕ ವರ್ತೂರು ಪ್ರಕಾಶ್

    ಕೋಲಾರ: ಒಂದಿಲ್ಲೊಂದು ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಕೋಲಾರದ ಪಕ್ಷೇತರ ಶಾಸಕ ಆರ್.ವರ್ತೂರು ಪ್ರಕಾಶ್ ಹೊಸತೊಂದು ಬಾಂಬ್ ಸಿಡಿಸಿದ್ದಾರೆ.

    ನನ್ನದು ಅಶ್ಲೀಲ ಸಿಡಿ ಇದೆಯಂತೆ, ಅದನ್ನ ನನ್ನ ವಿರೋಧಿಗಳು ಬಿಡುಗಡೆ ಮಾಡ್ತೀನಿ ಅಂತಾ ಹೇಳಿತ್ತಿದ್ದಾರಂತೆ, ರಿಲೀಸ್ ಮಾಡಲಿ ಬಿಡಿ ನಾನು ಗಂಡಸೇ ಅಲ್ವಾ ಅಂತಾ ಹೇಳಿದ್ದಾರೆ.

    ಕೋಲಾರದ ಬೈರೇಗೌಡ ನಗರದ ತಮ್ಮ ನಿವಾಸ ಸಮೀಪ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನ ಕರೆದಿರುವ ಶಾಸಕ ವರ್ತೂರು ಪ್ರಕಾಶ್ ಹೀಗೊಂದು ಗೊಂದಲದ ಹೇಳಿಕೆ ನೀಡಿದ್ದಾರೆ. ನನ್ನ ವಿರೋಧಿಗಳು ಹಾಗೂ ವಿರೋಧ ಪಕ್ಷದವರು ಕ್ಷೇತ್ರದಲ್ಲಿ ಹೀಗೊಂದು ಸುದ್ದಿ ಹರಡಿಸಿದ್ದಾರೆ ಎಂದು ಹೇಳಿದ್ದಾರೆ.

    ರಿಲೀಸ್ ಮಾಡ್ಲಿ ಬಿಡಿ ನಾನು ಗಂಡಸು ಆಲ್ಲವಾ? ಸಿಡಿಯಲ್ಲಿ ಏನಿದೆ ಅಂಥ ನೋಡೋಣ ಎಂದು ಸ್ವತಃ ಸಿಡಿ ಇರುವ ಬಗ್ಗೆ ಹೇಳಿಕೆ ನೀಡಿದರಲ್ಲದೆ, ಸಿಡಿ ಬಿಡುಗಡೆ ಮಾಡಲಿ ನೋಡೋಣ ಎಂದು ಶಾಸಕರು ಸವಾಲು ಎಸೆದಿದ್ದಾರೆ.

    ಅಶ್ಲೀಲ ಸಿಡಿ ಬಿಡುಗಡೆಯಾದ ಶಾಸಕರು ಮತ್ತೊಮ್ಮೆ ಶಾಸಕರಾಗಿದ್ದಾರೆ ಎನ್ನುವ ಮೂಲಕ ಸಿಡಿ ಬಿಡುಗಡೆಯಾದ ಶಾಸಕರ ಪರವಾಗಿ ಬ್ಯಾಟ್ ಬೀಸಿದರು. ಮಾಜಿ ಸಚಿವ ಹೆಚ್.ವೈ.ಮೇಟಿ ಸಿಡಿ ನೋಡಿದ್ದಿರಲ್ಲ, ಸಿಡಿ ಹೊರಗಡೆ ಬಂದ ಮೇಲೆ ಮೇಟಿ ಎಪಿಎಂಸಿ ಗೆದ್ದಕೊಂಡ್ರು ಮತ್ತೆ ಬಾಗಲಕೋಟೆಯಲ್ಲಿ ಎಂಎಲ್‍ಎ ಅಗುತ್ತಾರೆ ಎಂದು ಭವಿಷ್ಯ ನುಡಿದ್ರು.

    ನನ್ನ ವಿರೋಧಿಗಳು ರಾಜಕೀಯವಾಗಿ ನನ್ನನ್ನು ಮುಗಿಸಲು ಹಲವು ಪ್ರಯತ್ನಗಳನ್ನ ಮಾಡುತ್ತಿದ್ದಾರೆ, ನನ್ನ ವಿರುದ್ಧ ಜಾತಿ ನಿಂದನೆ ಸೇರಿದಂತೆ ಲೋಕಾಯುಕ್ತ, ಭೂ-ಕಬಳಿಕೆ ಪ್ರಕರಣಗಳನ್ನ ದಾಖಲಿಸಿದ್ದಾರೆ. ಕ್ಷೇತ್ರದ ಜನರು ತಲೆ ತಗ್ಗಿಸುವಂತಹ ಕೆಲಸವನ್ನು ನಾನು ಮಾಡಿಲ್ಲ ಮತ್ತು ಮುಂದೆಯೂ ಮಾಡೋದಿಲ್ಲ. ಏನೇ ಆದ್ರೂ ಕ್ಷೇತ್ರದ ಜನ ನನ್ನ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    https://youtu.be/fB20oIuMqSc

  • ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

    ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

    ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ಬಗ್ಗೆ ಅವಹೇಳನಕಾರಿಯಾಗಿ ಬರೆದು ಭಾವಚಿತ್ರ ಸಮೇತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಯುವಕನೋರ್ವನನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಡ್ಯಾನಿಯಲ್ ನ್ಯೂಟನ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಕ್ ಡ್ಯಾನಿಯಲ್ ಎಂದೇ ಹೆಸರುವಾಸಿಯಾಗಿರುವ ಡ್ಯಾನಿಯಲ್ ಮೂಲತಃ ಬಾಗಲಕೋಟೆಯ ಯುವಕ. ಹವ್ಯಾಸಿ ಹಾವು ಹಿಡಿಯುವ ವ್ಯಕ್ತಿಯಾಗಿದ್ದು, ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಮೇಟಿ ಅವರ ಬಗ್ಗೆ ಅವಹೇಳನಕಾರಿ ಭಾವಚಿತ್ರ ಹಾಕಿದ್ದಾನೆ. ಇಂತವರನ್ನು ಮಂದಿರ, ಮಸೀದಿ ಚರ್ಚ್‍ಗಳ ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸೋದು ಸರಿಯಲ್ಲ. ಹಾಗಂತ ನನಗೆ ಅವರ ಬಗ್ಗೆ ವ್ಯಯಕ್ತಿಕ ದ್ವೇಷವಿಲ್ಲ. ಸಮಾಜ ತಲೆತಗ್ಗಿಸುವಂತ ಕೃತ್ಯವೆಸಗಿದ ಇಂತವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ ಎಂಬ ಕಳಕಳಿ ಎಂದು ಪೋಸ್ಟ್ ಮಾಡಿದ್ದಾನೆ.

    ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಹೋದರರೆ ಎಷ್ಟು ಜನ ಚಿತ್ರದಲ್ಲಿರುವ ವ್ಯಕ್ತಿಯನ್ನು ಪವಿತ್ರ ಸ್ಥಳಕ್ಕೆ ಆಹ್ವಾನಿಸುತ್ತೀರಿ? ಈ ಬಗ್ಗೆ ಪ್ರಾಮಾಣಿಕವಾಗಿ ಕಮೆಂಟ್ ಮಾಡಿ ಎಂದು ಉಲ್ಲೇಖ ಮಾಡಿದ್ದಾನೆ. ಇಂತವರನ್ನು ಆಹ್ವಾನಿಸಿದರೆ ಸಮಾಜಕ್ಕೆ ಅದರಲ್ಲೂ ಯುವಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶಭಕ್ತ ನಾಗರಿಕರು ಇದನ್ನು ಅರ್ಥೈಸಿಕೊಂಡಿದ್ದೀರಿ ಎಂಬ ಭರವಸೆ ಇದೆ. ಇನ್‍ಕಿಲಾಬ್ ಜಿಂದಾಬಾದ್ ಎಂದು ಬರೆದಿದ್ದಾನೆ.

    ಹೆಚ್ ವೈ ಮೇಟಿಯವರನ್ನು ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿನ ಚರ್ಚ್ ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ಬರೆದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೇಟಿ ಬೆಂಬಲಿಗರು ಪೊಲೀಸರಿಗೆ ತಿಳಿಸಿದ್ದಾರೆ. ಅಹಿತಕರ ಘಟನೆ ತಡೆಯುವ ಹಿನ್ನೆಲೆಯಲ್ಲಿ ಸ್ನೇಕ್ ಡ್ಯಾನಿಯಲ್ ನನ್ನು ನವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸ್ನೇಕ್ ಡ್ಯಾನಿಯಲ್ ಹಾವು ಹಿಡಿಯೋದಕ್ಕೆ ಹೆಸರುವಾಸಿಯಾಗಿದ್ದಾನೆ. ಹಾವಿನ ಬಗ್ಗೆ ಮಕ್ಕಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸೋದರ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ಈತನ ಸದ್ಯದ ಪೋಸ್ಟ್ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

  • ಬಾರ್ಕೂರು ಸಂಸ್ಥಾನದಲ್ಲಿ ನ್ಯಾಯ ಗಂಟೆ ಬಾರಿಸಿದ ಮೇಟಿ

    ಬಾರ್ಕೂರು ಸಂಸ್ಥಾನದಲ್ಲಿ ನ್ಯಾಯ ಗಂಟೆ ಬಾರಿಸಿದ ಮೇಟಿ

    ಉಡುಪಿ: ರಾಸಲೀಲೆ ಪ್ರಕರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಎಚ್‍ವೈ ಮೇಟಿ ತನಗೆ ಅನ್ಯಾಯವಾಗಿದೆ ಅಂತ ದೈವಗಳ ಮೊರೆ ಹೋಗಿದ್ದಾರೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಮಹಾಸಂಸ್ಥಾನಕ್ಕೆ ಇಂದು ಭೇಟಿ ನೀಡಿ ಕುಂಡೋದರ ದೈವದ ಗುಡಿಯ ಮುಂದೆ ನಿಂತು ದೂರು ಗಂಟೆ ಹೊಡೆದರು. ತನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ದೈವದ ಮುಂದೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ವಿಶ್ವಭಾರತಿ ಸಂತೋಷ್ ಗುರೂಜಿ ಬಾರ್ಕೂರು ಸಂಸ್ಥಾನದ ಅಧಿಕಾರ ವಹಿಸಿಕೊಂಡ ನಂತರ ಪುರಾತನ ಕಾಲದ ಸಂಪ್ರದಾಯವನ್ನು ಮತ್ತೆ ಆರಂಭಿಸಿದ್ದಾರೆ. ತುಳುನಾಡನ್ನು ಆಳಿದ ಪಾಂಡ್ಯ ಅರಸರ ಕಾಲದಲ್ಲಿ ಇಂತದ್ದೊಂದು ನಂಬಿಕೆಯಿತ್ತು. ಯಾರಿಗಾದರೂ ಅನ್ಯಾಯವಾದ್ರೆ- ಮೋಸವಾದ್ರೆ- ಮನಸ್ಸಿನಲ್ಲಿ ಏನಾದ್ರು ಇಚ್ಛೆಗಳಿದ್ದರೆ ಅದನ್ನು ನೆನೆದುಕೊಂಡು ದೂರು ಗಂಟೆ ಬಾರಿಸಲಾಗುತ್ತಿತ್ತು. ಕುಂಡೋದರ ದೈವದ ಮುಂದೆ ನಿಂತು ತಮ್ಮ ನೋವನ್ನು ತೋಡಿಕೊಳ್ಳಲಾಗುತ್ತಿತ್ತು. ಇದೇ ಸಂಪ್ರದಾಯ ನಂಬಿಕೆಯನ್ನು ಮತ್ತೆ ಬಾರ್ಕೂರು ಸಸ್ಥಾನದ ಜೀರ್ಣೋದ್ಧಾರದ ನಂತರ ಆರಂಭಿಸಲಾಗಿದ್ದು ಮೇಟಿ ದೂರು ಗಂಟೆ ಬಾರಿಸಿದರು.

    ನಂತೋಷ ಭಾರತಿ ಗುರೂಜಿ ಸಮ್ಮುಖದಲ್ಲಿ ನಡೆದ ದೈವಪಾತ್ರಿಯ ದರ್ಶನ ಸೇವೆಯಲ್ಲಿ ಪಾಲ್ಗೊಂಡರು. ಸಂಸ್ಥಾನದ ಪ್ರಸಾದ ಪಡೆದುಕೊಂಡು ಸಮಸ್ಯೆಗಳಿಂದ ಹೊರಗೆ ಬರುವಂತೆ ಬೇಡಿಕೊಂಡಿದ್ದಾರೆ. ಇದಕ್ಕೂ ಮೊದಲು ಎಚ್ ವೈ ಮೇಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನಗೈದು ಬಂದಿದ್ದರು. ಗೆಳೆಯರು ಮತ್ತು ಸಂಬಂಧಿಕರ ಜೊತೆ ರಾಜ್ಯದ ಪ್ರಮುಖ ದೇವಸ್ಥಾನಗಳ ಭೇಟಿ ಕಾರ್ಯದಲ್ಲಿ ತೊಡಗಿದ್ದಾರೆ.

     

  • ರಾಸಲೀಲೆ ಕೇಸ್ ನಲ್ಲಿ ಮೇಟಿಗೆ ಕ್ಲೀನ್ ಚಿಟ್: 8 ತಿಂಗಳಿನಿಂದ ಗೈರಾಗಿದ್ದ ಸಂತ್ರಸ್ತೆ ಕೆಲಸಕ್ಕೆ ಹಾಜರ್

    ರಾಸಲೀಲೆ ಕೇಸ್ ನಲ್ಲಿ ಮೇಟಿಗೆ ಕ್ಲೀನ್ ಚಿಟ್: 8 ತಿಂಗಳಿನಿಂದ ಗೈರಾಗಿದ್ದ ಸಂತ್ರಸ್ತೆ ಕೆಲಸಕ್ಕೆ ಹಾಜರ್

    ಬಾಗಲಕೋಟೆ: ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತು ನಾಪತ್ತೆಯಾಗಿದ್ದ ಸಂತ್ರಸ್ತೆ ದಿಢೀರ್ ಪ್ರತ್ಯಕ್ಷ ವಾಗಿದ್ದಾರೆ.

    26 ನವೆಂಬರ್ 2016 ರಿಂದ ಇಂದಿನ ವರೆಗೆ ಕೆಲಸಕ್ಕೆ ಅನಧಿಕೃತ ಗೈರಾಗಿದ್ದ ಸಂತ್ರಸ್ತೆ, ಇಂದು ದಿಢೀರ್ ಆಗಮಿಸಿ, ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಗುಗ್ಗರಿಗೆ ಅರ್ಜಿ ಸಲ್ಲಿಸಿದ್ದಾರೆ.

    ಇತ್ತ ಸಂತ್ರಸ್ಥೆ ಎಂಟು ತಿಂಗಳು ಅನಧಿಕೃತ ಗೈರಾದರೂ ಕ್ರಮ ಕೈಗೊಳ್ಳದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಅವರು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದು ಬಂದರೆ ಕೆಲಸಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

    ಅನಾರೋಗ್ಯ ಮತ್ತು ಕೌಟುಂಬಿಕ ಕಾರಣಗಳಿಂದಾಗಿ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸಂತ್ರಸ್ತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

    ನಡೆದ ಘಟನೆ ಎಲ್ಲ ಮುಗಿದು ಹೋದ ಕಥೆ, ಈಗಾಗಲೇ ನಾನು ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಅದನ್ನು ಪುನಃ ನೆನಪಿಸೋದು ಬೇಡ. ಸದ್ಯ ಪುನಃ ಕೆಲಸಕ್ಕೆ ಹಾಜರಾಗಲು ಬಂದಿದ್ದೇನೆ. ಮುಂದೆ ಏನಾದರೂ ತೊಂದರೆಯಾದರೆ ನನ್ನ ಸಹಾಯಕ್ಕೆ ಬನ್ನಿ ಎಂದು ಮಾಧ್ಯಮಗಳಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ.

    ಏನಿದು ಪ್ರಕರಣ?
    ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಸಿಐಡಿ ಅಧಿಕಾರಿಗಳು ಕ್ಲೀನ್ ಚಿಟ್ ನೀಡಿದ್ದರು. ಪ್ರಕರಣದ ಸಂತ್ರಸ್ತೆ ದೂರು ನೀಡರಲಿಲ್ಲ. ತನಿಖೆಯ ವೇಳೆ ನನ್ನ ಮತ್ತು ಮೇಟಿ ಅವರದ್ದು ತಂದೆ-ಮಗಳ ಸಂಬಂಧ, ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ ಎನ್ನುವ ಅಂಶ ವರದಿಯಲ್ಲಿದೆ.

  • ರಾಸಲೀಲೆ ಪ್ರಕರಣ: ಮಾಜಿ ಸಚಿವ ಹೆಚ್‍ವೈ ಮೇಟಿಗೆ ಕ್ಲೀನ್ ಚಿಟ್?

    ರಾಸಲೀಲೆ ಪ್ರಕರಣ: ಮಾಜಿ ಸಚಿವ ಹೆಚ್‍ವೈ ಮೇಟಿಗೆ ಕ್ಲೀನ್ ಚಿಟ್?

    ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‍ವೈ ಮೇಟಿ ಅವರಿಗೆ ಸಿಐಡಿ ಕ್ಲೀನ್ ಚಿಟ್ ನೀಡುವ ಸಾಧ್ಯತೆಯಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಐಡಿಯಿಂದ ತನಿಖೆಗೆ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿಗೆ ಯಾರಿಂದಲೂ ಮೇಟಿ ಅವರ ವಿರುದ್ಧ ದೂರು ಬಂದಿರಲಿಲ್ಲ. ರಾಸಲೀಲೆಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯೂ ಸಹ ದೂರು ನೀಡಿರಲಿಲ್ಲ. ಹೀಗಾಗಿ ಯಾವುದೇ ದೂರು ಇಲ್ಲದ ಹಿನ್ನಲೆಯಲ್ಲಿ ಮೇಟಿ ಅವರಿಗೆ ಕ್ಲೀನ್ ಚಿಟ್ ಸಿಗೋ ಸಾಧ್ಯತೆ ಇದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸಿಐಡಿ ವರದಿ ಸಲ್ಲಿಸಲಿದೆ.

    ರಾಸಲೀಲೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಗುವ ಹಿನ್ನಲೆಯಲ್ಲಿ ಮತ್ತೆ ಸಚಿವ ಸ್ಥಾನ ಪಡೆಯಲು ಹೆಚ್‍ವೈ ಮೇಟಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಹೆಚ್‍ವೈ ಮೇಟಿ ಕಾಣಿಸಿಕೊಂಡಿದ್ದು, ಕ್ಲೀನ್ ಚಿಟ್ ವರದಿ ತೋರಿಸಿ ಮತ್ತೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಕೇಳುವ ಸಾಧ್ಯತೆಯಿದೆ.

    ಏನಿದು ಪ್ರಕರಣ: ಅಬಕಾರಿ ಸಚಿವರಾಗಿದ್ದ ಹೆಚ್‍ವೈ ಮೇಟಿ ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂರ್ಪಕದಲ್ಲಿ ತೊಡಗಿದ್ದ ಸಿಡಿಯನ್ನ ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಕಳೆದ ಡಿಸೆಂಬರ್‍ನಲ್ಲಿ ಬಿಡುಗಡೆ ಮಾಡಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆಯಾದ ಬಳಿಕ ಹೆಚ್‍ವೈ ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.