Tag: husband-wife

  • ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಮುಂಬೈ: ವಿವಾಹಿತನೊಬ್ಬ ಕಾರೊನೊಳಗೆ ತನ್ನ ಸ್ನೇಹಿತೆಗೆ ದೋಸೆ ತಿನ್ನಿಸುವ ವೇಳೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಪರೂಪದ ನಾಟಕೀಯ ದೃಶ್ಯ ಉತ್ತರ ಪ್ರದೇಶದ ಬಂದನಲ್ಲಿ ನಡೆದಿದೆ. ಪತಿಯ ಅನೇಕ ಅಕ್ರಮ ಸಂಬಂಧಗಳಿಗೆ ಬೇಸತ್ತ ಮಹಿಳೆ ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾಳೆ.

    ಮಹಿಳೆಯ ಪತಿ ಉತ್ತರ ಪ್ರದೇಶದ ಸರ್ಕಾರಿ ಜೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆತ ತನ್ನ ಸ್ನೇಹಿತೆಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಹತ್ತಿರದ ಹೋಟೆಲ್ ನಿಂದ ದೋಸೆ ತೆಗೆದುಕೊಂಡು ಬಂದು ಕಾರಿನೊಳಗೆ ಆಕೆಗೆ ತಿನ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಸಹೋದರನೊಂದಿಗೆ ಸ್ಥಳಕ್ಕೆ ಹೋದಾಗ ಪತಿ ರೆಡ್ ಹ್ಯಾಂಡ್ ಆಗಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ.

    ಪತಿ ಮಾಡಿದ ದ್ರೋಹಕ್ಕೆ ಕೋಪಗೊಂಡ ಪತ್ನಿ ಮತ್ತು ಆಕೆಯ ಸಹೋದರ ಇಬ್ಬರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ನೀಡಲು ಮುಂದಾಗಿದ್ದಾರೆ. ಆದರೆ ಭಾರತದಲ್ಲಿ ವ್ಯಭಿಚಾರ ಅಪರಾಧವೇನಲ್ಲ ಎಂದು ತಿಳಿಸಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ತನಿಖೆ ವೇಳೆ ತನ್ನ ಪತಿ ನನಗೆ ಮೊದಲ ಬಾರಿಗೆ ಮೋಸ ಮಾಡುತ್ತಿಲ್ಲ. ಮೊದಲಿನಿಂದಲೂ ಈತ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತಿ ವಿರುದ್ಧ ಮಹಿಳೆ ಆರೋಪಿಸಿದ್ದಾಳೆ.

    ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018ರಂದು ತೀರ್ಪು ನೀಡಿತ್ತು.

  • ಮೈತ್ರಿ ಸರ್ಕಾರದ ಪರಿಸ್ಥಿತಿ ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್‍ನಂತಿದೆ – ಲಕ್ಷ್ಮಣ ಸವದಿ

    ಮೈತ್ರಿ ಸರ್ಕಾರದ ಪರಿಸ್ಥಿತಿ ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್‍ನಂತಿದೆ – ಲಕ್ಷ್ಮಣ ಸವದಿ

    ಬೆಳಗಾವಿ: ರಾಜ್ಯ ಮೈತ್ರಿ ಸರ್ಕಾರದ ಪರಿಸ್ಥಿತಿ ಗಂಡ ಬಿಟ್ಟ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್‍ನಂತಿದೆ ಎಂದು ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

    ಅಥಣಿ ಪಟ್ಟಣದಲ್ಲಿರುವ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸದ್ಯ ಹೊಸದಾಗಿ ಮದುವೆಯಾದ ಗಂಡ ಹೆಂಡತಿಯಂತಿದೆ. ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ತಂತಿ ಇಲ್ಲ ಹೊಂದಾಣಿಕೆ ಇಲ್ಲ ಎಂದು ಲೇವಡಿ ಮಾಡಿದರು.

    ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಹೊಸ ಯೋಜನೆ ಇಲ್ಲ. ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಅಂತ ಹೇಳುತ್ತಾರೆ. ಆದರೆ ಆ ಯೋಜನೆ ಕೇಂದ್ರ ಸರ್ಕಾರದ್ದು. ಹಾಗಾದರೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿವ ಮೂಲಕ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೂ 20 ವರ್ಷಗಳ ಹಳೆಯ ರಾಜಕೀಯ ದ್ವೇಷವಿದೆ. 2004 ರಲ್ಲಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು ಆದರೆ ದೇವೇಗೌಡರು ಅದಕ್ಕೆ ಅಡ್ಡಗಾಲು ಹಾಕಿ ಆ ಅವಕಾಶ ಕಸಿದುಕೊಂಡಿದ್ದರು. ತಮ್ಮಿಂದ ಸಿಎಂ ಸ್ಥಾನ ಕಸಿದಿದ್ದಕ್ಕೆ ಸಿದ್ದು ಅವರ ಜೊತೆ ಮೈತ್ರಿ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಆ ಒಂದು ಆಕ್ರೋಶದಿಂದಲೇ ಸಿದ್ದರಾಮಯ್ಯ ಗೌಡರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ರಾಜಕೀಯ ಒಳ ಸುಳಿವು ನೋಡಿದಾಗ ಇದೆಲ್ಲ ಗೊತ್ತಾಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು.

  • ಟಾಯ್ಲೆಟ್‍ನಿಂದಾಗಿ ಮಗುವಿನೊಂದಿಗೆ ಮನೆ ತೊರೆದ ಪತ್ನಿ

    ಟಾಯ್ಲೆಟ್‍ನಿಂದಾಗಿ ಮಗುವಿನೊಂದಿಗೆ ಮನೆ ತೊರೆದ ಪತ್ನಿ

    ಕಾರವಾರ: ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂದು ಹೆಂಡತಿ ಗಂಡನನ್ನು ಬಿಟ್ಟು ಹೋದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಕಾರವಾರದ ಸುಂಕೇರಿ ಗ್ರಾಮದ ಗೀತಾ ಪ್ರೇಮಾನಂದ ಮಾಹಲೆ ಪತಿಯನ್ನು ಬಿಟ್ಟು ಹೋಗಿದ್ದಾರೆ. ಐದು ವರ್ಷದ ಹಿಂದೆ ಗೀತಾ ಅವರು ಕ್ಷೌರಿಕ ವೃತ್ತಿ ಮಾಡುವ ಯುವಕನನ್ನು ಮದುವೆಯಾಗಿದ್ದರು. ಮನೆಯಲ್ಲಿ ಟಾಯ್ಲೆಟ್ ಇರಲಿಲ್ಲ. ಹೇಗೂ ಹೊಂದಾಣಿಕೆ ಮಾಡಿಕೊಂಡು ಆತನೊಂದಿಗೆ ಸಂಸಾರ ಮಾಡುತ್ತಿದ್ದರು. ಬಳಿಕ ಪತ್ನಿ ಗಂಡನಿಗೆ ಟಾಯ್ಲೆಟ್ ಕಟ್ಟಿಸುವಂತೆ ಮನವೊಲಿಸಿದ್ದಾರೆ.

    ಇದಕ್ಕೆ ಒಪ್ಪಿದ ಆಕೆಯ ಪತಿ ಕಾರವಾರದ ನಗರಸಭೆಗೆ ಅರ್ಜಿ ಸಹ ನೀಡಿದ್ದಾರೆ. ಆದರೆ ಅರ್ಜಿ ಕೊಟ್ಟು 2 ವರ್ಷಗಳು ಕಳೆದರೂ ಟಾಯ್ಲೆಟ್ ಮಾತ್ರ ನಗರಸಭೆಯಿಂದ ಮಂಜೂರಾಗಲಿಲ್ಲ. ಇದಕ್ಕೆ ಸಾಲದೆಂಬಂತೆ ಈ ಬಾರಿಯ ಮಳೆಗೆ ಇದ್ದ ಒಂದು ಮನೆಯೂ ಕುಸಿದು ಹೋಗಿದ್ದು, ಇರಲು ಸೂರು ಕೂಡ ಇಲ್ಲದಂತಾಗಿದೆ. ಆದರೂ ಆಕೆ ಆತನೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ ಬಯಲು ಶೌಚಕ್ಕೆ ಹೋಗಲು ಇಷ್ಟವಾಗದೇ ತನ್ನ ಪುಟ್ಟ ಮಗುವಿನೊಂದಿಗೆ ಮನೆಬಿಟ್ಟು ತೆರಳಿದ್ದು, ಮನೆ ಕಟ್ಟಿಸಲಾಗದಿದ್ದರೂ ಕೊನೆ ಪಕ್ಷ ಟಾಯ್ಲೆಟ್ ಕಟ್ಟುವಂತೆ ಹೇಳಿ ತೆರಳಿದ್ದಾರೆ.

    ಇದರಿಂದ ಮನನೊಂದ ಪತಿ ನಗರಸಭೆಗೆ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಅವರ ಮನವಿಗೆ ಸ್ಪಂದಿಸದೇ ಅಸಡ್ಡೆ ತೋರುತ್ತಿದ್ದಾರೆ. ಒಂದು ಟಾಯ್ಲೆಟ್ ಈತನ ಕುಟುಂಬವನ್ನೇ ಬೇರ್ಪಡಿಸಿದ್ದು, ಯಾತನೆಯ ಬದುಕು ಸಾಗಿಸುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡನ ಮೇಲಿನ ಕೋಪವನ್ನು ಕಾರಿನ ಮೇಲೆ ತೀರಿಸಿಕೊಂಡ ಪತ್ನಿ

    ಗಂಡನ ಮೇಲಿನ ಕೋಪವನ್ನು ಕಾರಿನ ಮೇಲೆ ತೀರಿಸಿಕೊಂಡ ಪತ್ನಿ

    ಮಂಡ್ಯ: ಗಂಡನ ಮೇಲಿನ ಕೋಪಕ್ಕೆ ಆತನ ಕಾರನ್ನು ಹೆಂಡತಿಯೇ ಕಲ್ಲಿನಿಂದ ಜಖಂಗೊಳಿಸಿರುವ ಘಟನೆ ಜಿಲ್ಲೆಯ ನಾಗಮಂಗಲದ ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶ್ರೀನಿವಾಸ್ ಮತ್ತು ಭಾಗ್ಯ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದ ಗಂಡನ ಮೇಲಿನ ಕೋಪದಿಂದ ಭಾಗ್ಯ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮುಂದಿನ ಗಾಜಿನ ಮೇಲೆ ಕಲ್ಲನ್ನು ಎಸೆದು ಜಖಂಗೊಳಿಸಿದ್ದಾರೆ.

    ಹೆಂಡತಿ ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾಳೆ ಎಂದು ಪತಿ ಶ್ರೀನಿವಾಸ್ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮಿಬ್ಬರ ಜಗಳವನ್ನು ಶ್ರೀನಿವಾಸ್ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಹೆಂಡತಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಪತಿಯ ಆರೋಪವನ್ನು ಪತ್ನಿ ಗೀತಾ ತಳ್ಳಿ ಹಾಕಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಪುಂಸಕ ಎಂದ ಪತ್ನಿ – ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನ ಮಾವನಿಗೆ ಕಳಿಸ್ದ!

    ನಪುಂಸಕ ಎಂದ ಪತ್ನಿ – ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನ ಮಾವನಿಗೆ ಕಳಿಸ್ದ!

    ಹೈದರಾಬಾದ್: ಮಹಿಳೆಯೊಬ್ಬರು ಪತಿಗೆ ನಪುಂಸಕ ಎಂದಿದ್ದಕ್ಕೆ ಪತಿ ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನು ತನ್ನ ಮಾವನಿಗೆ ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ವಿಬಾವಾಸು ಬಂಧಿತ ಆರೋಪಿ. ಈಗ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದು ಜೈಲಿಗೆ ಕಳುಹಿಸಿದ್ದಾರೆ. ಪತ್ನಿ ತನ್ನ ಪತಿ ನಪುಂಸಕ ಎಂದು ವಿಚ್ಛೇದನ ಪಡೆಯಲು ಕೋರ್ಟ್ ನ ಮೆಟ್ಟಿಲೇರಿದ್ದಾರೆ. ಆದರೆ ಇದರಿಂದ ಕೋಪಕೊಂಡ ಆರೋಪಿ ವಿಬಾವಾಸು ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನು ಪತ್ನಿಯ ತಂದೆ ಮತ್ತು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದಾನೆ ಎಂದು ಇನ್ಸ್ ಪೆಕ್ಟರ್ ಡಿ. ಚೈತ್ರಾ ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    ಹೈದರಾಬಾದ್ ನ ಲಾಲ್ ಬಹದ್ದೂರ ನಗರದ ನಿವಾಸಿ ವಿಬಾವಾಸು ಮತ್ತು ಮುತಾಮಿಜ್ ನಗರ ನಿವಾಸಿ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) 2016 ರಲ್ಲಿ ಮದುವೆಯಾಗಿತ್ತು. ಎರಡು ಕುಟುಂಬದವರು ನೋಡಿ ಒಪ್ಪಿ ಮದುವೆ ಮಾಡಿದ್ದರು. ಆದರೆ ಈ ದಂಪತಿ ಮದುವೆಯಾಗಿ ಕೇವಲ 15ದಿನಗಳ ಮಾತ್ರ ಜೊತೆಯಲ್ಲಿದ್ದರು. ಆದರೆ ಪದೇ ಪದೇ ಇಬ್ಬರು ಜಗಳ ಮಾಡುತ್ತಿದ್ದರು. ಇದರಿಂದ ಪತ್ನಿ ಮೀನಾಕ್ಷಿ ತನ್ನ ತವರು ಮನೆಗೆ ಹಿಂದಿರುಗಿದ್ದರು. ನಂತರ ಎರಡೂ ಕುಟುಂಬದವರು ಅವರಿಗೆ ಬುದ್ಧಿ ಹೇಳಿ ಒಂದು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ.

    ಕೊನೆಗೆ ಮೀನಾಕ್ಷಿ ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿದ್ದರು. ಆಗ ಪತ್ನಿ ಮೀನಾಕ್ಷಿ ಕೋರ್ಟ್ ನಲ್ಲಿ ಎಲ್ಲರ ಮುಂದೆ ನನ್ನ ಪತಿ ನಪುಂಸಕ ಎಂದು ಕಾರಣ ಕೊಟ್ಟಿದ್ದಾರೆ. ಪತ್ನಿ ಹೇಳಿದ ಕಾರಣವನ್ನು ಕೇಳಿದ ವಿಬಾವಾಸು ಕೋಪಗೊಂಡು ಇನ್ನೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು, ಅದನ್ನು ಬೇರೆಯವರ ಕೈಯಲ್ಲಿ ರೆಕಾರ್ಡ್ ಮಾಡಿಸಿದ್ದಾನೆ. ಬಳಿಕ ಆ ಪೋರ್ನ್ ವಿಡಿಯೋವನ್ನು ಪತ್ನಿಯ ತಂದೆ ಮತ್ತು ಚಿಕ್ಕಮ್ಮಗೆ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ವಿಬಾವಾಸು ಕಳುಹಿಸಿದ್ದ ವಿಡಿಯೋವನ್ನು ನೋಡಿದ ತಕ್ಷಣ ತಂದೆ ಮತ್ತು ಚಿಕ್ಕಮ್ಮ ಕೂಡಲೇ ಚೆನ್ನೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆರೋಪಿ ವಿಚಾರಣೆ ವೇಳೆ ತಾನೇ ವಿಡಿಯೋ ಮಾಡಿ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಆರೋಪಿಯ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ಕಿರುಕುಳ, ಅಶ್ಲೀಲ ವಿಡಿಯೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಜೈಲಿಗೆ ಕಳುಹಿಸಿದ್ದಾರೆ.

  • ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ- ನಡುರಸ್ತೆಯಲ್ಲೇ ಇಳಿದು ಓಡಿದ ಪತಿ-ಪತ್ನಿ!

    ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ- ನಡುರಸ್ತೆಯಲ್ಲೇ ಇಳಿದು ಓಡಿದ ಪತಿ-ಪತ್ನಿ!

    ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದಿದೆ.

    ಕುಂದಾಪುರದ ಕಾರ್ತಿಕ್ ಎಂಬವರು ತಮ್ಮ ಐ20 ಕಾರಲ್ಲಿ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರ್ತಿಕ್ ಮತ್ತು ಅವರ ಪತ್ನಿ ನಡುರಸ್ತೆಯಲ್ಲೇ ಕೆಳಗಿಳಿದಿದ್ದಾರೆ.

    ಕಾರಿನೊಳಗಿದ್ದ ಪತಿ-ಪತ್ನಿ ನಡುರಸ್ತೆಯಲ್ಲಿ ಕಾರು ಬಿಟ್ಟು ಓಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಕೆಲ ಹೊತ್ತಲ್ಲೇ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದೆ. ಕೂಡಲೇ ಬೆಂಕಿ ನಂದಿಸಿದ್ದು, ಕಾರು ಸುಟ್ಟು ಕರಕಲಾಗಿತ್ತು. ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ಬೆಳಗಾವಿ: ಪತಿ ಮತ್ತು ಪತ್ನಿ ಇಬ್ಬರು ಬೆಡ್ ರೂಮ್ ನಲ್ಲಿ ಇರುವ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ನಡೆದಿದೆ.

    ಪೀರನವಾಡಿಯ ಬಾಡಿಗೆ ಮನೆಯಲ್ಲಿ ಸಿಂಧೆ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪಕ್ಕದ ಮನೆಯ ನಿವಾಸಿ ಸುನಿಲ್ ವಡ್ಡರ ಈ ರೀತಿಯ ನೀಚ ಕೃತ್ಯವನ್ನು ಎಸಗಿದ್ದಾನೆ.

    ಆರೋಪಿ ಯುವಕ ಮನೆಯ ಕಿಟಕಿಯಲ್ಲಿ ತನ್ನ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದನು. ಮೊಬೈಲ್ ಗೆ ತಂತಿ ಕಟ್ಟಿ ಕಿಟಕಿಯಲ್ಲಿ ಇಡುತ್ತಿದ್ದನು. ಕೆಲವು ದಿನಗಳಿಂದ ಈ ರೀತಿಯ ಕೃತ್ಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಶನಿವಾರ ಮೊಬೈಲ್ ಇಡುವಾಗ ಸಪ್ಪಳವಾಗಿದೆ. ಆಗ ದಂಪತಿ ಗಮನಿಸಿ ನೋಡಿದ್ದಾರೆ. ಈ ವೇಳೆ ಮೊಬೈಲ್ ಇಟ್ಟಿರುವುದು ತಿಳಿದಿದೆ. ನಂತರ ಮೊಬೈಲ್ ತೆಗೆದು ನೋಡಿದಾಗ ಆತನ ಕೃತ್ಯ ಬೆಳಕಿಗೆ ಬಂದಿದೆ.

    ಆರೋಪಿ ಸುನಿಲ್ ತನ್ನ ಮೊಬೈಲ್ ನೀಡುವಂತೆ ದಂಪತಿಗೆ ಕೇಳಿದ್ದಾನೆ. ಆದರ ಪತಿ ಸಂಶಯಗೊಂಡು ಸುನಿಲ್ ಗೆ ಮೊಬೈಲ್ ಮರಳಿ ನೀಡಿಲಿಲ್ಲ. ಬಳಿಕ ದಂಪತಿ ಮೊಬೈಲ್ ಸಮೇತ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಸದ್ಯಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಸುನಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ.