ಹಾವೇರಿ: ಪತಿ ಅಂತ್ಯಕ್ರಿಯೆ ವೇಳೆ ಪತ್ನಿಯೂ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರಿನ (Ranebennur) ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಷ್ಟು ದಿನ ಅನ್ಯೂನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ
ಹೈದರಾಬಾದ್: 2,000 ರೂ.ಗೆ ಸೆಕ್ಸ್ ಲೈವ್ ಸ್ಟ್ರೀಮ್ ಮಾಡ್ತಿದ್ದ ದಂಪತಿಯನ್ನು (Hyderabad Couple) ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ದಂಪತಿಯ ಬಗ್ಗೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ (Two Daughters). ಪತಿ ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದ ಕಾರಣ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಪತಿ-ಪತ್ನಿ ಇಬ್ಬರು ಕೃತ್ಯಕ್ಕೆ ಇಳಿದಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 2,000 ರೂ.ಗೆ ಸೆಕ್ಸ್ ಲೈವ್ಸ್ಟ್ರೀಮ್ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೃತ್ಯದಲ್ಲಿ ಭಾಗಿ
ಆರ್ಥಿಕ ಕೊರತೆಯಿಂದ ಮಕ್ಕಳಿಬ್ಬರ ಕಾಲೇಜು ಶುಲ್ಕ (college fees) ಪಾವತಿಸಿರಲಿಲ್ಲ. ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಆಗಿದ್ದರು. ಒಬ್ಬ ಮಗಳು ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದರು, ಮತ್ತೊಬ್ಬಳು ಮಗಳು ಇತ್ತೀಚಿಗೆ ನಡೆದ intermediate ಪರೀಕ್ಷೆಯಲ್ಲಿ 470ಕ್ಕೆ 468 ಅಂಕ ಗಳಿಸಿ, ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸಿದ್ದಳು. ಈ ನಡುವೆ ಆಟೋ ಚಾಲಕನಾಗಿದ್ದ ಪತಿ ಅನಾರೋಗ್ಯದಿಂದ ಬಳಲುತ್ತಿದ್ದ, ಚಿಕಿತ್ಸೆ ಪಡೆಯೋದಕ್ಕೂ ಹಣ ಇರಲಿಲ್ಲ. ಹೀಗಾಗಿ ಸುಲಭವಾಗಿ ಹಣಗಳಿಸಲು ತಮ್ಮ ಲೈಂಗಿಕ ಕೃತ್ಯವನ್ನು ಲೈವ್ಸ್ಟ್ರೀಮ್ ಮಾಡುವ ಕೆಲಸಕ್ಕೆ ಮುಂದಾದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ರೇಪ್; ಟಿಎಂಸಿ ನಾಯಕ ಸೇರಿ ಮೂವರ ಬಂಧನ
ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಅಂಬರ್ಪೇಟೆಯ ಮಲ್ಲಿಕಾರ್ಜುನ ನಗರದಲ್ಲಿರುವ ತಮ್ಮ ಮನೆಯಲ್ಲಿ ದಂಪತಿಯನ್ನ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ದಂಪತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮಕ್ಕಳಿಬ್ಬರಿಗೂ ಪೋಷಕರ ಈ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ಗುರುತು ಮರೆಮಾಚಲು ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್
ದಂಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಕೃತ್ಯ
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ (Cab Driver) ಪತಿ ಸುಲಭವಾಗಿ ಹಣ ಗಳಿಸುವ ಉದ್ದೇಶ ಹೊಂದಿದ್ದ. ಇದಕ್ಕಾಗಿ ಇಬ್ಬರೂ ಒಪ್ಪಿಕೊಂಡು ಕೃತ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಲೈವ್ ಸ್ಟ್ರೀಮ್ಗೆ ಯುವಕರು, ವೃದ್ಧದಿಂದ 2,000 ರೂ. ಪಡೆಯುತ್ತಿದ್ದರು ಮತ್ತು ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 3ನೇ ಪತ್ನಿಯ ಹತ್ಯೆಗೈದು ಗೋಣಿ ಚೀಲದಲ್ಲಿ ಪ್ಯಾಕ್ – ಲಗೇಜ್ ಎಂದು ಸರ್ಕಾರಿ ಬಸ್ಸಲ್ಲಿ ಕಳುಹಿಸಿದ್ದವ 24 ವರ್ಷಗಳ ಬಳಿಕ ಅರೆಸ್ಟ್
ಸಾಂದರ್ಭಿಕ ಚಿತ್ರ
ಪತ್ನಿ ಗೃಹಿಣಿಯಾಗಿದ್ದು, ದಂಪತಿಗೆ ಇಬ್ಬರು ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿದ್ದಾರೆ. ಮಕ್ಕಳಿಬ್ಬರಿಗೂ ಪೋಷಕರ ಈ ಕೃತ್ಯ ತಿಳಿದಿರಲಿಲ್ಲ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದಲೇ ಈ ಕೃತ್ಯಕ್ಕಿಳಿದಿದ್ದ ದಂಪತಿ ಗುರುತು ಮರೆಮಾಚಲು ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳುತ್ತಿದ್ದರು. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್
ದಂಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಕಲಬುರಗಿ: ಸೆಕ್ಸ್ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸೇಡಂ (Sedam) ತಾಲೂಕಿನ ಬಟಗೇರಾ (Batgera) ಗ್ರಾಮದಲ್ಲಿ ನಡೆದಿದೆ.
ತನಿಖೆ ನಡೆಸಿದಾಗ, ಶೇಖಪ್ಪ ರಾತ್ರಿಯಿಂದ ಎರಡು ಬಾರಿ ಸೆಕ್ಸ್ಗೆ (Sex) ಒತ್ತಾಯ ಮಾಡಿದ್ದ. ಆದರೆ ಎರಡೂ ಬಾರಿಯೂ ಸೆಕ್ಸ್ಗೆ ನಿರಾಕರಿಸಿದ್ದಕ್ಕೆ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ಕೊಚ್ಚಿ ಹಾಕು ನೋಡೋಣ ಎಂದು ಪತ್ನಿ ಹೇಳಿದ್ದಾಳೆ. ಆಗ ಶೇಖಪ್ಪ ಕೆರಳಿ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಚಾಮರಾಜಗರ: ಪತ್ನಿಯ ಕರಿಮಣಿ ರೀಲ್ಸ್ಗೆ (Reels) ಮನನೊಂದು ಪತಿ ಕುಮಾರ್ ಆತ್ಮಹತ್ಯೆ (Suicide) ಮಾಡಿಕೊಂಡು ಸಾವನ್ನಪ್ಪಿದ್ದ ಪ್ರಕರಣಕ್ಕೆ ಆತನ ಪತ್ನಿ (Wife) ಪ್ರತಿಕ್ರಿಯಿಸಿ ಗಂಡ ಸಾಲಬಾಧೆಯಿಂದ ಮೃತಪಟ್ಟಿದ್ದು ಎಂದು ಸ್ಟಷ್ಟನೆ ನೀಡಿದ್ದಾರೆ.
ನನ್ನ ಮೇಲೆ ಅವರ ಕುಟುಂಬಸ್ಥರು ಸುಮ್ಮನೆ ಆರೋಪಿಸುತ್ತಿದ್ದಾರೆ. ನಿಜವಾಗಿಯೂ ನನ್ನ ಪತಿ ಸಾವಿಗೆ ಅವರು ಮಾಡಿಕೊಂಡಿದ್ದ ಸಾಲವೇ ಕಾರಣ. ಕುಮಾರ್ ದಿನ ನಿತ್ಯ ಕುಡಿಯುವ ಮತ್ತು ಇಸ್ಪೀಟ್ ಆಡುವ ಚಟವಿತ್ತು. ಈ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲವೆಂದು ಪತಿ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ವಾರ್ಡನ್, ತಾಲೂಕಾಧಿಕಾರಿ ವಿರುದ್ಧ ದೂರು ದಾಖಲು
ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು. ರೂಪಾಳ ಈ ರೀಲ್ಸ್ ನೋಡಿ ಕುಮಾರ್ ಸ್ನೇಹಿತರು ಆತನನ್ನು ರೇಗಿಸುತ್ತಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಕುಮಾರ್ ಕುಟುಂಬಸ್ಥರು ರೂಪಾ ಮೇಲೆ ಆರೋಪ ಮಾಡಿದ್ದರು. ಇದನ್ನೂ ಓದಿ: ಹೃದಯಾಘಾತ – ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಸಾವು!
ಈ ರೀಲ್ಸ್ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ಇದನ್ನೂ ಓದಿ: ಬಣ್ಣದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ನ ಗೃಹಿಣಿಯ (House Wife) ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪತ್ನಿಯೇ ಕೊಲೆ (Murder) ಮಾಡಿರುವುದು ಬೆಳಕಿಗೆ ಬಂದಿದ್ದು ಕಥೆ ರೋಚಕ ತಿರುವು ಪಡೆದುಕೊಂಡಿದೆ.
ಪ್ರೇಮಲತಾ (35) ಮೃತ ಗೃಹಿಣಿ. ಸಂಜೆ ಮಕ್ಕಳು ಶಾಲೆಯಿಂದ ವಾಪಸ್ ಮನೆಗೆ ಬಂದು ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸಾವಿನ (Death) ಬಗ್ಗೆ ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಆಕೆಯ ಪತಿಯೇ ಕೊಲೆ ಮಾಡಿರುವುದಾಗಿ ಶಂಕೆ ಸಹ ವ್ಯಕ್ತವಾಗಿತ್ತು. ಆದರೆ ಈಗ ಪ್ರಕರಣದಲ್ಲಿ ಗಂಡನೇ ಕೊಲೆ ಮಾಡುವಂತೆ ಸ್ನೇಹಿತನಿಗೆ ಸುಪಾರಿ ಕೊಟ್ಟಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಈಶ್ವರಪ್ಪ ಮಾತು ಕೇಳಿದರೆ ದೊಡ್ಡ ಅನಾಹುತಕ್ಕೆ ಹೋಗುತ್ತದೆ: ಎಂ.ಬಿ ಪಾಟೀಲ್
ತನಿಖೆಯಲ್ಲಿ ಸತ್ಯ ಬಯಲು:
ಶಿವಶಂಕರ್ಗೆ ವಿನಯ್ ಎಂಬ ಸ್ನೇಹಿತನಿದ್ದನು. ಆರೋಪಿ ವಿನಯ್ ತುಮಕೂರಿನ ಹುಣಸಮಾರನ ಹಳ್ಳಿಯವನು. ಕಳೆದ ವರ್ಷ ವಿನಯ್ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಹೇಳಿ ಬಿಂಬಿಸಿದ್ದನು. ವಿನಯ್ ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿ ಎಲ್ಲರನ್ನು ನಂಬಿಸಿದ್ದನು. ಈ ಪ್ರಕರಣದಲ್ಲಿ ವಿನಯ್ ಯಾವುದೇ ಅನುಮಾನ ಬಾರದಂತೆ ತಪ್ಪಿಸಿಕೊಂಡಿದ್ದ. ಇದನ್ನೂ ಓದಿ: ಐಪಿಎಸ್ ಪ್ರತಾಪ್ ರೆಡ್ಡಿ ದಿಢೀರ್ ರಾಜೀನಾಮೆ – ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗ ಗುಡ್ಬೈ
ಇದೇ ರೀತಿ ಶಿವಶಂಕರ್ಗೂ ಪತ್ನಿ ಮೇಲೆ ಅನುಮಾನವಿತ್ತು. ಅದೇ ಕಾರಣಕ್ಕೆ ಮನೆಯ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಹಾಕಿಸಿದ್ದನು. ಪತ್ನಿಯ ಮೇಲೆ ಇರುವ ಅನುಮಾನದ ಬಗ್ಗೆ ಶಿವಶಂಕರ್ ವಿನಯ್ಗೆ ತಿಳಿಸಿದ್ದಾನೆ. ಆಗ ವಿನಯ್ ನಾನು ಪತ್ನಿಯನ್ನು ಯಾವ ರೀತಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದೇ ಎಂಬುದನ್ನು ಹೇಳಿದ್ದಾನೆ. ಈ ಮಾತು ಕೇಳಿದ ಶಿವಶಂಕರ್ ನನ್ನ ಹೆಂಡತಿಯನ್ನು ನೀನೇ ಕೊಲೆ ಮಾಡಬೇಕು. ಆದರೆ ಒಬ್ಬನೇ ಕೊಲೆ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾನೆ. ಬಳಿಕ ವಿನಯ್ಗೆ ನೀನು ಕೊಲೆ ಮಾಡು ನಾನು ಸಹಾಯ ಮಾಡುತ್ತೇನೆ ಎಂದು ಶಿವಶಂಕರ್ ಸುಪಾರಿ ನೀಡಿ ಇಬ್ಬರು ಕೊಲೆಗೆ ಸಂಚು ರೂಪಿಸಿದ್ದರು. ಇದನ್ನೂ ಓದಿ: ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್, ಸ್ವಾಮಿನಾಥನ್ಗೆ ಭಾರತ ರತ್ನ
ಪ್ಲ್ಯಾನ್ ಪ್ರಕಾರ ವಿನಯ್ ಮಂಗಳವಾರ ಕೊಲೆ ಮಾಡಲು ಶಿವಶಂಕರ್ ಮನೆಗೆ ಬಂದಿದ್ದ. ಶಿವಶಂಕರ್ ಅಂದು ಮನೆಯಲ್ಲಿದ್ದ ಎಲ್ಲ ಸಿಸಿಟಿವಿಗಳನ್ನು ಆಫ್ ಮಾಡಿ ಹೋಗಿದ್ದ. ಬಳಿಕ ಮನೆಗೆ ಬಂದ ವಿನಯ್ ಪ್ರೇಮಲತಾ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ನೇಣು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಮನೆಗೆ ಬಂದ ಶಿವಶಂಕರ್ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿಲು ಪ್ರಯತ್ನಿಸಿದ್ದ,. ಆದರೆ ಇದೀಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಜೊತೆ ಡ್ಯಾನ್ಸ್ ಮಾಸ್ಟರ್ ಫೋಟೋ – ಭಜರಂಗದಳದ ಕಾರ್ಯಕರ್ತರಿಂದ ಹಲ್ಲೆ 7 ಜನ ಅರೆಸ್ಟ್
ಹಾಸನ: ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ (Conductor) ಮೇಲೆ ಮಹಿಳೆಯರು ಹಲ್ಲೆ ಮಾಡಿ ಮೊಬೈಲ್ (Mobile) ಒಡೆದು ಹಾಕಿರುವ ಘಟನೆ ಹಾಸನ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ (Bus Stop) ಮಂಗಳವಾರ ರಾತ್ರಿ ನಡೆದಿದೆ.
ಹಾಸನದಿಂದ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಬಸ್ ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿದ್ದರೂ ಮೂವರು ಮಹಿಳೆಯರು ಬಸ್ ಹತ್ತಿದ್ದಾರೆ. ಈ ವೇಳೆ ನಿರ್ವಾಹಕ ಸೀಟ್ ಇಲ್ಲ, ಯಾರಾದರೂ ಇಳಿಯುವವರಿದ್ದರೆ ಬಸ್ ನಿಲ್ದಾಣದಲ್ಲಿ ಇಳಿಯಿರಿ ಎಂದಿದ್ದಾರೆ. ಬಸ್ ಹೊರಟ ನಂತರ ಮೂವರು ಅನ್ಯಕೋಮಿನ ಮಹಿಳೆಯರು ಬಸ್ ನಿಲ್ಲಿಸಿ ಇಳಿಯುತ್ತೇವೆ ಎಂದಿದ್ದಾರೆ. ಅದಕ್ಕೆ ಕಂಡಕ್ಟರ್ ನಾನು ಅಲ್ಲಿಯೇ ಹೇಳಿದೆ. ಹೀಗೇಕೆ ಮಾಡುತ್ತೀರಿ ಮುಂದೆ ನಿಲ್ಲಿಸುತ್ತೇನೆ ಅಲ್ಲಿ ಇಳಿಯಿರಿ ಎಂದು ನಿರ್ವಾಹಕ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ತುಮಕೂರಿನಿಂದ ಅಯೋಧ್ಯಾಧಾಮ್ಗೆ ಹೊರಟ ವಿಶೇಷ ರೈಲು
ಮನವಿಗೆ ಸ್ಪಂದಿಸದ ಮಹಿಳೆಯರು ಮಾತ್ರ ಚಲಿಸುತ್ತಿದ್ದ ಬಸ್ನಿಂದಲೇ ಇಳಿಯುವ ಪ್ರಯತ್ನ ಮಾಡಿದಾಗ ಚಾಲಕ ಬಸ್ ನಿಲ್ಲಿಸಿದ್ದಾರೆ. ಇದರಿಂದ ಕೆರಳಿದ ಮಹಿಳೆಯರು ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇದನ್ನು ಮೊಬೈಲ್ನಲ್ಲಿ ನಿರ್ವಾಹಕ ವಿಡಿಯೋ ಮಾಡಿದ್ದಾರೆ. ಈ ವೇಳೆ ಮೊಬೈಲ್ ಕಸಿದುಕೊಂಡು ಅದನ್ನು ಸಹ ಮಹಿಳೆಯರು ಒಡೆದುಹಾಕಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ದೇಗುಲ ದಂಗಲ್ – ಬಹುಮನಿ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಆಗ್ರಹ
ಈ ವೇಳೆ ಮೂವರು ಅನ್ಯಕೋಮಿನ ಮಹಿಳೆಯರು ಮತ್ತು ಬಸ್ ಚಾಲಕ, ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ನಿರ್ವಾಹಕ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೂವರು ಮಹಿಳೆಯರ ವರ್ತನೆ ಬಗ್ಗೆ ಬಸ್ನಲ್ಲಿದ್ದ ಪ್ರಯಾಣಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ನಿರ್ವಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಮೊಬೈಲ್ ಕೊಡಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಸ್ಮೆಟಿಕ್ ಸರ್ಜರಿಗೆ ಬಂದವಳಿಂದ ಲೂಟಿ – ವೈದ್ಯನಿಗೆ 6 ಕೋಟಿ ಪಂಗನಾಮ
ಕಂಡಕ್ಟರ್ ಘಟನೆ ಕುರಿತು ದೂರು ಕೊಡಲು ಮುಂದಾಗಿದ್ದು, ಅನ್ಯಕೋಮಿನ ಮಹಿಳೆಯ ಪತಿ ಸ್ಥಳಕ್ಕೆ ಆಗಮಿಸಿ ನಿರ್ವಾಹಕನಲ್ಲಿ ಕ್ಷಮೆಯಾಚಿಸಿದ್ದಾರೆ. ಬಳಿಕ ಹೊಸ ಮೊಬೈಲ್ ಕೊಡಿಸಿ ಪೊಲೀಸ್ ಠಾಣೆಗೆ ದೂರು ನೀಡದಂತೆ ಮನವಿ ಮಾಡಿಕೊಂಡಿದ್ದಾರೆ. ನಂತರ ಕಂಡಕ್ಟರ್ ಪೊಲೀಸ್ ಠಾಣೆಗೆ ದೂರು ನೀಡದೇ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿಕೊಂಡು ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?
ಬೆಂಗಳೂರು: ಗೃಹಿಣಿ (House Wife) ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾಲಕ್ಷ್ಮಿ ಲೇಔಟ್ನ (Mahalakshmi Layout) ಶ್ರೀ ಕಂಠೇಶ್ವರ ನಗರದಲ್ಲಿ ನಡೆದಿದೆ.
ಪ್ರೇಮಲತಾ (35) ಸಾವನ್ನಪ್ಪಿದ ಮಹಿಳೆ. ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪತಿ ಶಿವಶಂಕರ್ ಕೊಲೆ ಮಾಡಿರಬಹುದು ಎಂಬ ಆನುಮಾನವಿದೆ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ನೇಣು ಬಿಗಿಯಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯ ಗಂಡನೇ ಕೊಲೆ ಮಾಡಿ ನೇಣು ಬಿಗಿದಿರಬಹುದು ಎಂಬ ಶಂಕೆಯನ್ನು ಪ್ರೇಮಲತಾ ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದುವೆ ಮಾಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಲೆಗೈದ ಮಗ
ದಾವಣಗೆರೆ: ಮದ್ಯ ಸೇವನೆಗೆ ಪತ್ನಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಪತಿಯೇ (Husband) ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯನ್ನ (Wife) ಹಲ್ಲೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕದರಪ್ಪ (60) ಹಲ್ಲೆ ನಡೆಸಿದ ಆರೋಪಿ. ಪತಿ ಮಾಡಿರುವ ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆ ಸಾಕಮ್ಮ (55) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರ ದಾರುಣ ಸಾವು, ಮೂವರ ಸ್ಥಿತಿ ಗಂಭೀರ
ದಂಪತಿ ಹಲವು ವರ್ಷಗಳಿಂದ ಬಡಗೊಲ್ಲರಹಟ್ಟಿ, ಸೀಗೆಹಟ್ಟಿ ಗ್ರಾಮದವರ ಜೊತೆಗೂಡಿ ಕುರಿಗಳನ್ನು ಮೇಯಿಸುತ್ತಿದ್ದರು. ಅದರಂತೆಯೇ ಕುರಿಗಳನ್ನು ಮೇಯಿಸಲು ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮ ಸೇರಿ ಸುತ್ತಲ ಗ್ರಾಮಗಳಲ್ಲಿ ವಾರದಿಂದ ತೋಟವೊಂದರಲ್ಲಿ ತಂಗಿದ್ದರು. ಮದ್ಯ ವ್ಯಸನಿಯಾಗಿದ್ದ ಆರೋಪಿ ಕದರಪ್ಪ, ಹಣ ನೀಡುವಂತೆ ಪತ್ನಿ ಸಾಕಮ್ಮನನ್ನು ಪದೆ ಪದೇ ಪೀಡಿಸುತ್ತಿದ್ದನು. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ!
ಪತ್ನಿ ಹಣ ನೀಡಲು ನಿರಾಕರಿಸಿದ್ದಕ್ಕೆ ಇನ್ನಷ್ಟು ಕೋಪಗೊಂಡ ಕದರಪ್ಪ ಅಲ್ಲೇ ಇದ್ದ ಕಲ್ಲನ್ನು ತಲೆಮೇಲೆ ಎತ್ತಿಹಾಕಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಕಮ್ಮ ಅವರನ್ನು ಕಂಡ ಬಡಗೊಲ್ಲರಹಟ್ಟಿ ಮತ್ತು ಸೀಗೆಹಟ್ಟಿ ಕುರಿ ಕಾಯುವವರು ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾಕಮ್ಮ ಮಗ ದಯಾನಂದ ಬಸವಾಪಟ್ಟಣ ಪೊಲೀಸ್ ಠಾಣೆಗೆ ತಂದೆ ಮೇಲೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಆರೋಪಿ ಕದರಪ್ಪನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಶ್ರಯ ಕೊಟ್ಟ ಭಾರತೀಯ ವಿದ್ಯಾರ್ಥಿಯನ್ನೇ ಹೊಡೆದು ಕೊಂದ ಯುಎಸ್ ನಿರಾಶ್ರಿತ ವ್ಯಕ್ತಿ!
ಮೈಸೂರು: ಮದುವೆಯಾಗಿ 12 ವರ್ಷವಾದರೂ ಹಣಕ್ಕಾಗಿ (Dowry) ಗಂಡ (Husband) ಮತ್ತು ಆತನ ಮನೆಯವರು ಕಿರುಕುಳ ನೀಡುತ್ತಿದ್ದ ಪರಿಣಾಮ ಗೃಹಿಣಿ (House wife) ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ.
ವಿಜಯಲಕ್ಷ್ಮಿ (35) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈಕೆ ನಂಜನಗೂಡು ತಾಲೂಕಿನ ಹೊಸಕೋಟೆಯ ಹರೀಶ್ ಎಂಬವರನ್ನು ಮದುವೆಯಾಗಿ 12 ವರ್ಷಗಳಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ವರದಕ್ಷಿಣೆ ಹಣಕ್ಕಾಗಿ ಗಂಡ ಹರೀಶ್, ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ ಮತ್ತು ಮಹೇಂದ್ರ ದಿನ ಪಿಡಿಸುತ್ತಿದ್ದರು. ಇದನ್ನೂ ಓದಿ: ಅಪ್ಪನ ಕೊಲೆಗೆ 3 ಲಕ್ಷ ಸುಪಾರಿ ಕೊಟ್ಟ ಮಗ!
ಕಿರುಕುಳ ಇದೇ ಮೊದಲಲ್ಲ: ವಿಜಯಲಕ್ಷ್ಮಿ ಪೋಷಕರು ಚಿನ್ನಾಭರಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನ ಮನೆಯವರು ಮಾತ್ರ ಹಣಕ್ಕಾಗಿ ಆಕೆಯನ್ನು ದಿನ ಪಿಡಿಸುತ್ತಿದ್ದರು. ವರದಕ್ಷಿಣೆ ವಿಚಾರವಾಗಿ ಆಗಾಗ ಮನೆಯಲ್ಲಿ ಗಲಾಟೆ ನಡೆಯುತಿತ್ತು. ಈ ಹಿಂದೆಯೂ ಕೂಡ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಗಲಾಟೆ ವಿಚಾರವಾಗಿ ಹಲವು ಬಾರಿ ವಿಜಯಲಕ್ಷ್ಮಿ ದೂರು ನೀಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರು ಮಕ್ಕಳನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!