Tag: hurricane

  • ಅಮೆರಿಕದಲ್ಲಿ ಹೆಲೆನ್ ಚಂಡಮಾರುತದ ಆರ್ಭಟ – 33 ಮಂದಿ ಸಾವು

    ಅಮೆರಿಕದಲ್ಲಿ ಹೆಲೆನ್ ಚಂಡಮಾರುತದ ಆರ್ಭಟ – 33 ಮಂದಿ ಸಾವು

    ವಾಷಿಂಗ್ಟನ್: ಅಮೆರಿಕದಲ್ಲಿ (America) ಹೆಲೆನ್ ಚಂಡಮಾರುತದಿಂದ (Hurricane) ಕನಿಷ್ಠ 33 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಚಂಡಮಾರುತದಿಂದ ಫ್ಲೋರಿಡಾ (Florida) ರಾಜ್ಯದ ರಾಜಧಾನಿ ತಲ್ಲಾಹಸ್ಸೀ ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ನೆಲಸಮವಾಗಿವೆ. ಅಲ್ಲದೇ ಧಾರಾಕಾರ ಮಳೆಯಿಂದ ಹಲವಾರು ಪ್ರದೇಶಗಳು ಪ್ರವಾಹದಿಂದ (Flood) ತತ್ತರಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

    ದಕ್ಷಿಣ ಕೆರೊಲಿನಾದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ತನ್ನ ರಾಜ್ಯದಲ್ಲಿ ರಕ್ಷಣಾ ಸಿಬ್ಬಂದಿಯೂ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ವಾಲ್ಡೋಸ್ಟಾ ನಗರವು 115ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿದ್ದು, ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಅಧ್ಯಕ್ಷ ಜೋ ಬೈಡನ್ ಮತ್ತು ಅಧಿಕಾರಿಗಳು ಹೆಲೆನ್ ಚಂಡಮಾರುತದಿಂದ ಹಾನಿಗೊಳಗಾಗುವ ಪ್ರದೇಶಗಳ ಬಗ್ಗೆ ಮೊದಲೇ ಸೂಚನೆ ನೀಡಿದ್ದರು. ಜನ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದರು. ಆದರೂ ಜನ ಮನೆಗಳಲ್ಲೇ ಉಳಿದಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆಗ್ತಿದ್ದಂತೆಯೇ ಸೆಕ್ಸ್ ಶುರು ಹಚ್ಕೊಂಡ ಜೋಡಿಗೆ ಕೋರ್ಟ್ ಶಿಕ್ಷೆ

  • ಫ್ಲೋರಿಡಾಗೆ ಅಪ್ಪಳಿಸಿದ ಭೀಕರ ಚಂಡಮಾರುತ – ನೂರಾರು ಮನೆಗಳಿಗೆ ಹಾನಿ

    ಫ್ಲೋರಿಡಾಗೆ ಅಪ್ಪಳಿಸಿದ ಭೀಕರ ಚಂಡಮಾರುತ – ನೂರಾರು ಮನೆಗಳಿಗೆ ಹಾನಿ

    ವಾಷಿಂಗ್ಟನ್: ಫ್ಲೋರಿಡಾದ (Florida) ನೈಋತ್ಯ ಭಾಗಕ್ಕೆ ಬುಧವಾರ ಭೀಕರ ಇಯಾನ್ ಚಂಡಮಾರುತ (Ian Hurricane) ಅಪ್ಪಳಿಸಿದ್ದು, ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ. ಚಂಡಮಾರುತದ (Hurricane) ಪರಿಣಾಮ ಫ್ಲೋರಿಡಾದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಿದೆ.

    ನೂರಾರು ಮನೆಗಳು ಸೇರಿದಂತೆ ಹಲವರು ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಮುದ್ರಕ್ಕೆ ತೆರಳಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, 20 ಜನರು ನಾಪತ್ತೆಯಾಗಿದ್ದಾರೆ. ಫ್ಲೋರಿಡಾದ ಕೀಸ್ ದ್ವೀಪದಲ್ಲಿ ನಾಲ್ವರು ಕ್ಯೂಬನ್ನರು ಈಜಿಕೊಂಡು ಬರುತ್ತಿದ್ದುದನ್ನು ಕಂಡು ಅವರಲ್ಲಿ ಮೂವರನ್ನು ಕರಾವಳಿಯ ಪಡೆ ರಕ್ಷಿಸಿದೆ ಎಂದು ವರದಿಯಾಗಿದೆ.

    80,000 ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಫೋರ್ಟ್ ಮೈಯರ್ಸ್ ಪ್ರದೇಶದಲ್ಲಿ ಮಳೆ, ಗಾಳಿಗೆ ಪ್ರವಾಹದ ಸ್ಥಿತಿ ಉಂಟಾಗಿ ಪ್ರದೇಶ ಸರೋವರದಂತೆ ಗೋಚರವಾಗುತ್ತಿದೆ. ರಾಜ್ಯದ ನೈಋತ್ಯ ಭಾಗದಲ್ಲಿ ಹೆಚ್ಚಿನ ಹಾನಿಗಳು ಸಂಭವಿಸಿದ್ದು, ಅಲ್ಲಿನ 1 ಕೋಟಿ ಜನಸಂಖ್ಯೆಯಲ್ಲಿ ಸುಮಾರು 20 ಲಕ್ಷ ಜನರು ನಿನ್ನೆ ಸಂಜೆಯಿಂದ ವಿದ್ಯುತ್ ಇಲ್ಲದೇ ದಿನ ದೂಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮನೆ ಬಾಗಿಲಿಗೆ ಪಡಿತರ – ಮಮತಾ ಬ್ಯಾನರ್ಜಿಯ ನೂತನ ಯೋಜನೆ ಕಾನೂನುಬಾಹಿರ ಎಂದ ಹೈಕೋರ್ಟ್

    ಇಯಾನ್ ಚಂಡಮಾರುತ ಪ್ರಾರಂಭವಾದಾಗಲೇ ಗಂಟೆಗೆ 240 ಕಿ.ಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದೆ. ಫ್ಲೋರಿಡಾ ಈ ಹಿಂದೆ ಹಲವು ವರ್ಷಗಳಿಂದ ಕಾಣದೇ ಇದ್ದ ಚಂಡಮಾರುತವನ್ನು ಈಗ ಅನುಭವಿಸುತ್ತಿದೆ. ಇದು ಇನ್ನೂ 2 ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ: 8 ಗಂಟೆ ಅಂತರದಲ್ಲಿ 2 ಬಸ್‌ಗಳಲ್ಲಿ ಸ್ಫೋಟ

    Live Tv
    [brid partner=56869869 player=32851 video=960834 autoplay=true]

  • ಅಮೇರಿಕಾದಲ್ಲಿ ಭೀಕರ ಚಂಡಮಾರುತ – 80ಕ್ಕೂ ಅಧಿಕ ಜನ ಸಾವು

    ಅಮೇರಿಕಾದಲ್ಲಿ ಭೀಕರ ಚಂಡಮಾರುತ – 80ಕ್ಕೂ ಅಧಿಕ ಜನ ಸಾವು

    ವಾಷಿಂಗ್ಟನ್: ಐದು ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮದಿಂದ ಇದುವರೆಗೆ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

    tornado swirling

    ಇದೊಂದು ನೆನೆಸಿಕೊಳ್ಳದಂತಹ ದುರಂತವಾಗಿದೆ. ಎಷ್ಟು ಜನ ನಾಪತ್ತೆಯಾಗಿದ್ದಾರೆ, ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೆಂಟುಕಿಯೊಂದರಲ್ಲೇ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನ ಜನರು ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಈ ಘಟನೆಯೂ ಕೆಂಟುಕಿಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ, ಅತ್ಯಂತ ಮಾರಣಾಂತಿಕ ಚಂಡಮಾರುತದ ಘಟನೆಯಾಗಿದೆ. ಚಂಡಮಾರುತ ಅಪ್ಪಳಿಸಿದಾಗ ಮೇಣದಬತ್ತಿಯ ಕಾರ್ಖಾನೆಯಲ್ಲಿ ಸುಮಾರು 110 ಜನರು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಟ್ಟಡ ಕುಸಿದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇದುವರೆಗೆ ನಲವತ್ತು ಜನರನ್ನು ರಕ್ಷಿಸಲಾಗಿದೆ.

    ಚಂಡಮಾರುತವು 320 ಕಿ.ಮೀ ದೂರದ ಪ್ರದೇಶದವರೆಗೆ ಹಾನಿ ಮಾಡಿದೆ. ಇದಕ್ಕೂ ಹಿಂದೆ 1925ರಲ್ಲಿ ಮಿಸೌರಿಯಲ್ಲಿ 252 ಕಿ.ಮೀಗಳ ದೂರದ ಪ್ರದೇಶದವರೆಗೆ ಹಾನಿ ಮಾಡಿದ್ದು, ಈ ಹಿಂದಿನ ದೊಡ್ಡ ಚಂಡಮಾರುತವಾಗಿತ್ತು ಎಂದು ಕೆಂಟಕಿಯ ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ಚಂಡಮಾರುತಕ್ಕೆ ಸಿಲುಕಿದ ಕಾರ್ಮಿಕರು:
    ದಕ್ಷಿಣ ಇಲಿನಾಯ್ಸ್ ನಗರದ ಎಡ್ವಡ್ಸ್‍ವಿಲ್ಲೆಯಲ್ಲಿ ಅಮೇಜಾನ್ ವೇರ್‍ಹೌಸ್‍ಗೆ ಅಪ್ಪಳಿಸಿದಾಗ ಸುಮಾರು 100 ಕೆಲಸಗಾರರು ಒಳಗೆ ಸಿಲುಕಿಕೊಂಡಿದ್ದರು. ನೂರಾರು ರಕ್ಷಣಾ ಸಿಬ್ಬಂದಿ ಹರಸಾಹಸ ಮಾಡಿ 45 ನೌಕರರನ್ನು ರಕ್ಷಿಸಿದ್ದಾರೆ. ಒಬ್ಬರನ್ನು ಚಿಕಿತ್ಸೆಗಾಗಿ ಪ್ರಾದೇಶಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್‍ನ ಅಗ್ನಿಶಾಮಕ ಮುಖ್ಯಸ್ಥ ಜೇಮ್ಸ್ ವೈಟ್ ಫೋರ್ಡ್ ತಿಳಿಸಿದ್ದಾರೆ.

  • ಇಂದಿನಿಂದ  3 ದಿನ ಚಂಡಮಾರುತ ಮಳೆ – ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಇಂದಿನಿಂದ 3 ದಿನ ಚಂಡಮಾರುತ ಮಳೆ – ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ 3 ದಿನ ಚಂಡಮಾರುತ ಮಳೆ ಆಗುವ ಎಚ್ಚರಿಕೆ ನೀಡಲಾಗಿದೆ. ಇವತ್ತು ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸಲಿದೆ. ಇವತ್ತು, ನಾಳೆ, ನಾಡಿದ್ದು ಮೂರು ದಿನ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಧಾರಾಕಾರ ಮಳೆ ಆಗುವ ಆಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ.

    kerala rain

    ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕಂದಾಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಿದೆ. ಈಗಾಗಲೇ ತಮಿಳುನಾಡಿನ ತೀರ ಪ್ರದೇಶದ ಜಿಲ್ಲೆಗಳಲ್ಲಿ ಮಳೆಯಾಗ್ತಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ

    ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಜನ ಜೀವನ ತತ್ತರಿಸಿ ಹೋಗಿತ್ತು. ಆದರೆ ಮೂರ್ನಾಲ್ಕು ದಿನಗಳಿಂದ ಜನರಿಗೆ ರಿಲೀಫ್ ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ. ಜನರಲ್ಲಿ ಮತ್ತೆ ಮಳೆ ಆತಂಕ ಶುರುವಾಗಿದೆ.  ಇದನ್ನೂ ಓದಿ: ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

  • ಉರುಳಿದ ಬೃಹತ್ ಮರ – ಉಡುಪಿಯಲ್ಲಿ 1 ಗಂಟೆ ಹೆದ್ದಾರಿ ಜಾಮ್

    ಉರುಳಿದ ಬೃಹತ್ ಮರ – ಉಡುಪಿಯಲ್ಲಿ 1 ಗಂಟೆ ಹೆದ್ದಾರಿ ಜಾಮ್

    ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಭೀಕರ ಚಂಡಮಾರುತ ಕರ್ನಾಟಕ ಕರಾವಳಿ ತೀರದಲ್ಲಿ ಭಾರಿ ಮಳೆ ಸುರಿಸಿದೆ. ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 117 ಮಿಲಿ ಮೀಟರ್ ಮಳೆಯಾಗಿದೆ.

    ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 117 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು, 121 ಮಿಲಿಮೀಟರ್ ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ 110, ಕಾರ್ಕಳದಲ್ಲಿ 110 ಮಿಲಿ ಮೀಟರ್ ಮಳೆ ಬಿದ್ದಿದೆ.

    ಈ ನಡುವೆ ಮಣಿಪಾಲ ಸಮೀಪದ ಪರ್ಕಳದಲ್ಲಿ ಮಳೆಗೆ ಭಾರೀ ಗಾತ್ರದ ಮರವೊಂದು ಧರೆಗುರುಳಿದೆ. ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ನಗರಸಭೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಕೆಲವೆಡೆ ವಿದ್ಯುತ್ ಕಂಬಗಳಿಗೆ ಮರ ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಮುದ್ರ ತಟದಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ನಾಡದೋಣಿ, ಆಳಸಮುದ್ರ ಮೀನುಗಾರರು ಕಡಲಿಗೆ ಇಳಿದಿಲ್ಲ.

  • ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ- ಉಡುಪಿಯಲ್ಲಿ ಭಾರೀ ಗಾಳಿ ಮಳೆ

    ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ- ಉಡುಪಿಯಲ್ಲಿ ಭಾರೀ ಗಾಳಿ ಮಳೆ

    – ಮೀನುಗಾರರಿಗೆ ಎಚ್ಚರಿಗೆ

    ಉಡುಪಿ: ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತ ಅರಬ್ಬೀ ಸಮುದ್ರ ತೀರದಲ್ಲಿ ಮಳೆ ತರುತ್ತಿದೆ. ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಗಂಟೆಗೆ 45ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

    ಚಂಡಮಾರುತದಿಂದಾಗಿ ಭಾರೀ ವೇಗವಾಗಿ ಗಾಳಿ ಬೀಸುತ್ತಿದ್ದು, ಮಳೆ ಸಹ ನಿರಂತರವಾಗಿ ಬೀಳುತ್ತಿದೆ. ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತ ಅರಬ್ಬಿ ಕಡಲತೀರದಲ್ಲಿ ವರ್ಷ ಧಾರೆಯನ್ನು ತರಿಸುತ್ತಿದೆ. ಕಾರ್ಕಳ, ಕುಂದಾಪುರ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.

    ಸೋಮವಾರ ರಾತ್ರಿಯಿಂದಲೇ ಹಲವೆಡೆ ಧಾರಾಕಾರ ಮಳೆ ಶುರುವಾಗಿದೆ. ಕಳೆದ ರಾತ್ರಿಯೂ ನಿರಂತರ ಮಳೆ ಬಿದ್ದಿದೆ. ನಾಡದೋಣಿ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು, ಆಳಸಮುದ್ರ ಮೀನುಗಾರರು ಬಹಳ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶ ರವಾನಿಸಲಾಗಿದೆ.

  • ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಬೆಂಗಳೂರು: ಕ್ಯಾರ್, ಮಹಾ ಎರಡು ಚಂಡಮಾರುತದ ಅಬ್ಬರಕ್ಕೆ ಕರುನಾಡಿನ ಕರಾವಳಿ ಸೇರಿದಂತೆ ಬಹುತೇಕ ಭಾಗ ನಲುಗಿ ಹೋಗಿದೆ. ಈಗಾಗಲೇ ಮಹಾ ಅಬ್ಬರಕ್ಕೆ ಕರಾವಳಿ ಭಾಗದಲ್ಲಿ ಮಳೆ ಜೊತೆ ರಕ್ಕಸ ಅಲೆ ಸೃಷ್ಟಿಯಾಗಿದೆ. ಈ ಮಧ್ಯೆ ಇನ್ನೆರಡು ಚಂಡಮಾರುತದ ಎಚ್ಚರಿಕೆಯನ್ನು ಭೂಗರ್ಭ ವಿಜ್ಞಾನಿಗಳು ಕೊಟ್ಟಿದ್ದಾರೆ.

    ಕ್ಯಾರ್ ಚಂಡಮಾರುತದ ಹೊಡೆತ, ಮಹಾ ಚಂಡಮಾರುತದ ಘರ್ಜನೆ ಕರಾವಳಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

    ಇದರ ನಡುವೆ ಇನ್ನೆರಡು ಸದ್ದಿಲ್ಲದೇ ಚಂಡಮಾರುತ ಬಂಗಾಳಕೊಲ್ಲಿಯ ಗರ್ಭದಲ್ಲಿ ಪುಟಿದೇಳಲು ತಯಾರಾಗಿದೆ. ಹೌದು ನವೆಂಬರ್ ತಿಂಗಳಲ್ಲಿ ಇನ್ನೆರಡು ಚಂಡಮಾರುತ ಫಾರ್ಮ್ ಆಗಲಿದ್ದು, ಮೊದಲ ವಾರದಲ್ಲಿಯೇ ಕರುನಾಡನ್ನು ಅಲ್ಲೋಲಕಲ್ಲೋಲ ಮಾಡುವ ಎಚ್ಚರಿಕೆಯನ್ನು ಭೂಗರ್ಭ ತಜ್ಞರು ಕೊಟ್ಟಿದ್ದಾರೆ.

    ಬಂಗಾಳಕೊಲ್ಲಿಯ ಸಾಗರದೊಳಗಿನ ಜ್ವಾಲಮುಖಿ ಸ್ಫೋಟದಿಂದ ಈ ಚಂಡಮಾರುತ ಸೃಷ್ಟಿಯಾಗಲಿದ್ದು ಜಲಪ್ರವಾಹ ತರುವ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರು, ಮೈಸೂರು, ಕೋಲಾರ ರಾಮನಗರ ಭಾಗಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ ತಿಂಗಳು ಚಿಲ್ಡ್ ವೆದರ್ ಇರುತ್ತೆ ಅಂತೆಲ್ಲ ಅಂದುಕೊಂಡಿದ್ದ ಕರುನಾಡಿಗೆ ಈಗ ಜಲರಕ್ಕಸನ ಕಾಟದ ಮುನ್ಸೂಚನೆ ಸಿಕ್ಕಿದ್ದು, ಭೀತಿಯ ವಾತವರಣ ಸೃಷ್ಟಿಯಾಗಿದೆ.

  • ಚಂಡಮಾರುತಕ್ಕೆ ಫೋನಿ ಹೆಸರು ಬಂದಿದ್ದು ಹೇಗೆ?

    ಚಂಡಮಾರುತಕ್ಕೆ ಫೋನಿ ಹೆಸರು ಬಂದಿದ್ದು ಹೇಗೆ?

    ನವದೆಹಲಿ: ಒಡಿಶಾ ತೀರಕ್ಕೆ ಫೋನಿ ಚಂಡಮಾರುತ ಶುಕ್ರವಾರ ಬೆಳಗ್ಗೆ ಅಪ್ಪಳಿಸಿದೆ. ಗಂಟೆಗೆ 200 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುತ್ತಿದ್ದು ಜನ ತತ್ತರಿಸಿ ಹೋಗಿದ್ದಾರೆ. ಈ ಚಂಡಮಾರುತಕ್ಕೆ ಫೋನಿ ಎಂದು ಹೆಸರನ್ನು ನೀಡಿದ್ದು ಬಾಂಗ್ಲಾದೇಶ. ಸಂಸ್ಕøತದಲ್ಲಿ ಫಣಿ ಎಂದರೆ ಹಾವಿನ ಹೆಡೆ ಎಂದು ಕರೆಯಲಾಗುತ್ತದೆ. ಬಂಗಾಳಿ ಭಾಷಿಯಲ್ಲಿ ಫಣಿಯನ್ನು ಫೋನಿ ಎಂದು ಉಚ್ಛಾರ ಮಾಡಲಾಗುತ್ತದೆ. ಈ ಕಾರಣಕ್ಕೆ ಈ ಚಂಡಮಾರುತಕ್ಕೆ ಫೋನಿ ಹೆಸರನ್ನು ಇಡಲಾಗಿದೆ.

    ಈ ಚಂಡ ಮಾರುತಕ್ಕೆ ಬಾಂಗ್ಲಾ ನೀಡಿದ ಹೆಸರನ್ನು ಯಾಕೆ ಇಡಬೇಕು? ಭಾರತಕ್ಕೆ ಅಪ್ಪಳಿಸಿದ ಈ ಚಂಡಮಾರುತಕ್ಕೆ ಭಾರತದ ಹೆಸರು ನೀಡಬಹುದಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಜಾಗತಿಕ ಹವಾಮಾನ ಸಂಸ್ಥೆ ರೂಪಿಸಿ ವ್ಯವಸ್ಥೆಯನ್ನು ತಿಳಿದುಕೊಂಡರೆ ಚಂಡಮಾರುತಕ್ಕೆ ಯಾಕೆ ಈ ಹೆಸರು ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

    ಹೆಸರು ಹೇಗೆ ನೀಡಲಾಗುತ್ತದೆ?
    ಜಾಗತಿಕ ಹವಾಮಾನ ಸಂಸ್ಥೆ ಒಂದು ವ್ಯವಸ್ಥೆ ರೂಪಿಸಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಳ್ಳುವ ಉಷ್ಣ ವಲಯದ ಚಂಡಮಾರುತಕ್ಕೆ ಈ ಪ್ರದೇಶದಲ್ಲಿರುವ ಭಾರತ, ಶ್ರೀಲಂಕಾ, ಮಾಲ್ದೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ದೇಶಗಳು ಹೆಸರನ್ನು ಆಯ್ಕೆ ಮಾಡಿ ಉಷ್ಣ ವಲಯದ ಪ್ರಾದೇಶಿಕ ಚಂಡಮಾರುತ ಸಮಿತಿಗೆ ಕಳುಹಿಸುತ್ತವೆ. ಈ ದೇಶಗಳು ಕಾಲ ಕಾಲಕ್ಕೆ ಒಂದೊಂದು ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ. ಈ ಹೆಸರುಗಳ ಪಟ್ಟಿಯಿಂದ ಚಂಡಮಾರುತದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಈ ಎಂಟು ರಾಷ್ಟ್ರಗಳು ತಲಾ ಎಂಟು ಹೆಸರುಗಳನ್ನು ಕಳುಹಿಸಿದ್ದು, ಈ 64 ಹೆಸರುಗಳ ಪಟ್ಟಿಯಿಂದ ಈ ಬಾರಿ ಫೋನಿ ಹೆಸರನ್ನು ಆಯ್ಕೆ ಮಾಡಲಾಗಿದೆ.

    2018ರಲ್ಲಿ ತಿತ್ಲಿ ಚಂಡಮಾರುತ ಆಂಧ್ರ ಮತ್ತು ಒಡಿಶಾಕ್ಕೆ ಅಪ್ಪಳಿಸಿತ್ತು. ಈ ಹೆಸರನ್ನು ಪಾಕಿಸ್ತಾನ ನೀಡಿತ್ತು. 2017ರಲ್ಲಿ ಓಖಿ ಚಂಡಮಾರುತವು ಕೇರಳ ಮತ್ತು ತಮಿಳುನಾಡಿನಲ್ಲಿ ಹಾನಿ ಮಾಡಿತ್ತು. ಓಖಿ ಹೆಸರನ್ನು ಬಾಂಗ್ಲಾದೇಶ ನೀಡಿತ್ತು.

    ಭಾರತ ಅಗ್ನಿ, ಆಕಾಶ, ಬಿಜ್ಲಿ, ಜಲ, ಲೆಹರ್, ಮೇಘ, ಸಾಗರ್ ಹೆಸರನ್ನು ಶಿಫಾರಸು ಮಾಡಿದೆ. ಮುಂದಿನ ಚಂಡಮಾರುತಕ್ಕೆ ಭಾರತ ಶಿಫಾರಸು ಮಾಡಿರುವ ‘ವಾಯು’ ಹೆಸರನ್ನು ಇಡಲಾಗುತ್ತದೆ.


    ಹೆಸರು ಇಡೋದು ಯಾಕೆ?
    ಚಂಡಮಾರುತ ಪ್ರತಿ ವರ್ಷ ಬರುತ್ತಲೇ ಇರುತ್ತದೆ. ಆದರೆ ಯಾವ ಚಂಡಮಾರುತ ಎಂದು ಸುಲಭವಾಗಿ ನೆನಪಿನಲ್ಲಿರಲು ಇವುಗಳಿಗೆ ಹೆಸರನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಈ ಹಿಂದಿನ ಚಂಡಮಾರುತಕ್ಕೂ ಹೋಲಿಕೆ ಮಾಡಿ ಹಾನಿಯನ್ನು ಅಂದಾಜು ಮಾಡಲು ಆಗುತ್ತದೆ.

  • ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

    ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

    ಬೆಂಗಳೂರು: ಹಿಂದೂ ಮಹಾಸಾಗರದ ಭಾಗ ಸೇರಿ ಬಂಗಾಳ ಕೊಲ್ಲಿಯಲ್ಲಿ (ಶ್ರೀಲಂಕಾ ಹಾಗೂ ತಮಿಳುನಾಡಿನ ಆಗ್ನೇಯ ಭಾಗದಲ್ಲಿ) ನಿರ್ಮಾಣವಾಗಿರುವ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.

    ಹವಾಮಾನ ಇಲಾಖೆ ನೀಡಿರುವ ಬುಲೆಟಿನ್ ಅನ್ವಯ ಏಪ್ರಿಲ್ 29ಕ್ಕೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಸೈಕ್ಲೋನ್ ಪ್ರಭಾವ ಬೀರಲಿದೆ. ಏಪ್ರಿಲ್ 30ಕ್ಕೆ ಕೇರಳದ 8 ಜಿಲ್ಲೆಗಳಲ್ಲಿ ಅಂದರೆ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೊಟ್ಟಾಯಂ, ವಯನಾಡು, ಕೋಝಿಕ್ಕೋಡ್, ಪಾಲಕ್ಕಾಡ್ ಜಿಲ್ಲೆಗಳಿಗೆ ಪ್ರವೇಶ ಮಾಡುವ ಮುನ್ಸೂಚನೆ ಇರುವುದರಿಂದ ಙeಟಟoತಿ ಅಲರ್ಟ್ ಘೋಷಿಸಲಾಗಿದೆ.

    ಫಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲದೇ ತಮಿಳುನಾಡು, ಕೇರಳ ಕರಾವಳಿಯಲ್ಲಿ ಭಾರೀ ಹಾನಿ ಸಾಧ್ಯತೆ ಇರುವುದಾಗಿ ತಿಳಿಸಿದೆ.

    ಫಾನಿ ಚಂಡಮಾರುತ ಶುರುವಾದಾಗ ಗಂಟೆಗೆ 90-115 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕೇರಳದಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಪರಿಣಾಮ ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಗಾಳಿ ಮಳೆಯ ಆಗುವ ಕುರಿತು ಅಂದಾಜಿಸಲಾಗಿದೆ.

    ಫಾನಿ ಚಂಡಮಾರುತದ ಬಿಸಿ ರಾಜ್ಯಕ್ಕೂ ತಟ್ಟಲಿದ್ದು, ಏ.28ರ ನಂತರ ಮೇ 2ರ ವರೆಗೂ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನದಲ್ಲಿ ಚಂಡಮಾರುತ ಪರಿಣಾಮ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದರು.

    ಫಾನಿ ಚಂಡಮಾರುತ ಮೊದಲು ತಮಿಳುನಾಡಿನ ದಕ್ಷಿಣ ಭಾಗಕ್ಕೆ ಬಂದು ತಲುಪುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಿಕ್ಕು ಬದಲಾಯಿಸಿ, ಪೂರ್ವದ ಕಡೆಗೆ ದಿಕ್ಕು ಬದಲಿಸುವ ಅವಕಾಶ ಹೆಚ್ಚಿದೆ ಎಂದು ಹವಮಾನ ಇಲಾಖೆ ಸ್ಪಷ್ಟಪಡಿಸಿದೆ. ಚೆನ್ನೈನಿಂದ 1,340 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತದ ಕೇಂದ್ರ ಸ್ಥಾನ ರಚನೆ ಆಗಿರುವ ಕುರಿತು ಮಾಹಿತಿ ಲಭಿಸಿದೆ.

  • ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಜಕಾರ್ತ: ಚಂಡಮಾರತದ ಸಿಕ್ಕಿ ಪ್ರಯಾಣಿಕ ಹಡಗೊಂದು ಮುಳುಗಿ 31 ಜನ ಮಂದಿ ಸಾವಿಗೀಡಾದ ಧಾರುಣ ಘಟನೆ ಇಂಡೊನೇಷ್ಯಾದ ಸುಲಾವೆಸಿ ದ್ವೀಪದ ಬಳಿ ಸಂಭವಿಸಿದೆ.

    ಮಂಗಳವಾರ ಮಧ್ಯಾಹ್ನ ಪ್ರಯಾಣಿಕ ಹಡಗೊಂದು ಇಂಡೊನೇಷ್ಯಾದ ಬೀರಾ ಬಂದರಿನಿಂದ ಸೆಲಾಯಾರ್ ದ್ವೀಪಕ್ಕೆ ಸಂಚಾರ ಬೆಳೆಸಿತ್ತು. ಈ ವೇಳೆ ಸಮುದ್ರದಲ್ಲಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ 31 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಹಡಗಿನಲ್ಲಿ ಸಿಬ್ಬಂದಿಯೂ ಸೇರಿದಂತೆ ಒಟ್ಟು 164 ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲದೇ ಹಡಗಿನಲ್ಲಿ 48 ವಾಹನಗಳನ್ನು ಸಾಗಿಸಲಾಗುತ್ತಿತ್ತು ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಪಡೆ ಅಧಿಕಾರಿಯಾದ ಅಮೀರುದ್ದೀನ್ ತಿಳಿಸಿದ್ದಾರೆ.

    ಹಡುಗು ಚಂಡಮಾರುತದ ದಾಳಿಗೆ ಸಿಲುಕುತ್ತಿದ್ದಂತೆ ಎಚ್ಚೆತ್ತುಕೊಂಡ ನಾವಿಕ ಹಡಗನ್ನು ಹತ್ತಿರದಲ್ಲಿದ್ದ ದಿಬ್ಬದ ಕಡೆ ಮುನ್ನಡೆಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಿದೆ. ನಾವಿಕನ ಸಮಯಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಅತಿದೊಡ್ಡ ದುರಂತ ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.

    ಇಂದು ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರು ಹಡಗಿನಲ್ಲೇ ಸಿಲುಕಿದ್ದಾರೆಂದು ತಿಳಿದು ಬಂದಿದೆ. ನಾವಿಕನ ಸಮಯಪ್ರಜ್ಞೆಯಿಂದ ನೂರಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ಸಮುದ್ರಯಾನ ಸಾರಿಗೆ ಸಚಿವಾಲಯದ ಅಧಿಕಾರಿಯಾದ ಆಗಸ್ ಪುರ್ನೊಮೊ ತಿಳಿಸಿದ್ದಾರೆ.

    ಪ್ರತಿಕೂಲ ಹವಾಮಾನ ನಡುವೆಯೂ ಪ್ರಯಾಣ ಆರಂಭಿಸಿದ್ದಲ್ಲದೇ ನಿಗದಿಗಿಂತ ಹೆಚ್ಚಿನ ಭಾರವನ್ನು ಹಡಗು ಹೊಂದಿದ್ದರಿಂದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ಈ ಅವಘಡ ಸಂಭವಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.