Tag: Hurdik Pandya

  • ಪಾಂಡ್ಯ, ಕೆಎಲ್ ರಾಹುಲ್ ಮುಂದಿನ ರೋಲ್‍ಮಾಡೆಲ್ ಆಗಬಹುದು: ದ್ರಾವಿಡ್

    ಪಾಂಡ್ಯ, ಕೆಎಲ್ ರಾಹುಲ್ ಮುಂದಿನ ರೋಲ್‍ಮಾಡೆಲ್ ಆಗಬಹುದು: ದ್ರಾವಿಡ್

    ಮುಂಬೈ: ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಹಾಗು ಸೆಕ್ಸ್ ಬಗ್ಗೆ ಆಕ್ಷೇಪರ್ಹವಾಗಿ ಮಾತನಾಡಿ ಟೀಕೆಗೆ ಗುರಿಯಾದ ಟೀಂ ಇಂಡಿಯಾ ಆಟಗಾರರ ಬಗ್ಗೆ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಪಾಂಡ್ಯ, ರಾಹುಲ್ ನೀಡಿರುವ ಹೇಳಿಕೆಗಳು ಅವರ ನೈಜತೆಯ ಪ್ರತೀಕವಲ್ಲ ಎಂದು ನಾನು ನಂಬುತ್ತೇನೆ. ಇಂತಹ ಘಟನೆಯಿಂದ ಅವರು ಹೊರ ಬರುವ ನಂಬಿಕೆ ನನಗೆ ಇದ್ದು, ಈ ವೇಳೆ ಆಟಗಾರು ಅತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ನಡವಳಿಕೆಯನ್ನು ಯಾರು ಕೂಡ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಇಬ್ಬರು ಆಟಗಾರು ಇದರಿಂದ ಹೊರ ಬಂದು ತಮ್ಮ ಗುರಿ ಸಾಧಿಸಿದರೆ ಮುಂದೊಂದು ದಿನ ಮಾದರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಆಟಗಾರರು ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕು, ಎಲ್ಲವೂ ಕಲಿಕೆಯ ಭಾಗವಾಗಿದೆ. ಇಬ್ಬರಿಗೂ ನಾನು ತರಬೇತಿ ನೀಡಿದ್ದೇನೆ. ಉತ್ತಮ ಸಾಮಥ್ರ್ಯ ಹೊಂದಿರುವ ಆಟಗಾರರಾಗಿದ್ದು, ಖಂಡಿತ ಸಾಧನೆ ಮಾಡುತ್ತಾರೆ ಎಂದರು. ಸದ್ಯ ಬಿಸಿಸಿಐ ನಿಷೇಧ ತೆರವುಗೊಳಿಸಿರುವುದರಿಂದ ಕೆಎಲ್ ರಾಹುಲ್ ಟೀಂ ಇಂಡಿಯಾ ಎ ತಂಡದ ಪರ ಆಡಲಿದ್ದು, ರಾಹುಲ್ ದ್ರಾವಿಡ್ ಗರಡಿಯಲ್ಲಿ ತರಬೇತಿ ಪಡೆಯಲಿದ್ದಾರೆ.

    ಇಬ್ಬರು ಆಟಗಾರರು ಈಗಾಗಲೇ ತಮ್ಮ ತಪ್ಪಿನ ಬಗ್ಗೆ ಬಿಸಿಸಿಯ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಕ್ಷಮೆ ಕೋರಿದ್ದು, ಪಾಂಡ್ಯ ನ್ಯೂಜಿಲೆಂಡ್ ಪ್ರವಾಸದ ಹಾಗೂ ರಾಹುಲ್ ಟೀಂ ಇಂಡಿಯಾ ಎ ತಂಡದ ಪರ ಆಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಾಂಡ್ಯ, ಕೆಎಲ್ ರಾಹುಲ್ ವಿರುದ್ಧದ ಅಮಾನತು ರದ್ದುಗೊಳಿಸಿದ ಸಿಓಎ

    ಪಾಂಡ್ಯ, ಕೆಎಲ್ ರಾಹುಲ್ ವಿರುದ್ಧದ ಅಮಾನತು ರದ್ದುಗೊಳಿಸಿದ ಸಿಓಎ

    ಮುಂಬೈ: ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ವಿರುದ್ಧದ ಅಮಾನತು ಆದೇಶ ರದ್ದು ಮಾಡುವಂತೆ ಬಿಸಿಸಿಐ ಆಡಳಿತ ಸಮಿತಿ (ಸಿಓಎ) ಆದೇಶ ನೀಡಿದೆ.

    ಸುಪ್ರೀಂ ಕೋರ್ಟ್ ನೇಮಿಸಿರುವ ಬಿಸಿಸಿಐ ಆಡಳಿತ ಮಂಡಳಿ ಪ್ರಕರಣದ ತಟಸ್ಥ ಸಲಹೆಗಾರ (ಅಮಿಕಸ್ ಕ್ಯೂರಿ) ಪಿಎಸ್ ನರಸಿಂಹ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಗುರುವಾರ ಅಮಾನತು ರದ್ದುಗೊಳಿಸಿದ್ದು, ನಿಷೇಧ ವಿಧಿಸಿದ 2 ವಾರಗಳ ಬಳಿಕ ಈ ತೀರ್ಮಾನವನ್ನು ಕೈಗೊಂಡಿದೆ.

    ಅಮಾನತು ಆದೇಶ ತೆರವುಗೊಳಿಸಿರುವುದರಿಂದ ಪಾಂಡ್ಯ, ನ್ಯೂಜಿಲೆಂಡ್ ಸರಣಿಗೆ ತೆರಳುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ದೇಶಿಯ ಕ್ರಿಕೆಟ್ ಅಥವಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೀಂ ಇಂಡಿಯಾ ಎ ತಂಡದಲ್ಲಿ ಆಡುವ ಅವಕಾಶವಿದೆ. ಈ ಕುರಿತು ಸಿಒಎ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಸಾರ್ವಜನಿಕ ತನಿಖಾ ಅಧಿಕಾರಿ (Ombudsman)ಯನ್ನು ನೇಮಕ ಮಾಡಿದೆ ಎಂದು ವಿವರಿಸಿದೆ.

    ಬಿಸಿಸಿಐ ಸಿಒಎ ಸಮಿತಿಯ ಸದಸ್ಯರಾಗಿರುವ ಡಯಾನಾ ಎಡುಲ್ಜಿ ಅವರು ಪಾಂಡ್ಯ ಹಾಗೂ ಕೆಎಲ್ ರಾಹುಲ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು  ಕಾನೂನು ಸಮಿತಿಗೆ ಸಲಹೆ ನೀಡಿದ್ದರು. ಆದರೆ ಸಮಿತಿಯ ಮುಖ್ಯಸ್ಥರಾದ ವಿನೋದ್ ರಾಯ್ ಈ ಸಲಹೆಯನ್ನು ತಿರಸ್ಕರಿಸಿದ್ದರು.

    ಹಾರ್ದಿಕ್ ಪಾಂಡ್ಯ ಹಾಗು ಕೆಎಲ್ ರಾಹುಲ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು, ಸೆಕ್ಸ್ ಮೇಲೆ ಆಕ್ಷೇಪಾರ್ಹ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು. ಈ ಕುರಿತು ಸಾರ್ವಜನಿಕ ವಲಯದಿಂದ ಕೇಳಿ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಸಮಿತಿ ಇಬ್ಬರು ಆಟಗಾರರ ಮೇಲೆ ನಿಷೇಧ ವಿಧಿಸಿತ್ತು. ಪರಿಣಾಮ ಇಬ್ಬರು ಆಟಗಾರರು ಆಸ್ಟ್ರೇಲಿಯಾ ಸರಣಿಯಿಂದ ಹಿಂದಿರುಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ಆಸೀಸ್ ಏಕದಿನ ಟೂರ್ನಿಗೆ ಕಮ್‍ಬ್ಯಾಕ್?

    2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ಆಸೀಸ್ ಏಕದಿನ ಟೂರ್ನಿಗೆ ಕಮ್‍ಬ್ಯಾಕ್?

    ಮುಂಬೈ: ಟೀಂ ಇಂಡಿಯಾ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 60 ದಿನಗಳ ಬಳಿಕ ಬೌಲಿಂಗ್ ಅಭ್ಯಾಸ ನಡೆಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

    ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಬಹುದಿನಗಳ ಬಳಿಕ ಮತ್ತೆ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆಸೀಸ್ ವಿರುದ್ಧದ ಏಕದಿನ ಟೂರ್ನಿಗೆ ಬಿಸಿಸಿಐ ತಂಡವನ್ನು ಆಯ್ಕೆ ಮಾಡಬೇಕಿದ್ದು ಸ್ಥಾನ ಸಿಗುವ ಸಾಧ್ಯತೆಯಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ 2019 ಜನವರಿಯಲ್ಲಿ ಆರಂಭವಾಗಲಿರುವ ಆಸೀಸ್ ಏಕದಿನ ಟೂರ್ನಿಯಲ್ಲಿ ಕಮ್‍ಬ್ಯಾಕ್ ಮಾಡಲು ಶ್ರಮವಹಿಸುತ್ತಿದ್ದೇನೆ. ಇದಕ್ಕಾಗಿ ಫಿಟ್ನೆಸ್ ಕಾಯ್ದುಕೊಳ್ಳಲು ಶ್ರಮವಹಿಸುತ್ತಿದ್ದು, ಮುಂಬೈನಲ್ಲಿ ಕಠಿಣ ಬೌಲಿಂಗ್ ಸೆಷನ್ಸ್‍ಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    2016 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಹಾರ್ದಿಕ್ ಪಾಂಡ್ಯ, ಉತ್ತಮ ಪ್ರದರ್ಶನದ ನೀಡುವ ಮೂಲಕ ನಿರಂತರವಾಗಿ ತಂಡದ ಸದಸ್ಯರಾಗಿದ್ದರು. 2019ರ ಮೇ-ಜುಲೈ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಸದ್ಯ ಹಾರ್ದಿಕ್ ಪಾಂಡ್ಯರ ಬಹುಮುಖ್ಯ ಗುರಿಯಾಗಿದೆ. ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯುತ್ತಿದಂತೆ ಆ ಸ್ಥಾನಕ್ಕೆ ಹಾರ್ದಿಕ್ ಸಹೋದರ ಕೃಣಾಲ್ ಪಾಂಡ್ಯ ಆಯ್ಕೆ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾಕ್ ವಿರುದ್ಧದ ಮ್ಯಾಚಲ್ಲಿ ಹಾರ್ದಿಕ್ ಪಾಂಡ್ಯಗೆ ಗಂಭೀರ ಗಾಯ

    ಪಾಕ್ ವಿರುದ್ಧದ ಮ್ಯಾಚಲ್ಲಿ ಹಾರ್ದಿಕ್ ಪಾಂಡ್ಯಗೆ ಗಂಭೀರ ಗಾಯ

    ದುಬೈ: ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ ಪಾಕ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಪಂದ್ಯದ 18ನೇ ಓವರ್ ಬೌಲ್ ಮಾಡುತ್ತಿದ್ದ ಪಾಂಡ್ಯ ತಮ್ಮ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ. ಈ ವೇಳೆ ಮೈದಾನದಲ್ಲೇ ಮಲಗಿದ್ದ ಪಾಂಡ್ಯರನ್ನು ಟೀಂ ಇಂಡಿಯಾ ತಂಡದ ವೈದ್ಯರು ಬಂದು ಉಪಚರಿಸಿದರು. ಬಳಿಕ ವೈದ್ಯರ ಸಲಹೆಯಂತೆ ಸ್ಟ್ರೆಚರ್ ಮೂಲಕ ಪಾಂಡ್ಯರನ್ನು ಮೈದಾನದಿಂದ ಹೊರತರಲಾಯಿತು. ಹಾರ್ದಿಕ್ ಓವರಿನ ಕೊನೆಯ ಎಸೆತವನ್ನು ಅಂಬಟಿ ರಾಯುಡು ಎಸೆದು ಆ ಓವರ್ ಪೂರ್ಣಗೊಳಿಸಿದರು.

    ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಹಾರ್ದಿಕ್ ಸದ್ಯ ನಿಂತು ಕೊಳ್ಳಲು ಸಮರ್ಥರಾಗಿದ್ದು, ವೈದ್ಯಕೀಯ ತಂಡ ಅವರನ್ನು ತಪಾಸಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದೆ. ಪಾಂಡ್ಯ ಸ್ಥಾನದಲ್ಲಿ ಕನ್ನಡಿಗ ಮನೀಶ್ ಪಾಂಡೆ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.

    ಟೀಂ ಇಂಡಿಯಾ ಪರ ಕಳೆದ 12 ತಿಂಗಳಲ್ಲಿ ಪಾಂಡ್ಯ 44 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಪಾಂಡ್ಯ ಟೂರ್ನಿಯ ಎಲ್ಲ ಪಂದ್ಯಗಳಲ್ಲೂ ಸ್ಥಾನ ಪಡೆದಿದ್ದರು. ಉಳಿದಂತೆ ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಒಂದು ಪಂದ್ಯಕ್ಕೆ ಮಾತ್ರ ಪಾಂಡ್ಯರನ್ನು ಕೈ ಬಿಡಲಾಗಿತ್ತು. ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ 46 ಪಂದ್ಯಗಳನ್ನು ಆಡಿದ್ದಾರೆ. ಇದನ್ನು ಓದಿ: ಬೌಂಡರಿ ಗೆರೆಯಲ್ಲಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ – ವೀಡಿಯೋ ನೋಡಿ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್, ಮುಂಬೈ ನಡುವಿನ ಪಂದ್ಯದ ಬಳಿಕ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಟಿ-ಶಾರ್ಟ್ ಗಳನ್ನು ಪರಸ್ಪರ ಬದಲಿಸಿಕೊಂಡಿದ್ದಾರೆ.

    ಈ ಹಿಂದೆ ಪುಟ್ಬಾಲ್ ಪಂದ್ಯವಾಳಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಇಂತಹ ದೃಶ್ಯಗಳು ಕ್ರಿಕೆಟ್‍ನಲ್ಲೂ ಕಂಡಿತು. ಇದೇ ಮೊದಲ ಬಾರಿಗೆ ಆಟಗಾರರು ಪರಸ್ಪರ ಗೌರವದ ಸಂಕೇತವಾಗಿ ತಮ್ಮ ತಂಡಗಳ ಜರ್ಸಿಗಳನ್ನು ನೆರೆದಿದ್ದ ಸಾವಿರು ಅಭಿಮಾನಿಗಳ ಮುಂದೆಯೇ ಬದಲಾಯಿಸಿಕೊಂಡರು.

    ಈ ಪಂದ್ಯದಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಕೇವಲ 60 ಎಸೆತಗಳಲ್ಲಿ 94 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಆದರೆ ಕೆಎಲ್ ರಾಹುಲ್ ಹೋರಟದ ನಡುವೆಯೂ ಮುಂಬೈ 3 ರನ್ ಗಳ ರೋಚಕ ಗೆಲುವು ಪಡೆಯಿತು. ಈ ಮೂಲಕ ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.

    ಮುಂಬೈ ಪರ ಮಿಂಚಿನ ಬೌಲಿಂಗ್ ನಡೆಸಿದ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಮುಂಬೈ ತಂಡಕ್ಕೆ ಮುಳುವಾಗಿದ್ದ ಕೆಎಲ್ ರಾಹುಲ್ ವಿಕೆಟ್ ಸಹ ಬುಮ್ರಾ ಉರುಳಿಸಿದ್ದರು. ಸದ್ಯ ಪಾಂಡ್ಯ ಹಾಗೂ ಕೆಎಲ್ ರಾಹುಲ್ ತಂಡದ ಜರ್ಸಿ ಬದಲಾಯಿಸಿದ ವಿಡಿಯೋವನ್ನು ಪಾಂಡ್ಯ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇಬ್ಬರ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/prashan23S/status/996824768656556032?

  • ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್, ಕೃನಾಲ್ ಎಸೆತದಲ್ಲಿ ಸಿಡಿಸಿದ ಚೆಂಡನ್ನು ಡೈವ್ ಮಾಡಿ ಹಿಡಿಯುವ ಮೂಲಕ ಹಾರ್ದಿಕ್ ಪಾಂಡ್ಯ ಸೂಪರ್ ಕ್ಯಾಚ್ ಹಿಡೆದಿದ್ದಾರೆ. ಈ ಮೂಲಕ ಪಾಂಡ್ಯ ಸಹೋದರರು ಮೋಡಿ ಮಾಡಿದ್ದಾರೆ.

    ಮುಂಬೈ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡದ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಮ್ಯಾಕ್ಸ್ ವೆಲ್ ಕೇವಲ 6 ಎಸೆತಗಳಲ್ಲಿ 13 ರನ್ ಸಿಡಿಸಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ಮ್ಯಾಕ್ಸ್ ವೆಲ್ ರನ್ನು ಔಟ್ ಮಾಡಿದರು. ಕೃನಾಲ್ ೆಸೆತದಲ್ಲಿ  13 ಓವರ್ 2ನೇ ಬಾರಿ ಹೊಡೆತಕ್ಕೆ ಮುಂದಾದ ಮಾಕ್ಸ್ ವೆಲ್ ಬೌಂಡರಿಯತ್ತ ಬಾಲ್ ಸಿಡಿಸಿದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ರನ್ನಿಂಗ್ ಡೈವ್ ಹೊಡೆದು ಕ್ಯಾಚ್ ಹಿಡಿದರು.

    ಇದಕ್ಕೂ ಮುನ್ನ ಕೇವಲ 25 ರನ್ ಎಸೆತಗಳಿಂದ 47 ಸಿಡಿಸಿದ್ದ ರಿಷಭ್ ಪಂತ್ ರ ವಿಕೆಟನ್ನು ಕೃನಾಲ್ ಪಾಂಡ್ಯ ಪಡೆದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಪಾಂಡ್ಯ ಸಹೋದರರಿಗೆ ಅಭಿಮಾನಿಗಳು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಸೋಲುವ ಮೂಲಕ ಟೂರ್ನಿಯಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದೆ. ಮತ್ತೊಂದೆಡೆ ಮುಂಬೈ ವಿರುದ್ಧದ ಗೆಲುವಿನ ಸವಿ ಪಡೆದ ಡೆಲ್ಲಿ  7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಜಯದ ಖಾತೆ ತೆರೆದಿದೆ.

  • ಸೆಲ್ಫಿಯಲ್ಲಿರೋ ಯುವತಿ ಯಾರು: ಕೊನೆಗೂ ರಿವಿಲ್ ಮಾಡಿದ ಪಾಂಡ್ಯ

    ಸೆಲ್ಫಿಯಲ್ಲಿರೋ ಯುವತಿ ಯಾರು: ಕೊನೆಗೂ ರಿವಿಲ್ ಮಾಡಿದ ಪಾಂಡ್ಯ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಹಾರ್ದಿಕ್ ಪಾಂಡ್ಯ, ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಸೆಲ್ಫಿ ಫೋಟೋ ಮೂಲಕ ಮತ್ತೆ ಸುದ್ದಿಯಲ್ಲಿದ್ದರು. ಈ ಫೋಟೋಗೆ ಹಾರ್ದಿಕ್ ಪಾಂಡ್ಯ ಸ್ಪಷ್ಟನೆ ನೀಡುವ ಮೂಲಕ ಗಾಸಿಪ್‍ಗೆ ತೆರೆ ಎಳೆದಿದ್ದಾರೆ.

    http://www.instagram.com/p/BZoXZpAlm2J/?hl=en&taken-by=hardikpandya_official

     

    ಯುವತಿಯ ಜೊತೆಗೆ ಇರುವ ಫೋಟೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್ ಹಬ್ಬಿಸಿದ್ದರು. ಈಗ ಹಾರ್ದಿಕ್ ಇಂದು ಫೋಟೋದಲ್ಲಿರುವವರು ಬೇರೆ ಯಾರೂ ಅಲ್ಲ ಅದು ನನ್ನ ಸಹೋದರಿ ಎಂದು ಸ್ಪಷ್ಟನೆ ನೀಡುವುದರ ಮೂಲಕ ಗಾಸಿಪ್‍ಗೆ ತೆರೆ ಎಳೆದಿದ್ದಾರೆ.

    ಇನ್ಸ್ಟಾ ಗ್ರಾಮ್ ನಲ್ಲಿ ಸಹೋದರಿಯ ಜೊತೆ ಸೆಲ್ಫಿ ತೆಗೆದಿರುವ ಫೋಟೋವನ್ನು ಅಪ್‍ಲೋಡ್ ಮಾಡಿದ ಕೆಲ ಸಮಯದಲ್ಲೇ 11,200 ಜನ ಫೋಟೋವನ್ನು ಇಷ್ಟ ಪಟ್ಟಿದ್ದರೆ, 3,400 ಮಂದಿ ಶೇರ್ ಮಾಡಿದ್ದರು.

    ಇತ್ತಿಚೆಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಜೊತೆ ಪಾಡ್ಯ ಲವ್ ಗಾಸಿಪ್ ಹರಡಿತ್ತು. ಇಬ್ಬರೂ ಮಧ್ಯೆ ಡೇಟಿಂಗ್ ಹಾಗೂ ಚಾಟಿಂಗ್ ನಡೆಯುತ್ತಿದೆ ಎಂದು ಊಹಾಪೋಹಗಳು ಹರಡಿದ್ದವು. ಇದನ್ನು ಸಹ ಅಲ್ಲಗೆಳೆದ ಹಾರ್ದಿಕ್, ನನ್ನ ಹಾಗೂ ಪರಿಣಿತಿ ಮಧ್ಯೆ ಯಾವುದೇ ರೀತಿಯ ಚಾಟಿಂಗ್ ಡೇಟಿಂಗ್ ನಡೆದಿಲ್ಲ. ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಬರೆದುಕೊಂಡಿದ್ದರು.

     ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಈ ಸರಣಿಯಲ್ಲಿ 222 ರನ್ ಬಾರಿಸಿ 6 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ 66 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ 83 ರನ್‍ಗಳನ್ನು ಹೊಡೆದಿದ್ದರು.