Tag: Hungary

  • ತಪ್ಪಿಸಿಕೊಂಡು ಹೋದ ಪೆಂಗ್ವಿನ್ – ಕೊನೆಗೂ ಅಧಿಕಾರಿಗಳ ಕೈಗೆ

    ತಪ್ಪಿಸಿಕೊಂಡು ಹೋದ ಪೆಂಗ್ವಿನ್ – ಕೊನೆಗೂ ಅಧಿಕಾರಿಗಳ ಕೈಗೆ

    ಬುಡಾಪೆಸ್ಟ್: ಹಂಗೇರಿಯಲ್ಲಿ ಝೋನಿಂದ ತಪ್ಪಿಸಿಕೊಂಡು ಬೀದಿಯಲ್ಲಿ ಅಲೆದಾಡುತ್ತಿದ್ದ ಪೆಂಗ್ವಿನ್‍ನನ್ನು ಪೊಲೀಸರು ರಕ್ಷಿಸಿದ್ದಾರೆ. ಈ ವೇಳೆ ಅದರ ಜೊತೆ ಸಖತ್ ಆಗಿ ಎಂಜಯ್ ಮಾಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಹಂಗೇರಿಯ ಝೋನಿಂದ ಪೆಂಗ್ವಿನ್ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಬುಡಾಪೆಸ್ಟ್ ಪೊಲೀಸ್ ಇಲಾಖೆ ಪೆಂಗ್ವಿನ್ ಹಿಡಿಯಲು ಮುಂದಾಗಿದ್ದು, ಅವರೇ ಪೆಂಗ್ವಿನ್ ನೋಡಿ ಆಶ್ಚರ್ಯಚಕಿತರಾದರು. ಇದನ್ನೂ ಓದಿ: ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

    ‘ಸಾನಿಕಾ’ ಎಂಬ 6 ತಿಂಗಳ ಪೆಂಗ್ವಿನ್ ಝೋನಿಂದ ತಪ್ಪಿಸಿಕೊಂಡಿತ್ತು. ಇಷ್ಟು ಕಾವಲು ಇದ್ದರೂ ಹೇಗೆ ಇದು ತಪ್ಪಿಸಿಕೊಂಡು ಹೋಯ್ತು ಎಂದು ಆಶ್ಚರ್ಯಪಟ್ಟುಕೊಂಡಿದ್ದರು. ಈ ಹಿನ್ನೆಲೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಾನಿಕಾಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಪ್ರಸ್ತುತ ಸಾನಿಕಾ ಸುರಕ್ಷಿತವಾಗಿದ್ದು, ಅಧಿಕಾರಿಗಳ ಜೊತೆ ಚೆನ್ನಾಗಿ ಆಟವಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಸಾನಿಕಾಳನ್ನು ಹಿಡಿಯಲು ಹೋದಾಗ ಆಟಾಡಿಸಿದಳು. ಅವಳ ಜೋಶ್ ನೋಡಿ ನಮಗೆ ಆಶ್ಚರ್ಯವಾಗಿತ್ತು. ಅಲ್ಲದೇ ನಾವು ಸಹ ಈ ವೇಳೆ ಸಖತ್ ಎಂಜಾಯ್ ಮಾಡಿದ್ದೇವೆ. ನಮಗೆ ಅಧಿಕಾರಿಯೊಬ್ಬರು ಪೆಂಗ್ವಿನ್‍ವೊಂದು ಇಲ್ಲಿ ಓಡಾಡುತ್ತಿದೆ ಎಂದು ತಿಳಿಸಿದರು. ಆ ಮಾಹಿತಿ ಮೇರೆಗೆ ನಾವು ಇಲ್ಲಿಗೆ ಬಂದಿದ್ದೇವೆ. ಪೆಂಗ್ವಿನ್‍ನನ್ನು ಸುರಕ್ಷಿತವಾಗಿ ಹಿಡಿದಿದ್ದೇವೆ ಎಂದು ವಿವರಿಸಿದರು.

    ಪ್ರಸ್ತುತ ಪೆಂಗ್ವಿನ್‍ನನ್ನು ಮೆಟ್ರೋಪಾಲಿಟನ್ ಮೃಗಾಲಯ ಮತ್ತು ಬೊಟಾನಿಕಲ್ ಗಾರ್ಡನ್‍ಗೆ ಹಸ್ತಾಂತರಿಸಲಾಗಿದೆ ಎಂದು ಬರೆದು ಸಾನಿಕಾ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಅಧಿಕಾರಿಗಳ ಕೆಲಸಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ಪೆಂಗ್ವಿನ್ ರಕ್ಷಣೆ ಮಾಡಿದ್ದಕ್ಕೆ ನೆಟ್ಟಿಗರು ಧನ್ಯವಾದವನ್ನು ಅರ್ಪಿಸಿದ್ದಾರೆ. ಇದನ್ನೂ ಓದಿ: ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ

  • ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಉತ್ತರ ಬಂದಿಲ್ಲ: ವಿದ್ಯಾರ್ಥಿ ಸಹೋದರ

    ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಉತ್ತರ ಬಂದಿಲ್ಲ: ವಿದ್ಯಾರ್ಥಿ ಸಹೋದರ

    ಧಾರವಾಡ: ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿ ಸಹೋದರ ಅನಂತ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ಉಕ್ರೇನ್‍ಲ್ಲಿ ಸಿಲುಕಿರುವ ಎಂಬಿಬಿಎಸ್ ವಿದ್ಯಾರ್ಥಿ ಮಿಲನ್ ದೇವಮಾನೆ ಇಂದು ಬೆಳಿಗ್ಗೆ ಹಂಗೇರಿ ಗಡಿ ಬಳಿ ಇದ್ದೇನೆ ಎಂದು ಕುಟುಂಬದವರಿಗೆ ಹೇಳಿದ್ದ. ಅದರ ನಂತರ ಕಾಲ್ ಮಾಡುತ್ತೇನೆ ಎಂದಿದ್ದ ಮಿಲನ್, ಮತ್ತೇ ವಾಟ್ಸಪ್ ಸಂದೇಶಕ್ಕೆ ಉತ್ತರ ನೀಡಿಲ್ಲ ಎಂದು ಸಹೋದರ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    ನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಸಹೋದರ ಅನಂತ ಅವರು, ಮಿಲನ್ ಜಾಫೆÇ್ರೀಜಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾನೆ. ಕಳೆದ ಡಿಸೆಂಬರ್‍ನಲ್ಲಿ ಉಕ್ರೇನ್‍ಗೆ ಹೋಗಿದ್ದಾನೆ ಅಂತ ಹೇಳಿದರು. ಮಿಲನ್ ಯುದ್ಧ ಇದೆ ಎಂದು ವಾಪಸ್ ಬರಲು ತಯಾರಾಗಿದ್ದನು. ಆದರೆ ದಾಖಲೆ ತಡ ಸಿಕ್ಕಿದ್ದರಿಂದ ವಿಮಾನ ಬುಕ್ ಮಾಡಲು ಆಗಿರಲಿಲ್ಲ ಎಂದರು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ಮಿಲನ್ ಈಗ ರೇಲ್ವೇ ಮೂಲಕ ಹಂಗೇರಿಗೆ ಬಂದಿದ್ದಾನೆ. ಕಳೆದ ರಾತ್ರಿ 12 ಗಂಟೆಗೆ ಅವನು ಹಂಗೇರಿ ಮುಟ್ಟಿದ್ದಾನೆ. ಸದ್ಯ ಧಾರವಾಡ ಜಿಲ್ಲಾಧಿಕಾರಿ ಇಂದು ಬಂದು ನನಗೆ ಭೇಟಿ ಮಾಡಿ, ಎಲ್ಲ ಮಾಹಿತಿ ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.