Tag: Hundred Crore Club

  • ನೂರು ಕೋಟಿ ರೂಪಾಯಿ ಕ್ಲಬ್ ಸೇರಿದ ‘ಆಡುಜೀವಿತಂ’ ಸಿನಿಮಾ

    ನೂರು ಕೋಟಿ ರೂಪಾಯಿ ಕ್ಲಬ್ ಸೇರಿದ ‘ಆಡುಜೀವಿತಂ’ ಸಿನಿಮಾ

    ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ (Hundred Crore Club)  ಸೇರಿದೆ. ಈ ಕುರಿತಂತೆ ನಟ ಪೃಥ್ವಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಂಡಿದ್ದಾರೆ. ಎಂಟು ದಿನದಲ್ಲಿ ನೂರು ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಮಲಯಾಳಂ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

    ಕಳೆದ ಗುರುವಾರವಷ್ಟೇ ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಸಿನಿಮಾ ರಿಲೀಸ್ ಆಗಿ ಮೂರೇ ಮೂರು ದಿನಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಜೊತೆಗೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಈಗ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಸೇರಿದಂತೆ ಹಲವು ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಸೌತ್‌ನ ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ (Maniratnam) ಅವರು ‘ಆಡುಜೀವಿತಂ’ (Aadujeevitham) ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.

    ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಆ ಪಾತ್ರವೇ ತಾವಾಗಿ ನಟಿಸುವ ಪ್ರತಿಭಾನ್ವಿತ ಕಲಾವಿದ. ಅದಕ್ಕೆ ತಾಜಾ ಉದಾಹರಣೆಯಾಗಿ ಆಡುಜೀವಿತಂ ಸಿನಿಮಾದಲ್ಲಿನ ಅವರ ನಟನೆಯೇ ಸಾಕ್ಷಿ. ಇದೀಗ ಅವರ ನಟನೆ, ಚಿತ್ರದ ಬಗ್ಗೆ ಮಣಿರತ್ನಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಸಿನಿಮಾಗೆ ಅಭಿನಂದನೆಗಳು, ನೀವು ಇದನ್ನು ಹೇಗೆ ನಿಭಾಯಿಸಿದ್ದೀರಿ ನನಗೆ ತಿಳಿದಿಲ್ಲ. ನಿಮ್ಮೆಲ್ಲರ ಶ್ರಮ ತೆರೆಯ ಮೇಲೆ ಕಾಣುತ್ತಿದೆ. ಸಿನಿಮಾವನ್ನು ಸುಂದರವಾಗಿ ಚಿತ್ರೀಸಲಾಗಿದೆ ಎಂದು ಮಣಿರತ್ನಂ ಸಿನಿಮಾವನ್ನು ಬಣ್ಣಿಸಿದ್ದಾರೆ.  ಬಳಿಕ ಮರುಭೂಮಿಯಲ್ಲಿ ಎದುರಿಸುವ ವಿವಿಧ ಕಷ್ಟಗಳನ್ನು ತೋರಿಸಿದ್ದೀರಿ. ನಿಮ್ಮ ಮತ್ತು ಸುನೀಲ್ ಕೆಲಸ ಅದ್ಭುತವಾಗಿದೆ ಎಂದು ಮಣಿರತ್ನಂ ತಂಡಕ್ಕೆ ಭೇಷ್ ಎಂದಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ನಟನೆ ನೋಡಿ ಕೊಂಡಾಡಿದ್ದಾರೆ. ಇದು ನಿಜವಾಗಿಯೂ ಸಂಭವಿಸಿದೆ ಎಂದು ಯೋಚಿಸಲು ಭಯಾನಕವಾಗಿದೆ ಎಂದಿದ್ದಾರೆ. ಈ ಚಿತ್ರವು ಸೆಂಟಿಮೆಂಟಲ್ ಆಗಿ ಮೂಡಿ ಬಂದಿದೆ. ಚಿತ್ರದ ಫಿನಿಶಿಂಗ್ ತುಂಬಾ ಇಷ್ಟವಾಯಿತು. ಚಿತ್ರತಂಡಕ್ಕೆ ಶುಭವಾಗಲಿ ಎಂದು ಮಣಿರತ್ನಂ ತಿಳಿಸಿದ್ದಾರೆ.

    ಮಣಿರತ್ನಂ ಅವರ ಬೆಂಬಲಕ್ಕೆ ಆಡುಜೀವಿತಂ ನಿರ್ದೇಶಕ ಬ್ಲೆಸ್ಸಿ ಕೂಡ ಪ್ರತಿಕ್ರಿಯಿಸಿ, ಧನ್ಯವಾದಗಳು ಸರ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನಿರ್ದೇಶಕ ಬ್ಲೆಸ್ಸಿ ಶೇರ್‌ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಈ ‘ಆಡು ಜೀವಿತಂ’ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.

    ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ `ಆಡುಜೀವಿತಂ’ 2008ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು. ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆಯನ್ನು ಮತ್ತು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತಾರೆ. ಪೃಥ್ವಿರಾಜ್ ನಜೀಬ್ ಪಾತ್ರ ನಿರ್ವಹಿಸಿದ್ದಾರೆ.

     

    ಚಿತ್ರದ ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ದೇಹವನ್ನು ದಂಡಿಸಿದ್ದಾರೆ. ಅವರು ಸಿನುಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಕಳೆದ ಚಿತ್ರ ಐದು ವರ್ಷಗಳಿಂದ ತಯಾರಾಗುತ್ತಿದೆ ಎಂಬುದು ವಿಶೇಷ. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮೆರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನ ಕೆಲಸವಿದೆ.

  • ಒಟಿಟಿಗೆ ಭಾರೀ ಮೊತ್ತಕ್ಕೆ ಸೇಲ್ ಆಯಿತು ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾ

    ಒಟಿಟಿಗೆ ಭಾರೀ ಮೊತ್ತಕ್ಕೆ ಸೇಲ್ ಆಯಿತು ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾ

    ಬಿಡುಗಡೆಗೂ ಮುನ್ನ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತಾ? ಹೌದು ಎನ್ನುತ್ತಿದೆ ಬಿಟೌನ್. ಹಿಂದಿ ಭಾಷೆಯಲ್ಲೇ ಕಲ್ಕಿ 175 ಕೋಟಿ ರೂಪಾಯಿಗೆ ಒಟಿಟಿಗೆ (OTT) ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲಿಸ್ ಗೂ ಮುನ್ನ ದಾಖಲೆಯ ಮೊತ್ತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.

    ಅಂದುಕೊಂಡಂತೆ ಆಗಿದ್ದರೆ, ಕಲ್ಕಿ ಸಿನಿಮಾ ಮೇ 9ಕ್ಕೆ ಬಿಡುಗಡೆ ಆಗಬೇಕಿತ್ತು. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ಅಮಿತಾಭ್ ಅವರೇ ಹೇಳಿಕೊಂಡಿದ್ದರು. ಆದರೆ, ಅಂದು ಸಿನಿಮಾ ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಕಾರಣದಿಂದಾಗಿ ಬಿಡುಗಡೆಯನ್ನು ಚುನಾವಣೆ ನಂತರ ಮಾಡಲು ನಿರ್ಧರಿಸಿದ್ದಾರಂತೆ.

    ಸಿನಿಮಾ (Kalki)  ರಿಲೀಸ್ (release) ಡೇಟ್ ಅನ್ನು ಸ್ವತಃ ಅಮಿತಾಭ್ ಅವರೇ ಮಾಡಿದ್ದರೂ, ಮುಂದೂಡಿರುವ ವಿಚಾರವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಮುಂದೂಡುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

    ಮೊನ್ನೆಯಷ್ಟೇ ಅಮಿತಾಭ್ ಬಚ್ಚನ್ ಸಿನಿಮಾ ಶೂಟಿಂಗ್ (Shooting) ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಇತ್ತೀಚೆಗಷ್ಟೇ ನಟ ಅಮಿತಾಭ್ ಬಚ್ಚನ್  (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

     

    ಈ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಪ್ರಭಾಸ್ (Prabhas) ನಟನೆಯ ಈ ಸಿನಿಮಾದ ಮತ್ತೊಂದು ಪೋಸ್ಟರ್ (Poster) ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ರಜನಿಯ ‘ಜೈಲರ್’ ಸಿನಿಮಾದ ಎರಡು ದಿನದ ಗಳಿಕೆ 100 ಕೋಟಿ ರೂಪಾಯಿ

    ರಜನಿಯ ‘ಜೈಲರ್’ ಸಿನಿಮಾದ ಎರಡು ದಿನದ ಗಳಿಕೆ 100 ಕೋಟಿ ರೂಪಾಯಿ

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಕೇವಲ ಎರಡೇ ದಿನಕ್ಕೆ ಜೈಲರ್ ನೂರು ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಮತ್ತೆ ಸೂಪರ್ ಸ್ಟಾರ್ ಅಬ್ಬರಿಸಿದ್ದಾರೆ. ಬರೀ ಸೋಲುಗಳ ಸುಳಿಯಲ್ಲೇ ತಿರುಗುತ್ತಿದ್ದ ರಜನಿಗೆ ಜೈಲರ್ ಕೈ ಹಿಡಿದಿದೆ.

    ಜೈಲರ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಏಳು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಹಾಗಾಗಿ ಮೊದಲನೇ ದಿನ 72 ಕೋಟಿ ರೂಪಾಯಿ ಬಾಚಿದ್ದರೆ, ಎರಡನೇ ದಿನದ ಅಂತ್ಯಕ್ಕೆ 100 ಕೋಟಿ ರೂಪಾಯಿ ದಾಟಿದೆ (Hundred Crore Club) ಎಂದು ಹೇಳಲಾಗುತ್ತಿದೆ. ಸಾಲು ಸಾಲು ರಜೆಗಳು  ಇರುವುದರಿಂದ ನಾಲ್ಕು ದಿನದ ಗಳಿಕೆ ಇನ್ನೂ ನೂರು ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ

    ‘ಜೈಲರ್’ (Jailer) ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿತ್ತು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸಿದ್ದ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ.

     

    ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿತ್ತು. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ₹100 ಕೋಟಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಇಂದು ₹100 ಕೋಟಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಭಾರೀ ವಿವಾದ ಹಾಗೂ ನಿಷೇಧದ ನಡುವೆಯೂ ದಿ ಕೇರಳ ಸ್ಟೋರಿ (The Kerala Story) ಇಂದು ನೂರು ಕೋಟಿ ಕ್ಲಬ್ ಸೇರಲಿದೆ. ಸತತ ಎರಡು ವಾರಗಳಿಂದ ಬಾಕ್ಸ್ ಆಫೀಸ್ (Box Office) ದೋಚುತ್ತಿರುವ ಸಿನಿಮಾ ನಿನ್ನೆಗೆ ರೂ.93.37 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ದಿನಕ್ಕೆ ಅಂದಾಜು 12 ಕೋಟಿ ರೂಪಾಯಿ ಗಳಿಕೆ ಮಾಡುತ್ತಿರುವುದರಿಂದ ಇಂದು ಸಿನಿಮಾ ನೂರು ಕೋಟಿ (Hundred Crore Club) ಕ್ಲಬ್ ಸೇರಲಿದೆ.

    ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಬಾಕ್ಸ್ ಆಫೀಸಿನಲ್ಲಿ ದಾಖಲೆ ಕಲೆಕ್ಷನ್ ಕಲೆ ಹಾಕುತ್ತಿದೆ. ರಿಲೀಸ್ ಆದ 8 ದಿನಕ್ಕೆ ಬರೋಬ್ಬರಿ 93.37 ಕೋಟಿ ರೂಪಾಯಿ ಬಾಚುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ. ಈ ಪ್ರಮಾಣದಲ್ಲಿ ದಿ ಕೇರಳ ಸ್ಟೋರಿ ಗೆಲ್ಲುತ್ತಿದ್ದಂತೆಯೇ ಅದಾ ಶರ್ಮಾಗೆ ಭರ್ಜರಿ ಆಫರ್ಸ್ ಬರುತ್ತಿವೆ. ಅಲ್ಲದೇ, ಅನೇಕ ಸಂಘಟನೆಗಳು ಸಿನಿಮಾವನ್ನು ಉಚಿತವಾಗಿ ತೋರಿಸುವ ಮೂಲಕ ಬಾಕ್ಸ್ ಆಫೀಸಿಗೆ ಆದಾಯ ಹರಿದು ಬರುವಂತೆ ಮಾಡುತ್ತಿದ್ದಾರೆ.  ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಎರಡು ರಾಜ್ಯಗಳಲ್ಲಿ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಐದೇ ದಿನಕ್ಕೆ ಐವತ್ತು ಕೋಟಿ ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಮಾಡಿದ್ದಾರೆ. ಆದರೆ, ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರವೇ ಬೇರೆ ಇದೆ. ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದರಿಂದ ಇನ್ನೂ ಭಾರಿ ಪ್ರಮಾಣದಲ್ಲಿ ಹಣ ಹರಿದು ಬರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

    ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಅಚ್ಚರಿ ಎನ್ನುವಂತೆ ದುಡ್ಡು ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಮಂಗಳವಾರ 11.14 ಕೋಟಿ ರೂ. ಬುಧವಾರ 12 ಕೋಟಿ ರೂ. ಶುಕ್ರವಾರ ಕೂಡ 12.23 ಕೋಟಿ ರೂಪಾಯಿ  ಸೇರಿ ಭಾರತದಲ್ಲೇ ಏಳು ದಿನಕ್ಕೆ 93.37 ಕೋಟಿ ಗಳಿಕೆ ಮಾಡಿದೆ.