Tag: Hundi

  • ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 1 ಕೋಟಿ 11 ಲಕ್ಷದ 25 ಸಾವಿರದ 636 ರುಪಾಯಿ ನಗದು ಕಾಣಿಕೆಯಾಗಿ ದೊರತಿದೆ.

    ಇದರ ಜೊತೆಗೆ 25 ಗ್ರಾಂ ಚಿನ್ನ ಮತ್ತು 1 ಕೆ.ಜಿ 382 ಗ್ರಾಂ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ. ಜನವರಿ 31ರ ತಡರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಇಷ್ಟೊಂದು ಕಾಣಿಕೆ ಭಕ್ತರಿಂದ ಬಂದಿದೆ.

    ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ ರೂಪ ಅಧ್ಯಕ್ಷತೆಯಲ್ಲಿ, ಸಾಲೂರು ಮಠದ ಗುರುಸ್ವಾಮಿ ಸಮ್ಮಖದಲ್ಲಿ ಮತ್ತು ಎಸ್‍ಬಿಐ ಬ್ಯಾಂಕ್ ಸಿಬ್ಬಂದಿಗಳು ಸಿಸಿ ಕ್ಯಾಮಾರಾದ ಕಣ್ಗಾವಲಿನಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಸಿದರು.

    ಹುಂಡಿ ಎಣಿಕೆ ಕಾರ್ಯ ಪ್ರತಿ ತಿಂಗಳ ಕೊನೆಯ ದಿನದಂದು ನಡೆಯುತ್ತದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತರುವ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ 2ನೇ ಸ್ಥಾನವನ್ನ ಮಲೆ ಮಹದೇಶ್ವರ ದೇವಾಲಯದ ಪಡೆದುಕೊಂಡಿದೆ.

  • ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

    ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

    ಮಂಡ್ಯ: ಪುರಾತತ್ವ ಇಲಾಖೆಗೆ ಸೇರಿದ ಶ್ರೀರಾಮನ ದೇಗುಲದಲ್ಲಿ ವ್ಯಕ್ತಿಯೊಬ್ಬ ಹುಂಡಿ ಒಡೆದು ಹಣ ದೋಚಿದ್ದು ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸುಮಾರು 650 ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿದೆ. ಈ ದೇವಾಲಯದ ಒಳಗೆ ಜನವರಿ 24 ರಂದು ಮಧ್ಯರಾತ್ರಿ ವೇಳೆಗೆ ಆಗಮಿಸುವ ಆಗಂತುಕ ವ್ಯಕ್ತಿಯೊಬ್ಬ ದೇವರ ಗಂಟೆಯಿಂದಲೇ ಹುಂಡಿ ಬೀಗ ಹೊಡೆದು ಹಣ ದೋಚಿ ಪರಾರಿಯಾಗಿದ್ದಾನೆ.

    ಚಡ್ಡಿ ಹಾಕಿಕೊಂಡು, ಚಳಿಯಾಗದಂತೆ ಮೈತುಂಬ ರಗ್ಗೊಂದನ್ನು ಸುತ್ತಿಕೊಂಡು ಬಂದಿರುವ ವ್ಯಕ್ತಿ, ದೇವರ ಮೇಲಿನ ಭಯ ಭಕ್ತಿ ಇಲ್ಲದೇ ಹುಂಡಿ ಹೊಡೆದು ಹಣ ದೋಚಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರೋ ದೇವಾಲಯದ ಬಗ್ಗೆ ತಿಳಿದಿರುವ ಸುತ್ತಮುತ್ತಲ ಗ್ರಾಮದ ವ್ಯಕ್ತಿಯೇ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ದೇವಾಲಯದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿದ್ದು, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ಬೆಂಗಳೂರು: ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ಮೋಟುಗಳನ್ನ ಬ್ಯಾನ್ ಮಾಡಿ ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಧೂಳು ತಿನ್ನುತ್ತಿವೆ.

    ಹೆಚ್ಚಿನ ದೇವಾಲಯಗಳು ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ದೇವಾಲಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಂಡಿದ್ದರು. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಹಳೇ ನೋಟುಗಳು ಧೂಳು ತಿನ್ನುತ್ತಾ ಬಿದ್ದಿವೆ.

    ಬೆಂಗಳೂರಿನ ಶ್ರೀ ಮಹಾಗಣಪತಿ ಮತ್ತು ಸಮೂಹ ದೇವಸ್ಥಾನ, ಶ್ರೀ ರಾಯರಾಯ ಕಲ್ಯಾಣ ಮಂಟಪ ಮತ್ತು ಸಮೂಹ ದೇವಾಲಯಗಳು, ಬನಶಂಕರಿ, ಪ್ರಸನ್ನ ವೀರಾಂಜನೇಯ ಸ್ವಾಮಿ, ದೊಡ್ಡಗಣಪತಿ ಸೇರಿದಂತೆ ಒಟ್ಟು 54 ದೇವಾಲಯಗಳಲ್ಲಿ ಕಳೆದ ಮಾರ್ಚ್ 27ರಂದು ಅಧಿಕಾರಿಗಳು ಹುಂಡಿ ತೆರೆದಿದ್ದರು. ಈ ವೇಳೆ 20 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಳೇ ನೋಟುಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು ಈ ನೋಟುಗಳನ್ನು ಬ್ಯಾಂಕಿಗೆ ಹಾಕದೆ ಸ್ಟ್ರಾಂಗ್ ರೂಮ್‍ನಲ್ಲಿ ಧೂಳು ಹಿಡಿಯಲು ಬಿಟ್ಟಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಹಿರಂಗವಾಗಿದೆ.

    ಬೆಂಗಳೂರಿನ ಒಟ್ಟು 54 ದೇವಾಲಯಗಳ ಹುಂಡಿಗಳಲ್ಲಿ 20 ಲಕ್ಷ ರೂಪಾಯಿ ಹಳೇ ನೋಡು ಕೊಳೆಯುತ್ತಾ ಬಿದ್ದಿದೆ. ದೇವಾಲಯಗಳ ಅಭಿವೃದ್ಧಿಗೆ ಈ ಹಣವನ್ನ ಬಳಸಬಹುದಿತ್ತು. ಅಷ್ಟು ದುಡ್ಡಿಗೆ ಬೆಲೆನೇ ಇಲ್ವಾ? ಮುಜರಾಯಿ ಸಚಿವರು, ಅಧಿಕಾರಿಗಳೇ ಇದಕ್ಕೆ ಕಾರಣ. ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

  • ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನ: ಭಾನುವಾರ ಬೆಳಗ್ಗೆ ಆರಂಭಗೊಂಡಿದ್ದ ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ ಸಂಜೆ ವೇಳೆ ಮುಕ್ತಾಯಗೊಂಡಿದ್ದು, ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿವೆ.

    ಒಂದು ಸಾವಿರ ಬೆಲೆಯ ಟಿಕೆಟ್‍ನಿಂದ 1.3 ಕೋಟಿ ರೂಪಾಯಿ, 300 ರೂಪಾಯಿ ಟಿಕೆಟ್‍ನಿಂದ 1.2ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಪ್ರಸಾದದ ಆದಾಯ 70 ಲಕ್ಷ ರೂಪಾಯಿ ಬಂದಿದೆ. ಒಟ್ಟು ಈ ಬಾರಿಯ ಜಾತ್ರೆಯಲ್ಲಿ 4.14 ಕೋಟಿ ರೂ. ಆದಾಯ ಬಂದಿದೆ.

    ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನ ಹುಂಡಿ ಎಣಿಕೆ ಮಾಡಿದ್ದರು. 4 ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾ ಕಾರ್ಯ ಮುಕ್ತಾಯವಾಗಿದೆ. ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಈ ಬಾರಿ ಸುಮಾರು 5 ಕೋಟಿ ರೂ. ಅಧಿಕ ಆದಾಯವನ್ನು ನಿರೀಕ್ಷಿಸಲಾಗಿತ್ತು.

    ಕಳೆದ ವರ್ಷ ಹಾಸನಾಂಬೆ ಜಾತ್ರೆಯಲ್ಲಿ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

    ವಿಶೇಷವಾಗಿ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿದ್ದು, ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು. ನನ್ನ ಮುಖದ ಮೊಡವೆಗಳನ್ನ ನಿವಾರಣೆ ಮಾಡು. ನನ್ನ ಸೌಂದರ್ಯವನ್ನ ಹೆಚ್ಚಿಸು. ಅತ್ತೆ ಮನೆ ಕಿರುಕುಳದಿಂದ ಪಾರು ಮಾಡು. ನನ್ನ ರೋಗ ನಿವಾರಿಸು ಎಂಬ ನಾನಾ ಕೋರಿಕೆಗಳನ್ನು ದೇವಿ ಬಳಿ ಭಕ್ತರು ಕೇಳಿಕೊಂಡಿದ್ದಾರೆ.

  • ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

    ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

    ಬೆಂಗಳೂರು: ನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಭಕ್ತರ ವಿಚಿತ್ರ ಬೇಡಿಕೆಯ ಪತ್ರಗಳು ಸಿಕ್ಕಿವೆ.

    ಮಾಂಗಲ್ಯ ಉಳಿಸಲು ದೇವಿಗೆ ಹರಕೆ ನೀಡುತ್ತಾರೆ. ಆದ್ರೇ ಇಲ್ಲೊಬ್ಬ ಭಕ್ತೆ ನನ್ನ ಗಂಡನನ್ನು ಕೊಲ್ಲಮ್ಮ. ನನ್ನ ವಿಧವೆ ಮಾಡು ಅಂತಾ ಪತ್ರ ಬರೆದು ದೇವಿ ಹುಂಡಿಗೆ ಹಾಕಿದ್ದಾರೆ. ನನ್ನನ್ನು ರಕ್ಷಿಸಿ, ನನ್ನ ಗಂಡನನ್ನು ಕೊಂದು ಹಾಕು. ಆತನ ಅಹಂಕಾರ ಹುಟ್ಟಡಗಿಸು ಅಂತಾ ಪತ್ರದಲ್ಲಿ ಬರೆಯಲಾಗಿದೆ.

    ಇನ್ನೋರ್ವ ಯುವಕ ನಾನಿನ್ನು ವಾಟ್ಸಾಪ್ ಅನ್ ಇನ್ಸ್ಟಾಲ್ ಮಾಡಿಕೊಳ್ಳುತ್ತೇನೆ. ಅತ್ತೆ ಮಗಳು ಸೌಂದರ್ಯ ಹಾಗೂ ಸೌಮ್ಯ ಜೊತೆ ಚಾಟ್ ಮಾಡಲ್ಲ. ಕೆಟ್ಟ ವಿಡಿಯೋ ನೋಡಲ್ಲ. ಒಬ್ಬನೇ ಪಾನಿಪುರಿ ಕಾಫಿ-ಟೀ ಕುಡಿಯಲ್ಲ. ಇದಕ್ಕೆಲ್ಲ ನಂಗೆ ಶಕ್ತಿ ಕೊಡು ಅಂತಾ ಪತ್ರ ಬರೆದಿದ್ದಾರೆ. ಹೀಗೆ ದೇವಿಗೆ ಸಾಕಷ್ಟು ಜನ ಚಿತ್ರ ವಿಚಿತ್ರ ಬೇಡಿಕೆಯ ಪತ್ರ ಬರೆದಿದ್ದಾರೆ. ಪತ್ರ ನೋಡಿ ಮುಜರಾಯಿ ಇಲಾಖೆ ಅಧಿಕಾರಿಗಳು ದಂಗಾಗಿದ್ದಾರೆ.

    ಮಹಿಳೆಯ ಪತ್ರದಲ್ಲಿ ಏನಿದೆ?: ನನ್ನ ವಿಧವೆ ಮಾಡು. ನನ್ನ ಗಂಡನ ಅಹಂಕಾರವನ್ನು ಅಡಗಿಸು. ನನ್ನ ಗಂಡ ಸತ್ತರೆ ಸಾಕು. ನಾನು ವಿಧವೆ ಆದರೆ ಸಾಕು. ನನ್ನ ಮಗನನ್ನು, ನನ್ನನ್ನು ನೆಮ್ಮದಿಯಾಗಿಡು ತಾಯಿ. ನನ್ನ ಗಂಡನ ಅಹಂಕಾರವನ್ನು ತುಳಿದು ಹಾಕು. ನನ್ನ ಗಂಡನ ಅಟ್ಟಹಾಸಕ್ಕೆ ಮಟ್ಟ ಹಾಕು ತಾಯಿ. ತಾಯಿ ಬನಶಂಕರಿ ದೇವಿ ನನ್ನ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ನೆರವೇರಿಸು ದೇವಿ. ನನ್ನ ಮಗನಿಗೆ ಒಳ್ಳೆಯ ವಿದ್ಯೆ, ಬುದ್ಧಿ, ಸಕಲ ಸಂತೋಷ, ಸಂಪತ್ತು, ದೀರ್ಘಾಯುಷ್ಯ, ಅಷ್ಟೈಶ್ವರ್ಯಗಳನ್ನು ದಯಪಾಲಿಸು ದೇವಿ. ನನ್ನನ್ನು ನೀನೇ ರಕ್ಷಿಸಬೇಕು. ನನ್ನ ಗಂಡನಿಗೆ ಸಾವು ಕೊಡು. ಬನಶಂಕರಿ ಅಮ್ಮ ನನ್ನ ಮಗ ಆರ್.ಪರೀಕ್ಷಿತ್ ಎಂಜಿನಿಯರ್ ಫಸ್ಟ್ ಸೆಮ್ ಎಲೆಕ್ಟ್ರಿಕಲ್ ಸಬ್ಜೆಕ್ಟ್ ರಿವ್ಯಾಲ್ಯುವೇಷನ್‍ಗೆ ಹಾಕಿದ್ದಾನೆ. ಅಮ್ಮ ನಿನಗೆ ಅಸಾಧ್ಯವಾದುದು ಯಾವುದೂ ಈ ಪ್ರಪಂಚದಲ್ಲಿ ಇಲ್ಲ. ನಿನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುವೆ ತಾಯಿ. ರಿವ್ಯಾಲ್ಯುವೇಷನ್‍ನಲ್ಲಿ ನನ್ನ ಮಗ ಪಾಸ್ ಅಂತ ಇನ್ನು 12 ದಿನದೊಳಗೆ ಮೊಬೈಲ್‍ಗೆ ಮೆಸೇಜ್ ಬರುವ ಹಾಗೆ ಮಾಡವ್ವ. ನನ್ನ ಮಗನ ಕೈ ಬಿಡಬೇಡ ತಾಯಿ ನೀನೇ ಗತಿ.

  • 4 ತಿಂಗ್ಳಲ್ಲಿ ಚಾಮುಂಡಿ ದೇವಿ ಹುಂಡಿಗೆ 11 ಕೋಟಿಗೂ ಅಧಿಕ ಆದಾಯ

    4 ತಿಂಗ್ಳಲ್ಲಿ ಚಾಮುಂಡಿ ದೇವಿ ಹುಂಡಿಗೆ 11 ಕೋಟಿಗೂ ಅಧಿಕ ಆದಾಯ

    ಮೈಸೂರು: ನಾಲ್ಕೇ ತಿಂಗಳಲ್ಲಿ ಮೈಸೂರಿನ ಅಧಿದೇವತೆ ಚಾಮುಂಡಿಬೆಟ್ಟದ ಚಾಮುಂಡಿ ದೇವಿಗೆ ದಾಖಲೆ ಪ್ರಮಾಣದ ಕಾಣಿಕೆ ಹರಿದು ಬಂದಿದೆ.

    ಈ ಹುಂಡಿಗೆ ಸುಮಾರು ಮೂರು ಮುಕ್ಕಾಲು ಕೋಟಿ ಹಣ ಬಂದಿದೆ. ಹಾಗೆ ವಿವಿಧ ರೂಪದಲ್ಲಿ ದೇವಾಲಯಕ್ಕೆ 7 ಕೋಟಿಗೂ ಅಧಿಕ ಆದಾಯ ಕೂಡ ಬಂದಿದೆ. ಆಷಾಢದ ಮಾಸದಲ್ಲೇ ಒಂದೂ ಮುಕ್ಕಾಲು ಕೋಟಿ ಹಣ ಸಂಗ್ರಹವಾಗಿದೆ.

    4 ತಿಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಆದಾಯ ಬಂದಿದೆ. ಕಳೆದೆರಡು ವರ್ಷಕ್ಕಿಂತ ಶೇ 40ರಷ್ಟು ಆದಾಯ ಹೆಚ್ಚಾಗಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.