Tag: Hunasagi

  • ಕುಡಿಯುವ ನೀರಿಗಾಗಿ ಸಹೋದರ ಸಂಬಂಧಿಗಳ ಜಗಳ – ಕೊಲೆಯಲ್ಲಿ ಅಂತ್ಯ

    ಕುಡಿಯುವ ನೀರಿಗಾಗಿ ಸಹೋದರ ಸಂಬಂಧಿಗಳ ಜಗಳ – ಕೊಲೆಯಲ್ಲಿ ಅಂತ್ಯ

    ಯಾದಗಿರಿ: ಕುಡಿಯುವ ನೀರಿನ ವಿಚಾರಕ್ಕೆ ಸಹೋದರ ಸಂಬಂಧಿಗಳ ನಡುವೆ ಶುರುವಾದ ಜಗಳ ಯುವಕನ ಹತ್ಯೆಯಲ್ಲಿ ಅಂತ್ಯವಾಗಿರುವುದು ಹುಣಸಗಿಯಲ್ಲಿ (Hunasagi) ನಡೆದಿದೆ.

    ನಗರದ ನಂದಕುಮಾರ್ ಕಟ್ಟಿಮನಿ (21) ಕೊಲೆಯಾದ ಯುವಕ. ನಂದಕುಮಾರ್‌ನ ಚಿಕ್ಕಪ್ಪನ ಮಗ ಹನುಮಂತ ಹಾಗೂ ಆತನ ತಾಯಿ ಹನುಮವ್ವ ಕೊಲೆಗೈದ ಆರೋಪಿಗಳಾಗಿದ್ದಾರೆ. ಇಬ್ಬರ ಮನೆಯ ಬಳಿ ಸರ್ಕಾರದ ಕುಡಿಯುವ ನೀರಿನ ನಲ್ಲಿ ಇದೆ. ಈ ನೀರನ್ನು ಎರಡೂ ಕುಟುಂಬದವರೂ ಬಳಸಿಕೊಳ್ಳುತ್ತಿದ್ದರು. ಎಂದಿನಂತೆ ಇಂದು ಸಹ ಹತ್ಯೆಯಾದ ನಂದಕುಮಾರ್‌ನ ಅಜ್ಜಿ ನೀರಿಗೆ ಹೋಗಿದ್ದಾಗ ಎರಡೂ ಕುಟುಂಬದ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೆಜಿ ಚಿನ್ನಾಭರಣ ಜಪ್ತಿ!

    ಹತ್ಯೆಯಾದ ನಂದಕುಮಾರ್, ಪದವಿ ಪರೀಕ್ಷೆ ಮುಗಿಸಿ ಬಂದ ಬಳಿಕ ಆತನ ಅಜ್ಜಿ ಜಗಳದ ವಿಚಾರ ತಿಳಿಸಿದ್ದು, ಇದನ್ನು ಪ್ರಶ್ನಿಸಲು ಹೋಗಿದ್ದಾಗ ಬಟನ್ ಚಾಕುವಿನಿಂದ ಆರೋಪಿಗಳು ಇರಿದಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಂದಕುಮಾರ್‍ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವಿಗೀಡಾಗಿದ್ದಾನೆ.

    ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ, ಡಿವೈಎಸ್‍ಪಿ ಜಾವೇದ್ ಇನಾಮ್ದಾರ್, ಹುಣಸಗಿ ಸಿಪಿಐ ಸಚಿನ್ ಛಲವಾದಿ, ಪಿಎಸ್‍ಐ ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್‌ ಕೇಸ್‌ – NIAಯಿಂದ ಮತ್ತಿಬ್ಬರು ವಶಕ್ಕೆ

  • ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ- ವೃದ್ಧೆ ಸಾವು

    ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ- ವೃದ್ಧೆ ಸಾವು

    ಯಾದಗಿರಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಹೃದಯಾಘಾತದಿಂದ (Heart Attack) ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಯಾದಗಿರಿ (Yadgiri) ಜಿಲ್ಲೆಯ ಹುಣಸಗಿ (Hunasagi) ತಾಲೂಕಿನ ಕಲ್ಲದೇವನಹಳ್ಳಿಯಲ್ಲಿ ನಡೆದಿದೆ.

    ನಂದಮ್ಮ ಹೊರಟ್ಟಿ (60) ಮೃತಪಟ್ಟ ವೃದ್ಧೆ. ಹುಣಸಗಿ ತಾಲೂಕಿನ ವಜ್ಜಲ ಗ್ರಾಮದವರಾದ ನಂದಮ್ಮ ಆರೋಗ್ಯ ಸಮಸ್ಯೆ ಹಿನ್ನೆಲೆ ಕಲಬುರಗಿ (Kalaburagi) ನಗರದ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಗೆ ಹೋಗಿ ವಾಪಸ್ ಬಂದಿದ್ದ ನಂದಮ್ಮ ಸುರಪುರದಿಂದ (Surapura) ಸ್ವಂತ ಗ್ರಾಮ ವಜ್ಜಲಕ್ಕೆ ಬಸ್‌ನಲ್ಲಿ ಹೊರಟಿದ್ದರು. ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

    ವಾಪಸ್ ಮನೆಗೆ ಬರುತ್ತಿದ್ದ ಸಂದರ್ಭ ನಂದಮ್ಮ ಅವರಿಗೆ ಬಸ್ಸಿನಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಸಮೀಪದ ಕಲ್ಲದೇವನಹಳ್ಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲೆಂದು ಕರೆದೊಯ್ಯುತ್ತಿದ್ದ ವೇಳೆ ಬಸ್‌ನಲ್ಲಿ ನಂದಮ್ಮ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

  • ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

    ಯಾದಗಿರಿ: ಸಾಲಬಾಧೆ (Debt) ತಾಳಲಾರದೆ ಮನನೊಂದು ರೈತನೋರ್ವ ನೇಣು ಬಿಗಿದು ಆತ್ಮಹತ್ಯೆಗೆ (Suicide) ಶರಣಾದ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ಜಿಲ್ಲೆಯ ಹುಣಸಗಿ (Hunasagi) ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಮರಣ್ಣ ಕುಂಬಾರ (60) ಆತ್ಮಹತ್ಯೆಗೆ ಶರಣಾದ ರೈತ. ಇವರು ಬ್ಯಾಂಕ್ ಹಾಗೂ ಖಾಸಗಿ ಸೇರಿದಂತೆ 10 ಲಕ್ಷಕ್ಕೂ ಅಧಿಕ ಹಣವನ್ನು ಸಾಲಮಾಡಿದ್ದರು. ಅಲ್ಲದೇ ಬೆಳೆ ಸರಿಯಾಗಿ ಬಾರದೇ ಸಾಲ ತೀರಿಸಲು ಪರದಾಡುತ್ತಿದ್ದರು. ಹೀಗಾಗಿ ತನ್ನ 8 ಎಕರೆ ಜಮೀನನ್ನು ಖಾಸಗಿಯವರಿಗೆ ಸಾಲಕ್ಕೆ ಬರೆದುಕೊಟ್ಟಿದ್ದರು. ಇದನ್ನೂ ಓದಿ: ಹೈಟೆನ್ಷನ್ ತಂತಿ ತಾಗಿ 13ರ ಬಾಲಕಿ ಸಾವು

    ಇದರಿಂದ ಮನನೊಂದ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೇಳಬಹುದೆಂದು ಮರಿಮೊಮ್ಮಗನನ್ನೇ ಮುಗಿಸಿದ ಅಜ್ಜ!

  • ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ

    ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ

    ಯಾದಗಿರಿ: ಬಿಜೆಪಿ ಶಾಸಕ ರಾಜುಗೌಡ ಸ್ವಗ್ರಾಮ ಯಾದಗಿರಿಯ (Yadgiri) ಕೊಡೇಕಲ್‌ನಲ್ಲಿ (Kodekal) ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ (BJP – Congress Clash) ಏರ್ಪಟ್ಟಿದೆ. ಈ ಹಿನ್ನೆಲೆ ಕೊಡೇಕಲ್, ಹುಣಸಗಿ (Hunasagi) ಹಾಗೂ ಸುರಪುರದಲ್ಲಿ (Surapura) ಖಾಕಿ ಪಡೆ ಸುತ್ತುವರಿದಿದೆ. ಗಲಾಟೆ ನಿಯಂತ್ರಣಕ್ಕಾಗಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಈಗಾಗಲೇ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಆದೇಶ ನೀಡಿದ್ದು, ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಸೆಕ್ಷನ್ 144 ಕಲಂ ಜಾರಿಯಾಗಿದೆ.

    ಸಂಘರ್ಷ ಹಿನ್ನೆಲೆ ಗುರುವಾರ ರಾತ್ರಿ ಕೊಡೇಕಲ್‌ಗೆ ಆಗಮಿಸಿರುವ ಕಲಬುರಗಿ ಈಶಾನ್ಯ ವಲಯ ಐಜಿಪಿ ಅನುಪಮ ಅಗರವಾಲ್ ಹಾಗೂ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಗ್ರಾಮದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಇದನ್ನೂ ಓದಿ: 1 ಕೋಟಿ 5 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಜಪ್ತಿ

    ನಿಷೇಧಾಜ್ಞೆ ಜಾರಿ ಹಿನ್ನೆಲೆ ಇಡೀ ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಖಾಕಿ ಸರ್ಪಗಾವಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ 3 ಕೆಎಸ್‌ಆರ್‌ಪಿ ತುಕಡಿ, 1 ಪ್ಯಾರಾ ಮಿಲಿಟರಿ ಫೋರ್ಸ್ ಕಂಪನಿ, 2 ಡಿಎಸ್‌ಪಿ, 5 ಸಿಪಿಐ, 10 ಸಿಪಿಐ 100 ಕಾನ್ಸ್ಟೇಬಲ್ ನಿಯೋಜನೆ ಮಾಡಲಾಗಿದೆ.

    ಗಲಾಟೆ ಹಿನ್ನೆಲೆ ಈಗಾಗಲೇ 4 ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ 4 ಪ್ರಕರಣ ದಾಖಲಿಸಿಕೊಂಡು ಗಲಾಟೆಯಲ್ಲಿ ಭಾಗಿಯಾದ 118 ಜನರ ಮೇಲೆ ಸಿಆರ್‌ಪಿಸಿ 107 ಕಲಂನಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!

  • ರಿವರ್ಸ್ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್ – ಮೂವರು ಸಾವು

    ರಿವರ್ಸ್ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್ – ಮೂವರು ಸಾವು

    – 3 ವರ್ಷದ ಮಗುವಿನ ಜೊತೆ ಈಜಿ ದಡ ಸೇರಿದ ಮಹಿಳೆ

    ಯಾದಗಿರಿ: ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಕಾಲುವೆಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿ ನಡೆದಿದೆ. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ಜಲ ಸಮಾಧಿಯಾಗಿದ್ದಾರೆ.

    ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಟ್ಟಿ ಗ್ರಾಮದ ಪವನ್ ಬಿರಾದಾರ್ (34), ಪವನ್ ತಂದೆ ಶರಣಗೌಡ ಬಿರಾದಾರ್ (61), ತಾಯಿ ಜಾನಕಿ ಬಿರಾದಾರ್ (55) ಮೃತರು. ಮೃತ ಪವನ್ ಕುಟುಂಬದ ಎರಡು ವರ್ಷದ ಮಗು ಸೇರಿ ಒಟ್ಟು ಐದು ಜನ ಒಂದೇ ಕಾರ್ ನಲ್ಲಿ ಜಮೀನು ನೋಡಲು ಬಂದಿದ್ದರು. ಕಾಲುವೆಯ ದಡದ ಮೇಲೆ ಕಾರ್ ನಲ್ಲಿ ಜಮೀನು ವೀಕ್ಷಿಸಿ ಹಿಂದಿರುಗುತ್ತಿದ್ದರು. ಈ ವೇಳೆ ಕಾರ್ ರಿವರ್ಸ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಕಾಲುವೆಗೆ ಬಿದ್ದಿದೆ.

    ಕಾರು ನೀರಿಗೆ ಬಿದ್ದು ಕೊಚ್ಚಿ ಹೋಗುತ್ತಿದ್ದರು, ಧೃತಿಗೆಡದೆ ಪವನ್ ಅವರ 28 ವರ್ಷದ ಪತ್ನಿ ಪ್ರೇಮಾ ತಮ್ಮ ಮೂರು ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ಆದ್ರೆ ಪವನ್ ಪತ್ನಿ ಮತ್ತು ಮಗು ಬಿಟ್ಟು ಉಳಿದವರೆಲ್ಲರೂ ನೀರುಪಾಲಾಗಿದ್ದಾರೆ. ಇದರಲ್ಲಿ ಓರ್ವನ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದೆ. ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಘಟನೆ ಮಾಹಿತಿ ಪಡೆಯುತ್ತಿದ್ದಾರೆ.

  • ಆರ್‌ಎಂಪಿ ವೈದ್ಯ ಕೊಟ್ಟ ಮಾತ್ರೆ ಸೇವಿಸಿ ಬಾಲಕಿ ಸಾವು

    ಆರ್‌ಎಂಪಿ ವೈದ್ಯ ಕೊಟ್ಟ ಮಾತ್ರೆ ಸೇವಿಸಿ ಬಾಲಕಿ ಸಾವು

    – ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ಯಾದಗಿರಿ: ಆರ್‌ಎಂಪಿ ವೈದ್ಯ ನೀಡಿದ ಮಾತ್ರೆ ಸೇವಿಸಿ 13 ವರ್ಷದ ಬಾಲಕಿ ಮೃತಪಟ್ಟ ಘಟನೆ ಹುಣಸಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ನಡೆದಿದೆ.

    ಹುಣಸಗಿ ತಾಲೂಕಿನ ಕೋಳಿಹಾಳ ದೊಡ್ಡ ತಾಂಡಾದ ನಿವಾಸಿ ಸಂತೋಷ್ ಚವಾಣ್ ಅವರ ಪುತ್ರಿ ವಸಂತಾ ಮೃತ ದುರ್ದೈವಿ. ಎಂ.ಪಿ.ಅಜಿತ್ ಬಾಲಕಿಗೆ ಮಾತ್ರೆ ನೀಡಿದ್ದ ವೈದ್ಯ.

    ಬಾಲಕಿ ವಸಂತಾ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಆಕೆಯ ಪೋಷಕರು ಗ್ರಾಮದಲ್ಲಿದ್ದ ವೈದ್ಯ ಎಂ.ಪಿ.ಅಜಿತ್ ಬಳಿಗೆ ಚಿಕಿತ್ಸೆಗೆಂದು ತೆರಳಿದ್ದರು. ಅಜಿತ್ ಬಾಲಕಿಗೆ 2 ಇಂಜೆಕ್ಷನ್ ಮಾಡಿ, ಮಾತ್ರೆಗಳನ್ನು ನೀಡಿದ್ದ. ಏಪ್ರಿಲ್ 22ರಂದು ಮಾತ್ರೆ ತೆಗೆದುಕೊಂಡಿದ್ದ ಬಾಲಕಿ ಬೆಳಗ್ಗೆ 5:30ಕ್ಕೆ ಮನೆಯಲ್ಲಿ ಮೃತಪಟ್ಟಿದ್ದಾಳೆ. ಈ ಸಂಬಂಧ ಬಾಲಕಿಯ ಪೋಷಕರು ಹುಣಸಗಿ ಠಾಣೆಯಲ್ಲಿ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಎಂ.ಪಿ.ಅಜಿತ್ ಆರ್‌ಎಂಪಿ ವೈದ್ಯನಾಗಿದ್ದು, ವೈದ್ಯೋಪಚಾರ ಮಾಡಿರುವುದೇ ನಿಯಮ ಬಾಹಿರವಾಗಿದೆ. ಜೊತೆಗೆ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಜ್ವರದ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿತ್ತು. ಆದರೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವೈದ್ಯ ಸದ್ಯ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.