Tag: humnabad

  • ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ವಿಕೃತಿ – ಆರೋಪಿ ಅರೆಸ್ಟ್

    ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ವಿಕೃತಿ – ಆರೋಪಿ ಅರೆಸ್ಟ್

    ಬೀದರ್: ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಹುಮ್ನಾಬಾದ ತಾಲೂಕಿನ ಹಳ್ಳಿಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಆರೋಪಿಯನ್ನು ಅಬು ಪಾಷಾ ಎಂದು ಗುರುತಿಸಲಾಗಿದೆ. ಘಟನೆ ನಡೆದ ದಿನ ಸಂತ್ರಸ್ತೆಯ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ವಿಕೃತಿ ಮೆರೆದಿದ್ದಾನೆ.ಇದನ್ನೂ ಓದಿ: ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ – ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್‌ ಪ್ಲ್ಯಾನ್‌?

    ಸಂತ್ರಸ್ತೆಯ ತಾಯಿ ಮನೆಗೆ ಮರಳುತ್ತಿದ್ದಂತೆ ಆಕೆಯನ್ನು ತಳ್ಳಿ ಆರೋಪಿ ಓಡಿಹೋಗಿದ್ದಾನೆ. ಕೂಡಲೇ ತಾಯಿ ಮಗಳ ಬಳಿ ಹೋಗಿ ಕೇಳಿದಾಗ ಸನ್ನೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಾಳೆ. ಮಹಿಳೆ ಬಾಯಿಗೆ ಬಟ್ಟೆ ತುರುಕಿ, ಆಕೆಯ ಬಟ್ಟೆ ಹರಿದು ಮಾನಭಂಗ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

    ಈ ಕುರಿತು ಸಂತ್ರಸ್ತೆಯ ತಾಯಿ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 329(4), 79 BNS, ಹಾಗೂ ಕಲಂ 3(1)w, 3(2) SC/ST ಕಾಯ್ದೆಯಡಿ ಕೇಸ್ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ನಾಳೆ ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ; ಯಾವೆಲ್ಲ ರಾಶಿಗಳಿಗೆ ಶುಭ-ಅಶುಭ?

  • ಬಸ್ ಬಾರದಕ್ಕೆ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳ ತರಾಟೆ

    ಬಸ್ ಬಾರದಕ್ಕೆ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳ ತರಾಟೆ

    ಬೀದರ್: ಸರಿಯಾದ ಸಮಯಕ್ಕೆ ಬಸ್ ಬರದ ಕಾರಣ ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ (Humnabad) ಬಳಿ ನಡೆದಿದೆ.ಇದನ್ನೂ ಓದಿ: ಕೋಲಾರ ನಗರದ 7ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸರಣಿ ಕಳ್ಳತನ – ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ

    ಕಟಕಚಿಂಚೊಳ್ಳಿ, ಸಿಕಿಂದ್ರಾಬಾದ್, ಸುಲ್ತಾನಬಾದ್ ಗ್ರಾಮಕ್ಕೆ ಬಸ್ ಬಾರದಿದ್ದಕ್ಕೆ ಭಾಲ್ಕಿ ಟೂ ಹುಮ್ನಾಬಾದ್ ಮುಖ್ಯರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಾರಿಗೆ ಅಧಿಕಾರಿಯನ್ನೇ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಹುತೇಕ ಸಲ ಬಸ್ ಬಾರದ ಕಾರಣಕ್ಕೆ ನಡೆದುಕೊಂಡು ಶಾಲೆಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಗೆ ಎಬಿವಿಪಿ ಕಾರ್ಯಕರ್ತರು ಸಾಥ್ ನೀಡಿದರು.ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ ನೇಮಕ ವಿಚಾರದಲ್ಲಿ ಗಲಾಟೆ – ಕೇಂದ್ರಕ್ಕೆ ಸ್ಥಳೀಯರಿಂದಲೇ ಬೀಗ

  • Bidar| ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ

    Bidar| ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ

    ಬೀದರ್: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಇಂದು (ಮಂಗಳವಾರ) ಮಹಿಳೆ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ.

    ನಾಗಮ್ಮ ನರಸಪ್ಪ (63) ಮೃತ ಮಹಿಳೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಮತ್ತು ಸಿಬ್ಬಂದಿಗಳ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ವಿಕ್ರಂ ಗೌಡ ನಕ್ಸಲ್ ತಂಡ ಸೇರಿದ್ದು ಹೇಗೆ? ಮನೆ ಮನೆಗೆ ಹೇಗೆ ಬರುತ್ತಿದ್ದರು? – ಸ್ಥಳೀಯರು ಬಿಚ್ಚಿಟ್ಟ ಸತ್ಯ ಓದಿ

    ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷತನದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪ ಮಾಡಿ ಆಸ್ಪತ್ರೆ ಮುಂದೆ ಪ್ರತಿಭಟನಾ ಧರಣಿ ಮಾಡುತ್ತಿದ್ದಾರೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜ್ಞಾನೇಶ್ವರ್ ನಿರಗುಡೆ ಭೇಟಿ ನೀಡಿದ್ದು, ತರಾಟೆಯ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ. ಡಿಹೆಚ್‌ಒ ಭರವಸೆ ಮೇರೆಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದು ಈ ಕುರಿತು ಹಳ್ಳಿಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.  ಇದನ್ನೂ ಓದಿ: ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಶುರುವಾಗಿದೆ – ಸುನೀಲ್ ಕುಮಾರ್

  • ಬೀದರ್‌ನಲ್ಲಿ ಚಿತ್ರಾನ್ನ ತಿಂದು ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ

    ಬೀದರ್‌ನಲ್ಲಿ ಚಿತ್ರಾನ್ನ ತಿಂದು ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ

    ಬೀದರ್: ಚಿತ್ರಾನ್ನ ತಿಂದು 50 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ವಸತಿ ಶಾಲೆಯಲ್ಲಿ ನಡೆದಿದೆ.ಇದನ್ನೂ ಓದಿ: ‘ನಾಯಿ ಇದೆ ಎಚ್ಚರಿಕೆ’ ಸಿನಿಮಾಗೆ ಡಾಕ್ಟರ್ ಲೀಲಾ ಮೋಹನ್ ಹೀರೋ

    ಪಟ್ಟಣದ ಬಸವ ತೀರ್ಥ ಗುರುಕುಲದ ವಸತಿ ಶಾಲೆಯ ಮಕ್ಕಳಿಗೆ ಬೆಳಿಗ್ಗೆ ತಿಂಡಿಗಾಗಿ ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ ನೀಡಲಾಗಿತ್ತು. ಈ ಅನ್ನ ತಿಂದ ಕೆಲವೇ ಹೊತ್ತಿನಲ್ಲಿ ವಾಂತಿ, ಭೇದಿ, ತಲೆ ಸುತ್ತಿನಿಂದ 50 ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಅಸ್ವಸ್ಥರಾದ ಮಕ್ಕಳನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಈ ಮಕ್ಕಳಿಗೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ವಸ್ಥರಾದ 50 ಮಕ್ಕಳು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ – ಜೀವ ಭಯದಲ್ಲಿ ದಿನ ಕಳೆಯುತ್ತಿರುವ ಜನ

  • ಕಲಬುರಗಿ| ರಸ್ತೆ ದಾಟುತ್ತಿದ್ದ ಮಹಿಳೆಗೆ ಟಿಪ್ಪರ್ ಡಿಕ್ಕಿ – ಸ್ಥಳದಲ್ಲೇ ಸಾವು

    ಕಲಬುರಗಿ| ರಸ್ತೆ ದಾಟುತ್ತಿದ್ದ ಮಹಿಳೆಗೆ ಟಿಪ್ಪರ್ ಡಿಕ್ಕಿ – ಸ್ಥಳದಲ್ಲೇ ಸಾವು

    ಕಲಬುರಗಿ: ರಸ್ತೆ ದಾಟುತ್ತಿದ್ದ ಮಹಿಳೆಗೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburagi) ನಗರದ ಹುಮನಬಾದ್ ರಿಂಗ್ ರೋಡ್‌ನಲ್ಲಿ ನಡೆದಿದೆ.

    ಗಣಜಲಖೇಡ ಗ್ರಾಮದ ಅನುಸೂಯ (55) ಮೃತ ದುರ್ದೈವಿ. ರಸ್ತೆ ದಾಟುತ್ತಿರುವ ವೇಳೆ ಟಿಪ್ಪರ್ ಡಿಕ್ಕಿ ಹೊಡೆದು ಅನುಸೂಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಡುಪಿ| ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಘಟನೆಯ ಕುರಿತು ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಕಾಂಗ್ರೆಸ್ ರೌಡಿಶೀಟರ್‌ಗೆ ಟಿಕೆಟ್ ನೀಡಿದೆ – ಟಿಕೆಟ್ ವಂಚಿತ ಅಜ್ಜಂಫೀರ್ ಖಾದ್ರಿ ಆಕ್ರೋಶ

     

  • ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ, ಗ್ರೌಂಡ್‌ನಲ್ಲಿ ಓಡಿಸಿ ದೈಹಿಕ ಶಿಕ್ಷಕನ ಅಮಾನವೀಯ ವರ್ತನೆ

    ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ, ಗ್ರೌಂಡ್‌ನಲ್ಲಿ ಓಡಿಸಿ ದೈಹಿಕ ಶಿಕ್ಷಕನ ಅಮಾನವೀಯ ವರ್ತನೆ

    ಬೀದರ್: ನಗರದಲ್ಲಿ ಶಿಕ್ಷಕನಿಂದ ಅಮಾನವೀಯ ಕೃತ್ಯ ನಡೆದಿರುವುದು ಬಯಲಿಗೆ ಬಂದಿದೆ. ದೈಹಿಕ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ, ಅವರನ್ನು ಗ್ರೌಂಡ್‌ನಲ್ಲಿ ಓಡಿಸಿ ಅಮಾನವೀಯವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

    ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ (Humnabad) ಪಟ್ಟಣದ ನಗರೇಶ್ವರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ರಮೇಶ್ ಅಮಾನವೀಯ ಕೃತ್ಯ ಎಸಗಿದ ದೈಹಿಕ ಶಿಕ್ಷಕ. ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳದೇ ಇದ್ದರೆ ಅವರ ಪ್ಯಾಂಟ್ ಬಿಚ್ಚಿಸಿ ಚಡ್ಡಿ ಮೇಲೆ ಓಡಿಸುತ್ತಿದ್ದ. ಅರೆಬೆತ್ತಲೆಗೊಳಿಸಿ ಗ್ರೌಂಡ್‌ನಲ್ಲಿ ಓಡಿಸಿದ್ದಲ್ಲದೇ ವಿದ್ಯಾರ್ಥಿಗಳಿಗೆ ಹಿಂಸೆ ನೀಡುತ್ತಿದ್ದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ.

    ಘಟನೆ 15 ದಿನಗಳ ಹಿಂದೆ ನಡೆದಿದ್ದು, ಶಾಲೆಗೆ ಹುಮ್ನಾಬಾದ್ ಡಿವೈಎಸ್‌ಪಿ ನ್ಯಾಮೇಗೌಡರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದಾಗ ದೈಹಿಕ ಶಿಕ್ಷಕನ ಕೃತ್ಯ ಬೆಳಕಿಗೆ ಬಂದಿದೆ. ಶಿಕ್ಷಕ ಶಾಲೆ ಮುಗಿದ ಮೇಲೂ ಹೆಚ್ಚುವರಿಯಾಗಿ 2 ಗಂಟೆ ದೈಹಿಕ ಪಾಠ ಮಾಡುತ್ತಿದ್ದ. ಇದನ್ನೂ ಓದಿ: ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ!

     

    ಈ ಬಗ್ಗೆ ಖಾಸಗಿ ಶಾಲೆಯ ಮ್ಯಾನೇಜ್‌ಮೆಂಟ್‌ನಿಂದ ದೂರು ದಾಖಲಾಗಿದೆ. ದೂರಿನ್ವಯ ಹುಮ್ನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕನ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದನ್ನೂ ಓದಿ: ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಬಳ್ಳಾರಿ ಐಸಿಸ್‌ ಟೀಂ – ದಾಳಿಯಲ್ಲಿ ಏನು ಸಿಕ್ಕಿದೆ?

  • ವಿವಿಧ ಬ್ರ‍್ಯಾಂಡ್‌ಗಳ ನಕಲಿ ಪಾನ್‌ಮಸಾಲಾ ತಯಾರಿಕೆ – ಘಟಕದ ಮೇಲೆ ಬೀದರ್ ಪೊಲೀಸರು ದಾಳಿ

    ವಿವಿಧ ಬ್ರ‍್ಯಾಂಡ್‌ಗಳ ನಕಲಿ ಪಾನ್‌ಮಸಾಲಾ ತಯಾರಿಕೆ – ಘಟಕದ ಮೇಲೆ ಬೀದರ್ ಪೊಲೀಸರು ದಾಳಿ

    ಬೀದರ್: ವಿವಿಧ ಬ್ರ್ಯಾಂಡ್‌ಗಳ ನಕಲಿ ಪಾನ್‌ಮಸಾಲಾ (Pan Masala) ತಯಾರಿಸುತ್ತಿದ್ದ ಅನಧಿಕೃತ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 66 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.

    ಹುಮ್ನಾಬಾದ್ (Humnabad) ತಾಲೂಕಿನ ಹುಡಗಿ (Hudgi) ಗ್ರಾಮದ ಬಳಿ ನಕಲಿ ಗುಟ್ಕಾ ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ 1,600 ಕೆಜಿ ಪಾನ್‌ಮಸಾಲಾ ಕಚ್ಚಾ ವಸ್ತು, ಗುಟ್ಕಾ ಪ್ಯಾಕೆಟ್ ತಯಾರಿಸುತ್ತಿದ್ದ 11 ಯಂತ್ರಗಳು ಹಾಗೂ ಬೀದರ್‌ನಿಂದ ಮಹಾರಾಷ್ಟ್ರಕ್ಕೆ (Maharashtra) ಅಕ್ರಮ ಸಾಗಾಟ ಮಾಡಲು ಬಳಸುತ್ತಿದ್ದ 5 ಲಾರಿಗಳನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು – ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ

    ಖಚಿತ ಮಾಹಿತಿ ಮೇರೆಗೆ ಬೀದರ್ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಅವರ ಮಾರ್ಗದರ್ಶನದಲ್ಲಿ ಹುಮ್ನಾಬಾದ್ ಪೊಲೀಸರು ನಕಲಿ ಗುಟ್ಕಾ ಘಟಕದ ಮೇಲೆ ದಾಳಿ ನಡೆಸಿದ್ದು, ಭರ್ಜರಿ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಐಪಿಎಲ್ ಬೆಟ್ಟಿಂಗ್ ಹಣಕ್ಕಾಗಿ ಯುವಕನ ಕೊಲೆ

  • ಬೀದರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಬಲಿ

    ಬೀದರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಬಲಿ

    ಬೀದರ್: ಚಲಿಸುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಭೀಕರ ರಸ್ತೆ ಅಪಘಾತವಾಗಿ (Accident) ದಂಪತಿ ಬಲಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.

    ಗುಂಡಪ್ಪ ಬಲಭೀಮ್ ಚಿಟಂಪಲ್ಲೆ (33) ಹಾಗೂ ಪತ್ನಿ ಸುಜಾತ ಗುಂಡಪ್ಪ ಚಿಟಂಪಲ್ಲೆ (29) ಸಾವನ್ನಪ್ಪಿದ ದುರ್ದೈವಿ ದಂಪತಿ. ಬಸವಕಲ್ಯಾಣದ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದ್ದು, ಅಪಘಾತದ ರಭಸಕ್ಕೆ ಪತಿ ಗುಂಡಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಸುಜಾತರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ (Kalaburagi) ರವಾನೆ ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮಹಾಮಳೆಗೆ ಮತ್ತೊಂದು ಬಲಿ

    ಮೂಲತ: ಹುಮ್ನಾಬಾದ್ (Humnabad) ತಾಲೂಕಿನ ಹುಡಗಿ ಗ್ರಾಮಕ್ಕೆ ಸೇರಿದ ದಂಪತಿಗೆ 3 ವರ್ಷದ ಮುದ್ದಾದ ಮಗುವಿದೆ. ಘಟನೆ ವೇಳೆ ದಂಪತಿ ಜೊತೆಗಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸವಕಲ್ಯಾಣ ಪೊಲೀಸರು ಅಪರಿಚಿತ ವಾಹನದ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

  • ಮುಂಬೈನಿಂದ ಬಂದಿದ್ದ ಮಹಿಳೆ ಸೇರಿ ನಾಲ್ವರಿಗೆ ಸೋಂಕು – ಹುಮನಾಬಾದ್‍ಗೆ ಬಂತು ಕೊರೊನಾ

    ಮುಂಬೈನಿಂದ ಬಂದಿದ್ದ ಮಹಿಳೆ ಸೇರಿ ನಾಲ್ವರಿಗೆ ಸೋಂಕು – ಹುಮನಾಬಾದ್‍ಗೆ ಬಂತು ಕೊರೊನಾ

    ಬೀದರ್: ಮುಂಬೈನಿಂದ ಬಂದ ಮಹಿಳೆಯೊಬ್ಬರು ಸೇರಿ ಓಲ್ಡ್ ಸಿಟಿಯ ನಿರ್ಬಂಧಿತ ಪ್ರದೇಶದ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಈ ಮೂಲಕ ಗಡಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದ 45 ವಯಸ್ಸಿನ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಈಕೆ ಮಹಾರಾಷ್ಟ್ರದ ಮುಂಬೈನಿಂದ ಸ್ವಗ್ರಾಮಕ್ಕೆ ಪ್ರವಾಸ ಮಾಡಿದ ಹಿನ್ನೆಲೆಯಿದ್ದು, ಹುಮನಾಬಾದ್ ತಾಲೂಕಿನಲ್ಲಿ ಮೊದಲ ಪ್ರಕರಣ ಇದಾಗಿದೆ.

    ಅಲ್ಲದೆ ನಗರದ ಓಲ್ಡ್ ಸಿಟಿಯಲ್ಲಿ ನಡೆಸಲಾಗುತ್ತಿರುವ ಸಾಮೂಹಿಕ ತಪಾಸಣೆ ವೇಳೆ ಮತ್ತೆ ಮೂವರು ಯುವಕರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಇದರಲ್ಲಿ 14 ಜನರು ಗುಣಮುಖರಾಗಿದ್ದರೆ, ಒಬ್ಬ ವೃದ್ಧ ಬಲಿಯಾಗಿದ್ದು, ಉಳಿದ 31 ಮಂದಿ ಸೋಂಕಿತರಿಗೆ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ನ್ಯಾಯಾಲಯದಿಂದ ರಿಲೀಫ್: ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈ

    ನ್ಯಾಯಾಲಯದಿಂದ ರಿಲೀಫ್: ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈ

    ಬೀದರ್: ಆಪರೇಷನ್ ಕಮಲ ಆಡಿಯೋ ಪ್ರಕರಣದಿಂದ ಸ್ವಲ್ಪ ರಿಲೀಫ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಅವರು ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಹುಮ್ನಾಬಾದ್ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಕೋರ್ಟ್ ನಿಂದ ಆಪರೇಷನ್ ಕಮಲ ಆಡಿಯೋ ಎಫ್‍ಐಆರ್ ಗೆ ತಡೆಯಾಜ್ಞೆ ಆದೇಶ ಬರುತ್ತಿದ್ದಂತೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪಕ್ಷದ ಮುಖಂಡರು ಸಾತ್ ನೀಡಿದರು.

    ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದರು. ಆದರೆ ಕೋರ್ಟ್ ನನಗೆ ನ್ಯಾಯ ಒದಗಿಸಿಕೊಟ್ಟಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯ, ದೇವರ ಬಗ್ಗೆ ನನಗೆ ಅಪಾರ ವಿಶ್ವಾಸವಿದೆ. ಹೀಗಾಗಿ ನನಗೆ ಅನ್ಯಾಯವಾಗಲಿಲ್ಲ ಎಂದು ಕಿಡಿಕಾರಿದರು.

    ಮೋದಿ ವಿಜಯ್ ಸಂಕಲ್ಪ ಯಾತ್ರೆಗೆ ಕೇಂದ್ರ ಸಚಿವ ಪುರುಷೋತ್ತಮ ರೂಪಾಲ್ ಚಾಲನೆ ನೀಡಿದರು. ಶಾಸಕರಾದ ಶ್ರೀರಾಮಲು, ಆರ್.ಅಶೋಕ್, ಪ್ರಭು ಚವ್ಹಾಣ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.

    ಕೋರ್ಟ್ ಆದೇಶ ಏನು?:
    ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ವಿಚಾರಣೆಗೆ ತಡೆ ಕೋರಿ ಬಿಎಸ್‍ವೈ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದರು. ಇಂದು ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಅವರು ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಬಿ.ಎಸ್.ವೈ ಸೇರಿದಂತೆ ನಾಲ್ವರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ದೇವದುರ್ಗ ಠಾಣೆಯಲ್ಲಿ ದೂರು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv