Tag: humanity

  • ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ನೀಡಿದ ಮಂಡ್ಯದ ಯುವಕ

    ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ನೀಡಿದ ಮಂಡ್ಯದ ಯುವಕ

    ಮಂಡ್ಯ: ಈಗಿನ ಕಾಲದಲ್ಲಿ ರಸ್ತೆಯಲ್ಲಿ 1 ರೂ. ಸಿಕ್ಕರೂ ಬಿಡುವವರಿಲ್ಲ. ಅಂಥದ್ದರಲ್ಲಿ ಮಂಡ್ಯದ ಯುವಕನೊಬ್ಬ ದಾರಿಯಲ್ಲಿ ಸಿಕ್ಕ 33 ಗ್ರಾಂ. ತೂಕದ ಚಿನ್ನವನ್ನು ತನ್ನ ಹತ್ತಿರ ಇಟ್ಟುಕೊಳ್ಳದೆ ಪೊಲೀಸ್ ಠಾಣೆಗೆ ನೀಡಿ ಅದನ್ನು ಅದರ ವಾರಸುದಾರರಿಗೆ ತಲುಪಿಸಿ ಎನ್ನುವ ಮೂಲಕ ಮಾನವೀಯತೆ ಮೆರೆದಿದ್ದಾನೆ.

    ಘಟನೆಯು ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದು, ಚಂದ್ರಶೇಖರ್ ಮಾನವೀಯತೆ ಮೆರೆದ ವ್ಯಕ್ತಿ. ಮೈಸೂರಿನ ಟ್ರ್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಆತ ನಿನ್ನೆ ಕುಟುಂಬಸ್ಥರ ಜೊತೆ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದನು. ಈ ವೇಳೆ ನಿದ್ದೆ ಮಾಡಲು ರೂಮ್‍ಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಬೀದಿ ದೀಪಕ್ಕೆ ಹೊಳೆಯುತ್ತಿದ್ದ ವಸ್ತುವೊಂದು ಚಂದ್ರಶೇಖರ್ ಕಣ್ಣಿಗೆ ಬಿದ್ದಿದೆ. ಇದನ್ನೂ ಓದಿ: ನಾಯಿ ವಾಕಿಂಗ್‍ಗೆ ಸ್ಟೇಡಿಯಂ ಖಾಲಿ ಮಾಡಿಸಿದ್ದ ಐಎಎಸ್ ಅಧಿಕಾರಿ ವರ್ಗಾವಣೆ

    ನಂತರ ಅದು ಏನು ಅಂತ ನೋಡಿದಾಗ ಅದು ಚಿನ್ನದ ಸರವಾಗಿದೆ. ಬಳಿಕ ಚಂದ್ರಶೇಖರ್ ಅದನ್ನು ರೂಮ್‍ಗೆ ತೆಗೆದುಕೊಂಡು ಹೋಗಿದ್ದಾನೆ. ಈ ಸರ ಯಾರದ್ದೋ? ಪಾಪ ಕಳೆದುಕೊಂಡು ಎಷ್ಟು ಕಷ್ಟಪಡುತ್ತಿದ್ದಾರೊ ಅಂತ ಬೆಳಗ್ಗೆ ಎದ್ದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಬಳಿಕ ಸರ್ ಇದು ರಸ್ತೆಯಲ್ಲಿ ಸಿಕ್ಕಿದೆ. ಇದನ್ನು ಅದರ ವಾರಸುದಾರರಿಗೆ ತಲುಪಿಸಿ ಎಂದು ಪೊಲೀಸರಿಗೆ ನೀಡಿದ್ದಾನೆ. ಚಂದ್ರಶೇಖರ್‌ನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡ ಪೊಲೀಸರು

    ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡ ಪೊಲೀಸರು

    ಬೆಳಗಾವಿ: ಸಾಮಾನ್ಯವಾಗಿ ಪೊಲೀಸರು ಎಂದರೇ ಬೈಯುವರೇ ಹೆಚ್ಚು, ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸರು ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡಿದ್ದಾರೆ.

    ಸಂಕೇಶ್ವರ-ವಿಜಯಪುರ ರಾಜ್ಯ ಹೆದ್ದಾರಿಯ ಕರಿ ಮಸೂತಿ ಸಮೀಪದಲ್ಲಿ ಕಾರು ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅಂಬುಲೆನ್ಸ್ ಬಾರದ ಕಾರಣ ಗಸ್ತು ತಿರುಗುತ್ತಿದ್ದ ಪೊಲೀಸರು ತಾವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಪೊಲೀಸ್ ಸಿಬ್ಬಂದಿ ಜಿ, ಎನ್, ದೊಡಮನಿ, ಪಿ ಎಸ್ ಮಲಗೌಡರ ಹಾಗೂ ಗಿರಿಮಲ್ಲ ಆಜುರ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಅಥಣಿ ಜನರಿಂದ ಪ್ರಶಂಸೆಯ ಹರಿದು ಬಂದಿದೆ. ಇದನ್ನೂ ಓದಿ :ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

  • ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಹೈದ್ರಾಬಾದ್: ನಿರ್ಗತಿಕರ ಬಾಳಿನ ಆಶಾಕಿರವಾಣವಾದ ರಿಯಲ್ ಹೀರೊ ಸೋನು ಸೂದ್ ಹಲವರ ಪಾಲಿನ ದೇವರಾಗಿದ್ದಾರೆ. ಹೀಗಿರುವಾಗ ತೆಲಂಗಾಣದಲ್ಲಿ ಅವರ ಅಭಿಮಾನಿಗಳು ಸೋನು ಸೂದ್ ಅವರ ಪ್ರತಿಮೆ ಇಟ್ಟು ದೇವಸ್ಥಾನವನ್ನು ಕಟ್ಟಿದ್ದಾರೆ.

    ಕೊರೋನಾ ಲಾಕ್‍ಡೌನ್ ವೇಳೆಯಲ್ಲಿ ನಟ ಮತ್ತು ಲೋಕೋಪಕಾರಿ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಅರಿತುಕೊಂಡು, ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ದುಬ್ಬಾ ತಾಂಡಾ ಗ್ರಾಮದ ಸ್ಥಳೀಯ ಜನರು ದೇವಾಲಯವನ್ನು ನಿರ್ಮಿಸಿದ್ದಾರೆ. ಇವರು ಸಹಾಯವನ್ನು ನೆನೆದು ಸೋನು ಸೂದ್ ಪ್ರತಿಮೆಯನ್ನು ಪೂಜಿಸುತ್ತಿದ್ದಾರೆ.

     

    ಸ್ಥಳೀಯ ಜನರ ಸಮ್ಮುಖದಲ್ಲಿ ದೇವಾಲಯದ ಉದ್ಘಾಟನೆ ಮಾಡಲಾಗಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡುತ್ತಾ ಸೋನು ಸೂದ್ ಪ್ರತಿಮೆಗೆ ಆರತಿ ಮಾಡಿದ್ದಾರೆ.

    ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಸೂದ್ ಅವರು ಸಾರ್ವಜನಿಕರಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಉದ್ಘಾಟನೆ ವೇಳೆ ಹೇಳಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಅಸಾಹಯಕ ಸ್ಥಿತಿಯಲ್ಲಿದ್ದಾಗ ಸೋನು ಸೂದ್ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕವಾಗಿ ಮಾನವೀಯತೆ ಮೇರೆದಿದ್ದರು.

    ಲಾಕ್‍ಡೌನ್ ಸಮಯದಲ್ಲಿ ಮಾಡಿದ ಸಹಾಯ ರಿಯಲ್ ಹೀರೋ ಆಗಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರೆ ಸೋನು ಸೂದ್ ಆಗಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಬಗೆಹರಿಸುತ್ತಾರೆ. ಭಾರತದಲ್ಲಿರುವ ಒಬ್ಬನೇ ದೇವರು ಎಂದರೆ ಸೋನು ಸೂದ್. ತನ್ನ ಒಳ್ಳೆಯ ಕಾರ್ಯಗಳಿಂದ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಸೋನು ಸೂದ್‍ಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಇಲ್ಲಿನ ಸ್ಥಳಿಯರು ಹೇಳಿದ್ದಾರೆ.

  • ತನ್ನ ಕೈಯಾರೆ ಶ್ವಾನಕ್ಕೆ ನೀರು ಕುಡಿಸಿದ ಅಜ್ಜನ ವಿಡಿಯೋ ವೈರಲ್

    ತನ್ನ ಕೈಯಾರೆ ಶ್ವಾನಕ್ಕೆ ನೀರು ಕುಡಿಸಿದ ಅಜ್ಜನ ವಿಡಿಯೋ ವೈರಲ್

    – ವೃದ್ಧನ ಮಾನವೀಯ ಗುಣಕ್ಕೆ ನೆಟ್ಟಿಗರು ಫಿದಾ

    ನವದೆಹಲಿ: ಇತ್ತೀಚೆಗಷ್ಟೇ ವೃದ್ಧ ಭಿಕ್ಷುಕರೊಬ್ಬರು ತನ್ನದೇ ಪ್ಲೇಟಿನಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಿ ನೆಟ್ಟಿಗರ ಮನ ಗೆದ್ದಿದ್ದರು. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದ್ದು, ವೃದ್ಧನ ಮಾನವೀಯತೆಗೆ ಸಾಮಾಜಿಕ ಜಾಲತಾಣಿಗರು ಫಿದಾ ಆಗಿದ್ದಾರೆ.

    ಹೌದು. ವೃದ್ಧರೊಬ್ಬರು ನಳ್ಳಿಯಿಂದ ತನ್ನ ಕೈಯಾರೆ ನೀರು ತೆಗದುಕೊಂಡು ಬಂದು ಶ್ವಾನಕ್ಕೆ ಕುಡಿಸಿದ್ದಾರೆ. ಇದನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    18 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ವೃದ್ಧರೊಬ್ಬರು ಶ್ವಾನಕ್ಕೆ ನೀರು ಕುಡಿಯಲು ಸಹಾಯ ಮಡುವುದನ್ನು ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿರುವ ನಳ್ಳಿಯಿಂದ ಬೊಗಸೆ ತುಂಬಾ ನೀರು ತೆಗೆದುಕೊಂಡು ಬಂದು ಶ್ವಾನಕ್ಕೆ ಕುಡಿಸಿದ್ದಾರೆ. ಅದು ಮುಗಿದ ಬಳಿಕ ಮತ್ತೆ ಅದೇ ರೀತಿ ನೀರು ಕುಡಿಸುವ ಮೂಲಕ ಶ್ವಾನದ ಬಾಯಾರಿಕೆಯನ್ನು ನೀಗಿಸಿದ್ದಾರೆ.

    ಈ ವಿಡಿಯೋವನ್ನು ಸುಶಾಂತ್ ತಮ್ಮ ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಮಾಡಿಕೊಂಡು, ಮಾನವೀಯತೆ ಹೃದಯದಲ್ಲಿದೆ, ನಾವಿರುವ ಸ್ಥಿತಿಯಲ್ಲಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ 11 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಹಲವು ಮಂದಿ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ತನ್ನ ಪ್ಲೇಟಿನಲ್ಲಿಯೇ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ- ವಿಡಿಯೋ ವೈರಲ್

    ವೃದ್ಧನ ಮಾನವೀಯತೆಗೆ ಮಾರು ಹೋಗಿರುವ ನೆಟ್ಟಿಗರು, ಮಾನವೀಯತೆ ಅಂದರೆ ಇದು ಅಂತ ಕೆಲವರು ಅಂದರೆ, ಇನ್ನೂ ಕೆಲವರು ಈ ವಿಡಿಯೋ ನೋಡಿದ ಮೇಲೆ ಬರೆಯಲು ಪದಗಳೇ ಸಿಗುತ್ತಿಲ್ಲ ಎಂದು ಎರಡು ಕೈ ಜೋಡಿಸಿ ಮುಗಿಯುವ ಸಿಂಬಲ್ ಹಾಕಿದ್ದಾರೆ.

  • ಗಾಯಾಳುಗಳನ್ನು  ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ಕೊಟ್ಟ ಸಂಸದ ಜಾಧವ್

    ಗಾಯಾಳುಗಳನ್ನು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ಕೊಟ್ಟ ಸಂಸದ ಜಾಧವ್

    ಯಾದಗಿರಿ: ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಸ್ವಂತ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಸ್ವತಃ ತಾವೇ ಚಿಕಿತ್ಸೆ ನೀಡಿ ಸಂಸದ ಉಮೇಶ್ ಜಾಧವ್ ಮಾನವೀಯತೆ ಮೆರೆದಿದ್ದಾರೆ.

    ಯಾದಗಿರಿ ನಗರದ ಕೆಎಸ್ಆರ್‌ಟಿಸಿ ಕಾರ್ಯಾಗಾರ ಬಳಿ ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಗುರಮಿಠಕಲ್ ತಾಲೂಕಿನ ಕೆ.ಅರಕೇರಿ ಗ್ರಾಮದ ರಾಠೋಡ ಹಾಗೂ ನರೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು.

    ಆದೇ ದಾರಿಯಲ್ಲಿ ರೈಲು ಕಾರ್ಯಾಗಾರ ವೀಕ್ಷಿಸಲು ತೆರಳುತಿದ್ದ ಉಮೇಶ್ ಜಾಧವ್ ಅವರು ವಾಪಸ್ ಬರುತ್ತಿರುವಾಗ ಘಟನೆ ತಿಳಿದು ತಕ್ಷಣ ಸಹಾಯಕ್ಕೆ ಬಂದಿದ್ದಾರೆ. ಅಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ಬೈಕಿನಲ್ಲಿ ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ತಮ್ಮ ಕಾರಿನಲ್ಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಮತ್ತು ಇಷ್ಟೇ ಅಲ್ಲದೇ ಜಾಧವ್ ಅವರು ಸ್ವತಃ ವೈದ್ಯರಾಗಿರುವುದರಿಂದ ತಾವೇ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

     

    ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾಧವ್ ಅವರು, ರಸ್ತೆಯಲ್ಲಿ ಅಪಘಾತವಾದ ಸಂದರ್ಭದಲ್ಲಿ ಮೊದಲು ಕರೆದುಕೊಂಡು ಹೋಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕು. ಪ್ರಚಾರಕ್ಕಾಗಿ ಫೋಟೋ ತೆಗದುಕೊಳ್ಳುವುದನ್ನು ಮಾಡಬಾರದು ಎಂದು ಮನವಿ ಮಾಡಿದರು.

    ನಂತರ ಆಸ್ಪತ್ರೆಗೆ ಬಂದ ಯಾದಗಿರಿ ನಗರ ಟ್ರಾಫಿಕ್ ಪೋಲೀಸರು ಗಾಯಾಳುಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ಅಪಘಾತಕ್ಕೊಳಗಾದ ಪತ್ರಕರ್ತನನ್ನು ರಕ್ಷಿಸಿ ಮಾನವೀಯತೆ ಮೆರೆದ ರಾಹುಲ್ ಗಾಂಧಿ!

    ಅಪಘಾತಕ್ಕೊಳಗಾದ ಪತ್ರಕರ್ತನನ್ನು ರಕ್ಷಿಸಿ ಮಾನವೀಯತೆ ಮೆರೆದ ರಾಹುಲ್ ಗಾಂಧಿ!

    ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾನವೀಯತೆ ಮೆರೆದಿದ್ದಾರೆ.

    ಬುಧವಾರದಂದು, ದೆಹಲಿಯ ಹುಮಾಯುನ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ರಸ್ತೆ ದಾಟುತ್ತಿದ್ದಾಗ ರಾಜಸ್ಥಾನ ಮೂಲದ ಪತ್ರಕರ್ತರಾದ ರಾಜೇಂದ್ರ ವ್ಯಾಸ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಯಗೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ರಾಹುಲ್ ಗಾಂಧಿ ಅವರು ರಾಜೇಂದ್ರ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ರಸ್ತೆ ಮಧ್ಯ ನರಳುತ್ತ ಬಿದ್ದಿದ್ದ ಪತ್ರಕರ್ತನನ್ನು ತಮ್ಮ ವಾಹನದಲ್ಲೇ ಕರೆದೊಯ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಗಾಯಾಳುಗೆ ಪ್ರಥಮ ಚಿಕಿತ್ಸೆ ಕೊಡಿಸಿ, ರಾಜೇಂದ್ರ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸುವವರೆಗೂ ಆಸ್ಪತ್ರೆಯಲ್ಲಿಯೇ ಇದ್ದು ರಾಹುಲ್ ಕಾಳಜಿ ತೋರಿಸಿದ್ದಾರೆ. ರಾಹುಲ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  • ಮಾನವೀಯತೆ ಮೆರೆದ ಪೊಲೀಸ್ ಇನ್ಸ್‌ಪೆಕ್ಟರ್ – ಶಹಬ್ಬಾಶ್‍ಗಿರಿ ಕೊಟ್ಟ ಡಿಸಿಪಿ ಅಣ್ಣಾಮಲೈ

    ಮಾನವೀಯತೆ ಮೆರೆದ ಪೊಲೀಸ್ ಇನ್ಸ್‌ಪೆಕ್ಟರ್ – ಶಹಬ್ಬಾಶ್‍ಗಿರಿ ಕೊಟ್ಟ ಡಿಸಿಪಿ ಅಣ್ಣಾಮಲೈ

    ಬೆಂಗಳೂರು: ದುಷ್ಕರ್ಮಿಯಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡುವ ಮೂಲಕ ಪೊಲೀಸ್ ಇನ್ಸ್‌ಪೆಕ್ಟರ್ ಮಾನವೀಯತೆಯ ಮೆರೆದಿದ್ದಾರೆ.

    ಸಿದ್ದಲಿಂಗಯ್ಯ ಗಿರಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದು, ಶಿಕ್ಷಕಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಶಿಕ್ಷಕಿ ತನುಜಾರನ್ನು ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತನುಜಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ವೇಳೆ ಸಿದ್ದಲಿಂಗಯ್ಯ ಗಾಯಾಳು ತನುಜಾರಿಗೆ ರಕ್ತ ಕೊಟ್ಟು ಜೀವ ಉಳಿಸಿದ್ದಾರೆ.

    ನಡೆದಿದ್ದು ಏನು?
    ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನುಜಾರಿಗೆ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದನು. ಇದರಿಂದ ತನುಜ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಮಾಹಿತಿ ಸಿಕ್ಕಿದ ತಕ್ಷಣ ಸಿದ್ದಲಿಂಗಯ್ಯ ಸ್ಥಳಕ್ಕೆ ದಾವಿಸಿ ಕೂಡಲೇ ತನುಜಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.

    ಹೆಚ್ಚಿನ ಚಿಕಿತ್ಸೆಗೆಂದು ತನುಜಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ತನುಜಾ ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದರು. ಆಗ ವೈದ್ಯರು ಹೆಚ್ಚುವರಿ ರಕ್ತದ ಅವಶ್ಯಕತೆ ಇದೆ ತುರ್ತು ರಕ್ತ ಬೇಕು ಎಂದು ಸೂಚಿಸಿದ್ದರು. ತಕ್ಷಣವೇ ಸಿದ್ದಲಿಂಗಯ್ಯ ಗಾಯಾಳು ತನುಜಾರಿಗೆ ರಕ್ತ ನೀಡಿ ಪ್ರಾಣ ಉಳಿಸಿದ್ದರು.

    ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತನುಜ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ತನುಜಾ ಹೊಸಕೆರೆಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಸುತ್ತಿದ್ದರು. ಸಿದ್ದಲಿಂಗಯ್ಯ ಕೆಲಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಅವರು ಕೂಡ ಸಿದ್ದಲಿಂಗಯ್ಯ ಅವರಿಗೆ ಶಹಬ್ಬಾಶ್ ಗಿರಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಸನಪುರ ಕ್ರಿಕೆಟ್ ಲೀಗ್‍ನಲ್ಲಿ ಮಾನವೀಯತೆ ಮೆರೆದ ನಟ ಯಶ್

    ದಾಸನಪುರ ಕ್ರಿಕೆಟ್ ಲೀಗ್‍ನಲ್ಲಿ ಮಾನವೀಯತೆ ಮೆರೆದ ನಟ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಕುಸಿದು ಬಿದ್ದ ತಮ್ಮ ಅಭಿಮಾನಿಯನ್ನು ಕೈ ಹಿಡಿದು ಎತ್ತಿ ಮಾನವೀಯತೆ ಮೆರೆದಿದ್ದಾರೆ.

    ನೆಲಮಂಗಲದ ಮಾದವಾರದ ನೈಸ್ ಮೈದಾನದಲ್ಲಿ ನಡೆಯುತ್ತಿರುವ ದಾಸನಪುರ ಕ್ರಿಕೆಟ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಲು ಯಶ್ ಆಗಮಿಸಿದ್ದರು. ಈ ವೇಳೆ ನಟ ಯಶ್ ಅವರನ್ನು ನೋಡಲು ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಯಿತು.

    ಈ ವೇಳೆ ಅಭಿಮಾನಿಯೊಬ್ಬರು ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಯಶ್, ಕೂಡಲೇ ಅವರನ್ನು ಕೈ ಹಿಡಿದು ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಕುಸಿದು ಬಿದ್ದ ಅಭಿಮಾನಿ ಜೊತೆ ಸೆಲ್ಫಿ ತೆಗೆದುಕೊಂಡು ಯಶ್ ಅವರ ಆಸೆಯನ್ನು ಪೂರೈಸಿದ್ದಾರೆ.

    ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ದಾಸನಪುರ ಕ್ರಿಕೆಟ್ ಪ್ರೀಮಿಯರ್ ಲೀಗ್‍ಗೆ ನಟಿ ಹರಿಪ್ರಿಯಾ ಹಾಗೂ ಕ್ರಿಕೆಟಿಗ ದೊಡ್ಡ ಗಣೇಶ್ ಚಾಲನೆ ನೀಡಿದ್ದರು. ಯಶ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ನರ್ಸ್, ವೈದ್ಯರು ಇಲ್ಲದ ವೇಳೆ ರೋಗಿ ಪ್ರಾಣ ಉಳಿಸಿದ ಸೆಕ್ಯುರಿಟಿ ಗಾರ್ಡ್

    ನರ್ಸ್, ವೈದ್ಯರು ಇಲ್ಲದ ವೇಳೆ ರೋಗಿ ಪ್ರಾಣ ಉಳಿಸಿದ ಸೆಕ್ಯುರಿಟಿ ಗಾರ್ಡ್

    ಚಾಮರಾಜನಗರ: ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ರೋಗಿಯೊಬ್ಬರ ಗ್ಲುಕೋಸ್ ಬಾಟಲಿಯನ್ನು ಬದಲಾಯಿಸುವ ಮೂಲಕ ಸೆಕ್ಯುರಿಟಿ ಗಾರ್ಡ್ ಸತೀಶ್ ಮಾನವೀಯತೆ ಮೆರೆದಿರುವ ಘಟನೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಗ್ಲುಕೋಸ್ ಬಾಟಲ್ ಅಳವಡಿಸಲಾಗಿತ್ತು. ಗ್ಲುಕೋಸ್ ಮುಗಿಯುವ ಹಂತಕ್ಕೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ವೈದ್ಯರಾಗಲಿ, ದಾದಿಯರಾಗಲಿ ಅಲ್ಲಿ ಇರಲಿಲ್ಲ. ರೋಗಿಯ ಸಂಬಂಧಿಕರು ನರ್ಸ್ ಗಾಗಿ ಹುಡುಕಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರು ಹೊರಹೋಗಿದ್ದರು ಎನ್ನಲಾಗಿದೆ.

    ಇದನ್ನು ಗಮನಿಸಿದ ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ತಕ್ಷಣ ಧಾವಿಸಿ ಗ್ಲುಕೋಸ್ ಬಾಟಲಿ ಬದಲಿಸಿ ನರ್ಸ್ ಮಾಡಬೇಕಾದ ಕೆಲಸವನ್ನು ತಾನೇ ಮಾಡಿದ್ದಾರೆ. ಒಂದು ವೇಳೆ ಖಾಲಿಯಾಗಿದ್ದ ಗ್ಲುಕೋಸ್ ಬಾಟಲಿಯನ್ನು ತಕ್ಷಣ ಬದಲಿಸದೆ ಇದ್ದಿದ್ದರೆ ಅದು ರೋಗಿಯ ರಕ್ತವನ್ನೇ ವಾಪಸ್ ಎಳೆದು ರೋಗಿಗೆ ಅಪಾಯ ಉಂಟಾಗುವ ಸಾಧ್ಯತೆಗಳಿದ್ದವು.

    ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ವೈದ್ಯರು ಹಾಗು ನರ್ಸ್ ಗಳಿದ್ದರು ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ದೂರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ರೋಗಿಗಳ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=aJGIl36QcOI&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡ್ರೈವರ್ ಸೀಟಿನಿಂದ್ಲೇ ಮಹಿಳೆಯನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದ  ಬಿಎಂಟಿಸಿ ಚಾಲಕ

    ಡ್ರೈವರ್ ಸೀಟಿನಿಂದ್ಲೇ ಮಹಿಳೆಯನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ

    ಬೆಂಗಳೂರು: ಬಿಎಂಟಿಸಿ ಚಾಲಕರೊಬ್ಬರು ಮಹಿಳೆಯನ್ನು ತನ್ನ ಸೀಟಿನಿಂದಲೇ ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಂದು ವಿರಳವಾಗಿ ಬಸ್ ಸಂಚರಿಸುತಿತ್ತು. ಕಡಿಮೆ ಬಸ್ ಇದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ನೂಕು ನುಗ್ಗಾಟ ಜಾಸ್ತಿಯಿತ್ತು.

    ನೂಕು ನುಗ್ಗಾಟದ ಮಧ್ಯೆ ಮಹಿಳೆಯೊಬ್ಬರು ತನ್ನ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಬಸ್ ಹತ್ತಲು ಪರದಾಡುತ್ತಿದ್ದರು. ಮಹಿಳೆಯ ಸಂಕಟ ನೋಡಿ ಬಿಎಂಟಿಸಿ ಬಸ್ ಡ್ರೈವರ್ ಅವರ ನೆರವಿಗೆ ಬಂದಿದ್ದಾರೆ. ಚಾಲಕ ತನ್ನ ಸೀಟಿನಿಂದಲೇ ಅವರನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮರೆದಿದ್ದಾರೆ. ಚಾಲಕ ತಾಯಿ ಹಾಗೂ ಚಿಕ್ಕ ಮಗುವನ್ನು ಬಸ್ಸಿನೊಳಗೆ ಕರೆಸಿಕೊಂಡಿದಲ್ಲದೇ ತನ್ನ ಸೀಟ್ ನ ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ.

    ಮಂಗಳವಾರದ ಬಂದ್‍ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್ ಟಿಸಿ ನಿರ್ಧರಿಸಿತ್ತು. ಆದರೆ ಕೆಲ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಹಲವು ಕಡೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಆಗಾಗ ಕೆಲವೊಂದು ಬಸ್ಸುಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

    https://www.youtube.com/watch?v=nCVC3K38xnY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv