ಬೆಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಷ್ಯಡಂತ್ರದ ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣನವರ್ (Girish Mattannavar) ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಗಿರೀಶ್ ಮಟ್ಟಣ್ಣನವರ್ ಇಲಾಖೆಯ ಹೆಸರನ್ನು ಸುಳ್ಳು ಹೇಳಲು ಬಳಸಿಕೊಂಡಿದ್ದಾರೆಂದು ಆರೋಪಿಸಿ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ದೂರು ಪಡೆದಿರುವ ಅಧಿಕಾರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೂರುದಾರ ಸುರೇಶ್ ಗೌಡ, ಸುಳ್ಳು ಹೇಳಿ ಮಾನವ ಹಕ್ಕುಗಳ ಆಯೋಗವನ್ನ ಬಳಕೆ ಮಾಡಿಕೊಂಡಿದ್ದಾರೆ. ಇದು ಸರಿ ಅಲ್ಲ. ಅಧಿಕಾರಿಗಳು ಕೂಡ ಶೀಘ್ರ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಪೊಲೀಸ್ ಠಾಣೆಗೂ ಈ ಸಂಬಂಧ ಶೀಘ್ರ ದೂರು ನೀಡುತ್ತೇವೆ ಎಂದರು.
– ಕೊಲೆ, ಸುಲಿಗೆ, ಕೊಲೆ ಯತ್ನ, ದನಗಳ್ಳತನ ಕೇಸ್ ಆರೋಪಿಯಾಗಿರೋ ಮದನ ಬುಗಡಿ
ಹುಬ್ಬಳ್ಳಿ: ರೌಡಿಶೀಟರ್‌ವೊಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ (Girish Mattannavar) ಪರಿಚಯಿಸಿರುವ ಪ್ರಸಂಗ ನಡೆದಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಆದರೆ, ಆ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕುಖ್ಯಾತ ರೌಡಿಶೀಟರ್. ಈತ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ
ಹಳೇ ಹುಬ್ಬಳ್ಳಿ ಶಿವಶಂಕರ್ ಕಾಲೊನಿಯ ತಾಂಡಾ ನಿವಾಸಿ ಈ ಮದನ ಬುಗಡಿ. ಕೊಲೆ, ಕೊಲೆ ಯತ್ನ, ಸುಲಿಗೆ, ದೊಂಬಿ, ದನಗಳ್ಳತನ ಸೇರಿ ವಿವಿಧ ಪ್ರಕರಣಗಳು ಈತನ ಮೇಲಿವೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಹುಬ್ಬಳ್ಳಿ ತಾಲೂಕಿನ ಕುಸಗಲ್‌ನಲ್ಲಿ ನಡೆದಿದ್ದ ಪರಶುರಾಮ್ ದೊಡ್ಡಮನಿ ಕೊಲೆ ಪ್ರಕರಣದಲ್ಲಿ ಬುಗಡಿ 2ನೇ ಆರೋಪಿಯಾಗಿದ್ದಾನೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಬಿಡುಗಡೆಯಾಗಿದ್ದಾನೆ. ದನಗಳ ಕಳ್ಳತನ ಮಾಡುವಲ್ಲಿ ಈತ ನಿಸ್ಸೀಮ ಎನ್ನಲಾಗಿದೆ.
ಸುಲಿಗೆ ದರೋಡೆ ಸೇರಿ ಹಲವಾರು ಪ್ರಕರಣಗಳಲ್ಲಿ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ಮದನ್ ಮೇಲೆ ಪ್ರಕರಣಗಳು ದಾಖಲಾಗಿವೆ. ಪ್ರತಿ ರೌಡಿ ಪರೇಡ್‌ನಲ್ಲಿ ರೌಡಿಶೀಟರ್ ಮದನ್ ಬುಗಡಿ ಹಾಜರಾಗುತ್ತಾನೆ. ಕಳೆದ ಡಿಸೆಂಬರ್ 30 ರಂದು ನಡೆದ ರೌಡಿ ಪರೇಡ್ ವೇಳೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದರು.
ಮಂಗಳೂರು: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಎಸ್‌ಐಟಿ ಈಗಾಗಲೇ ಅರ್ಧ ತಿಂಗಳು ಕೆಲಸ ಮಾಡಿದೆ. ಜಿಪಿಆರ್ ಮೂಲಕ ಶೋಧಕಾರ್ಯ ನಡೆಯುತ್ತಿರುವಾಗಲೇ ಪ್ರಕರಣಕ್ಕೆ ಮಾನವ ಹಕ್ಕುಗಳ ಆಯೋಗ (Human Rights Commission) ಎಂಟ್ರಿ ಕೊಟ್ಟಿದೆ.
ಎಸ್‌ಐಟಿ ಅಧಿಕಾರಿಗಳು ಬಹಳ ಮುತುವರ್ಜಿಯಿಂದ ಎಲ್ಲಾ ತನಿಖೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಪಂಚಾಯತ್ ಠಾಣೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಆ ಕಾಲಮಾನದಲ್ಲಿ ಕೆಲಸ ಮಾಡಿದ ಎಲ್ಲರ ಸಾಕ್ಷಿಗಳ ಸಂಗ್ರಹ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ ಬಗ್ಗೆ ಎಸ್‌ಐಟಿ ತನಿಖೆ ಮುಗಿಯೋವರೆಗೂ ನಾನು ಮಾತನಾಡಲ್ಲ: ಜಿ.ಪರಮೇಶ್ವರ್
ಕಳೆದ ಎರಡು ವಾರಗಳಿಂದ ಎಸ್‌ಐಟಿ ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಧಿ ಅಗೆದು ಶೋಧ ನಡೆಸಲಾಗುತ್ತಿದೆ. ಅನಾಮಿಕ ಕೊಟ್ಟ ದೂರು ಸತ್ಯನಾ ಸುಳ್ಳಾ ಎಂದು ವಿಚಾರಣೆ ಜೊತೆ ತನಿಖೆ ನಡೆಸುತ್ತಿದೆ. ಈ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಧರ್ಮಸ್ಥಳಕ್ಕೆ ಧುಮುಕಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೀಡು ಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿಯಿದ್ದಾರೆ.
ಆಯೋಗ ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆಗೈದಿದೆ. ಮುಂದಿನ ನಾಲ್ಕೈದು ದಿನ ಧರ್ಮಸ್ಥಳದಲ್ಲಿ ಬೀಡು ಬಿಡಲಿರುವ ಮಾನವ ಹಕ್ಕುಗಳ ಆಯೋಗ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿ ವರದಿ ಸಿದ್ಧಪಡಿಸಲಿದೆ.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮೈದಾನ ಪ್ರವೇಶಿಸಿದ್ದ ಯುವಕನಿಗೆ ಥಳಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡಮಾಲಿ ಪಾಟೀಲ್ ಮಾನವ ಹಕ್ಕುಗಳ ಆಯೋಗಕ್ಕೆ (Human Rights Commission) ದೂರು ನೀಡಿದ್ದಾರೆ.
ಮಾನವೀಯತೆ ಮರೆತು ಲಕ್ಷಾಂತರ ಜನರ ಮುಂದೆ ಯುವಕನಿಗೆ ಥಳಿಸಿದ್ದಾರೆ. ಹಲ್ಲೆ ಮಾಡಲು ಇವರಿಗೆ ಏನು ಹಕ್ಕಿದೆ? ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಅಲ್ ಜಜೀರಾ ನಿಷೇಧ – ಇದು ಉಗ್ರರ ವಾಹಿನಿ ಎಂದ ನೆತನ್ಯಾಹು
WTH!!!!! What kind of behavior is this chapri @RCBTweets 🤬
You don't have the right to touch anyone. Then what's the use of Law?
You can keep him in Jail/ Fine but you're attacking him in the stadium 🏟️ itself
ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿತ್ತು. ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಹೈ ಸೆಕ್ಯೂರಿಟಿ ಮಧ್ಯೆಯೂ ಕ್ರೀಸ್ ಒಳಗಡೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಹುಚ್ಚಾಟ ನಡೆಸಿದ್ದ. ಇದನ್ನೂ ಓದಿ: ತವರಿನಲ್ಲೇ ಪಾಂಡ್ಯ ಪಡೆಗೆ ಹೀನಾಯ ಸೋಲು – ರಾಜಸ್ಥಾನ್ ರಾಯಲ್ಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ
ಕೊಹ್ಲಿ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿ ಎಲ್ಲಾ ರೂಲ್ಸ್‌ಗಳನ್ನು ಮುರಿದು ಕ್ರೀಸ್ ಒಳಗಡೆ ನುಗ್ಗಿ ಏಕಾಏಕಿ ಕೊಹ್ಲಿ ಕಾಲಿಗೆ ಬಿದ್ದು ಬಳಿಕ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದ. ಕೂಡಲೇ ಒಳನುಗ್ಗಿದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ನಂತರ ಮೈದಾನ ದಿಂದ ಹೊರಗೆ ಕರೆತಂದು ಸಿಬ್ಬಂದಿ ಥಳಿಸಿದ್ದರು. ಥಳಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಶಕ್ಕೆ ಪಡೆದು ಅಭಿಮಾನಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಮೈದಾನದೊಳಗೆ ನುಗ್ಗಿದವ 17 ವರ್ಷದ ಯುವಕನಾಗಿದ್ದು ಆರ್ಸಿಬಿ ಪಂದ್ಯ ನೋಡಲು ರಾಯಚೂರಿನಿಂದ ರೈಲಿನಲ್ಲಿ ಆಗಮಿಸಿದ್ದ ಎಂದು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಹುಚ್ಚು ಅಭಿಮಾನಿಯಾಗಿರುವ ಈತ ಈ ಪಂದ್ಯ ನೋಡಲು 3 ಸಾವಿರ ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿಸಿದ್ದ.
ಲಂಡನ್: ಯುದ್ಧದ ನಡುವೆ ರಷ್ಯಾ ಸೈನಿಕರು ಉಕ್ರೇನ್‌ನ ಮಹಿಳೆಯರೊಂದಿಗೆ ಅತ್ಯಾಚಾರಿಗಳಿಗಿಂತಲೂ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಉಕ್ರೇನ್ ಮಹಿಳೆಯರು ಹಾಗೂ ಯುವತಿಯರು ನರಕ ಅನುಭವಿಸುವಂತಾಗಿದೆ.
ಯಾವುದೇ ಯುದ್ಧಗಳು ನಡೆದಾಗ ಸಂತ್ರಸ್ತ ರಾಷ್ಟ್ರದ ಹೆಣ್ಣುಮಕ್ಕಳನ್ನು ಭೋಗದ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇಂತಹದ್ದೇ ಅಮಾನವೀಯ ಘಟನೆಗೆ ಉಕ್ರೇನ್ ಸಾಕ್ಷಿಯಾಗಿದೆ. ಯುವತಿಯರೂ, ಬಾಲಕಿಯರನ್ನೂ 25 ದಿನಗಳ ಕಾಲ ಬೇಸ್ಮೆಂಟ್‌ನಲ್ಲಿ ಇಟ್ಟುಕೊಂಡಿದ್ದ ರಷ್ಯಾ ಸೈನಿಕರು, ನಿರಂತರ ಅತ್ಯಾಚಾರ ಎಸಗಿದ್ದಾರೆ. ಇಂಥದ್ದೊಂದು ಬೆಚ್ಚಿ ಬೀಳಿಸುವ ಸಂಗತಿ ಉಕ್ರೇನ್‌ನಿಂದ ಹೊರಬಿದ್ದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ 58 ಮಂದಿ ಸಾವು – ಫಿಲಿಪೈನ್ಸ್‌ನಲ್ಲಿ ಬಿಡುವಿಲ್ಲದೇ ನಡೀತಿದೆ ಕಾರ್ಯಾಚರಣೆ
ಬುಚಾ ನಗರದ ಮನೆಯೊಂದರ ನೆಲಮಾಳಿಗೆಯಲ್ಲಿ ರಷ್ಯಾದ ಸೈನಿಕರು ಉಕ್ರೇನ್‌ನ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದರಲ್ಲಿ 14 ರಿಂದ 24 ವರ್ಷ ವಯಸ್ಸಿನ ಸುಮಾರು 25 ಮಂದಿ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಅತ್ಯಂತ ಕ್ರೂರವಾಗಿ ನಡೆದುಕೊಂಡಿರುವ ರಷ್ಯಾದ ಸೈನಿಕರು ಮುಂದೆ ಯಾವುದೇ ಪುರುಷನೊಂದಿಗೆ ಅವರು ಲೈಂಗಿಕ ಸಂಪರ್ಕ ಬೆಳೆಸಲು ಸಾಧ್ಯವಾಗದ ಮಟ್ಟಿಗೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ಮಹಿಳೆಯರು ತಮಗೆ ಏನಾಯಿತೆಂದು ಹೇಳಲು ಸಿದ್ಧವಿಲ್ಲ. ಅವರಲ್ಲಿ ಹೆಚ್ಚಿನವರಿಗೆ ಮಾನಸಿಕವಾಗಿ ಧೈರ್ಯ ತುಂಬುವವರು ಬೇಕಾಗಿದ್ದಾರೆ. ಅವರು ನಮಗೆ ಸಾಷ್ಟ್ಯನೀಡದೇ ಅಪರಾಧಿಗಳಿಂದು ಗುರುತಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
– ಮತಾಂತರವಾದ್ರೆ ಮದ್ವೆ ಮಾಡಿಸ್ತೀನಿ ಅಂತ ಕೈಕೊಟ್ಟ ಪ್ರೇಯಸಿ ತಂದೆ
– ಪ್ರೇಯಸಿಗಾಗಿ ಮಾನವ ಹಕ್ಕು ಆಯೋಗದ ಮೊರೆ
ಹೈದರಾಬಾದ್: 11 ವರ್ಷದ ಪ್ರೀತಿಗಾಗಿ ಕ್ರಿಶ್ಚಿಯನ್‍ನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವಕನೋರ್ವ ಈಗ ಪ್ರೇಯಸಿಗಾಗಿ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾನೆ.
ಕ್ರಿಶ್ಚಿಯನ್ ಆಗಿದ್ದ ಬಾಬ್ಬಿಲಿ ಭಾಸ್ಕರ್(26) ಮುಸ್ಲಿಂ ಯುವತಿಯನ್ನು ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದಾನೆ. ಆದರೆ ಯುವತಿ ತಂದೆ ನೀನು ಮುಸ್ಲಿಂ ಆಗಿ ಮತಾಂತರಗೊಂಡರೆ ನನ್ನ ಮಗಳನ್ನು ನಿನ್ನ ಜೊತೆ ಮಾದುವೆ ಮಾಡಿಸುತ್ತೇನೆ ಎಂದು ಷರತ್ತು ಹಾಕಿದ್ದರು. ಆದ್ದರಿಂದ ಬಾಬ್ಬಿಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡನು. ಬಳಿಕ ತನ್ನ ಹೆಸರನ್ನು ಮೊಹ್ಮದ್ ಅಬ್ದುಲ್ ಎಂದು ಬದಲಿಸಿಕೊಂಡನು.
Hyderabad: Md Abdul Hunnain, who had converted to Islam from Christianity to marry a Muslim woman, has approached State Human Rights Commission after her family allegedly denied them permission to marry. He says "Had converted when her father told me, now he refuses to accept me" pic.twitter.com/6ixujixRLu
ನಾನು ಮತಾಂತರಗೊಂಡಿದ್ದೇನೆ ಇನ್ನಾದರೂ ನನ್ನ ಪ್ರೇಯಸಿಯನ್ನು ಮದುವೆ ಆಗಿ ಚೆನ್ನಾಗಿರಬಹುದು ಎಂದು ಮೊಹ್ಮದ್ ಖುಷಿಯಾಗಿದ್ದನು. ಇದೇ ಖುಷಿಯಲ್ಲಿ ಪ್ರೇಯಸಿ ಮನೆಗೆ ಮೊಹ್ಮದ್ ಮದುವೆ ಬಗ್ಗೆ ಮಾತನಾಡಲು ಹೋಗಿದ್ದಾನೆ. ಆದರೆ ಯುವತಿ ತಂದೆ ಮಾತ್ರ, ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲ್ಲ ಎಂದು ವರಸೆ ಬದಲಿಸಿದ್ದಾರೆ ಎಂದು ಮೊಹ್ಮದ್ ಆರೋಪಿಸಿದ್ದಾನೆ. ಜೊತೆಗೆ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಕಳೆದ 1 ವರ್ಷದಿಂದ ನನ್ನ ಪ್ರೇಯಸಿಯನ್ನು ನಾನು ನೋಡಿಲ್ಲ. ಆಕೆಯನ್ನು ನಾನು ಭೇಟಿ ಮಾಡೋದಕ್ಕೆ ಬಿಟ್ಟಿಲ್ಲ. ನಮ್ಮಿಬ್ಬರನ್ನು ಆಕೆಯ ತಂದೆ ದೂರ ಮಾಡಿದ್ದಾರೆ. ಅವಳು ಬದುಕ್ಕಿದ್ದಾಳೋ? ಇಲ್ಲವೋ? ಎನ್ನುವುದು ಕೂಡ ನನಗೆ ಗೊತ್ತಿಲ್ಲ. ಇದೇ ಕಾರಣಕ್ಕೆ ನಾನು ಈಗ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದೇನೆ ಎಂದು ಮೊಹ್ಮದ್ ಹೇಳಿದ್ದಾನೆ.
ನಾನು ಸಾಕಷ್ಟು ಬಾರಿ ಪ್ರೇಯಸಿ ಜೊತೆ ಮಾತನಾಡಲು ಅವಕಾಶ ಕೊಡಿ ಎಂದು ಆಕೆಯ ತಂದೆ ಬಳಿ ಅಂಗಲಾಚಿದ್ದೇನೆ. ಆದರೆ ಅವರು ನನಗೆ ಆಕೆಯನ್ನು ನೋಡಲು ಅಥವಾ ಆಕೆಯೊಂದಿಗೆ ಮತನಾಡಲು ಅವಕಾಶ ನೀಡಿಲ್ಲ. ಒಂದು ವೇಳೆ ನನ್ನ ಪ್ರೀತಿ ನನಗೆ ಸಿಗದಿದ್ದರೂ ನಾನು ಧರ್ಮವನ್ನು ಬಿಡಲ್ಲ. ನನ್ನ ಜೀವ ಇರುವವರೆಗೂ ಮುಸ್ಲಿಂ ಧರ್ಮವನ್ನೇ ಪಾಲಿಸುತ್ತೇನೆ ಎಂದು ತಿಳಿಸಿದ್ದಾನೆ.
ಪ್ರೇಯಸಿಯನ್ನು ತನ್ನಿಂದ ದೂರ ಮಾಡಿ, ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮೊಹ್ಮದ್ ಮಾನವ ಹಕ್ಕು ಆಯೋಗಕ್ಕೆ ಯುವತಿಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾನೆ. ನನಗೆ ಪ್ರೀತಿ ಮಾಡುವ ಹಕ್ಕಿದೆ. ಪ್ರೀತಿಸಿದವಳನ್ನು ಮದುವೆ ಆಗುವ ಹಕ್ಕು ಕೂಡ ಇದೆ ಎಂದು ಮೊಹ್ಮದ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ.
ನವದೆಹಲಿ: ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ವಿಚಾರ ರಾಷ್ಟ್ರ ವ್ಯಾಪಿ ಚರ್ಚೆಯಾಗುತ್ತಿದೆ. ಎನ್‍ಕೌಂಟರ್ ಮಾಡಿದ್ದ ಪೊಲೀಸರ ನಡೆಯನ್ನು ಇಡೀ ದೇಶವೇ ಸಮರ್ಥಿಸಿಕೊಂಡರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ತೆಲಂಗಾಣದ ಎನ್‍ಕೌಂಟರ್ ಸಂಬಂಧ ವಕೀಲರು ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ವಕೀಲರಾದ ಜಿ.ಎಸ್.ಮಣಿ ಮತ್ತು ಪ್ರದೀಪ್ ಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 51 ಪುಟಗಳ ಅರ್ಜಿ ಸಲ್ಲಿಸಿರುವ ಇಬ್ಬರು ವಕೀಲರು ತೆಲಂಗಾಣದಲ್ಲಿ ನಡೆದ ಎನ್‍ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ 2014 ರ ಸುಪ್ರೀಂಕೋರ್ಟ್ ನಿಯಮಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.
2014 ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಿನ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಆರ್.ಎಂ.ಲೋಧ ಅವರು 16 ಅಂಶಗಳ ಮಾರ್ಗದರ್ಶನಗಳನ್ನು ರೂಪಿಸಿದ್ದು, ಈ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಜಿ.ಎಸ್.ಮಣಿ ಹೇಳಿದ್ದಾರೆ.
ಎನ್‍ಕೌಂಟರ್ ಮಾಡಬೇಕಾದ ವೇಳೆ ಮತ್ತು ಎನ್‍ಕೌಂಟರ್ ಆದ ಬಳಿಕ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು? ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗದರ್ಶನಗಳನ್ನು ಇಲ್ಲಿ ನೀಡಲಾಗಿದೆ.
1. ಆರೋಪಿಗಳ ಚಲನವಲನ ಮತ್ತು ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಅದನ್ನು ಬರವಣಿಗೆ ಅಥವಾ ಎಲೆಕ್ಟ್ರಾನಿಕ್ ಫಾರ್ಮ್ ನಲ್ಲಿ ದಾಖಲು ಮಾಡಬೇಕು.
2. ಈ ದಾಖಲೆಯಲ್ಲಿ ಅನುಮಾನ ಇರುವ ಆರೋಪಿ ಮತ್ತು ಆತನ ಸ್ಥಳವನ್ನು ಬಹಿರಂಗ ಪಡಿಸುವ ಅಗತ್ಯ ಇಲ್ಲ.
3. ಎನ್‍ಕೌಂಟರ್ ಪ್ರಕರಣಗಳಲ್ಲಿ ಪೊಲೀಸ್ ಗನ್ ಬಳಕೆಯಾಗಿದ್ದಾರೆ ಎಫ್‍ಐಆರ್ ದಾಖಲು ಆಗಲೇಬೇಕು.
4. ಸಿಐಡಿ ಅಥವಾ ಮತ್ತೊಂದು ಪೊಲಿಸ್ ಠಾಣೆಯ ಪೊಲೀಸರಿಂದ ಸ್ವತಂತ್ರ ತನಿಖೆ ಆಗಬೇಕು. ಈ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿ ಮಾಡಬೇಕು
ಎ. ಎನ್‍ಕೌಂಟರ್ ನಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗಿಂತ ಮೇಲ್ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಬೇಕು.
ಬಿ. ಎನ್‍ಕೌಂಟರ್ ಮೃತ ಆರೋಪಿಯ ಕಲರ್ ಫೋಟೋ ತೆಗೆಯಬೇಕು.
ಸಿ. ಸ್ಥಳದಲ್ಲಿನ ಪ್ರಮುಖ ದಾಖಲೆಗಳು ಮತ್ತು ಸಾವಿನ ಸಾಕ್ಷಿಗಳನ್ನು ಸಂಗ್ರಹಿಸಬೇಕು (ಬಟ್ಟೆ, ಕೂದಲು, ರಕ್ತ, ಇತ್ಯಾದಿ ಪೂರಕ ಅಂಶಗಳು)
ಡಿ. ಎನ್‍ಕೌಂಟರ್ ನಡೆದ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಮತ್ತು ಸಾರ್ವಜನಿಕರು ಇದ್ದಲ್ಲಿ ಅವರ ಹೆಸರು, ವಿಳಾಸ, ಮೊಬೈಲ್ ನಂಬರ್ ದಾಖಲಿಸಿಕೊಳ್ಳಬೇಕು.
ಇ. ಎನ್‍ಕೌಂಟರ್‍ಗೆ ಕಾರಣ, ಎನ್‍ಕೌಂಟರ್ ಆದ ರೀತಿ, ಸ್ಥಳ ಹಾಗೂ ಸತ್ತ ಸಮಯ ಎಲ್ಲವನ್ನೂ ದಾಖಲಿಸಬೇಕು. ಸನ್ನಿವೇಶವನ್ನು ಸೃಷ್ಟಿಸಿಡಬೇಕು.
ಎಫ್. ಮೃತ ಆರೋಪಿಯೂ ಸೇರಿ ಎನ್‍ಕೌಂಟರ್ ವೇಳೆ ಇದ್ದ ಪೊಲೀಸ್ ಸಿಬ್ಬಂದಿಯ ಬೆರಳಚ್ಚು ಪ್ರತಿ ಪಡೆದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತನಿಖೆ ಮಾಡಿಸಬೇಕು.
ಜಿ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ಮಾಡಬೇಕು. ಅದರಲ್ಲಿ ಒಬ್ಬರು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಅಧಿಕಾರಿ ಆಗಿರಬೇಕು. ಮರಣೋತ್ತರ ಪರೀಕ್ಷೆ ವಿಡಿಯೋ ಚಿತ್ರೀಕರಣ ಆಗಬೇಕು ಅದನ್ನು ಸಂರಕ್ಷಿಸಿಡಬೇಕು.
ಎಚ್. ಎನ್‍ಕೌಂಟರ್ ನಲ್ಲಿ ಬಳಕೆಯಾದ ಶಸ್ತ್ರಾಸ್ತ್ರ(ಗನ್ ಬಂದೂಕು, ಪಿಸ್ತೂಲ್, ಗುಂಡು, ಬುಲೆಟ್ ಕಾರ್ಟಿಜ್ಡ್) ಸಂರಕ್ಷಣೆ ಮಾಡಬೇಕು.
5. ಸಹಜವಾಗಿ ಎನ್‍ಕೌಂಟರ್ ನಡೆದಿದೆಯಾ, ಆಕಸ್ಮಿಕವಾಗಿ ಘಟನೆ ನಡೆದಿದ್ದ ಅಥವಾ ಆರೋಪಿ ಪೊಲೀಸ್ ಗನ್ ನಿಂದ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಕೊಲೆಯೋ ಎನ್ನುವುದನ್ನು ಪತ್ತೆ ಹಚ್ಚಬೇಕು.
6. ಮ್ಯಾಜಿಸ್ಟ್ರೇಟ್ ತನಿಖೆ ಆಗಬೇಕು.
7. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ತಕ್ಷಣ ಮಾಹಿತಿ ನೀಡಬೇಕು.
8. ಎನ್ ಕೌಂಟರ್ ಬಗ್ಗೆ ಅನುಮಾನ ಇದ್ದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶ ಮಾಡಬಹುದು.
9. ಎನ್‍ಕೌಂಟರ್ ಆದ ಮೇಲೆ ಆರೋಪಿ ಗಾಯಾಳು ಆದಲ್ಲಿ ಅವನಿಗೆ ವೈದ್ಯಕೀಯ ನೆರವು ನೀಡಬೇಕು ಮತ್ತು ಅವರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಅಥವಾ ಹಿರಿಯ ವೈದ್ಯಾಧಿಕಾರಿ ದಾಖಲಿಸಿಕೊಳ್ಳಬೇಕು.
10. ವಿಳಂಬ ಮಾಡದೆ ಎಫ್‍ಐಆರ್ ದಾಖಲು ಮಾಡಿಕೊಳ್ಳಬೇಕು (ಎಫ್‍ಐಆರ್ ಡೈರಿ ಎಂಟ್ರಿ ಪಂಚನಾಮ, ಸ್ಕೆಚ್ ಗಳನ್ನು ತಕ್ಷಣ ಸಂಬಂಧಿಸಿದ ಕೋರ್ಟ್ ನೀಡಬೇಕು)
11. ವಿಚಾರಣೆ ಅಂತ್ಯದ ಬಳಿಕ ವರದಿಯನ್ನು ಕೋರ್ಟಿಗೆ ನೀಡಬೇಕು.
12. ಮೃತ ಆರೋಪಿಯ ಹತ್ತಿರದ ಸಂಬಂಧಿಗಳಿಗೆ ತಕ್ಷಣ ಮಾಹಿತಿ ನೀಡಬೇಕು.
13. ವರ್ಷಕ್ಕೆ ಎರಡು ಬಾರಿ ಎನ್‍ಕೌಂಟರ್ ಆಗಿರುವ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಡಿಜಿಪಿ ನೀಡಬೇಕು.
14. ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಬಲಿಯಾದ ಕುಟುಂಬಕ್ಕೆ ಪರಿಹಾರ ನೀಡಬೇಕು.
15. ಪೊಲೀಸ್ ಅಧಿಕಾರಿಗಳು ತನಿಖೆ ವೇಳೆ ತಮ್ಮ ಆಯುಧವನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಬೇಕು, ತನಿಖಾಧಿಕಾರಿಗಳು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಎನ್‍ಕೌಂಟರ್ ಆಗಿರುವ ಘಟನೆ ಬಗ್ಗೆ ಪೊಲೀಸ್ ಕುಟುಂಬಕ್ಕೆ ಮಾಹಿತಿ ನೀಡಬೇಕು ಅಗತ್ಯ ಇದ್ದಲ್ಲಿ ಕಾನೂನು ನೇರವು ನೀಡಬೇಕು.
ಎ. ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಗೆ ತಕ್ಷಣಕ್ಕೆ ಯಾವುದೇ ಪ್ರಶಸ್ತಿ ನೀಡಬಾರದು.
ಬಿ. ಬಡ್ತಿ ಅಥವಾ ಶೌರ್ಯ ನೀಡುವಂತಿಲ್ಲ, ತಪ್ಪಿಲ್ಲ ಎನ್ನುವುದು ಸಾಬೀತಾದ ಬಳಿಕ ಮಾತ್ರ ಪ್ರಶಸ್ತಿಗೆ ನೀಡಬೇಕು.
16. ಎನ್‍ಕೌಂಟರ್ ಗೆ ಬಲಿಯಾದ ಕುಟುಂಬಕ್ಕೆ ತನಿಖೆ ಸರಿಯಾಗಿ ನಡೆದಿಲ್ಲ ಎನ್ನುವ ಅನುಮಾನ ಇದ್ದಲ್ಲಿ ಕೋರ್ಟ್ ಮೊರೆ ಹೋಗಬಹುದು.
ಬೆಂಗಳೂರು: ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಬಿಎಸ್‍ವೈ ವಿರುದ್ಧ ಮಾಜಿ ಆರ್‍ಎಸ್‍ಎಸ್ ಪ್ರಚಾರಕರೊಬ್ಬರು ತಿರುಗಿ ಬಿದ್ದಿದ್ದಾರೆ.
ಯಡಿಯೂರಪ್ಪ ಹಾಗೂ ಸಂಸದ ನಳೀನ್ ಕುಮಾರ್ ಕಟಿಲು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆರ್‍ಎಸ್‍ಎಸ್ ಮಾಜಿ ಪ್ರಚಾರಕ ಎನ್ ಹನುಮೇಗೌಡ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ದೂರು ನೀಡಿದ್ದು ಯಾಕೆ?: ಇತ್ತೀಚೆಗೆ ಬಂಟ್ವಾಳದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು `ಕಲ್ಲಡ್ಕ ಪ್ರಭಾಕರ್ ಭಟ್ ಮುಟ್ಟಿದ್ರೆ ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತೆ’ ಅನ್ನೋ ಹೇಳಿಕೆಯೊಂದನ್ನು ನೀಡಿದ್ದರು. ಇದೊಂದು ಪ್ರಚೋದನಕಾರಿ ಹೇಳಿಕೆಯಾಗಿದ್ದು, ಈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸರಿಗೆ ಹನುಮೇಗೌಡ ದೂರು ನೀಡಿದ್ದರು.
ಹನುಮೇಗೌಡ ಅವರು ಪೋಲೀಸರಿಗೆ ಈ ದೂರನ್ನು ಕಳೆದ ಶನಿವಾರ ನೀಡಿದ್ದು, ಈವರೆಗೂ ಈ ಇಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಇದೀಗ ಅವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಬಿಎಸ್‍ವೈ ಹಾಗೂ ನಳೀನ್ ಕುಮಾರ್ ಕಟೀಲ್ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.