Tag: Huma Qureshi

  • ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ

    ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ

    ನವದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಬಾಲಿವುಡ್ ನಟಿ ಹುಮಾ ಖುರೇಷಿ (Huma Qureshi) ಅವರ ಸೋದರ ಸಂಬಂಧಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ದೆಹಲಿಯ (Delhi) ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದೆ.

    ಆಸಿಫ್ ಖುರೇಷಿ ಕೊಲೆಯಾದ ವ್ಯಕ್ತಿ. ಉಜ್ವಲ್ (19) ಮತ್ತು ಗೌತಮ್ (18) ಕೊಲೆ ಮಾಡಿದ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಗುಂಡೇಟಿಗೆ ಬಲಿ – ವ್ಯಕ್ತಿ ಬಂಧನ

    ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ಆಸಿಫ್ ಖುರೇಷಿಯವರ ಮನೆಯ ಮುಂದೆ ಇಬ್ಬರು ಯುವಕರು ತಮ್ಮ ಸ್ಕೂಟರ್ ನಿಲ್ಲಿಸಿದ್ದರು. ಈ ವೇಳೆ ಆಸಿಫ್ ಖುರೇಷಿ ಅವರು ಮನೆಯ ಮುಖ್ಯ ದ್ವಾರದಿಂದ ದೂರ ನಿಲ್ಲಿಸುವಂತೆ ಹೇಳಿದಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಯುವಕರು ಆಸಿಫ್ ಖುರೇಷಿಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಾಪಾಸ್ ಹೋಗುವಂತೆ ಬೆದರಿಕೆ ಹಾಕಿದ್ದರು. ಬಳಿಕ ಇಬ್ಬರು ಸೇರಿ ಆಸಿಫ್ ಖುರೇಷಿಯವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಇದನ್ನೂ ಓದಿ: ನನಗೆ ಗನ್‌ಮ್ಯಾನ್‌ ಭದ್ರತೆ ನೀಡಿ: ಎಸ್‌ಐಟಿ ಮುಂದೆ ದೂರುದಾರನಿಂದ ಬೇಡಿಕೆ

    ಘಟನೆಯ ಕುರಿತು ಆಸಿಫ್ ಖುರೇಷಿ ಅವರ ಪತ್ನಿ ಮಾತನಾಡಿ, ಇಬ್ಬರು ಯುವಕರು ನಮ್ಮ ಮನೆಯ ಮುಂದೆ ಸ್ಕೂಟರ್ ನಿಲ್ಲಿಸಿದರು. ಈ ವೇಳೆ ನನ್ನ ಪತಿ ವಾಹನವನ್ನು ದೂರ ನಿಲ್ಲಿಸುವಂತೆ ಅವರ ಬಳಿ ಕೇಳಿಕೊಂಡರು. ಆದರೆ ಅವರು ನನ್ನ ಪತಿಯನ್ನು ನಿಂದಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಕಣ್ಣೀರು ಹಾಕಿದ್ದಾರೆ.

    ಹುಮಾ ಖುರೇಷಿ ಅವರ ತಂದೆ ಸಲೀಮ್ ಖುರೇಷಿ ಅವರು ಸೋದರಳಿಯನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

    ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

    ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಕಿಯಾರಾ ಬಳಿಕ ಮತ್ತೊಬ್ಬ ಬಾಲಿವುಡ್ ಬೆಡಗಿ ಹುಮಾ ಖುರೇಶಿ (Huma Qureshi) ‘ಟಾಕ್ಸಿಕ್’ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮುಂಬೈನಲ್ಲಿ ನಡೆಯುತ್ತಿದ್ದ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಹುಮಾ ಖುರೇಶಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ‘ಟಾಕ್ಸಿಕ್’ ಸಿನಿಮಾಗೆ ನಟಿ ಎಂಟ್ರಿ ಕೊಟ್ಟಿರುವ ಬಗ್ಗೆ ಚರ್ಚೆ ಶುರುವಾಗಿದೆ. ಸೆಟ್‌ಗೆ ಬರುತ್ತಿರುವ ನಟಿಯ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಚಿತ್ರತಂಡಕ್ಕೆ ನಟಿ ಸಾಥ್‌ ನೀಡುವ ಕುರಿತು ಚಿತ್ರತಂಡ ಕ್ಲ್ಯಾರಿಟಿ ನೀಡುತ್ತಾರಾ? ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಆ.8ರಂದು ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಸರಳವಾಗಿ ಜರುಗಿತ್ತು. ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಮುಂಬೈನಲ್ಲಿ ತಂಡ ಬೀಡು ಬಿಟ್ಟಿದೆ. ಯಶ್ ನಟನೆಯ ಈ ಚಿತ್ರವು ಡ್ರಗ್ಸ್ ಮಾಫಿಯಾ ಕುರಿತಾದ ಕಥೆ ಎನ್ನಲಾಗಿದೆ. ಇದನ್ನೂ ಓದಿ:BBK 11: ಮತ್ತೆ ವರಸೆ ಬದಲಿಸಿದ ರಜತ್‌- ಸುಸ್ತಾದ ಮನೆ ಮಂದಿ

    ಇನ್ನೂ ಈ ಚಿತ್ರವನ್ನು ಮಲಯಾಳಂ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕೆವಿಎನ್ ಸಂಸ್ಥೆ ಜೊತೆ ಯಶ್ ಕೂಡ ಜಂಟಿಯಾಗಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ.

  • ಯಶ್‌ ನಟನೆಯ ‘ಟಾಕ್ಸಿಸ್’ ಸಿನಿಮಾದಲ್ಲಿ ಹುಮಾ ಖುರೇಶಿ

    ಯಶ್‌ ನಟನೆಯ ‘ಟಾಕ್ಸಿಸ್’ ಸಿನಿಮಾದಲ್ಲಿ ಹುಮಾ ಖುರೇಶಿ

    ಕೆಜಿಎಫ್, ಕೆಜಿಎಫ್ 2 (KGF 2)  ಸಿನಿಮಾದ ಸಕ್ಸಸ್ ನಂತರ ಯಶ್ ‘ಟಾಕ್ಸಿಕ್’ (Toxic Film) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲು ಹುಮಾ ಖುರೇಶಿ (Huma qureshi) ಎಂಟ್ರಿ ಕೊಟ್ಟಿದ್ದಾರೆ. ಮುಖ್ಯ ಪಾತ್ರಕ್ಕೆ ಹುಮಾ ನಟಿಸುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ‘ಟಾಕ್ಸಿಕ್’ ಸಿನಿಮಾದ ಅಡ್ಡಾದಿಂದ ಹಲವು ಹೆಸರುಗಳು ಕೇಳಿ ಬರುತ್ತಿವೆ. ಕರೀನಾ ಕಪೂರ್, ನಯನತಾರಾ, ಕಿಯಾರಾ ಸೇರಿದಂತೆ ಹಲವು ನಟಿಮಣಿಯರ ಹೆಸರು ಸದ್ದು ಮಾಡುತ್ತಿದೆ. ಹುಮಾ ಖುರೇಶಿ ನಟಿಸಲಿರುವ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ:ಉಪೇಂದ್ರ ನಟನೆಯ ‘ಎ’ ಸಿನಿಮಾ ರೀ ರಿಲೀಸ್

    ಹುಮಾ ಖುರೇಶಿ ಅವರು ಯಶ್ ಸಿನಿಮಾದಲ್ಲಿ ನಟಿಸುತ್ತಾರಾ? ಅಥವಾ ಇದು ಹರಿದಾಡುತ್ತಿರುವ ಸುದ್ದಿನಾ ಎಂದು ಕಾದುನೋಡಬೇಕಿದೆ. ಹುಮಾ ಖುರೇಶಿ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ರೆ ಇದು ಅವರು ನಟಿಸುವ ಕನ್ನಡದ ಮೊದಲ ಚಿತ್ರವಾಗಲಿದೆ.

    ಅಂದಹಾಗೆ, ಯಶ್ ಮೊದಲ ಬಾರಿಗೆ ‘ಟಾಕ್ಸಿಕ್’ ಸಿನಿಮಾದ ಮೂಲಕ ನಿರ್ಮಾಪಕನಾಗಿ ಎಂಟ್ರಿ ಕೊಡ್ತಿದ್ದಾರೆ. ಕೆವಿಎನ್ ನಿರ್ಮಾಣ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.

  • ಬಾಲಿವುಡ್ ನಟಿ ಹುಮಾ ಖುರೇಶಿಗೆ ಬೆಂಗಳೂರಿನ ಕೋರಮಂಗಲದ ನಂಟು

    ಬಾಲಿವುಡ್ ನಟಿ ಹುಮಾ ಖುರೇಶಿಗೆ ಬೆಂಗಳೂರಿನ ಕೋರಮಂಗಲದ ನಂಟು

    ನಗೆ ಬೆಂಗಳೂರು ತೀರಾ ಪರಿಚಿತ. ಅದರಲ್ಲೂ ಕೋರಮಂಗಲದ ಅನೇಕ ಬೀದಿಗಳನ್ನು ನಾನು ಸುತ್ತಾಡಿದ್ದೇನೆ. ಕೋರಮಂಗಲದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ್ದೇನೆ” ಎನ್ನುವ ಮೂಲಕ ಕರ್ನಾಟಕದ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ ಬಾಲಿವುಡ್ ನಟಿ ಹುಮಾ ಖುರೇಶಿ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಸದ್ಯ ಅವರು ಅಜಿತ್ ನಟನೆಯ ತಮಿಳಿನ ‘ವಲಿಮೈ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹುಮಾ, ತಮ್ಮ ಬೆಂಗಳೂರಿನ ನಂಟಿನ ಬಗ್ಗೆ ಸಾಕಷ್ಟು ಮಾತನಾಡಿದರು. ಕೋರಮಂಗಲದಲ್ಲಿ ಹುಮಾ ಸಂಬಂಧಿಕರ ವಾಸವಿದ್ದರಂತೆ. ಹಾಗಾಗಿ ಆಗಾಗ್ಗೆ ಅವರು ಬೆಂಗಳೂರಿಗೆ ಬರುತ್ತಿದ್ದರಂತೆ. ಒಂದು ರೀತಿಯಲ್ಲಿ ಕೋರಮಂಗಲ ಅವರ ನೆಚ್ಚಿನ ತಾಣವಾಗಿ ಉಳಿದುಬಿಡುವಷ್ಟು ಪರಿಚಿತವಂತೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

    ಹುಮಾ ಖರೇಶಿಯ ಕನ್ನಡದ ನಂಟಿನ ಬಗ್ಗೆ ಮತ್ತೊಂದು ಸಂಗತಿಯಂದರೆ, ಕನ್ನಡಿಗ, ತಮಿಳಿನ ಖ್ಯಾತ ನಟ ರಜನಿಕಾಂತ್ ನಟನೆಯ ‘ಕಾಲಾ’ ಚಿತ್ರದಲ್ಲೂ ಹುಮಾ ನಟಿಸಿದ್ದರು.

  • ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ: ಅಕ್ಷಯ್ ಕುಮಾರ್

    ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ: ಅಕ್ಷಯ್ ಕುಮಾರ್

    ಮುಂಬೈ: ನಾನು ಪ್ರತಿ ನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂದು ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಹೇಳಿದ್ದಾರೆ.

    ವೈಲ್ಡ್ ಮ್ಯಾನ್ ಎಂದೇ ಖ್ಯಾತರಾಗಿರುವ ಬಿಯರ್ ಗ್ರಿಲ್ಸ್ ಹಾಗೂ ಹುಮಾ ಖುರೇಶಿ ನಡೆಸಿದ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಭಾಗವಹಿಸಿದ ವೇಳೆ ಸ್ವತಃ ಅಕ್ಷಯ್ ಕುಮಾರ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಆಯುರ್ವೇದ ಕಾರಣಗಳಿಂದಾಗಿ ಕಾಡಿನಲ್ಲಿ ಸ್ಟಂಟ್ ಮಾಡುವುದು ನನಗೆ ಸಮಸ್ಯೆ ಆಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ಪ್ರತಿ ನಿತ್ಯ ಗೋಮೂತ್ರವನ್ನು ಸೇವಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.

    ಅಕ್ಷಯ್ ಕುಮಾರ್ ಈ ವಿಚಾರವನ್ನು ರಿವೀಲ್ ಮಾಡುತ್ತಿದ್ದಂತೆ ಲೈವ್‍ನಲ್ಲಿ ಭಾಗವಹಿಸಿದ್ದವರು ಆಶ್ಚರ್ಯಚಕಿತರಾಗಿದ್ದಾರೆ. ಅಕ್ಷಯ್ ಕುಮಾರ್ ಅವರು ಮಾರ್ಷಲ್ ಆಟ್ರ್ಸ್ ಎಕ್ಸ್ ಪರ್ಟ್ ಎಂದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ ಅವರು ಬೆಳಗ್ಗೆ ಬೇಗ ಏಳುತ್ತಾರೆ ಎಂಬುದು ಸಹ ತಿಳಿದಿದೆ. ಆದರೆ ಅವರು ಗೋಮೂತ್ರ ಕುಡಿಯುವ ಕುರಿತು ಈವರೆಗೆ ರಿವೀಲ್ ಮಾಡಿರಲಿಲ್ಲ. ಇದೀಗ ಈ ಕುರಿತು ಸ್ಪಷ್ಟಪಡಿಸಿದ್ದಾರೆ.

    ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಬಿಯರ್ ಗ್ರಿಲ್ಸ್ ಜೊತೆಗೆ ‘ಇಂಟು ದಿ ವೈಲ್ಡ್’ ಶೋ ಭಾಗವಾಗಿ ವಿವಿಧ ರೀತಿಯ ಸ್ಟಂಟ್‍ಗಳನ್ನು ಮಾಡಿದ್ದರು. ಮರ ಹತ್ತುವುದು, ರೋಪ್ ಲ್ಯಾಡರ್ ಹಾಗೂ ಹೊಳೆಯನ್ನು ದಾಟುವುದು ಸೇರಿದಂತೆ ವಿವಿಧ ರೀತಿಯ ಸ್ಟಂಟ್‍ಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅಲ್ಲದೆ ಶೋನಲ್ಲಿ ಅಕ್ಷಯ್ ಕುಮಾರ್ ಅವರು ಎಲಿಫ್ಯಾಂಟ್ ಪೂಪ್ ಟೀಯನ್ನು ಸಹ ಕುಡಿದಿದ್ದಾರೆ. ಈ ಕುರಿತು ಹುಮಾ ಖುರೇಷಿ ಸೇರಿದಂತೆ ಹಲವರು ಅಕ್ಷಯ್ ಕುಮಾರ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    https://www.instagram.com/tv/CE80urupejq/?utm_source=ig_embed&utm_campaign=loading

    ಎಲಿಫ್ಯಾಂಟ್ ಪೂಪ್ ಟೀ ಕುಡಿಯಲು ನೀವು ಅಕ್ಷಯ್ ಕುಮಾರ್ ಅವರನ್ನು ಹೇಗೆ ಮನವೊಲಿಸಿದರಿ ಎಂದು ಹುಮಾ ಅವರು ಬಿಯರ್ ಗ್ರಿಲ್ಸ್ ಅವರನ್ನು ಕೇಳುತ್ತಾರೆ. ಇದಕ್ಕೆ ಗ್ರಿಲ್ಸ್ ಉತ್ತರಿಸಿ, ನಾವು ಅದನ್ನು ಹೇಗೆ ಮುಗಿಸಿದೆವೋ ತಿಳಿಯಲೇ ಇಲ್ಲ. ಆದರೆ ಅದು ತುಂಬಾ ಕೆಟ್ಟದ್ದೇನು ಅಲ್ಲ ಅಲ್ಲವೇ ಎಂದು ಅಕ್ಕಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಕ್ಷಯ್ ಕುಮಾರ್, ನಾನು ಚಿಂತಿಸಲಿಲ್ಲ. ಬದಲಿಗೆ ಚಿಂತೆ ಮಾಡಲು ತುಂಬಾ ಉತ್ಸುಕನಾಗಿದ್ದೆ. ಆಯುರ್ವೇದ ಕಾರಣಗಳಿಂದಾಗಿ ಇದು ಸಾಧ್ಯವಾಯಿತು ಎಂದರು. ಇದೇ ವೇಳೆ ನಾನು ಪ್ರತಿನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂಬ ವಿಚಾರವನ್ನು ಸಹ ರಿವೀಲ್ ಮಾಡಿದರು.