ತುಮಕೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ (Student) ಶವವಾಗಿ ಪತ್ತೆಯಾದ ಘಟನೆ ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakana Halli) ತಾಲೂಕಿನ ಹುಳಿಯಾರಿನಲ್ಲಿ (Huliyaru) ನಡೆದಿದೆ.
ಹೇಮಂತ್ ಕುಮಾರ್ (16) ಮೃತ ದುರ್ದೈವಿ. ಈತ ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿಯಾಗಿದ್ದು, ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯಲ್ಲಿ ಕ್ರೀಡಾಕೂಟವಿದೆ (Sports Event) ಎಂದು ಮೂರು ದಿನದ ಹಿಂದೆ ಮನೆಯಿಂದ ಹೋಗಿದ್ದ ಹೇಮಂತ್ ಕುಮಾರ್ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ಪೋಷಕರು ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಇದನ್ನೂ ಓದಿ: ಗೃಹಪ್ರವೇಶದಲ್ಲಿ ಊಟ ಮಾಡಿದ 30 ಜನ ಅಸ್ವಸ್ಥ
ಶನಿವಾರ ಹೇಮಂತ್ ಕುಮಾರ್ ಶವವಾಗಿ ಪತ್ತೆಯಾಗಿದ್ದು, ಹುಳಿಯಾರು ಕೆರೆ ಅಂಗಳದಲ್ಲಿ ಆತನ ಶವ ಪತ್ತೆಯಾಗಿದೆ. ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತಾಯಿಯ ಸಮಾಧಿ ಪಕ್ಕದಲ್ಲೇ ಯುವಕ ನೇಣಿಗೆ ಶರಣು
ದಾವಣಗೆರೆ: ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮುಂದೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕಣ್ಣೀರು ಹಾಕಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿಯ ಕಾಗಿನೆಲೆ ಕನಕ ಗುರು ಪೀಠದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಸಭೆ ನಡೆಸಲಾಯಿತು. ಸಭೆ ನಡೆಯುತ್ತಿರುವ ವೇಳೆಯೂ ಸಚಿವರು ಕಣ್ಣೀರು ಹಾಕಿದ್ದು, ನಂತರ ನಡೆದ ಸುದ್ದಿಗೋಷ್ಠಿ ಸಂದರ್ಭದಲ್ಲಿಯೂ ಕಣ್ಣೀರು ಹಾಕಿದ್ದಾರೆ.
ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, ನಮಗೂ ಸಾಕಷ್ಟು ಕೋಪಗಳಿದ್ದವು. ಆದರೆ ಸಚಿವರ ಕಣ್ಣಂಚಿನಲ್ಲಿ ಕಣ್ಣೀರು ಇರುವುದನ್ನು ನೋಡಿದೆ. ಮಾತುಕಥೆ ನಡೆಸುತ್ತಿರುವ ವೇಳೆ ಸಚಿವರು ಪೊಲೀಸರಿಗೂ ನಾಮಫಲಕ ಹಾಕಲು ಯಾವುದೇ ರೀತಿ ಅಡ್ಡಿ ಮಾಡಬೇಡಿ ಎಂದು ಸೂಚಿಸಿದರು ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ನಾನು ಯಾವತ್ತೂ ವೃತ್ತಕ್ಕೆ ಹೆಸರು ಇಡುವುದನ್ನು ವಿರೋಧ ಮಾಡಿಲ್ಲ. ಸ್ವಾಮಿಗಳಿಗೆ ಒಂದು ಕೆಟ್ಟ ಪದವನ್ನೂ ಬಳಸಿಲ್ಲ. ಸಭೆಯಲ್ಲಿ ಗೊಂದಲವಾದಾಗ ಏರು ಧ್ವನಿಯಲ್ಲಿ ಮಾತನಾಡಿ, ನನಗೂ ಮಾತನಾಡಲು ಬಿಡಿ ಎಂದು ಹೇಳಿದೆ ಅಷ್ಟೇ. ಯಾವುದೇ ಸಮುದಾಯಕ್ಕೆ ನಾನು ನೋವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪರ್ಕದ ಕೊರತೆಯಿಂದ ಈ ರೀತಿಯಾಗಿದೆ. ರಾಜ್ಯದಲ್ಲಿ ಈ ರೀತಿ ನಡೆಯಬಾರದಿತ್ತು. ನಾನು ಬರುವಾಗ ಕನಕ ವೃತ್ತದ ಹೆಸರಿನ ಬೋರ್ಡ್ ಹಾಕಲು ಅಡಚಣೆ ಮಾಡಬೇಡಿ ಎಂದು ಎಸ್‍ಪಿಗೆ ಹೇಳಿ ಬಂದಿದ್ದೇನೆ. ಆ ವೃತ್ತಕ್ಕೆ ಕನಕ ದಾಸರ ಹೆಸರು ಇಟ್ಟಿದ್ದು ನನಗೆ ಗೊತ್ತಿರಲಿಲ್ಲ. ಅದಕ್ಕೆ ಶ್ರೀಗಳನ್ನು ಕೇಳಿದೆಯಷ್ಟೆ, ಅದೇ ಈ ಗೊಂದಲಕ್ಕೆ ಕಾರಣವಾಗಿದೆ ಎಂದರು.
ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹೊಸದುರ್ಗದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹಾಜರಿದ್ದರು. ಕೇವಲ ನಾಲ್ವರ ನಡುವೆ ಇಂದು ಸಭೆ ನಡೆದಿದೆ.
ಏನಿದು ಗೊಂದಲ?
ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಶಾಂತಿಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಇದರಲ್ಲಿ ಕುರುಬ ಸಮುದಾಯದ ಮುಖಂಡರು ಸಹ ಭಾಗವಹಿಸಿದ್ದರು.
15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತದೆ. ಈಗ ಆ ಸ್ಥಳಕ್ಕೆ ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯದವರು ಮುಂದಾಗಿದ್ದಾರೆ. ಇದಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ ಎಂದು ಸಭೆಯಲ್ಲಿ ಸ್ವಾಮೀಜಿ ತಿಳಿಸಿದ್ದರು. ವೃತ್ತಕ್ಕೆ ಕನಕದಾಸರ ಹೆಸರಿಡಲೇಬೇಕು, ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದ್ದರು.
ಇದಕ್ಕೆ ಪ್ರತಿಯಾಗಿ ಮಾಧುಸ್ವಾಮಿಯವರು, ನೀವು ಧಮ್ಕಿ ಹಾಕುತ್ತೀರ, ನಾನೂ ಹೋರಾಟಗಾರನೇ ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವುದೇ ನನ್ನ ಹೋರಾಟ ಎಂದು ಸಿಡಿಮಿಡಿಗೊಂಡಿದ್ದರು. ಹೀಗಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಸಭೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಮಂಡ್ಯ: ಚಿಕ್ಕನಾಯಕನಹಳ್ಳಿಯಲ್ಲಿನ ವೃತ್ತಕ್ಕೆ ಹೆಸರಿಡುವ ಕುರಿತ ವಿವಾದ ತಾರಕಕ್ಕೇರಿದ್ದು, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲ್ಲ, ಬದಲಿಗೆ ಕನಕ ವೃತ್ತ ಎಂದು ಹೆಸರಿಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಹುಳಿಯಾರು ಕನಕ ವೃತ್ತ ತೆರವುಗೊಳಿಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ನಾನು ಬೆಳಗಾವಿಯಲ್ಲಿದ್ದಾಗ ಕನಕ ವೃತ್ತ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಎಂಬ ಹೆಸರಿನ ನಾಮಫಲಕಗಳನ್ನು ಹಾಕಲು ಎರಡು ಗುಂಪುಗಳು ಮುಂದಾಗಿದ್ದವು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಶಾಂತಿಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಮುಂದಾಗಿದ್ದೆ. ಸ್ವಾಮೀಜಿಯವರಿಗಾಗಿ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದೆ. ಬಳಿಕ ನಡೆದ ಸಭೆಯಲ್ಲಿ ಕನಕ ವೃತ್ತ ಹೆಸರಿಡಲು ಎದುರಾಗಿರುವ ಕಾನೂನು ತೊಡಕುಗಳನ್ನ ಗಮನಕ್ಕೆ ತಂದಿದ್ದೆ. ನಂತರ ಕನಕ ವೃತ್ತ ಎಂದೆ ಹೆಸರಿಡೋಣ ಎಂದು ಸ್ವಾಮೀಜಿಗೆ ತಿಳಿಸಿದೆ.
ಹುಳಿಯಾರು ಈ ಹಿಂದೆ ಗ್ರಾಮ ಪಂಚಾಯಿತಿಯಾಗಿತ್ತು. ಈಗ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜೆಗೇರಿದೆ. ಪಟ್ಟಣ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ಕನಕ ವೃತ್ತ ಎಂದು ಹೆಸರಿಡೋಣ ಅಂತ ಹೇಳಿದೆ. ಈ ವೇಳೆ ಕಾಗಿನೆಲೆ ಶ್ರೀಗಳು ಈಗಲೇ ಆಗಬೇಕೆಂದು ಪಟ್ಟು ಹಿಡಿದರು. ಆ ವೇಳೆ ನಾನು ಶ್ರೀಗಳ ಮೇಲೆ ರೇಗಿದ್ದು ನಿಜ. ಇದಾದ ಬಳಿಕ ಯಾರ್ಯಾರೋ ದಿನ ನಿತ್ಯ ಕರೆ ಮಾಡಿ ನೀವು ಕುರುಬರ ವಿರೋಧಿ ಎಂದು ಕೇಳುತ್ತಿದ್ದರು. ನಾನು ಕುರುಬ ಸಮುದಾಯದ ಬೆಂಬಲದಿಂದಲೇ ಚಿಕ್ಕನಾಯಕನಹಳ್ಳಿಯಲ್ಲಿ ಗೆದ್ದು ಬಂದಿದ್ದೇನೆ. ನನ್ನ ಜೊತೆ ಆ ಸಮುದಾಯದ ಮುಖಂಡರು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ನಾನು ಅಧಿಕಾರದಲ್ಲಿ ಇರುವವರೆಗೂ ಆ ವೃತ್ತಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಬಿಡಲ್ಲ. ಶ್ರೀಗಳ ಹೆಸರಿಟ್ಟು ನಾನು ಜಾತಿವಾದಿ ಆಗಲು ತಯಾರಿಲ್ಲ. ದಾಸ ಶ್ರೇಷ್ಠ ಕನಕ ವೃತ್ತ ಎಂದೇ ನಾಮಕರಣ ಮಾಡುತ್ತೇನೆ ಎಂದು ಹೇಳಿದ್ದೇನೆ. ಹೀಗಿರುವಾಗ ಇವತ್ತು ಒಬ್ಬ ಕರೆ ಮಾಡಿ ನೀವು ಒಂದು ಸಮಾಜಕ್ಕೆ ಮಾತ್ರ ಮಂತ್ರೀನ ಎಂದು ಕೇಳಿದ, ಹೂ ಅಂದೆ. ಸಿಟ್ಟಾಗಿ ಬೈದು ಫೋನ್ ಕಟ್ ಮಾಡಿದೆ. ಆ ಆಡಿಯೋವನ್ನು ವಾಟ್ಸಪ್ ಮೂಲಕ ವೈರಲ್ ಮಾಡಿ ವಿವಾದ ಸೃಷ್ಠಿಸುತ್ತಿದ್ದಾರೆ. ಉಪ ಚುನಾವಣೆ ಗುರಿಯಾಗಿಟ್ಟುಕೊಂಡೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.