Tag: Hulivesha

  • ಹುಲಿವೇಷದ ಹಿಂದಿದೆ ವಿಶೇಷ ಧಾರ್ಮಿಕ ನಂಬಿಕೆ!

    ಹುಲಿವೇಷದ ಹಿಂದಿದೆ ವಿಶೇಷ ಧಾರ್ಮಿಕ ನಂಬಿಕೆ!

    ಗಂತೂ ಎಲ್ಲರ ಬಾಯಲ್ಲೂ ಒಂದೇ ಪದ.. ಅದೇನೆಂದರೆ ಮೈಸೂರು ದಸರಾ (Mysuru Dasara). ಆದರೆ ನಮ್ಮ ಕರಾವಳಿ ಭಾಗದ ಜನರಲ್ಲಿ ನವರಾತ್ರಿ (Navratri) ಅಂದರೆ ನೆನಪಾಗೋದೇ ಹುಲಿವೇಷ (Hulivesha). ಹೌದು, ನವರಾತ್ರಿಯಲ್ಲಿ ಮಂಗಳೂರು, ಉಡುಪಿ ಭಾಗದಲ್ಲಂತೂ ಠಾಸೆ, ಡೋಲುಗಳದ್ದೇ ಸದ್ದು. ಮತ್ತೊಂದೆಡೆ ಹುಲಿ ವೇಷಗಳದ್ದೇ ದರ್ಬಾರ್‌.

    ತುಳುನಾಡಿನ ಸಂಪ್ರದಾಯಗಳಲ್ಲಿ ಪಿಲಿ ವೇಷವೂ ಒಂದು. ಮಂಗಳೂರು ದಸರಾದಲ್ಲಿ (Mangaluru Dasara) ಈ ಹುಲಿಗಳ ನರ್ತನವೇ ಒಂದು ಆಕರ್ಷಣೆ. ಮೊದಲೆಲ್ಲ ಬರೀ ಕರಾವಳಿ ಭಾಗದ ಜನರಿಗೆ ಮಾತ್ರ ಇದರ ಬಗ್ಗೆ ಗೊತ್ತಿತ್ತು. ಆದರೆ ಈ ಹುಲಿವೇಷಗಳನ್ನು ಸಿನಿಮಾ, ರಿಯಾಲಿಟಿ ಶೋಗಳಿಂದ ದೇಶ ವಿದೇಶದ ಜನರಿಗೂ ಈ ಹುಲಿವೇಷ ಚಿರಪರಿಚಿತವಾಗಿದೆ. ಇಷ್ಟೆಲ್ಲ ಹೇಳಿದ ಮೇಲೆ ಈ ಹುಲಿ ಕುಣಿತ ಹೇಗೆ ಶುರು ಆಯ್ತು ಅಂತ ತಿಳ್ಕೋಬೇಕು ಅಂದ್ರೆ ಮುಂದೆ ಓದಿ..

    ಹುಲಿವೇಷ ಹುಟ್ಟಿಕೊಂಡಿದ್ದು ಹೇಗೆ?
    ಇಷ್ಟಾರ್ಥ ಸಿದ್ಧಿಗಾಗಿ ಜನರು ದೇವರಿಗೆ ನಾನಾ ರೀತಿಯ ಹರಕೆಯನ್ನು ಹೊರುತ್ತಾರೆ. ಇದೇ ರೀತಿ ಹರಕೆಯ ರೂಪವಾಗಿ ಹುಲಿವೇಷ ಧರಿಸುವ ಸಂಪ್ರದಾಯದ ಹಿಂದೆಯೂ ಐಹಿತ್ಯಗಳಿವೆ. ತಾಯಿಯೊಬ್ಬರು ತನ್ನ ಮಗು ಹುಷಾರಾಗಿ ನಡೆಯಲು ಆರಂಭಿಸಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುವುದಾಗಿ ಹರಕೆ ಹೊತ್ತಿದ್ದರು ನಂಬಿಕೆಯಿದೆ.

    ದೈಹಿಕ ಸಮಸ್ಯೆಯ ಕಾರಣ ಮಗು ಕಾಲುಗಳಿದ್ದರೂ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಚಿಂತೆಗೊಳಗಾದ ತಾಯಿ ಮಂಗಳಾದೇವಿ ದೇವಾಲಯಕ್ಕೆ ಬಂದು ಕೈ ಮುಗಿದು, ನನ್ನ ಮಗು ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ಇದೇ ದೇವಸ್ಥಾನದ ಅಂಗಳದಲ್ಲಿ ಮಗುವಿನಿಂದ ಪಿಲಿ ನಲಿಕೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.

    ಇದಾದ ಕೆಲ ದಿನಗಳ ಬಳಿಕ ಆ ಮಗು ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದನಂತೆ. ತಾಯಿ ತಾನು ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಹಬ್ಬದ ಸಮಯದಲ್ಲಿ ತಮ್ಮ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಹುಲಿವೇಷದ ಹರಕೆಯನ್ನು ಸಲ್ಲಿಸಿದರು. ಅಂದಿನಿಂದ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ಗೌರವ ಸಲ್ಲಿಸಲು ಯುವಕರಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಹುಲಿವೇಷವನ್ನು ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದೆ.

    ನವರಾತ್ರಿ ಬಂತೆಂದರೆ ಕರಾವಳಿಗರ ಕಣ್ಣಿಗಂತು ಹಬ್ಬವೇ ಸರಿ. ಎತ್ತ ನೋಡಿದರೂ ಹುಲಿಕುಣಿತ ಮೆರುಗು. ಈಗಂತೂ ಪಿಲಿಗೊಬ್ಬು, ಪಿಲಿಪಜ್ಜೆ, ಪಿಲಿನಲಿಕೆ ಎಂದು ನವರಾತ್ರಿಯಲ್ಲೇ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಡೆಯಿಂದ ಹುಲಿವೇಷದ ತಂಡಗಳು ಭಾಗವಹಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಇಲ್ಲಿ ಕಿನ್ನಿ ಪಿಲಿಯಿಂದ ಹಿಡಿದು ದೊಡ್ಡವರು ಸಹ ಈ ಹುಲಿವೇಷ ಧರಿಸಿ ನರ್ತಿಸುತ್ತಾರೆ.

  • ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಗ್ರ‍್ಯಾಂಡ್ ಫಿನಾಲೆಗೆ (Grand Finale) ದಿನಗಣನೆ ಶುರುವಾಗಿದೆ. ಕೊನೆಯ ವಾರವಾದ್ದರಿಂದ, ಎಲ್ಲಾ ಸ್ಪರ್ಧಿಗಳಿಗೂ ಬಿಗ್ ಬಾಸ್ ವಿಶೇಷ ಅವಕಾಶವನ್ನು ಕಲ್ಪಿಸಿದ್ದರು. ಸ್ಪರ್ಧಿಗಳ ಆಸೆಗಳ ಪೈಕಿ ಒಂದನ್ನು ಈಡೇರಿಸಲು ಬಿಗ್ ಬಾಸ್ ಭರವಸೆ ಕೊಟ್ಟಿದ್ದರು. ಇದೀಗ ಅದರಂತೆಯೇ ಸ್ಪರ್ಧಿಗಳ ಆಸೆಯನ್ನ ಬಿಗ್ ಬಾಸ್ ಈಡೇರಿಸಿದ್ದಾರೆ.

    ಫಿನಾಲೆಯ ಅಂತಿಮ ಘಟ್ಟವಾಗಿದ್ದ ಕಾರಣ ಸ್ಪರ್ಧಿಗಳ ಆಸೆ ಈಡೇರಿಸುವುದಾಗಿ ಹೇಳಿದ್ದರು. ಆಶಾಬಾವಿ ಮುಂದೆ ನಿಂತು ಬಿಗ್ ಬಾಸ್ ಬಳಿ ಸ್ಪರ್ಧಿಗಳು ತಮ್ಮ ಮೂರು ಆಸೆಗಳನ್ನ ಹೇಳಬೇಕಿತ್ತು. ಈಗ ಅವರ ಆಸೆಯಂತೆ ಬಿಗ್ ಬಾಸ್ ನೆರವೇರಿಸಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty) ಮನವಿಯಂತೆ ದೊಡ್ಮನೆಗೆ ಹುಲಿವೇಷ ತಂಡವೇ ಎಂಟ್ರಿ ಕೊಟ್ಟಿದೆ. ರೂಪೇಶ್ ಶೆಟ್ಟಿ ಕೂಡ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ಚಆರ್ಯವರ್ಧನ್ ಔಟ್: ರಂಪಾಟ ಮಾಡಿ ಕಣ್ಣೀರಾಕಿದ ರೂಪೇಶ್ ಶೆಟ್ಟಿ

    ರೂಪೇಶ್ ಶೆಟ್ಟಿ ಅವರ ಹುಲಿಕುಣಿತದ ಆಸೆಯನ್ನ ಬಿಗ್ ಬಾಸ್ (Bigg Boss) ಈಡೇರಿಸಿದರು. ಹುಲಿವೇಷದ ಕಲಾವಿದರನ್ನ ಒಳಗೆ ಕಳುಹಿಸಿದ್ದರು ಬಿಗ್ ಬಾಸ್. ಮೊದಲು ಹುಲಿವೇಷದ ಕಲಾವಿದರೊಬ್ಬರು ಎಂಟ್ರಿ ಕೊಟ್ಟಾಗ ರಾಕೇಶ್ ಅಡಿಗ ಗಾಬರಿಗೊಂಡರು. ಆನಂತರ ಹುಲಿವೇಷದ ಕಲಾವಿದರು ಲೈವ್ ಪರ್ಫಾಮೆನ್ಸ್ ಕೊಡಲು ಆರಂಭಿಸಿದಾಗ ರೂಪೇಶ್ ಶೆಟ್ಟಿ ಕೂಡ ಹುಲಿಕುಣಿತ ಹಾಕಿ ಸಖತ್ ಖುಷಿ ಪಟ್ಟರು. ಖುಷಿಯಿಂದ ರೂಪೇಶ್ ಶೆಟ್ಟಿ ಕೂಗಾಡಿದರು. ಹುಲಿವೇಷ ತಂಡದ ಜೊತೆ ರೂಪೇಶ್ ಜೋಶ್‌ನಿಂದ ಕುಣಿಯುವಾಗ ಇತರೆ ಸ್ಪರ್ಧಿಗಳು ಕೂಡ ಸಾಥ್ ನೀಡಿದ್ದರು.

    ಹುಲಿವೇಷದ ಕಲಾವಿದರು ಹೊರಗಡೆ ಹೋದ ಬಳಿಕ ಈ ಆಸೆ ಈಡೇರಲ್ಲ ಅಂದುಕೊಂಡಿದ್ದೆ. ಆದರೆ, ಇಲ್ಲಿ ಆಗಿದ್ದು ಸಖತ್ ಖುಷಿಯಾಯಿತು. ಹುಲಿವೇಷದ ಕಲಾವಿದರು ಎಂಟ್ರಿ ಕೊಟ್ಟಿದ್ದು ಖುಷಿ ಆಯ್ತು ನನಗೆ ಎಂದರು ರೂಪೇಶ್ ಶೆಟ್ಟಿ. ಬಳಿಕ ಬಿಗ್‌ ಬಾಸ್‌ಗೆ ಧನ್ಯವಾದಗಳನ್ನ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹುಲಿವೇಷದ ದೇಣಿಗೆಯಿಂದ ಕ್ಯಾನ್ಸರ್ ಪೀಡಿತರಿಗೆ ನೆರವು- ಯುವಕರ ಕಾರ್ಯ ಮಾದರಿ

    ಹುಲಿವೇಷದ ದೇಣಿಗೆಯಿಂದ ಕ್ಯಾನ್ಸರ್ ಪೀಡಿತರಿಗೆ ನೆರವು- ಯುವಕರ ಕಾರ್ಯ ಮಾದರಿ

    ಮಂಗಳೂರು: ಕರಾವಳಿಯ ಪ್ರಸಿದ್ಧ ಜಾನಪದ ಕಲೆ ಹುಲಿವೇಷ (Tiger Dance). ಅದು ಮೈಮನ ನವಿರೇಳಿಸುವಂತಹ ಕುಣಿತದ ಜೊತೆಗೆ ಜನತೆಗೆ ಮನರಂಜನೆ ಒದಗಿಸುತ್ತದೆ. ಇಷ್ಟು ಮಾತ್ರ ಅಲ್ಲ ಮಂಗಳೂರಿನ ಯುವಕರ ಹುಲಿವೇಷದ ತಂಡ ಮನೋರಂಜನೆಯ ಜೊತೆಗೆ ಹಲವು ಕುಟುಂಬಗಳಿಗೆ ಬೆಳಕು ನೀಡುವ ಪ್ರಯತ್ನ ಮಾಡಿದೆ. ಇತ್ತೀಚೆಗೆ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನ ಕ್ಯಾನ್ಸರ್ (Cancer) ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ.

    ಹೌದು. ಕರಾವಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬರ್ತಾ ಇದ್ದಂತೆ ಶುರು ಆಗೋದು ನಾಡ ಹುಲಿಗಳ ಅಬ್ಬರ. ಇಲ್ಲಿ ಹುಲಿವೇಷ ಇಲ್ಲದೆ ಯಾವುದೇ ಹಬ್ಬವೂ ನಡೆಯುವುದು ಕಡಿಮೆ. ಹುಲಿ ವೇಷ ಹಾಕುವವರು ಸಮಾಜಮುಖಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು  (Mangaluru)  ಹೊರವಲಯದ ತೊಕ್ಕೊಟ್ಟುವಿನಲ್ಲಿ ಹುಲಿ ವೇಷ ಹಾಕಿ ಕುಣಿದ ಯುವಕರು (Youths) ಅದರಿಂದ ದೇಣಿಗೆ ರೂಪದಲ್ಲಿ ಬಂದ 60ಸಾವಿರ ಹಣವನ್ನು ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿದ್ದಾರೆ.

    ತೊಕ್ಕೊಟ್ಟಲ್ಲಿ ನಡೆದ 2022ರ ಸಾಲಿನ ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಯಲ್ಲಿ ಉಳ್ಳಾಲ (Ullal) ಬೈಲಿನ ವೈದ್ಯನಾಥ ಫ್ರೆಂಡ್ಸ್ (ರಿ) ಹಾಗೂ ಟೀಮ್ ಛತ್ರಪತಿ ತಂಡವು ಹುಲಿ ವೇಷದ ಟ್ಯಾಬ್ಲೊ ಇಳಿಸಿ ಜನರನ್ನ ರಂಜಿಸಿತ್ತು. ಆ ದಿನ ಬಂದ ಹಣವನ್ನು ಸ್ವಂತಕ್ಕೆ ಬಳಸದೇ ಅಶಕ್ತರಿಗೆ ನೀಡಿದೆ. ಇದನ್ನೂ ಓದಿ: ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ

    Live Tv
    [brid partner=56869869 player=32851 video=960834 autoplay=true]

  • ಕೋಟೆನಾಡಿಗೆ ಬರುತ್ತಿರುವ ಮೋದಿಯನ್ನ ವಿಭಿನ್ನ ರೀತಿಯಲ್ಲಿ ಸ್ವಾಗತಿಸಲು ಸಜ್ಜಾದ ಅಭಿಮಾನಿ

    ಕೋಟೆನಾಡಿಗೆ ಬರುತ್ತಿರುವ ಮೋದಿಯನ್ನ ವಿಭಿನ್ನ ರೀತಿಯಲ್ಲಿ ಸ್ವಾಗತಿಸಲು ಸಜ್ಜಾದ ಅಭಿಮಾನಿ

    ಚಿತ್ರದುರ್ಗ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಆದರಿಂದ ಮೋದಿ ಅಭಿಮಾನಿಯೋರ್ವ ವಿಭಿನ್ನ ರೀತಿಯಲ್ಲಿ ತಮ್ಮ ನಾಯಕನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.

    ಹೌದು, ಇಂದು ಮಧ್ಯಾಹ್ನ ಚಿತ್ರದುರ್ಗಕ್ಕೆ ಮೋದಿ ಅವರು ಬರಲಿದ್ದಾರೆ. ಆದರಿಂದ ಅಭಿಮಾನಿ ಮಂಜುನಾಥ್ ತಮ್ಮ ಮೈತುಂಬಾ ಹುಲಿವೇಷದ ಬಣ್ಣ ಬಳಿದುಕೊಂಡು ಮೋದಿ ಎಂದು ಬೆನ್ನ ಮೇಲೆ ಬರೆಸಿಕೊಂಡು, ಪ್ರಧಾನಿಯನ್ನು ಸ್ವಾಗತಿಸಲು ರೆಡಿಯಾಗಿ ಅಭಿಮಾನ ಮೆರೆದಿದ್ದಾರೆ.

    ಚಿತ್ರದುರ್ಗದ ಕೆಳಗೋಟೆ ನಿವಾಸಿಯಾದ ಮಂಜುನಾಥ್ ಮೋದಿ ಅವರ ಕಟ್ಟಾ ಅಭಿಮಾನಿ. ಆದರಿಂದ ತಮ್ಮ ಊರಿಗೆ ಮೋದಿ ಬರುತ್ತಿರುವುದಕ್ಕೆ ಫುಲ್ ಖುಷ್ ಆಗಿ, ಹುಲಿವೇಷ ಧರಿಸಿ ನಗರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಅಭಿಮಾನಿಯನ್ನು ಕಂಡವರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.