Tag: huli karthik

  • ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ದರ್ಶನ್ ಆಚೆ ಬರಬೇಕು: ಹುಲಿ ಕಾರ್ತಿಕ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ದರ್ಶನ್ ಆಚೆ ಬರಬೇಕು: ಹುಲಿ ಕಾರ್ತಿಕ್

    ‘ಗಿಚ್ಚಿ ಗಿಲಿಗಿಲಿ 3′ (Gicchi Gili Gili 3) ಕಾರ್ಯಕ್ರಮದ ಗೆಲುವಿನ ನಂತರ ಕೆಲ ಸಿನಿಮಾಗಳ ಬಿಡುಗಡೆಯ ಪ್ರಚಾರದಲ್ಲಿ ಕಾರ್ತಿಕ್ (Huli Karthik) ಬ್ಯುಸಿಯಾಗಿದ್ದಾರೆ. ಇದರ ನಡುವೆ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ಕುರಿತು ನಟ ಮಾತನಾಡಿದ್ದಾರೆ. ಈ ಪ್ರಕರಣದಿಂದ ದರ್ಶನ್ (Darshan) ಆಚೆ ಬರಬೇಕು ಎಂದಿದ್ದಾರೆ.

    ರೇಣುಕಾಸ್ವಾಮಿ ಪ್ರಕರಣದ ಕುರಿತು ಮಾತನಾಡಿ, ದರ್ಶನ್ ಸರ್‌ಗೆ ಏನು ಆಗಬಾರದು. ಅವರು ಇದನ್ನು ಮಾಡಿರಬಾರದು. ಅವರಿಗೆ ಒಳ್ಳೆಯದು ಆಗಬೇಕು, ಇದರಿಂದ ಅವರು ಆಚೆ ಬಂದು ಸಿನಿಮಾ ಮಾಡಬೇಕು ಎಂದಿದ್ದಾರೆ. ಅವರ ಸಿನಿಮಾಗಾಗಿ ಅಪಾರ ಅಭಿಮಾನಿಗಳ ಬಳಗ ಕಾಯುತ್ತಿದೆ. ‘ಮೆಜೆಸ್ಟಿಕ್’ನಿಂದ ಹಿಡಿದು ‘ರಾಬರ್ಟ್‌’ವರೆಗೂ ಹೇಗೆ ಕುಣಿಸಿದರೋ ಹಾಗೇ ಅವರು ಬಂದ್ಮೇಲೆ ದುಪ್ಪಟ್ಟು ಅವರನ್ನು ಮೆರಸಬೇಕು. ನಾನೊಬ್ಬ ದರ್ಶನ್ ಅಭಿಮಾನಿಯಾಗಿ ಆಸೆ ಎಂದು ಮಾತನಾಡಿದ್ದಾರೆ.

    ಈ ವೇಳೆ, ‘ಟಗರು ಪಲ್ಯ’ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಗೆಸ್ಟ್ ಆಗಿ ದರ್ಶನ್ ಸರ್ ಬಂದಿದ್ದರು. ಆಗ ಹುಲಿ ಕಾರ್ತಿಕ್ ಅಲ್ವಾ, ನಾನು ನಿಮ್ಮ ನಟನೆ ಶೋನಲ್ಲಿ ನೋಡಿದ್ದೀನಿ ಒಳ್ಳೆಯದಾಗಲಿ ಎಂದು ಹರಸಿದರು. ಅಷ್ಟೂ ದರ್ಶನ್ ಸರ್ ಡೌನ್ ಟು ಅರ್ಥ್. ನಮಗೆ ಅವರ ಹಾಗೇ ಅಭಿನಯಿಸೋಕೆ ಆಗಲ್ಲ. ಅವರು ಪೌರಣಿಕ ಪಾತ್ರದಲ್ಲೂ ಮಾಡಿದ್ದಾರೆ. ನಿಮ್ಮ ನಟನೆ ಚೆನ್ನಾಗಿದೆ ಎಂದು ಹೇಳುವ ದೊಡ್ಡ ಗುಣ ಅವರಿಗೆ ಎಂದು ಕಾರ್ತಿಕ್ ಸ್ಮರಿಸಿದರು.

  • ಅವಕಾಶ ಸಿಕ್ಕರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ: ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಕಾರ್ತಿಕ್

    ಅವಕಾಶ ಸಿಕ್ಕರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ: ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಕಾರ್ತಿಕ್

    ‘ಗಿಚ್ಚಿ ಗಿಲಿಗಿಲಿ 3′ ಕಾರ್ಯಕ್ರಮ ವಿನ್ನರ್ ಆಗಿರುವ ಹುಲಿ ಕಾರ್ತಿಕ್ (Huli Karthik) ಅವರು ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ಬರುತ್ತಾರಾ? ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೊಡ್ಮನೆ ಆಟದ ಕುರಿತು ಎದುರಾದ ಪ್ರಶ್ನೆಗೆ, ಅವಕಾಶ ಸಿಕ್ಕರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ ಎಂದು ನಟ ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ರಿಯಾಕ್ಟ್ ಮಾಡಿದ್ದಾರೆ.

    ಬಿಗ್ ಬಾಸ್‌ಗೆ ಹೋಗ್ತೀನಿ ಅಂತ ನನ್ನ ಹೆಸರು ಓಡಾಡುತ್ತಿದೆ. ಆದರೆ ನಾನು ಓಡಾಡುತ್ತಿಲ್ಲ ಎಂದು ಕಾರ್ತಿಕ್ ತಮಾಷೆಯಾಗಿ ಉತ್ತರಿಸಿದ್ದಾರೆ. ನನ್ನ ಆತ್ಮೀಯರೆಲ್ಲಾ ಬಂದಿರುವ ಸುದ್ದಿ ಕಳಿಸೋದು, ನೀನು ಹೋಗ್ತಿದ್ದೀಯಾ ಆದರೆ ಹೇಳ್ತಿಲ್ಲ ಅಂತ. ಎಲ್ಲಾ ಸರಿ ಶೋಗೆ ಬರಲು ವಾಹಿನಿಯ ಕಡೆಯಿಂದ ನನಗೆ ಆಫರ್‌ ಬಂದಿಲ್ಲ ಎಂದು ಕಾರ್ತಿಕ್ ಮಾತನಾಡಿದ್ದಾರೆ.

    ಇತ್ತೀಚೆಗೆ ಒಂದು ಘಟನೆ ನಡೆಯಿತು. ನಾನು ಸ್ವಲ್ಪ ದಪ್ಪ ಆಗಿದ್ದೆ, ಶರ್ಟ್‌ಗಳು ನನಗೆ ಆಗುತ್ತಿರಲಿಲ್ಲ. ಅದಕ್ಕೆ ನಾನು ಹೊಸ ಶರ್ಟ್ ಖರೀದಿಸಲು ಹೋಗಿದ್ದೆ, ಅದನ್ನು ನೋಡಿ ಅನೇಕರು ಬಿಗ್ ಬಾಸ್‌ಗೆ ಹೋಗ್ತಿದ್ದೀರಾ ಅಲ್ವಾ? ಎಂದರು. ಈ ಶೋ ಶುರು ಆಗುವವರೆಗೂ ನಾನು ಏನು ಖರೀದಿಸಲು ಸಾಧ್ಯವಿಲ್ಲ ಎಂದು ತಮಾಷೆಯಾಗಿ ಉತ್ತರಿಸಿದರು.

    ವಾಹಿನಿ ಕಡೆಯಿಂದ ಆಫರ್ ಬಂದರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ. ನಾನು ಮನರಂಜನೆ ಕೊಡೋದಷ್ಟೇ ನನ್ನ ಜೀವನ. ಅದು ಬಿಗ್ ಬಾಸ್ ಆಗಿರಲಿ ಅಥವಾ ಯಾವುದೇ ರಿಯಾಲಿಟಿ ಶೋ ಆಗಿರಲಿ ನಟನಾಗಿ ಮನರಂಜನೆ ನೀಡುವುದು ನನ್ನ ಕರ್ತವ್ಯ ಎಂದಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಆಡಲು ಅವಕಾಶ ಸಿಕ್ಕರೆ ಸದುಪಯೋಗಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ವಾಹಿನಿ ಕಡೆಯಿಂದ ಕರೆ ಬಂದಿಲ್ಲ ಎಂದು ಮಾತನಾಡಿದ್ದಾರೆ.

  • ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಆದ ಹುಲಿ ಕಾರ್ತಿಕ್

    ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಆದ ಹುಲಿ ಕಾರ್ತಿಕ್

    ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ 3’ಗೆ (Gicchi Giligili 3) ತೆರೆಬಿದ್ದಿದೆ. ನಟ ಹುಲಿ ಕಾರ್ತಿಕ್ (Huli Karthik) ಅವರು ಈ ಕಾರ್ಯಕ್ರಮದ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಟನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪುರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಸೆ.29 ರಿಂದ ಬಿಗ್‌ ಬಾಸ್‌ ಕನ್ನಡ-11 ಶುರು; ಕಿಚ್ಚ ಸುದೀಪ್‌ ಆ್ಯಂಕರ್‌

    ‘ಗಿಚ್ಚಿ ಗಿಲಿಗಿಲಿ’ ಸೀಸನ್ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್ 10 ಲಕ್ಷ ರೂ.ಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿದ್ದಾರೆ. ಮಾನಸಾ 3 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ನನಗೆ ವಾಯ್ಸ್ ಬರುತ್ತಿಲ್ಲ. ನನ್ನ ತಾಯಿಗೆ ಥ್ಯಾಂಕ್ಸ್ ಹೇಳುತ್ತೇನೆ. ಆಕೆ ನನಗೆ ಕೊಟ್ಟ ಫ್ರೀಡಂ ಇದಕ್ಕೆಲ್ಲ ಕಾರಣ ಎಂದು ಕಾರ್ತಿಕ್‌ ಭಾವುಕರಾಗಿದ್ದಾರೆ.

    ‘ಬಿಗ್ ಬಾಸ್ 10’ರ ನಂತರ `ಗಿಚ್ಚಿ ಗಿಲಿಗಿಲಿ’ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಈ ಶೋ ಸುದೀರ್ಘವಾಗಿ ಮೂಡಿ ಬಂದಿತ್ತು. ಮಲೆನಾಡಿನ ಕಲಾವಿದ ಹುಲಿ ಕಾರ್ತಿಕ್ ಪ್ರಶಸ್ತಿ ಗೆಲ್ಲಲು 8 ವರ್ಷ ಕಾದಿದ್ದಾರೆ. ಮಜಾಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರ್ತಿಕ್, ಅಲ್ಲಿಂದ 8 ವರ್ಷದ ಬಳಿಕ ವಾಹಿನಿಯ ಕಾಮಿಡಿ ನಟನಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

    ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸುವ ಕಾರ್ತಿಕ್ ಮೂಲತಃ ಶಿವಮೊಗ್ಗದವರು. ತೀರ್ಥಹಳ್ಳಿಯ ಚಿಕ್ಕಳ್ಳಿ ಎಂಬ ಊರಿನವರು ಇವರಿಗೆ ತಾಯಿಯೇ ಪ್ರಪಂಚ. ಬಡತನದಲ್ಲಿ ಬೆಳೆದ ಕಾರ್ತಿಕ್ ಗಾರೆ ಕೆಲಸ, ಪಂಚರ್ ಶಾಪ್ ಹೀಗೆ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದಾರೆ. ಇನ್ನೂ ಕಾಮಿಡಿ ಶೋಗಳ ಜೊತೆಗೆ ಟಗರು ಪಲ್ಯ, ತ್ರಿವಿಕ್ರಮ ಮುಂತಾದ ಹಲವು ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ.