Tag: Hukuma Karada

  • ಮದ್ಯದ ಅಮಲಿನಲ್ಲಿ ಉದ್ಯಮಿ ಕಾರಿಗೆ ಡಿಕ್ಕಿ – ಚಾಲಕ MLA ಪುತ್ರನೆಂದು ಬಿಜೆಪಿ ಆರೋಪ

    ಮದ್ಯದ ಅಮಲಿನಲ್ಲಿ ಉದ್ಯಮಿ ಕಾರಿಗೆ ಡಿಕ್ಕಿ – ಚಾಲಕ MLA ಪುತ್ರನೆಂದು ಬಿಜೆಪಿ ಆರೋಪ

    ಭೋಪಾಲ್: ಮದ್ಯದ ಅಮಲಿನಲ್ಲಿ ಇಂದೋರ್ ಮೂಲದ ಉದ್ಯಮಿಯೊಬ್ಬರ ಕಾರಿಗೆ ಮಧ್ಯಪ್ರದೇಶದ ಸೆಹೋರ್‌ನಲ್ಲಿ ಡಿಕ್ಕಿ ಹೊಡೆದಿದ್ದ ಅಪರಿಚಿತ ವ್ಯಕ್ತಿ ಕಾಂಗ್ರೆಸ್‍ನ ಮಾಜಿ ಸಚಿವರ ಪುತ್ರ ಎಂದು ಬಿಜೆಪಿ ಆರೋಪಿಸಿದೆ.

    ಮದ್ಯವನ್ನು ಸೇವಿಸುತ್ತಾ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಕಾರಿನ ನಂಬರ್ ಕಾಂಗ್ರೆಸ್ ನ ಮಾಜಿ ಸಚಿವ ಶಾಜಾಪುರದ ಹುಕುಮಾ ಕರಡ ಅವರ ಪುತ್ರ ರೋಹಿತಾಪ್ ಸಿಂಗ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ

    ಉದ್ಯಮಿ ದಿನೇಶ್ ಅಹುಜಾ, ಅವರ ಸಹಚರರೊಂದಿಗೆ ಶನಿವಾರ ರಾತ್ರಿ ಭೋಪಾಲ್‍ನಿಂದ ಇಂದೋರ್‌ಗೆ ಹೋಗುತ್ತಿದ್ದಾ ಹಿಂದಿನಿಂದ ಕಾರೊಂದು ಬಂದು ಡಿಕ್ಕಿ ಹೊಡೆದಿದೆ. ಇದೇ ವೇಳೆ ಮತ್ತೊಂದು ಕಾರಿನಲ್ಲಿದ್ದ ಕೆಲವು ಮಂದಿ ರೋಹಿತಾಪ್ ಸಿಂಗ್ ಅವರ ಕಾರಿಗೆ ಅಡ್ಡ ಹಾಕಿದಾಗ ಡ್ರೈವರ್ ಸೀಟಿನ ಪಕ್ಕ ಚಿಕ್ಕ ಗ್ಲಾಸ್‍ನಲ್ಲಿ ಮದ್ಯ ಇಟ್ಟುಕೊಂಡಿರುವುದನ್ನು ನೋಡಿದ್ದಾರೆ.

    ನಂತರ ಕಾರನ್ನು ಡ್ಯಾಮೇಜ್‍ಗೊಳಿಸಿದ್ದಕ್ಕಾಗಿ ಹಣ ನೀಡುವಂತೆ ಕೇಳಿದಾಗ ನಾನು ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದಿದ್ದಾನೆ. ಇದರಿಂದ ಕೋಪಗೊಂಡ ದಿನೇಶ್ ಅಹುಜಾ ಸಹಚರರು ಮತ್ತೆ ಅವರ ಕಾರಿನಿಂದ ರೋಹಿತಾಪ್ ಸಿಂಗ್ ಅವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಇದೀಗ ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ ಅವರು, ಆರೋಪಿಯು ಕಾಂಗ್ರೆಸ್ ಮಾಜಿ ಸಚಿವ ಹುಕುಂ ಸಿಂಗ್ ಕರಾದಾ ಅವರ ಪುತ್ರನಾಗಿದ್ದು, “ಗೂಂಡಾ ರಾಜ್”ನನ್ನು ಸಹಿಸುವುದಿಲ್ಲ ಮತ್ತು ಈ ವಿಚಾರವಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.