Tag: hugging

  • ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!

    ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!

    ಬೀಜಿಂಗ್: ಸಾಮಾನ್ಯವಾಗಿ ಅಪ್ಪಿಕೊಳ್ಳುವುದು ಅಥವಾ ಆಲಿಂಗನ ಮಾಡಿಕೊಳ್ಳುವುದು ಎಂದರೆ ಇಬ್ಬರ ಮಧ್ಯೆ ಇರುವ ಉತ್ತಮ ಬಾಂಧವ್ಯವನ್ನು ತೋರಿಸುತ್ತದೆ. ಆದರೆ ಚೀನಾದಲ್ಲೊಂದು ಅಚ್ಚರಿಯ ಘಟನೆ ನಡೆದಿರುವುದಾಗಿ ವರದಿಯಾಗಿದೆ.

    ಹೌದು. ಸಹೋದ್ಯೋಗಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ನನ್ನ ಪಕ್ಕೆಲುಬುಗಳು ಮುರಿದು ಹೋಗಿವೆ ಎಂದು ಮಹಿಳೆಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಘಟನೆಯು ಮೇ 2021ರಲ್ಲಿ ಯುಯಾಂಗ್ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಕಚೇರಿಯಲ್ಲಿ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ

    ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಹೋದ್ಯೋಗಿ ಮಹಿಳೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಈ ವೇಳೆ ಮಹಿಳೆ ನೋವಿನಿಂದ ಕಿರುಚಾಡಿದ್ದಾಳೆ. ಇದಾದ ಒಂದೆರಡು ದಿನಗಳ ಬಳಿಕ ಮಹಿಳೆಗೆ ಎದೆನೋವು ಕಾಣಿಸಿಕೊಂಡಿದೆ. ಆದರೆ ಮಹಿಳೆ ಈ ವಿಚಾರವನ್ನು ಯಾರ ಜೊತೆನೂ ಹೇಳಿಕೊಳ್ಳದೆ ಎದೆಗೆ ಸ್ವಲ್ಪ ಬಿಸಿ ಎಣ್ಣೆ ಹಚ್ಚಿ ಮಲಗುತ್ತಿದ್ದಳು. ಆದರೆ ದಿನಗಳೆದಂತೆ ಆಕೆಗೆ ಎದೆನೋವು ಹೆಚ್ಚಾಗುತ್ತಾ ಹೋಯಿತು. ತೀವ್ರವಾದ ನೋವಿನಿಂದ ಬಳಲುತ್ತಿದ್ದ ಮಹಿಳೆ ವಾರದ ಬಳಿಕ ಆಸ್ಪತ್ರೆಗೆ ತೆರಳಿದಳು. ಆಗ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿ ಎಕ್ಸ್ ರೇ ತೆಗೆಯುವಂತೆ ಹೇಳಿದ್ದಾರೆ. ಅಂತೆಯೇ ಎಕ್ಸ್ ರೇ ತೆಗೆದಾಗ ಮೂರು ಪಕ್ಕೆಲುಬುಗಳು ಮುರಿದಿರುವುದು ಬಯಲಾಯಿತು.

    ಬಲಭಾಗದಲ್ಲಿ ಎರಡು ಮತ್ತು ಎಡಭಾಗದಲ್ಲಿ ಒಂದು ಪಕ್ಕೆಲುಬಿಗೆ ಹಾನಿಗೊಳಗಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅವಳು ಕೆಲಸದಿಂದ ಬಿಡುವು ತೆಗೆದುಕೊಳ್ಳಬೇಕಾಯಿತು. ಅಲ್ಲದೆ ಈ ನೋವು ವಾಸಿಯಾಗಲು ಸಾಕಷ್ಟು ಖರ್ಚು ಕೂಡ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿ ಮಹಿಳೆ ತನ್ನ ಪತಿ ಜೊತೆ ಸಹೋದ್ಯೋಗಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಳೆ. ಆದರೆ ಸಹೋದ್ಯೋಗಿ ಯಾವುದೇ ಒಪ್ಪಂದಕ್ಕೆ ಹೂ ಅನ್ನಲಿಲ್ಲ. ಅಲ್ಲದೆ ತನ್ನ ಸ್ನೇಹಪೂರ್ವಕ ‘ಅಪ್ಪುಗೆಯಿಂದ ಪಕ್ಕೆಲುಬು ಮುರಿದಿದೆ’ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾನೆ.

    court order law

    ಸಹೋದ್ಯೋಗಿಯ ಈ ಮಾತು ಕೇಳಿದ ಮಹಿಳೆ, ಕೊನೆಗೆ ಆತನ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಅಲ್ಲದೆ ತನ್ನ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾಳೆ. ಇತ್ತ ನ್ಯಾಯಾಲಯ ಕೂಡ ಸಾಕ್ಷಿ ಕೇಳಿದ್ದರಿಂದ ಮಹಿಳೆಗೆ ಹಿನ್ನಡೆಯಾಗಿದೆ. ಆದರೆ ಸಹೋದ್ಯೋಗಿ ಮಹಿಳೆಗೆ 10,000 ಯುವಾನ್ (1,17,164 ರೂ.) ಪರಿಹಾರವಾಗಿ ಪಾವತಿಸಲು ಆದೇಶ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಲವು ಖಾಯಿಲೆಗಳಿಗೆ ಮದ್ದು ಹಸು ತಬ್ಬಿಕೊಳ್ಳುವುದು- ಗೋಮಾತೆ ಅಪ್ಪುಗೆಯಲ್ಲಿ ಮಾನಸಿಕ ನೆಮ್ಮದಿ

    ಹಲವು ಖಾಯಿಲೆಗಳಿಗೆ ಮದ್ದು ಹಸು ತಬ್ಬಿಕೊಳ್ಳುವುದು- ಗೋಮಾತೆ ಅಪ್ಪುಗೆಯಲ್ಲಿ ಮಾನಸಿಕ ನೆಮ್ಮದಿ

    ಮೆರಿಕದಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. COW HUGGING ಎಂಬುವುದು ಒಂದು ಪ್ರಾಣಿ ಚಿಕಿತ್ಸೆಯಾಗಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ಹಸು ತಬ್ಬಿಕೊಳ್ಳಲು ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

    ಒಂದು ಗಂಟೆಗೆ 200 ಡಾಲರ್(ಸುಮಾರು 15 ಸಾವಿರ ರೂಪಾಯಿ)ಗಳನ್ನು ನೀಡಿ ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು, ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್‍ಗಳನ್ನೇ ತೆರೆದು ಉದ್ಯಮವನ್ನು ಆರಂಭಿಸಿದ್ದಾರೆ. ಅಲ್ಲದೇ ಹಲವು ಕಡೆ ಜುಲೈವರೆಗೂ ಬುಕಿಂಗ್ ಕೂಡ ಪೂರ್ಣಗೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸ್ಯಾಂಚುರಿ, ಅಮೆರಿಕಾದಲ್ಲಿರುವ ಅಭಯಾರಣ್ಯಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಅಭಿಯಾನವನ್ನು ನಡೆಸಲಾಗುತ್ತಿದೆ.

    ನಮ್ಮ ಹಸುಗಳನ್ನು ಅಪ್ಪಿಕೊಳ್ಳಲು ವಿಶ್ವದ ಹಲವು ಭಾಗಗಳಿಂದ ಜನರು ಬರುತ್ತಾರೆ. ಹಸುಗಳು ನಿಮ್ಮ ಮನದಲ್ಲಿ ಉಲ್ಲಾಸದ ಭಾವನೆಯನ್ನು ಮೂಡಿಸಲು ಸಹಕಾರಿ ಆಗಲಿದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ ಎಂದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳಿದ್ದಾರೆ.

    ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ. ಯುಎಸ್, ನೆದರ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಯುಕೆ ಸೇರಿಂದತೆ ಹಲವು ಪ್ರದೇಶಗಳಲ್ಲಿ ಇಂಹತ ಚಿಕಿತ್ಸಾ ಪದ್ದತಿ ಇದೆ ಎಂದು ಎನ್‍ಜಿಓವೊಂದು ತಿಳಿಸಿದೆ. ಭಾರತದಲ್ಲಿ ಎನ್‍ಜಿಓವೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.