Tag: huchha Venkat

  • ನಿನ್ನೆ ಹುಚ್ಚನಂತೆ ಅಲೆದಾಡ್ತಿದ್ದ- ಇಂದು ಸಾರ್ವಜನಿಕರಿಂದ ವೆಂಕಟ್‍ಗೆ ಗೂಸಾ

    ನಿನ್ನೆ ಹುಚ್ಚನಂತೆ ಅಲೆದಾಡ್ತಿದ್ದ- ಇಂದು ಸಾರ್ವಜನಿಕರಿಂದ ವೆಂಕಟ್‍ಗೆ ಗೂಸಾ

    ಮಂಡ್ಯ: ಕಳೆದ ದಿನವಷ್ಟೆ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಹುಚ್ಚನಂತೆ ಅಲೆದಾಡುತ್ತಿದ್ದ ವೆಂಕಟ್‍ನನ್ನು ಸ್ಥಳೀಯರು ಗುರುತಿಸಿದ್ದರು. ಇದೀಗ ಜ್ಯೂಸ್ ಕುಡಿದು ಹಣ ನೀಡದೆ ಹಲ್ಲೆಗೆ ಮುಂದಾಗಿದ್ದ ವೆಂಕಟ್‍ಗೆ ಸಾರ್ವಜನಿಕರು ಏಟು ಕೊಟ್ಟಿದ್ದಾರೆ.

    ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ಈ ಘಟನೆ ನಡೆದಿದೆ. ಹುಚ್ಚ ವೆಂಕಟ್ ಕಬ್ಬಿನ ಜ್ಯೂಸ್ ಕುಡಿದು ಹಣ ನೀಡದೆ ರಂಪಾಟ ಮಾಡಿದ್ದ. ಅಷ್ಟೇ ಅಲ್ಲದೇ ಜ್ಯೂಸ್ ಅಂಗಡಿಯವನ ಮೇಲೆ ಕೈ ಮಾಡಿದ್ದಾನೆ. ಈ ವೇಳೆ ಹಲ್ಲೆಗೆ ಮುಂದಾಗಿದ್ದ ವೆಂಕಟ್‍ಗೆ ಸಾರ್ವಜನಿಕರು ಏಟು ಕೊಟ್ಟಿದ್ದಾರೆ. ವೆಂಕಟ್ ಕಳೆದ ಎರಡ್ಮೂರು ದಿನಗಳಿಂದ ಶ್ರೀರಂಗಪಟ್ಟಣದಲ್ಲೇ ಅಲೆದಾಡುತ್ತಿದ್ದಾನೆ.

    ಸೋಮವಾರ ಕೂಡ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಹುಚ್ಚನಂತೆ ಅಲೆದಾಡುತ್ತಿದ್ದ ವೆಂಕಟ್ ನನ್ನು ಸ್ಥಳೀಯರು ಗುರುತಿಸಿದ್ದರು. ನಂತರ ವೆಂಕಟ್ ಬಳಿ ತೆರಳಿ ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡ ಹುಚ್ಚ ವೆಂಕಟ್ ಸ್ಥಳೀಯರಿಗೆ ಬೈದು ಕಿರುಚಾಡಿದ್ದರಿಂದ ಸಾರ್ವಜನಿಕರು ಹೆದರಿಕೊಂಡು ಆತನಿಂದ ದೂರ ಹೋಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  • ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಕೆಯೇ ಕಾರಣ – ನಿರ್ದೇಶಕ ಟ್ವೀಟ್

    ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಕೆಯೇ ಕಾರಣ – ನಿರ್ದೇಶಕ ಟ್ವೀಟ್

    ಬೆಂಗಳೂರು: ನಟ ಮತ್ತು ನಿರ್ದೇಶಕ ಹುಚ್ಚ ವೆಂಕಟ್ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಯೇ ಕಾರಣ ಎಂದು ಯುವ ನಿರ್ದೇಶಕರೊಬ್ಬರು ಟ್ವೀಟ್ ಮಾಡಿದ್ದಾರೆ.

    ಫೇಸ್ ಬುಕ್ ಲೈಫ್ ಸಿನಿಮಾ ನಿರ್ದೇಶಕ ಕೀರ್ತನ್ ಶೆಟ್ಟಿ ಅವರು ಈ ರೀತಿಯ ಟ್ವೀಟ್ ಮಾಡಿದ್ದಾರೆ. ಕೀರ್ತನ್ ಅವರು, ಮತ್ತೆ ಹುಚ್ಚ ವೆಂಕಟನ್ ಆರ್ಭಟ, ನನ್ನ ಮೇಲೆ ಅವಾಚ್ಯ ಪದಗಳಿಂದ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆಗೂ ಯತ್ನ ನಡೆದಿದ್ದು, ನನ್ನ ಸಾವಿಗೆ ಹುಚ್ಚ ವೆಂಕಟ್‍ನ ಬೆದರಿಕೆಯೇ ಕಾರಣ” ಎಂದು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಟ್ಯಾಗ್ ಮಾಡಿದ್ದಾರೆ.

    ಹುಚ್ಚ ವೆಂಕಟ್ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಿ 30,000 ರೂ. ಹಣ ಪಡೆದು, ಈಗ ಶೂಟಿಂಗೂ ಬರುತ್ತಿಲ್ಲ. ಇತ್ತ ತೆಗೆದುಕೊಂಡಿರುವ ಹಣವನ್ನು ವಾಪನ್ ಕೊಡುತ್ತಿಲ್ಲ. ಫೋನ್ ಮಾಡಿದರೆ ಕೆಟ್ಟಾದಾಗಿ ಬೈತಾರೆ ಎಂದು ಕೀರ್ತನ್ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಚ್ಚವೆಂಕಟ್ ಅಭಿಮಾನಿ ಕಡೆಯಿಂದ ನಟಿಗೆ ಧಮ್ಕಿ

    ಹುಚ್ಚವೆಂಕಟ್ ಅಭಿಮಾನಿ ಕಡೆಯಿಂದ ನಟಿಗೆ ಧಮ್ಕಿ

    ಬೆಂಗಳೂರು: ನಟ ಮತ್ತು ನಿರ್ದೇಶಕ ಹುಚ್ಚ ವೆಂಕಟ್ ಅಭಿಮಾನಿ ಕಡೆಯಿಂದ ಸೂಪರ್ ಜೋಡಿಯ ಖ್ಯಾತಿಯ ನಟಿ ರಚನಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ವೆಂಕಟ್ ಅಭಿಮಾನಿಯೊಬ್ಬ ಭಾನುವಾರ ರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ನಟಿ ಆರೋಪಿಸುತ್ತಿದ್ದಾರೆ. ಬಳಿಕ ಈ ವಿಚಾರವಾಗಿ ರಚನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ನಟಿ ರಚನಾ `ಸಮರ್ಥ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಸಿನಿಮಾದಲ್ಲಿ ಬರುವ ಒಂದು ಡೈಲಾಗ್‍ಗೆ ವೆಂಕಟ್ ಅಭಿಮಾನಿ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಸಿದ ನಟಿ ರಚನಾ, ಶುಕ್ರವಾರ ಸಮರ್ಥ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಿದ ಅಭಿಮಾನಿಯೊಬ್ಬರು ನನಗೆ ಕರೆ ಮಾಡಿದ್ದರು. ಆಗ ನಿಮ್ಮ ಸಿನಿಮಾ ಡೈಲಾಗ್ ಕೇಳಿ ನಮ್ಮ ಅಣ್ಣನಿಗೆ ಬೇಜಾರಾಗಿದೆ. ನೀನೇನು ದೊಡ್ಡ ಹೀರೋಯಿನಾ. ನಾವು ಮನಸ್ಸು ಮಾಡಿದ ನಾಳೆನೇ ಸಿನಿಮಾವನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ ಅಂತ ಹೇಳಿದ್ದಾರೆ.

    ಈ ವೇಳೆ ನಾನು ಯಾರು ನೀವು ಎಂದು ಕೇಳಿದೆ. ಆದರೆ ಅವನು ಕೊನೆವರೆಗೂ ತಾನು ಯಾರೆಂದು ಹೇಳಲು ಭಯಪಡುತ್ತಿದ್ದನು. ಕೊನೆಗೆ ನಾನು ಹುಚ್ಚ ವೆಂಕಟ್ ಅಭಿಮಾನಿ ಎಂದು ಹೇಳಿದ್ದಾನೆ. ಸದ್ಯಕ್ಕೆ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ಅವರು ವಿಚಾರಣೆ ಮಾಡಿ ಯಾರು ಎಂದು ಪತ್ತೆ ಮಾಡುತ್ತೇವೆ ಅಂತ ಹೇಳಿದ್ದಾರೆ ಎಂದು ರಚನಾ ತಿಳಿಸಿದ್ದಾರೆ.

    ಈ ಹಿಂದೆ ರಚನಾ ನಾನು ಪ್ರೀತಿಸುತ್ತಿದ್ದೇವೆ ಅಂತ ಹುಚ್ಚ ವೆಂಕಟ್ ವಿವಾದ ಸೃಷ್ಟಿಸಿದ್ದರು.

  • ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!

    ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!

    ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 25,492 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಮತ್ತು ನಿರ್ದೇಶಕ ಹುಚ್ಚವೆಂಕಟ್ ಅವರು 764 ಮತಗಳನ್ನು ಮಾತ್ರ ಪಡೆದಿದ್ದಾರೆ. 15 ಅಭ್ಯರ್ಥಿಗಳಿದ್ದ ಕಣದಲ್ಲಿ ಹುಚ್ಚ ವೆಂಕಟ್  ಗಳಿಸಿದ್ದ ಮತಗಳಿಗಿಂತ ನೋಟಾಗೆ ಹೆಚ್ಚು ವೋಟು ಬಿದ್ದಿದೆ.

    2,724 ನೋಟಾ ವೋಟು ಚಲಾವಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಂತರ ನೋಟಾಗೆ ಹೆಚ್ಚಿನ ವೋಟು ಬಿದ್ದಿದೆ. ಆರ್ ಆರ್ ನಗರದಲ್ಲಿ ಒಟ್ಟು 2,56,447 ಮತಗಳಿದ್ದವು, ಅದರಲ್ಲಿ ಮೂರು ಪೋಸ್ಟಲ್ ಮತಗಳು ತಿರಸ್ಕೃತಗೊಂಡಿತ್ತು.

    ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 1,08,064 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ 82,572 ಮತಗಳಳನ್ನು ಗಳಿಸಿದ್ದಾರೆ. ಇನ್ನು ಜೆಡಿಎಸ್‍ನ ರಾಮಚಂದ್ರ ಅವರು 60,360 ಮತಗಳು ಪಡೆದುಕೊಂಡಿದ್ದಾರೆ.

  • 5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

    5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

    ಮಡಿಕೇರಿ: ಈ ಬಾರಿಯ ವಿಧಾನಸಭಾ ಚುನಾವಣೆ ಮೂಲಕ ತಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಿರ್ಮಿಸುತ್ತಾ ಜನರ ಸೇವೆಯನ್ನು ಮಾಡುತ್ತಿದ್ದೇನೆ. ಇದೀಗ ರಾಜಕೀಯವಾಗಿ ಜನರ ಸೇವೆ ಮಾಡಲು ಮುಂದಾಗಿದ್ದೇನೆ. ಈ ಹಿನ್ನಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿ ರಾಜಕೀಯ ಪಕ್ಷಗಳು ಆಫರ್ ಕೊಟ್ಟರೆ ಹೋಗುತ್ತೇನೆ. ನಾನು ಚುನಾವಣೆಯಲ್ಲಿ ಸೀರೆ, ಹೆಂಡ, ಹಣ ಕೊಡಲ್ಲ. ಜನರಿಗೆ ಕೈ ಮುಗಿಯಲ್ಲ ಮತ್ತು ಕ್ಯಾನ್ವಾಸ್ ಮಾಡಲ್ಲ. ನಾನು ಓಟ್ ನ ಭಿಕ್ಷೆ ಬೇಡಲ್ಲ. ಇಲ್ಲ ನಿಮ್ಮನ್ನ ನಾನು ಕೊಂಡುಕೊಳ್ಳಲ್ಲ. ನಿಮ್ಮ ಕೆಲಸ ಮಾಡಬೇಕು ಎಂದು ಬಂದಿದ್ದೇನೆ ಕೆಲಸ ಕೊಡಿ ಎಂದು ಹೇಳಿದ್ದಾರೆ.

    ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿದರೆ ಪಕ್ಷದ ಮೂಲಕ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ. ಜನರಿಗೆ ಕೈ ಕೂಡಾ ಮುಗಿಯುವುದಿಲ್ಲ. ಜನರ ಕೆಲಸ ಮಾಡಬೇಕು ಅಂತಾ ನಾನು ಬರುತ್ತಿದ್ದೇನೆ. ಜನತೆ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

    ನಾನು ಶಾಸಕನಾಗಿ ಮುಂದೆ ಮುಖ್ಯಮಂತ್ರಿ ಕೂಡಾ ಆಗುತ್ತೇನೆ. ನಂತರ ಪ್ರಧಾನಿ ಕೂಡ ಆಗುತ್ತೇನೆ. ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತೇನೆ, ನನಗೆ ಕೇವಲ 5 ದಿನ ಪ್ರಧಾನಿಯಾಗುವ ಅವಕಾಶ ನೀಡಿದರೆ ದೇಶವನ್ನು ಬದಲಾಯಿಸುತ್ತೇನೆ. ಇಡೀ ವಿಶ್ವವೇ ಭಾರತ ನಂ. 1 ಎನ್ನುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು.

    ನಾನು ಇಲ್ಲಿ ಸೋತರೆ ದೆಹಲಿಗೆ ಹೋಗುತ್ತೇನೆ. ಅಲ್ಲೂ ಸೋತರೆ ಅಮೆರಿಕಕ್ಕೆ ಹೋಗುತ್ತೇನೆ. ನನಗೆ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳಿಲ್ಲ. ಎಲ್ಲ ಕಡೆನೂ ಇದ್ದಾರೆ. ಆದರೆ ನನ್ನ ಮನೆ ಇರುವುದು ಕರ್ನಾಟಕದಲ್ಲಿ ನನ್ನನ್ನು ಸೋಲಿಸಿದರೂ ನಾನು ಬೇಸರಪಡದೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ಇದ್ದು ಜನರ ಕೆಲಸ ಮಾಡಬೇಕೆಂದಿಲ್ಲ ಎಂದು ಹುಚ್ಚ ವೆಂಕಟ್ ಸ್ಪಷ್ಟ ಪಡಿಸಿದ್ದಾರೆ.

  • ಚುನಾವಣೆಗೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಎಂಟ್ರಿ

    ಚುನಾವಣೆಗೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಎಂಟ್ರಿ

    ಬೆಂಗಳೂರು: ನಟ ಹುಚ್ಚ ವೆಂಕಟ್ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹುಚ್ಚ ವೆಂಕಟ್, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದರು. ಅಲ್ಲದೇ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದ ಟಿಕಟ್ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದರು.

    ಚುನಾವಣೆಯ ಪ್ರಚಾರ ಕಾರ್ಯವನ್ನು 5 ದಿನಗಳಲ್ಲಿ ಆರಂಭಿಸುತ್ತೇನೆ, ಮತದಾರರು ಕೇವಲ ಕುಕ್ಕರ್ ಇತರೇ ಅಮಿಷಗಳಿಗೆ ಒಳಗಾಗಿ ಮತವನ್ನು ಮಾರಾಟ ಮಾಡಬೇಡಿ ಎಂದು ಹೇಳಿದರು.

  • ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್

    ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್

    ಬೆಂಗಳೂರು: ಕನಿಷ್ಟ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಟ ಹುಚ್ಚ ವೆಂಕಟ್ ಇವರ ಬೆಂಬಲಕ್ಕೆ ನಿಂತಿದ್ದಾರೆ.

    ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿ 2ನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿದ್ದು, ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಹುಚ್ಚ ವೆಂಕಟ್ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ಹೆಣ್ಣುಮಕ್ಕಳ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದು ನಾನು. ಹೆಣ್ಮಕ್ಕಳ ವಿಚಾರ ಬಂದರೆ ಸಾಯುವವರೆಗೂ ಧ್ವನಿ ಎತ್ತುವುದು ನಾನು. ಹಣ್ಮಕ್ಕಳನ್ನು ಈ ರೀತಿ ಬೀದಿಯಲ್ಲಿ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶದಿಂದ ಹೇಳಿದ್ರು.

    ನಾನು ತನ್ವೀರ್ ಸೇಠ್ ಅವರನ್ನ ಕೇಳ್ತೀನಿ, ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಅವರು ಈ ರೀತಿ ಬೀದಿಯಲ್ಲಿ ಕೂತಿದ್ದರೆ ಸುಮ್ಮನಿರುತ್ತೀರಾ? ಈ ಹೆಣ್ಣು ಮಕ್ಕಳು ಏನಾಗಬೇಕು ನಿಮಗೆ? ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿಲ್ವಾ? 2000 ರೂಪಾಯಿಯಲ್ಲಿ ನಾವು-ನೀವು ಬದುಕುವುದಕ್ಕೆ ಆಗುತ್ತಾ? ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಪ್ರಶ್ನಿಸಿದರು.

    ತನ್ವೀರ್ ಸೇಠ್ ಈ ವಿಚಾರದಲ್ಲಿ ತಲೆ ಹಾಕಬೇಕು. ಸಿದ್ದರಾಮಯ್ಯ ಅವರು ತೀರ್ಮಾನ ತೆಗೆದುಕೊಳ್ಳಬೇಕು. 2000 ರೂಪಾಯಿಯಲ್ಲಿ ನಾನು, ನೀವು ಹೆಂಡತಿ ಮಕ್ಕಳನ್ನು ಸಾಕುವುದಕ್ಕೆ ಆಗುತ್ತಾ? ಇವರು ತುಂಬಾ ಒಳ್ಳೆಯ ಅಡುಗೆ ಮಾಡುತ್ತಾರೆ. ನೀವು ಸಂಬಂಳ ಕೊಟ್ಟಿಲ್ಲ ಅಂದ್ರೆ ಅವರು ಕೆಟ್ಟ ಅಡುಗೆ ಮಾಡಿದ್ರೆ ಆಗ ನಿಮ್ಮ ಹೆಸರು ಹಾಳಾಗಲ್ವಾ? ಆದ್ರೆ ಅವರಿಗೂ ಮಕ್ಕಳು ಇದ್ದಾರೆ. ಆದ್ದರಿಂದ ಅವರು ಆ ರೀತಿ ಮಾಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಯಮ್ಯ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿಕೊಂಡರು. ಇದನ್ನು ಓದಿ: 3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ


    ನೀವು ಮನೆಯಲ್ಲಿ ಮಲಗಿದ್ದೀರಾ. ಆದರೆ ನಮ್ಮ ಹೆಣ್ಣು ಮಕ್ಕಳು ಬೀದಿಯಲ್ಲಿ ಮಲಗಿದ್ದಾರೆ. ಒಂದು ಹೆಣ್ಣು ಮಗುವಿಗೆ ರಕ್ಷಣೆ ಎಲ್ಲಿದೆ? ಹೆಣ್ಮಮಕ್ಕಳು ಬೀದಿಯಲ್ಲಿ ಇರಬಾದರು. ನಮ್ಮ ಮನೆಯಲ್ಲೂ ತಾಯಿ, ಹೆಂಡತಿ ಇದ್ದಾರೆ. ಆದ್ದರಿಂದ ಈ ಹೆಣ್ಣುಮಕ್ಕಳು ಬೀದಿಯಲ್ಲಿ ಕೂತಿದ್ದರೆ ಈ ಹುಚ್ಚ ವೆಂಕಟ್ ಬೀದಿಯಲ್ಲಿ ಕೂತುಕೊಳ್ಳುತ್ತಾನೆ. ಹೆಣ್ಣುಮಕ್ಕಳ ವಿಷಯ ಬಂದರೆ ನಾನು ಜೈಲಿಗೂ ಹೋಗಲು ಸಿದ್ಧನಾಗಿದ್ದೇನೆ. ನೀವು ಬರೀ ಸಂಬಳ ಜಾಸ್ತಿ ಮಾಡುವುದು ಅಷ್ಟೆ ಅಲ್ಲ. ಇಲ್ಲಿ ಕೂತಿರುವ ಹೆಣ್ಣು ಮಕ್ಕಳಿಗೆ ಕ್ಷಮೆ ಕೇಳಬೇಕು. ಇಲ್ಲ ಅಂದರೆ ಇಡೀ ಕರ್ನಾಟಕದಲ್ಲಿರುವ ಹೆಣ್ಣುಮಕ್ಕಳು ಬರುತ್ತಾರೆ. ಹೆಣ್ಣುಮಕ್ಕಳ ಶಕ್ತಿ ಗೊತ್ತಾ ನಿಮಗೆ? ನಮ್ಮ ತಾಯಿ ಕೂಡ ಒಂದು ಹೆಣ್ಣು ಮರಿಯಬೇಡಿ ಎಂದು ಹೇಳಿದ್ರು.

    https://www.youtube.com/watch?v=EHcPajzmgA4