Tag: Hubli Riot

  • ನನ್ನ ಮೇಲಿನ ಆರೋಪಗಳೆಲ್ಲವೂ ಸತ್ಯಕ್ಕೆ ದೂರ: ಜಮೀರ್ ಸ್ಪಷ್ಟನೆ

    ನನ್ನ ಮೇಲಿನ ಆರೋಪಗಳೆಲ್ಲವೂ ಸತ್ಯಕ್ಕೆ ದೂರ: ಜಮೀರ್ ಸ್ಪಷ್ಟನೆ

    ಬೆಂಗಳೂರು: ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿ ಅರೆಸ್ಟ್ ಆದವರ ಪರ ಶಾಸಕ ಜಮೀರ್ ಅಹ್ಮದ್‌ಖಾನ್ ನಿಂತಿದ್ದು, ಗಲಭೆಕೋರರಿಗೆ 5 ಸಾವಿರ ನಗದು ಹಾಗೂ ರಂಜಾನ್ ಫುಡ್‌ಕಿಟ್ ನೀಡಿ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದ್ದಂತೆ, ಶಾಸಕ ಜಮೀರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ZAMEER

    ತಮ್ಮ ಮೇಲಿನ ಆರೋಪಗಳಿಗೆ ತೆರೆ ಎಳೆಯಲು ಮುಂದಾದ ಅವರು, ಕಳೆದ ಏಪ್ರಿಲ್ 17ನೇ ತಾರೀಖಿನಂದು ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಗಾಗಿ ಮೆಕ್ಕಾಗೆ ಬಂದಿದ್ದೇನೆ. ಈಗ ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೂ ನನಗೂ ಯಾವ ರೀತಿಯ ಸಂಬಂಧವೂ ಇಲ್ಲ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

    ಇಷ್ಟಕ್ಕೂ ನಡೆದಿದ್ದೇನು?
    ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸಹಾಯ ಮಾಡುತ್ತಿದ್ದಾರೆ. ದೇಗುಲ, ಪೊಲೀಸ್ ಠಾಣೆಗೆ ಕಲ್ಲು ಹೊಡೆದವರಿಗೆ ಜಮೀರ್ ನೆರವು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.

    ಇಂದು ಮಧ್ಯಾಹ್ನ 3:30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್‌ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್‌ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದರು. ರಂಜಾನ್ ಹಿನ್ನೆಲೆಯಲ್ಲಿ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದರು. ಹುಬ್ಬಳ್ಳಿಯ ತಮ್ಮ ಬೆಂಬಲಿಗರ ಮೂಲಕ ರೇಶನ್ ಕಿಟ್ ಹಂಚಿಕೆ ಮಾಡಲಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

    ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಬಿತ್ತರವಾಗುತ್ತಿದ್ದಂತೆ ಜಮೀರ್ ರೇಷನ್ ಕಿಟ್ ಹಂಚಿಕೆ ಮಾಡದಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಬೆಂಬಲಿಗರು ರೇಷನ್ ಕಿಟ್ ಹಂಚಿಕೆ ಕಾರ್ಯಕ್ರಮ ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿತ್ತು.

    ZAMEER

    ಈ ಕುರಿತು ಪ್ರಕಟಣೆ ನೀಡಿದ್ದ ಜಮೀರ್, ರಂಜಾನ್ ಹಬ್ಬದ ಸಮಯದಲ್ಲಿ ಪವಿತ್ರ ನಮಾಜ್ ವೇಳೆ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಲಿ. ಜೊತೆಗೆ ಮತ್ತೊಮ್ಮೆ ತಪ್ಪು ಮಾಡದಂತೆ ಬುದ್ಧಿ ನೀಡಲೆಂದು ಅಲ್ಲಾಹ್ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮೆಕ್ಕಾದಲ್ಲಿ ಪವಿತ್ರ ರಂಜಾನ್ ಆಚರಣೆ ಸೇವೆಯಲ್ಲಿ ತೊಡಗಿದ್ದೇನೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನೆಲೆಯಲ್ಲಿ ತಾಯಂದಿರಿಗೆ ಪುಟ್ಟ ಮಕ್ಕಳಿಗೆ ಸಹಾಯಹಸ್ತ ನೀಡಲಾಗುತ್ತಿದೆ. ಈ ಸಹಾಯ ಹಸ್ತ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ. ನನ್ನ ಸಹಾಯಹಸ್ತ ಯಾವುದೇ ರೀತಿಯ ತಪ್ಪಿತಸ್ಥರಿಗೆ ಸಹಾಯ ಅಲ್ಲ ಹಾಗೂ ಉತ್ತೇಜನವೂ ಅಲ್ಲ ಎಂದು ಹೇಳಿದ್ದರು.

  • ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ನ್ಯಾಯಾಂಗ ತನಿಖೆ ನಡೆಯಲಿ: ಎಸ್‍ಡಿಪಿಐ

    ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ನ್ಯಾಯಾಂಗ ತನಿಖೆ ನಡೆಯಲಿ: ಎಸ್‍ಡಿಪಿಐ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆ ನಡೆಸುವ ಏಕೈಕ ಉದ್ದೇಶದೊಂದಿಗೆ ಸಂಘ ಪರಿವಾರದ ಕಿಡಿಗೇಡಿಯೊಬ್ಬ ಕೋಮುಪ್ರಚೋದನಕಾರಿ ಪೋಸ್ಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು, ಇನ್ನೊಂದು ಸಮುದಾಯ ಕೆರಳುವಂತೆ ಮಾಡಿದ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹೇಳಿದೆ.

    ಬಿಜೆಪಿ ಸರ್ಕಾರದ ಸಾಲು ಸಾಲು ಭ್ರಷ್ಟಾಚಾರದ ವಿಚಾರವನ್ನು ಮತ್ತು 40% ಲಂಚಕ್ಕೆ ಸಂತೋಷ್ ಪಾಟೀಲ್ ಬಲಿ ಪಡೆದು ರಾಜೀನಾಮೆ ನೀಡಿರುವ ಈಶ್ವರಪ್ಪನವರ ಬಂಧನದ ಬೇಡಿಕೆ ವಿಚಾರವನ್ನು ವಿಷಯಾಂತರ ಮಾಡಲು ಈ ಗಲಭೆ ಸೃಷ್ಟಿಸಿರುವ ಸಾಧ್ಯತೆ ಇದೆ. ಹಾಗಾಗಿ ಈ ಇಡೀ ಘಟನೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆಗೆ ಎಸ್‍ಡಿಪಿಐ ಒತ್ತಾಯಿಸುತ್ತಿದೆ. ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

    ಪ್ರಚೋದನಾಕಾರಿ ಪೋಸ್ಟನ್ನು ಹರಿಬಿಟ್ಟ ಕಿಡಿಗೇಡಿಯನ್ನು ಮತ್ತು ಆ ಕೃತ್ಯವನ್ನು ಮಾಡಲು ಪ್ರಚೋದಿಸಿದ ಕಾಣದ ಕೈಗಳಿಗೆ ಕಾನೂನಿನ ಬೇಡಿಯನ್ನು ಹಾಕುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ನಡೆಸಿದ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದು ಪ್ರತಿಭಟನೆಯ ದಿಕ್ಕು ತಪ್ಪಿಸಲಾಗಿದೆ ಎಂದರು. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ

    ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಮದ್ಯದಲ್ಲಿ ಕೆಲವು ಅಪರಿಚಿತರು ನುಸುಳಿ ಕಲ್ಲು ತೂರಾಟ ನಡೆಸಿ ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಕೆಲ ಮಾಧ್ಯಮಗಳಲ್ಲಿ ಪ್ರತಿಭಟನಕಾರರನ್ನು ವಿಲನ್‍ಗಳಾಗಿ ಬಿಂಬಿಸುತ್ತಿರುವುದು ಅತ್ಯಂತ ಖೇದಕರ ಎಂದು ಅವರು ಅಭಿಪ್ರಾಯಪಟ್ಟರು.

    ಪೊಲೀಸ್ ಇಲಾಖೆ ಘಟನೆಗೆ ಕಾರಣಕರ್ತರಾದ ನೈಜ ಕಿಡಿಗೇಡಿಗಳನ್ನು ಬಂಧಿಸದೆ ಮುಸ್ಲಿಂ ಸಮುದಾಯದ ಅಮಾಯಕ ಯುವಕರನ್ನು ಬಂಧಿಸುತ್ತಿರುವುದು ಗಮನಿಸಿದರೆ, ಇದು ಎಂದಿನಂತೆ ಪೊಲೀಸ್ ಇಲಾಖೆಯ ಪೂರ್ವಗ್ರಹ ಪೀಡಿತ ಕ್ರಮದ ಮುಂದುವರಿದ ಭಾಗವಾಗಿದೆ. ಘಟನೆಯ ನೆಪವೊಡ್ಡಿಕೊಂಡು ರಾತ್ರಿ ಹೊತ್ತು ಅಮಾಯಕರ ಮನೆಗಳಿಗೆ ಪೊಲೀಸರು ನುಗ್ಗಿ ವೃದ್ಧರು, ಮಹಿಳೆಯರು, ಮಕ್ಕಳಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    Hubballi Riot

    ಸಮಾಜದಲ್ಲಿ ಸ್ವಾಸ್ಥ್ಯ ಕದಡುತ್ತಿರುವ ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವ ನೈಜ ಕಿಡಿಗೇಡಿಗಳನ್ನು ಹುಡುಕಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಆದ್ದರಿಂದ ಈ ನಿಟ್ಟಿನಲ್ಲಿ ಹುಬ್ಬಳ್ಳಿ ಜನತೆ ಶಾಂತಿ ಸೌಹಾರ್ದತೆ ಕಾಪಾಡಲು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಎಂದು ಎಸ್‍ಡಿಪಿಐ ವಿನಂತಿಸುತ್ತದೆ. ಅದೇ ರೀತಿ ಪೊಲೀಸ್ ಅಧಿಕಾರಿಗಳು ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ನಿಸ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಬ್ದುಲ್ ಹನ್ನಾನ್ ವಿನಂತಿಸಿದ್ದಾರೆ.

  • ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆ ನಡೆದರೂ ಅದಕ್ಕೆ ಕಾಂಗ್ರೆಸ್ ನೇರ ಹೊಣೆ: ಅಶೋಕ್

    ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆ ನಡೆದರೂ ಅದಕ್ಕೆ ಕಾಂಗ್ರೆಸ್ ನೇರ ಹೊಣೆ: ಅಶೋಕ್

    ದಾವಣಗೆರೆ: ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆಗಳು ನಡೆದರೂ, ಇದರ ಹಿಂದೆ ನೇರವಾಗಿ ಕಾಂಗ್ರೆಸ್ ಕೈವಾಡ ಇರುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪ ಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಕಿಳುಮಟ್ಟದ ರಾಜಕೀಯ ಮಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹುಬ್ಬಳ್ಳಿ, ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಹುಬ್ಬಳ್ಳಿ ಕೋಮು ಗಲಭೆಯಲ್ಲಿ ಅಲ್ತಾಫ್ ಹಳ್ಳೂರ ಪ್ರಮುಖ ಆರೋಪಿ. ಆದರೆ ಕಾಂಗ್ರೆಸ್‌ ಇವರನ್ನು ವೇದಿಕೆ ಮೇಲೆ ಕುಳಿಸುತ್ತಾರೆ. ಇವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರೆಲ್ಲವೋ ಎಂಬುದನ್ನು ಸ್ಪಷ್ಟ ಪಡಿಸಲಿ. ಬೇಕಿದ್ದರೇ ನಾವು ಅದನ್ನು ಸಾಬೀತು ಪಡೆಸುತ್ತೇವೆ ಎಂದರು.

    ಈ ರೀತಿ ಗಲಭೆಗಳನ್ನು ಮಾಡುವುದರಿಂದ ರಾಜ್ಯದಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ. ಗಲಾಟೆ ಮಾಡಿದವರನ್ನು ಅಮಾಯಕರು ಎನ್ನುತ್ತಾರೆ ಕಾಂಗ್ರೆಸ್‌ನವರು. ಕಾಂಗ್ರೆಸ್‍ನವರು ನಮ್ಮ ದೇಶದ ಕಾನೂನು ನಂಬಿಲ್ಲ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನದ ಕಾನೂನು ನಂಬುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೆಂಪಣ್ಣ ಕನಕಪುರದ ಕಾಂಗ್ರೆಸ್ ಏಜೆಂಟ್, ಕಾಂಗ್ರೆಸ್ ದಾಸ: ಈಶ್ವರಪ್ಪ

    ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತದೆ. ಹಿಂದೂ ದೇವತೆಗಳ ಮೇಲೆ ಸಾಕಷ್ಟು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ. ಆದಕ್ಕೆ ಯಾರು ಕೂಡ ಕಾನೂನು ಕೈಗೆ ತೆಗೆದುಕೊಂಡಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಕಾನೂನಿನ ಮೇಲೆ ಗೌರವ ಇಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಇಂದು ಸಂಜೆಯೊಳಗೆ ಶರಣಾಗಿ – ನಾಪತ್ತೆಯಾಗಿರುವ 8 ಹುಬ್ಬಳ್ಳಿ ಪುಂಡರಿಗೆ ಡೆಡ್‌ಲೈನ್‌

    ಸ್ವಾಮೀಜಿ ಆದವರು ಯಾವುದೇ ಒಂದು ಪಕ್ಷದ ಎಜೆಂಟ್ ರೀತಿಯಲ್ಲಿ ಮಾತಾಡುವುದು ಸರಿಯಲ್ಲ. ಈಗ ನಾವು ಕಾಗಿನೆಲೆ, ಪೇಜಾವರ ಸ್ವಾಮೀಜಿಗಳಿಗೆ ಸರ್ಕಾರ ಅನುದಾನ ನೀಡಲಾಗಿದೆ. ಯಾರಿಗೂ ಇಲ್ಲದ ಕಮಿಷನ್ ಕಾಟ ಇವರೊಬ್ಬರಿಗೆ ಮಾತ್ರ ಏಕೆ. ಕನಿಷ್ಟ ಯಾರಿಗೆ ಕೊಟ್ಟಿದ್ದೀರಾ ಎನ್ನುವುದನ್ನಾದರೂ ಹೇಳಿ. ಈ ರೀತಿ ಸ್ವಾಮೀಜಿಗಳು ರಾಜಕೀಯ ಭಾಷಣ ಮಾಡುವುದು ಸರಿಯಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.