Tag: Hubli kims

  • ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!

    ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!

    ಹುಬ್ಬಳ್ಳಿ: ಪಾಸಿಟಿವ್ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ಬಂದಿರುವುದರಿಂದ ಈಗ ಜನರಿಗೆ ಕೋವಿಡ್ ರಿಪೋರ್ಟ್ ಮೇಲೆ ಅನುಮಾನ ಶುರುವಾಗಿದೆ.

    ಅಯೋಧ್ಯೆಯಲ್ಲಿ ನಡೆದ ಸೆಮಿನಾರ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಡಿ.2ರಂದು ಹುಬ್ಬಳ್ಳಿಯ ಆಯುರ್ವೇದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ಆದರೆ ಮತ್ತೆ ಶನಿವಾರ (ಡಿ.4) ಟೆಸ್ಟ್ ಮಾಡಿಸಿದಾಗ ನೆಗೆಟಿವ್ ರಿಪೋರ್ಟ್ ಬಂದಿದೆ.

    ಈ ರಿಪೋರ್ಟ್ ನೋಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಕ್ ಆಗಿದ್ದಾರೆ. ಎರಡೇ ದಿನದಲ್ಲಿ ಕೊರೊನಾ ಹೋಯ್ತಾ ಎನ್ನುವ ಪ್ರಶ್ನೆ ಪಾಲಕರಲ್ಲಿ ಕಾಡುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಟೆಸ್ಟ್ ಮಾಡಿಸಿದ್ದರು. ಎರಡು ಬಾರಿಯೂ ಅದೇ ಲ್ಯಾಬ್‌ನಲ್ಲಿ ಟೆಸ್ಟಿಂಗ್ ಮಾಡಿಸಿದ್ದಾರೆ. ಇದರಿಂದಾಗಿ ಕಿಮ್ಸ್ ಲ್ಯಾಬ್ ರಿಸಲ್ಟ್ ಮೇಲೆ ಈಗ ಅನುಮಾನ ಪ್ರಾರಂಭವಾಗಿದೆ. ಇದನ್ನೂ ಓದಿ: ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಉತ್ಪಾದಕತೆ ಹೆಚ್ಚಿಸಿ: ಬಿ.ಸಿ ಪಾಟೀಲ್

    ಎರಡೇ ದಿನದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ನೆಗೆಟಿವ್ ಬಂದಿದ್ದರಿಂದ ಕಾಲೇಜು ಆಡಳಿತ ಮಂಡಳಿಯಿಂದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನ ಕೋಟಿ ಲಸಿಕೆ ನೀಡಿಕೆ-5ನೇ ಸಲ ದಾಖಲೆ

  • 42 ನಿಮಿಷದಲ್ಲಿ 80 ಕಿಮೀ ಚಾಲನೆ – ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ

    42 ನಿಮಿಷದಲ್ಲಿ 80 ಕಿಮೀ ಚಾಲನೆ – ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ

    ಹಾವೇರಿ: ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.

    ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ.

    ಹುಬ್ಬಳ್ಳಿಯ ಹೊರವಲಯಕ್ಕೆ ಅಂಬ್ಯುಲೆನ್ಸ್ ಬರುತ್ತಿದ್ದಂತೆ ಹುಬ್ಬಳ್ಳಿ ಸಂಚಾರಿ ಪೊಲೀಸರು ಅಂಬ್ಯುಲೆನ್ಸಗೆ ಯಾವುದೇ ಟ್ರಾಫಿಕ್ ಸಮಸ್ಯೆ ಬರದಂತೆ ಕಿಮ್ಸ್ ವರೆಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಟ್ರಾಫಿಕ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಅಂಬ್ಯುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ್ ಮತ್ತು ಕುಮಾರ್ ಹಾಗೂ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.