Tag: Hubballi Violence

  • ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ

    ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ

    – ಮತಾಂಧರ ಮೇಲ್ಯಾಕೆ ಪ್ರೀತಿ : ಬಿಜೆಪಿ ಆಕ್ರೋಶ

    ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Violence) ಪ್ರಕರಣ ಸೇರಿ 43 ಕೇಸ್‌ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ 7 ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

    ರಾಷ್ಟ್ರೀಯ ತನಿಖಾ ದಳದ (NIA) ನ್ಯಾಯಾಲಯಕ್ಕೆ ಕೇಸ್‌ ವಾಪಸಾತಿ ಅರ್ಜಿಯನ್ನು ಎಸ್‌ಪಿಪಿ ಮೂಲಕ ಸಲ್ಲಿಸಿದೆ. ಪ್ರಕರಣದ ವಿಚಾರಣೆ ಏಪ್ರಿಲ್ 7ಕ್ಕೆ ಮುಂದೂಡಿಕೆಯಾಗಿದೆ. ಕೇಸ್ ಹಿಂಪಡೆಯುವ ಸರ್ಕಾರದ ತೀರ್ಮಾನ ಆಕ್ಷೇಪಿಸಿ ಇಬ್ಬರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ಮಾರ್ಚ್ 17ರಂದು ನಡೆಯಲಿದೆ.

    ಸರ್ಕಾರದ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡಿರುವವರು ದೇಶ ಪ್ರೇಮಿಗಳಾ? ಇವರಿಗೆ ಯಾವುದರಲ್ಲಿ ಹೊಡಿಯಬೇಕು ಎಂದು ಸಿಟಿ ರವಿ ಸಿಟ್ಟಾಗಿದ್ದಾರೆ.

    Hubballi Riot
    ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರುತ್ತಿರುವ ಕಿಡಿಗೇಡಿಗಳು

    ಸರ್ಕಾರದ ಕಾರಣ ಏನು?
    ಸುಳ್ಳು ಕೇಸ್ ಹಾಕಿದ್ರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ. ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಎಂದು ಸಂಪುಟ ಉಪಸಮಿತಿ ಅಭಿಪ್ರಾಯಪಟ್ಟಿದೆ.

    ಈ ಪ್ರಕರಣದಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ, ವಿದ್ಯಾರ್ಥಿಗಳು, ರೈತರು ಇದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಹಲವು ಕೇಸ್ ವಾಪಸ್ ಪಡೆದಿತ್ತು. ಉತ್ತರ ಪ್ರದೇಶದಲ್ಲೂ ಅಲ್ಲಿನ ಸಿಎಂ ವಿರುದ್ಧದ ಹಲವು ಕೇಸ್ ಹಿಂಪಡೆಯಲಾಗಿದೆ.  ಇದನ್ನೂ ಓದಿ: ಕರ್ನಾಟಕ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ – ಬೆನ್ನು ತಟ್ಟಿಕೊಂಡ ಪರಮೇಶ್ವರ್

    ಏನಿದು ಪ್ರಕರಣ?
    ಏಪ್ರಿಲ್ 16, 202 ರಂದು ಯುವಕನೊಬ್ಬ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು ಉದ್ರಿಕ್ತರು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ 11 ಎಫ್‌ಐಆರ್‌ ದಾಖಲಾಗಿ 155 ಮಂದಿ ಮೇಲೆ ಕೇಸ್‌ ದಾಖಲಾಗಿತ್ತು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್‌ ವಾಹನಗಳಿಗೆ ಹಾನಿಯಾಗಿದ್ದರೆ ಇಬ್ಬರು ಪೊಲೀಸ್‌ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.

    ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವಂತೆ ಡಿಸಿಎಂ ಡಿಕೆ ಶಿವಕುಮಾರ್‌ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಡಿಕೆಶಿ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರಿಗೆ ಎಡಿಜಿಪಿ ಸೂಚಿಸಿದ್ದರು.   2023 ಸೆಪ್ಟೆಂಬರ್‌ನಲ್ಲಿ ಎಲ್ಲಾ ಜಿಲ್ಲೆಗಳ ಎಸ್ಪಿ, ಕಮೀಷನರ್ ಗಳಿಗೆ ಡಿಜಿ-ಐಜಿ ಪತ್ರ ಬರೆದು ನಿಮ್ಮ ಜಿಲ್ಲೆಗಳಲ್ಲಿ ಕೇಸ್ ವಾಪಸ್ ಪಡೆಯುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.

  • ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

    ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

    ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಕೇಸ್ (Hubballi Violence Case) ವಾಪಸ್ ಪಡೆದು ಕಾಂಗ್ರೆಸ್ ಸರ್ಕಾರ ಘನಘೋರ ಅಪರಾಧ ಮಾಡಿದೆ. ಕೇಸ್ ವಾಪಸ್ ಪಡೆದಿರುವುದನ್ನು ನಾವು ವಿರೋಧ ಮಾಡಿ ಮನವಿ ಸಲ್ಲಿಸಲು ಅವಕಾಶ ಕೇಳಿದ್ದೇವೆ. ಆದರೆ ನಮ್ಮ ಮನವಿಯನ್ನು ಸಿಎಂ ಸ್ವೀಕಾರ ಮಾಡುತ್ತಿಲ್ಲ. ಇದು ಮುಖ್ಯಮಂತ್ರಿಗಳ ದುರಹಂಕಾರ ತೋರಿಸುತ್ತದೆ. ಈ ಮೂಲಕ ಸಿದ್ದರಾಮಯ್ಯ (CM Siddaramaiah) ಭಯೋತ್ಪಾದಕರ ಬೆಂಬಲಿಗರು ಎಂಬತಾಗುತ್ತದೆ. ನಾವು ಮನವಿ ಕೊಡೋದು ತಪ್ಪಾ? ಇದು ಎಂತಹ ಅಪಹ್ಯಾಸ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಸಿರಾಜ್‌ – ಪೊಲೀಸ್‌ ಡ್ರೆಸ್‌ನಲ್ಲಿ ವೇಗಿ

    ನಾವು ಸಮಾಜ ವಿದ್ರೋಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮತಾಂಧರು ಪೊಲೀಸರ ಹತ್ಯೆ ಮಾಡಲು, ಠಾಣೆ ಸುಡಲು ಪ್ರಯತ್ನ ಮಾಡಿದ್ದರು. ಆದರೆ ಇಂದು ಕೇಸ್ ವಾಪಸ್ ಪಡೆದಿರುವುದು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸರು ಇಂದು ಅನೇಕ ರೋಡ್ ಬಂದ್ ಮಾಡುತ್ತಿದ್ದಾರೆ. ಕ್ಷುಲ್ಲಕ, ವೋಟ್‌ಬ್ಯಾಂಕ್ ರಾಜಕೀಯಕ್ಕೆ ಮಿತಿ ಇರಬೇಕು. ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಯಾವಾಗಲೂ ಬೆಂಬಲ ನೀಡುತ್ತಿದೆ. ನಮ್ಮ ಮನವಿ ಸಿಎಂ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ. ಅವರು ಸ್ವೀಕಾರ ಮಾಡಿಲ್ಲ ಅಂದರೆ ನಾನು ನುಗ್ಗಿ ಮನವಿ ನೀಡುತ್ತೇವೆ ಎಂದಿದ್ದಾರೆ.

    ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸು ಪಡೆದಿದ್ದು, ತಪ್ಪು ಎಂದು ಗೊತ್ತಾಗಿದೆ. ಅಧಿಕಾರ ಹೋಗುತ್ತದೆ ಎನ್ನುವ ಚಿಂತೆಯಲ್ಲಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ನಾನು ಸಾಕಷ್ಟು ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ನೋಡಿದ್ದೇನೆ. ಆದರೆ ಈ ಮಟ್ಟಕ್ಕೆ ಮಾನಸಿಕ ಸಮತೋಲನ ಕಳೆದುಕೊಳ್ಳುವ ಹಂತಕ್ಕೆ ಹೋಗಿರಲಿಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇದು ಸಣ್ಣ ಆಲೋಚನೆಯಾಗಿದೆ. ಹಿಂದೂಪರ ಸಂಘಟನೆಗಳ ಕೇಸ್ ವಾಪಸ್ ಪಡೆದಿದ್ದಾರೆ ಎಂದಿದ್ದಾರೆ. ಆದರೆ ಭಜರಂಗದಳ, ವಿಶ್ವ ಹಿಂದೂ ಪರಿಷತ್ತು. ಲಷ್ಕರ್ ತೊಯ್ಬಾ ಜೊತೆಗೆ ಲಿಂಕ್ ಇಲ್ಲ. ಆದರೆ ಇಲ್ಲಿ ಕೆಲವರು ಲಿಂಕ್ ಇದ್ದಾರೆ ಎಂದರು.

    ಇದುವರೆಗೆ ಆರ್‌ಎಸ್‌ಎಸ್ ಮೇಲಿನ ಯಾವುದೇ ಆರೋಪ ಸಾಬೀತು ಆಗಿಲ್ಲ. ಆರ್‌ಎಸ್‌ಎಸ್ (RSS) ದೇಶಭಕ್ತ, ಸಾಂಸ್ಕೃತಿಕ ಸಂಘಟನೆಯಾಗಿದೆ. ದೇಶದ ಪ್ರಧಾನಿಮಂತ್ರಿ ಆರ್‌ಎಸ್‌ಎಸ್, ನಾನು ಆರ್‌ಎಸ್‌ಎಸ್. ನಕಲಿ ಗಾಂಧಿಗಳ ಮನವೊಲಿಸಲು ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ವಿರೋಧ ಮಾಡುತ್ತಾರೆ. ಇದು ದುರ್ದೈವ, ನಾಚಿಕೆಗೇಡಿನ ಸಂಗತಿ. ನಿಮಗೆ ನಾಚಿಕೆ ಆಗುವುದಿಲ್ಲವಾ ಆರ್‌ಎಸ್‌ಎಸ್ ಬಗ್ಗೆ ವಿನಾಕಾರಣ ಮಾತನಾಡಲು ಎಂದು ಕಿಡಿಕಾರಿದರು.ಇದನ್ನೂ ಓದಿ: ಒಳಮೀಸಲಾತಿಗೆ ಕಾಂಗ್ರೆಸ್ ಮಾತ್ರ ಮೀನಾಮೇಷ ಎಣಿಸುತ್ತಿದೆ – ಆರ್.ಅಶೋಕ್

  • ಏನೇ ಆಗಲಿ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಾನೇ – ಹೆಚ್‌ಡಿಕೆ

    ಏನೇ ಆಗಲಿ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಾನೇ – ಹೆಚ್‌ಡಿಕೆ

    -ಗಲಭೆಕೋರರಿಗೆ ಸರ್ಕಾರದಿಂದಲೇ ರಕ್ಷಣೆ; ಕೇಂದ್ರ ಸಚಿವ ವಾಗ್ದಾಳಿ

    ದಾವಣಗೆರೆ: ಏನೇ ಆಗಲಿ ಚನ್ನಪಟ್ಟಣದಲ್ಲಿ ಎನ್‌ಡಿಎ (NDA) ಅಭ್ಯರ್ಥಿ ನಾನೇ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಹೇಳಿದ್ದಾರೆ.

    ಜಿಲ್ಲೆಯಲ್ಲಿ ಜೆಡಿಎಸ್ (JDS) ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿರುವ ಅವರು, ತ್ರಿಶೂಲ್ ಕಲಾಭವನದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದರು.ಇದನ್ನೂ ಓದಿ: ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ

    ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ವೆಸ್ಟೆಂಡ್ ಹೊಟೇಲ್‌ನಲ್ಲಿ ಇದ್ದಿದ್ದು ನಿಜ. ಇದೇ ಬಾಲಕೃಷ್ಣ ಬಗ್ಗೆ ಸಿದ್ದರಾಮಯ್ಯ (CM Siddaramaiah) ಹಾಗೂ ಮಹಾದೇವಪ್ಪ ಆರು ನೂರು ಕೋಟಿ ಹಣ ರೂ. ಕಾಮಗಾರಿ ಮಾಡದೇ ಬಿಲ್ ಮಾಡಿಕೊಂಡಿದ್ದಾರೆ ಎಂದು ವಿಧಾನ ಸಭೆಯಲ್ಲಿ ಆರೋಪ ಮಾಡಿದ್ದರು. ಅಂತವರನ್ನೆ ಸಿಎಂ ಜೊತೆಗಿಟ್ಟು ಕೊಂಡಿದ್ದಾರೆ. ಇವರು ನಾನು ಸಿಎಂ ಆಗಿದ್ದಾಗಲೂ ನನ್ನ ಜೊತೆಗೆ ಇದ್ದಾರೆ. ಆಗ ಚೂರಿ ಹಾಕಿ ಬಿಟ್ಟು ಹೋಗಿದ್ದರು. ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ? ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ. ಏನೇ ಆಗಲಿ ಎನ್‌ಡಿಎ ಅಭ್ಯರ್ಥಿ ನಾನೇ ಎಂದು ಕಿಡಿಕಾರಿದ್ದಾರೆ.

    ತಮ್ಮ ವಿರುದ್ಧದ ಪ್ರಕರಣ ಕುರಿತು ಮಾತಾನಾಡಿ, ನ್ಯಾಯಾಲಯದಲ್ಲಿ ಫೈಟ್ ಮಾಡೋಣ ಅದರ ಬಗ್ಗೆ ಈಗ ಚರ್ಚೆ ಬೇಡ. ದೂರು ಕೊಟ್ಟಿದ್ದಾರೆ ಅದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ನನ್ನ ಕೇಸ್ 2012 ರಿಂದ ಎಸ್‌ಐಟಿಯಲ್ಲಿ ನಡೆಯುತ್ತಿದೆ. ಹತ್ತು ವರ್ಷ ಆದರೂ ಅದನ್ನು ಯಾಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದೀರಿ. ನಾನು ಸಂವಿಧಾನ ಬದ್ಧ ರಾಜ್ಯಪಾಲರ ವಿಷಯಕ್ಕೆ ಸಂಭಂಧಿಸಿದಂತೆ ಮಾತಾಡಿದ್ದೆ. ನನ್ನ ಮೇಲೆ ಕೇಸ್ ಹಾಕಿದ್ದಾರೆ. ಇದಕ್ಕೆಲ್ಲ ಕೋರ್ಟ್ನಲ್ಲಿ ಉತ್ತರ ಕೊಡುವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಹುಬ್ಬಳ್ಳಿ ಪ್ರಕರಣದ ಕೇಸ್ ಹಿಂಪಡೆಯುವ ಸರ್ಕಾರದ ನಿರ್ಧಾರ ವಿಚಾರವಾಗಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ಹಿಂದಿನ ಹಲವು ಪ್ರಕರಣದ ಕೇಸ್‌ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಕೇಸ್‌ಗಳನ್ನು ವಾಪಸ್ ಪಡೆಯಬೇಕಾದರೆ ಅದರ ಆಳ ಏನಿದೆ ಎಂದು ನೋಡಬೇಕು. ಇದರಿಂದ ಗಲಭೆಕೋರರು ಬಚಾವ್ ಆಗಬಹುದು. ಗಲಭೆಕೋರರಿಗೆ ಸರ್ಕಾರದ ಕಡೆಯಿಂದಲೇ ರಕ್ಷಣೆ ನೀಡಲಾಗುತ್ತಿದೆ. ದ್ವೇಷದ ರಾಜಕಾರಣ ಒಂದು ಕಡೆ ಹಾಗೂ ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಕಾಂಗ್ರೆಸ್‌ಗೆ ಇಷ್ಟ ಇಲ್ಲ ಎಂದು ಆರೋಪಿಸಿದರು.

    ಸರ್ಕಾರ ಜಾಹೀರಾತು ವಿಚಾರವಾಗಿ ಮಾತನಾಡಿ, ಸರ್ಕಾರ ಜಾಹೀರಾತಿಗಾಗಿ 17 ಕೋಟಿ ರೂ. ಹಣ ವ್ಯಯ ಮಾಡಿದೆ. ಅದರಲ್ಲಿ ಒಂದು ಪಂಚಾಯತಿಯಲ್ಲಿ ಮಾಡೆಲ್ ಮಾಡಬಹುದಿತ್ತು. ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯಲಾಗುತ್ತಿದೆ ಎಂದರು.ಇದನ್ನೂ ಓದಿ: ಚನ್ನಪಟ್ಟಣ ಚುನಾವಣೆಗೆ ನನ್ನ ಕುಟುಂಬದವರಲ್ಲ, ನಾನೇ ಅಭ್ಯರ್ಥಿ – ಡಿಕೆಶಿ

  • ಬಿಜೆಪಿ ಅಧಿಕಾರದಲ್ಲಿದ್ದಾಗ RSS ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ರಲ್ಲಾ – ಸಿಎಂ ಪ್ರಶ್ನೆ

    ಬಿಜೆಪಿ ಅಧಿಕಾರದಲ್ಲಿದ್ದಾಗ RSS ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ರಲ್ಲಾ – ಸಿಎಂ ಪ್ರಶ್ನೆ

    – ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಬಗ್ಗೆ ಪ್ರತಿಕ್ರಿಯೆ

    ಮೈಸೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್ (RSS)ಮೇಲಿನ ಕೇಸ್ ವಾಪಾಸ್ ತೆಗೆದುಕೊಂಡಿದ್ದರಲ್ಲ ಅದು ಏನಂಥೆ? ಎಂದು ಹುಬ್ಬಳ್ಳಿ ಗಲಭೆ ಕೇಸ್ ವಿಚಾರವಾಗಿ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಕೇಸ್ (Hubballi Violence) ವಾಪಸ್‌ಗೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಮಾತನಾಡಿದರು. ಬಿಜೆಪಿಯವರು ಯಾವಾಗಲೂ ಹಾಗೇ ವಿರೋಧ ವ್ಯಕ್ತಪಡಿಸುತ್ತಾರೆ. ಪ್ರತಿಭಟನೆ ಬೇಕಾದರೆ ಮಾಡಲಿ, ಕ್ಯಾಬಿನೆಟ್ ಸಬ್ ಕಮಿಟಿಯಿಂದ ತೀರ್ಮಾನ ಆಗಿದ್ದು, ನಂತರ ಕಾನೂನು ಅಡಿಯಲ್ಲಿ ಕೇಸ್ ವಾಪಸ್ ಪಡೆಯಲಾಗಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್ ಮೇಲಿನ ಕೇಸ್ ವಾಪಾಸ್ ತೆಗೆದುಕೊಂಡಿದ್ದರಲ್ಲ ಅದು ಏನಂಥೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಚುನಾವಣಾ ಫಲಿತಾಂಶದ ದಿನ ವಾಟ್ಸಪ್ ಗ್ರೂಪ್‌ನಲ್ಲಿ ಹರಿಯಾಣ ಸಿಎಂಗೆ ಕೊಲೆ ಬೆದರಿಕೆ – ಆರೋಪಿ ಅರೆಸ್ಟ್‌

    ಇದೇ ವೇಳೆ ಕೇಂದ್ರದಿಂದ ತೆರಿಗೆ ಪಾಲು ವಿಚಾರವಾಗಿ ಮಾತನಾಡಿ, ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ. ಪದೇ ಪದೇ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಉತ್ತರ ಪ್ರದೇಶಕ್ಕೆ ಜಾಸ್ತಿ ಕೊಟ್ಟಿದ್ದಾರೆ. ಕರ್ನಾಟಕದ ಎಂಪಿಗಳು ಈ ಕುರಿತು ಧ್ವನಿ ಎತ್ತಬೇಕು. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡಲ್ಲ. ಜೋಶಿ ಸೇರಿದಂತೆ ಯಾರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನೂ ನಾಡಹಬ್ಬ ಮೈಸೂರು ದಸರಾ ಕುರಿತು ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಹೆಚ್ಚು ಜನರು ಪಾಲ್ಗೊಂಡಿದ್ದರು. ನೀವೆಲ್ಲರೂ ಯಶಸ್ವಿ ಅಂದರೆ ದಸರಾ ಯಶಸ್ವಿ ಆದ ಹಾಗೇ. ಎಲ್ಲರೂ ಖುಷಿಯಾಗಿ ದಸರಾ ನೋಡಿದ್ದಾರೆ. ಎಲ್ಲರೂ ಖುಷಿಯಾಗಿ ಇದ್ದರೆ ನಮಗೂ ಖುಷಿ. ಅದ್ದೂರಿ ದಸರಾ ಮಾಡುವುದಕ್ಕೆ ನಮ್ಮೆಲ್ಲ ಅಧಿಕಾರಿಗಳು ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು.

    ಏನಿದು ಪ್ರಕರಣ?

    ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಲು ನಿರ್ಧರಿಸಿತ್ತು.  ಈ ಹಿನ್ನೆಲೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣವನ್ನು ವಾಪಸ್‌ ಪಡೆದುಕೊಂಡಿತ್ತು. ಈ ನಿರ್ಧಾರದ ಬೆನ್ನಲ್ಲೇ ಬಿಜೆಪಿ (BJP) ಆಕ್ರೋಶ ವ್ಯಕ್ತಪಡಿಸಿತ್ತು.. ಇದನ್ನೂ ಓದಿ: ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

  • ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    ಹುಬ್ಬಳ್ಳಿ: ಇಲ್ಲಿನ ಗಲಭೆ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಗಲಭೆ ವೇಳೆ ಉದ್ರಿಕ್ತರ ಗುಂಪು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್‍ಗಳ ಹತ್ಯೆಗೆ ಪ್ರಯತ್ನಿಸಿದೆ. ಆದರೆ ಅದೃಷ್ಟವಶಾತ್ ಆ ಇಬ್ಬರು ಪೊಲೀಸರು ಪ್ರಾಣಾಯದಿಂದ ಪಾರಾಗಿದ್ದಾರೆ.

    HUBBALLI_ MOULVI 1

    ಕಬಾಸ್‍ಪೇಟೆ ಠಾಣೆಯ ಅನಿಲ್ ಖಾಂಡೇಕರ್ ಮತ್ತು ಮಂಜುನಾಥ್ ನೀಡಿರುವ ದೂರಿನ ಆಧಾರದ ಮೇಲೆ ಕಬಾಸ್‍ಪೇಟೆ ಠಾಣೆಯಲ್ಲಿ ಎಫ್‍ಐಆರ್ ನಮೂದಾಗಿದೆ. ಮಾರ್ಚ್ 16ರ ರಾತ್ರಿ ಗಲಾಟೆ ವಿಚಾರ ತಿಳಿದು ಹಳೇ ಹುಬ್ಬಳ್ಳಿ ಠಾಣೆ ಕಡೆಗೆ ಬೈಕಲ್ಲಿ ತೆರಳುವಾಗ ದಿಡ್ಡಿ ಓಣಿ ಹನುಮಪ್ಪನ ಗುಡಿ ಬಳಿ 100ರಿಂದ 150 ಜನರಿದ್ದ ಉದ್ರಿಕ್ತರ ಗುಂಪು ನಮ್ಮ ಬೈಕ್ ತಡೆದು, ನಿಂದಿಸುತ್ತಾ ಹಲ್ಲೆಗೆ ಯತ್ನಿಸಿತು. ಇದನ್ನೂ ಓದಿ: ಮಸೀದಿ ಮೈಕ್ ವಿರುದ್ಧ ಕ್ರಮಕ್ಕೆ ಡೆಡ್‍ಲೈನ್- ರಂಜಾನ್ ಒಳಗೆ ತೆರವಾಗದಿದ್ರೆ ಮಹಾ ಆರತಿ ಎಚ್ಚರಿಕೆ

    ಪ್ರವಾದಿ ಅಪಮಾನಿಸಿದ ಆರೋಪಿಯನ್ನು ಏಕೆ ಇನ್ನೂ ಬಂಧಿಸಿಲ್ಲ ಎಂದು ಅವಾಜ್ ಹಾಕಿದ್ರು. ಕೊನೆಗೆ ನಾವು ಬೈಕ್ ಬಿಟ್ಟು ಸ್ವಲ್ಪ ಮುಂದೆ ಹೋದಾಗ, ಇವ್ರನ್ನು ಬಿಡಬ್ಯಾಡ ಕೊಲ್ರಿ ಎಂಬ ಧ್ವನಿ ಕೇಳಿಬಂತು. ಇದರಿಂದ ಪ್ರಚೋದನೆಗೊಂಡ ಐದಾರು ಮಂದಿ ಪುಂಡರು, ಕೊಲೆ ಮಾಡುವ ಉದ್ದೇಶದಿಂದಲೇ ನಮ್ಮ ಮೇಲೆ ಸೈಜು ಗಲ್ಲು ಎಸೆದ್ರು. ಇದ್ರಿಂದ ನಾವು ತಪ್ಪಿಸಿಕೊಂಡೆವು. ಇದೇ ಕೋಪದಲ್ಲಿ ನಮ್ಮ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಕಲ್ಲು ಹಾಕಿದ್ದಾರೆ ಅಂತ ಪೊಲೀಸರು ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಮಧ್ಯೆ, ಮಾರ್ಚ್ 16ರ ರಾತ್ರಿ, 20ಕ್ಕೂ ಹೆಚ್ಚು ಮಂದಿಯಿದ್ದ ಉದ್ರಿಕ್ತರ ಗುಂಪು ಪೊಲೀಸ್ ಜೀಪ್ ಉರುಳಿಸುವ ದೃಶ್ಯಗಳು ಹೊರಗೆ ಬಂದಿವೆ.

    ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಪೊಲೀಸ್ ಕಾರು ಹತ್ತಿ ನಿಂತು ಪ್ರಚೋದನಕಾರಿ ಹೇಳಿಕೆ ನೀಡಿದ್ದವನು ಮೌಲ್ವಿಯಲ್ಲ. ಆತ ಮೌಲ್ವಿ ವೇಷದಲ್ಲಿದ್ದ ಲಾರಿ ಚಾಲಕ ವಾಸೀಂ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇತ್ತೀಚಿಗೆ ಮೌಲ್ವಿ ವೇಷ ಹಾಕಿದ್ದ ವಾಸೀಂ ಪ್ರಚೋದನಾಕಾರಿ ಭಾಷಣಗಳ ಮೂಲಕ ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಈ ವಾಸಿಂ ಎಲ್ಲಿದ್ದಾನೆ ಎನ್ನುವುದು ಪೊಲೀಸರಿಗೆ ಗೊತ್ತಾಗಿಲ್ಲ. ಹೈದ್ರಾಬಾದ್‍ನಲ್ಲಿ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ಅತ್ತ ಈಗಾಗಲೇ 200ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸ್ರು, 115 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರನ್ನು ಬಿಟ್ಟು ಕಳಿಸಿದ್ದಾರೆ. ಆದರೆ ತಲೆಮರೆಸಿಕೊಂಡಿರುವ ಇನ್ನಷ್ಟು ಪುಂಡರ ಪತ್ತೆಗೆ ಪೊಲೀಸರು ಮೂರು ಸೂತ್ರ ಅನುಸರಿಸ್ತಿದ್ದಾರೆ. ಈ ಮಧ್ಯೆ ಹುಬ್ಬಳ್ಳಿಯಲ್ಲಿ ಏಪ್ರಿಲ್ 23ರವರೆಗೂ ನಿಷೇಧಾಜ್ಞೆಯನ್ನು ಪೊಲೀಸ್ ಇಲಾಖೆ ವಿಸ್ತರಿಸಿದೆ.

  • ಹುಬ್ಬಳ್ಳಿ ಗಲಭೆ ಹಿಂದೆ ವ್ಯವಸ್ಥಿತ ಪಿತೂರಿ- ಶಿರಚ್ಛೇದದ ಮಾತು, RSS ವಿರುದ್ಧ ಘೋಷಣೆ

    ಹುಬ್ಬಳ್ಳಿ ಗಲಭೆ ಹಿಂದೆ ವ್ಯವಸ್ಥಿತ ಪಿತೂರಿ- ಶಿರಚ್ಛೇದದ ಮಾತು, RSS ವಿರುದ್ಧ ಘೋಷಣೆ

    ಹುಬ್ಬಳ್ಳಿ: ಶನಿವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ, ಪ್ರಚೋದಿತ ಎಂಬುದು ಸ್ಪಷ್ಟವಾಗುತ್ತಿದೆ. ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಮತ್ತಷ್ಟು ದೃಶ್ಯಗಳು ಹೊರಬಂದಿದ್ದು, ಅದರಲ್ಲಿ ಕಿಡಿಗೇಡಿಗಳು ಬಳಸಿದ ಪದಗಳು, ತೋರಿದ ರೋಷಾವೇಶಗಳೆಲ್ಲಾ ಗಲಭೆಗೆ ಪ್ರಚೋದನೆ ನೀಡುವಂತೆ ಇರೋದು ಸ್ಪಷ್ಟವಾಗಿದೆ.

    ಉದ್ರಿಕ್ತರಂತೂ, ಪ್ರವಾದಿಗೆ ಅಪಮಾನ ಮಾಡಿದವನನ್ನು ನಮಗೆ ಒಪ್ಪಿಸಿ, ರುಂಡ ಚೆಂಡಾಡ್ತೀವಿ. ಶಿರಚ್ಛೇದ ಮಾಡ್ತೀವಿ ಎಂದು ಅಬ್ಬರಿಸಿದ್ರೆ, ಇನ್ನೂ ಕೆಲವರು ಸಮಾಧಾನ ಮಾಡಲು ನೋಡಿದ್ದಾರೆ. ಅವರ ಮೇಲೆ ಎಫ್‍ಐಆರ್ ಆಗಿದ್ಯಪ್ಪಾ ಅರೆಸ್ಟ್ ಆಗಿದ್ದಾನೆ. ನಡೀರಿ ಇಲ್ಲಿಂದ ಹೋಗೋಣ ಎಂದು ಹೇಳಿದ್ರೂ, ಕೇಳದ ಉದ್ರಿಕ್ತರು, ಅವನು ಮೂರೇ ತಿಂಗಳಲ್ಲಿ ಬೇಲ್ ಪಡೆದು ಹೊರಗೆ ಬರ್ತಾನೆ. ಅವನನ್ನ ಹೊರಗೆ ಕರೆಸಿ. ನಾವೇ ನೋಡಿಕೊಳ್ತೇವೆ ಎನ್ನುತ್ತಾರೆ.

    ಎಫ್‍ಐಆರ್ ಆದ್ಮೇಲೆ ಮುಗೀತು.. ನಡೀರಿ.. ನಡೀರಿ ಅಂದ್ರೆ, ಇಲ್ಲ ನಾವಿಲ್ಲಿ ಕೂತ್ಕೋತೇವೆ.. ಎನ್ನುತ್ತಾ ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗುತ್ತಾರೆ. ಇಷ್ಟಕ್ಕೆ ಸೀಮಿತವಾಗದ ಆಕ್ರೋಶಿತರು, ಆರ್‍ಎಸ್‍ಎಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.. ಇಷ್ಟೆಲ್ಲಾ ಪ್ರಚೋದನಾಕಾರಿ ಬೆಳವಣಿಗೆ ಆದ್ಮೇಲೆ, ಠಾಣೆ, ದೇಗುಲ, ಆಸ್ಪತ್ರೆಗಳನ್ನು ಟಾರ್ಗೆಟ್ ಮಾಡಿದ ಕಿಡಿಗೇಡಿಗಳ ಗುಂಪು ದಾಂಧಲೆ ಎಬ್ಬಿಸಿದೆ. ಮೌಲ್ವಿಯ ಮತ್ತೊಂದು ವಿಡಿಯೋ ಕೂಡ ರಿಲೀಸ್ ಆಗಿದೆ. ಈ ಗಲಭೆ ಹಿಂದೆ ದೊಡ್ಡ ಷಡ್ಯಂತ್ರ್ಯವೇ ಇದೆ ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದಾರೆ.

    ಇತ್ತ ಗಲಭೆ ಕೇಸ್ ತನಿಖೆ ತೀವ್ರಗೊಂಡಿದೆ. ಸೋಮವಾರ ಮತ್ತು ಇಂದು ಬಂಧಿಸಲ್ಪಟ್ಟ 19 ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಪೈಕಿ ಆರು ಮಂದಿ ರೌಡಿ ಶೀಟರ್‍ಗಳು ಇದ್ದಾರೆ. ಪೊಲೀಸ್ ಕಾರ್ ಮೇಲೆ ನಿಂತು ಪ್ರಚೋದನಾಕಾರಿ ಭಾಷಣ ಮಾಡಿದ್ದ ಎನ್ನಲಾದ ಮೌಲ್ವಿ ವಾಸೀಂ ಗಲಭೆಯ ಮಾಸ್ಟರ್ ಮೈಂಡ್ ಎಂಬ ಮಾತು ಕೇಳಿಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – ಬಂಧಿತ ಆರೋಪಿಗಳು ಕಲಬುರಗಿ ಜೈಲಿಗೆ ಶಿಫ್ಟ್

    ಕಳೆದ ಮೂರು ದಿನಗಳಿಂದ ತಲೆ ಮರೆಸಿಕೊಂಡಿರೋ ಮೌಲ್ವಿ ಪತ್ತೆಗೆ ಶಿಗ್ಗಾಂವಿ, ಬೆಳಗಾವಿನಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಮೌಲ್ವಿ 8 ಕಿಡಿಗೇಡಿಗಳ ಜೊತೆ ಆ ಮೌಲ್ವಿ ಹೈದ್ರಾಬಾದ್‍ಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಹೀಗಾಗಿ ವಾಸಿಂ ಎಲ್ಲೇ ಇದ್ರೂ ನಾಳೆಯೊಳಗೆ ಸರೆಂಡರ್ ಆಗ್ಬೇಕು.. ಇಲ್ಲದೇ ಹೋದ್ರೇ ಮುಂದಾಗೋ ಪರಿಣಾಮಗಳಿಗೆ ಆತನೇ ಜವಾಬ್ದಾರಿ ಆಗ್ತಾನೆ ಎಂದು ಮೌಲ್ವಿ ಕುಟುಂಬಸ್ಥರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ನು ಇವತ್ತು ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಈ ವೇಳೆ ಪೋಷಕರು, ನಮ್ಮ ಮಕ್ಕಳನ್ನು ಬಿಡಿ ಎಂದು ಕಣ್ಣೀರು ಇಟ್ಟಿದ್ದಾರೆ.

    ಈ ಮಧ್ಯೆ ಬಂಧಿತರ ಬಿಡುಗಡೆಗೆ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದ ವಿಷಯ ತಿಳಿದ ಪೊಲೀಸರು, ಎಲ್ಲಾ 90 ಆರೋಪಿಗಳನ್ನು ದಿಢೀರ್ ಕಲಬುರಗಿ ಜೈಲ್‍ಗೆ ಶಿಫ್ಟ್ ಮಾಡಿದ್ದಾರೆ. ಅತ್ತ ಅಮಾಯಕರ ಬಂಧನ ಮಾಡಿಲ್ಲ ಎನ್ನುವ ಮೂಲಕ ಸಿಎಂ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್

  • ಹುಬ್ಬಳ್ಳಿ ಗಲಭೆ ಪ್ರಕರಣ – ಬಂಧಿತ ಆರೋಪಿಗಳು ಕಲಬುರಗಿ ಜೈಲಿಗೆ ಶಿಫ್ಟ್

    ಹುಬ್ಬಳ್ಳಿ ಗಲಭೆ ಪ್ರಕರಣ – ಬಂಧಿತ ಆರೋಪಿಗಳು ಕಲಬುರಗಿ ಜೈಲಿಗೆ ಶಿಫ್ಟ್

    ಕಲಬುರಗಿ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಪೊಲೀಸ್ ಬಂದೋಬಸ್ತ್‍ನಲ್ಲಿ ಹುಬ್ಬಳ್ಳಿಯಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

    ಗಲಭೆಯಲ್ಲಿ ಭಾಗಿಯಾದ 103 ಜನ ಆರೋಪಿಗಳನ್ನು ಮುಂಜಾಗೃತಾ ಕ್ರಮವಾಗಿ ಹುಬ್ಬಳ್ಳಿಯಿಂದ ಕಲಬುರಗಿಗೆ ಕರೆತರಲಾಗಿದೆ. ಹುಬ್ಬಳ್ಳಿಯಿಂದ ನಾಲ್ಕು ಪೋಲಿಸ್ ವಾಹನಗಳಲ್ಲಿ ಕಲಬುರಗಿಗೆ ಕರೆತರಲಾಗಿದೆ. ಕಾರಾಗೃಹದ ಬಳಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಒಳ ಬಿಡಲಾಗಿದೆ. ಕೇಂದ್ರ ಕಾರಾಗೃಹ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಹುಬ್ಬಳಿಯಲ್ಲಿ ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರೋಪಿಗಳು ಇವರಾಗಿದ್ದಾರೆ.

  • ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈ

    ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈ

    ದಾವಣಗೆರೆ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಕಾರಣರಾದವರನ್ನು ಕಾಂಗ್ರೆಸ್ ನಾಯಕರು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಮುಸ್ಲಿಂ ನಾಯಕ ಅಲ್ತಾಫ್ ಹಳ್ಳೂರು ಭಾಗಿ ಆಗಿರುವುದು ಜಗಜ್ಜಾಹೀರವಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅಮಾಯಕರನ್ನು ಬಂಧಿಸಬೇಡಿ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಭೆ ಮಾಡಿದವರನ್ನು ಕಾಂಗ್ರೆಸ್ ನಾಯಕರು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    Hubballi Riot

    ಸಿದ್ದರಾಮಯ್ಯನವರಿಗೆ ಇದು ಶೋಭೆ ತರುವ ಕೆಲಸ ಅಲ್ಲ. ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಮಾತನಾಡಬಾರದು. ಸ್ಥಳಕ್ಕೆ ಹೋಗಿ ನೋಡಿಕೊಂಡು ಬರಬೇಕು ಎಂದು ಕೇಳಿಕೊಳ್ಳುತ್ತೇನೆ. ವಾಸ್ತವ ಸ್ಥಿತಿ ನೋಡಿ ಮಾತನಾಡಲಿ ಎಂದ ಅವರು, ಅರಗ ಜ್ಞಾನೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಘಟನೆ ನಡೆದಾಗ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

    Siddaramaiah

    ಯಾರೋ ಒಬ್ಬರು ಹೇಳಿಕೆ ನೀಡುತ್ತಾರೆ ಅಂದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಟಾಂಗ್ ಕೊಟ್ಟರು.‌ ಒಳ್ಳೆಯ ಗೃಹ ಸಚಿವರು ಬೇಕು ಎಂದು ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದನ್ನು ಪರಿಗಣಿಸಲಾಗುತ್ತದೆ ಎಂದರು. ಇದನ್ನೂ ಓದಿ: ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಬಿಸಿ ನಾಗೇಶ್

    ದಿಂಗಲೇಶ್ವರ ಶ್ರೀ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿಎಂ ಹೇಳಿಕೆ ನೀಡಿದ್ದಾರೆ. ಒಬ್ಬ ಸ್ವಾಮೀಜಿ ಆದವರು ಈ ರೀತಿಯಾಗಿ ಹೇಳುವುದು ಶೋಭೆ ತರುವುದಲ್ಲ. ಈಶ್ವರಪ್ಪ ಅದಷ್ಟು ಬೇಗ ಆರೋಪ ಮುಕ್ತರಾಗಿ ಬರುತ್ತಾರೆ. ಅವರು ಯಾವ ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಇತ್ತೀಚೆಗೆ ಪರೀಕ್ಷೆ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಮಾತನಾಡಿ, ರಾಜ್ಯದಲ್ಲಿ ಕೋಮು ಸಾಮರಸ್ಯ ಕದಲುವ ಯತ್ನ ನಡೆಯುತ್ತಿವೆ. ಮೊದಲು ರಾಜ್ಯದಲ್ಲಿ ಕೋಮು ಸಾಮರಸ್ಯ ಇತ್ತು. ಈಗಲೂ ಕೂಡಾ ರಾಜ್ಯದಲ್ಲಿ ಸಾಮರಸ್ಯ ಇದೆ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಎಂದು ಆರೋಪಿಸಿದರು.

    ಮಿಷನ್ 150 ಟಾರ್ಗೆಟ್ ಇಟ್ಟುಕೊಂಡು ರಾಜ್ಯವ್ಯಾಪಿ ಕಾರ್ಯಕ್ರಮ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಈಗಾಗಲೇ ವಿಜಯನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಚುನಾವಣೆಗೂ ಒಂದು ವರ್ಷ ಮೊದಲೇ ಪಕ್ಷದ ಸಂಘಟನೆಗೆ ಮುಂದಾಗಿದ್ದೇವೆ. ಪಂಚರಾಜ್ಯಗಳ ಫಲಿತಾಂಶ ಬಿಜೆಪಿಯಲ್ಲಿ ಹೊಸ ರೀತಿ ಉತ್ಸವ ಬಂದಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸ ಬಿಜೆಪಿ‌ ಮಾಡುತ್ತಿದೆ ಎಂದರು.

  • ಹುಬ್ಬಳ್ಳಿ ಗಲಭೆ: ಮತ್ತೆ 15 ಜನರ ಬಂಧನ

    ಹುಬ್ಬಳ್ಳಿ ಗಲಭೆ: ಮತ್ತೆ 15 ಜನರ ಬಂಧನ

    ಹುಬ್ಬಳ್ಳಿ: ಇಲ್ಲಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ 15 ಜನರನ್ನು ಬಂಧಿಸಲಾಗಿದ್ದು, ಒಟ್ಟು 12 FIRಗಳನ್ನು ದಾಖಲಾಗಿದೆ.

    ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 104 ಜನರನ್ನು ಬಂಧಿಸಲಾಗಿದೆ. ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್ ಮೇಲೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಮುಂದುವರೆಸಿದ್ದು, ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ಹಿಂದಿದ್ದಾರಾ ಮೌಲ್ವಿ..?

    Hubballi Riot

    ಪೊಲೀಸ್ ವಾಹನದ ಮೇಲೆ ಮೌಲ್ವಿ ಸೇರಿದಂತೆ ಹಲವರು ಹತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಆರಂಭ ಮಾಡಲಾಗಿದೆ. ತನಿಖೆ ನಂತರ ಎಲ್ಲಾ ಸತ್ಯಾಸತ್ಯತೆ ಗೊತ್ತಾಗಲಿದ್ದು, ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ದರೂ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ಗೆ 14 ದಿನ ನ್ಯಾಯಾಂಗ ಬಂಧನ

  • ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್

    ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್

    ಚಿಕ್ಕಮಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    BASAVARJ BOMMAI (1)

    ಹನುಮ ಜಯಂತಿ ದಿನದಂದು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‍ನಲ್ಲಿ ಗಲಭೆಕೋರರ ಮನೆ, ಅಂಗಡಿಯನ್ನು ಧ್ವಂಸಗೊಳಿಸಿದಂತೆ ಕರ್ನಾಟಕದಲ್ಲಿ ಕೂಡ ಗಲಭೆಕೋರರ ಮನೆಗಳನ್ನು ಕಿತ್ತು ಬಿಸಾಕಿ ಎಂದು ನಾನು ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅಕ್ರಮ ಮನೆಗಳು, ಅಕ್ರಮ ಬಡಾವಣೆಗಳನ್ನು ಕಿತ್ತು ಬಿಸಾಕಿ, ಅವರ ಸೊಕ್ಕು ಹಾಗೂ ಅಹಂಕಾರವನ್ನು ಅಡಗಿಸಿ. ಅವರ ದೇಶದ್ರೋಹಿ ಕೃತ್ಯವನ್ನು ಮಟ್ಟ ಹಾಕಿ. ಒಂದು ಬಾರಿ ಯೋಗಿ ಆದಿತ್ಯನಾಥ್ ಅವರಂತೆ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

    yogi adithyanath

    ಅಮಾಯಕರು ಅಂತ ಮುಸ್ಲಿಂ ಕಿಡಿಗೇಡಿಗಳ ಪರವಾಗಿ ನೀವು ನಿಲ್ಲುತ್ತಿರುವುದು ನಿಮಗೆ ಕ್ಷೋಭೆ ತರುವುದಿಲ್ಲ. ಸಿಸಿಟಿ ದೃಶ್ಯವನ್ನು ಸರಿಯಾಗಿ ಪರಿಶೀಲಿಸಿ ಇಲ್ಲಿ ಯಾರು ಅಮಾಕರಲ್ಲ, ಎಲ್ಲರೂ ಗುಂಡಾಗಳೇ. ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೆ. ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ. ಈ ಘಟನೆಗೆ ಅಲ್ಲಿನ ಕಾಂಗ್ರೆಸ್ ಶಾಸಕ ಅಬ್ಬಯ್ಯ ಅವರು ಹೊಣೆಗಾರರಾಗಿದ್ದು, ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಓಟ್‍ಗಾಗಿ ಇರುವ ಈ ಘಟನೆಗೆ ಕುಮ್ಮತ್ತು ನೀಡಿದ್ದಾರೆ. ಇದರ ಹಿಂದೆ ಎಂಐಎಂ ಇದೆ ಎಂದು ನಿಶ್ಚಿತವಾಗಿ ನಾನು ಹೇಳುತ್ತೇನೆ. ಬುದ್ದಿಜೀವಿಗಳು ಮುಸ್ಲಿಮರಿಂದ ಗಲಾಟೆಯಾಯಿತು ಎಂದರೆ ಸುಮ್ಮನೆ ಇರುತ್ತಾರೆ. ಅದೇ ಮುಸ್ಲಿಮರಿಗೆ ತೊಂದರೆಯಾಯಿತು ಎಂದ ಕ್ಷಣ ಬಾಯಿಬಿಡುತ್ತಾರೆ. ಬಾಯಿ ಮುಚ್ಚಿಕೊಂಡಿರುವ ಬುದ್ಧಿ ಜೀವಿಗಳು ಮುಸ್ಲಿಂ ಕ್ರಿಶ್ಚಿಯನ್‍ರ ಎಜೆಂಟ್‍ಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

    hbl (1)

    ರಾಜಕೀಯ ಎಂದರೆ ಏನು ಎಂಬುವುದು ನನಗೆ ಗೊತ್ತಿಲ್ಲ. ಆದರೆ ಮುಸ್ಲಿಂ ಸಮಾಜ ಹತಾಶರಾಗಿದ್ದಾರೆ. ಹಿಜಬ್, ಹಲಾಲ್ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಸಂಘರ್ಷದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ದೇವಸ್ಥಾನವನ್ನು ಭಗ್ನ ಮಾಡಿದ್ದರೂ, ಹಿಂದೂ ಸಮಾಜ ಕೆರಳದೇ ಶಾಂತ ರೀತಿಯಲ್ಲಿದೆ. ಹೀಗಾಗಿ ಮೌಲಿಗಳು ಇಂತರವನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ

    hbl (2)

    ಹುಬ್ಬಳ್ಳಿಯಲ್ಲಿ ನಡೆದ ಘಟನೆ ಪೂರ್ವನಿಯೋಜಿತವಾಗಿದ್ದು, ಮುಸ್ಲಿಮರ ಕೆಪಿಸಿಸಿ ಕಾರ್ಯಧ್ಯಕ್ಷರು ಅಮಾಕರನ್ನು ಬಂಧಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್‍ನವರು, ಕುಮಾರಸ್ವಾಮಿ ಅವರು ಅಮಾಕರನ್ನು ಬಂಧಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮೊದಲಿನಿಂದಲೂ ಇವರ ನಿಲುವು ಹಿಂದೂ ವಿರೋಧವಾಗಿಯೇ ಇದೆ ಮತ್ತು ಮಸ್ಲಿಮರ ಪರವಾಗಿಯೇ ಇದೆ. ಮುಸ್ಲಿಮರ ಓಟ್‍ಗೋಸ್ಕರ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುವುದಕ್ಕೆ ಇದೊಂದೇ ಸಾಕ್ಷಿ. ಹನುಮ ಜಯಂತಿ ದಿನವೇ ಹುನುಮಂತನ ದೇವಾಲಯವನ್ನೇ ಒಡೆದು ಹಾಕಿದ್ದಾರೆ. ಇದು ಅಮಾಕರು ಮಾಡುವ ಕೆಲಸನಾ? ಜನರ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ್ದು ಅಮಾಕರು ಮಾಡುವ ಕೆಲಸನಾ? ಹೋಮ ಹವನ ಮಾಡುವಂತಹ ನೀವು ಪೊಲೀಸ್ ಸ್ಟೇಷನ್ ಮೇಲೆ ದೇವಸ್ಥಾನದ ಮೇಲೆ ಕಲ್ಲು ತೋರಿದವರನ್ನು ಅಮಾಯಕರು ಎನ್ನುತ್ತೀರಾ ನಿಮಗೆ ನಾಚಿಕೆ ಆಗಲ್ವಾ? ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ ಎಂದು ಹರಿಹಾಯ್ದಿದ್ದಾರೆ.