Tag: Hubballi Riots

  • ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

    ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

    ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣವನ್ನು (Hubballi Riots Case) ರಾಜ್ಯ ಸರ್ಕಾರ ವಾಪಸ್‌ ಪಡೆಯಲು  ಸರ್ಕಾರ ನಿರ್ಧಾರ ಕೈಗೊಂಡಿದ್ದು ಈಗ ಈಗ ವಿವಾದಕ್ಕೆ ಕಾರಣವಾಗಿದೆ.

    ಗುರುವಾರ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣವನ್ನು ವಾಪಸ್‌ ಪಡೆಯುವ ನಿರ್ಧಾರ ಕೈಗೊಂಡಿದ್ದಕ್ಕೆ ಬಿಜೆಪಿ (BJP) ಆಕ್ರೋಶ ವ್ಯಕ್ತಪಡಿಸಿದೆ.

    ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸರ್ಕಾರದ ನಡೆಗೆ ಖಂಡನೆ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ. ಮುಸ್ಲಿಮರನ್ನು ಒಲೈಕೆ ಮಾಡಲು ಕೇಸ್‌ ಹಿಂಪಡೆಯಲಾಗಿದೆ ಎಂದು ಹೇಳಿ ಡಿಕೆ ಶಿವಕುಮಾರ್ (DK Shivakumar) ಹೆಸರು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಗಲಭೆ ಪ್ರಕರಣವನ್ನು ಕಾನೂನು ಮತ್ತು ಪೊಲೀಸ್ ಇಲಾಖೆಗಳ ವಿರೋಧದ ನಡುವೆಯೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಎಐಎಂಐಎಂ ಮುಖಂಡರಾದ ಮೊಹಮ್ಮದ್ ಆರಿಫ್ ಮತ್ತು ಇತರರು ಪೊಲೀಸರ ಮೇಲೆ ದಾಳಿ ಮಾಡಿ ಠಾಣೆಗೆ ನುಗ್ಗುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    ಈ ಗಲಭೆ ಮತ್ತು ಕಲ್ಲು ತೂರಾಟದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಪ್ರಕರಣವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಈಗ ಈ ಪ್ರಕರಣವನ್ನು ಕೈ ಬಿಡಲಾಗಿದೆ. ಇದು ಮುಸ್ಲಿಂ ಓಲೈಕೆಯ ಕಾಂಗ್ರೆಸ್‌ ರಾಜಕೀಯವಲ್ಲದೆ ಮತ್ತೇನೂ ಅಲ್ಲ ಎಂದು ಬರೆದಿದ್ದಾರೆ.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಯುವಕನೊಬ್ಬ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು ಉದ್ರಿಕ್ತರು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ 11 ಎಫ್‌ಐಆರ್‌ ದಾಖಲಾಗಿ 155 ಮದಿ ಮೇಲೆ ಕೇಸ್‌ ದಾಖಲಾಗಿತ್ತು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್‌ ವಾಹನಗಳಿಗೆ ಹಾನಿಯಾಗಿದ್ದರೆ ಇಬ್ಬರು ಪೊಲೀಸ್‌ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.  ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ – 108 ಆರೋಪಿಗಳಿಗೆ ಜಾಮೀನು, ದರ್ಗಾದಲ್ಲಿ ಸಂಭ್ರಮಾಚರಣೆ

    ಕಳೆದ ವರ್ಷ 2023 ಸೆಪ್ಟೆಂಬರ್‌ನಲ್ಲಿ ಎಲ್ಲಾ ಜಿಲ್ಲೆಗಳ ಎಸ್ಪಿ, ಕಮೀಷನರ್ ಗಳಿಗೆ ಪತ್ರ ಬರೆದಿದ್ದ ಡಿಜಿ-ಐಜಿ ಪತ್ರ ಬರೆದು ನಿಮ್ಮ ಜಿಲ್ಲೆಗಳಲ್ಲಿ ಕೇಸ್ ವಾಪಸ್ ಪಡೆಯುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.

     

  • ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಹು-ಧಾ ಪೊಲೀಸ್ ಕಮಿಷನರ್

    ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಹು-ಧಾ ಪೊಲೀಸ್ ಕಮಿಷನರ್

    ಹುಬ್ಬಳ್ಳಿ: ಶ್ರೀಕಾಂತ್ ಪೂಜಾರಿ (Shrikanth Poojari) ಬಂಧನಕ್ಕೆ ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಬೆನ್ನಲ್ಲೇ ಶ್ರೀಕಾಂತ್ ಪೂಜಾರಿ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಮಾತನಾಡಿದ್ದಾರೆ.

    ಬಿಜೆಪಿ ಪ್ರತಿಭಟನೆ ಹಿನ್ನೆಲೆ ಶಹರ ಠಾಣೆಗೆ ಆಗಮಿಸಿದ್ದ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು, ಶ್ರೀಕಾಂತ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್‌ಗಳಿವೆ. ಒಟ್ಟು 16 ಪ್ರಕರಣಗಳಿವೆ. ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ

    ಹುಬ್ಬಳ್ಳಿ ಶಹರ ಠಾಣೆ ಮುಂದೆ ಪ್ರತಿಭಟನೆಗೆ ಬಿಜೆಪಿಗೆ ಸದ್ಯ ಯಾವುದೇ ಅನುಮತಿ ಇಲ್ಲ. ನಾವು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದೇವೆ. ಮೆರವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ, ಬಿಜೆಪಿಯಿಂದ ಶಹರ ಠಾಣೆ ಎದುರು ಪ್ರತಿಭಟನೆ ಹಿನ್ನೆಲೆ ಠಾಣೆಗೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಭದ್ರತೆಯ ಸಿದ್ಧತೆ ವೀಕ್ಷಣೆ ಮಾಡಿದರು. ಹಿರಿಯ ಅಧಿಕಾರಿಗಳ ಜೊತೆಗೆ ಭದ್ರತೆ ಬಗ್ಗೆ ಚರ್ಚೆ ನಡೆಸಿದರು. ಮೊಬೈಲ್ ಕಮಾಂಡರ್ ಸೆಂಟರ್‌ನಲ್ಲಿ ಪ್ರತಿಭಟನಾಕಾರರ ಚಲನವಲನ ವೀಕ್ಷಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಕೇಸ್‌ – ಬುಧವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

    ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ ಠಾಣೆ ಮುಂಭಾಗ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ. ಇಂದು (ಬುಧವಾರ) ಬೆಳಗ್ಗೆ 11:30 ರ ಸುಮಾರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಕಡೆಗೆ ಧಾವಿಸುತ್ತಿದ್ದಾರೆ.

    ಏನಿದು ಶ್ರೀಕಾಂತ್‌ ಪೂಜಾರಿ ಕೇಸ್?
    ರಾಜ್ಯದಲ್ಲಿ ಬರೋಬ್ಬರಿ 31 ವರ್ಷಗಳ ಬಳಿಕ ರಾಮಜನ್ಮಭೂಮಿ (Ram Janambhoomi) ಹೋರಾಟದ ಪ್ರಕರಣಕ್ಕೆ ಮರುಜೀವ ಸಿಕ್ಕಿರುವುದು ನಾನಾ ರೀತಿಯ ಚರ್ಚೆಗೆ ಆಸ್ಪದವಾಗಿದೆ.

    ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದಾರೆ. ಇದನ್ನೂ ಓದಿ: ಮಸೀದಿಯವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ, ದೇವಿ ದರ್ಶನಕ್ಕೆ ಸಮಯವಿಲ್ಲ: ಸಿದ್ದು ವಿರುದ್ಧ ಬಿಜೆಪಿ ಕಿಡಿ

    ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರವೇ ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ, ಪ್ರಕರಣದ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.

  • ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಉದ್ದೇಶಪೂರ್ವಕ ಅಲ್ಲ, ಆಕಸ್ಮಿಕ: ಪರಮೇಶ್ವರ್

    ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Riots) ವಿಚಾರವಾಗಿ ಹಿಂದೂ (Hindu) ಕಾರ್ಯಕರ್ತರ ಬಂಧನ ಉದ್ದೇಶಪೂರ್ವಕ ಅಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (Parameshwar) ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಹಳೆ ಪ್ರಕರಣಗಳನ್ನು ಕ್ಲೀಯರ್ ಮಾಡಿ ಎಂದುಆದೇಶ ಕೊಟ್ಟಿದ್ದೇವೆ. ಅದರಲ್ಲಿ ಹುಬ್ಬಳ್ಳಿಯಲ್ಲಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಕಾನೂನು ಅಡಿಯಲ್ಲಿ ಪೊಲಿಸ್ (Police) ಇಲಾಖೆ ಕ್ರಮ ಕೈಗೊಳ್ಳುತ್ತದೆ. ಹಿಂದೂ (Hindu) ಕಾರ್ಯಕರ್ತರು ಅಂತ ಅಲ್ಲ. ಅದಕ್ಕೆ ಆ ಬಣ್ಣವನ್ನು ಕಟ್ಟುವುದು ಸೂಕ್ತವಲ್ಲ ಎಂದರು. ಇದನ್ನೂ ಓದಿ: ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ

    ಒಬ್ಬರನ್ನೇ ಬಂಧನ ಮಾಡಿಲ್ಲ, ಆಕಸ್ಮಿಕವಾಗಿ ಆಗಿರಬಹುದು. ಈ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಯಾರಾದರೂ ಬಂಧನ ಮಾಡುತ್ತಾರಾ? ವರ್ಷಾನುಗಟ್ಟಲೇ ಬಾಕಿ ಉಳಿದಿರುವ ಕೇಸ್‌ಗಳನ್ನು ಕ್ಲೀಯರ್ ಮಾಡಲು ಹೇಳಿದ್ದೇವೆ. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇತ್ತು . ಅದನ್ನು ಓಪನ್ ಮಾಡಿ ಕ್ಲೀಯರ್‌ ಮಾಡುವ ವೇಳೆ ಈ ಕೇಸ್ ಬಂದಿದೆ. ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದಾರೆ. ಎಲ್ಲರಿಗೂ ಹೇಗೆ ಮಾಡಿದ್ದಾರೆ ಇವರಿಗೂ ಹಾಗೆ ಮಾಡಿದ್ದಾರೆ ಎಂದರು.  ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ

    ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಟ್ಟುಕೊಂಡಿಲ್ಲ. ಹಿಂದೂ ಕಾರ್ಯಕರ್ತರು ಇನ್ನೊಂದು ಕಾರ್ಯಕರ್ತರು ಎನ್ನುವ ಟಾರ್ಗೆಟ್ ಮಾಡಿ ಮಾಡುವ ಪ್ರಯತ್ನ ಮಾಡಿಲ್ಲ.ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಪೊಲೀಸ್ ಇಲಾಖೆ ಮಾಡುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ ಎಂದು ಹೇಳಿದರು.

    ಈ ರೀತಿ ಬಹಳ ಕಡೆ ಕೇಸುಗಳನ್ನು ಬಿಟ್ಟು ಬಿಡುತ್ತಾರೆ. ಯಾವಾಗಲೂ ಒಮ್ಮೆ ಕೇಸ್ ರೀ ಓಪನ್ ಆಗುತ್ತದೆ. ಅಂಥದ್ದು ಏನಿತ್ತು ಈ ಪ್ರಕರಣದಲ್ಲಿ ಎನ್ನುವುದರ ಬಗ್ಗೆ ಆಯುಕ್ತರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

  • ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ

    ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ

    ಹುಬ್ಬಳ್ಳಿ: ರಾಜ್ಯದಲ್ಲಿ ಬರೋಬ್ಬರಿ 31 ವರ್ಷಗಳ ಬಳಿಕ ರಾಮಜನ್ಮಭೂಮಿ (Ram Janambhoomi) ಹೋರಾಟದ ಪ್ರಕರಣಕ್ಕೆ ಮರುಜೀವ ಸಿಕ್ಕಿರುವುದು ನಾನಾ ರೀತಿಯ ಚರ್ಚೆಗೆ ಆಸ್ಪದವಾಗಿದೆ.

    ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದಾರೆ.

    ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರವೇ ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ, ಪ್ರಕರಣದ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.  ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ

    ಗಲಭೆ ನಡೆದಾಗ ಈ ಆರೋಪಿಗಳೆಲ್ಲಾ 30 ವಯಸ್ಸಿನ ಆಸುಪಾಸಿನವರಾಗಿದ್ದರು. ಇದೀಗ ಇವರಿಗೆಲ್ಲಾ 65-70 ವರ್ಷ ವಯಸ್ಸಾಗಿದೆ. ಆರೋಪಿಗಳ ಪೈಕಿ ಮೂವರು ಮೃತಪಟ್ಟಿದ್ದಾರೆ.

    ದಿಢೀರ್ ಎಂದು 31 ವರ್ಷದ ಹಿಂದಿನ ಕೇಸ್‌ಗೆ ಮರುಜೀವ ನೀಡಿದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಇದು ರಾಜಕೀಯಪ್ರೇರಿತ ಎಂದು ಕಾಂಗ್ರೆಸ್ ವಿರುದ್ಧ ಆರೋಪಿ ರಾಜು ಧರ್ಮಸಾ ಆಕ್ರೋಶ ಹೊರಹಾಕಿದ್ದಾರೆ.

     

  • ಸಲೀಸಾಗಿ ಜೈಲಿನಿಂದ ಹೊರಬರುತ್ತಿರುವ ಹುಬ್ಬಳ್ಳಿ ಕೋಮು ಗಲಭೆಕೋರರು – ಯುಪಿ ಮಾದರಿ ಕ್ರಮಕ್ಕೆ ಆಗ್ರಹ

    ಸಲೀಸಾಗಿ ಜೈಲಿನಿಂದ ಹೊರಬರುತ್ತಿರುವ ಹುಬ್ಬಳ್ಳಿ ಕೋಮು ಗಲಭೆಕೋರರು – ಯುಪಿ ಮಾದರಿ ಕ್ರಮಕ್ಕೆ ಆಗ್ರಹ

    ಹುಬ್ಬಳ್ಳಿ: ಕಳೆದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಯ ಆರೋಪಿಗಳು ಜೈಲಿಗೆ ಹೋದ ವೇಗದಲ್ಲೇ ವಾಪಸ್ ಜಾಮೀನು ಪಡೆದು ಹೊರಗಡೆ ಬರುತ್ತಿದ್ದಾರೆ. ಈ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಮಾದರಿ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ದೇಶದಲ್ಲಿ ಕೋಮು ಗಲಭೆಯಿಂದ ನಷ್ಟವಾದ ಸಾರ್ವಜನಿಕ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲು ಮತ್ತು ನಷ್ಟ ಉಂಟುಮಾಡಿದವರನ್ನು ಮಟ್ಟಹಾಕಲು ಉತ್ತರ ಪ್ರದೇಶ ಇತ್ತೀಚಿನ ದಿನಗಳಲ್ಲಿ ಮಾದರಿಯಾಗಿದೆ. ಬುಲ್ಡೋಜರ್ ಬಾಬಾ ಎಂದೇ ಪ್ರಸಿದ್ಧವಾಗಿ ಸಿಎಂ ಯೋಗಿ ಆದಿತ್ಯನಾಥ್, ಕೋಮು ಹೆಸರಿನಲ್ಲಿ ದಾಂದಲೇ ಮಾಡುವ ದುಷ್ಟರಿಗೆ ತಕ್ಕ ಶಾಸ್ತಿ ಮಾಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಇತ್ತೀಚಿಗೆ ನಡೆದ ಮುಸ್ಲಿಂ ಸಮುದಾಯದ ಉಗ್ರರೂಪದ ಪ್ರತಿಭಟನೆ. ಪ್ರವಾದಿಗಳ ಮೇಲೆ ವಿವಾದಾತ್ಮಕ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರ ಪಡೆದುಕೊಂಡಿತ್ತು. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಮತಾಂದರು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರು. ಇದಕ್ಕೆ ತಕ್ಕ ಶಾಸ್ತಿ ಮಾಡಲು ಗಲಭೆಯ ಮಾಸ್ಟರ್ ಮೈಂಡ್ ಮನೆಗೆ ಬುಲ್ಡೋಜರ್ ನುಗ್ಗಿಸಲಾಗಿದೆ. ಇಂತಹ ಕ್ರಮ ನಮ್ಮ ರಾಜ್ಯದಲ್ಲಿ ಜಾರಿಯಾಗಿಬೇಕೆಂಬ ಆಗ್ರಹ ಸಹ ಕೇಳಿಬರುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    Hubballi Riot

    ಕಳೆದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಗೂ ಸಹ ದಾಳಿಯಾಗಿದೆ. ವಿಪರ್ಯಾಸವೆಂದರೆ ಹಾನಿ ಮಾಡಿದವರ ಮೇಲೆ ಸರಿಯಾದ ಕ್ರಮ ಒಂದುಕಡೆ ಇರಲಿ, ಜೈಲಿಗೆ ಹೋದ ವೇಗದಲ್ಲೇ ಆರೋಪಿಗಳು ವಾಪಸ್ ಜಾಮೀನು ಪಡೆದು ಹೊರಗಡೆ ಬರುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳ ಮಟ್ಟ ಹಾಕಲು ಯೋಗಿ ಮಾದರಿಯೇ ಸರಿ ಎನ್ನುವ ಆಗ್ರಹ ಹುಬ್ಬಳ್ಳಿಯಲ್ಲಿ ಕೇಳಿ ಬರುತ್ತಿದೆ. ಹುಬ್ಬಳ್ಳಿಯಲ್ಲಿ ಉಂಟಾದ ನಷ್ಟದ ಮೌಲ್ಯವನ್ನು 35 ರಿಂದ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಬರ್ತ್‍ಡೇ ಪಾರ್ಟಿ ಮುಗಿಸಿ ಮನೆಗೆ ಬಂದ ಯುವತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ

    ಅಂಕಿ ಅಂಶದ ಪ್ರಕಾರ:
    ಕಟ್ಟಡಗಳ ಹಾನಿ – ದೇವಸ್ಥಾನ 1, ಪೊಲೀಸ್ ಠಾಣೆ 1, ಆಸ್ಪತ್ರೆ 1 ಮತ್ತು ಮನೆಗಳು 3 – ಅಂದಾಜು ಮೊತ್ತ- 5 ಲಕ್ಷ ರೂ., ವಾಹನಗಳು – ಪೊಲೀಸ್ ಅಧಿಕಾರಿ ಜೀಪ್ 5 , ನಿವಾಸಿಗಳ ಕಾರ್ 2, ವಾಹನ ಸವಾರರ ಬೈಕ್ 5 – ಅಂದಾಜು ಮೊತ್ತ – 25 ಲಕ್ಷ ರೂ., ಗಾಯಗೊಂಡವರು – ಪೊಲೀಸ್ ಅಧಿಕಾರಿಗಳು 5, ಕಾನ್ಸ್‌ಟೇಬಲ್‌ 7, ವಾಹನ ಸವಾರರು 3 – ಆಸ್ಪತ್ರೆ ಖರ್ಚು – 5 ಲಕ್ಷ ರೂ.

    Live Tv

  • ಹುಬ್ಬಳ್ಳಿ ಗಲಭೆ ಪ್ರಕರಣ – 11 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಹುಬ್ಬಳ್ಳಿ ಗಲಭೆ ಪ್ರಕರಣ – 11 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಧಾರವಾಡ: ಕಳೆದ ಏಪ್ರಿಲ್ 16 ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 12 ಎಫ್‍ಐಆರ್‌ಗಳಲ್ಲಿ 11 ಎಫ್‍ಐಆರ್ ರದ್ದು ಗೊಳಿಸಬೇಕು ಎಂದು ಆರೋಪಿಗಳ ಪರ ಧಾರವಾಡ ಹೈಕೋರ್ಟ್‍ಗೆ ಹಾಕಿದ್ದ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

    ಏಪ್ರಿಲ್ 16 ರಂದು ಅಭಿಷೇಕ್ ಎಂಬ ಯುವಕ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು, ಗುಂಪೊಂದು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆ ಪೊಲೀಸರು 12 ಎಫ್‍ಐಆರ್ ದಾಖಲಿಸಿ 156 ಜನರನ್ನು ಬಂಧಿಸಿದ್ದರು. ಈ ವಿಚಾರವಾಗಿ ಆರೋಪಿಗಳ ಪರ ವಕೀಲರು 11 ಎಫ್‍ಐಆರ್ ರದ್ದು ಮಾಡಬೇಕು ಎಂದು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಯಾರ‍್ರೀ ಆ ಡಿಸಿ?: ಪಿಎಸ್‌ಐಗೆ ಹೊರಟ್ಟಿ ಪ್ರಶ್ನೆ

    ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಸದ್ಯ ಪ್ರಕರಣದ ತನಿಖೆ ನಡೆಯುತಿದ್ದು, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಆಗಬೇಕಿದೆ, ಈ ಹಿನ್ನೆಲೆ ಎಫ್‍ಐಆರ್ ರದ್ದು ಮಾಡಲು ಆಗಲ್ಲ ಎಂದು ಆರೋಪಿಗಳ ಪರ ಹಾಕಿದ್ದ ಅರ್ಜಿ ವಜಾ ಮಾಡಿ ಆದೇಶಿಸಿದೆ. ಸದ್ಯ ಆರೋಪಿ ಪರ ವಕೀಲರು ಮತ್ತೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬೇರೊಬ್ಬರ ಪತ್ನಿ ಜೊತೆಗೆ ಲವ್ವಿ-ಡವ್ವಿ – ಕೊಲೆಯಾದ ಆಟೋ ಚಾಲಕ

  • ಗಲಭೆಕೋರರಿಗೆ ಜಮೀರ್ ಸಹಾಯ – ಅವರಿಗೆ ಮರ್ಯಾದೆ ಇಲ್ಲ: ಸೋಮಣ್ಣ

    ಗಲಭೆಕೋರರಿಗೆ ಜಮೀರ್ ಸಹಾಯ – ಅವರಿಗೆ ಮರ್ಯಾದೆ ಇಲ್ಲ: ಸೋಮಣ್ಣ

    ಚಾಮರಾಜನಗರ: ಹುಬ್ಬಳ್ಳಿ ಗಲಭೆಕೋರರ ಕುಟುಂಬಸ್ಥರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅವರಿಗೆ ಮರ್ಯಾದೆಯೂ ಇಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಕಿಡಿಕಾರಿದ್ದಾರೆ.

    ಚಾಮರಾಜನಗರದ ಕನಕಗಿರಿಯಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಕಾನೂನು ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅವರು ಈ ದೇಶದಲ್ಲಿ ಇರಲು ಎಷ್ಟು ಅರ್ಹರು ಎಂದು ಯೋಚಿಸಬೇಕಾಗುತ್ತದೆ. ಗಲಭೆಕೋರರ ಕುಟುಂಬಕ್ಕೆ ಫುಡ್‌ಕಿಟ್ ಹಂಚಿದವರಿಗೆ ಒಳ್ಳೆಯದಾಗಲಿ ಎಂದು ವ್ಯಂಗವಾಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಬಿಜೆಪಿ ಪ್ಲಾನ್ – ಲಕ್ಷ್ಮೀ ಅಶ್ವಿನ್ ಗೌಡಗೆ ಗಾಳ

    ಗೃಹಮಂತ್ರಿ ರಾಜೀನಾಮೆ ನೀಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಒಂದು ವರ್ಷ ಇದೆ. ಹೀಗಾಗಿ ಅವರು ಸುಮ್ಮನೇ ಏನೇನೋ ಹೇಳುತ್ತಿರುತ್ತಾರೆ. ಅವರ ಆರೋಪಕ್ಕೆ ಈಗಾಗಲೇ ಉತ್ತರ ನೀಡಲಾಗಿದೆ. ಅಕ್ರಮ ನಡೆದಿರುವ ವಿಚಾರ ತಿಳಿದ ತಕ್ಷಣ ವಿಚಾರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆ್ಯಸಿಡ್ ದಾಳಿ ಮಾಡಿ, ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಸುಧಾಕರ್

  • ಡಿಜೆಹಳ್ಳಿ-ಕೆಜೆಹಳ್ಳಿ, ಪಾದರಾಯನಪುರ ನಂತ್ರ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಜಮೀರ್ ಹೆಸ್ರು: ಸಿ.ಟಿ.ರವಿ

    ಡಿಜೆಹಳ್ಳಿ-ಕೆಜೆಹಳ್ಳಿ, ಪಾದರಾಯನಪುರ ನಂತ್ರ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಜಮೀರ್ ಹೆಸ್ರು: ಸಿ.ಟಿ.ರವಿ

    ಚಿಕ್ಕಮಗಳೂರು: ಡಿಜೆಹಳ್ಳಿ-ಕೆಜೆಹಳ್ಳಿ, ಪಾದರಾಯನಪುರದಲ್ಲಿ ನಡೆದ ಗಲಭೆಯಲ್ಲೂ ಜಮೀರ್ ಅಹ್ಮದ್ ಖಾನ್ ಹೆಸರು ಕೇಳಿಬಂದಿತ್ತು. ಈಗ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ ಎಂದು ಬಿಜೆಪಿ ರಾಷ್ಟ್ರ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ZAMEER

    ಹುಬ್ಬಳಿ ಗಲಭೆಕೋರರಿಗೆ ಜಮೀರ್ ಅಹ್ಮದ್ ಖಾನ್ ಅವರು ರಂಜಾನ ಕಿಟ್ ಹಾಗೂ ಹಣ ವಿತರಣೆ ಮಾಡಿದ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ಡಿಜೆಹಳ್ಳಿ-ಕೆಜೆಹಳ್ಳಿ, ಪಾದರಾಯನಪುರದಲ್ಲಿ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಪಾತ್ರವಿತ್ತು. ಅವರಿಗೆ ಹಣ, ವಕೀಲರ ನೇಮಕ ಎಲ್ಲ ಮಾಡಿದ್ದು ಕಾಂಗ್ರೆಸ್, ಆ ಸಂದರ್ಭದಲ್ಲಿ ಕೂಡ ಜಮೀರ್ ಹೆಸರು ಕೇಳಿ ಬಂದಿತ್ತು. ಈಗ ಹುಬ್ಬಳ್ಳಿ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಮಾಡುತ್ತಿದ್ದಾರೆ. ಕೋಮುಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟಿಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ನೆರವು ಕೊಡುವ ಪಾತ್ರ ಕಾಂಗ್ರೆಸ್‍ನದ್ದು ಇರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡುವಳಿಕೆ ಇದೆ ಎಂದಿದ್ದಾರೆ.

    ಹಿಜಬ್ ಹಿಂದೆ ಪಿಎಫೈ ಒಂದೇ ಅಲ್ಲ ಕಾಂಗ್ರೆಸ್ ಇದೆ ಎನ್ನುವ ಅನುಮಾನವಿತ್ತು. ಆಗ ಜಾತ್ಯಾತಿತಕ್ಕೆ ಚಾಂಪಿಯನ್ ಎನಿಸಿಕೊಂಡವರು ಹಿಜಬ್ ಪರ ನಿಂತರು. ವಕೀಲರಿಗೆ ನೆರವು ಕೊಟ್ಟಿದ್ದು ಕಾಂಗ್ರೆಸ್, ಅವರೆಲ್ಲಾ ಐದು – ಹತ್ತು ಸಾವಿರಕ್ಕೆ ಬರುವ ವಕೀಲರಲ್ಲ. ಎದ್ದು ನಿಂತರೆ 50 ಲಕ್ಷ ಬಿಲ್ ಮಾಡುತ್ತಾರೆ. ಅವರೆಲ್ಲಾ ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದ ವಕೀಲರಾಗಿದ್ದಾರೆ. ಹಿಜಬ್, ಪಾದರಾಯನಪುರ, ಡಿಜೆಹಳ್ಳಿ-ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರ ಇರುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

    ತಾನು ಕಳ್ಳನ ಪರ ಎಂಬ ಮಾತು ಕಾಂಗ್ರೆಸ್‍ಗೆ ಅನ್ವಯವಾಗುತ್ತದೆ. ತಿಪ್ಪೆ ಸಾರಿಸುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು, ಬಿಜೆಪಿಯೂ ಹಾಗೇ ಎಂದು ಭಾವಿಸಿದ್ದಾರೆ. ಬಿಜೆಪಿ ತಿಪ್ಪೆ ಸಾರಿಸುವುದಾಗಿದ್ದರೆ ದಿವ್ಯಾ ಹಾಗರಗಿ ಮೇಲೆ ಎಫ್‍ಐಆರ್ ಆಗುತ್ತಿರಲಿಲ್ಲ. ಎಫ್‍ಐಆರ್ ಮಾಡುವುದರ ಜೊತೆಗೆ, ಸಿಐಡಿಗೆ ವಹಿಸಿ, ಆಕೆಯ ಗಂಡನನ್ನು, ಪ್ರಕರಣದಲ್ಲಿರುವ ಎಲ್ಲರನ್ನು ಬಿಜೆಪಿ ಸರ್ಕಾರ ಬಂಧಿಸಿದೆ. ಬಂಧನವಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಅಂತ ಹೇಳಿದ್ದು ಬಿಜೆಪಿ, ಯುಪಿ ಮಾದರಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಪೇಪರ್ ನೋಟಿಫಿಕೇಶನ್ ಕೊಟ್ಟಿದ್ದು ಬಿಜೆಪಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

    ಹಿಂದೆ ಇದ್ದ ಮುಖ್ಯಮಂತ್ರಿ ಮೇಲೆ ವಾಚ್ ಪ್ರಕರಣ ಬಂದಿತ್ತು. ಕಳ್ಳತನದ ವಾಚು, ಅಕ್ರಮದ ವಾಚು ಸಿಎಂ ಕೈಗೆ ಹೇಗೆ ಬಂತು ಎಂದು ತನಿಖೆಯೇ ಆಗಲಿಲ್ಲ. ರಿಡ್ಯೂ ಹೆಸರಲ್ಲಿ ಅರ್ಕಾವತಿ ಭೂ ಹರಗದಲ್ಲಿ ಸಾವಿರಾರು ಎಕರೆ ಡಿನೋಟಿಫೈ ಮಾಡಿದರು. 10-20 ಲಕ್ಷ, ಕೆಲವಡೆ 50 ಲಕ್ಷ ಪಡೆದರು, ತನ್ನ ಕುತ್ತಿಗೆಗೆ ಬರುತ್ತದೆ ಎನ್ನುತ್ತಿದ್ದ ಹಾಗೆಯೇ ತಿಪ್ಪೆ ಸಾರಿಸಿದರು. ಕೆಂಪಣ್ಣ ಆಯೋಗ ಕೂಡ ಕಾಂಗ್ರೆಸ್ ಪಾತ್ರವನ್ನು ಎತ್ತಿ ಹಿಡಿದಿತ್ತು. ಪ್ರಶಂಸೆ ಹೇಳುವ ಮನಸ್ಥಿತಿ ಅವರಿಗಿಲ್ಲ, ಕಾಂಗ್ರೆಸ್‍ನಂತೆ ಬಿಜೆಪಿ ಅಲ್ಲ. ಈ ವಿಷಯದಲ್ಲಿ ಯಾರೇ, ಎಷ್ಟೆ ಪ್ರಭಾವಶಾಲಿಗಳಿದ್ದರೂ ಶಿಕ್ಷೆಯಾಗುತ್ತದೆ. ಮುಚ್ಚಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

  • ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

    ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

    ಬೆಂಗಳೂರು: ಹುಬ್ಬಳ್ಳಿಯಲ್ಲಿ ಗಲಭೆಕೋರರ ಕುಟುಂಬಕ್ಕೆ ರೇಷನ್ ಕಿಟ್ ಹಂಚಿಕೆ ಬ್ರೇಕ್ ಬಿದ್ದಿದ್ದು, ಶಾಸಕ ಜಮೀರ್ ಅಹ್ಮದ್‌ ಖಾನ್ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ,

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಜಮೀರ್ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ರೇಷನ್ ಕಿಟ್ ಹಂಚದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್‌ ಖಾನ್ ರೇಷನ್ ಕಿಟ್ ವಿತರಣೆ ಮಾಡದಂತೆ ಬೆಂಬಲಿಗರಿಗೆ ಸೂಚನೆ ನಿಡಿದ್ದಾರೆ. ಇದರಿಂದಾಗಿ ಬೆಂಬಲಿಗರು ರೇಷನ್ ಕಿಟ್ ಹಂಚಿಕೆ ಕಾರ್ಯಕ್ರಮ ರದ್ದು ಪಡಿಸಿದ್ದಾರೆ.

    Hubballi Riot

    ಘಟನೆಯೇನು?:
    ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ಹೊಡೆದು ಅರೆಸ್ಟ್ ಆದವರ ಪರ ಜಮೀರ್ ನಿಂತಿದ್ದು, ಗಲಭೆಕೋರರಿಗೆ ಜಮೀರ್ 5 ಸಾವಿರ ನಗದು ಹಾಗೂ ರಂಜಾನ್ ಫುಡ್‍ಕಿಟ್ ನೀಡಿ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

    ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್‍ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್‍ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದರು. ರಂಜನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದರು. ಹುಬ್ಬಳ್ಳಿಯ ತಮ್ಮ ಬೆಂಬಲಿಗರ ಮೂಲಕ ರೇಶನ್ ಕಿಟ್ ಹಂಚಿಕೆ ಮಾಡಲಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಜಮೀರ್ ನಡೆಯಿಂದ ಕಾಂಗ್ರೆಸ್ ತಲೆತಗ್ಗಿಸುವ ಕೆಲಸ: ಆರಗ ಜ್ಞಾನೇಂದ್ರ

  • ಜಮೀರ್ ನಡೆಯಿಂದ ಕಾಂಗ್ರೆಸ್ ತಲೆತಗ್ಗಿಸುವ ಕೆಲಸ: ಆರಗ ಜ್ಞಾನೇಂದ್ರ

    ಜಮೀರ್ ನಡೆಯಿಂದ ಕಾಂಗ್ರೆಸ್ ತಲೆತಗ್ಗಿಸುವ ಕೆಲಸ: ಆರಗ ಜ್ಞಾನೇಂದ್ರ

    ಬೆಂಗಳೂರು: ಜಮೀರ್ ಅಹ್ಮದ್ ಅವರ ನಡೆಯಿಂದ ಕಾಂಗ್ರೆಸ್ ಪಕ್ಷ ನಾಚಿಕೆಯಿಂದ ತಲೆತಗ್ಗಿಸುವ ಕೆಲಸವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ಹಿಂಸಾತ್ಮಕ ಕೆಲಸ ಮಾಡಿದವರಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದ್ದರು. ಜಮೀರ್ ಡಿಜೆಹಳ್ಳಿ ಪ್ರಕರಣದಲ್ಲೂ ಹೀಗೆ ಮಾಡಿದ್ದರು. ಈಗ ಹಬ್ಬಳ್ಳಿಯ ಘಟನೆಯಲ್ಲೂ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಜಮೀರ್‌ಗೆ ಶಾಂತಿ ನೆಮ್ಮದಿ ಅಗತ್ಯವಿಲ್ಲ. ಅದಕ್ಕಾಗಿ ಪುಂಡರಿಗೆ ನೆರವನ್ನು ನೀಡುತ್ತಿದ್ದಾರೆ. ಜಮೀರ್ ನಡೆಯಿಂದ ಕಾಂಗ್ರೆಸ್ ಪಕ್ಷ ನಾಚಿಕೆಯಿಂದ ತಲೆತಗ್ಗಿಸುವ ಕೆಲಸ ಅಪರಾಧಿಗಳನ್ನು ಬೆಂಬಲಿಸಿ ಹೀರೋಗಳನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದನ್ನ ಜನ ನೋಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

    ಹುಬ್ಬಳ್ಳಿಯಲ್ಲಿ ಕಲ್ಲು ಹೊಡೆದು ಅರೆಸ್ಟ್ ಆದವರ ಪರ ಜಮೀರ್ ನಿಂತಿದ್ದು, ಗಲಭೆಕೋರರಿಗೆ ಜಮೀರ್ 5 ಸಾವಿರ ನಗದು ಹಾಗೂ ರಂಜಾನ್ ಫುಡ್‍ಕಿಟ್ ನೀಡಿದ್ದಾರೆ. ಬಂಧನಕ್ಕೊಳಗಾದ ಕಿಡಿಗೇಡಿಗಳ ಕುಟುಂಬಗಳಿಗೆ ಜಮೀರ್ ಸಹಾಯ ಮಾಡಿದ್ದಾರೆ. ರಂಜಾನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದಾರೆ. ಹುಬ್ಬಳ್ಳಿಯ ತಮ್ಮ ಬೆಂಬಲಿಗರ ಮೂಲಕ ರೇಶನ್ ಕಿಟ್ ಹಂಚಿಕೆ ಮಾಡಲಿದ್ದಾರೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.