Tag: hubballi dharwad municipal corporation

  • ಆಸ್ತಿ ತೆರಿಗೆ ಪಾವತಿದಾರರಿಗೆ ಬಂಪರ್‌ – ಏಪ್ರಿಲ್‌ 30ರ ವರೆಗೆ 5% ರಿಯಾಯಿತಿ ನೀಡಿದ ಹು-ಧಾ ಪಾಲಿಕೆ

    ಆಸ್ತಿ ತೆರಿಗೆ ಪಾವತಿದಾರರಿಗೆ ಬಂಪರ್‌ – ಏಪ್ರಿಲ್‌ 30ರ ವರೆಗೆ 5% ರಿಯಾಯಿತಿ ನೀಡಿದ ಹು-ಧಾ ಪಾಲಿಕೆ

    – ಮನೆಯಲ್ಲೇ ಕುಳಿತು ತೆರಿಗೆ ಪಾವತಿ ಮಾಡಬಹುದು – ಹೇಗೆ ಗೊತ್ತಾ?

    ಹುಬ್ಬಳ್ಳಿ: ಪ್ರಸಕ್ತ ಆರ್ಥಿಕ ವರ್ಷ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು (Property Tax) ಪಾವತಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi Dharwad Municipal Corporation) ಬಂಪರ್‌ ಆಫರ್‌ ಮಾಡಿಕೊಟ್ಟಿದೆ. 5% ರಿಯಾಯಿತಿಯೊಂದಿಗೆ ತೆರಿಗೆ ಪಾವತಿಸಲು ಏಪ್ರೀಲ್ 1 ರಿಂದ 30ರ ವರೆಗೆ ಅವಕಾಶ ಕಲ್ಪಿಸಿದೆ.

    ಎಲ್ಲಾ ವಲಯ ಕಚೇರಿಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಸ್ತಿ ತೆರಿಗೆ ಚಲನ್‌ಗಳನ್ನ ವಿತರಿಸಲಾಗುತ್ತಿದೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಮ್ಮ ಮೋಬೈಲ್‌ನಲ್ಲಿ ಹೆಚ್‌ಡಿಎಂಸಿ ಆ್ಯಪ್ (HDMC App) ಡೌನ್ಲೋಡ್ ಮಾಡಿಕೊಂಡು, ಆ್ಯಪ್‌ನಲ್ಲೂ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳೋದೆ ಚಿಂತೆ, ಯಾಕಂದ್ರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ: ಅಮಿತ್ ಶಾ

    ಸಾರ್ವಜನಿಕರು ಆಸ್ತಿ ತೆರಿಗೆಯನ್ನು 2024-25 ನೇ ಸಾಲಿನಲ್ಲಿ ಕೇವಲ ಹುಬ್ಬಳ್ಳಿ ಧಾರವಾಡ-1 (ಕರ್ನಾಟಕ ಒನ್ ) ಸೇವಾ ಕೇಂದ್ರಗಳ ಮುಖಾಂತರ ಅಥವಾ ಪರ್ಯಾಯ ವ್ಯವಸ್ಥೆಯಾಗಿ ಸಂದಾಯ ಮಾಡಲು http://www.hdmc.in ವೆಬ್ ಸೈಟ್‌ನಲ್ಲಿ ಎಲ್ಲ ವಿಧದ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮುಖಾಂತರ ಆಸ್ತಿ ಕರ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

    ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರೂ ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಿ, ಪಾಲಿಕೆ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಜವಾಬ್ದಾರಿಯುತ ಪಾಲುದಾರರಾಗಿ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ 

  • ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    ಹುಬ್ಬಳ್ಳಿ: ರಸ್ತೆಗುಂಡಿ ಮತ್ತು ಧೂಳಿನಿಂದ ಕಂಗಾಲಾಗಿದ್ದ ಹುಬ್ಬಳ್ಳಿ, ಧಾರವಾಡ ಮಂದಿಗೆ ಆಸರೆಯಾಗಲು ಪ್ರಧಾನಿ ನರೇಂದ್ರ ಮೋದಿಯೇ (Narendra Modi) ಬರಬೇಕಾಯಿತು. ಮೋದಿ ಅವರನ್ನು ಮೆಚ್ಚಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ (Hubballi Dharwad Municipal Corporation) ಅಧಿಕಾರಿಗಳು ಹಗಲು ಡ್ರಾಮಾ ಶುರು ಮಾಡಿದ್ದಾರೆ.

    ಇದೇ ತಿಂಗಳ 12ರಂದು ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಅವಳಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ ಬಿಬಿಎಂಪಿ (BBMP) ಮಾಡಿದ ಚಾಳಿಯನ್ನು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಸಹ ಅಳವಡಿಸಿಕೊಳ್ಳಲು ಮುಂದಾಗಿದ್ದು, ರಾತ್ರೋರಾತ್ರಿ ರಸ್ತೆಗಳ (Road) ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.

    ತಮ್ಮ ಬಂಡವಾಳ ಬಯಲಾಗುವ ಭಯದಲ್ಲಿ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ರಸ್ತೆ ಅಕ್ಕಪಕ್ಕದ ಕಾಂಪೌಂಡ್‍ಗಳಿಗೆ ಸುಣ್ಣ, ಬಣ್ಣ ಬಳಿಸಲು ಸಹ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ – ವದಂತಿಗಳಿಗೆ ಕಿವಿಕೊಡಬೇಡಿ: ಅಭಯ್ ಪಾಟೀಲ್ ಮನವಿ

    ಹುಬ್ಬಳ್ಳಿ ನಗರದ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮೈದಾನದ ಅಕ್ಕ-ಪಕ್ಕದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ತಡೆಗೋಡೆಗಳಿಗೆ ಪೇಂಟಿಂಗ್ ಹಚ್ಚಲಾಗುತ್ತಿದೆ. ಇಷ್ಟು ದಿನ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು ಈಗ ದಿಢೀರ್ ಡಾಂಬರ್ ಕಾಣುತ್ತಿವೆ. ಆದರೆ ಇದನ್ನು, ಕೇವಲ ಮೋದಿ ಕಾರ್ಯಕ್ರಮ ಉದ್ದೇಶದಿಂದ ರಸ್ತೆಗೆ ತೆಪೆ ಹಾಕಿ, ಒಂದು ಇಂಚು ಡಾಂಬರ್ ಹಾಕಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

    ಹಲವು ವರ್ಷಗಳಿಂದ ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದರೂ, ತಲೆ ಕೆಡೆಸಿಕೊಳ್ಳದ ಪಾಲಿಕೆ ಈಗ ಸ್ಮಾರ್ಟ್ ಸಿಟಿ ಕಾಮಗಾರಿ ಕರ್ಮಕಾಂಡ ಮುಚ್ಚಿಹಾಕಲು ಈ ಡ್ರಾಮಾ ಮಾಡುತ್ತಿದೆ ಎಂದು ಜನರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k