Tag: Hubballi-Bengaluru Train

  • ಹುಬ್ಬಳ್ಳಿ-ಬೆಂಗಳೂರು ನಡುವೆ ಮತ್ತೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ – ಪ್ರಹ್ಲಾದ್‌ ಜೋಶಿ‌

    ಹುಬ್ಬಳ್ಳಿ-ಬೆಂಗಳೂರು ನಡುವೆ ಮತ್ತೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ – ಪ್ರಹ್ಲಾದ್‌ ಜೋಶಿ‌

    ಬೆಂಗಳೂರು: ಮಾರ್ಚ್ 20 ರಿಂದ ಹುಬ್ಬಳ್ಳಿ-ಬೆಂಗಳೂರು (Hubballi-Bengaluru Train) ನಡುವೆ ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮಾಹಿತಿ ಹಂಚಿಕೊಂಡಿದ್ದಾರೆ.

    ಕಾಯ್ದಿರಿಸಿದ ವಿಶೇಷ ರೈಲು ಸೇವೆಗೆ ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ, ವಿಶೇಷ ರೈಲು ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯ ಮನವಿ ಮಾಡಿದ್ದರು. ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವರು ಹುಬ್ಬಳ್ಳಿ-ಬೆಂಗಳೂರು ನಡುವೆ ಎರಡು ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಿಂದ ಮಾರ್ಚ್ 20 ರಿಂದ ರೈಲುಗಳ ಸಂಚಾರ ಆರಂಭವಾಗಲಿದೆ. ಇದನ್ನೂ ಓದಿ: ಹಣ ಕೊಡದಿದ್ದಕ್ಕೆ ಬಿಜೆಪಿ ಬಾವುಟಕ್ಕೆ ಬೆಂಕಿ – ಚಿನ್ನ ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ ಕೊಟ್ಟ ಮುಖಂಡ

    ವಿಶೇಷ ರೈಲು 07339 ಹುಬ್ಬಳ್ಳಿಯನ್ನು ರಾತ್ರಿ 11:15ಕ್ಕೆ ಬಿಟ್ಟು ಕರ್ಜಗಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರ ಮಾರ್ಗವಾಗಿ ಬೆಂಗಳೂರನ್ನು ಬೆಳಗ್ಗೆ 6:50ಕ್ಕೆ ತಲುಪುತ್ತದೆ. ಅದೇ ರೀತಿ ರೈಲು ಸಂಖ್ಯೆ 07340 ರಾತ್ರಿ II:I5ಕ್ಕೆ ಬೆಂಗಳೂರು ಬಿಟ್ಟು ತುಮಕೂರು, ಬೀರೂರು, ದಾವಣಗೆರೆ, ಕರ್ಜಗಿ ಮಾರ್ಗವಾಗಿ ಹುಬ್ಬಳ್ಳಿಯನ್ನು ಬೆಳಗ್ಗೆ 7:30ಕ್ಕೆ ತಲುಪಲಿದೆ.

    ವಿಶೇಷ ರೈಲು ಸಂಖ್ಯೆ 07353 ಬೆಂಗಳೂರನ್ನು ಬೆಳಗ್ಗೆ 7:45ಕ್ಕೆ ಬಿಟ್ಟು ತುಮಕೂರು, ಬೀರೂರು, ದಾವಣಗೆರೆ, ಕರ್ಜಗಿ ಮಾರ್ಗವಾಗಿ ಹುಬ್ಬಳ್ಳಿಯನ್ನು ಮಧ್ಯಾಹ್ನ 2:30ಕ್ಕೆ ತಲುಪಲಿದೆ. ಅದೇ ರೀತಿ ರೈಲು ಸಂಖ್ಯೆ 07354 ಹುಬ್ಬಳ್ಳಿಯನ್ನು ಮಧ್ಯಾಹ್ನ 3:15ಕ್ಕೆ ಬಿಟ್ಟು ಕರ್ಜಗಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರ ಮಾರ್ಗವಾಗಿ ಬೆಂಗಳೂರನ್ನು ರಾತ್ರಿ 11:10ಕ್ಕೆ ತಲುಪಲಿದೆ. ಇದನ್ನೂ ಓದಿ: ಶಾಸಕರ ಮನೆ ಬೆನ್ನಲ್ಲೇ ಪ್ರತಿಷ್ಠಿತ ಉದ್ಯಮಿ ಮನೆಯಲ್ಲಿದ್ದ ಕೋಟಿ.. ಕೋಟಿ.. ಅಕ್ರಮ ಹಣ ಸೀಜ್

    ಈ ಎರಡು ವಿಶೇಷ ರೈಲುಗಳು ಹವಾನಿಯಂತ್ರಿತ ದ್ವಿತೀಯ ದರ್ಜೆ ಒಂದು ಬೋಗಿ, ಹವಾನಿಯಂತ್ರಿತ ತೃತೀಯ ದರ್ಜೆಯ ಎರಡು ಬೋಗಿ ಸೀಪರ್ ಕ್ಲಾಸ್, ಏಳು ಜೋಗಿ ಹಾಗೂ ಎರಡು ಸಾಮನ್ಯ ದರ್ಜೆಯ ಬೋಗಿಗಳನ್ನು ಹೊಂದಿರಲಿದೆ. ಹುಬ್ಬಳ್ಳಿ-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ಆರಂಭಕ್ಕೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ಹೇಳಿದ್ದಾರೆ.