Tag: Huawei

  • ಪಹಲ್ಗಾಮ್‌ ದಾಳಿ| ಚೀನಾ ಲಿಂಕ್‌ ಬಗ್ಗೆ ತನಿಖೆಗೆ ಇಳಿದ ಎನ್‌ಐಎ!

    ಪಹಲ್ಗಾಮ್‌ ದಾಳಿ| ಚೀನಾ ಲಿಂಕ್‌ ಬಗ್ಗೆ ತನಿಖೆಗೆ ಇಳಿದ ಎನ್‌ಐಎ!

    ನವದೆಹಲಿ: ಪಹಲ್ಗಾಮ್ ಬಳಿ ದಾಳಿ (Pahalgam Terror Attack) ನಡೆದ ದಿನ ಅದೇ ಪ್ರದೇಶದಲ್ಲಿ ಮತ್ತು ಅದೇ ಸಮಯದಲ್ಲಿ ಹುವಾವೇ ಉಪಗ್ರಹ ಫೋನೊಂದು (Huawei Satellite Phone) ಸಕ್ರೀಯವಾಗಿದ್ದ ವಿಚಾರ ರಾಷ್ಟ್ರೀಯ ತನಿಖೆ ದಳದ (NIA) ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

    ಹೌದು. ಭಾರತದಲ್ಲಿ ಚೀನಾ ನಿರ್ಮಿತ ಹುವಾವೇ ಕಂಪನಿ ಸಾಧನ ಬಳಕೆಗೆ ನಿರ್ಬಂಧ ಇದೆ. ಹೀಗಿದ್ದರೂ ದಾಳಿ ನಡೆದ ಪ್ರದೇಶದಲ್ಲಿ ಏಕೈಕ ಹುವಾವೇ ಸ್ಯಾಟಲೈಟ್‌ ಫೋನ್‌ ಸಕ್ರಿಯವಾಗಿತ್ತು ಎಂಬ ವಿಚಾರ ಎನ್‌ಐಎ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಹುವಾವೇ ಉಪಗ್ರಹ ಫೋನ್‌ಗಳನ್ನು ಪಾಕಿಸ್ತಾನ (Pakistan) ಅಥವಾ ವಿದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಸಾಧ್ಯತೆ ಇದೆ. ಈಗ ಈ ಫೋನಿನ ಮೂಲದ ಬಗ್ಗೆ ಎನ್‌ಐಎ ತನಿಖೆಗೆ ಇಳಿದಿದಿದ್ದು ವಿದೇಶಿ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದೆ. ಇದನ್ನೂ ಓದಿ: ಪಾಕ್‌ ಮೇಲೆ ಡಿಜಿಟಲ್‌ ಸ್ಟ್ರೈಕ್‌ – ಬಿಬಿಸಿಗೂ ಬಿಸಿ ಮುಟ್ಟಿಸಿದ ಸರ್ಕಾರ

    ಹುವಾವೇ ಕಂಪನಿ ಉಪಗ್ರಹ ಸಂವಹನ ವೈಶಿಷ್ಟ್ಯ ಹೊಂದಿರುವ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಹುವಾವೇ ಮೇಟ್ 60 ಪ್ರೊ, ಪಿ60 ಸರಣಿ ಮತ್ತು ನೋವಾ 11 ಅಲ್ಟ್ರಾ ಸ್ಯಾಟಲೈಟ್‌ ಫೋನ್‌ಗಳಾಗಿವೆ. ಈ ಸಾಧನಗಳನ್ನು ಚೀನಾ ಟೆಲಿಕಾಂ ನಿರ್ವಹಿಸುವ ಚೀನಾದ ಟಿಯಾಂಟಾಂಗ್ -1 ಉಪಗ್ರಹ ನೆಟ್‌ವರ್ಕ್‌ಗೆ ಸಂಪರ್ಕಿಸುವಂತೆ ವಿನ್ಯಾಸಗೊಳಿಸಲಾಗಿದೆ.

    ಈ ಫೋನ್‌ಗಳು ಉಪಗ್ರಹ ಆಂಟೆನಾ ಮತ್ತು ವಿಶೇಷ ಚಿಪ್‌ಗಳನ್ನು ಒಳಗೊಂಡಿರುತ್ತವೆ. ಇದು ಬಾಹ್ಯ ಉಪಕರಣಗಳಿಲ್ಲದೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಸೇವೆಗಳಿಗೆ ಚೀನಾ ಟೆಲಿಕಾಂ ಕಂಪನಿಯ ಸಿಮ್ ಕಾರ್ಡ್‌ಗಳು ಮತ್ತು ಚಂದಾದಾರಿಕೆ ಯೋಜನೆಗಳು ಬೇಕಾಗುತ್ತವೆ. ತುರ್ತು ಬಳಕೆಗಾಗಿ ವಿನ್ಯಾಸಗೊಳಿಸಲಾದ ಈ ಫೋನ್‌ಗಳು ಕಡಿಮೆ-ಬ್ಯಾಂಡ್‌ವಿಡ್ತ್ ಧ್ವನಿ, ಪಠ್ಯ ಸೇವೆ, ಇಂಟರ್‌ನೆಟ್‌ ಸೇವೆಗಳನ್ನು ನೀಡುತ್ತವೆ. ಸೆಲ್ಯುಲಾರ್ ವ್ಯಾಪ್ತಿ ಇಲ್ಲದ ಪ್ರದೇಶಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತವೆ. ಇದನ್ನೂ ಓದಿ: ಯುದ್ಧದ ಬಿಸಿಗೆ ಬೆದರಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ ಪಾಕ್‌ ಸೈನಿಕರು!

    ಹಿಂದೆ ಉಗ್ರಗಾಮಿಗಳು ತುರಾಯ ಸ್ಯಾಟಲೈಟ್‌ ಫೋನ್‌ಗಳನ್ನು ಬಳಸುತ್ತಿದ್ದರು. ಈ ಫೋನ್‌ಗಳಲ್ಲಿ ಅಂಟೆನಾ ಇರುವ ಕಾರಣ ಸುಲಭವಾಗಿ ಗುರುತಿಸಬಹುದಾಗಿತ್ತು. ಆದರೆ ಹುವಾವೇ ಸ್ಯಾಟಲೈಟ್‌ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳಂತೆ ವಿನ್ಯಾಸ ಮಾಡಲಾಗಿರುವ ಕಾರಣ ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.

    ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಒಬ್ಬಾತ ಫೋನ್‌ ಕರೆಯಲ್ಲಿ ಸಕ್ರಿಯವಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

    ವಿದೇಶಿ ಸ್ಯಾಟಲೈಟ್‌ ಫೋನ್‌ಗಳಿಗೆ ನಿರ್ಬಂಧ
    2008ರ ಮುಂಬೈ ದಾಳಿ ಸಂದರ್ಭದಲ್ಲಿ ಉಗ್ರರು ಸ್ಯಾಟಲೈಟ್‌ ಫೋನ್‌ ಬಳಸಿ ಕೃತ್ಯ ಎಸಗಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಜೊತೆ ಸ್ಯಾಟಲೈಟ್‌ ಫೋನ್‌ ಮೂಲಕ ಸಂಪರ್ಕದಲ್ಲಿದ್ದರು. ಈ ಪ್ರಕರಣದ ಬಳಿಕ ಭಾರತದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ರಕ್ಷಣಾ ಸಾಮಾಗ್ರಿ ಹೊತ್ತುಕೊಂಡು ಬಂದ ಟರ್ಕಿ ವಿಮಾನ ಪಾಕ್‌ನಲ್ಲಿ ಲ್ಯಾಂಡ್‌

    ನಿಯಮ ಏನು ಹೇಳುತ್ತದೆ?
    ಭಾರತದ ವೈರ್‌ಲೆಸ್ ಆಕ್ಟ್‌ನ ಸೆಕ್ಷನ್ 6 ಮತ್ತು ಇಂಡಿಯನ್ ಟೆಲಿಗ್ರಾಫ್ ಆಕ್ಟ್‌ನ ಸೆಕ್ಷನ್ 20 ರ ಅಡಿಯಲ್ಲಿ ಭಾರತದಲ್ಲಿ ತುರಾಯಾ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆ ಕಾನೂನುಬಾಹಿರವಾಗಿದೆ. ಭಾರತಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳಿಗೆ ಥುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಲಹೆ ನೀಡಲಾಗುತ್ತದೆ.

    ವಿದೇಶಿಗರು ಭಾರತಕ್ಕೆ ತುರಾಯ/ಇರಿಡಿಯಮ್ ಉಪಗ್ರಹ ಫೋನ್‌ಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಪ್ರಯಾಣಿಕರು ಭಾರತಕ್ಕೆ ಸಾಗಿಸುವ ಉಪಗ್ರಹ ಫೋನ್‌ಗಳನ್ನು ಬಂಧಿಸಲಾಗುತ್ತದೆ/ಜಪ್ತಿ ಮಾಡಲಾಗುತ್ತದೆ. ಭಾರತೀಯ ಟೆಲಿಗ್ರಾಫ್ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಯಾಣಿಕರಿಗೆ ದಂಡ ವಿಧಿಸಬಹುದು.

    ಭಾರತದಲ್ಲೂ ಸೇವೆ ಇದೆ:
    ಬಿಎಸ್‌ಎನ್‌ಎಲ್‌ ಕಂಪನಿ ಉಪಗ್ರಹ ಫೋನ್‌  ಸೇವೆ ನೀಡುತ್ತಿದೆ. ಸೇವೆಯು ಭಾರತದ ಸಂಪೂರ್ಣ ಭೌಗೋಳಿಕ ಪ್ರದೇಶಕ್ಕೆ ನೀಡುತ್ತದೆ. ಅದರಲ್ಲೂ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆಲವು ಪ್ರದೇಶಗಳಲ್ಲಿ ಬಳಕೆಗೆ ನಿರ್ಬಂಧ ಇದೆ. ಅಮೆರಿಕದ ಗ್ಲೋಬ್‌ಸ್ಟಾರ್‌ ಕಂಪನಿಯ ಸ್ಯಾಟಲೈಟ್‌ ಫೋನ್‌ ಅಮೆರಿಕ ಸೇರಿದಂತೆ 120 ದೇಶಗಳಲ್ಲಿ ಬಳಕೆಗೆ ಅನಮತಿ ಇದೆ

    ಹೇಗೆ ಒಂದು ಸಿಮ್‌ ಖರೀದಿಸುವಾಗ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೋ ಅದೇ ರೀತಿಯ ದಾಖಲೆ ನೀಡಬೇಕು. ಅದರ ಜೊತೆಗೆ ಯಾವ ಕಾರಣಕ್ಕೆ ಈ ಫೋನ್‌ ಅಗತ್ಯವಿದೆ? ಯಾವ ಅವಧಿಗೆ ಈ ಫೋನ್‌? ಎಲ್ಲಿ ಬಳಕೆ ಮಾಡಲಾಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ ಬಳಿಕ ಗ್ರಾಹಕರ ನೀಡಿದ ಮಾಹಿತಿ ಸರಿ ಇದ್ದಲ್ಲಿ ಸ್ಯಾಟಲೈಟ್‌ ಫೋನ್‌ ಸಿಗುತ್ತದೆ.

  • ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ: ನ್ಯಾಯಾಲಯಕ್ಕೆ ಹುವಾವೇ ಸಿಇಒ

    ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ: ನ್ಯಾಯಾಲಯಕ್ಕೆ ಹುವಾವೇ ಸಿಇಒ

    ನವದೆಹಲಿ: ನಾನು ಚೀನಾದ ಪ್ರಜೆ, ನಾನು ಭಯೋತ್ಪಾದಕನಲ್ಲ ಎಂದು ಹುವಾವೇ ಟೆಲಿಕಮ್ಯುನಿಕೇಶನ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಲಿ ಕ್ಸಿಯಾಂಗ್‌ವೇ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಹುವಾವೇ ಸಿಇಒ ಆದಾಯ ತೆರಿಗೆ ಇಲಾಖೆಯ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ ಎಂದು ತಿಳಿಸಿದ್ದಾರೆ ಹಾಗೂ ಚೀನಾಗೆ ಮರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

    ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಲಿ ಅವರ ವಕೀಲ ವಿಜಯ್ ಅಗರ್ವಾಲ್ ಕಕ್ಷಿದಾರರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯಕ್ಕೆ ಬಾಹ್ಯಾಕಾಶದಿಂದಲೂ ಬಂತು ಶುಭ ಹಾರೈಕೆ

    ಚೀನಾದ ಟೆಲಿಕಾಂ ಕಂಪನಿಯ ಭಾರತೀಯ ಶಾಖೆಗಳ ಮೇಲೆ ಕಳೆದ ಕೆಲವು ತಿಂಗಳುಗಳ ಹಿಂದೆ ಐಟಿ ಇಲಾಖೆ ರೇಡ್ ನಡೆಸಿತ್ತು. ಅದರ ತನಿಖೆ ಇನ್ನೂ ನಡೆಯುತ್ತಿದ್ದು, ಲಿ ಅವರು ತಮ್ಮ ತಾಯ್ನಾಡು ಚೀನಾಗೆ ಮರಳಿದರೆ, ಅವರನ್ನು ವಿಚಾರಣೆಗಾಗಿ ವಾಪಸ್ ಕರೆತರುವುದು ಭಾರತಕ್ಕೆ ಅತ್ಯಂತ ಕಷ್ಟವಾಗಬಹುದು ಎಂದು ಐಟಿ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.

    ಐಟಿ ಇಲಾಖೆ ಲಿ ವಿರುದ್ಧ ಹೊರಡಿಸಿರುವ ಲುಕೌಟ್ ನೋಟಿಸ್ ರದ್ದುಗೊಳಿಸುವಂತೆ ವಕೀಲರು ಮನವಿ ಮಾಡಿದ್ದಾರೆ. ಆದರೆ ಲುಕೌಟ್ ನೋಟಿಸ್ ರದ್ದು ಮಾಡದಂತೆ ಐಟಿ ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್‌?

    Live Tv
    [brid partner=56869869 player=32851 video=960834 autoplay=true]

  • ಚೀನೀ ಟೆಲಿಕಾಂ ಕಂಪನಿ ಹುವಾವೇ ಮೇಲೆ ಐಟಿ ರೇಡ್

    ಚೀನೀ ಟೆಲಿಕಾಂ ಕಂಪನಿ ಹುವಾವೇ ಮೇಲೆ ಐಟಿ ರೇಡ್

    ನವದೆಹಲಿ: ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮಂಗಳವಾರ ದೇಶದ ಹಲವೆಡೆ ಚೀನಾದ ಹುವಾವೇ ಕಂಪನಿಯ ಬ್ರ್ಯಾಚ್‌ಗಳ ಮೇಲೆ ದಾಳಿ ನಡೆಸಿವೆ.

    ಚೀನಾದ ಟೆಲಿಕಾಂ ಕಂಪನಿ ಹುವಾವೇಯ ಭಾರತೀಯ ಶಾಖೆಗಳಲ್ಲಿ ಐಟಿ ದಾಳಿ ನಡೆದಿವೆ. ದೆಹಲಿ, ಗುರುಗ್ರಾಮ(ಹರ್ಯಾಣ) ಹಾಗೂ ಬೆಂಗಳೂರಿನ ಹುವಾವೇ ಕಂಪನಿ ಆವರಣಗಳಲ್ಲಿ ದಾಳಿ ನಡೆದಿದೆ ಎಂದು ಬುಧವಾರ ವರದಿಗಳು ತಿಳಿಸಿವೆ.

    ನಮ್ಮ ಕಚೇರಿಗೆ ಆದಾಯ ತೆರಿಗೆ ತಂಡ ಭೇಟಿ ನೀಡಿರುವುದಾಗಿ ಮಾಹಿತಿ ದೊರಕಿದೆ. ಭಾರತದಲ್ಲಿ ನಮ್ಮ ಕಾರ್ಯಾಚರಣೆಗಳು ಎಲ್ಲಾ ಕಾನೂನು ಹಾಗೂ ನಿಬಂಧನೆಗಳನ್ನು ಅನುಸರಿಸುತ್ತಿವೆ ಎಂಬ ವಿಶ್ವಾಸವಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಸರ್ಕಾರಿ ಇಲಾಖೆಗಳನ್ನು ಸಂಪರ್ಕಿಸುತ್ತೇವೆ. ನಿಯಮ ನಿಬಂಧನೆಗಳಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಫೇಸ್‌ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್‌ಬರ್ಗ್

    ಕಳೆದ ವರ್ಷ ಚೀನಾದ ಮೊಬೈಲ್ ಸಂವಹನ ಹಾಗೂ ಹ್ಯಾಂಡ್‌ಸೆಟ್ ತಯಾರಿಕಾ ಕಂಪನಿಗಳಾದ ಕ್ಸಿಯೋಮಿ, ಓಪ್ಪೋ ಹಾಗೂ ಆ ಕಂಪನಿಗೆ ಸಂಬಂಧ ಪಟ್ಟವರ ವ್ಯಕ್ತಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ದಾಳಿಯಲ್ಲಿ 6,500 ಕೋಟಿ ರೂ. ಮೌಲ್ಯದ ದಾಖಲೆಗಳಿಲ್ಲದ ಆದಾಯವನ್ನು ಪತ್ತೆ ಹಚ್ಚಿತ್ತು. ಇದನ್ನೂ ಓದಿ: ವಾಟ್ಸಪ್‌ಗೂ ಬರಲಿದೆ ಫೇಸ್‌ಬುಕ್‌ನಂತಹ ಕವರ್ ಫೋಟೋ ಫೀಚರ್

    ಈ ವಾರದ ಆರಂಭದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಚೀನಾ ಮೂಲದ 54 ಆಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ.

  • 59 ಆಪ್‌ ಆಯ್ತು ಈಗ 7 ಚೀನಿ ಕಂಪನಿಗಳ ವಿರುದ್ಧ ಕ್ರಮ – ಹುವಾವೇ, ಅಲಿಬಾಬಾ ಮೇಲೆ ನಿಗಾ

    59 ಆಪ್‌ ಆಯ್ತು ಈಗ 7 ಚೀನಿ ಕಂಪನಿಗಳ ವಿರುದ್ಧ ಕ್ರಮ – ಹುವಾವೇ, ಅಲಿಬಾಬಾ ಮೇಲೆ ನಿಗಾ

    ನವದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಯೋಧರ ಹತ್ಯೆಗೆ ಪ್ರತೀಕಾರವಾಗಿ 59 ಅಪ್ಲಿಕೇಶನ್‌ನಗಳನ್ನು ನಿಷೇಧಿಸಿದ ಬೆನ್ನಲ್ಲೇ ಈಗ ಚೀನಾ ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಜೊತೆ ನೇರವಾಗಿ ಗುರುತಿಸಿಕೊಂಡಿರುವ 7 ಪ್ರಮುಖ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲು ಭಾರತ ಸರ್ಕಾರ ಮುಂದಾಗಿದೆ.

    ಹುವಾವೇ, ಅಲಿಬಾಬಾ, ಕ್ಷಿಇಂಡಿಯಾ ಸ್ಟೀಲ್ಸ್‌, ಕ್ಸಿನ್ಸಿಂಗ್‌ ಕ್ಯಾಥೆ ಇಂಟರ್‌ ನ್ಯಾಷನಲ್‌, ಚೀನಾ ಇಲೆಕ್ಟ್ರಾನಿಕ್‌ ಟೆಕ್ನಾಲಜಿ ಗ್ರೂಪ್‌, ಟೆನ್ಸೆಂಟ್‌ ಮತ್ತು ಎಸ್‌ಎಐಸಿ ಮೋಟಾರ್‌ ಕಾರ್ಪೊರೇಷನ್‌ ಕಂಪನಿಗಳ ಮೇಲೆ ಸರ್ಕಾರ ನಿಗಾವಹಿಸಿದೆ ಎಂದು ಮೂಲಗಳು ತಿಳಿಸಿವೆ.

    2017ರಲ್ಲಿ ಚೀನಾ ತನ್ನ ಗುಪ್ತಚರ ಕಾನೂನಿಗೆ ತಿದ್ದುಪಡಿ ತಂದಿದೆ. ಈ ಕಾನೂನಿನ ಪ್ರಕಾರ ಸರ್ಕಾರದ ಜಂಟಿ ಸಹಭಾಗಿತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಗುಪ್ತಚರ ಇಲಾಖೆಗೆ ಮಾಹಿತಿ ನೀಡುವ ಅಧಿಕಾರವನ್ನು ಹೊಂದಿರುತ್ತದೆ. ಗುಪ್ತಚರ ಕೆಲಸವನ್ನು ಬೆಂಬಲಿಸಿ, ಸಹಾಯ ಮಾಡುವ ಸಂಸ್ಥೆಗಳನ್ನು ಚೀನಾ ಸರ್ಕಾರ ರಕ್ಷಣೆ ಮಾಡಲಿದೆ.

    ಈಗಾಗಲೇ 5ಜಿ ವಿಚಾರಕ್ಕೆ ಸಂಬಂಧಿಸಿದಂತೆ ಹುವಾವೇ ಈಗಾಗಲೇ ಅಮೆರಿಕ, ಜಪಾನ್‌, ಬ್ರಿಟನ್‌, ಆಸ್ಪ್ರೇಲಿಯಾ ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ಹುವಾವೇ ಟೆಲಿಕಾಂ ಕಂಪನಿಯ ಸ್ಥಾಪಕ ರೆನ್‌ ಝೆಂಗ್‌ಫೆಯ್‌, ಪಿಎಲ್‌ಎಯ ಎಂಜಿನಿಯರಿಂಗ್‌ ವಿಭಾಗದ ಮಾಜಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಹುವಾವೇ ಇಂಡಿಯಾ 2018-19ರಲ್ಲಿ 12,800 ಕೋಟಿ ರೂ. ಆದಾಯವನ್ನು ಸಂಪಾದಿಸಿತ್ತು.

    ಅಲಿಬಾಬಾ, ಬೈಡು, ಟೆನ್ಸೆಂಟ್‌ ಕಂಪನಿಗಳು ಸೇನೆಯ ಭಾಗವಾಗಿ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌) ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶ್ವದ ಶತಕೋಟಿ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿರುವ ಜ್ಯಾಕ್‌ ಮಾ ಮಾಲೀಕತ್ವದ ಅಲಿಬಾಬಾ ಸಂಸ್ಥೆ ಪೇಟಿಎಂ, ಝೊಮೆಟೋ, ಬಿಗ್‌ ಬಾಸ್ಕೆಟ್‌ ಸೇರಿದಂತೆ ಭಾರತದ ಪ್ರಸಿದ್ಧ ಕಂಪನಿಗಳಲ್ಲಿ ನೂರಾರು ಕೋಟಿ ರು. ಹೂಡಿಕೆ ಮಾಡಿದೆ. ಇಂಟರ್‌ನೆಟ್‌ ಕಂಪನಿಯಾದ ಟೆನ್ಸೆಂಟ್‌ ಫ್ಲಿಪ್‌ಕಾರ್ಟ್‌ನಲ್ಲಿ 5,300 ಕೋಟಿ ರೂ., ಓಲಾ ಕ್ಯಾಬ್‌ನಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ.

    ಶಾಂಘೈ ಅಟೋಮೊಟಿವ್‌ ಇಂಡಸ್ಟ್ರಿ ಕಾರ್ಪೊರೇಷನ್‌(ಎಸ್‌ಎಐಸಿ) ಚೀನಾದ ಅಟೊಮೊಬೈಲ್‌ ಕಂಪನಿ ಭಾರತದಲ್ಲಿ ಎಂಜಿ ಹೆಕ್ಟರ್‌ ಹೆಸರಿನಲ್ಲಿ ಎಸ್‌ಯುವಿ(ಸ್ಫೋರ್ಟ್ಸ್‌ ಯುಟಿಲಿಟಿ ವೆಹಿಕಲ್‌) ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಕಂಪನಿಯ ಅಂಗಸಂಸ್ಥೆ ನಾನ್ಜಿಂಗ್‌ ಅಟೋಮೊಬೈಲ್‌ ಈ ಹಿಂದೆ ಪಿಎಲ್‌ಎಗೆ ವಾಹನಗಳನ್ನು ವಿತರಣೆ ಮಾಡುತ್ತಿತ್ತು. ಕ್ಸಿನ್ಸಿಂಗ್‌ ಕ್ಯಾಥೆ ಇಂಟರ್‌ ನ್ಯಾಷನಲ್‌ ಗ್ರೂಪ್‌ ಲೋಹ ಉದ್ಯಮ ಕಂಪನಿಯಾಗಿದ್ದು, ಆಂಧ್ರ ಪ್ರದೇಶದಲ್ಲಿ 2018ರಲ್ಲಿ 320 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದೆ.

    ಭಾರತದಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ಇರುವ ಕಾರಣ ಚೀನಾದ ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ. ಆದರೆ ಇನ್ನು ಮುಂದೆ ವಿದೇಶಿ ಹೂಡಿಕೆ ವಿಚಾರದಲ್ಲಿ ಕೆಲ ನಿಯಮಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

  • ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

    ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

    ನವದೆಹಲಿ: ಸ್ಯಾಮ್ ಸಂಗ್ 23.3% ಸ್ಮಾರ್ಟ್ ಫೋನ್ ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

    ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) 2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಸಾಗಾಟ ಮಾಡಿದ ಕಂಪೆನಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಸ್ಯಾಮ್ ಸಂಗ್ 7.82 ಕೋಟಿ ಫೋನ್‍ಗಳನ್ನು ಮಾರಾಟ ಮಾಡಿ, 23.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ 2.4% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

    ಜಾಗತಿಕವಾಗಿ ಮೊದಲ ತ್ರೈಮಾಸಿಕದಲ್ಲಿ 33.43 ಕೋಟಿ ಸ್ಮಾರ್ಟ್ ಫೋನ್‍ಗಳು ಮಾರಾಟಗೊಂಡಿದ್ದರೆ 2017ರ ಈ ಅವಧಿಯಲ್ಲಿ 34.44 ಕೋಟಿ ಫೋನ್‍ಗಳು ಮಾರಾಟಗೊಂಡಿತ್ತು. ಈ ವರ್ಷ 2.4% ಮಾರಾಟ ಕಡಿಮೆಯಾಗಿದೆ ಎಂದು ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ತಿಳಿಸಿದೆ.

    ಸ್ಮಾರ್ಟ್ ಫೋನ್ ಸಾಗಾಟ ಕಡಿಮೆಯಾಗಲು ಚೀನಾ ಮಾರುಕಟ್ಟೆ ಕಾರಣ. ಚೀನಾದ ಜನತೆ ದುಬಾರಿ ಬೆಲೆ ಫೋನ್ ಖರೀದಿಸುತ್ತಿದ್ದಾರೆ. ಈ ಫೋನ್‍ಗಳು ಹೆಚ್ಚು ದಿನಗಳ ಕಾಲ ಬಳಸುತ್ತಿರುವುದರಿಂದ ಸ್ಮಾರ್ಟ್ ಫೋನ್ ಮಾರಾಟ ಇಳಿಕೆಯಾಗಿದೆ ಎಂದು ಐಡಿಸಿ ತಿಳಿಸಿದೆ.

    ಜಾಗತಿಕವಾಗಿ ಹಾಗೂ ಚೈನಾದಲ್ಲಿ ಜನರು ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್‍ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅವುಗಳು ಹೆಚ್ಚು ಕಾಲ ಬಳಕೆಯಲ್ಲಿರುತ್ತವೆ ಹಾಗಾಗಿ ಸ್ಮಾರ್ಟ್ ಫೋನ್ ಸಾಗಾಟ ಇಳಿಕೆ ಕಂಡಿದೆ ಎಂದು ಐಡಿಸಿ ಸಂಶೋಧಕಿ ಮೆಲಿಸಾ ಚೌ ತಿಳಿಸಿದ್ದಾರೆ. ಡಾಲರ್ ಲೆಕ್ಕದಲ್ಲಿ ನೋಡಿದರೆ ಸ್ಮಾರ್ಟ್ ಫೋನ್ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬಳಕೆದಾರರು ತಮ್ಮ ಬಹುತೇಕ ಕೆಲಸಗಳ ಲೆಕ್ಕಾಚಾರಗಳಿಗೆ ಸ್ಮಾರ್ಟ್ ಫೋನ್ ಅನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಆಪಲ್ 5.22 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 15.6% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಹುವಾವೇ 3.93 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿದ್ದು, 11.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 13.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ.

    ಕ್ಸಿಯೋಮಿ 2.80 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 8.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 87.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಒಪ್ಪೊ 2.39 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 7.1% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 7.5% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

    ಇತರೆ ಕಂಪೆನಿಗಳು ಒಟ್ಟು 11.27 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಸಾಗಾಟ ಮಾಡಿದ್ದು, 33.7% ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 18.5% ಅಷ್ಟು ಮಾರುಕಟ್ಟೆ ಪಾಲು ಕಡಿಮೆಯಾಗಿದೆ.