Tag: HSTDV

  • ಹೈಪರ್ ಸಾನಿಕ್ ವೆಹಿಕಲ್ ಉಡಾವಣೆ ಯಶಸ್ವಿ- ಭಾರತದ ಐತಿಹಾಸಿಕ ಸಾಧನೆ

    ಹೈಪರ್ ಸಾನಿಕ್ ವೆಹಿಕಲ್ ಉಡಾವಣೆ ಯಶಸ್ವಿ- ಭಾರತದ ಐತಿಹಾಸಿಕ ಸಾಧನೆ

    ನವದೆಹಲಿ: ಹೈಪರ್ ಸಾನಿಕ್ ವೆಹಿಕಲ್ ಯಶಸ್ವಿ ಉಡಾವಣೆ ಮೂಲಕ ಭಾರತ ಐತಿಹಾಸಿಕ ಸಾಧನೆಗೆ ಇಂದು ಸಾಕ್ಷಿಯಾಗಿದೆ. ಒಡಿಶಾ ಕರಾವಳಿಯಲ್ಲಿರುವ ಎಪಿಜೆ ಅಬ್ದುಲ್ ಕಲಾಂ ರೇಂಜ್ ನಲ್ಲಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಹೈಪರ್ ಸಾನಿಕ್ ಟೆಕ್ನಾಲಜಿ ಡೆಮೊನ್ ಸ್ಟ್ರೇಷನ್ ವೆಹಿಕಲ್ (ಹೆಚ್‍ಎಸ್‍ಟಿಡಿವಿ) ತಯಾರಿಸುವಲ್ಲಿ ಭಾರತ ಸ್ವಾವಲಂಬಿಯತ್ತ ಹೆಜ್ಜೆ ಇರಿಸಿದೆ.

    ಜಗತ್ತಿನಲ್ಲಿ ಭಾರತ ಹೆಚ್‍ಎಸ್‍ಟಿಡಿವಿ ತಯಾರಿಸಿದ ನಾಲ್ಕನೇ ರಾಷ್ಟ್ರವಾಗಿದೆ. ಈ ಮೊದಲು ಅಮೆರಿಕಾ, ರಷ್ಯಾ ಮತ್ತು ಚೀನಾ ಬಳಿಕ ಹೈಪರ್ ಸಾನಿಕ್ ವೆಹಿಕಲ್ ತಯಾರಿಸಿವೆ. ಭಾರತ ಮುಂದಿನ ಐದು ವರ್ಷದಲ್ಲಿ ಹೈಪರ್ ಸಾನಿಕ್ ಮಿಸೈಲ್ ಸಿದ್ಧಪಡಿಸಬಹುದಾಗಿದೆ. ಈ ಟೆಕ್ನಾಲಜಿ ಶಬ್ದದ ಆರು ಪಟ್ಟು ವೇಗದಲ್ಲಿ ಹಾರಾಡುವ ಕ್ಷಿಪಣಿಗಳ ಅಭಿವೃದ್ಧಿಗೆ ಪೂರಕವಾಗಬಲ್ಲದಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನ ಮಂತ್ರಿ ಅವರ ಆತ್ಮನಿರ್ಭರ ಭಾರತ ಯೋಜನೆ ಸಾಕಾರಗೊಳಿಸಲು ಇದೊಂದು ಮೈಲಿಗಲ್ಲಾಗಲಿದೆ. ಡಿಆರ್ ಡಿಓ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಈ ಪ್ರೊಜೆಕ್ಟ್ ನಲ್ಲಿ ಕಾರ್ಯನಿರ್ವಹಿಸಿದ ಎಲ್ಲ ವಿಜ್ಞಾನಿಗಳಿಗೆ ಶುಭಾಶಯ ಹೇಳುತ್ತೇನೆ. ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

    ಹೈಪರ್ ಸಾನಿಕ್ ಮಿಸೈಲ್ ಒಂದು ಸೆಕೆಂಡ್‍ಗೆ 2 ಕಿ,ಮೀ. ಎತ್ತರ ನೆಗೆಯಬಲ್ಲ ಸಾಮರ್ಥ್ಯ ಹೊಂದಿದೆ. ಇದಕ್ಕೆ ಶಬ್ಧದ ಆರು ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯವಿದೆ. ಈ ತಂತ್ರಜ್ಞಾನವನ್ನ ದೇಶದ ತಯಾರಿಸಲಾದ ಸ್ಕ್ರೆಮಜೆಟ್ ಪ್ರಪೂಲನ್ಸ್ ಸಿಸ್ಟಮ್ ಗಳಲ್ಲಿ ಬಳಕೆ ಮಾಡಬಹುದಾಗಿದೆ.