Tag: HR Srinath

  • ನಗರಸಭೆ ಗದ್ದುಗೆಗೆ ಗೇಮ್ ಪ್ಲಾನ್ – ಜೆಡಿಎಸ್‍ನ ಇಬ್ಬರು ಸದಸ್ಯರ ಬೆಂಬಲ ಗಿಟ್ಟಿಸಿದ ಬಿಜೆಪಿ

    ನಗರಸಭೆ ಗದ್ದುಗೆಗೆ ಗೇಮ್ ಪ್ಲಾನ್ – ಜೆಡಿಎಸ್‍ನ ಇಬ್ಬರು ಸದಸ್ಯರ ಬೆಂಬಲ ಗಿಟ್ಟಿಸಿದ ಬಿಜೆಪಿ

    ಕೊಪ್ಪಳ: ನಗರಸಭೆ ಗುದ್ದುಗೆಗಾಗಿ ಶಾಸಕ ಪರಣ್ಣ ಮುನ್ನವಳ್ಳಿ ಜೆಡಿಎಸ್‍ನ ಇಬ್ಬರು ಸದಸ್ಯರು, ಇಬ್ಬರು ಪಕ್ಷೇತರರನ್ನು ಕರೆದೊಯ್ಯುವ ಮೂಲಕ ಬಿಜೆಪಿ-ಜೆಡಿಎಸ್ ಕೈಜೊಡಿಸಲು ಮುಂದಾಗಿದ್ದಾರೆ.

    ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರವಾದ ಹಿನ್ನೆಲೆಯಲ್ಲಿ ಬಿಜೆಪಿ ಗೇಮ್ ಪ್ಲಾನ್ ಆರಂಭಿಸಿದ್ದು, ಜೆಡಿಎಸ್ ಮುಖಂಡ ಶ್ರೀನಾಥ್ ಕೂಡ ಬಿಜೆಪಿಗೆ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಮಾತ್ರ ಇದು ಸಾಧ್ಯವಿಲ್ಲ ಎಂದರು. ಇದನ್ನು ಓದಿ: ಗಂಗಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ- ಎಚ್‍ಆರ್ ಶ್ರೀನಾಥ್

    ಮೊದಲಿನಿಂದಲೂ ಮನಸ್ತಾಪಗಳು ಇದ್ದ ಕಾರಣ ಕಾಂಗ್ರೆಸ್‍ನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯನ್ನು ಅಧಿಕಾರದಿಂದ ದೂರವಿಡಲು ಗಂಗಾವತಿಯಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿವೆ. ಒಟ್ಟು 35 ಸ್ಥಾನ ಹೊಂದಿದ್ದ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 17, ಬಿಜೆಪಿ 14, ಪಕ್ಷೇತರ 2, ಜೆಡಿಎಸ್ 2 ಅಭ್ಯರ್ಥಿಗಳು ಆಯ್ಕೆಯಾಗಿದ್ರು. ಮ್ಯಾಜಿಕ್ ನಂ 18 ಕ್ಕೇರಲು ಬಿಜೆಪಿ ಕಸರತ್ತು ನಡೆಸುತ್ತಿದೆ ಎಂದು ತಿಳಿಸಿದರು.

    ನಿನ್ನೆ ಲೋಕಲ್ ದೋಸ್ತಿ ಮಾಡನಾಡಿದ ಅವರು ಸಿಎಂ ಕುಮಾರಸ್ವಾಮಿ ಅವರು ರಾಜ್ಯ ಮಟ್ಟದ ಬಳಿಕ ಲೋಕಲ್‍ನಲ್ಲೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧ್ಯವಾಗಲಿದೆ. ಆದರೆ ಕೊಪ್ಪಳದ ಲೋಕಲ್‍ನಲ್ಲಿ ಮಾತ್ರ ಸಿಎಂ ಮಾತಿಗೆ ಕಿಮ್ಮತ್ತಿಲ್ಲ. ಗಂಗಾವತಿ ನಗರಸಭೆಯಲ್ಲಿ ಅತಿದೊಡ್ಡ ಪಕ್ಷವಾದರೂ ಕಾಂಗ್ರೆಸ್‍ಗೆ ಇಲ್ಲ ಗದ್ದುಗೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಗಂಗಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ- ಎಚ್‍ಆರ್ ಶ್ರೀನಾಥ್

    ಗಂಗಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ- ಎಚ್‍ಆರ್ ಶ್ರೀನಾಥ್

    -ಬಿಜೆಪಿ ಜೊತೆ ಕೈ ಜೋಡಿಸಲು ಸಿದ್ಧ

    ಕೊಪ್ಪಳ: ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಇರಬಹುದು. ಆದ್ರೆ, ಗಂಗಾವತಿಯಲ್ಲಿ ಅದು ಸಾಧ್ಯವಿಲ್ಲ ಎಂದು ಜೆಡಿಎಸ್‍ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಹೈಕಮಾಂಡ್ ಉಸ್ತುವಾರಿ ಎಚ್‍ಆರ್ ಶ್ರೀನಾಥ್ ಹೇಳಿದ್ದಾರೆ.

    ಕೊಪ್ಪಳದ ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ಎದುರಾದರೆ ಬಿಜೆಪಿ ಜೊತೆ ಕೈ ಜೋಡಿಸುತ್ತೇವೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಜೊತೆ ಒಪ್ಪಂದ ಎಂದು ತಿಳಿಸಿದ್ದಾರೆ. ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರವಾಗೋ ಸಾಧ್ಯತೆ ಇದೆ. ಅಧಿಕಾರ ಹಿಡಿಯುವಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ನಾವು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಬಿಜೆಪಿ ಬೆಂಬಲ ಕೊಟ್ಟರೆ ನಾವು ಸ್ವಾಗತ ಮಾಡುತ್ತೀವಿ ಅವರ ಜೊತೆ ಕೈ ಜೋಡಿಸುತ್ತಿವಿ ಎಂದು ಅವರು ತಿಳಿಸಿದ್ದಾರೆ.

    ಗಂಗಾವತಿಯಲ್ಲಿ ನಾವು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅನ್ಸಾರಿ ಕುಮಾರಸ್ವಾಮಿ ಅವರನ್ನು ನಾಯಕ ಎಂದು ಒಪ್ಪುದಿಲ್ಲವಂತೆ. ಈ ಕಾರಣಕ್ಕೆ ನಾವು ಯಾವತ್ತೂ ಕಾಂಗ್ರೆಸ್ ಜೊತೆ ಹೋಗಲ್ಲ. ನಮ್ಮ ನಾಯಕರಿಗೆ ಗಂಗಾವತಿ ಕಾಂಗ್ರೆಸ್ ಮುಖಂಡರಿಂದ ಮರ್ಯಾದೆ ಇಲ್ಲ. ಈ ಕಾರಣಕ್ಕೆ ನಾವು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv