Tag: hr ranganath

  • ನಿಮ್ಮ ಪಬ್ಲಿಕ್‌ ಟಿವಿಗೆ 13ನೇ ಸಂಭ್ರಮ!

    ನಿಮ್ಮ ಪಬ್ಲಿಕ್‌ ಟಿವಿಗೆ 13ನೇ ಸಂಭ್ರಮ!

    “ಯಾರ ಆಸ್ತಿಯೂ ಅಲ್ಲ. ಇದು ನಿಮ್ಮ ಟಿವಿ” ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12, 2012ರಂದು ಲೋಕಾರ್ಪಣೆಗೊಂಡ ಕನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ನಿಮ್ಮ ಪಬ್ಲಿಕ್ ಟಿವಿಗೆ (PUBLiC TV) ಇಂದು 13ನೇ ಹುಟ್ಟುಹಬ್ಬದ ಸಂಭ್ರಮ. ಪಬ್ಲಿಕ್ ಮೂವೀಸ್‌ಗೆ (PUBLIC MOVIES) 7 ರ ಸಂಭ್ರಮ.

    ಪಬ್ಲಿಕ್ ಟಿವಿಯ ಈ 13 ವರ್ಷ ಸಾಧನೆಯ ಹಿಂದೆ ಸ್ಫೂರ್ತಿದಾಯಕ ಕಥೆಯಿದೆ. ಪುಟ್ಟ ಕುಟುಂಬವಾಗಿ ಶುರುವಾದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಇಂದು ಇಷ್ಟು ದೊಡ್ಡ ಬಳಗ ಹೊಂದಲು ನಿಮ್ಮೆಲ್ಲರ ಪ್ರೀತಿಯೇ ಮುಖ್ಯ ಕಾರಣ. ನಮ್ಮನ್ನು ನೀವು ನಿರಂತರವಾಗಿ ಪ್ರೋತ್ಸಾಹಿಸಿದ್ದರಿಂದ ನಾವು ಅಂಬೆಗಾಲಿನಿಂದ 12 ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ನಿಧಾನವಾಗಿ ನಡೆಯಲು ಆರಂಭಿಸಿದ್ದೇವೆ.

    12 ಪುಟ್ಟ ಹೆಜ್ಜೆಗಳನ್ನು ಇಟಿದ್ದೇವೆ ಹೌದು. ಆದರೆ ನಮ್ಮು ಮುಂದಿನ ಹೆಜ್ಜೆಯ ಮುಂದೆ ದೊಡ್ಡ ಸವಾಲಿದ್ದು ಇಂದು ಜನರ ಕೈಯಲ್ಲೇ ಟಿವಿಯಿದೆ. ಕೈಯಲ್ಲೊಂದು ಫೋನ್‌ ಇದ್ದರೆ ವಿಶ್ವದ ಸಕಲ ಮಾಹಿತಿಗಳು ಬೆರಳಂಚಿನಲ್ಲೇ ಸಿಗುತ್ತಿದೆ. ಸಾಮಾಜಿಕ ಜಾಲತಾಣಗಳು ಇಂದು ಮಾಧ್ಯಮವಾಗಿ ಬದಲಾಗಿದ್ದು ಲೆಕ್ಕವಿಲ್ಲದ್ದಷ್ಟು ಚಾನೆಲ್‌ಗಳು ಸೃಷ್ಟಿಯಾಗಿವೆ. ಪರಿಸ್ಥಿತಿ ಹೀಗಿರುವಾಗ ಸುದ್ದಿಯನ್ನು ಅತ್ಯಂತ ಶೀಘ್ರವಾಗಿ, ಎಲ್ಲರಿಗಿಂತ ಮೊದಲು ಮತ್ತು ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ಮಾಡಿ ಪ್ರಸಾರ ಮಾಡುವುದು ಅಂದರೆ ಸುಲಭದ ಮಾತಲ್ಲ. ಸುದ್ದಿ ಹೊತ್ತು ತಂದ ವರದಿಗಾರನಿಂದ ಹಿಡಿದು, ಸುದ್ದಿಪ್ರತಿಯನ್ನು ತಿದ್ದಿ ತೀಡಿ, ಸುದ್ದಿವಾಚಕರ ಮೂಲಕ ವೀಕ್ಷಕರಿಗೆ ತಲುಪಿಸುವವರೆಗೂ ಆ ವಾರ್ತೆಯ ಹಿಂದೆ ಹಲವರ ಶ್ರದ್ಧೆ ಮತ್ತು ಶ್ರಮವಿರುತ್ತದೆ.

    ಇಚ್ಛಾಶಕ್ತಿ, ದೃಢ ಸಂಕಲ್ಪ, ಹಠ-ಛಲವಿದ್ದರೆ ಬೆಟ್ಟವನ್ನೇ ಕುಟ್ಟಿ ಪುಡಿಗಟ್ಟಬಹುದು ಎನ್ನುತ್ತಾರೆ ಹಿರಿಯರು. ಪಬ್ಲಿಕ್ ಟಿವಿಯ ಆರೋಹಣದ ಹಿಂದೆಯೂ ಇಂಥದ್ದೇ ಸ್ಫೂರ್ತಿದಾಯಕ ಕಥೆಯಿದೆ. ಹೆಚ್.ಆರ್.ರಂಗನಾಥ್ (HR Ranganath) ಅವರು ತಮ್ಮ ಪ್ರತಿಭೆ, ಸಾಮರ್ಥ್ಯವನ್ನೇ ಶಕ್ತಿಯಾಗಿಸಿ, ವೃತ್ತಿನಿಷ್ಠೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಉತ್ತಮ ತಂಡವನ್ನು ಕಟ್ಟಿದ್ದರಿಂದ ಪಬ್ಲಿಕ್‌ ಟಿವಿ ಇಂದು ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯಾಗಿ ಹೊರಹೊಮ್ಮಿದೆ.

    ಈ 13 ವರ್ಷದ ಪಬ್ಲಿಕ್‌ ಟಿವಿ ಪ್ರಯಾಣ ಸುಲಭವಾಗಿರಲಿಲ್ಲ. ಹಲವು ಸಂಕಷ್ಟಗಳು ಬಂದರೂ ನಮ್ಮ ಕೈ ಹಿಡಿದು ಮುನ್ನಡೆಸಿದ್ದು ವೀಕ್ಷಕರಾದ ನೀವು. ವೀಕ್ಷಕ ಪ್ರಭುವಿನ ಪ್ರೀತಿಯಿಲ್ಲದೆ ನಾವಿಲ್ಲ. ನಿಮ್ಮೆಲ್ಲರ ಸಹಕಾರಕ್ಕೆ ಕೋಟಿ ನಮನ. 13 ವರುಷಗಳ ನಮ್ಮ ನಿಮ್ಮ ಈ ಅವಿಸ್ಮರಣೀಯ ಅನುಬಂಧ ಸದಾ ಹೀಗೆಯೇ ಮುಂದುವರಿಯಬೇಕು ಎನ್ನುವುದು ನಮ್ಮ ಆಶಯ. ನಮ್ಮ ಈ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಜಾಹೀರಾತುದಾರರು ಹಾಗೂ ಕೇಬಲ್ ಆಪರೇಟರ್‌ಗಳಿಗೂ ಹೃದಯಪೂರ್ವಕ ಧನ್ಯವಾದ ಹೇಳುತ್ತಾ 2012 ರಿಂದ 2024 ವರೆಗಿನ 12 ವರ್ಷದ ಪಬ್ಲಿಕ್‌ ಟಿವಿ ಪ್ರಯಾಣ ಹೇಗಿತ್ತು ಎಂಬ ಕಿರು ವಿವರವನ್ನು ಇಲ್ಲಿ ನೀಡಲಾಗಿದೆ.

    2012:
    ಜನರಿಗಾಗಿ, ಜನರಿಗೋಸ್ಕರ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ ಆರಂಭಗೊಂಡಿತ್ತು. ಪರೀಕ್ಷೆ ಬರೆದು ತೇರ್ಗಡೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ತರಬೇತಿ ನೀಡಿದ ಬಳಿಕ ವಾಹಿನಿಯನ್ನು ಆರಂಭಿಸಲಾಗಿತ್ತು. ಉದ್ಯೋಗಿಗಳ ಪೈಕಿ ಶೇ.80 ರಷ್ಟು ಮಂದಿ ಮಾಧ್ಯಮ ಜಗತ್ತಿಗೆ ಹೊಸಬರು. ಲೋಕಾರ್ಪಣೆಗೊಂಡ ಮೊದಲ ವಾರ್ತೆಯಲ್ಲೇ ಭಾಷೆ, ನೆಲ, ಜಲದ ವಿಷಯದಲ್ಲಿ ನಾವು ರಾಜಿಯಾಗುವುದಿಲ್ಲ ಎಂದು ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ ಅವರು ಜನರಿಗೆ ಆಶ್ವಾಸನೆ ನೀಡಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಾಹಿನಿಗೆ ಶುಭ ಹಾರೈಸಿದ್ದರು.

    2013:
    ಮೊದಲ ವರ್ಷದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಟಿಎಸ್‌ ನಾಗಾಭರಣ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಹೆಚ್‌.ಆರ್‌. ರಂಗನಾಥ್‌ ಅವರ ಪತ್ರಿಕೋದ್ಯಮ ಗುರು ಸತ್ಯ, ನಟ ನೆನಪಿರಲಿ ಪ್ರೇಮ್‌, ಕ್ರೀಡಾಪಟು ಗಿರೀಶ್‌, ಆಟೋ ಚಾಲಕ ವೇಣುಗೋಪಾಲ್‌ ಸೇರಿದಂತೆ ಹಲವು ಗಣ್ಯರ ಜೊತೆ ʼಪಬ್ಲಿಕ್‌ ವಿಥ್‌ ಪಬ್ಲಿಕ್ಸ್‌ʼ ಹೆಸರಿನ ಕಾರ್ಯಕ್ರಮ ನಡೆಯಿತು. ಅಂದು ಸಂಜೆ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರ ಸಂದರ್ಶನ ʼಕೃಷ್ಣ ಪಯಣʼ ನಡೆಯಿತು.

    2014:
    ರಾಷ್ಟ್ರವಾಪಿ ಲೋಕಪಾಲ್‌ ವಿರುದ್ಧ ಹೋರಾಟ ನಡೆದ ವರ್ಷ ಇದು. ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಅಂದೇ ಸಿಎಂ ಸಿದ್ದರಾಮಯ್ಯನವರ ಜೊತೆಗಿನ ವಿಶೇಷ ಸಂದರ್ಶನ ಸಹ ಪ್ರಸಾರವಾಗಿತ್ತು. 2014 ರ ಸೆಪ್ಟೆಂಬರ್‌ 27 ರಂದು ರೈಟ್‌ಮೆನ್‌ ಮೀಡಿಯಾದ ಎರಡನೇ ವಾಹಿನಿ ʼಪಬ್ಲಿಕ್‌ ಮ್ಯೂಸಿಕ್‌ʼ ಆರಂಭವಾಗಿತ್ತು.

    2015:
    ಸರಳವಾಗಿ ಪಬ್ಲಿಕ್‌ ಟಿವಿ ಕಚೇರಿಯಲ್ಲಿ 3ನೇ ವಾರ್ಷಿಕೋತ್ಸವ ನಡೆಯಿತು. ಪಬ್ಲಿಕ್‌ ಟಿವಿ ಸಹೋದ್ಯೋಗಿಗಳ ಜೊತೆ ಹೆಚ್‌ ಆರ್‌ ರಂಗನಾಥ್‌ ದಂಪತಿ ಅವರು ಕೇಕ್‌ ಕತ್ತರಿಸಿದರು. ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಪಬ್ಲಿಕ್‌ ಟಿವಿ ಕಚೇರಿಗೆ ಆಗಮಿಸಿ ಶುಭ ಹಾರೈಸಿದ್ದರು.

    2016:
    ಫೆಬ್ರವರಿ 3 ರಂದು ವಿಶ್ವ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 9 ಮಂದಿ ಮೃತಪಟ್ಟಿದ್ದರೆ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ಹನುಮಂತಪ್ಪ ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ವೀರ ಮರಣ ಹೊಂದಿದ್ದರು. 10 ಮಂದಿ ವೀರ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿತ್ತು.

    2017:
    ಪಬ್ಲಿಕ್‌ ಟಿವಿ 5ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ,  ದಿ.ಎಸ್‌ಎಂ ಕೃಷ್ಣ, ಕೇಂದ್ರ ಸಚಿವರಾಗಿದ್ದ ದಿ.ಅನಂತ್‌ ಕುಮಾರ್‌, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಆರ್‌ ಅಶೋಕ್‌ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. 5ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಸಾಧಕರನ್ನು ಪುರಸ್ಕರಿಸಲಾಗಿತ್ತು. ಖ್ಯಾತ ನಿರೂಪಕಿ ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

    2018:
    6ನೇ ವಾರ್ಷಿಕೋತ್ಸವದಂದು ಪಬ್ಲಿಕ್‌ ಟಿವಿಯ ಮಾತೃ ಸಂಸ್ಥೆ ರೈಟ್‌ ಮೆನ್‌ ಮೀಡಿಯಾದ ಮೂರನೇ ಕೂಡಿ ʼಪಬ್ಲಿಕ್‌ ಮೂವೀಸ್‌ʼ ಲೋಕಾರ್ಪಣೆಗೊಂಡ ವರ್ಷ. ಈ ವಾಹಿನಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌, ರಮೇಶ್‌ ಅರವಿಂದ್‌, ಶ್ರೀನಾಥ್‌, ಜಯಮಾಲಾ, ಲಹರಿ ಮ್ಯೂಸಿಕ್‌ ಸಂಸ್ಥೆಯ ಜಿ. ಮನೋಹರ ನಾಯ್ಡು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಭಾಗಿಯಾಗಿದ್ದರು.

    2019:
    ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ, ಅಕ್ಷರ ನೀಡಿದ ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಜನವರಿಯಲ್ಲಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಸಪ್ತ ಸಂವತ್ಸರ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿತ್ತು. ಸಂಭ್ರಮಾಚರಣೆಯ ಬದಲು ಶ್ರೀಗಳ ಗೌರವಾರ್ಥ ಮಠದ ದಾಸೋಹ ನಿಧಿಗೆ ವಾಹಿನಿ ವತಿಯಿಂದ ಅಳಿಲು ಸೇವೆ ಮಾಡಲು ನಿರ್ಣಯಿಸಲಾಯಿತು. ಅದರಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಿದ್ದಲಿಂಗ ಶ್ರೀಗಳಿಗೆ 5 ಲಕ್ಷ ರೂ. ಚೆಕ್ ಹಸ್ತಾಂತರಿಸಿದ್ದರು.

    2020:
    2019ರ ಕೊನೆಯಲ್ಲಿ ಆರಂಭಗೊಂಡ ಕೋವಿಡ್‌ 2020ರ ಆರಂಭದಲ್ಲಿ ವಿಶ್ವಾದ್ಯಂತ ಹರಡಲು ಆರಂಭವಾಯಿತು. ಈ ಕಾರಣಕ್ಕೆ ಪಬ್ಲಿಕ್‌ ಟಿವಿಯ 8ನೇ ವರ್ಷ ಮತ್ತು ಪಬ್ಲಿಕ್‌ ಮೂವೀಸ್‌ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ. ಪಬ್ಲಿಕ್‌ ಟಿವಿ ಕಚೇರಿಯಲ್ಲಿ ಸರಳವಾಗಿ ಕೇಕ್‌ ಕತ್ತರಿಸುವ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಲಾಕ್‌ಡೌನ್‌ ನಿಂದ ಸಂಕಷ್ಟ ಅನುಭವಿಸಿದ ಜನರಿಗೆ ನೆರವಾಗಲು ಹೆಚ್‌.ಆರ್‌.ರಂಗನಾಥ್‌ ಅವರು ನಡೆಸಿಕೊಡುತ್ತಿದ್ದ ʼಮನೆಯೇ ಮಂತ್ರಾಲಯʼ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಸಂಕಷ್ಟದಲ್ಲಿದ್ದ ಸಾವಿರಾರು ಮಂದಿಗೆ ಈ ಕಾರ್ಯಕ್ರಮ ಸಹಾಯ ನೀಡಿತ್ತು. ಇದರ ಜೊತೆ ರಾಜ್ಯದ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ನೆರವು ನೀಡಲು ರೋಟರಿ ಸಹಾಯೋಗದೊಂದಿಗೆ ʼಜ್ಞಾನದೀವಿಗೆʼ ಹೆಸರಿನಲ್ಲಿ ಉಚಿತ ಟ್ಯಾಬ್ಲೆಟ್‌ ನೀಡುವ ಮಹತ್ವಾಕಾಂಕ್ಷಿಯ ಯೋಜನೆಗೆ ಚಾಲನೆ ನೀಡಲಾಗಿತ್ತು.

     

    2021:
    9ನೇ ವರ್ಷದ ಸಂಭ್ರಮಾಚರಣೆಗೂ ಕೋವಿಡ್‌ ಭೀತಿ ಇತ್ತು. ಈ ಕಾರಣಕ್ಕೆ ಸರಳವಾಗಿಯೇ ಕಚೇರಿಯಲ್ಲಿ ವಾರ್ಷಿಕೋತ್ಸವ ಆಚರಿಸಲಾಯಿತು. ಅಂದು ಸಂಜೆ ʼದಿಗ್ಗಜರ ಬೆಳ್ಳಿ ಹಬ್ಬʼ ವಿಶೇಷ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಮತ್ತು ರಂಗನಾಥ್‌ ಅವರನ್ನು ದಿವ್ಯಜ್ಯೋತಿ ಅವರು ಸಂದರ್ಶಿಸಿದರು.

     

    2022:
    ಪಬ್ಲಿಕ್‌ ಟಿವಿಗೆ ದಶಕದ ಸಂಭ್ರಮ. ಹತ್ತು ವರ್ಷ ಪೂರೈಸಿದ ಹಿನ್ನಲೆ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಲು ʼಪಬ್ಲಿಕ್ ರಥʼ ರಾಜ್ಯದ್ಯಾಂತ ಸಂಚಾರ ಮಾಡಿತ್ತು. ಮಾಜಿ ಸಿಎಂ ಯಡಿಯೂರಪ್ಪನವರು ಪಬ್ಲಿಕ್‌ ರಥಕ್ಕೆ ಚಾಲನೆ ನೀಡಿದ್ದರು. ವಾರ್ಷಿಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ನಟ ಶಿವರಾಜ್‌ ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರ ನಾಯ್ಡು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪುನೀತ್‌ ಗೌರವಾರ್ಥ ‘ಶಕ್ತಿಧಾಮʼಕ್ಕೆ 25 ಲಕ್ಷ ರೂ.ನೀಡಲಾಯಿತು. ಅಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದರು. ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿಯ ಎಲ್ಲಾ ಸಿಬ್ಬಂದಿಗೆ ಸನ್ಮಾನ ಮಾಡಲಾಗಿತ್ತು.

     

    2023:
    ಪಬ್ಲಿಕ್‌ ಟಿವಿ ಎಲ್ಲಾ ವಿಭಾಗದ ಮುಖ್ಯಸ್ಥರು ಕೇಕ್‌ ಕತ್ತರಿಸುವ ಮೂಲಕ 11 ವರ್ಷದ ಸಂಭ್ರಮಾಚರಣೆ ಮಾಡಲಾಯಿತು. ಒಂದು ಸಂಸ್ಥೆ ಬೆಳೆಯಬೇಕಾದರೆ ಉದ್ಯೋಗಿಗಳ ಪಾಲು ದೊಡ್ಡದು. ಉದ್ಯೋಗಿಗಳು ಶ್ರದ್ಧೆಯಿಂದ ಕೆಲಸ ಮಾಡಿದರೆ ಆ ಸಂಸ್ಥೆ ಮುಂದುವರಿಯುತ್ತದೆ. ಸಿಬ್ಬಂದಿಯಿಂದಲೇ ನಮ್ಮ ಸಂಸ್ಥೆಗೆ ಗೌರವ ಬಂದಿದೆ. ಪಬ್ಲಿಕ್‌ ಟಿವಿಗೆ ಗೌರವ ಬರಲು ಕಾರಣಾರಾದವರನ್ನು ಗೌರವಿಸಲು ಸಹೋದ್ಯೋಗಿಗಳ ಕೈಯಿಂದ ಕೇಕ್‌ ಕತ್ತರಿಸಲಾಗಿದೆ ಎಂದು ಹೆಚ್‌.ಆರ್‌.ರಂಗನಾಥ್‌ ಈ ಸಂದರ್ಭದಲ್ಲಿ ತಿಳಿಸಿದ್ದರು.

     

    2024:
    ರಾಮಮಂದಿರಕ್ಕೆ ಕೊಡುಗೆ ಕೊಟ್ಟ ಕರುನಾಡಿನ ಅಪರೂಪದ ಸಾಧಕರ ಜೊತೆಗೆ 12 ವರ್ಷದ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ಕರ್ನಾಟಕದ ʼನವರತ್ನʼಗಳನ್ನು ಸನ್ಮಾನಿಸಲಾಯಿತು.

    ರಾಮ ಲಲ್ಲಾನ ಪರ ಹಿಂದೆ ಅಲಹಾಬಾದ್ ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದ ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ ಮೈಸೂರಿನ ಅರುಣ್‌ ಯೋಗಿರಾಜ್‌, ರಾಮನ ಮೂರ್ತಿಗೆ ಮೂಲವಾದ ಕೃಷ್ಣ ಶಿಲೆಯನ್ನು ನೀಡಿದ ಜಾಗದ ಮಾಲೀಕ ರಾಮದಾಸ್‌, ರಾಮಮೂರ್ತಿ ನಿರ್ಮಾಣ ಮಾಡಿದ ಗಣೇಶ್‌ ಭಟ್‌, ಅಡಿಪಾಯ ಹಾಕುವುದರಿಂದ ಹಿಡಿದು ಕೆತ್ತನೆವರೆಗೂ ಎಲ್ಲಾ ಕಲ್ಲುಗಳ ಪರೀಕ್ಷೆಯನ್ನು ಮಾಡಿದ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ (ಎನ್‌ಐಆರ್‌ಎಂ) ಪ್ರಾಂಶುಪಾಲ ಡಾ.ರಾಜನ್‌ ಬಾಬು, ಮುಹೂರ್ತ ನೀಡಿದ ವಿಜಯೇಂದ್ರ ಶರ್ಮಾ, ದೇಗುಲದ ಲೈಟಿಂಗ್ ಹೊಣೆ ಹೊತ್ತ ರಾಜೇಶ್‌ ಶೆಟ್ಟಿ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚಿಸಿದ ಗಜಾನನ ಶರ್ಮಾ, ಲೋಗೋ ವಿನ್ಯಾಸಗಾರ ರಮೇಶ್‌ ಜಿ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ, ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್‌ ನಾಯ್ಡು ಅವರು ಅಭಿನಂದಿಸಿದ್ದರು.

     

  • ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ? ಸುಳ್ಳೋ ‌ಅಂತ‌ ತೀರ್ಮಾನಿಸಬೇಕಾಗಿರೋದು ಸಮಾಜ : ಹೆಚ್. ಆರ್.ರಂಗನಾಥ್

    ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ? ಸುಳ್ಳೋ ‌ಅಂತ‌ ತೀರ್ಮಾನಿಸಬೇಕಾಗಿರೋದು ಸಮಾಜ : ಹೆಚ್. ಆರ್.ರಂಗನಾಥ್

    ಚಿತ್ರದುರ್ಗ: ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ, ಸುಳ್ಳೋ ‌ಅಂತ‌ ತೀರ್ಮಾನಿಸಬೇಕಿರುವುದು ಸಮಾಜ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್‌.ರಂಗನಾಥ್‌ ಹೇಳಿದ್ದಾರೆ.

    ಭರಮಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ʼಸಮೂಹ ಮಾಧ್ಯಮ ಮತ್ತು ಸಮಾಜʼ ವಿಷಯ ಬಗ್ಗೆ ಮಾತನಾಡಿದರು.

    ಮಾಧ್ಯಮ ಕ್ಷೇತ್ರದಲ್ಲಿ ಇರುವವರು ದೇವರಲ್ಲ. ನಿಮ್ಮಂತಹ ಸಮಾಜದಲ್ಲಿ ಮಾಧ್ಯಮ ಒಂದು ಭಾಗವಾಗಿದೆ. ಮಾಧ್ಯಮದವರು ಕೂಡ ಶ್ರೀಸಾಮಾನ್ಯರಾಗಿದ್ದಾರೆ. ಮಾಧ್ಯಮದವರು ಮಾಡಿದ್ದೆಲ್ಲಾ‌ಸರಿ ಅಂತ ಏನಿಲ್ಲ. ಆದರೆ ಆರಂಭದ ದಿನದಿಂದ‌ ನಾನು ನನ್ನ ನಿಲುವಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

    ಈ ಹಿಂದೆ ಪತ್ರಿಕೆಯಲ್ಲಿ ಬೆಳಿಗ್ಗೆ ಬಂದಿದ್ದೇ‌ ಪರಮಸತ್ಯ ಎನ್ನುವ ಕಾಲವಿತ್ತು. ಕೆಲ ದಿನಗಳ ಕಾಲ ಟಿವಿಗಳಲ್ಲಿ ಬಂದಿದ್ದು ಕೂಡ ಸತ್ಯ ಎನಿಸಿತ್ತು. ಈಗ‌ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಎನಿಸಿದೆ ಎಂದು‌ ವಿಷಾದ ವ್ಯಕ್ತಪಡಿಸಿದರು.

    ಮಾಧ್ಯಮ ಹುಟ್ಟಿದ್ದು ಸಮಾಜದಿಂದ. ಆದರೆ ಸಮಾಜ ಇಂದು ಸ್ವಾರ್ಥದ ಸಮಾಜವಾಗಿದೆ. ರೈತರು ಮಾತ್ರ ಆ ವಿಚಾರದಲ್ಲಿ ಮುಗ್ದರಾಗಿದ್ದು,ಅವರಿಗೆ ಸ್ವಾರ್ಥದ ಚಿಂತನೆ ಇರುವುದಿಲ್ಲ. ಹೀಗಾಗಿ ರೈತರು ನಿರಂತರವಾಗಿ ಶ್ರಮವಹಿಸುತ್ತಾರೆ ಎಂದರು.  ಇದನ್ನೂ ಓದಿ: ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭ

    ಮೈಕ್ರೋ ‌ಫೈನಾನ್ಸ್‌ನವರು ಸಾಲ‌ಕೊಡುತ್ತಾರೆ ಎಂದು ಶಕ್ತಿ ಮೀರಿ ತೆಗೆದುಕೊಳ್ಳಬಾರದು. ಸಾಲ ತೆಗೆದುಕೊಂಡು ‌ಸಾಯುವ ಚಿಂತನೆ ಮಾಡಬಾರದು. ಸಾಲ‌ ತೆಗೆದುಕೊಂಡು ಸಾಯುವ ಚಿಂತನೆ‌ ಕೈಬಿಡಬೇಕು. ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.

    ಹತ್ತು ವರ್ಷ ಕಳೆದ ಬಳಿಕ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಕೆಲವೊಮ್ಮೆ ‌ಯಾಕೆ ಬರಲಿಲ್ಲ ಅಂತ ಹೇಳಲು ಕಷ್ಟ ಸಾಧ್ಯ. ಈ ವೇದಿಕೆ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಮೂರು‌ ನಿಮಿಷ ಮಾತನಾಡುವಾಗ ನೂರು ಬಾರಿ ಮೊಬೈಲ್ ನೋಡುವ ದಿನವಿದು. ಈ ರೀತಿ ಶಾಂತಚಿತ್ತದಿಂದ‌ ಕುಳಿತಿರುವುದು ಅಚ್ಚರಿ ಮೂಡಿಸಿದೆ. ಒಳ್ಳೆಯವರು, ಕೆಟ್ಟವರಾಗುವುದನ್ನು ನಾವೇ ತೀರ್ಮಾನಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಹೆಚ್‌.ಆರ್‌ ರಂಗನಾಥ್ ಅವರನ್ನು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿದರು. ಈ ವೇಳೆ ವಾಲ್ಮಿಕಿ ‌ಗುರುಪೀಠದ ಪ್ರಸನ್ನನಂದಪುರಿ ಶ್ರೀ, ಪೂರ್ವ ವಲಯ ಐಜಿಪಿ‌ ರವಿಕಾಂತೇಗೌಡ‌ ಸೇರಿದಂತೆ‌ ಜನಪ್ರತಿನಿಧಿಗಳು,ವಿವಿಧ ಮಾಧ್ಯಮಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

     

  • `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    – ಮೋದಿ ಸರ್ಕಾರದಿಂದ ಮೆಚ್ಚುಗೆ; ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ

    ಕಲಬುರಗಿ: ಜಿಲ್ಲೆಯ ಯುವಕನೊಬ್ಬ ತನ್ನ ಮನೆ ಆಯ್ತು ಅಂತಾ ಜೀವನ ಸಾಗಿಸುತ್ತಿದ್ದ. ಆದ್ರೆ ಕಳೆದ 5 ವರ್ಷಗಳ ಹಿಂದೆ ಹೆಚ್‌.ಆರ್ ರಂಗನಾಥ್ (HR Ranganath) ಅವರ ಭೇಟಿಗೆ ಬಂದಿದ್ದ ಆ ಯುವಕನನ್ನು `ಏನಾದ್ರು ಸಾಧನೆ ಮಾಡಿ ಬಾ’ ಆಗ ನಿನ್ನ ಜೊತೆ ಮಾತನಾಡ್ತೀನಿ ಅಂತ ಹುರಿದುಂಬಿಸಿದ್ರು. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡ ಆ ಯುವಕ ಗ್ರಾಮಕ್ಕೆ ಹೋಗಿ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದ. ನಂತರ ಇಡೀ ಗಣಜಲಖೇಡ ಗ್ರಾಮಕ್ಕೆ (Ganjalkhed Village) 24*7 ನೀರಿನ ಸೌಲಭ್ಯ ಕಲ್ಪಿಸಿದ. ಈಗ ಈ ಗ್ರಾಮ ರಾಜ್ಯದ ಮೊದಲ 24*7 ನೀರು ವಿತರಣೆ ಆಗುತ್ತಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಲಬುರಗಿಯ (Kalaburagi) ಗ್ರಾಮೀಣ ಕ್ಷೇತ್ರದ ಗಣಜಲಖೇಡದಲ್ಲಿ ಈ ಹಿಂದೆ ಒಂದು ಬಿಂದಿಗೆ ನೀರು ತರಬೇಕು ಅಂದ್ರೂ ಕಿಲೋಮೀಟರ್‌ ದೂರ ಸಾಗಬೇಕಿತ್ತು. ಗ್ರಾಮಸ್ಥರ ಈ‌ ಸಮಸ್ಯೆ ಅರಿತ ಪಂಚಾಯಿತಿ ಅಧ್ಯಕ್ಷ ಶ್ರೀಧರ ಇಡೀ ಗ್ರಾಮಕ್ಕೆ ದಿನದ 24 ಗಂಟೆಯೂ ನೀರಿನ ಸೌಲಭ್ಯ ಕಲ್ಪಿಸಲು ಪ್ಲ್ಯಾನ್‌ ಮಾಡಿದ್ರು. ನೀರು ಸರಬರಾಜು ಮಾಡಲು ಪ್ಲ್ಯಾನ್ ಮಾಡಿ, ಜೆಜೆಎಂ ಸಹಯೋಗದೊಂದಿಗೆ ಇಡೀ ರಾಜ್ಯದಲ್ಲಿಯೇ ಗಣಜಲಖೇಡ ಗ್ರಾಮಕ್ಕೆ 24*7 ನೀರು ಸಪ್ಲೈ ಇರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿಸಿದ್ದಾರೆ.

    ತನ್ನ ಈ ಸಾಮಾಜಿಕ ಕಾರ್ಯಕ್ಕೆ ʻಪಬ್ಲಿಕ್ ಟಿವಿʼ (Public TV) ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರೇ ಪ್ರೇರಣೆಯಾಗಿದ್ದಾರೆ ಎಂದು ಸ್ವತಃ ಶ್ರೀಧರ್‌ ಅವರು ಹೇಳಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ʻಪಬ್ಲಿಕ್ ಟಿವಿʼ ಬೆಂಗಳೂರು ಕಚೇರಿಗೆ ಆಗಮಿಸಿ ರಂಗನಾಥ್ ಅವರನ್ನು ಭೇಟಿಯಾಗಿ ಮಾತನಾಡಲು ಅವಕಾಶ ಕೇಳಿದ್ದರು.

    ಈ ಸಂದರ್ಭದಲ್ಲಿ ಶ್ರೀಧರ್‌ಗೆ ರಂಗನಾಥ್ ಅವರು ಒಂದು ಸೆಲ್ಫಿ ನೀಡಿ, ಜೀವನದಲ್ಲಿ ಏನಾದ್ರೂ ಸಾಮಾಜಿಕವಾಗಿ ಸಾಧನೆ‌ ಮಾಡಿ ಬಾ, ಆಗ ನಿನ್ನ ಜೊತೆ ಮಾತನಾಡಿಸುತ್ತೇನೆ ಎಂಬುದಾಗಿ ಹೇಳಿದ್ದರು. ಅವರ ಮಾತನ್ನು ಸವಾಲಿನಂತೆ ಸ್ವೀಕರಿಸಿದ ಶ್ರೀಧರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಳಿಕ ಇಡೀ ಗಣಜಲಖೇಡ ಗ್ರಾಮಕ್ಕೆ ಅತ್ಯುತ್ತಮ ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಈ ಮೂಲಕ ರಾಜ್ಯದ ಮೊದಲ 24*7 ನೀರು ಸರಬರಾಜಾಗುವ ಗ್ರಾಮ ಎಂಬ ಹೆಗ್ಗಳಿಕೆ ಪಾತ್ರವಾಗುವಂತೆ ಮಾಡಿದ್ದಾರೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಧರ ಮಾಡಿದ ಈ ಕಾರ್ಯಕ್ಕೆ ಕೇಂದ್ರದ‌ ಮೋದಿ ಸರ್ಕಾರ ಸಹ‌ ಮೆಚ್ಚುಗೆ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶೇಷ ಆಹ್ವಾನ ನೀಡಿದೆ.

    ಈ ಹಿಂದೆಯೂ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು 5 ಕಡೆ ಬಾವಿ ತೆಗೆಸಿದ್ರು, ಆದ್ರೆ ಹನಿ ನೀರು ಸಿಕ್ಕಿರಲಿಲ್ಲ. ನಂತರ ಭೂವಿಜ್ಞಾನಿಗಳನ್ನ ಕರೆಸಿ ನೀರಿನ ಮೂಲ ಶೋಧಕ್ಕೆ ಮುಂದಾದರು. ಆಗ ಗ್ರಾಮದ ಚೆನ್ನಣ್ಣ ಎಂಬ ರೈತನ ಜಮೀನಿನಲ್ಲಿ ನೀರು ಇರುವುದು ಪತ್ತೆಯಾಯಿತು. ಆದರೆ ಭೂಮಿ ಖರೀದಿಗೆ ಪಂಚಾಯತ್ ನಲ್ಲಿ ಅವಕಾಶವಿರಲಿಲ್ಲ, ಹೀಗಾಗಿ ಗ್ರಾಮ‌ ಪಂಚಾಯಿತಿ ಅಧ್ಯಕ್ಷ ಶ್ರೀಧರ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಢ ಅವರ ವೈಯಕ್ತಿಕ ಹಣದಿಂದ ಆ ಭೂಮಿ‌ ಖರೀದಿಸಿ ಬಾವಿ ತೊಡಿಸಿದರು. ಇದರಿಂದ ನೀರು ಸಿಕ್ಕಿತು. ಆಗ ಜೆಜೆಎಂ ಹಾಗೂ ಸರ್ಕಾರದ ಯೋಜನೆ ಬಳಸಿ ಇಡೀ ಗ್ರಾಮಕ್ಕೆ ಪ್ರತಿ‌ ಮನೆ ಮನೆಗೆ 24*7 ನೀರು ಸರಬರಾಜು ಮಾಡಲಾಗುತ್ತಿದೆ.

  • 10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್‌ ಆರ್‌ ರಂಗನಾಥ್‌

    10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್‌ ಆರ್‌ ರಂಗನಾಥ್‌

    ಬೆಂಗಳೂರು: ಇಂದು ಕೈಯಲ್ಲೇ ಸಂಗೀತ ಸಿಗುವಾಗ 10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ ಮತ್ತು ಆಶ್ಚರ್ಯ ಎಂದು ಪಬ್ಲಿಕ್‌ ಟಿವಿ (PUBLiC TV) ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಹೇಳಿದರು.

    ಪಬ್ಲಿಕ್‌ ಮ್ಯೂಸಿಕ್‌ (PUBLiC Music) 10ನೇ ವಾರ್ಷಿಕೋತ್ಸವ ಪ್ರಯುಕ್ತ ಪಬ್ಲಿಕ್‌ ಟಿವಿ ಕಚೇರಿಯಲ್ಲಿ ನಡೆದ ಪಬ್ಲಿಕ್‌ ಮ್ಯೂಸಿಕ್‌ ʼದಶೋತ್ಸವʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ಸಂಗೀತವನ್ನು ಹೊಸ ಆಯಾಮಕ್ಕೆ ತೆಗೆದುಕೊಂಡು ಹೋಗಿದೆ. ಮೊದಲಿನಂತೆ ಟಿವಿ ಮುಂದೆ ನ್ಯೂಸ್‌, ಸಂಗೀತವನ್ನು ಕೇಳಬೇಕಿಲ್ಲ. ಗಣೇಶೋತ್ಸವ, ರಾಮನವಮಿಯಂತಹ ಹಬ್ಬಗಳಲ್ಲಿ ಕುಳಿತು ಕೇಳಬೇಕಿಲ್ಲ. ಯಾರು ಎಲ್ಲಿರುತ್ತಾರೋ ಅವರು ಅಲ್ಲಿಯೇ ಕುಳಿತುಕೊಂಡು ಬೇಕು ಬೇಕಾದನ್ನು ಆರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.

    ಇಂದು ಎಲ್ಲವೂ ಮೊಬೈಲ್‌ ಮೂಲಕ ಕೈಯಲ್ಲೇ ಸಿಗುತ್ತದೆ. ಪರಿಸ್ಥಿತಿ ಹೀಗಿರುವಾಗ 10 ವರ್ಷ ಕಾಲ ಚಾನೆಲ್‌ ನಿಂತುಕೊಂಡಿದ್ದೇ ಒಂದು ದೊಡ್ಡ ಸಾಧನೆ. ನನ್ನ ಲೆಕ್ಕಾಚಾರದಲ್ಲಿ ಇಬ್ಬರಿಗೆ ಧನ್ಯವಾದ ಹೇಳಬೇಕು. ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಯನ್ನು ಕೇಳಿದ ಜನರಿಗೆ ಮತ್ತು ಟಿವಿ ಮೂಲಕ ಜನರಿಗೆ ಮ್ಯೂಸಿಕ್‌ ಕೇಳುವಂತೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

    ವೇದಿಕೆ ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಉಪಸ್ಥಿತರಿದ್ದರು.

     

  • ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ಬೆಂಗಳೂರು: ಪಬ್ಲಿಕ್ ಮ್ಯೂಸಿಕ್ (PUBLiC Music) ವಾಹಿನಿ ಶುರುವಾಗಿ ಇಂದಿಗೆ 10 ವರ್ಷವಾಗಿದೆ. ಸಹಜವಾಗಿಯೇ ಸಂಭ್ರಮ ಮೇಳೈಸಿದೆ. ಇಂದು ದಶೋತ್ಸವ (10th Anniversary) ಹೆಸರಲ್ಲಿ ಪಬ್ಲಿಕ್ ಮ್ಯೂಸಿಕ್ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

    ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಬೆಳಗ್ಗೆ 10 ಗಂಟೆ 10ನಿಮಿಷ 10 ಸೆಕೆಂಡ್‌ಗೆ ಸರಿಯಾಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಬ್ಲಿಕ್ ಮ್ಯೂಸಿಕ್ ದಶೋತ್ಸವ ಸಂಭ್ರಮಕ್ಕೆ ಎಂದಿನಂತೆ ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್‌ಪ್ರಸಾದ್ ಹಾಗೂ ಝೇಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಸಾಕ್ಷಿಯಾಗಲಿದ್ದಾರೆ.

     

    View this post on Instagram

     

    A post shared by PublicMusic (@publicmusics)

    ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಹಾಗೂ ನಟಿ ರೀಷ್ಮಾ ನಾಣಯ್ಯ ಕಾರ್ಯಕ್ರಮದ ಹೊಳಪನ್ನು ಹೆಚ್ಚಿಸಲಿದ್ದಾರೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?

    ದಶೋತ್ಸವದ ಪ್ರಯುಕ್ತ ಹತ್ತು ವಿಶೇಷ ಶೋಗಳು ನಡೆಯಲಿವೆ. ನಟ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಗಾಯಕರಾದ ನವೀನ್ ಸಜ್ಜು, ಸಂಗೀತ ರಾಜೀವ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನಮ್ಮೊಂದಿಗೆ ಇರಲಿದ್ದಾರೆ.

     

    View this post on Instagram

     

    A post shared by PublicMusic (@publicmusics)

    ಕಳೆದ ಹತ್ತು ವರ್ಷಗಳಲ್ಲಿ ಪಬ್ಲಿಕ್ ಮ್ಯೂಸಿಕ್ ಸಂಗೀತದ ಮೂಲಕ ಎಲ್ಲಾ ಕಡೆ ಪಸರಿಸಿಕೊಂಡಿದೆ. ಮೊದಲ ವರ್ಷದಿಂದ ಇಂದು ದಶಕದವರೆಗೂ ಪಬ್ಲಿಕ್ ಮ್ಯೂಸಿಕ್ ದಿನದಿಂದ ದಿನಕ್ಕೆ ಆಪ್ಡೇಟ್ ಆಗುತ್ತಾ, ಎಲ್ಲಾ ಜನರೇಶನ್‌ಗೂ ಇಷ್ಟವಾಗುವಂತ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ಈ ಸಂಭ್ರಮಕ್ಕೆ ಮುಖ್ಯ ಕಾರಣ ನೀವು. ಮೊದಲ ವರ್ಷದಿಂದ ಇಲ್ಲಿಯವರೆಗೂ ಜೊತೆಗೆ ನಿಂತಿದ್ದೀರಿ, ಬೆನ್ನುತಟ್ಟಿ ಬೆಂಬಲ ಕೊಟ್ಟಿದ್ದೀರಿ. ಇದೇ ರೀತಿ ಮುಂದೆಯೋ ನಿಮ್ಮ ಬೆಂಬಲ, ಹಾರೈಕೆ ನಮ್ಮ ಮೇಲಿರಲಿ.

  • ಪಬ್ಲಿಕ್ ಟಿವಿ ವಿದ್ಯಾಪೀಠ; ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

    ಪಬ್ಲಿಕ್ ಟಿವಿ ವಿದ್ಯಾಪೀಠ; ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

    – 110 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ
    – ಲಕ್ಕಿಡಿಪ್ ವಿಜೇತರಿಗೆ ಗೋಲ್ಡ್ ಕಾಯಿನ್, ಬಂಪರ್ ಗಿಫ್ಟ್ ಆಗಿ ಸೈಕಲ್
    – ಮೊದಲ ಮತದಾರರಿಗೆ ವಿಶೇಷ ಉಡುಗೊರೆ

    ಬೆಂಗಳೂರು: ಪಬ್ಲಿಕ್ ಟಿವಿಯ (Public TV) ಹೆಮ್ಮೆಯ ಪ್ರಸ್ತುತಿ 7ನೇ ಆವೃತ್ತಿಯ ವಿದ್ಯಾಪೀಠ ಎಜುಕೇಶನ್ ಎಕ್ಸ್‌ಪೋ (Vidhyapeeta Education Expo) ಇಂದಿನಿಂದ ಶುರುವಾಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    3.5 ರಿಂದ 4 ಸಾವಿರ ವಿದ್ಯಾರ್ಥಿಗಳು ಪೋಷಕರೊಂದಿಗೆ ಧಾವಿಸಿ ಶೈಕ್ಷಣಿಕ ಮೇಳದ ಪ್ರಯೋಜನ ಪಡೆದುಕೊಂಡರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್, ಬಿಜಿಎಸ್ ಮತ್ತು ಎಸ್‌ಬಿಜೆ ಗ್ರೂಪ್ ಎಂಡಿ ಪ್ರಕಾಶ್‌ನಾಥ್ ಸ್ವಾಮೀಜಿ, ಗಾರ್ಡನ್ ಸಿಟಿ ಯೂನಿವರ್ಸಿಟಿ ವಿ.ಸಿ ಜೋಸೆಫ್, ರಾಮಯ್ಯ ಯುನಿವರ್ಸಿಟಿ ವಿ.ಸಿ ಕುಲದೀಪ್ ರೈನಾ, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಡಿಕೆ ಮೋಹನ್, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ ಸಿಇಓ ರಾಜೀವ್ ಗೌಡ ವಿದ್ಯಾಪೀಠಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾಪೀಠ ಕಾರ್ಯಕ್ರಮದ ಗುರಿಯ ಬಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (HR Ranganath) ಮಾತನಾಡಿದರು. ಗಣ್ಯರು ಕೂಡ ವಿದ್ಯಾಪೀಠ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್‌.ಆರ್‌ ರಂಗನಾಥ್‌

    ಕಾಮೆಡ್-ಕೆ, ಸಿಇಟಿ ಬಗೆಗಿನ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆ, ಗೊಂದಲಗಳಿಗೆ ಪರಿಹಾರ ಸಿಕ್ಕಿತು. 110 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಸ್ಲೋ ಸೈಕಲ್ ರೇಸ್, ಡಿಬೇಟ್ ಕಾಂಪಿಟೇಷನ್ ಹೀಗೆ ಹಲವು ಸ್ಪರ್ಧೆ ನಡೆಯಿತು. ಪ್ರತಿ ಒಂದು ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ವಿಜೇತರನ್ನು ಆಯ್ಕೆ ಮಾಡಿ ಜೀನಿ ಮಿಲೆಟ್ಸ್ ಕಡೆಯಿಂದ ಗೋಲ್ಡ್ ಕಾಯಿನ್ ಗಿಫ್ಟ್ ನೀಡಲಾಯಿತು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಚಾಲನೆ

    ಬಂಪರ್ ಗಿಫ್ಟ್ ಆಗಿ ಸೈಕಲ್ ಸೇರಿ ಹಲವು ಆಕರ್ಷಕ ಬಹುಮಾನಗಳು ವಿದ್ಯಾಪೀಠದ ಆಕರ್ಷಣೆ ಆಗಿತ್ತು. ಮೊದಲ ಬಾರಿಯ ಮತದಾರರಿಗೆ ಆಡ್ ಜಲ್ ಕಡೆಯಿಂದ ವಿಶೇಷ ಗಿಫ್ಟ್ ನೀಡಲಾಯಿತು. ನಾಳೆಯೂ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯಾಪೀಠ ಎಜುಕೇಶನ್ ಎಕ್ಸ್‌ಪೋ ನಡೆಯಲಿದ್ದು, ವಿದ್ಯಾರ್ಥಿಗಳು ತಪ್ಪದೇ ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ. ಇದನ್ನೂ ಓದಿ: ಇಂದು ವಿದ್ಯಾಪೀಠಕ್ಕೆ ಚಾಲನೆ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

  • ಸ್ತ್ರೀ ಶಕ್ತಿಗೆ ಪಬ್ಲಿಕ್ ಟಿವಿ ಸಲಾಂ – 10 ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ

    ಸ್ತ್ರೀ ಶಕ್ತಿಗೆ ಪಬ್ಲಿಕ್ ಟಿವಿ ಸಲಾಂ – 10 ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ

    – ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ವನಿತೆಯರಿಗೆ ಸನ್ಮಾನ

    ಬೆಂಗಳೂರು: ಅಕ್ಕರೆಯ ಅಮ್ಮನಾಗಿ, ಮುದ್ದಿನ ಮಗಳಾಗಿ, ಮನೆ ಬೆಳಗುವ ಮಮತಾಮಯಿ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಜ್ಜೆ ಇಟ್ಟು ಸಾಧನೆ ಮಾಡಿದ್ದಾಳೆ. ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಿದರೆ ಮತ್ತಷ್ಟು ಮಂದಿಗೆ ಆ ಸಾಧನೆ ಪ್ರೇರಣೆಯಾಗುತ್ತದೆ. ಈ ಕಾರಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿ ಸಾಧಕಿಯರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಈ ವಿಶೇಷ ದಿನದಂದು ಪಬ್ಲಿಕ್‌ ಟಿವಿ ʼನಾರಿ ನಾರಾಯಣಿʼ ಪ್ರಶಸ್ತಿ ನೀಡಿ ಗೌರವಿಸಿತು.

    ಕೆನರಾ ಬ್ಯಾಂಕ್ ಹಾಗೂ ಕೆಎಂಎಫ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ (PUBLiC TV) ಬೆಂಗಳೂರಿನ ಯವನಿಕ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಹೆಚ್‌ಆರ್‌ ರಂಗನಾಥ್‌ (HR Ranganath), ಎಲೆ ಮರೆಕಾಯಿಯಂತೆ ಸಾಧನೆಗೈಯುತ್ತಿರುವ ಹತ್ತು ಜನ ಮಹಿಳೆಯರ ಸಾಧನೆಗೆ ನಾವು ಹೆಮ್ಮೆ ಪಡಬೇಕು. ಇವರೆಲ್ಲರೂ ನಾರಿ ನಾರಾಯಣಿಯ (Nari Narayani) ಪ್ರತಿನಿಧಿಯಾಗಿದ್ದಾರೆ ಎಂದು ಬಣ್ಣಿಸಿದರು.

    ನಾರಿ ನಾರಾಯಣಿ ಪ್ರಶಸ್ತಿ ಪಡೆದ ಸಾಧಕಿಯರ ವಿವರ

    ರಾಧಿಕಾ, ಮಂಗಳೂರು
    ಕೆಲವೊಮ್ಮೆ ಬದುಕಿನ ಬಡತನ, ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಜೀವನವನ್ನು ಅಸಾಧಾರಣ ಸಾಧನೆಯತ್ತ ಕೊಂಡೊಯ್ಯುತ್ತದೆ. ಇಂತಹ ಅಪರೂಪದ ಸಾಧನೆಗೆ ಸಾಕ್ಷಿಯಾದವರು ಮಂಗಳೂರು ಮೂಲದ ರಾಧಿಕಾ. ಸಾಮಾನ್ಯವಾಗಿ ಮಹಿಳೆಯರು ಅತ್ಯಂತ ಕಡಿಮೆ ಆಯ್ಕೆ ಮಾಡಿಕೊಳ್ಳುವ ಉದ್ಯೋಗ ಅಂದರೆ ಅದು ಅಂಬುಲೆನ್ಸ್ (Ambulance) ಚಾಲನೆಯ ವೃತ್ತಿ. ಆದರೆ ಈ ಗಟ್ಟಿಗಿತ್ತಿ ರಾಧಿಕಾ (Radhika) ಅಂಬುಲೆನ್ಸ್ ಚಾಲನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡ್ರು. ಬಡಕುಟುಂಬದಿಂದ ಬಂದ ಇವರು ಅಂಬುಲೆನ್ಸ್‌ ಚಾಲಕ ಸುರೇಶ್‌ ಅವರನ್ನು ಮದುವೆಯಾದರು. ಆದರೆ ಪತಿ ಅಕಾಲಿಕವಾಗಿ ಮರಣವನ್ನಪ್ಪುತ್ತಾರೆ. ಜೀವನ ಸಾಗಿಸಲು ಉದ್ಯೋಗ ಅನಿವಾರ್ಯ. ಹೀಗಾಗಿ ಪತಿಯ ವೃತ್ತಿಯನ್ನು ಮುಂದುವರಿಸುತ್ತಾರೆ. ಆರಂಭದಲ್ಲಿ ಎಲ್ಲರೂ ಹೀಯಾಳಿಸಿದವರೇ. ಅವಮಾನವನ್ನೇ ಸನ್ಮಾನವನ್ನಾಗಿ ಸ್ವೀಕರಿಸಿದ ರಾಧಿಕ ಛಲ ಬಿಡದೇ ಸ್ವಂತ ಅಂಬುಲೆನ್ಸ್ ಖರೀದಿ ಮಾಡಿದರು. ಅಷ್ಟೇ ಯಾಕೆ ಬೇರೆ ರಾಜ್ಯಗಳಿಗೂ ತಾನೇ ಅಂಬುಲೆನ್ಸ್ ಡ್ರೈವ್‌ ಮಾಡಿಕೊಂಡು ಹೋಗುತ್ತಾರೆ. ಅಲ್ಲದೇ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಅಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.

    ರೂಪ ಎಂವಿ, ಬೆಂಗಳೂರು
    ಚಂದ್ರಯಾನ-3 (Chandrayaan-3)ಯೋಜನೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿದ್ದವರು ನಮ್ಮ ಹೆಮ್ಮೆಯ ಕನ್ನಡತಿ ರೂಪ ಎಂವಿ. 15ಕ್ಕೂ ಹೆಚ್ಚು ವರ್ಷಗಳ ಕಾಲ ಇಸ್ರೋದಲ್ಲಿ (ISRO) ಕಾರ್ಯನಿರ್ವಹಿಸುತ್ತಿರುವ ಮೈಸೂರು ಮೂಲದ ಬೆಂಗಳೂರು ನಿವಾಸಿ ರೂಪ (Roopa MV) ಭಾರತದ ಹೆಮ್ಮೆಯ ಚಂದ್ರಯಾನ -3 ಯೋಜನೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಖುದ್ದು ಪ್ರಧಾನಿ ಮೋದಿಯೇ ಅಂದು ಚಂದ್ರಯಾನ-3ರಲ್ಲಿ ಭಾಗಿಯಾಗಿದ್ದ ನಾರಿಶಕ್ತಿಯನ್ನು ಅಭಿನಂದಿಸಿದ್ದರು. ಚಂದ್ರಯಾನ -3 ಮಾತ್ರವಲ್ಲ ಮಂಗಳಯಾನದ ಮಹತ್ತರ ಜವಾಬ್ಧಾರಿಯನ್ನು ಕೂಡ ಹೆಗಲಿಗೇರಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡಿದ್ದಾರೆ.

     

    ಶ್ರಾವಣಿ ಪವಾರ್, ಹುಬ್ಬಳ್ಳಿ
    ಬದುಕಿನಲ್ಲಿ ತಾನು ಬೆಳೆಯಬೇಕು ಸಾಧಿಸಬೇಕು ಅನ್ನೋದು ಇರುತ್ತೆ. ಆದರೆ ತನ್ನ ಜೊತೆ ಕಷ್ಟದಲ್ಲಿದ್ದವರನ್ನು ಬೆಳೆಸಿ ಅವರ ಬದುಕು ಬೆಳಗಬೇಕು ಅಂತಾ ಅಂದುಕೊಳ್ಳುವವರ ಸಂಖ್ಯೆ ಕಡಿಮೆ. ಆದರೆ ಶ್ರಾವಣಿ ಪವಾರ್ (Shravani Pawar), ಬೇರೆಯವರ ಏಳಿಗೆ ಕಂಡು ಖುಷಿ ಪಟ್ಟ ಜೀವ. ಶ್ರಾವಣಿ ಪವಾರ್ ಸೇಫ್ ಹ್ಯಾಂಡ್ 24*7 ಎನ್ನುವ ಅಪರೂಪದ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಆರಂಭಿಸಿದ ಸಂಸ್ಥೆ ಬೆಳೆದು ನಿಂತಿದ್ದು, ಈಗ ಬೆಂಗಳೂರಿನಲ್ಲಿಯೂ ಬ್ರಾಂಚ್ ಇದೆ. ಬಡ ಮಧ್ಯಮ ಹಾಗೂ ಅನಕ್ಷರಸ್ಥ ಮಹಿಳೆಯರ ಬದುಕಿಗೆ ಇವರು ದೇವರಂತೆ. ಸೆಕ್ಯೂರಿಟಿ ಗಾರ್ಡ್, ಹೌಸ್ ಕೀಪಿಂಗ್ ಕೆಲಸ ಹೀಗೆ ನಾನಾ ಕೆಲಸದ ತರಬೇತಿಯನ್ನು ಉಚಿತವಾಗಿ ನೀಡಿ ಕೆಲಸದ ಅನಿವಾರ್ಯತೆ ಇರುವ ಮಹಿಳೆಯರಿಗೆ ಕೆಲಸವನ್ನು ನೀಡುತ್ತಾರೆ. 2009 ರಲ್ಲಿ ಆರಂಭವಾದ ಈ ಸಂಸ್ಥೆಯಿಂದ ಸಾವಿರಾರು ಜನ ಬಡವರು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. 1000ಕ್ಕೂ ಹೆಚ್ಚು ಜನ ಮಹಿಳೆಯರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ.

     

    ವರ್ಷಾ, ಚಾಮರಾಜನಗರ
    ಕಸದಿಂದ ರಸ ಅಂತಾರಲ್ಲ ಹಾಗೆ. ನಾವೆಲ್ಲ ಅನುಪಯುಕ್ತ ಅಂತಾ ಎಸೆಯುವ ವಸ್ತುವನ್ನೇ ಬಳಸಿಕೊಂಡು ಹೊಸ ಉದ್ಯೋಗವನ್ನೇ ಸೃಷ್ಟಿಸಿಕೊಂಡವರು ಚಾಮರಾಜನಗರದ ವರ್ಷಾ (Varsha).  ಇವರ ಯಶೋಗಾಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ. ಪ್ರಧಾನಿ ಮೋದಿಯವರ (PM Modi) ಮನ್ ಕಿ ಬಾತ್‌ನಿಂದ ಪ್ರೇರಣೆಗೊಂಡು ತನ್ನ ಬದುಕಿನ ಚಿತ್ರಣವನ್ನೇ ಬದಲಾಯಿಸಿಕೊಂಡು ಅಚ್ಚರಿ ಮೂಡಿಸಿದ ಯುವತಿಯ ಕಥೆ ಇದು. ರೈತರು ಬಾಳೆಗೊನೆ ಕೊಯ್ದು, ಬಾಳೆದಿಂಡನ್ನು ಅನುಪಯುಕ್ತ ಎಂದು ಎಸೆಯುತ್ತಾರೆ. ಆದರೆ ಇದೇ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ ಗಳನ್ನು ತಯಾರಿಸಿ ಕಾಯಕವನ್ನು ಶುರುಮಾಡಿದ್ದಾರೆ ವರ್ಷಾ. ತನ್ನ ಘಟಕದಲ್ಲಿ ಐವರು ಮಹಿಳೆಯರಿಗೆ ಉದ್ಯೋಗ ನೀಡಿರುವ ವರ್ಷಾ, ಆನ್‌ಲೈನ್‌ ವೆಬ್‌ಸೈಟ್‌ ಮೂಲಕ ತಮ್ಮ ವಸ್ತುಗಳನ್ನು ಮಾರಾಟ ಮಾಡಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ.

    ಮಲ್ಲಮ್ಮ ಯಳವಾರ, ಬಿಜಾಪುರ
    ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವೀತಿಯ ಸಾಹಸ ಮಾಡಿದ ಮಲ್ಲಮ್ಮನ (Mallamma Yalawara) ಕಹಾನಿ ಕೇಳಿದರೆ ಭೇಷ್ ಎನ್ನಲೇಬೇಕು. ಮಲ್ಲಮ್ಮ ಯಾಳವಾರ ವಿಜಯಪುರದ ನಿವಾಸಿ. ಇವರಿಗೆ ಅದೆಂಥ ದೂರದೃಷ್ಟಿ ಅಂದರೆ ಮಹಿಳೆಯರಿಗಾಗಿಯೇ ವಿಜಯಪುರದಲ್ಲಿ ಬ್ಯಾಂಕ್ ಉದ್ಯಮವನ್ನು ಧೈರ್ಯದಿಂದ ಸ್ಥಾಪಿಸಿದ್ದಾರೆ. ʼಮಹಿಳಾ ಚೈತನ್ಯ ಬ್ಯಾಂಕ್ʼ ಎಂದು ಇದಕ್ಕೆ ಹೆಸರಿಟ್ಟು ಮಹಿಳೆಯರ ಬದುಕಿಗೆ ಹೊಸ ಚೈತನ್ಯವನ್ನೇ ತುಂಬಿದ್ದಾರೆ. ಈ ಬ್ಯಾಂಕ್ ಸಂಪೂರ್ಣ ಮಹಿಳಾಮಯವಾಗಿರುವುದು ವಿಶೇಷ. ಮಹಿಳೆಯರ ಪಾಲಿಗೆ ಉದ್ಯೋಗದಾತ ಬ್ಯಾಂಕ್ ಇದು. ಬ್ಯಾಂಕ್‌ನಲ್ಲಿ ಗುಮಾಸ್ತ ಹುದ್ದೆಯಿಂದ ಹಿಡಿದು ಮ್ಯಾನೇಜರ್‌ವರೆಗೆ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅದ್ಭುತ ಸಾಧನೆ ಮಾಡಿರುವ ಮಲ್ಲಮ್ಮ ಬರೋಬ್ಬರಿ 4 ಶಾಖೆಗಳನ್ನು ವಿಜಯಪುರ ಜಿಲ್ಲೆಯಲ್ಲಿ ತೆರೆದಿದ್ದಾರೆ. ಸಾವಿರಾರು ಕೋಟಿ ವಹಿವಾಟು ನಡೆಸಿ ಈ ಬ್ಯಾಂಕ್ ಸದೃಢವಾಗಿದೆ.

    ಬಿಂದು, ಬೆಂಗಳೂರು
    ನಾರಿಶಕ್ತಿಯ ಅದ್ಭುತ ಸಾಧನೆ, ಎಲ್ಲರ ಪಾಲಿಗೂ ಸ್ಫೂರ್ತಿ, ಈ ಸ್ಫೂರ್ತಿಯ ಹಾದಿಯಲ್ಲಿ ಗಟ್ಟಿಯಾಗಿ ನಿಲ್ಲುವವರು ಅಂದರೆ ಬೆನಕ ಗೋಲ್ಡ್ (Benaka Gold) ಕಂಪನಿಯ ನಿರ್ದೇಶಕಿ ಬಿಂದು ಎಲ್.ಎ.ಯವರು. ದೂರದೃಷ್ಟಿ, ಸಾಧಿಸುವ ಛಲ, ಹೊಸತನ, ನಾಯಕತ್ವದ ಅದ್ಭುತ ಗುಣದ ಮೂಲಕ ಚಿನ್ನಾಭರಣ ಉದ್ಯಮದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದವರು ಬೆನಕ ಗೋಲ್ಡ್ ಕಂಪನಿಯ ನಿರ್ದೇಶಕಿ ಬಿಂದು. ಬೆನಕ ಗೋಲ್ಡ್ ಕಂಪನಿ ಗ್ರಾಹಕರ ಮನಸ್ಸಿನಲ್ಲಿ ಇಂದು ನಂಬಿಕೆಯ ಸಂಸ್ಥೆಯಾಗಿ ನೆಲೆವೂರಲು ಕಾರಣವಾಗಿದ್ದು, ಬಿಂದುರವರ (Bindu)  ಸಾಧನೆಗೆ ಹಿಡಿದ ಕೈಗನ್ನಡಿ. ಎಪಿಎಸ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಸ್ ಆರ್ ಎನ್ ಆದರ್ಶ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾಗಿರುವ ಬಿಂದು, ಯಶಸ್ವಿ ಉದ್ಯಮಿಯಾಗಿ ಬೆನಕ ಗೋಲ್ಡ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಇವರಿಗೆ ರಾಷ್ಟ್ರೀಯ ಮಹಿಳಾ ಸಾಧಕಿ -2023ರ ಪ್ರಶಸ್ತಿಯೂ ಸಿಕ್ಕಿದೆ.

    ಶೀತಲ್, ಬೆಂಗಳೂರು
    ಕೆಲವರ ಬದುಕಿನ ಸಾಧನೆ ಬೇರೆಯವರ ಬದುಕಿಗೂ ಬೆಳಕಾಗಬಲ್ಲದು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಯ ಮೂಲಕ ಕ್ರಾಂತಿಯ ಹೆಜ್ಜೆ ಇಟ್ಟ ಕೇಂಬ್ರಿಡ್ಜ್ ಸ್ಕೂಲ್‌ನ (Chembridge School) ನಿರ್ದೇಶಕಿ ಶೀತಲ್ (Sheetal) ಸಾಧನೆ ನಿಜಕ್ಕೂ ಅಪರೂಪ ಅನನ್ಯ. ಶಿಕ್ಷಣ ಎಂದರೆ ಬರೀ ಪುಸ್ತಕದ ಪಾಠವನ್ನು ಕಲಿಸೋದು ಮಾತ್ರವಲ್ಲ, ಮಕ್ಕಳ ವ್ಯಕ್ತಿತ್ವ ವಿಕಸನ, ಶಿಸ್ತು ಬದ್ಧತೆಯನ್ನು ಕಲಿಸಿ ಜವಾಬ್ಧಾರಿಯುತ ನಾಗರಿಕರನ್ನಾಗಿ ಸಮಾಜದಲ್ಲಿ ರೂಪಿಸುವುದು ಅಂತಾ ನಂಬಿಕೆಯಿಟ್ಟವರು. 2012ರಲ್ಲಿ ಈ ಶಿಕ್ಷಣ ಸಂಸ್ಥೆಗೆ ಸಾರಥಿಯಾದ ಶೀತಲ್ ಬೋಧನೆ ಮತ್ತು ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ನಿರಂತರ ಶ್ರಮ ಪಡುತ್ತಿದ್ದಾರೆ. ಶಿಕ್ಷಣದಲ್ಲಿ ಹೊಸ ಹೊಸ ತಂತ್ರಜ್ಞಾನ, ಪ್ರಾಯೋಗಿಕ ತರಗತಿಯನ್ನು ನಡೆಸಿ ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುವಲ್ಲಿ ಶೀತಲ್ ಪ್ರಮುಖ ಪಾತ್ರವಹಿಸಿದ್ದು, ವಿದ್ಯಾರ್ಥಿಗಳಿಗೆ ಇವರನ್ನು ಕಂಡರೆ ಅಚ್ಚುಮೆಚ್ಚು.

    ಆಶಾ ಸತೀಶ್, ಬೆಂಗಳೂರು
    ನಾಯಕತ್ವ, ಹೊಸತನಕ್ಕೆ ತುಡಿಯುವ ಮನಸಿನ ಆಶಾ ಸತೀಶ್ ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ಸಾಧನೆಗೈದು ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ತನ್ನದೇ ಆದ ಕಮಾಲ್ ಮೂಡಿಸಿ, ನವೀನ ವಿನ್ಯಾಸ, ವಿಶೇಷ ಅಭಿರುಚಿಯೊಂದಿಗೆ ಮನೆ, ಅಪಾರ್ಟ್‌ ಮೆಂಟ್‌ನ  ಒಳಾಂಗಣ ವಿನ್ಯಾಸದ ಕಾರ್ಯದಲ್ಲಿ ನುರಿತವರು ಆಶಾ ಸತೀಶ್ ಅವರು. ಡಿಎಸ್ ಮ್ಯಾಕ್ಸ್ ಅಪಾರ್ಟ್‌ ಮೆಂಟ್‌ ಗಳು ಜನಮನ್ನಣೆಗಳಿಸಿ, ಎಲ್ಲರ ಮನಸೂರೆಗೊಳ್ಳಲು ಕಾರಣ ಆಶಾ ಅಸೆಟ್ಸ್‌ ಎಂಡಿ ಆಶಾ ಸತೀಶ್ (Asha Satish) ಅವರ ಅರ್ಕಿಟೆಕ್ಟ್ ಕ್ಷೇತ್ರದಲ್ಲಿನ ಅನುಭವ. ಕೇವಲ ಔದ್ಯೋಗಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕೆವಿಎಸ್ ಚಾರಿಟೇಬಲ್ ಟ್ರಸ್ಟ್‌ ಹುಟ್ಟುಹಾಕಿ ಬಡ ಮಕ್ಕಳ ಭವಿಷ್ಯಕ್ಕೆ ಅವರ ವಿದ್ಯಾಭ್ಯಾಸಕ್ಕೆ ಬದುಕಿಗೆ ನೆರವಾಗಿದ್ದಾರೆ.

    ವಿಜಯಕಲಾ ಕೆ, ಬೆಂಗಳೂರು
    ಶ್ರೀರಾಮ ಎಂಟರ್‌ಪ್ರೈಸಸ್‌ ಮೂಲಕ ಆಡ್ – 6 ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ, ಮಾಧ್ಯಮ ಯೋಜನೆ, ಮಾರ್ಕೆಟಿಂಗ್ ಮತ್ತು ಅಕೌಂಟ್ ಮ್ಯಾನೇಜ್‌ಮೆಂಟ್ ಟೀಮ್ ಅನ್ನು ಮುನ್ನಡೆಸುತ್ತಿದ್ದಾರೆ ವಿಜಯಕಲಾ ಕೆ (Vijayakala K). ಈ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿ ಸೃಜನಶೀಲ ಟೀಮ್ ಕಟ್ಟಿ ಬೆಳೆಸಿದವರು ವಿಜಯಕಲಾ. ಪರಿಣಿತ ಅನುಭವ ಹೊಂದಿರುವ ಆಡ್ -6 (Ad6) ಸಂಸ್ಥೆ ಈಗ ಅಪರೂಪದ ಸೇವೆಯನ್ನು ನೀಡುತ್ತಿದೆ. ಕೇವಲ ಈ ಕ್ಷೇತ್ರ ಮಾತ್ರವಲ್ಲ ಶಿಕ್ಷಣ ರಿಯಲ್ ಎಸ್ಟೇಟ್, ಟೆಲಿಕಾಂ, ಆಟೋಮೊಬೈಲ್ಸ್ ಕ್ಷೇತ್ರದಲ್ಲಿಯೂ ವಿಜಯಕಲಾ ಪರಿಣಿತರು. ಶ್ರಮ ಪಟ್ಟು ಸಂಸ್ಥೆಯನ್ನು ಬೆಳೆಸಿ ಪೋಷಿಸಿ ಈಗ ಯಶಸ್ವಿ ಉದ್ಯಮಿಯಾಗಿ ವಿಜಯಕಲಾ ಸದ್ದು ಮಾಡಿದ್ದಾರೆ.

    ಕೀರ್ತಿ ಮಹಾದೇವ, ಬೆಂಗಳೂರು
    ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವುದು ಸವಾಲಿನ ಕೆಲಸ. ಅಂತದ್ರಲ್ಲಿ ಕರ್ನಾಟಕದ ಮೊದಲ ಬಿಸಿನೀರು ಉತ್ಪಾದಿಸುವ ʼಹೀಟ್‌ಪಂಪ್ʼ ಕಂಪನಿಯನ್ನು ಸ್ಥಾಪಿಸಿ, ಭಾರತದಲ್ಲಿಯೇ ಬೆಸ್ಟ್ ಸಂಸ್ಥೆ ಅಂತಾ ಹೆಗ್ಗಳಿಕೆಗೆ ಪಾತ್ರವಾದವರು ಕೀರ್ತಿ ಮಹಾದೇವ (Keerthi Mahadeva). ಆರಂಭದಲ್ಲಿ ಸ್ವಂತ ಉದ್ದಿಮೆ ಶುರುಮಾಡಬೇಕು ಅದು ಕನಸು ಕಂಡು ಸಾಯಿ ಹೀಟಿಂಗ್ ಮತ್ತು ಕೂಲಿಂಗ್ ಸೊಲ್ಯುಷನ್ ನಿಯೋ ಹೀಟ್ ಪಂಪ್ ಉದ್ಯಮ ಶುರುಮಾಡಿದರು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಕರ್ನಾಟಕದ ಮೊದಲ ಕಂಪನಿಯಾದ ನಿಯೋ ಹೀಟ್ ಪಂಪ್ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಸದ್ದು ಮಾಡಿತ್ತು. ಇಬ್ಬರಿಂದ ಶುರುವಾದ ಕಂಪನಿ ಈಗ ಇನ್ನೂರಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದಕ್ಕೆ ಕಾರಣವಾಗಿದ್ದು ಕೀರ್ತಿ ಅವರ ಅಪಾರ ಶ್ರಮ. ಕೆಲವೇ ಸೆಕೆಂಡ್‌ಗಳಲ್ಲಿ ಬಿಸಿ ನೀರು ಕೊಡಬಲ್ಲ ಹೀಟ್ ಪಂಪ್‌ಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುವ ಮೂಲಕ ಜನಮೆಚ್ಚುಗೆಗೆ ಕೀರ್ತಿ ಪಾತ್ರರಾಗಿದ್ದಾರೆ.

  • ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ಮೈಸೂರು: ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ (Dr C.N. Manjunath) ಅವರಿಗಾಗಿ ಮೈಸೂರಿನ (Mysuru) ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

     
    ಹೆಚ್‌ಆರ್‌ ರಂಗನಾಥ್‌ (HR Ranganath) ಮಾತನಾಡುವಾಗ ಹಲವು ಸಲಹೆ ಕೊಟ್ಟಿದ್ದಾರೆ. ಪ್ರಶಸ್ತಿಗಳು ಮತ್ತು ಸನ್ಮಾನಗಳು ಇನ್ನು ಹೆಚ್ಚಿನ ಜವಾಬ್ದಾರಿ ನೀಡುತ್ತದೆ. ಜನರ ಆಶೋತ್ತರ, ಬಯಕೆಗೆ ಸ್ಪಂದಿಸುವ ಕೆಲಸ ಮಾಡಬೇಕಾಗಬಹುದೇನೋ? ಆದರೆ ಇನ್ನೂ ನಾನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಡಾ.ಮಂಜುನಾಥ್‌ ಹೇಳಿದರು. ಇದನ್ನೂ ಓದಿ: ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಶರೀರದ ತೂಕ ಹೆಚ್ಚಾದರೆ ವ್ಯಾಯಾಮ ಮಾಡಬೇಕು. ಮನಸ್ಸಿನ ತೂಕ ಹೆಚ್ಚಾದರೆ ಧ್ಯಾನ ಮಾಡಬೇಕು. ಜೇಬಿನ ತೂಕ ಹೆಚ್ಚಾದರೆ ದಾನ ಮಾಡಬೇಕು. ಈಗ ಸನ್ಮಾನ ಮಾಡುವ ಮೂಲಕ ನನಗೆ ಇನ್ನೂ ಹೆಚ್ಚಿನ  ಜವಾಬ್ದಾರಿ ಸಿಕ್ಕಂತಾಗಿದೆ.  ತೂಕ ಜಾಸ್ತಿಯಾಗಿದೆ  ಎಂದರು.

     

    ಮೊದಲು ಮಾತನಾಡಿದ್ದ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿ ಇದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದ್ದರು.

  • ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಮೈಸೂರು: ಪ್ರಜಾಪ್ರಭುತ್ವ (Democracy) ಒಳ್ಳೆಯವರನ್ನು ಬಯಸುತ್ತದೆ. ಮಂಜುನಾಥ್‌ (Dr. C.N. Manjunath) ಅವರಂತಹವರು ರಾಜಕಾರಣಕ್ಕೆ ಬರಬೇಕು ಎಂದು ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ ಅವರಿಗಾಗಿ ಮೈಸೂರಿನ ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದರು.

     

    ಜನರ ಬಯಕೆ ಪ್ರಕಾರ ಒಂದು ಸವಾಲು ಸ್ವೀಕರಿಸಿ. 35 ವರ್ಷ ಸರ್ಕಾರಿ ಸೇವೆ ಮುಗಿಸಿದ ಮೇಲೆ ಈ ರೀತಿಯ ಜನಾಭಿಪ್ರಾಯ ಮೂಡುವುದು ಕಷ್ಟ. ಆದರೆ ಡಾ. ಮಂಜುನಾಥ್ ಅವರಿಗೆ ಅದು ಸಿಕ್ಕಿದೆ. ಆಗ ಪ್ರಜಾಪ್ರಭುತ್ವಕ್ಕೆ ಒಬ್ಬ ಒಳ್ಳೆಯವರು ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ಸರ್ಕಾರಿ ಸಂಸ್ಥೆಯನ್ನು ಮುನ್ನಡೆಸುವುದು ಇಂದು ಬಹಳ ಕಷ್ಟ. ಹಾಗಿರುವಾಗ ಜಯದೇವ ಆಸ್ಪತ್ರೆಯನ್ನು ಜನ ಮೆಚ್ಚುವಂತೆ ಮುನ್ನಡೆಸಿದ್ದಾರೆ. ಡಾ. ಮಂಜುನಾಥ್ ಅವರ ಈ ಸಾಧನೆ ಪಿಹೆಚ್‌ಡಿಗೆ ಯೋಗ್ಯವಾದ ಒಂದು ವಿಷಯ ಎಂದು ತಿಳಿಸಿದರು.

     

    ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ರಾಜಕಾರಣ ಕೆಟ್ಟದಲ್ಲ. ಎಸ್.ಎಂ. ಕೃಷ್ಣ ಅವರು ನಾನು ಪ್ರೀತಿಸುವ ರಾಜಕಾರಣಿ. ಅದೇ ರೀತಿಯ ವ್ಯಕ್ತಿತ್ವ ಮಂಜುನಾಥ್ ಅವರದ್ದು. ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್

  • ಪಬ್ಲಿಕ್‌ ಟಿವಿಗೆ 12 ರ ಸಂಭ್ರಮ – Photo Gallery

    ಪಬ್ಲಿಕ್‌ ಟಿವಿಗೆ 12 ರ ಸಂಭ್ರಮ – Photo Gallery

    ನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ‘ಪಬ್ಲಿಕ್‌ ಟಿವಿ’ಯ 12ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ. ಪಬ್ಲಿಕ್ ಮೂವೀಸ್‌ಗೆ 6 ರ ಸಂಭ್ರಮ. ಈ ಅಮೂಲ್ಯ ಕ್ಷಣವನ್ನು ಆಯೋಧ್ಯೆಯ ರಾಮಮಂದಿರಕ್ಕೆ ಕೊಡುಗೆ ಕೊಟ್ಟ ಕರುನಾಡಿನ ಅಪರೂಪದ ಸಾಧಕರ ಜೊತೆಗೆ ಇಂದು (ಸೋಮವಾರ) ಬೆಂಗಳೂರಿನ ಕಚೇರಿಯಲ್ಲಿ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಲಾಯಿತು.

    ಅಯೋಧ್ಯೆ ರಾಮಮಂದಿರಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ನವರತ್ನಗಳನ್ನು ಸನ್ಮಾನಿಸಲಾಯಿತು. ಈ ಸಾಧಕರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಸನ್ಮಾನಿಸಿದರು. ಇದೇ ವೇಳೆ, ಪಬ್ಲಿಕ್‌ ಟಿವಿ ಸಿಇಒ ಅರುಣ್, ಸಿಓಓ ಸಿ.ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು.

    ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯಾಗಲು ಕಾನೂನಾತ್ಮಕ ಗೆಲುವಿಗೆ ಮೊದಲ ಅಡಿಪಾಯ ಹಾಕಿದ ಹೆಮ್ಮೆಯ ಕನ್ನಡಿಗ, ಹಿರಿಯ ನ್ಯಾಯವಾದಿ ಕೆ.ಎನ್.ಭಟ್‌. ದೇಶದೆಲ್ಲೆಡೆ ಸುತ್ತಿ, ಶ್ರೀರಾಮ ಜನಿಸಿದ ಅಯೋಧ್ಯೆ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಭಗವಾನ್‌ ಶ್ರೀರಾಮನ ಪರ ವಾದ ಮಂಡಿಸಿದ್ದರು. ಅಯೋಧ್ಯೆಯೇ ಶ್ರೀರಾಮ ಜನ್ಮಸ್ಥಾನ ಎಂದು ಕಾನೂನಾತ್ಮಕವಾಗಿ ಜಯ ಸಿಕ್ಕಲು ಇದೇ ಮೊದಲ ಮೆಟ್ಟಿಲಾಯಿತು. ಸಾಧಕ ಕೆ.ಎನ್.ಭಟ್‌ ಅವರನ್ನು ಪಬ್ಲಿಕ್‌ ಟಿವಿ ವತಿಯಿಂದ ಸನ್ಮಾನಿಸಲಾಯಿತು.

    ಕೋಟಿ ಕೋಟಿ ರಾಮಭಕ್ತರು ಬಯಸಿದ, ಕಾತರಿಸಿದ ಕ್ಷಣವೆಂದರೆ ಬಾಲಕರಾಮನ ವಿಗ್ರಹವನ್ನು ಕಣ್ತುಂಬಿಕೊಳ್ಳುವುದು. ಕನ್ನಡಿಗನ ಕೈಯಲ್ಲರಳಿದ ಬಾಲಕರಾಮನೇ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಆ ಮೂರ್ತಿ ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌. ಇವರನ್ನೂ ಪಬ್ಲಿಕ್‌ ಟಿವಿ ವತಿಯಿಂದ ಗೌರವಿಸಲಾಯಿತು.

    ಅಯೋಧ್ಯೆ ಬಾಲರಾಮನ ವಿಗ್ರಹ ಸಾಕ್ಷಾತ್ಕಾರಕ್ಕೆ ಮೈಸೂರಿನ ಹಾರೋಹಳ್ಳಿಯ ರಾಮದಾಸ್‌ ಜಮೀನಿನಲ್ಲಿ ಸಿಕ್ಕ ಕೃಷ್ಣಶಿಲೆ ಕಾರಣ. ಶಿಲೆ ಸಿಕ್ಕ ಜಮೀನನ್ನು ರಾಮಮಂದಿರ ನಿರ್ಮಾಣಕ್ಕೆ ರಾಮದಾಸ್‌ ಅವರು ಕೊಡುಗೆಯಾಗಿ ನೀಡಿದ್ದಾರೆ. ಅವರನ್ನೂ ಪಬ್ಲಿಕ್‌ ಟಿವಿ ವತಿಯಿಂದ ಅಭಿನಂದಿಸಲಾಯಿತು.

    ರಾಮಲಲ್ಲಾ ಮೂರ್ತಿ ಕೆತ್ತಲು ಇಡೀ ದೇಶದಲ್ಲಿ ಕೇವಲ 3 ಶಿಲ್ಪಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅವರಲ್ಲಿ ಇಡಗುಂಜಿ ಮೂಲದ ಗಣೇಶ್‌ ಭಟ್‌ ಅಪೂರ್ವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇವರ ಕೈಯಲ್ಲೂ ರಾಮಲಲ್ಲಾ ಸುಂದರ ಮೂರ್ತಿ ಅರಳಿ ನಿಂತಿದೆ. ಗಣೇಶ್‌ ಭಟ್‌ ಅವರನ್ನು ಸನ್ಮಾನಿಸಲಾಯಿತು.

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ.. ಈ ಹಾಡಿನ ಸಾಲು ರಾಮಭಕ್ತರ ಹೃದಯಕ್ಕೆ ಹತ್ತಿರವಾಗಿದೆ. ಈ ಹಾಡು ಬರೆದವರು ನಮ್ಮ ಕರುನಾಡಿನ ಸಾಗರ ಮೂಲದ ಗಜಾನನ ಶರ್ಮಾ. ಇವರಿಗೂ ಅಭಿನಂದನೆ ಸಲ್ಲಿಸಲಾಯಿತು.

    ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದರ ನಿರ್ದೇಶಕರು ಹೆಚ್‌.ಎಸ್.ವೆಂಕಟೇಶ್‌ ಹಾಗೂ ಹಿರಿಯ ವಿಜ್ಞಾನಿ ಎ.ರಾಜನ್‌ ಬಾಬು ಅವರ ತಂಡವನ್ನು ಸ್ಮರಿಸಲೇಬೇಕು. ಮಂದಿರ ನಿರ್ಮಾಣದ ಅಡಿಪಾಯದಿಂದ ಹಿಡಿದು ಕೆತ್ತನೆಯವರೆಗೂ ಎಲ್ಲಾ ಕಲ್ಲುಗಳ ಗುಣಮಟ್ಟ ವಿಶ್ಲೇಷಣೆ ಮಾಡಿದರು. ಅಲ್ಲದೇ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿರುವ ಶಿಲೆಯನ್ನೂ ಇವರೇ ಅಂತಿಮಗೊಳಿಸಿದ್ದು. ಹಿರಿಯ ವಿಜ್ಞಾನಿ ಎ.ರಾಜನ್‌ ಬಾಬು ಅವರನ್ನು ಗೌರವಿಸಲಾಯಿತು.

    ಐತಿಹಾಸಿಕ ರಾಮಮಂದಿರ ಬೆಳಗುವ ಸದಾವಕಾಶ ಸಿಕ್ಕಿದ್ದು ಕೂಡ ಕನ್ನಡಿಗರಿಗೆ. ಕರಾವಳಿ ಮೂಲದ ಆರ್‌.ರಾಜೇಶ್‌ ಶೆಟ್ಟಿ ಮತ್ತು ತಂಡವು ರಾಮಮಂದಿರದ ಸಮಗ್ರ ವಿದ್ಯುತ್‌ ದೀಪಾಲಂಕಾರದ ಹೊಣೆ ಹೊತ್ತು ಯಶಸ್ವಿಯಾಗಿ ನಿಭಾಯಿಸಿದರು. ರಾಜೇಶ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಬೆಳಗಾವಿಯ ಪಂಡಿತ ವಿಜಯೇಂದ್ರ ಶರ್ಮಾ ನೀಡಿದ ಮುಹೂರ್ತವೇ ಅಂತಿಮವಾಗಿತ್ತು. ಪಂಡಿತ ವಿಜಯೇಂದ್ರ ಶರ್ಮಾ ಅವರನ್ನು ಪಬ್ಲಿಕ್‌ ಟಿವಿ ವತಿಯಿಂದ ಸನ್ಮಾನಿಸಲಾಯಿತು.

    ಭವ್ಯ ರಾಮಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯ ಮೇಲೆ ಪ್ರಜ್ವಲಿಸುವ ಸೂರ್ಯನ ಕಿರಣ ಲೋಗೋ ಇರುವ ಅಯೋಧ್ಯಾ ಲಾಂಛನ ಮಾಡಿದವರು ಕಲಬುರಗಿಯ ರಮೇಶ್‌ ಜಿ ತಿಪ್ಪನೂರ ಅವರು. ಇವರನ್ನೂ ಅಭಿನಂದಿಸಲಾಯಿತು.

    ಪಬ್ಲಿಕ್‌ ಟಿವಿಯ 12 ರ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಸಹ ಗೌರವಿಸಲಾಯಿತು.