Tag: hr ranganath
-

ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ: ಹೆಚ್‌ಆರ್ ರಂಗನಾಥ್
ಬೆಂಗಳೂರು: ವಾಹಿನಿ ಆರಂಭಿಸುವುದು ಸುಲಭ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟ. ಹೀಗಿರುವಾಗ 11 ವರ್ಷಗಳ ಕಾಲ ಪಬ್ಲಿಕ್ ಮ್ಯೂಸಿಕ್ ಕೈ ಹಿಡಿದು ಮುನ್ನಡೆಸಿದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ರೈಟ್‌ಮೆನ್ ಮೀಡಿಯಾ ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಹೇಳಿದರು.
ಪಬ್ಲಿಕ್ ಟಿವಿ ಕಚೇರಿಯಲ್ಲಿ ನಡೆದ ಪಬ್ಲಿಕ್ ಮ್ಯೂಸಿಕ್ 11ನೇ ವರ್ಷದ (PUBLiC Music 11 th Anivresray) ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಬ್ಲಿಕ್ ಮ್ಯೂಸಿಕ್‌ಗೆ 11 ವರ್ಷ ಆಗಿರುವುದು ನನಗೂ ವಿಶೇಷ. ಇಂದು ಪಬ್ಲಿಕ್ ಟಿವಿಯಲ್ಲಿ ರಾಜಕೀಯ, ಸುತ್ತ ಘಟನೆಗಳನ್ನು ನೋಡುವಾಗ ಬಹಳ ಬೇಸರ ಆಗುತ್ತದೆ. ಆದರೆ ಮ್ಯೂಸಿಕ್‌ನಲ್ಲಿ ಆ ರೀತಿಯ ಸಮಸ್ಯೆ ಇಲ್ಲ. ಇಲ್ಲಿ ಹಾಡುಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ ಎಂದು ಬಣ್ಣಿಸಿದರು.
ಸಣ್ಣ ವಯಸ್ಸಿನಲ್ಲಿ ಸಂಗೀತ ಕಲಿಯಲು ಹೋಗುತ್ತಿದ್ದಾಗ ನಾನು ಪತ್ರಕರ್ತನಾಗುತ್ತೇನೆ. ದೊಡ್ಡ ಟಿವಿ ಕಟ್ಟುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಸಂಗೀತಗಾರನಾಗಬಹುದು ಅಂತ ಅಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಬೇರೆ ಏನೋ ಆಗಿದ್ದೇನೆ. ಈಗ ಹತ್ತಿರ ಹತ್ತಿರ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದು 40 ವರ್ಷವಾಯಿತು. ಆದರೆ ಏನು ಆಗಬೇಕು ಅಂತ ಅಂದುಕೊಂಡಿದ್ದೇನೋ ಈಗ ಅದೇ ಮ್ಯೂಸಿಕ್ ನನ್ನನ್ನು ಕಾಪಾಡುತ್ತಿದೆ. ಮನಸ್ಸಿಗೆ ಸಮಾಧಾನ ನೀಡುತ್ತಿದೆ ಎಂದು ತಿಳಿಸಿದರು.
ರಾಜ್‌ಕುಮಾರ್, ವಿಷ್ಣುವರ್ಧನ್, ಸರೋಜಾದೇವಿ, ಭಾರತಿ, ಅಮಿತಾಬ್ ಬಚ್ಚನ್ ಈ ರೀತಿ ನಾಯಕ, ನಾಯಕಿಯರಾಗಿ ಬರುವ ಪೀಳಿಗೆ ಹೋಯ್ತು. ಈಗ ಮೂರು, ನಾಲ್ಕು ಸಿನಿಮಾ ಮಾಡುವಷ್ಟರಲ್ಲಿ ಹೊಸಬರು ಬರುತ್ತಾರೆ. ಅದೇ ರೀತಿ ಈಗ ಹಾಡುಗಾರರಿಗೆ, ಸಂಗೀತಕ್ಕೆ ಅವಕಾಶ ಸಿಗುತ್ತಿದೆ. ಟೆಕ್ನಾಲಜಿ ಸಹ ಸಹಕಾರ ನೀಡುತ್ತಿದೆ. ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಗುತ್ತಿದ್ದು ಹೊಸಬರಿಗೆ ಅವಕಾಶ ಸಿಗುತ್ತಿದೆ ಎಂದು ಹೇಳಿದರು.
ಮಧ್ಯೆ ಮಧ್ಯೆ ನಾವು ಎಡವಿರಬಹುದು. ಮತ್ತೆ ನಾವು ಚೇತರಿಸಿಕೊಂಡು ಬಂದಿದ್ದೇವೆ. ಆಡಿಯೋ ಕಂಪನಿಗಳ ಸಹಕಾರದಿಂದ ನಾವು ನಡೆದುಕೊಂಡು ಬಂದಿದ್ದೇವೆ. 11 ವರ್ಷಗಳ ದೀರ್ಘ ಪ್ರಯಾಣಕ್ಕೆ ಸಾಗಲು ಕಾರಣರಾದವರು ಕರ್ನಾಟಕದ ಜನತೆ, ಆಡಿಯೋ ಕಂಪನಿಗಳು, ಕೇಬಲ್ ಕಂಪನಿಗಳು ಮತ್ತು ಜಾಹೀರಾತುದಾರರು. ನಮಗೆ ಸಹಕಾರ ನೀಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮ್ಯೂಸಿಕ್ ನಿರ್ದೇಶಕ ಅರ್ಜುನ್ ಜನ್ಯಾ, ಜಂಕಾರ್ ಮ್ಯೂಸಿಕ್ ಮುಖ್ಯಸ್ಥ ಭರತ್ ಜೈನ್, ಅಶ್ವಿನಿ ಆಡಿಯೋ ಮುಖ್ಯಸ್ಥ ಅಶ್ವಿನಿ ರಾಮಪ್ರಸಾದ್ ಭಾಗವಹಿಸಿ ಪಬ್ಲಿಕ್ ಮ್ಯೂಸಿಕ್‌ಗೆ ಶುಭ ಹಾರೈಸಿದರು.
-

ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದ್ರೆ ಉನ್ನತ ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್ ಆಗ್ಬೇಕು: ಹೆಚ್‌ಆರ್ ರಂಗನಾಥ್
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಅಂದರೆ ಉನ್ನತ ಶಿಕ್ಷಣ (Higher Education) ವ್ಯವಸ್ಥೆ ಅಪ್‌ಗ್ರೇಡ್ ಆಗಬೇಕು ಎಂದು ‘ಪಬ್ಲಿಕ್ ಟಿವಿ’ (PUBLiC TV) ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ (HR Ranganath) ತಿಳಿಸಿದರು.
ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ 4ನೇ ಆವೃತ್ತಿಯ ವಿದ್ಯಾಮಂದಿರ (Vidhya Mandira) ಸ್ನಾತ್ತಕೋತ್ತರ ಶೈಕ್ಷಣಿಕ ಮೇಳ (PG Education Expo) ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡುವ ಕೆಲಸ ಆಗಬೇಕಿದೆ. ಉನ್ನತ ಶಿಕ್ಷಣ ವ್ಯವಸ್ಥೆಯ ಮೂಲಸೌಕರ್ಯದಲ್ಲಿ ಭಾರತ ಸುಧಾರಿಸಿದೆ. ಆದರೆ, ಪಠ್ಯಕ್ರಮ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್ ಆಗಬೇಕು. ಯೂರೋಪ್, ಚೀನಾ ಶಿಕ್ಷಣ ವ್ಯವಸ್ಥೆ ಬಗ್ಗೆ ವಿಚಾರಣೆ ಹೆಚ್ಚಾಗುತ್ತಿದೆ. ಅದೇ ರೀತಿ ಭಾರತದ ಶಿಕ್ಷಣ ವ್ಯವಸ್ಥೆಯನ್ನೂ ವಿಚಾರಿಸುವಂತಾಗಬೇಕು ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ
ಯಾವುದೇ ಒಂದು ಕೋರ್ಸ್ ಆಯ್ಕೆ ಮಾಡುವುದು ದೊಡ್ಡದಲ್ಲ, ಅದನ್ನು ಓದುವುದು ಮುಖ್ಯ. ನಮ್ಮಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಇದೆ. ಆದರೆ ಅದನ್ನು ನಾವು ಅಪ್‌ಗ್ರೇಡ್ ಮಾಡಬೇಕು. ಭಾರತ ಜಾಗತಿಕ ಮಟ್ಟದಲ್ಲಿ ಶಿಕ್ಷಣ ನೀಡಲು ಅರ್ಹವಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಮಕ್ಕಳು ಉತ್ತಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಮೂಲ ವೃಂದಾವನಕ್ಕೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ
-

`ಪಬ್ಲಿಕ್ ಟಿವಿ’ಯ ಒಂದು ಕರೆಯಿಂದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಪ್ರಣವ್ ಫೌಂಡೇಶನ್..!
– ಮೂರು ತಿಂಗಳಲ್ಲಿ 100ಕ್ಕೂ ಅಧಿಕ ಮಕ್ಕಳು ಶಾಲೆಗೆ ಸೇರ್ಪಡೆ
ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಪೆರೆಜೆ ಗ್ರಾಮದ (Peraje Village) ಸರ್ಕಾರಿ ಶಾಲೆಯೊಂದು ಮಕ್ಕಳ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಿತ್ತು. ಪೆರೆಜೆ ಗ್ರಾಮದ ಸೇರಿ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಆ ಶಾಲೆಯೇ ಆಸರೆಯಾಗಿತ್ತು. ಒಂದು ಕಾಲದಲ್ಲಿ ಸಾವಿರಾರು ಮಕ್ಕಳಿಂದ ತುಂಬಿ ತುಳುತ್ತಿದ್ದ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಮಕ್ಕಳನ್ನು ಆ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದರು. ಖಾಸಗಿ ಶಾಲೆಗಳನ್ನ (Private School) ಪೋಷಕರು ಮುಖ ಮಾಡಿದ್ರು. ಕ್ರಮೇಣ ದಾಖಲಾತಿ ಕೊರತೆಯಿಂದ ಆ ಶಾಲೆಯೇ ಮುಚ್ಚುವ ಹಂತಕ್ಕೆ ತಲುಪಿತ್ತು. ಇಂತಹ ಪರಿಸ್ಥಿತಿಯಲ್ಲಿ ʻನಿಮ್ಮ ಪಬ್ಲಿಕ್ ಟಿವಿʼಯ (Public TV) ಒಂದೇ ಒಂದು ಕರೆಯಿಂದ ಶಾಲೆಗೆ ಮರುಜೀವ ಸಿಕ್ಕಿದೆ. ಹೌದು ʻಪಬ್ಲಿಕ್ ಟಿವಿʼಯು ಗಡಿಭಾಗದ ಸರ್ಕಾರಿ ಶಾಲೆಯನ್ನು ಉಳಿಸಬೇಕೆಂದು ಪ್ರಣವ್ ಫೌಂಡೇಶನ್ ಸದಸ್ಯರ ಬಳಿ ಕೇಳಿಕೊಂಡಿತ್ತು. ಇಂದು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಪೆರಜೆ ಸರ್ಕಾರಿ ಶಾಲೆ ಬೆಳೆದು ನಿಂತಿದೆ.

ಹೌದು. ಪೆರಜೆ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮಕ್ಕಳಿಗೆ 1982 ರಿಂದ 2000 ಇಸವಿ ವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಈ ಶಾಲೆ ಜ್ಞಾನಾರ್ಜನೆ ನೀಡಿತ್ತು. ಕಾಲಕ್ರಮೇಣ ಈ ಶಾಲೆಯ ಹಿರಿಯ ಶಿಕ್ಷಕರು ನಿವೃತ್ತಿ ಹೊಂದಿದರು. ಇದರಿಂದ ಹೊಸ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಮೂಲ ಸೌಕರ್ಯಗಳಿಲ್ಲ ಎನ್ನುವ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾದರು. ಇದರಿಂದ ಇಡೀ ಶಾಲೆಯೇ ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿತ್ತು. ಶಿಕ್ಷಣ ಇಲಾಖೆ ಕೂಡ ಶಾಲೆಯನ್ನು ಮುಚ್ಚುವಂತೆ ಆದೇಶ ನೀಡಿತ್ತು. ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ – ವಾಡಿಕೆಗೂ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶ

ಇದಾದ ಬಳಿಕ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ನಮ್ಮ ಮಡಿಕೇರಿಯ ʻಪಬ್ಲಿಕ್ ಟಿವಿʼ ಜಿಲ್ಲಾ ವರದಿಗಾರ ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಶಾಲೆಯನ್ನ ಉಳಿಸಿಕೊಂಡುವಂತೆ ಮನವಿ ಮಾಡಿದ್ರು. ಬಳಿಕ ʻಪಬ್ಲಿಕ್ ಟಿವಿʼ ಪ್ರಣವ್ ಫೌಂಡೇಶನ್‌ಗೆ ಸಸ್ಯರಿಗೆ ಕರೆ ಮಾಡಿ ಪರಿಸ್ಥಿತಿಯನ್ನ ಮನವರಿಕೆ ಮಾಡಿಕೊಟ್ಟಿತ್ತು. ನಂತರ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರಣವ್ ಫೌಂಡೇಶನ್‌ನ ಸದಸ್ಯರು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮೂರೇ ತಿಂಗಳ ಅವಧಿಯಲ್ಲಿ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಶಾಲೆಯ ವಾತಾವರಣವನ್ನ ಬದಲಾಯಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ – ಟಾಪರ್‌ಗಳು ಯಾರು?

5 ದಶಕಗಳನ್ನು ಪೂರೈಸಿದ ಪೆರೆಜೆ ಗ್ರಾಮದ ಜ್ಯೋತಿ ಪ್ರೌಢಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಸುಣ್ಣ-ಬಣ್ಣ ಕಾಣದೇ ಅದೆಷ್ಟೋ ವರ್ಷಗಳಾಗಿತ್ತು. ಈ ಶಾಲೆಯನ್ನ ಮೇಲ್ದರ್ಜೆಗೆ ತೆಗೆದುಕೊಂಡು ಹೋಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಶಾಲೆಯನ್ನು ದತ್ತು ಪಡೆದ ಪ್ರಣವ್ ಫೌಂಡೇಶನ್‌ನ ಸದಸ್ಯರು ಆಧುನಿಕ ಸ್ಪರ್ಶ ನೀಡಿದ್ದಾರೆ. ಈ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಶೈಕ್ಷಣಿಕ ಪ್ರವಾಸ, ಉಚಿತ ಕಲಿಕಾ ಸಾಮಗ್ರಿ, ಕಂಪ್ಯೂಟರ್ ಡಿಜಿಟಲ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯ, ಸ್ಪೋಕನ್ ಕ್ಲಾಸ್, ಪೌಷ್ಠಿಕ ಆಹಾರ ಸೌಲಭ್ಯ ಕಲ್ಪಿಸಿರುವುದಲ್ಲದೇ, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್ ಸೌಲಭ್ಯ ಸಹ ಕಲ್ಪಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವಕಳೆ – ರೈತರ ಮೊಗದಲ್ಲಿ ಮಂದಹಾಸ

ಇನ್ನೂ ಈ ಶಾಲೆಗೆ ಶಿಕ್ಷಕರು ಇಲ್ಲದೇ ಶಾಲೆಗಳಿಗೆ ಮಕ್ಕಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಎಂದು ಅರಿತ ಸದಸ್ಯರು ಶಾಲೆಗೆ ಸುತ್ತಮುತ್ತಲಿನಲ್ಲಿ ಇರುವಂತಹ ಅತೀ ಹೆಚ್ಚು ಓದಿರುವ ಯುವತಿಯರನ್ನೇ ಅತಿಥಿ ಶಿಕ್ಷಕನಾಗಿ ನೇಮಕ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಇಲ್ಲಿರುವ ಸುಮಾರು 5-6 ಶಿಕ್ಷಕರಿಗೆ ಪ್ರಣವ್ ಫೌಂಡೇಶನ್‌ನ ಸದಸ್ಯರೇ ದಾನಿಗಳ ನೆರವಿನಿಂದ ಪ್ರತಿ ತಿಂಗಳು ತಲಾ ಒಬ್ಬ ಶಿಕ್ಷಕರಿಗೆ 12,000 ರಿಂದ 60,0000 ರೂ.ವರೆಗೆ ವೇತನ ನೀಡುತ್ತಿದ್ದಾರೆ. ಇಂತಹ ಕೆಲಸ ಮಾಡುವುದಕ್ಕೆ ʻಪಬ್ಲಿಕ್ ಟಿವಿʼಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಸರ್ ಪ್ರೇರಣೆ ಎನ್ನುತ್ತಾರೆ ಪ್ರಣವ್ ಫೌಂಡೇಶನ್‌ನ ಸದಸ್ಯರು.
-

ನಿಮ್ಮ ʻಪಬ್ಲಿಕ್ ಟಿವಿʼ 13ನೇ ವಾರ್ಷಿಕೋತ್ಸವ ಸಂಪನ್ನ
– ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಚೆಕ್‌ಮೇಟ್
– ಸುದೀರ್ಘ ಸಿಎಂ ದಾಖಲೆ ಬರೆಯೋ ಸುಳಿವುಬೆಂಗಳೂರು: ಕನ್ನಡಿಗರ ಅಚ್ಚುಮೆಚ್ಚು.. ನಿಮ್ಮ ನಂಬಿಕೆಯ ʻಪಬ್ಲಿಕ್ ಟಿವಿʼಗೆ ಇಂದು 13ನೇ ವಾರ್ಷಿಕೋತ್ಸವ ಸಂಭ್ರಮ.. ಜೊತೆಗೆ ಪಬ್ಲಿಕ್ ಮೂವೀಸ್‌ಗೆ 7 ವರ್ಷದ ಸಾರ್ಥಕ ಸಂಭ್ರಮ. ಮೌಲ್ಯ ಪ್ರತಿಪಾದನೆಯ ಪ್ರತಿಬಿಂಬವಾಗಿರುವ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಕಚೇರಿಯಲ್ಲಿ ಇಂದು ಡಬಲ್ ಸಂಭ್ರಮ ಮನೆ ಮಾಡಿತ್ತು. ವಿವಿಧ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾರಂಭ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್, ಸಂಸ್ಥೆ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್, ನಿರ್ದೇಶಕರಾದ ಮನೋಹರ್ ನಾಯ್ಡು, ರಾಕ್‌ಲೈನ್ ವೆಂಕಟೇಶ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಹೆಚ್.ಆರ್ ರಂಗನಾಥ್‌ರನ್ನು ಡಿಸಿಎಂ ಪೈಲ್ವಾನ್‌ಗೆ ಹೋಲಿಸಿದ್ರು. ನಾನು ʻಪಬ್ಲಿಕ್ ಟಿವಿʼ ಅಭಿಮಾನಿ.. ಎಲ್ಲೆ ಇದ್ರೂ ಬಿಡುವು ಮಾಡಿಕೊಂಡು ಬಿಗ್ ಬುಲೆಟಿನ್ ಮಿಸ್ ಮಾಡ್ದೇ ನೋಡ್ತೇನೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ರು. ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ಸದ್ಯಕ್ಕೆ ನಿವೃತ್ತಿ ಇಲ್ಲ: ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿಎಂ

ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ರು.. ಪಬ್ಲಿಕ್ ಟಿವಿ ವತಿಯಿಂದ ಮುಖ್ಯಮಂತ್ರಿಗಳನ್ನು ಸಮ್ಮಾನಿಸಲಾಯ್ತು.. ಪಬ್ಲಿಕ್ ಟಿವಿ ಬೆಳೆದು ಬಂದ ಬಗೆಯನ್ನು ಹೆಚ್.ಆರ್ ರಂಗನಾಥ್ ಮೆಲುಕು ಹಾಕಿದ್ರು.. ಇದಕ್ಕೂ ಮುನ್ನ, ಸುಪ್ರಿಯಾ ಆಚಾರ್ಯ, ದಿಯಾಹೆಗಡೆ ತಮ್ಮ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದ್ರು.. ಕಚೇರಿಯ ಸಿಬ್ಬಂದಿ ಕೇಕ್ ಕತ್ತರಿಸಿ ಖುಷಿ ಪಟ್ರು.. ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯ್ತು. ಇದನ್ನೂ ಓದಿ: ಜನರ ನಂಬಿಕೆಯನ್ನು ಉಳಿಸಿದರೆ ಚಾನೆಲ್ ಗಟ್ಟಿಯಾಗಿ ನಿಲ್ಲುತ್ತದೆ: ಡಿಕೆ ಶಿವಕುಮಾರ್

ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಚೆಕ್‌ಮೇಟ್:
ರಾಜ್ಯ ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ಫೈಟ್ ನಡೆದಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಅದ್ರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ʻಪಬ್ಲಿಕ್ ಟಿವಿʼಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳಿಗೆ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಹೆಚ್.ಆರ್ ರಂಗನಾಥ್ ಪ್ರಶ್ನೆ ಮಾಡಿದ್ರು. ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವ ಬಯಕೆ ಇದೆ. ಆದ್ರೆ, ಹಿತೈಶಿಗಳು, ಬೆಂಬಲಿಗರು ಮುಂದುವರೆಯಿರಿ ಎಂದು ಒತ್ತಡ ಮಾಡ್ತಿದ್ದಾರೆ.. ಅಂತಾ ಸಿಎಂ ಉತ್ತರಿಸಿದ್ರು. ಇದನ್ನೂ ಓದಿ: ಅಭಿವೃದ್ಧಿ ಹಂಚಿಕೆಗಾಗಿ ಬೃಹತ್ ರಾಜ್ಯಗಳ ವಿಭಜನೆ ಅತ್ಯವಶ್ಯ: ಮೊಂಟೆಕ್ ಪ್ರತಿಪಾದನೆಈ ಮೂಲಕ ಚುನಾವಣಾ ರಾಜಕೀಯ ನಿವೃತ್ತಿ ಹೇಳಿಕೆಯಿಂದ ಹಿಂದೆ ಸರಿಯುವ ಸುಳಿವು ನೀಡಿದ್ರು. ಇದೇ ವೇಳೆ, ಸುದೀರ್ಘ ಸಿಎಂ ಎಂಬ ದಾಖಲೆ ಬರೆಯುವ ಸುಳಿವನ್ನು ಸಿದ್ದರಾಮಯ್ಯ ನೀಡಿದ್ರು.. ಈ ಮೂಲಕ ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಚೆಕ್‌ಮೇಟ್ ಇಡುವ ಪ್ರಯತ್ನವನ್ನು ಸಿಎಂ ಮಾಡಿದ್ರು. ದೇವರಾಜು ಅರಸು ಏಳು ವರ್ಷ ಏಳು ತಿಂಗಳು ಮುಖ್ಯಮಂತ್ರಿ ಆಗಿದ್ರು. ಈ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಬೇಕು ಅಂದ್ರೆ ಡಿಸೆಂಬರ್ 21ರ ವರೆಗೂ ಕಾಯಬೇಕಿದೆ. ಇದಕ್ಕೂ ಮುನ್ನ, ವಾರ್ಷಿಕೋತ್ಸದಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹೆಚ್.ಆರ್ ರಂಗನಾಥ್ ಅವರ ನೇರ ಪ್ರಶ್ನೆಗಳಿಗೆ ನೇರ ಉತ್ತರ ಕೊಟ್ರು. ಸೀಟ್ ಫೈಟ್ ಕುರಿತ ಪ್ರಶ್ನೆಗೆ, ಪ್ರಯತ್ನ ವಿಫಲವಾಗಬಹುದು. ಆದ್ರೆ, ಪ್ರಾರ್ಥನೆ ಫಲಿಸಲಿದೆ ಅಂದ್ರು. ಪಕ್ಷ ನಿಷ್ಠರಿಗೆ ಒಳ್ಳೆಯ ದಿನಗಳು ಬರುವ ಆಶಾಭಾವನೆ ವ್ಯಕ್ತಪಡಿಸಿದ್ರು. ಭವಿಷ್ಯದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸುಳಿವು ಕೊಟ್ರು. ನಮ್ಮ ನೆರಳನ್ನೂ ನಾವು ನಂಬಬಾರದು ಅಂದ್ರು.



